For Quick Alerts
ALLOW NOTIFICATIONS  
For Daily Alerts

ಕೆಟ್ಟ ಭಂಗಿಯಿಂದಾಗಿ ಆಗುವ ಐದು ಅಡ್ಡ ಪರಿಣಾಮಗಳು

|

ನಮ್ಮ ದೇಹದಲ್ಲಿರುವ ಪ್ರತಿಯೊಂದು ಅಂಗ ಕೂಡ ಒಂದಕ್ಕೊಂದು ಸಂಪರ್ಕ ಹೊಂದಿದೆ. ಈ ಕಾರಣದಿಂದಾಗಿ ಯಾವುದೇ ಒಂದು ಅಂಗಕ್ಕೆ ಏನಾದರೂ ಸಮಸ್ಯೆ ಆದರೆ ಆಗ ಅದರ ಪರಿಣಾಮವು ಬೇರೆ ಅಂಗಗಳಲ್ಲಿ ಕೂಡ ಕೆಲವೊಂದು ಸಲ ಕಾಣಿಸಿಕೊಳ್ಳುವುದು. ಹೀಗಾಗಿ ನಾವು ಕುಳಿತುಕೊಳ್ಳುವ, ನಡೆದಾಡುವ, ನಿಂತುಕೊಳ್ಳುವ ಭಂಗಿಯು ನಮ್ಮ ದೇಹದ ಕಾರ್ಯ ಚಟುವಟಿಕೆ ಮೇಲೆ ಪರಿಣಾಮ ಬೀರುವುದು ಎಂದರೆ ನಿಮಗೆ ಅಚ್ಚರಿಯಾಗ ಬಹುದು. ಹೌದು, ನಿಮ್ಮ ದೇಹದ ಕೆಟ್ಟ ಭಂಗಿಯು ಜೀರ್ಣ ಕ್ರಿಯೆ ಮೇಲೆ ಪರಿಣಾಮ ಬೀರುವುದು.

Bad Posture

ನಿಮ್ಮ ದೇಹ ಭಂಗಿಯಿಂದಾಗಿ ಜೀರ್ಣ ಕ್ರಿಯೆಗೆ ಬೇಕಾಗಿರುವ ವಿವಿಧ ಅಂಗಾಂಗಗಳ ಮೇಲೆ ಪರಿಣಾಮ ಬೀರುವುದು. ಕೆಟ್ಟ ಭಂಗಿಯ ಕಾರಣದಿಂದಾಗಿ ಮಲಬದ್ಧತೆಯು ಉಂಟಾಗುವಂತಹ ಸಾಧ್ಯತೆಯು ಇದೆ. ಕೆಟ್ಟ ಭಂಗಿಯಿಂದಾಗಿ ಯಾವೆಲ್ಲಾ ಸಮಸ್ಯೆಗಳು ಕಾಡಬಹುದು ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಜೀರ್ಣ ಕ್ರಿಯೆ ಮೇಲೆ ಪರಿಣಾಮ

ಜೀರ್ಣ ಕ್ರಿಯೆ ಮೇಲೆ ಪರಿಣಾಮ

ಮೊದಲನೇಯದಾಗಿ ಕೆಟ್ಟ ಭಂಗಿಯಿಂದಾಗಿ ಜೀರ್ಣ ಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಇದರಿಂದ ನಿಮ್ಮ ಜೀರ್ಣ ಕ್ರಿಯೆ ವ್ಯವಸ್ಥೆಯು ಅಸ್ತವ್ಯಸ್ತವಾಗಬಹುದು. ಕುಳಿತುಕೊಳ್ಳುವುದು, ನಿಂತುಕೊಳ್ಳುವುದು ಮತ್ತು ನಡೆದಾಡುವ ಕೆಟ್ಟ ಭಂಗಿಯು ನಿಮ್ಮ ಜೀರ್ಣ ಕ್ರಿಯೆ ಮೇಲೆ ಪರಿಣಾಮ ಬೀರುವುದು. ಇದರಿಂದಾಗಿ ನಿಮಗೆ ಮಲಬದ್ಧತೆ ಸಮಸ್ಯೆಯು ಕಾಡಬಹುದು. ಮಲಬದ್ಧತೆ ಸಮಸ್ಯೆ ಇರುವಂತವರು ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ. ಇದರಿಂದ ನಿಮ್ಮ ಸಮಸ್ಯೆಯು ಅರ್ಧದಷ್ಟು ಪರಿಹಾರ ಆಗುವುದು.

Most Read: ನೈಸರ್ಗಿಕವಾಗಿ ಯಕೃತ್‌ ಅನ್ನು ಶುದ್ಧೀಕರಿಸಲು ಇಂತಹ ಸರಳ ಟಿಪ್ಸ್ ತಪ್ಪದೇ ಅನುಸರಿಸಿ

ಕಾಲು ನೋವು

ಕಾಲು ನೋವು

ಕೆಟ್ಟ ದೇಹ ಭಂಗಿಯಿಂದಾಗಿ ಕಾಲುಗಳ ಮೇಲೆ ಕೂಡ ಪರಿಣಾಮ ಉಂಟಾಗಬಹುದು. ಅಸಾಮಾನ್ಯವಾದ ಭಂಗಿಯಿಂದಾಗಿ ವಿವಿಧ ರೀತಿಯ ಭಂಗಿಗಳ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ನಿಮಗೆ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಮಸ್ಯೆ ಆಗಬಹುದು. ಇದರಿಂದ ನೀವು ಫಿಟ್ ಆಗಿರಲು ನಿಮ್ಮ ದೇಹ ಭಂಗಿಯನ್ನು ಸುಧಾರಿಸಿಕೊಳ್ಳಬೇಕು.

ತಲೆನೋವು

ತಲೆನೋವು

ಅತಿಯಾದ ಕೆಲಸ ಮತ್ತು ಒತ್ತಡದಿಂದಾಗಿ ನಿಮಗೆ ತಲೆನೋವು ಉಂಟಾಗುತ್ತಿದೆ ಎಂದು ಭಾವಿಸಿರಬಹುದು. ಆದರೆ ಕೆಟ್ಟ ಭಂಗಿಯಿಂದಲೂ ಕುತ್ತಿಗೆ ಮತ್ತು ತಲೆ ಮೇಲೆ ಒತ್ತಡ ಬಿದ್ದು, ಅದರಿಂದ ತಲೆನೋವು ಕಾಣಿಸಿಕೊಳ್ಳಬಹುದು. ತಲೆನೋವಿನಿಂದಾಗಿ ನಿಮ್ಮ ಕೆಲಸಗಳನ್ನು ಸರಿಯಾಗಿ ಮಾಡಿಕೊಳ್ಳಲು ಸಾಧ್ಯವಾಗದೆ ಇರಬಹುದು. ತಲೆನೋವು ಕಡಿಮೆ ಮಾಡಿಕೊಳ್ಳಲು ನೀವು ದೇಹಭಂಗಿ ಸರಿಪಡಿಸಿಕೊಳ್ಳಿ.

ನಿದ್ರಿಸಲು ಸಾಧ್ಯವಾಗದೆ ಇರುವುದು

ನಿದ್ರಿಸಲು ಸಾಧ್ಯವಾಗದೆ ಇರುವುದು

ಕೆಟ್ಟ ಭಂಗಿಯಿಂದಾಗಿ ನಿಮ್ಮ ನಿದ್ರೆಯ ಮೇಲೆ ಕೂಡ ಪರಿಣಾಮ ಬೀರಬಹುದು. ಕೆಟ್ಟ ಭಂಗಿಯು ದೇಹದ ವಿವಿಧ ಸ್ನಾಯುಗಳ ಮೇಲೆ ಒತ್ತಡ ಉಂಟು ಮಾಡುವುದು. ಇದರಿಂದಾಗಿ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದು. ಸರಿಯಾಗಿ ಆರಾಮ ಮಾಡಲು ಕೂಡ ಆಗದು. ಕೇವಲ ಕುಳಿತುಕೊಳ್ಳುವ ಭಂಗಿ ಮಾತ್ರವಲ್ಲದೆ, ರಾತ್ರಿ ವೇಳೆ ಒಳ್ಳೆಯ ನಿದ್ರೆ ಬೇಕಿದ್ದರೆ ಆಗ ಮಲಗುವ ಭಂಗಿ ಕೂಡ ಸರಿಪಡಿಸಿಕೊಳ್ಳಿ.

Most Read: ಕಾಲಜನ್ ಕೊರತೆಯಿಂದ ದೇಹದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು

ಅತಿಯಾದ ಒತ್ತಡ

ಅತಿಯಾದ ಒತ್ತಡ

ಉದ್ಯೋಗ ಹಾಗೂ ವೈಯಕ್ತಿಕ ಜೀವನದಲ್ಲಿ ಇಂದಿನ ದಿನಗಳಲ್ಲಿ ಒತ್ತಡ ಎನ್ನುವುದು ಸಾಮಾನ್ಯ ಎನ್ನಬಹುದು. ಯಾಕೆಂದರೆ ಆಧುನಿಕ ಯುಗದಲ್ಲಿ ತುಂಬಾ ವೇಗದ ಜೀವನದಿಂದ ಹಲವಾರು ವೃತ್ತಿ ಹಾಗೂ ವೈಯಕ್ತಿಕ ಜವಾಬ್ದಾರಿಗಳು ನಮ್ಮ ಮೇಲಿರುವುದು. ಇದರಿಂದ ಸಹಜವಾಗಿಯೇ ಒತ್ತಡವು ಬರುವುದು. ಈ ಕಾರಣದಿಂದಾಗಿ ಮಾನಸಿಕ ಒತ್ತಡ ನಮ್ಮ ಮೇಲೆ ಬೀಳುವುದು. ಆದರೆ ಕೆಟ್ಟ ಭಂಗಿಯಿಂದಲೂ ಒತ್ತಡವು ಹೆಚ್ಚಾಗುವುದು. ಕೆಟ್ಟ ಭಂಗಿಯಿಂದಾಗಿ ಮಾನಸಿಕ ಹಾಗೂ ದೈಹಿಕ ಒತ್ತಡವು ಹೆಚ್ಚುವುದು. ಕೆಟ್ಟ ಭಂಗಿಯಿಂದಾಗಿ ಹಾರ್ಮೋನು ವೈಪರಿತ್ಯ ಉಂಟಾಗಬಹುದು. ಇದರಿಂದ ಕಾರ್ಟಿಸಾಲ್ ಮಟ್ಟವು ಹೆಚ್ಚಾಗುವುದು ಮತ್ತು ಒತ್ತಡ ಕೂಡ ಹೆಚ್ಚುವುದು.

English summary

Five Effects of Bad Posture

A poor posture affects the different organs required for digestion which leads to poor gut health.You are more likely to experience constipation due to poor posture. Poor posture can affect your feet as well. The improper alignment of different organs leads to pain in feel which can make it difficult for you to complete day to day tasks. Hence you should improve your posture to keep your each body part fit and fine.
X
Desktop Bottom Promotion