For Quick Alerts
ALLOW NOTIFICATIONS  
For Daily Alerts

ಸೌತೆಕಾಯಿಯ ಜ್ಯೂಸ್ ಕುಡಿಯುವುದರ ಎಂಟು ಅತ್ಯುತ್ತಮವಾದ ಆರೋಗ್ಯಕರ ಪ್ರಯೋಜನಗಳು

|

ಸೌತೆಕಾಯಿಯ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನಾವೆಲ್ಲರೂ ಅರಿತೇ ಇದ್ದೇವೆ. ಶರೀರಕ್ಕೆ ಹೊರಗಿನಿಂದಲೂ ಒಳಗಿನಿಂದಲೂ ನೀಡುವ ಪೋಷಣೆ ಅಪಾರವಾಗಿದೆ. ಬಹುತೇಕ ನೀರೇ ತುಂಬಿರುವ ಸೌತೆಯಲ್ಲಿ ವಿಟಮಿನ್ನುಗಳಾದ ವಿಟಮಿನ್ ಕೆ, ಸಿ ಮತ್ತು ಎ ಸಹಾ ಇದೆ. ಇದರ ಜೊತೆ ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ಸಹಾ ಇವೆ. ಹಸಿಯಾಗಿಯೂ ತಿನ್ನಬಹುದಾದ ಸೌತೆಯನ್ನು ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕ ಇದರಲ್ಲಿರುವ ಕರಗುವ ನಾರಿನ ಪ್ರಯೋಜನವನ್ನು ಗರಿಷ್ಟ ಪ್ರಮಾಣದಲ್ಲಿ ಪಡೆಯಬಹುದು. ಅಲ್ಲದೇ ಜ್ಯೂಸ್ ಮೂಲಕ ಸೇವಿಸಿದ ಸೌತೆಯಿಂದ ಪೋಷಕಾಂಶಗಳೂ ಪರಿಪೂರ್ಣವಾಗಿ ಲಭಿಸುತ್ತವೆ ಹಾಗೂ ಜೀರ್ಣಾಂಗದ ಎಲ್ಲಾ ಹಂತಗಳಲ್ಲಿ ಹೀರಲ್ಪಡುತ್ತವೆ.

ಇದು ಹೇಗೆ ಸಾಧ್ಯವಾಗುತ್ತದೆ ಎಂದರೆ ಸೌತೆಯಲ್ಲಿರುವ ಸಸ್ಯಜನ್ಯ ಲಿಗ್ನನ್ (ಸಸ್ಯಜನ್ಯ ಪಾಲಿಫೆನಾಲ್)ಗಳು ಜೀರ್ಣಾಂಗಗಳಲ್ಲಿ ಹಾದುಹೋಗುವಾಗ ಜೀರ್ಣಾಂಗಗಳಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳಿಗೆ ನೆರವಿನ ಹಸ್ತ ನೀಡುತ್ತವೆ ಹಾಗೂ ಈ ಕ್ರಿಯೆಯಲ್ಲಿ ಎಂಟೆರೋಲಿಗ್ನನ್ಸ್ ಎಂಬ ಕಣಗಳಾಗಿ ಪರಿವರ್ತಿತವಾಗುತ್ತವೆ. ಸೌತೆಯ ರಸವನ್ನು ಕುಡಿಯುವುದರಿಂದ, ವಿಶೇಷವಾಗಿ ಮಹಿಳೆಯರಲ್ಲಿ ಶ್ವಾಸಕೋಶ, ಗರ್ಭಕೋಶ ಹಾಗೂ ಅಂಡಾಶಯದ ಕ್ಯಾನ್ಸರ್ ಆವರಿಸುವ ಸಾಧ್ಯತೆ ಅಪಾರವಾಗಿ ತಗ್ಗುತ್ತದೆ.

Cucumber Juice

ನಮ್ಮ ರಕ್ತಕ್ಕೆ ಮುಖ್ಯವಾಗಿ ಅಗತ್ಯವಾಗಿರುವ ವಿಟಮಿನ್ ಕೆ ಒದಗಿಸುವ ಆಹಾರಗಳಲ್ಲಿ ಸೌತೆ ಪ್ರಮುಖವಾಗಿದೆ. ನಿತ್ಯದ ಅಗತ್ಯತೆಗೆ ಪುರುಷರು ಸುಮಾರು ಮೂರು ಕಪ್ ಹಾಗೂ ಮಹಿಳೆಯರು ಎರಡೂವರೆ ಕಪ್ ನಷ್ಟು ಸೌತೆಯ ಜ್ಯೂಸ್ ಕುಡಿಯಬೇಕು. ಒಂದು ಕಪ್ ಸೌತೆಕಾಯಿಯ ಜ್ಯೂಸ್ ನಲ್ಲಿ ಒಂದು ಕಪ್ ನ ಎಲ್ಲಾ ತರಕಾರಿಗಳ ಜ್ಯೂಸ್ ನಲ್ಲಿರುವಷ್ಟೇ ಪೋಷಕಾಂಶಗಳಿರುತ್ತವೆ. ಅಲ್ಲದೇ ಈ ರಸದ ನಿಯಮಿತ ಸೇವನೆಯಿಂದ ಹಲವಾರು ಕಾಯಿಲೆಗಳ ವಿರುದ್ದ ರಕ್ಷಣೆ ದೊರಕುವ ಜೊತೆಗೇ ಸ್ಥೂಲಕಾಯ ಆವರಿಸುವ ಸಾಧ್ಯತೆಯೂ ತಗ್ಗುತ್ತದೆ. ಸೌತೆಕಾಯಿಯ ಜ್ಯೂಸ್ ಸೇವನೆಯ ಆರೋಗ್ಯಕರ ಪ್ರಯೋಜನಗಳು:

ದೇಹದಿಂದ ಕಲ್ಮಶಗಳನ್ನು ನಿವಾರಿಸುತ್ತದೆ

ಸೌತೆಯಲ್ಲಿರುವ ಅಪಾರ ಪ್ರಮಾಣದ ನೀರಿನಂಶವೇ ಇದನ್ನೊಂದು ಕಲ್ಮಶ ನಿವಾರಕ ಆಹಾರವಾಗಿಸಲು ಪ್ರಮುಖ ಕಾರಣವಾಗಿದೆ. ಒಂದು ವೇಳೆ ನಿಮಗೆ ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ನೀವು ಸೌತೆಕಾಯಿಯ ಜ್ಯೂಸ್ ಸೇವಿಸುವುದು ಅನಿವಾರ್ಯ. ನಿಯಮಿತವಾಗಿ ಸೌತೆಕಾಯಿಯ ಜ್ಯೂಸ್ ಸೇವಿಸುತ್ತಾ ಬರುವ ಮೂಲಕ ದೇಹದಿಂದ ಕಲ್ಮಶಗಳ ನಿವಾರಣೆಯಾಗುವುದು ಮಾತ್ರವಲ್ಲ, ಆರೋಗ್ಯವೂ ವೃದ್ದಿಸುತ್ತದೆ.

Most Read: ನಿತ್ಯವೂ ಹಸಿ ಸೌತೆಕಾಯಿ ತಿನ್ನಿ, ಆರೋಗ್ಯಕ್ಕೆ ಬಹಳ ಒಳ್ಳೆಯದು....

ಮೂಳೆ ಟೊಳ್ಳಾಗುವ ಓಸ್ಟಿಯೋಪೋರೋಸಿಸ್ (osteoporosis) ನಿಂದ ರಕ್ಷಿಸುತ್ತದೆ

ಸೌತೆಯಲ್ಲಿರುವ ತಾಮ್ರ, ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ಮೂಳೆಗಳ ಆರೋಗ್ಯ ವೃದ್ದಿಸಲು ಅಗತ್ಯವಾದ ಪೋಷಕಾಂಶಗಳಾಗಿವೆ. ನಿಯಮಿತವಾಗಿ ಸೌತೆಕಾಯಿಯ ಜ್ಯೂಸ್ ಕುಡಿಯುತ್ತಾ ಬರುವ ಮೂಲಕ ಮೂಳೆಗಳಲ್ಲಿ ಖನಿಜದ ಸಾಂದ್ರತೆ ಹೆಚ್ಚುತ್ತದೆ ಹಾಗೂ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಶಿಥಿಲವಾಗುವ ಓಸ್ಟಿಯೋಪೋರೋಸಿಸ್ ಎಂಬ ಸ್ಥಿತಿಯಿಂದ ರಕ್ಷಿಸಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ವಯಸ್ಸಿನೊಂದಿಗೇ ಮೂಳೆಗಳು ಶಿಥಿಲವಾಗುತ್ತಾ ಹೋಗುತ್ತವೆ. ಆದರೆ ಸೌತೆಕಾಯಿಯ ಜ್ಯೂಸ್ ಈ ಕ್ರಿಯೆಯನ್ನು ತಡವಾಗಿ಼ಸುತ್ತದೆ.

ದೇಹದಲ್ಲಿ ರಸದೂತಗಳ ಮಟ್ಟದ ಸಮತೋಲನ ಸಾಧಿಸುತ್ತದೆ

ಸೌತೆಕಾಯಿಯ ಜ್ಯೂಸ್ ನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ದೃಢವಾಗಿಸಲು ನೆರವಾಗುವ ಜೊತೆಗೇ ದೇಹದಲ್ಲಿ ರಸದೂತಗಳ ಮಟ್ಟಗಳನ್ನೂ ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಈ ಮೂಲಕ ವಿಶೇಷವಾಗಿ ಪಿಟ್ಯುಟರಿ ಮತ್ತು ಥೈರಾಯ್ಡ್ ಗ್ರಂಥಿಗಳ ಕಾರ್ಯಕ್ಷಮತೆ ಉತ್ತಮವಾಗಿರಲು ನೆರವಾಗುತ್ತದೆ.

ನರವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ

ಸೌತೆಕಾಯಿಯ ಜ್ಯೂಸ್ ನಲ್ಲಿರುವ ಕ್ಯಾಲ್ಸಿಯಂ ದ್ರವರೂಪದ ಎಲೆಕ್ಟ್ರೋಲೈಟ್ ಗಳಂತೆ ಕಾರ್ಯನಿರ್ವಹಿಸುತ್ತದೆ ಹಾಗೂ ತನ್ಮೂಲಕ ನರವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಸ್ನಾಯುಗಳಿಗೆ ನೀಡುವ ಸಂದೇಶಗಳನ್ನು ತಲುಪಿಸುವ ವ್ಯವಸ್ಥೆಯನ್ನು ಬಲಪಡಿಸುತ್ತದೆ.

5. ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ.

ಕೆಲವು ಅಧ್ಯಯನಗಳ ಪ್ರಕಾರ ಸೌತೆಯಲ್ಲಿರುವ ಕುಕುರ್ಬೈಟಾಸಿನ್ಸ್ ಎಂಬ ಕ್ರಿಯಾಶೀಲ ಜೀವರಾಸಾಯನಿಕ ಪೋಷಕಾಂಶ ಕ್ಯಾನ್ಸರ್ ವಿರುದ್ದ ಹೋರಾಡುವ ಶಕ್ತಿ ಪಡೆದಿದೆ. ಇದರೊಂದಿಗೇ ಸೌತೆಯಲ್ಲಿರುವ ಲಿಗ್ನನ್ ಗಳು ಜಂಟಿಯಾಗಿ ಕೆಲವಾರು ಬಗೆಯ ಕ್ಯಾನ್ಸರ್ ಗಳ ವಿರುದ್ದ ರಕ್ಷಣೆ ನೀಡುತ್ತವೆ.

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತವೆ

ಸೌತೆಯಲ್ಲಿರುವ ವಿಟಮಿನ್ ಎ ಹಾಗೂ ಇತರ ಆಂಟಿ ಆಕ್ಸಿಡೆಂಟುಗಳು ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ. International Research Journal of Pharmacy and Pharmacology ಎಂಬ ಪತ್ರಿಕೆಯ ಪ್ರಕಾರ ನಿಯಮಿತವಾಗಿ ಸೌತೆಕಾಯಿಯ ಜ್ಯೂಸ್ ಸೇವಿಸುತ್ತಾ ಬರುವ ಮೂಲಕ ಕಣ್ಣಿಗೆ ಎದುರಾಗುವ ಕ್ಯಾಟರಾಕ್ಟ್ ಅಥವಾ cataractogenesis ಎಂಬ ತೊಂದರೆ ತಡವಾಗಿಸಲು ಸಾಧ್ಯವಾಗುತ್ತದೆ.

ತೂಕ ಇಳಿಕೆಯ ಪ್ರಯತ್ನಗಳಿಗೆ ನೆರವಾಗುತ್ತದೆ

ಸೌತೆಯಲ್ಲಿ ಯಾವುದೇ ಬಗೆಯ ಕಾರ್ಬೋಹೈಡ್ರೇಟುಗಳಾಗಲೀ, ಕೊಬ್ಬಾಗಲೀ ಇಲ್ಲವೇ ಇಲ್ಲ. ಹಾಗಾಗಿ ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಸೌತೆ ಅತ್ಯುತ್ತಮವಾದ ಆಹಾರವಾಗಿದೆ. ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಜೊತೆಗೇ ತೂಕವನ್ನೂ ಕಳೆದುಕೊಳ್ಳಲು ಸೌತೆಯನ್ನು ಆಯ್ದುಕೊಳ್ಳುವುದು ಅತ್ಯುತ್ತಮ ನಿರ್ಧಾರವಾಗಿದೆ.

ರಕ್ತ ಹೆಪ್ಪುಗಟ್ಟುವುದನ್ನು ಉತ್ತಮಗೊಳಿಸುತ್ತದೆ

ಗಾಯದಿಂದ ಒಸರುವ ರಕ್ತ ತನ್ನಿಂತಾನೇ ನಿಲ್ಲಬೇಕಾದರೆ ಇದರಲ್ಲಿರುವ ಪ್ಲೇಟ್ಲೆಟ್ ಗಳು ಒಂದಕ್ಕೊಂದು ಬೆಸೆದು ಗಾಳಿಗೆ ಗಟ್ಟಿಯಾಗಬೇಕು. ಈ ಕಾರ್ಯಕ್ಕೆ ವಿಟಮಿನ್ ಕೆ ಅಗತ್ಯವಾಗಿ ಬೇಕು, ಸೌತೆಯಲ್ಲಿರುವ ಉತ್ತಮ ಪ್ರಮಾಣದ ವಿಟಮಿನ್ ಕೆ ಈ ಕ್ರಿಯೆ ಅತ್ಯುತ್ತಮವಾಗಿ ಜರುಗಲು ನೆರವಾಗುತ್ತದೆ.

ಆರೋಗ್ಯಕರ ಸೌತೆಕಾಯಿಯ ಜ್ಯೂಸ್ ತಯಾರಿಸುವ ವಿಧಾನ:

ಅತ್ಯವಿರುವ ಸಾಮಾಗ್ರಿಗಳು:

  • ಮೂರು ಮಧ್ಯಮ ಗಾತ್ರದ ಎಳೆಸೌತೆ
  • ಒಂದು ಕಪ್ ನೀರು (ಐಚ್ಚಿಕ)
  • ಒಂದು ಲಿಂಬೆಯ ರಸ (ಐಚ್ಛಿಕ)

Most Read: ಹೊಟ್ಟೆಯ ಬೊಜ್ಜು ಕರಗಬೇಕೇ? ದಿನಕ್ಕೊಂದು ಗ್ಲಾಸ್ ಸೌತೆಕಾಯಿ ಜ್ಯೂಸ್ ಕುಡಿಯಿರಿ

ತಯಾರಿಕಾ ವಿಧಾನ

  • ಸೌತೆಯ ಎರಡೂ ತುದಿಗಳ ಚಿಕ್ಕ ಭಾಗವನ್ನು ಹಾಗೂ ಸಿಪ್ಪೆಯನ್ನು ಸುಲಿದು ನಿವಾರಿಸಿ
  • ಬೀಜಸಹಿತ ಸೌತೆಯ ತಿರುಳನ್ನು ಬ್ಲೆಂಡರ್ ನಲ್ಲಿ ಹಾಕಿ.
  • ಒಂದರಿಂದ ಎರಡು ನಿಮಿಷ ಮಧ್ಯಮ ಗತಿಯಲ್ಲಿ ಗೊಟಾಯಿಸಿ.
  • ಏಕಸಮಾನವಾದ ದ್ರವ ಲಭಿಸುವಷ್ಟು ಮಾತ್ರವೇ ಗೊಟಾಯಿಸಿ.
  • ಈ ರಸವನ್ನು ಸೋಸುಕವೊಂದರಲ್ಲಿ ಹಾಕಿ ಹಿಂಡಿ
  • ಸೋಸುಕದೊಳಗೆ ಚಮಚವೊಂದನ್ನು ಒತ್ತಿ ಉಳಿದ ರಸವನ್ನು ಹಿಂಡಿ. ಸ್ವಚ್ಛ ಬಟ್ಟೆಯಲ್ಲಿ ಹಿಂಡಿ ತೆಗೆದರೂ ಸರಿ.
  • ರಸ ತೀರಾ ಗಾಢ ಎನಿಸಿದರೆ ಕೊಂಚ ನೀರನ್ನು ಬೆರೆಸಿ ಕುಡಿಯಿರಿ.
English summary

Eight Health Benefits Of Drinking Cucumber Juice

The amazing health benefits possessed by cucumbers are widely known. A cucumber can offer health advantages both inside and out, plus they contain vitamins such as vitamins K, C and A, as well as potassium and calcium. Likewise, juicing cucumbers will enable you to consume soluble fibre, which will assist the nutrients to get better absorbed throughout the intestinal tract.
X
Desktop Bottom Promotion