For Quick Alerts
ALLOW NOTIFICATIONS  
For Daily Alerts

ಕಿರಿಕಿರಿಯುಂಟು ಮಾಡುವ ಬಿಕ್ಕಳಿಕೆ ಸಮಸ್ಯೆಗೆ ಪರಿಣಾಮಕಾರಿ ವಿಧಾನಗಳು

|

ಏನಾದರೂ ತಿನ್ನುವಾಗ, ಕುಡಿಯುವಾಗ ಒಮ್ಮೆಲೇ ಗಂಟಲಲ್ಲಿ ಸಿಕ್ಕಿಹಾಕಿಕೊಂಡಂತಾಗಿ ಬಿಕ್ಕಳಿಕೆ ಬರುವುದು ಸಾಮಾನ್ಯ. ಬಿಕ್ಕಳಿಕೆ ಬಂದಾಗ ಒಂದು ರೀತಿಯ ಕಿರಿಕಿರಿಯಾಗಿ ಏನು ಮಾಡುವುದು ಎಂದು ತೋಚದಂತಾಗುತ್ತದೆ. ನೀರು ಕುಡಿದರೂ ನಿಲ್ಲದೆ ಕೆಲ ಹೊತ್ತು ಹಾಗೆಯೇ ಕಷ್ಟ ಕೊಡುವ ಬಿಕ್ಕಳಿಕೆಯ ಬಗ್ಗೆ ಒಂದಿಷ್ಟು ತಿಳಿಯೋಣ. ಈ ಬಿಕ್ಕಳಿಕೆ ಬರುವುದು ಯಾಕೆ ಮತ್ತು ಅದನ್ನು ಬೇಗನೆ ಪರಿಣಾಮಕಾರಿಯಾಗಿ ನಿಲ್ಲಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದ್ದು ನೀವೂ ಓದಿಕೊಳ್ಳಿ....

ನಮಗೆ ಬಿಕ್ಕಳಿಕೆ ಯಾಕೆ ಬರುತ್ತದೆ?

ನಮಗೆ ಬಿಕ್ಕಳಿಕೆ ಯಾಕೆ ಬರುತ್ತದೆ?

ಬಿಕ್ಕಳಿಕೆ ಅನುಭವಿಸದ ಮನುಷ್ಯ ಈ ಭೂಮಿಯ ಮೇಲೆ ಇಲ್ಲವೇ ಇಲ್ಲ ಎಂದು ಹೇಳಬಹುದು. ಎಲ್ಲರೂ ಆಗಾಗ ಬಿಕ್ಕಳಿಕೆಯನ್ನು ಅನುಭವಿಸಿದವರೇ ಆಗಿದ್ದಾರೆ. ಊಟ ಮಾಡುವಾಗ ಅಥವಾ ಏನಾದರೂ ದ್ರವ ಪದಾರ್ಥ ಸೇವಿಸುವಾಗ ಈ ಬಿಕ್ಕಳಿಕೆಯ ಕಾಟ ಜಾಸ್ತಿ. ಇದು ತನ್ನಿಂತಾನೆ ಕೆಲ ನಿಮಿಷಗಳ ನಂತರ ಹೊರಟು ಹೋಗುವುದಾದರೂ ಆ ಸಮಯದಲ್ಲಿ ಮಾತ್ರ ಆಗುವ ಕಿರಿಕಿರಿ ಸಹಿಸಲಸಾಧ್ಯ. ಇನ್ನು ಕೆಲವು ಬಾರಿ ಬಂದ ಬಿಕ್ಕಳಿಕೆ ಬೇಗನೆ ಹೊರಟು ಹೋಗದೆ ತುಂಬಾ ಹೊತ್ತಿನವರೆಗೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಹೀಗಾದಾಗ ಅವತ್ತಿನ ಕೆಲಸಗಳು ಸಹ ಏರುಪೇರಾಗುತ್ತವೆ. ಶ್ವಾಸಕೋಶದ ಪೊರೆಯ ಸೆಳೆತ ಅಥವಾ ಕುಗ್ಗುವಿಕೆಯ ಕಾರಣದಿಂದ ನಮ್ಮ ಧ್ವನಿಪೆಟ್ಟಿಗೆಯು ಮುಚ್ಚಿಹೋಗಿ 'ಹಿಕ್'ಎಂಬ ಶಬ್ದದೊಂದಿಗೆ ಬಿಕ್ಕಳಿಕೆಗಳು ಬರಲಾರಂಭಿಸುತ್ತವೆ. ಈ ರೀತಿ ಬಿಕ್ಕಳಿಕೆಗಳು ಬಂದಾಗ ಅದನ್ನು ಬೇಗನೆ ನಿವಾರಿಸಲು ಕೆಲ ಪರಿಣಾಮಕಾರಿ ಕ್ರಮಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

ಒಂಚೂರು ನಿಮ್ಮ ಉಸಿರು ಬಿಗಿ ಹಿಡಿದುಕೊಳ್ಳಿ

ಒಂಚೂರು ನಿಮ್ಮ ಉಸಿರು ಬಿಗಿ ಹಿಡಿದುಕೊಳ್ಳಿ

ಬಿಕ್ಕಳಿಕೆ ಬಂದಾಗ ಕೆಲ ಕ್ಷಣ ಉಸಿರನ್ನು ಬಿಗಿ ಹಿಡಿಯುವುದರ ಮೂಲಕ ಅದನ್ನು ಕಡಿಮೆ ಮಾಡಲು ಸಾಧ್ಯವಿದೆ. ಬಿಕ್ಕಳಿಕೆ ನಿಲ್ಲಿಸಲು ಇದೊಂದು ಪರಿಣಾಮಕಾರಿ ಹಾಗೂ ಭೌತಿಕ ಕೌಶಲ್ಯದ ಕ್ರಮವಾಗಿದೆ. ಉಸಿರು ಬಿಗಿ ಹಿಡಿಯುವುದರಿಂದ ನಿಮ್ಮ ಶ್ವಾಸಕೋಶದಲ್ಲಿ ಕಾರ್ಬನ್ ಡೈಯಾಕ್ಸೈಡ್ ತುಂಬಿಕೊಂಡು ಶ್ವಾಸಕೋಶದ ಪೊರೆಯು ನಿರಾಳವಾಗಿ ಬಿಕ್ಕಳಿಕೆ ನಿಲ್ಲುತ್ತದೆ.

ಬಿಕ್ಕಳಿಕೆ ನಿಲ್ಲಿಸಲು ಸಕ್ಕರೆ ತಿನ್ನಿ

ಬಿಕ್ಕಳಿಕೆ ನಿಲ್ಲಿಸಲು ಸಕ್ಕರೆ ತಿನ್ನಿ

ಬಿಕ್ಕು ಬಂದ ತಕ್ಷಣ ಒಂದು ಚಮಚ ಸಕ್ಕರೆಯನ್ನು ಬಾಯಿಗೆ ಹಾಕಿಕೊಂಡರೆ ಬೇಗನೆ ಬಿಕ್ಕಳಿಕೆ ನಿಲ್ಲಿಸಬಹುದು. ೧೯೭೧ ರಲ್ಲಿ ನಡೆಸಿದ ಸಂಶೋಧನೆಯೊಂದರ ಪ್ರಕಾರ ಒಂದು ಚಮಚೆ ಸಕ್ಕರೆ ತಿಂದಾಗ ಬಿಕ್ಕಳಿಕೆ ಬಂದ ೨೦ ಜನರ ಪೈಕಿ ೧೯ ಜನರ ಬಿಕ್ಕಳಿಕೆ ವಾಸಿಯಾಗಿತ್ತು. ಸಕ್ಕರೆಯು ಶ್ವಾಸಕೋಶದ ವೇಗಸ್ ನರದ ಮೇಲೆ ಪರಿಣಾಮ ಬೀರುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ ಎನ್ನುವ ಅಂಶ ಈ ಸಂಶೋಧನೆಯಲ್ಲಿ ಸಾಬೀತಾಗಿದೆ. ಈ ವೇಗಸ್ ನರವು ಹೊಟ್ಟೆ ಹಾಗೂ ಮೆದುಳು ಎರಡಕ್ಕೂ ಸಂಬಂಧ ಕಲ್ಪಿಸುವ ನರವಾಗಿದೆ.

Most Read: ಬಿಕ್ಕಳಿಕೆ ಕಡಿಮೆಯಾಗಿಸಲು ಏನು ಮಾಡಬೇಕು? ಇಲ್ಲಿದೆ ಸರಳ ಮನೆಮದ್ದುಗಳು

ಪೇಪರ್ ಬ್ಯಾಗ್‌ನಲ್ಲಿ ಉಸಿರಾಡಿಸಿ ನೋಡಿ

ಪೇಪರ್ ಬ್ಯಾಗ್‌ನಲ್ಲಿ ಉಸಿರಾಡಿಸಿ ನೋಡಿ

ಉಸಿರು ಬಿಗಿ ಹಿಡಿದು ಬಿಕ್ಕಳಿಕೆ ಕಡಿಮೆ ಮಾಡುವ ರೀತಿಯಲ್ಲಿಯೇ ಈ ಕ್ರಮವೂ ಪರಿಣಾಮ ಬೀರುತ್ತದೆ. ಪೇಪರ್ ಬ್ಯಾಗ್ ಒಂದನ್ನು ತೆಗೆದುಕೊಂಡು ಅದರೊಳಗೆಯೇ ಉಸಿರಾಟ ಮಾಡಿ. ಇದರಿಂದ ರಕ್ತದಲ್ಲಿ ಕಾರ್ಬನ್ ಡೈಯಾಕ್ಸೈಡ್ ಮಟ್ಟ ಹೆಚ್ಚಳವಾಗಿ ಶ್ವಾಸಕೋಶದಲ್ಲಿನ ಬಿಗಿತವನ್ನು ಕಡಿಮೆ ಮಾಡುತ್ತದೆ. ಇದರಿಂದ ಬಿಕ್ಕಳಿಕೆ ವಾಸಿಯಾಗುತ್ತದೆ.

ಮೊಣಕಾಲು ಗಂಟುಗಳನ್ನು ಎದೆಗೆ ಹಚ್ಚಿಕೊಳ್ಳಿ

ಮೊಣಕಾಲು ಗಂಟುಗಳನ್ನು ಎದೆಗೆ ಹಚ್ಚಿಕೊಳ್ಳಿ

ಬಿಕ್ಕಳಿಕೆ ನಿವಾರಿಸಲು ಇದೊಂದು ದೈಹಿಕ ಕೌಶಲದ ಕ್ರಮವಾಗಿದೆ. ನೆಲದ ಮೇಲೆ ಕುಳಿತುಕೊಂಡು ಮೊಣಕಾಲುಗಳನ್ನು ಎದೆಯವರೆಗೆ ತನ್ನಿ. ಮೊಣಕಾಲುಗಳನ್ನು ಎದೆಗೆ ತಾಕಿಸಿ ಮತ್ತೆ ಬಿಡಿ. ಹೀಗೆ ಕೆಲಹೊತ್ತು ಮಾಡಿದಲ್ಲಿ ಬಿಕ್ಕು ನಿಂತುಹೋಗುತ್ತದೆ. ಇದರಿಂದ ಶ್ವಾಸಕೋಶದಲ್ಲಿನ ಒತ್ತಡ ಕಡಿಮೆಯಾಗಿ ಬಿಕ್ಕಳಿಕೆ ನಿಧಾನವಾಗಿ ವಾಸಿಯಾಗುತ್ತದೆ.

ಹುಳಿಯಾದ ಪದಾರ್ಥದಿಂದ ಬಿಕ್ಕು ನಿವಾರಣೆ

ಹುಳಿಯಾದ ಪದಾರ್ಥದಿಂದ ಬಿಕ್ಕು ನಿವಾರಣೆ

ನಿಂಬೆಹಣ್ಣು ಅಥವಾ ವಿನೆಗರ್‌ನಂಥ ಹುಳಿ ಪದಾರ್ಥಗಳ ಸೇವನೆಯಿಂದ ಸಹ ಬಿಕ್ಕಳಿಕೆ ನಿವಾರಿಸಬಹುದು. ಒಂದು ಹೋಳು ನಿಂಬೆಹಣ್ಣನ್ನು ನಾಲಿಗೆಯ ಮೇಲಿಟ್ಟುಕೊಂಡು ಅದನ್ನು ನಿಧಾನವಾಗಿ ಹೀರುತ್ತ ದ್ರವ ಸೇವಿಸಿ. ಒಂದೆರಡು ಹನಿ ವಿನೆಗರ್ ಅನ್ನು ಸಹ ನಾಲಿಗೆಯ ಮೇಲೆ ಹಾಕಿಕೊಳ್ಳಬಹುದು. ಈ ಕ್ರಮಗಳಿಂದ ಬಿಕ್ಕಳಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

ಪೀನಟ್ ಬಟರ್ ಅಥವಾ ಜೇನುತುಪ್ಪದ ಬಳಕೆ

ಪೀನಟ್ ಬಟರ್ ಅಥವಾ ಜೇನುತುಪ್ಪದ ಬಳಕೆ

ಪೀನಟ್ ಬಟರ್ ಮೆದುಳಿನ ಕಾರ್ಯವನ್ನು ಸುಧಾರಿಸಿ ನಿಮ್ಮ ಶ್ವಾಸವನ್ನು ಸರಾಗಗೊಳಿಸುವ ಗುಣವನ್ನು ಹೊಂದಿದೆ. ಜೇನುತುಪ್ಪ ಸಹ ಇದೇ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಒಂದು ಟೀಸ್ಪೂನ್ ಪೀನಟ್ ಬಟರ್ ಅನ್ನು ನೀರಿನೊಂದಿಗೆ ಅಥವಾ ಜೇನುತುಪ್ಪವನ್ನು ಬೆಚ್ಚಗಿನ ನೀರಲ್ಲಿ ಬೆರೆಸಿ ಕುಡಿಯುವುದರಿಂದ ಬಿಕ್ಕಳಿಕೆಯನ್ನು ತಗ್ಗಿಸಲು ಸಾಧ್ಯ.

ಬಿಕ್ಕಳಿಕೆ ನಿವಾರಣೆಗೆ ತಂಪು ನೀರು

ಬಿಕ್ಕಳಿಕೆ ನಿವಾರಣೆಗೆ ತಂಪು ನೀರು

ತಂಪಾದ ಒಂದು ಗ್ಲಾಸ್ ನೀರನ್ನು ನಿಧಾನವಾಗಿ ಕುಡಿಯುವದರಿಂದ ಅಥವಾ ಮುಕ್ಕಳಿಸುವುದರಿಂದ ಬಿಕ್ಕಳಿಕೆಯನ್ನು ಕಡಿಮೆ ಮಾಡಬಹುದು. ತಂಪಾದ ನೀರು ಶ್ವಾಸಕೋಶದ ಸೆಳೆತವನ್ನು ಕಡಿಮೆ ಮಾಡಿ ಬಿಕ್ಕಳಿಕೆಯನ್ನು ತಗ್ಗಿಸುತ್ತದೆ.

Most Read: ಬಿಕ್ಕಳಿಕೆ ತಡೆಗೆ ಸರಳ ಟ್ರಿಕ್ಸ್- ಕೂಡಲೇ ಕಡಿಮೆಯಾಗುವುದು!

ಸಬ್ಬಸಿಗೆ ಬೀಜ ಸೇವಿಸಿ ಬಿಕ್ಕಳಿಕೆ ನಿಲ್ಲಿಸಿ

ಸಬ್ಬಸಿಗೆ ಬೀಜ ಸೇವಿಸಿ ಬಿಕ್ಕಳಿಕೆ ನಿಲ್ಲಿಸಿ

ಬಿಕ್ಕಳಿಕೆ ನಿವಾರಣೆಗೆ ಸಬ್ಬಸಿಗೆ ಬೀಜ ಸೇವಿಸುವುದು ಬಹು ಪುರಾತನವಾದ ಕ್ರಮವಾಗಿದೆ. ಸಬ್ಬಿಸಿಗೆ ಬೀಜಗಳು ವೇಗಸ್ ನರವನ್ನು ಉತ್ತೇಜಿಸುವುದರಿಂದ ಬಿಕ್ಕಳಿಕೆ ತಾನಾಗಿಯೇ ಕಡಿಮೆಯಾಗುತ್ತದೆ.

English summary

Effective Ways to get rid of irritating hiccups

Hiccups are generally caused when your diaphragm cramps or contracts briefly closing your vocal cord, cause the 'hic'sound. Here are some tried and tested easy ways to get rid of hiccups
X
Desktop Bottom Promotion