For Quick Alerts
ALLOW NOTIFICATIONS  
For Daily Alerts

ಇಸಬು ರೋಗದ ಸಮಸ್ಯೆ ಇದೆಯೇ? ಬೇವಿನ ಎಣ್ಣೆ ಪರ್ಫೆಕ್ಟ್ ಮನೆಮದ್ದು

|

ಭಾರತದಲ್ಲಿ ಪುರಾತನ ಕಾಲದಿಂದಲೂ ಬೇವಿನ ಎಲೆಗಳನ್ನು ಔಷಧಿ ಆಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಬೇವನ್ನು ಆಯುರ್ವೇದ, ಹೋಮಿಯೋಪಥಿ ಮತ್ತು ಯುನಾನಿ ಔಷಧಿಯಲ್ಲಿ ಬಳಸಿಕೊಂಡು ಬರಲಾಗುತ್ತಾ ಇದೆ. ವೈಜ್ಞಾನಿಕವಾಗಿ ಬೇವನ್ನು ಆಜಾಡಿರಾಚ ಇಂಡಿಕಾ' ಎಂದು ಕರೆಯಲಾಗುತ್ತದೆ. ಬೇವಿನಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಬೇವಿನ ಮರದ ಎಲೆ, ಹೂವುಗಳು, ಹಣ್ಣು, ತೊಗಟೆ, ಬೀಜ ಮತ್ತು ಬೇರನ್ನು ವಿವಿಧ ರೀತಿಯ ಕಾಯಿಲೆಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಈ ಲೇಖನದಲ್ಲಿ ಎಸ್ಕಿಮಾ(ಇಸಬು) ನಿವಾರಣೆಗೆ ಬೇವನ್ನು ಯಾವ ರೀತಿಯಿಂದ ಬಳಸಿಕೊಳ್ಳಲಾಗುವುದು ಎಂದು ಹೇಳಲಾಗುತ್ತದೆ. ಇದನ್ನು ನೀವು ತಿಳಿಯಿರಿ.

ಬೇವಿನ ಎಣ್ಣೆ ಎಂದರೇನು?

ಬೇವಿನ ಎಣ್ಣೆ ಎಂದರೇನು?

ಬೇವಿನ ಎಣ್ಣೆ ಎಂದರೆ ಬೇವಿನ ಬೀಜಗಳಿಂದ ತಯಾರಿಸಿಕೊಂಡಿರುವಂತಹ ಎಣ್ಣೆ. ಈ ಎಣ್ಣೆಯನ್ನು ವಿವಿಧ ರೀತಿಯ ಸೌಂದರ್ಯ ಉತ್ಪನ್ನಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಕೂದಲಿನ ಉತ್ಪನ್ನಗಳು, ಕಾಸ್ಮೆಟಿಕ್, ಚರ್ಮದ ಕ್ರೀಮ್ ಮತ್ತು ಲೋಷನ್ ಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಬೇವಿನ ಎಣ್ಣೆಯು ತುಂಬಾ ಕಹಿಯಾಗಿರುವುದು ಮತ್ತು ಇದು ಕೆಟ್ಟ ವಾಸನೆ ಬರುತ್ತದೆ. ಆದರೆ ಇದರಲ್ಲಿ ಉನ್ನತ ಮಟ್ಟದ ಕೊಬ್ಬಿನಾಮ್ಲಗಳು, ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಇ, ಟ್ರೈಗ್ಲಿಸರೈಡ್ ಗಳು, ಲಿಮೊನಾಯ್ಡ್ ಮತ್ತು ಕ್ಯಾಲ್ಸಿಯಂ ಇದೆ. ಈ ಎಲ್ಲಾ ಪೋಷಕಾಂಶಗಳು ವಾತಾವರಣದಿಂದ ಚರ್ಮದ ಮೇಲೆ ಆಗುವಂತಹ ಹಾನಿಯಿಂದ ರಕ್ಷಿಸುವುದು ಮತ್ತು ಚರ್ಮಕ್ಕೆ ಫ್ರೀ ರ್ಯಾಡಿಕಲ್ ನಿಂದ ಆಗುವ ಹಾನಿ ತಪ್ಪಿಸುವುದು. ತಂಪಾದ ಬೇವಿನ ಎಣ್ಣೆಯನ್ನು ಇಸಬು ಸಹಿತ ಹಲವಾರು ರೀತಿಯ ಚರ್ಮದ ಸಮಸ್ಯೆಗಳಿಗೆ ಉಪಯೋಗಿಸಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಚರ್ಮ ಒಣಗುವುದು, ನೆರಿಗೆ, ಮೊಡವೆ, ಬೊಕ್ಕೆ, ಮಚ್ಚೆ, ಸೋರಿಯಾಸಿಸ್ ಇತ್ಯಾದಿಗಳು.

ಇಸಬುಗೆ ಬೇವಿನ ಎಣ್ಣೆಯ ಲಾಭಗಳು

ಇಸಬುಗೆ ಬೇವಿನ ಎಣ್ಣೆಯ ಲಾಭಗಳು

ಇಸಬು ಸಮಸ್ಯೆ ಕಾಣಿಸಿಕೊಂಡ ವೇಳೆ ಚರ್ಮದಲ್ಲಿ ಉರಿಯೂತ, ಕೆಂಪಾಗುವುದು, ತುರಿಕೆ, ಚರ್ಮ ಎದ್ದುಬರುವುದು ಮತ್ತು ಒಣ ಚರ್ಮ ಕಾಣಿಸಿಕೊಳ್ಳುವುದು. ಅನುವಂಶೀಯತೆ ಮತ್ತು ವಾತಾವರಣದಿಂದಾಗಿ ಇಸಬು ಸಮಸ್ಯೆ ಬರುವ ಸಾಧ್ಯತೆಯಿದೆ. ಇಸಬು ಸಮಸ್ಯೆ ಇದ್ದರೆ ಆಗ ವ್ಯಕ್ತಿಗೆ ಆರಾಮ ಎನ್ನುವುದು ಇಲ್ಲದಂತೆ ಆಗಬಹುದು. ಯಾಕೆಂದರೆ ಇದರಿಂದ ಸಹಿಸಲು ಸಾಧ್ಯವಿಲ್ಲದೆ ಇರುವ ತುರಿಕೆ ಕಾಣಿಸುವುದು. ತುರಿಸಿಕೊಂಡರೆ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸುವುದು. ಬೇವಿನ ಎಣ್ಣೆಯು ಇಸಬುಗೆ ಚಿಕಿತ್ಸೆ ನೀಡಲು ಹೇಗೆ ಪರಿಣಾಮಕಾರಿ ಎಂದು ನಾವು ಈ ಲೇಖನ ಮೂಲಕ ತಿಳಿಯುವ.

ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ

ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ

ಸ್ಟ್ಯಾಫಿಲೋಕೊಕಸ್ ಔರೆಸ್(ಸ್ಟ್ಯಾಫ್) ಎನ್ನುವ ಬ್ಯಾಕ್ಟೀರಿಯಾವು ಇಸಬು ಉಂಟು ಮಾಡುವಂತಹ ಸಾಮಾನ್ಯ ಬ್ಯಾಕ್ಟೀರಿಯಾ ಆಗಿದೆ ಮತ್ತು ಬೇವಿನ ಎಣ್ಣೆಯು ಚರ್ಮಕ್ಕೆ ಉಂಟಾಗಿರುವ ಬ್ಯಾಕ್ಟೀರಿಯಾ ಸೋಂಕಿನ ನಿವಾರಣೆಗೆ ನೆರವಾಗುವುದು. ಬೇವಿನ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳು ಇವೆ. ಇಸಬು ಸಮಸ್ಯೆಗೆ ಒಳಗಾಗಿರುವಂತವರು ಇತರ ಕೆಲವೊಂದು ಚರ್ಮದ ಸೋಂಕಿಗೆ ಒಳಗಾಗುವರು. ಒಡೆದ ಮತ್ತು ನಿಸ್ತೇಜ ಚರ್ಮಕ್ಕೂ ಇದು ನೆರವಾಗುವುದು. ಬೇವಿನ ಎಣ್ಣೆಯನ್ನು ಹಚ್ಚಿಕೊಳ್ಳುವ ಮೂಲಕ ಚರ್ಮದ ಆರೋಗ್ಯ ಕಾಪಾಡಬಹುದು ಮತ್ತು ಇದು ಚರ್ಮದ ಸೋಂಕಿನಿಂದ ತಡೆಯುವಂತಹ ರಕ್ಷಣಾ ಕವಚವನ್ನು ರಚಿಸುವುದು.

Most Read: ಚರ್ಮ ರೋಗ 'ಇಸಬು' ತೊಂದರೆ ನಿವಾರಣೆಗೆ-ಬೇವಿನ ಎಣ್ಣೆ ಸಾಕು

ಚರ್ಮಕ್ಕೆ ತೇವಾಂಶ ನೀಡುವುದು

ಚರ್ಮಕ್ಕೆ ತೇವಾಂಶ ನೀಡುವುದು

ಬೇವಿನ ಎಣ್ಣೆಯಲ್ಲಿ ಇರುವ ಕೆಲವು ಪ್ರಮುಖ ಕೊಬ್ಬಿನ ಆಮ್ಲಗಳಾಗಿರುವ(ಪಾಲ್ಮಿಟಿಕ್, ಸ್ಟಿಯರಿಕ್, ಒಲೀಕ್ ಮತ್ತು ಲಿನೋಲೀಕ್ ಆಮ್ಲಗಳು) ಮತ್ತು ವಿಟಮಿನ್ ಇ ಇಸಬು ಇರುವ ಭಾಗದಲ್ಲಿ ಚರ್ಮಕ್ಕೆ ತೇವಾಂಶ ನೀಡುವುದು ಮತ್ತು ಮೊಶ್ಚಿರೈಸ್ ಮಾಡುವುದು. ಎಣ್ಣೆಯು ಚರ್ಮದ ಪದರದ ಮೇಲೆ ಆಳವಾಗಿ ಹೋಗುವುದು ಮತ್ತು ಸಣ್ಣ ಬಿರುಕುಗಳನ್ನು ನಿವಾರಣೆ ಮಾಡಿ, ಚರ್ಮವು ಒಣಗದಂತೆ ಕಾಪಾಡುವುದು. ಕೊಬ್ಬಿನ ಆಮ್ಲಗಳು ಮತ್ತು ವಿಟಮಿನ್ ಇಯನ್ನು ಚರ್ಮವು ಸುಲಭವಾಗಿ ಹೀರಿಕೊಳ್ಳುವುದು. ಇದರಿಂದ ಚರ್ಮವು ಎಣ್ಣೆಯಂಶದಿಂದ ಇರುವುದು. ಎಣ್ಣೆಯು ಒಮ್ಮೆ ಹೀರಿಕೊಂಡ ಬಳಿಕ ಅದು ಚರ್ಮದ ಮೊಶ್ಚಿರೈಸ್ ಆಗಿ ಕೆಲಸ ಮಾಡುವುದು. ಬಿರುಕುಬಿಟ್ಟ ಚರ್ಮಕ್ಕೆ ಶಮನ ಮತ್ತು ಕಿರಿಕಿರಿಯಿಂದ ಚರ್ಮವನ್ನು ರಕ್ಷಿಸುವುದು.

ಉರಿಯೂತ ಕಡಿಮೆ ಮಾಡುವುದು

ಉರಿಯೂತ ಕಡಿಮೆ ಮಾಡುವುದು

ಬೇವಿನ ಎಣ್ಣೆಯಲ್ಲಿ ಉರಿಯೂತ ಶಮನಕಾರಿ ಅಂಶಗಳು ಇವೆ. ಇದನ್ನು ನಿಂಬಿನ್ ಮತ್ತು ನಿಂಬಿಡಿನ್ ಎಂದು ಕರೆಯಲಾಗುತ್ತದೆ. ಇದು ಇಸಬಿನಿಂದ ಉಂಟಾಗಿರುವ ಊತ ಮತ್ತು ಚರ್ಮ ಕೆಂಪಾಗುವುದನ್ನು ತಡೆಯುವುದು. ಕ್ವೆರ್ಸೆಟಿನ್ ಎನ್ನುವ ಅಂಶವು ಬೇವಿನ ಎಲೆಯ ಎಣ್ಣೆಯಲ್ಲಿ ಲಭ್ಯವಿದೆ. ಇದು ಉರಿಯೂತದಿಂದ ದೇಹವನ್ನು ರಕ್ಷಿಸುವುದು. ಇಸಬು ಸಮಯದಲ್ಲಿ ದೇಹದಲ್ಲಿ ಉರಿಯೂತ ಹೆಚ್ಚಾಗಿರುವುದು.

ನೋವು ನಿವಾರಿಸುವುದು

ನೋವು ನಿವಾರಿಸುವುದು

ಬೇವಿನ ಎಣ್ಣೆಯು ನೈಸರ್ಗಿಕವಾಗಿ ನೋವು ನಿವಾರಕ ಅಂಶವನ್ನು ಹೊಂದಿದೆ. ಇದು ನೈಸರ್ಗಿಕವಾಗಿ ನೋವು ನಿವಾರಕ ಆಗಿದೆ. ಇದನ್ನು ಒಣ ಚರ್ಮದ ಮೇಲೆ ಹಚ್ಚಿಕೊಂಡಾಗ ಅದು ಊತ, ತುರಿಕೆ ಮತ್ತು ಬಿರುಕುಬಿಟ್ಟ ಚರ್ಮದ ನಿವಾರಣೆ ಮಾಡುವುದು. ಅಧ್ಯಯನಗಳ ಪ್ರಕಾರ ಬೇವಿನ ಎಣ್ಣೆಯನ್ನು 3-4 ದಿನಗಳ ಕಾಲ ಹಚ್ಚಿಕೊಂಡರೆ ಆಗ ನೋವು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುವುದು ಎಂದು ಹೇಳಿವೆ.

ಅಲರ್ಜಿ ಹೋಗಲಾಡಿಸುವ ಗುಣ ಹೊಂದಿದೆ

ಅಲರ್ಜಿ ಹೋಗಲಾಡಿಸುವ ಗುಣ ಹೊಂದಿದೆ

ವಾತಾವರಣದಲ್ಲಿ ಇರುವಂತಹ ಪರಾಗ, ಅಲರ್ಜಿಯನ್ ಮತ್ತು ಉದ್ರೇಕಕಾರಿಯಿಂದಾಗಿ, ಉಷ್ಣ ಮತ್ತು ಶೀತ ವಾತಾವರಣದಿಂದಾಗಿ ಇಸಬು ಸಮಸ್ಯೆಯು ಉಂಟಾಗುವುದು. ಬೇವಿನ ಎಣ್ಣೆಯಲ್ಲಿ ಅಲರ್ಜಿ ನಿವಾರಣೆ ಮಾಡುವ ಗುಣಗಳು ಇವೆ. ಇದರಿಂದಾಗಿ ದೇಹದಲ್ಲಿ ಉಂಟಾಗುವ ಅಲರ್ಜಿ ನಿವಾರಣೆ ಆಗುವುದು.

ಇಸಬು ಸಮಸ್ಯೆಗೆ ಬೇವಿನ ಎಣ್ಣೆ ಬಳಸುವುದು ಹೇಗೆ?

ಇಸಬು ಸಮಸ್ಯೆಗೆ ಬೇವಿನ ಎಣ್ಣೆ ಬಳಸುವುದು ಹೇಗೆ?

ನೀವು ಯಾವಾಗಲೂ ಸಾವಯವ, 100 ಶೇಕಡಾ ಶುದ್ಧವಾಗಿರುವ ಬೇವಿನ ಎಣ್ಣೆ ಖರೀದಿ ಮಾಡಿ. ಶುದ್ಧ ಬೇವಿನ ಎಣ್ಣೆಯು ಹಳದಿ ಬಣ್ಣ ಹೊಂದಿರುವುದು. ಇದರಿಂದ ಸಾಸಿವೆ, ಬೆಳ್ಳುಳ್ಳಿ ಮತ್ತು ಸಲ್ಫರ್ ನಂತಹ ವಾಸನೆ ಬರುವುದು. ನೀವು ಒಣ ಚರ್ಮಕ್ಕೆ ಬೇವಿನ ಎಣ್ಣೆ ಬಳಸಿಕೊಳ್ಳೂವ ಮೊದಲು ಅದನ್ನು ಮೊದಲು ನಿಮ್ಮ ದೇಹದ ಒಂದು ಭಾಗಕ್ಕೆ ಹಚ್ಚಿಕೊಂಡು ಪರೀಕ್ಷೆ ಮಾಡಿ. 24 ಗಂಟೆಗಳ ಒಳಗಡೆ ನಿಮಗೆ ಯಾವುದೇ ರೀತಿಯ ಅಲರ್ಜಿ ಕಾಣಿಸಿಕೊಳ್ಳಬಹುದು. ಚರ್ಮವು ಕೆಂಪಾಗುವುದು ಅಥವಾ ಊತ ಕಾಣಿಸಬಹುದು. ಅಲರ್ಜಿ ಕಾಣಿಸಿಕೊಳ್ಳದೆ ಇದ್ದರೆ ಇಸಬು ಸೋಂಕಿತ ಚರ್ಮಕ್ಕೆ ಬೇವಿನ ಎಣ್ಣೆ ಬಳಸಿಕೊಳ್ಳಿ.

ಬಳಸಿಕೊಳ್ಳುವ ವಿಧಾನಗಳು

ಬಳಸಿಕೊಳ್ಳುವ ವಿಧಾನಗಳು

•ಯಾವಾಗಲೂ ಬೇವಿನ ಎಣ್ಣೆಯನ್ನು ಯಾವುದಾದರೂ ಬೇರೆ ಎಣ್ಣೆಯಾಗಿರುವಂತಹ ತೆಂಗಿನ ಎಣ್ಣೆ, ದ್ರಾಕ್ಷಿ ಬೀಜದ ಎಣ್ಣೆ ಅಥವಾ ಜೊಜೊಬಾ ಎಣ್ಣೆ ಜತೆಗೆ ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಬಳಸಿ.

•ಮಿಶ್ರಣ ಮಾಡಿಕೊಂಡ ಬಳಿಕ ಒಂದು ಹತ್ತಿ ಉಂಡೆಯನ್ನು ಇದರಲ್ಲಿ ಮುಳುಗಿಸಿಕೊಳ್ಳಿ. ಈ ಹತ್ತಿ ಉಂಡೆಯಿಂದ ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.

•ರಾತ್ರಿಯಿಡಿ ಹಾಗೆ ಬಿಡಿ ಮತ್ತು ಬೆಳಗ್ಗೆ ತೊಳೆಯಿರಿ.

•ಉತ್ತಮ ಫಲಿತಾಂಶಕ್ಕಾಗಿ ಪ್ರತಿನಿತ್ಯ ಬಳಸಿಕೊಳ್ಳಿ.

ಇಸಬು ಎನ್ನುವುದು ದೇಹವಿಡಿ ಹರಡಿದ್ದರೆ ಆಗ ಕೆಲವು ಹನಿ ಬೇವಿನ ಎಣ್ಣೆಗಳನ್ನು ಸ್ನಾನ ಮಾಡುವ ನೀರಿಗೆ ಹಾಕಿ.

Most Read: ಕಿರಿಕಿರಿ ನೀಡುವ ಇಸುಬು ಸಮಸ್ಯೆಗೆ 'ಬೇವಿನ ಎಣ್ಣೆ' ಪರ್ಫೆಕ್ಟ್ ಮನೆಮದ್ದು

ಮನೆಯಲ್ಲೇ ಕೋಲ್ಡ್-ಇನ್ಫ್ಯೂಸ್ಡ್ ಬೇವಿನ ಎಣ್ಣೆ ತಯಾರಿಸುವುದು ಹೇಗೆ?

ಮನೆಯಲ್ಲೇ ಕೋಲ್ಡ್-ಇನ್ಫ್ಯೂಸ್ಡ್ ಬೇವಿನ ಎಣ್ಣೆ ತಯಾರಿಸುವುದು ಹೇಗೆ?

•ಅರ್ಧ ಡಬ್ಬಕ್ಕೆ ಬೇವಿನ ಬೀಜಗಳನ್ನು ಹಾಕಿಕೊಳ್ಳಿ ಅಥವಾ ಎಲೆಗಳನ್ನು ಹಾಕಿ. ಇದರ ಮೇಲಿನ ಭಾಗಕ್ಕೆ ತೆಂಗಿನ ಎಣ್ಣೆ ಹಾಕಿಕೊಂಡು ಡಬ್ಬವನ್ನು ಪೂರ್ತಿ ಮಾಡಿಕೊಳ್ಳಿ.

•ಒಂದು ಚಮಚ ಬಳಸಿಕೊಂಡು ಬೇವಿನ ಎಲೆಗಳು ಮತ್ತು ಬೀಜಗಳು ಎಣ್ಣೆಯಲ್ಲಿ ಸರಿಯಾಗಿ ಅದ್ದಿಕೊಳ್ಳುವಂತೆ ತಿರುಗಿಸಿಕೊಳ್ಳಿ.

•ಮೇಲ್ಭಾಗದಲ್ಲಿ ಮೇಣದ ಕಾಗದ ಇಟ್ಟ ಬಳಿಕ ಡಬ್ಬದ ಮುಚ್ಚಳವನ್ನು ಮುಚ್ಚಿಬಿಡಿ.

•ಇದನ್ನು ತಂಪಾದ ಮತ್ತು ಕತ್ತಲಿನಲ್ಲಿ ಆರು ವಾರಗಳ ಕಾಲ ಇಟ್ಟುಬಿಡಿ.

•ಆರು ವಾರಗಳ ಬಳಿಕ ಎಣ್ಣೆ ಮತ್ತು ಬೀಜಗಳನ್ನು ತೆಗೆಯಿರಿ. ಈ ಎಣ್ಣೆಯನ್ನು ಬಟ್ಟೆ ಬಳಸಿ ಸೋಸಿಕೊಳ್ಳಿ.

•ಇನ್ನೊಂದು ಶುದ್ಧ ಡಬ್ಬಕ್ಕೆ ಎಣ್ಣೆ ಹಾಕಿಕೊಳ್ಳಿ.

ಇಸಬು ನಿವಾರಣೆಗೆ ಬೇವಿನ ಎಣ್ಣೆಯ ಬಳಕೆಯಿಂದ ಆಗುವ ಅಡ್ಡ ಪರಿಣಾಮಗಳು ಮತ್ತು ಅಪಾಯಗಳು

ಇಸಬು ನಿವಾರಣೆಗೆ ಬೇವಿನ ಎಣ್ಣೆಯ ಬಳಕೆಯಿಂದ ಆಗುವ ಅಡ್ಡ ಪರಿಣಾಮಗಳು ಮತ್ತು ಅಪಾಯಗಳು

ಬೇವಿನ ಎಣ್ಣೆ ಬಳಸಿಕೊಳ್ಳುವ ಮೊದಲು ನೀವು ವೈದ್ಯರನ್ನು ಸಂಪರ್ಕಿಸಿ. ಇದರ ಬಳಿಕ ಹಚ್ಚಿಕೊಳ್ಳಿ. ಯಾಕೆಂದರೆ ಇದರಿಂದ ಕೆಲವು ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳು ಇವೆ. ವಯಸ್ಸು, ಆರೋಗ್ಯ ಮತ್ತು ಇತರ ಕೆಲವೊಂದು ಪರಿಸ್ಥಿತಿಗೆ ಅನುಗುಣವಾಗಿ ಬೇವಿನ ಎಣ್ಣೆಯ ಪ್ರಮಾಣ ಸರಿಯಾಗಿ ಬಳಸಿಕೊಳ್ಳಬೇಕು. ಇಲ್ಲವಾದಲ್ಲಿ ಇದರಿಂದ ಬೇರೆ ರೀತಿಯ ಪರಿಣಾಮ ಬೀರಬಹುದು. ಅದರಲ್ಲೂ ಮಕ್ಕಳಿಗೆ ಇಂತಹ ಸಮಸ್ಯೆ ಇದ್ದರೆ ನೀವು ನೇರವಾಗಿ ಬೇವಿನ ಎಣ್ಣೆ ಬಳಕೆ ಮಾಡಬೇಡಿ. ಮೊದಲಿಗೆ ವೈದ್ಯರ ಬಳಿಕ ಪರೀಕ್ಷಿಸಿ, ಬಳಿಕ ಸಲಹೆ ಪಡೆದು ಬಳಸಿ.

English summary

Eczema problem? Neem Oil is a perfect home remedies

An unborn baby was removed from the mother's womb for a surgery and was later put back inside safely. The 26-year-old pregnant woman who hails from UK has become one of the first in the state to undergo a pioneering surgery on her baby's spine while the baby was still in the womb.
X
Desktop Bottom Promotion