For Quick Alerts
ALLOW NOTIFICATIONS  
For Daily Alerts

ಸೌತೆಕಾಯಿ ತಿಂದರೆ ಕ್ಯಾನ್ಸರ್, ಮಧುಮೇಹ ಸಮಸ್ಯೆ ನಿವಾರಣೆ!

|

ಸೌತೆಕಾಯಿಯಲ್ಲಿ ಹಲವಾರು ರೀತಿ ಪೋಷಕಾಂಶಗಳಿದ್ದು, ಇದನ್ನು ವಿವಿಧ ರೀತಿಯಿಂದ ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಸಲಾಡ್, ಸ್ಯಾಂಡ್ ವಿಚ್ ಮತ್ತು ಸ್ಮೂಥಿಗಳಲ್ಲಿ ಸೌತೆಕಾಯಿ ಬಳಸಬಹುದು. ಇದರಲ್ಲಿ ನೀರಿನಾಂಶವು ಅಧಿಕವಾಗಿರುವ ಕಾರಣದಿಂದಾಗಿ ತೂಕ ಕಳೆದುಕೊಳ್ಳಲು ಬಯಸುವವರು ತಮ್ಮ ಆಹಾರ ಕ್ರಮದಲ್ಲಿ ಇದನ್ನು ತಪ್ಪದೇ ಬಳಸಬಹುದು. ಸೌತೆಕಾಯಿ ನಿಜವಾಗಿಯೂ ಒಂದು ಹಣ್ಣು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಸೌತೆಕಾಯಿಯಲ್ಲಿ ಉನ್ನತ ಮಟ್ಟದ ಪೋಷಕಾಂಶಗಳು ಇದ್ದು, ಇದರಲ್ಲಿ ಪ್ರಮುಖವಾದ ಆ್ಯಂಟಿಆಕ್ಸಿಡೆಂಟ್ ಇದೆ. ಕೆಲವೊಂದು ಕಾಯಿಲೆಗಳ ತಡೆಯಲು ಹಾಗೂ ಅದನ್ನು ನಿವಾರಿಸಲು ಇದು ತುಂಬಾ ಪರಿಣಾಮಕಾರಿ. ಸೌತೆಕಾಯಿಯಲ್ಲಿ ಕಡಿಮೆ ಕ್ಯಾಲರಿ ಹಾಗೂ ಹೀರಿಕೊಳ್ಳುವ ನಾರಿನಾಂಶ ಹೆಚ್ಚಿದ್ದು, ಇದು ತೂಕ ಇಳಿಸುವವರಿಗೆ ತುಂಬಾ ಪರಿಣಾಮಕಾರಿ. ಸೌತೆಕಾಯಿಯಲ್ಲಿ 45 ಕ್ಯಾಲರಿ, 11 ಗ್ರಾಂ ಕಾರ್ಬ್ರೋಹೈಡ್ರೇಟ್ಸ್, 2 ಗ್ರಾಂ ಪ್ರೋಟೀನ್, 2 ಗ್ರಾಂ ನಾರಿನಾಂಶ, ವಿಟಮಿನ್ ಸಿ, ವಿಟಮಿನ್ ಕೆ, ಮೆಗ್ನಿಶಿಯಂ, ಪೊಟಾಶಿಯಂ ಮತ್ತು ಮ್ಯಾಂಗನೀಸ್ ಇದೆ.

ಇನ್ನು ಸೌತೆಕಾಯಿಯಲ್ಲಿ ಇರುವಂತಹ ಕೆಲವೊಂದು ಅಂಶಗಳು ಕ್ಯಾನ್ಸರ್ ಮತ್ತು ಮಧುಮೇಹ ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಸಂಶೋಧನೆಗಳು ಕಂಡುಕೊಂಡಿವೆ. ಸೌತೆಕಾಯಿಯಲ್ಲಿ ಕಹಿಯನ್ನು ಉಂಟು ಮಾಡುವಂತಹ ಅಂಶವು ಕ್ಯಾನ್ಸರ್ ಮತ್ತು ಮಧುಮೇಹ ನಿವಾರಣೆ ಮಾಡುವಲ್ಲಿ ಸಕ್ಷಮವಾಗಿದೆ. ಕಾಡು ಸೌತೆಯಲ್ಲಿ ಕಹಿ ಉಂಟು ಮಾಡುವಂತಹ ಜಿನ್ ಗಳನ್ನು ಕ್ಯಾಲಿಫೋರ್ನಿಯಾದ ಯೂನಿವರ್ಸಿಟಿ ಸಂಶೋಧನೆಯು ಕಂಡು ಹುಡುಕಿದೆ. ಇದನ್ನು ಕುಕುರ್ಬಿಟಾಸಿನ್ಸ್ ಎಂದು ಕರೆಯಲಾಗುತ್ತದೆ. ಇದು ಕಾಡು ಸೌತೆಕಾಯಿಗೆ ರುಚಿ ನೀಡುವುದು. ಸೌತೆಕಾಯಿ, ಕುಂಬಳಕಾಯಿ, ಕಲ್ಲಂಗಡಿ ಮತ್ತು ಈ ಪ್ರಜಾತಿಗೆ ಸೇರಿದ ಹಣ್ಣುಗಳಲ್ಲಿ ಈ ಅಂಶವು ಇದೆ.

Most Read: ದೇಹಕ್ಕೆ ತಂಪುಣಿಸುವ ಸೌತೆಕಾಯಿ ಜ್ಯೂಸ್‌ನ ಕರಾಮತ್ತೇನು?

Cucumber

ಕಾಡು ಸೌತೆಕಾಯಿಯ ಎಲೆಗಳು ಮತ್ತು ಹಣ್ಣನ್ನು ಹಿಂದಿನಿಂದಲೂ ಭಾರತ ಮತ್ತು ಚೀನಾದ ಚಿಕಿತ್ಸಾ ಕ್ರಮದಲ್ಲಿ ಬಳಸಿಕೊಳ್ಳಲಾಗುತ್ತದೆ. ಇದರಿಂದ ಯಕೃತ್ ನ ಕಾಯಿಲೆಯನ್ನು ನಿವಾರಣೆ ಮಾಡಬಹುದು. ಇತ್ತೀಚೆಗೆ ನಡೆದಿರುವಂತಹ ಸಂಶೋಧನೆಗಳ ಪ್ರಕಾರ ಕುಕುರ್ಬಿಟಾಸಿನ್ಸ್ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವುದು ಅಥವಾ ಅದನ್ನು ತೆಗೆದುಹಾಕುವುದು.

ಈ ಅಧ್ಯಯನ ವರದಿಯ ಲೇಖಕರಾಗಿರುವಂತಹ ವಿಲಿಯಮ್ ಲೂಕಾಸ್ ಅವರು ಹೇಳುವ ಪ್ರಕಾರ ಸೌತೆಕಾಯಿ ತಳಿಶಾಸ್ತ್ರವನ್ನು ಬದಲಾಯಿಸಿ ಅದನ್ನು ತಿನ್ನಬಹುದಾದ ಹಣ್ಣಾಗಿ ಹೇಗೆ ಮಾಡಲಾಗಿದೆ ಎಂದು ವಿವರಿಸಲಾಗಿದೆ. ಈ ಪ್ರಕ್ರಿಯೆಯನ್ನು ತಿಳಿದುಕೊಂಡರೆ ಆಗ ಭೂಮಿ ಮೇಲೆ ಇರುವಂತಹ ಕೆಲವೊಂದು ತಿನ್ನಲು ಸಾಧ್ಯವೇ ಇಲ್ಲದಿರುವ ಮತ್ತು ಕಡಿಮೆ ಪೋಷಕಾಂಶಗಳು ಇರುವಂತಹ ಹಣ್ಣುಗಳ ಮೇಲೆ ಕೂಡ ಇದನ್ನು ಪ್ರಯೋಗ ಮಾಡಬಹುದು. ಕುಕುರ್ಬಿಟಾಸಿನ್ಸ್ ಉತ್ಪಾದನೆಯ ವೇಗವನ್ನು ತುಂಬಾ ದೊಡ್ಡ ಮಟ್ಟದಲ್ಲಿ ಸುಲಭವಾಗಿ ಹೆಚ್ಚಿಸಬಹುದು ಮತ್ತು ಇದನ್ನು ಔಷಧಿಗಳಲ್ಲಿ ಕೂಡ ಬಳಸಬಹುದಾಗಿದೆ. ಜರ್ನಲ್ ಸೈನ್ಸ್ ನಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದೆ. ಸೌತೆಕಾಯಿ ತಿನ್ನುವುದರಿಂದ ಸಿಗುವ ಇನ್ನಷ್ಟು ಪ್ರಯೋಜನಗಳು

ತೂಕ ನಿಯಂತ್ರಣದಲ್ಲಿಡಲು ಸಹಕಾರಿ

ಸೌತೆಕಾಯಿಯು ತೂಕ ಇಳಿಸಲು ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಸೌತೆಕಾಯಿಯನ್ನು ತೂಕ ಕಳೆದುಕೊಳ್ಳುವ ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಕೇವಲ ಸೌತೆಕಾಯಿ ತಿನ್ನುವುದರಿಂದ ತೂಕ ಕಳೆದಕೊಳ್ಳಲು ಆಗಲ್ಲ. ಇದರೊಂದಿಗೆ ಸಮತೋಲಿತ ಆಹಾರ ಸೇವಿಸಬೇಕು.

ನೈಸರ್ಗಿಕ ಉರಿಯೂತ ಗುಣಗಳು

ಸೌತೆಕಾಯಿಯಲ್ಲಿ ಇರುವಂತಹ ಶೇ.95ರಷ್ಟು ನೀರಿನಾಂಶವು ದೇಹವನ್ನು ತೇವಾಂಶದಿಂದ ಇಡುತ್ತದೆ. ಇದು ಕೋಶಗಳಿಗೆ ಪೋಷಣೆ ನೀಡುವುದು ಮತ್ತು ಒಳಗಿನ ಕ್ರಿಯೆಗಳಿಗೆ ತುಂಬಾ ನೆರವಾಗುವುದು. ನೋವು ಹಾಗೂ ಸೋಂಕು ನಿವಾರಣೆಗೆ ಸೌತೆಕಾಯಿ ಜ್ಯೂಸ್ ತುಂಬಾ ಪರಿಣಾಮಕಾರಿ. ದೇಹದೊಳಗಡೆ ಉರಿಯೂತ ಉಂಟಾದಾಗ ಸೌತೆಕಾಯಿಯಲ್ಲಿರುವ ಉರಿಯೂತ ಶಮನಕಾರಿ ಗುಣವು ಕಿಣ್ವಗಳನ್ನು ಬಿಡುಗಡೆ ಮಾಡಿ ಉರಿಯೂತ ಕಡಿಮೆ ಮಾಡುವುದು.

ಹೃದಯಕ್ಕೆ ಒಳ್ಳೆಯದು

ಸೌತೆಕಾಯಿಯಲ್ಲಿ ಉನ್ನತ ಮಟ್ಟದ ಪೊಟಾಶಿಯಂ ಇದ್ದು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇದು ತುಂಬಾ ಪರಿಣಾಮಕಾರಿ. ಪೊಟಾಶಿಯಂ ವಿದ್ಯುದ್ವಿಚ್ಛೇಧಕಗಳಂತೆ ಕೆಲಸ ಮಾಡಿ ನರಗಳ ಕಾರ್ಯನಿರ್ವಹಣೆಗೆ ನೆರವಾಗುವುದು. ನರ ವ್ಯವಸ್ಥೆ ಬಗ್ಗೆ ಕಾಳಜಿ, ಸ್ನಾಯುಗಳ ಸಂಕೋಚನ ಮತ್ತು ಹೃದಯದ ಕಾರ್ಯನಿರ್ವಹಣೆಗೆ ನೆರವಾಗುವುದು. ಸೌತೆಕಾಯಿಯಲ್ಲಿ ನಾರಿನಾಂಶವಿದ್ದು, ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಗದಂತೆ ತಡೆಯುವುದು ಮತ್ತು ಹೃದಯದ ತಡೆ ನಿವಾರಿಸುವುದು.

Most Read: ಸೌತೆಕಾಯಿ ನೆನೆಸಿದ ನೀರು, ಆಯಸ್ಸು ನೂರು!

ಜೀರ್ಣಕಾರ್ಯಕ್ಕೆ ಮತ್ತು ತೂಕಇಳಿಸಲು ಸಹಕಾರಿ

ಸೌತೆಕಾಯಿಯಲ್ಲಿ ಅಧಿಕ ಜಲಾಂಶವಿದ್ದು, ಕಡಿಮೆ ಕ್ಯಾಲರಿಯನ್ನು ಒಳಗೊಂಡಿರುವುದರಿಂದ, ತೂಕ ನಷ್ಟವನ್ನು ಹೊಂದಲು ಬಯಸುವವರಿಗೆ ಸೌತೆಕಾಯಿಯು ವರದಾನವಾಗಿದೆ. ಸೌತೆಕಾಯಿಗಳನ್ನು ಸೂಪುಗಳಲ್ಲಿ ಮತ್ತು ಸಲಾಡ್ ಗಳಲ್ಲಿ ಬಳಸಿರಿ. ಒಂದು ವೇಳೆ ಸೌತೆಕಾಯಿಯು ನಿಮ್ಮ ಇಷ್ಟದ ತಿನಿಸು ಅಲ್ಲವಾದರೆ, ನೀವು ನೀವು ಸೌತೆಕಾಯಿಯ ತುಣುಕುಗಳನ್ನು ಕಡ್ಡಿಯೊಂದಕ್ಕೆ ಸಿಕ್ಕಿಸಿ, ಅವುಗಳನ್ನು ಕಡಿಮೆ ಕೊಬ್ಬಿನಾಂಶವುಳ್ಳ, ಕೆನೆಯುಳ್ಳ ಮೊಸರಿನಲ್ಲಿ ಅದ್ದಿಯೂ ಸಹ ಸೇವಿಸಬಹುದು. ಸೌತೆಕಾಯಿಯ ತುಣುಕುಗಳನ್ನು ಜಗಿಯುವುದರಿಂದ ದವಡೆಗಳಿಗೆ ಉತ್ತಮ ವ್ಯಾಯಾಮವಾದಂತಾಗುತ್ತದೆ, ಜೊತೆಗೆ ಅದರ ನಾರಿನಂಶವು ಜೀರ್ಣಕ್ರಿಯೆಯಲ್ಲಿ ಬಹುವಾಗಿ ಸಹಕರಿಸುತ್ತದೆ. ಸೌತೆಕಾಯಿಯ ಪ್ರತಿದಿನದ ಬಳಕೆಯು ಬಹುಕಾಲದ ಮಲಬದ್ಧತೆಗೆ ಒಂದು ಸಾಧನ ಎಂದು ಪರಿಗಣಿಸಬಹುದು.

ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ

ಸೌತೆಕಾಯಿಯು ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ, ಕೀಲುಗಳ ಮತ್ತು ಸಂದುಗಳ ಬೇನೆಯಿಂದ (ಸಂಧಿವಾತ) ವಿಮುಕ್ತಿಗೊಳಿಸುತ್ತದೆ. ಸೌತೆಕಾಯಿಯು ಸಿಲಿಕಾದ ಒಂದು ಉತ್ತಮ ಮೂಲವಾಗಿರುವುದರಿಂದ, ಇದು ಕೀಲುಗಳ ಅಂಗಾಂಶಗಳನ್ನು ಶಕ್ತಿಯುತಗೊಳಿಸುವುದರ ಮೂಲಕ ಸಂದುಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಇದರ ರಸವನ್ನು ಕ್ಯಾರೆಟ್ ರಸದೊಂದಿಗೆ ಸೇರಿಸಿ ಸೇವಿಸಿದರೆ, ಅದು ಶರೀರದ ಯುರಿಕ್ ಆಮ್ಲಗಳ ಮಟ್ಟವನ್ನು ತಗ್ಗಿಸುವುದರ ಮೂಲಕ ಸಂದುಗಳು (ಕಾಲುಗಳ) ಮತ್ತು ಕೀಲುಗಳ ಉರಿಯೂತ ಮತ್ತು ನೋವಿನಿಂದ ವಿಮುಕ್ತಿಗೊಳಿಸುತ್ತದೆ.

English summary

Eat Cucumber to Treat Cancer and Diabetes

According to a latest research, the compounds found in cucumber that create the bitter taste can be capable of treating cancer and diabetes. The genes that cause the bitter taste in wild cucumber were identified by the researchers at University of California. Compounds called cucurbitacins give bitter flavour to wild cucurbits, the family that includes cucumber, pumpkin, melon, watermelon and squash. The wild cucurbits leaves and fruits have been used in Indian and Chinese medicine for thousands of years, as emetics and purgatives and to cure liver disease. In a recent development, the researchers showed that cucubitacins could kill or suppress the growth of cancer cells.
X
Desktop Bottom Promotion