For Quick Alerts
ALLOW NOTIFICATIONS  
For Daily Alerts

ಮಾದಕ ವ್ಯಸನದ ರೋಗಿಗಳು ಹಲ್ಲುಗಳ ಚಿಕಿತ್ಸೆಯಿಂದ ಯಶಸ್ವಿಯಾಗಿ ಚೇತರಿಸಿಕೊಳ್ಳಬಹುದು ಎನ್ನುತ್ತಿದೆ ಸಂಶೋಧನೆ!

|

ಮನುಷ್ಯ ಕೆಟ್ಟ ಅಥವಾ ದುರಭ್ಯಾಸಗಳ ದಾಸನಾದಂತೆ ಅವನ ಮತ್ತು ಅವನ ಇಡೀ ಮನೆಯ ನೆಮ್ಮದಿಯೇ ಹಾಳು . ಅವನು ನಿಜಕ್ಕೂ ಯಾವ ದಾರಿ ಹಿಡಿದಿದ್ದೇನೆ ಎಂದು ಆತನಿಗೇ ಅರಿವಿರುವುದಿಲ್ಲ . ಒಂದು ಸರಿ ಈ ಕೂಪಕ್ಕೆ ಬಂದು ಬಿದ್ದರೆ ಮತ್ತೆ ಇದರಿಂದ ಬಿಡಿಸಿಕೊಳ್ಳುವುದು ಬಹಳ ಕಷ್ಟ. ಏಕೆಂದರೆ ಮಾದಕ ವ್ಯಸನದ ಪ್ರಭಾವ ನೇರವಾಗಿ ಆ ವ್ಯಕ್ತಿಯ ಮೆದುಳಿನ ಮೇಲೆಯೇ ಆಗುತ್ತದೆ . ಅದರಲ್ಲಿರುವ ಡೋಪಮೈನ್ ಅಂಶ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡುವಂತೆ ಪ್ರೇರೇಪಿಸುತ್ತದೆ.

ಅಂತಹ ಸಮಯದಲ್ಲಿ ಒಂದು ವೇಳೆ ಮಾದಕ ವಸ್ತು ಕೈಗೆ ಸಿಗದೇ ಹೋದರೆ ಸುತ್ತಲಿನ ಜನರ ಮೇಲೆ ಮುಗಿಬೀಳುವಂತೆ ಮಾಡುತ್ತದೆ. ಸಾಲದಕ್ಕೆ ಅವನನ್ನು ನೋಡಿ ಇತರರೂ ಕೂಡ ಮನೆಯವರನ್ನು ಲೆಕ್ಕಿಸದೆ ಇದೇ ದುರ್ಮಾರ್ಗಗಳನ್ನು ಹಿಡಿಯುವ ಚಟಕ್ಕೆ ಬಿದ್ದುಬಿಟ್ಟಿರುತ್ತಾರೆ. ಮಾದಕ ವಸ್ತುಗಳ ವ್ಯಸನಕ್ಕೆ ಅನೇಕ ರೀತಿಯ ಕಾರಣಗಳು ಇರಬಹುದು . ಹುಟ್ಟುತ್ತಲೇ ಯಾರೂ ಕೆಟ್ಟವರಾಗಿರುವುದಿಲ್ಲ.

ಆ ವ್ಯಕ್ತಿಯ ಸುತ್ತಮುತ್ತಲಿನ ಪರಿಸರ , ಮಾನಸಿಕ ಒತ್ತಡ , ಕುಟುಂಬದ ಆರ್ಥಿಕ ಸ್ಥಿತಿ , ಕೆಟ್ಟವರ ಸಹವಾಸ ಹೀಗೆ ಇನ್ನೂ ಅನೇಕ ವಿಷಯಗಳು ಒಬ್ಬ ಒಳ್ಳೆಯ ವ್ಯಕ್ತಿಯನ್ನು ಇಂತಹ ಕೆಟ್ಟ ದಾರಿ ಹಿಡಿಯಲು ಅನುವು ಮಾಡಿಕೊಡಬಹುದು . ಬೀಡಿ , ಸಿಗರೇಟು , ತಂಬಾಕು ಇವುಗಳ ಸಾಲಿಗೆ ಮಾದಕ ವ್ಯಸನ ಕೂಡ ಸೇರುತ್ತದೆ ಮತ್ತು ಅತ್ಯಂತ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ . ಇತ್ತೀಚಿಗಂತೂ ನಗರ ಪ್ರದೇಶದಲ್ಲಿನ ಯುವಜನತೆಯ ಕೆಲವರು ಈ ಎಲ್ಲಾ ದುರ್ಮಾರ್ಗಗಳನ್ನು ಮೈಗೂಡಿಸಿಕೊಂಡಿದ್ದಾರೆ . ಅವುಗಳನ್ನು ಬಿಡಿಸಬೇಕೆಂದರೆ ಹರ ಸಾಹಸವನ್ನೇ ಪಡಬೇಕು.

Dental Care

ಹಾಗೆಂದು ಇದಕ್ಕೆ ಚಿಕಿತ್ಸೆ ಇಲ್ಲವೆಂದೇನೂ ಇಲ್ಲ . ಮಾದಕ ವ್ಯಸನಿ ಯಾವ ಚಿಕಿತ್ಸೆಗೆ ಯಾವ ರೀತಿ ಸ್ಪಂದಿಸುತ್ತಾನೆ ಎಂದು ಅರಿವಾದ ಮೇಲೆ ವೈದ್ಯರು ಅದಕ್ಕೆ ಸೂಕ್ತ ಚಿಕಿತ್ಸೆ ಕೊಡುತ್ತಾರೆ . ಅದರಲ್ಲಿ ಬಾಯಿಗೆ ಸಂಬಂಧಪಟ್ಟಂತೆ ಕೊಡುವ ಚಿಕಿತ್ಸೆ ಕೂಡ ಒಂದು . ಮಾದಕ ವ್ಯಸನದಿಂದ ದೇಹದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ ಬಾಯಿಯ ಆರೋಗ್ಯದ ಸಮಸ್ಯೆಯೂ ಕೂಡ ಎದುರಾಗುತ್ತದೆ . ಹಲ್ಲುಗಳು, ವಸಡುಗಳು , ದವಡೆ ಹೀಗೆ ಇವುಗಳಿಗೆ ಸಂಬಂಧಪಟ್ಟಂತೆ ಅನೇಕ ರೀತಿಯ ಖಾಯಿಲೆಗಳು ಆವರಿಸುತ್ತವೆ. ಕೆಟ್ಟ ವಸ್ತುಗಳನ್ನು ಜಿಗಿಯುವ ಚಟದಿಂದ ಹಲ್ಲುಗಳು ಕರೆಗಟ್ಟುತ್ತವೆ.

ಆದ್ದರಿಂದ ಆರಂಭದಲ್ಲೇ ಇವುಗಳನ್ನು ಪತ್ತೆಹಚ್ಚಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಕೊಟ್ಟರೆ ಖಂಡಿತ ಇದರಿಂದ ಯಶಸ್ವಿಯಾಗಿ ಪಾರಾಗಬಹುದು. ಹಲ್ಲುಗಳನ್ನು ಮತ್ತೆ ಮೊದಲಿನಂತೆಯೇ ಬೆಳ್ಳಗೆ ಹೊಳೆಯುವಂತೆ ಮಾಡಬೇಕಾದರೆ ಬಾಯಿಯ ಶುಚಿತ್ವ ಬಹಳ ಮುಖ್ಯ. ಅದಕ್ಕೆ ಒತ್ತು ಕೊಟ್ಟಿದ್ದೇ ಆದರೆ , ಎಲ್ಲಾ ರೀತಿಯ ದುರಭ್ಯಾಸಗಳನ್ನು ದೂರವಿಡಬಹುದು . ಅದರಲ್ಲೂ ಮುಖ್ಯವಾಗಿ ಮಾದಕ ವಸ್ತುಗಳ ವ್ಯಸನಿಗಳಿಗೆ ಮನಸ್ಸು ಬದಲಾಯಿಸುವ ಮೊದಲ ಕೆಲಸ ಎಂದರೆ ಅದು ಅವರ ಬಾಯಿಯ ಶುಚಿತ್ವದ ಬಗ್ಗೆ ಅರಿವು ಮೂಡಿಸುವುದು . ಇದರಿಂದ ಬಾಯಿಯ ಆರೋಗ್ಯ ಮಾತ್ರವಲ್ಲದೆ ಆತನ ದೇಹದ ಆರೋಗ್ಯ ಕೂಡ ನಿಧಾನವಾಗಿ ಚೇತರಿಕೆ ಕಾಣುವುದು . ಅವನೂ ಕೂಡ ಮತ್ತೊಮ್ಮೆ ಎಲ್ಲರಂತೆ ಖುಷಿಯಾಗಿ ಜೀವನ ನಡೆಸಬಹುದು .

" ಅಮೆರಿಕನ್ ಡೆಂಟಲ್ ಅಸೋಸಿಯೇಷನ್ " ನ ವರದಿಯ ಪ್ರಕಾರ ಯಾವ ಮಾದಕ ವ್ಯಸನಿ ರೋಗಿಗಳು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊತ್ತು ದಂತ ಚಿಕಿತ್ಸೆಯನ್ನು ಪಡೆದಿದ್ದರೋ ಅವರು ಶೇಖಡಾ 80 ರಷ್ಟು ಮಾದಕ ವ್ಯಸನಕ್ಕೆ ಸಂಬಂಧಪಟ್ಟ ಚಿಕಿತ್ಸೆಯಲ್ಲೂ ಯಶಸ್ಸು ಕಾಣುವ ಭರವಸೆ ಕೊಟ್ಟಿದ್ದರು.

"ಯೂನಿವರ್ಸಿಟಿ ಒಫ್ ಉಟಾಹ್ ಹೆಲ್ತ್ " ನ ಪ್ರೊಫೆಸರ್ ಆಗಿರುವ ಗ್ಲೇನ್ ಹಾನ್ ಸನ್ ಅವರು ಈ ವರದಿಯ ಮುಖ್ಯ ಸಂಶೋಧಕರಾಗಿದ್ದು ಅವರೇ ಹೇಳುವ ಪ್ರಕಾರ ಬಾಯಿಗೆ ಸಂಬಂಧಪಟ್ಟ ಆರೋಗ್ಯಕ್ಕೂ ಮತ್ತು ಮಾದಕ ವ್ಯಸನ ವಸ್ತುಗಳಿಗೂ ವಿರುದ್ಧವಾದ ಮತ್ತು ಪ್ರಬಲವಾದ ಸಂಬಂಧ ಎದ್ದು ಕಾಣುತ್ತದೆ. ಯಾವ ಮಾದಕ ವ್ಯಸನಿಗಳು ಬಾಯಿಗೆ ಸಂಬಂಧಪಟ್ಟಂತೆ ಸಂಪೂರ್ಣ ಶುಚಿತ್ವ ಕಾಪಾಡಿಕೊಂಡು ಮತ್ತು ಎಲ್ಲಾ ರೀತಿಯಲ್ಲಿ ಅಗತ್ಯವಿರುವ ಚಿಕಿತ್ಸೆಗಳನ್ನು ತೆಗೆದುಕೊಂಡಿದ್ದರೋ , ಅವರ ಜೀವನ ಅತ್ಯಂತ ಗುಣಮಟ್ಟದಿಂದ ಕೂಡಿದ್ದು ಅವರ ಉದ್ಯೋಗ ಬೆಳವಣಿಗೆಯಲ್ಲೂ ಮತ್ತು ಮಾದಕ ವಸ್ತುಗಳನ್ನು ದೂರವಿಡುವ ಸಂಗತಿಯಲ್ಲೂ ಮುಂಚೂಣಿಯಲ್ಲಿದ್ದರು ಎಂಬುದು ಗ್ಲೇನ್ ಹಾನ್ ಸನ್ ರ ವಾದ.

Dental Care

ಈ ವರದಿಯನ್ನು ತಯಾರಿಸಲು ಸಂಶೋಧಕರು ಎರಡು ಕ್ಲಿನಿಕ್ ಗಳನ್ನು ಬಳಸಿ "Facilitating a Lifetime of Oral Health Sustainability for Substance(FLOSS) "ಎಂಬ ಕಾರ್ಯಕ್ರಮದಡಿಯಲ್ಲಿ ಮಾದಕ ವ್ಯಸನದಿಂದ ಬಳಲುತ್ತಿದ್ದ ರೋಗಿಗಳನ್ನು ಮತ್ತು ಅವರ ಕುಟುಂಬವನ್ನು ಬಳಸಿಕೊಳ್ಳಲಾಗಿತ್ತು.

ನಂತರ ಈ ( FLOSS)ನಿಂದ ಬಂದ ವರದಿಯನ್ನು ಪರೀಕ್ಷಿಸಲಾಗಿತ್ತು. ಮೊದಲ ಕ್ಲಿನಿಕ್ ನಲ್ಲಿ ಮಾದಕ ವ್ಯಸನ ರೋಗಿಗಳಿಗೆ ಅವರೇ ಅವರಿಗಿರುವ ದಂತ ಸಮಸ್ಯೆಗಳನ್ನು ಕಂಡು ಹಿಡಿಯಲು ಹೇಳಿ ಎರಡನೇ ಕ್ಲಿನಿಕ್ನ ಲ್ಲಿದ್ದ ರೋಗಿಗಳ ಹಲ್ಲುಗಳಿಗೆ ಸಂಬಂಧ ಪಟ್ಟಿದ್ದ ಸಮಸ್ಯೆಗಳನ್ನು ಸಂಶೋಧಕರು ತಾವೇ ಕಂಡು ಹಿಡಿದಿದ್ದರು . FLOSS ವರದಿ ಬಂದ ಮೇಲೆ ಯಾರೆಲ್ಲಾ ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರೋ ಅವರೆಲ್ಲರೂ ಕೂಡ ಮಾದಕ ವ್ಯಸನದ ಚಟ ಬಿಡಿಸುವ ಚಿಕಿತ್ಸೆಗೆ ಒಲವು ತೋರಿದ್ದರು ಮತ್ತು ಮಾದಕವ್ಯಸನವನ್ನು ಸಂಪೂರ್ಣವಾಗಿ ಬಿಡುವ ಇಂಗಿತ ವ್ಯಕ್ತಪಡಿಸಿದ್ದರು . ಆದ್ದರಿಂದಲೇ ಈ ವರದಿ ಬಹಳ ಯಶಸ್ವಿಯಾಗಿ ಜನರ ಮೆಚ್ಚುಗೆ ಗಳಿಸಿತು ಮತ್ತು ದಂತ ಸಂಬಂಧೀ ಚಿಕಿತ್ಸೆಗಳನ್ನು ನೀಡಿದರೆ ಮಾದಕ ವ್ಯಸನದಿಂದ ದೂರಾಗಬಹುದು ಎಂಬ ಸ್ಪಷ್ಟ ಸಂದೇಶ ರವಾನಿಸಿತು .

English summary

Drug Abuse Patients may Recover Effectively with Dental Care

Oral care is very important to maintain those pearly whites. Oral care offers benefits other than dental hygiene. Oral health care is beneficial for drug abuse patients. It can help drug abuse patients to recover physically. According to a recent study, oral health can also help a drug abuse patient to lead a quality life. It will improve their lifestyle and help them recover in a better way. The study was published in the Journal of the American Dental Association. During the study, it was examined that drug abuse patients who went under dental treatment two times longer for some major health problems had 80 percent increased chances of completing drug abuse treatment.
Story first published: Saturday, May 25, 2019, 8:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X