For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಬಿಸಿ ಬಿಸಿ ಚಹಾ ಕುಡಿದರೆ ಅನ್ನನಾಳದ ಕ್ಯಾನ್ಸರ್ ಬರಬಹುದಂತೆ!!

|

ಬೆಳಗ್ಗೆ ಎದ್ದು ನಾವು ನಿತ್ಯಕರ್ಮಗಳನ್ನು ಮುಗಿಸಿಕೊಂಡ ಬಳಿಕ ಒಂದು ಕಪ್ ಬಿಸಿಬಿಸಿಯಾಗಿರುವಂತಹ ಚಾ ಕುಡಿಯಲು ಬಯಸುತ್ತೇವೆ. ಇದರಿಂದ ನಮ್ಮ ದೇಹಕ್ಕೆ ಉಲ್ಲಾಸ ಸಿಗುವುದು. ಬಿಸಿ ಬಿಸಿಯಾಗಿರುವ ಚಾ, ಕಾಫಿ ಹೀಗೆ ಏನೇ ಆದರೂ ಕೆಲವರಿಗೆ ಅದು ತುಂಬಾ ಇಷ್ಟ. ಸ್ವಲ್ಪ ತಣ್ಣಗಾದರೂ ಅದನ್ನು ಅವರು ಕುಡಿಯುವುದಿಲ್ಲ. ಹೀಗಾಗಿ ಪ್ರತೀ ಸಲವು ಅವರಿಗೆ ಬಿಸಿಯಾಗಿರುವ ಚಾ ಬೇಕಾಗಿರುತ್ತದೆ. ಆದರೆ ಬಿಸಿ ಬಿಸಿಯಾಗಿರುವ ಕಾಫಿಯು ನಿಮಗೆ ಅಭ್ಯಾಸವಾಗಿರಬಹುದು. ಇದು ಯಾವ ರೀತಿಯ ಸಮಸ್ಯೆ ಉಂಟು ಮಾಡುವುದು ಎನ್ನುವುದು ಮಾತ್ರ ತಿಳಿದಿಲ್ಲ. ಯಾಕೆಂದರೆ ಬಿಸಿ ಚಾ ಕುಡಿಯುವ ಕಾರಣದಿಂದಾಗಿ ಅನ್ನನಾಳದ ಕ್ಯಾನ್ಸರ್ ಬರುವಂತಹ ಅಪಾಯವು ಹೆಚ್ಚಾಗಿರುವುದು ಎಂದು ಹೇಳಲಾಗುತ್ತದೆ.

hot tea

ಅಧ್ಯಯನಗಳು ಹೇಳಿರುವ ಪ್ರಕಾರ 60 ಡಿಗ್ರಿ ಸೆಲ್ಸಿಯಸ್ ಅಥವಾ 140 ಡಿಗ್ರಿ ಫಾರ್ಹನ್ಹೀಟ್ ಗಿಂತ ಹೆಚ್ಚು ಬಿಸಿಯಾಗಿರುವ ಚಾ ಕುಡಿದರೆ, ಅವರಿಗೆ ಅನ್ನನಾಳದ ಕ್ಯಾನ್ಸರ್ ಬರುವಂತಹ ಅಪಾಯವು ಹೆಚ್ಚಾಗಿ ಇರುವುದು. ಹೊಟ್ಟೆ ಮತ್ತು ಗಂಟಲಿನ ಮಧ್ಯೆ ಇರುವಂತಹ ಮಾಂಸದ ನಾಳವಾಗಿ ರುವಂತಹ ಅನ್ನನಾಳದ ಮೇಲೆ ಕ್ಯಾನ್ಸರ್ ಪರಿಣಾಮ ಬೀರುವುದು. ಅನ್ನನಾಳವು ಗಂಟಲಿನಿಂದ ಹೊಟ್ಟೆಗೆ ಆಹಾರವನ್ನು ಸರಬರಾಜು ಮಾಡುವಂತಹ ಕಾರ್ಯ ಮಾಡವುದು. ಈ ಕ್ಯಾನ್ಸರ್ ಅನ್ನನಾಳದ ಒಳಗಿನ ಅಂಗಾಂಶಗಳಲ್ಲಿ ಬೆಳೆಯುವುದು. ಇದು ವಿಶ್ವದೆಲ್ಲೆಯಲ್ಲಿ ಉಂಟಾಗುವಂತಹ ಕ್ಯಾನ್ಸರ್ ಸಾವಿಗೆ ಆರನೇ ಕಾರಣವಾಗಿದೆ. ಭಾರತದಲ್ಲಿ ಇದು ಆರನೇ ಸಾಮಾನ್ಯ ಕ್ಯಾನ್ಸರ್ ಆಗಿದೆ.

hot tea

ಇಂಟರ್ ನ್ಯಾಸನಲ್ ಜರ್ನಲ್ ಆಫ್ ಕ್ಯಾನ್ಸರ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯ ಪ್ರಕಾರ, ಸುಮಾರು 40ರಿಂದ 75ರ ಹರೆಯದ 50,045 ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಕೆಲವು ಜನರು ಚಾ, ಕಾಫಿ ಮತ್ತು ಇತರ ಕೆಲವು ಬಿಸಿ ಪಾನೀಯಗಳನ್ನು ಕುಡಿಯುವುದನ್ನು ಆನಂದಿಸುವರು. ಅದಾಗ್ಯೂ, ಬಿಸಿ ಚಾ, ಕಾಫಿ ಕುಡಿಯುವ ಕಾರಣದಿಂದಾಗಿ ಅನ್ನನಾಳದ ಕ್ಯಾನ್ಸರ್ ಬರುವಂತಹ ಅಪಾಯವು ಹೆಚ್ಚಾಗಿ ಇರುವುದು ಎಂದು ಅಧ್ಯಯನಗಳು ಹೇಳಿವೆ. ಇದರಿಂದ ಬಿಸಿ ಪಾನೀಯವು ತಂಪಾಗುವ ತನಕ ಕಾದು, ಬಳಿಕ ಅದನ್ನು ಕುಡಿಯಿರಿ ಎಂದು ಡಾ. ಫರ್ಹಾ ಇಸ್ಲಾಮಿ ಹೇಳುತ್ತಾರೆ. ಇವರು ಅಧ್ಯಯನದ ಪ್ರಮುಖರಾಗಿದ್ದರು. ತಾಜಾವಾಗಿ ತಯಾರಿಸಿದ ಚಾ ಕುಡಿಯುವ ಮೊದಲು 4 ನಿಮಿಷ ಕಾಯಬೇಕು. ಇದರ ಬಳಿಕ ಕುಡಿಯಬೇಕು ಎಂದು ವರದಿಗಳು ಹೇಳಿವೆ.

hot tea

60 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ಬಿಸಿ ಇರುವಂತಹ ಚಾವನ್ನು ಎರಡು ದೊಡ್ಡ ಲೋಟಗಳಲ್ಲಿ ಕುಡಿಯುವ ಕಾರಣದಿಂದಾಗಿ ಅನ್ನನಾಳದ ಕ್ಯಾನ್ಸರ್ ಬರುವ ಸಾಧ್ಯತೆಯು ಶೇ. 90ರಷ್ಟು ಇರುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ಈ ಅಧ್ಯಯನಗಳು ಕಂಡು ಕೊಂಡಿರುವ ಮತ್ತೊಂದು ಅಂಶವೆಂದರೆ ಬಿಸಿಯಾಗಿರುವ ಯಾವುದೇ ಪಾನೀಯವನ್ನು ನೀವು ಇದೇ ರೀತಿಯಾಗಿ ಕುಡಿದರೆ ಅದು ಅನ್ನನಾಳದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಿಸುವುದು.

English summary

Drinking very hot tea increases your risk of esophageal cancer:Study

A hot cup of tea is a priority for a large number of people. They find it difficult to start their day without a cup of tea. Whereas some people are so addicted that they need tea after regular intervals. Most of the tea drinkers enjoy their tea piping hot. But here is a bad news for all tea lovers. According to a recent study, drinking piping hot tea can increase your risk of esophageal cancer.
Story first published: Monday, March 25, 2019, 13:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more