For Quick Alerts
ALLOW NOTIFICATIONS  
For Daily Alerts

ದಿನಕ್ಕೆ ಒಂದು ಎಳನೀರು ಕುಡಿದರೂ ಸಾಕು-ಪುರುಷರ ನಿಮಿರು ದೌರ್ಬಲ್ಯ ನಿಯಂತ್ರಿಸಬಹುದು

|

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಇಂದಿನ ಒತ್ತಡದ ಜೀವನದಲ್ಲಿ ಹೆಚ್ಚಿನ ಪುರುಷರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯೆಂದರೆ ಅದು ನಿಮಿರು ದೌರ್ಬಲ್ಯ ಅಥವಾ ನಪುಂಸಕತ್ವ! ಇನ್ನೂ ಚಿಂತಿಸಬೇಕಾದ ವಿಷಯ ಏನಪ್ಪಾ ಅಂದ್ರೆ ವಯಸ್ಸಾದಂತೆಯೇ ಈ ದೌರ್ಬಲ್ಯವೂ ಹೆಚ್ಚುತ್ತಾ ಹೋಗುತ್ತದೆಯಂತೆ. ಸಾಮಾನ್ಯವಾಗಿ ನಲವತ್ತು ತಲುಪಿದ ಪುರುಷರಲ್ಲಿ ಈ ದೌರ್ಬಲ್ಯ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ದೌರ್ಬಲ್ಯವಿರುವ ಪುರುಷರು ಪೂರ್ಣ ಪ್ರಮಾಣದ ನಿಮಿರುತನ ಪಡೆಯಲು ವಿಫಲರಾಗುತ್ತಾರೆ ಅಥವಾ ಸುಲಭಪದಗಳಲ್ಲಿ ಹೇಳಬೇಕೆಂದರೆ ಕಾಮೇಚ್ಛೆಯನ್ನು ಕಳೆದುಕೊಳ್ಳುತ್ತಾರೆ!

ನಿಮಿರು ದೌರ್ಬಲ್ಯದ ಸಮಸ್ಯೆಯಿದ್ದರೆ ಆಗ ಖಂಡಿತವಾಗಿಯೂ ನಿಮ್ಮ ಸಂಗಾತಿಯು ಎಷ್ಟೇ ಸೆಕ್ಸಿಯಾಗಿದ್ದರೂ ನೀವು ಒತ್ತಡಕ್ಕೆ ಒಳಗಾಗುವಿರಿ. ನಿಮಿರು ದೌರ್ಬಲ್ಯವೆನ್ನುವುದು ಸಾಧಿಸಲು ಅಸಾರ್ಥ್ಯವನ್ನು ತೋರಿಸುವುದು ಅಥವಾ ಲೈಂಗಿಕ ಪ್ರದರ್ಶನ ತೃಪ್ತಿದಾಯಕವಾಗುವಷ್ಟು ನಿಮಿರುವಿಕೆ ಕಾಪಾಡಲು ಆಗದೆ ಇರುವುದು. ಜನನೇಂದ್ರೀಯಗಳಿಗೆ ರಕ್ತಸಂಚಾರ ಕಡಿಮೆ ಆಗಿರುವುದು, ನರಗಳಿಗೆ ಹಾನಿ, ಒತ್ತಡ, ಮಧುಮೇಹ, ನರಗಳಿಗೆ ಸಂಬಂಧಿಸಿದ ಕಾಯಿಲೆಗಳು, ಔಷಧಿಗಳು ಅಥವಾ ಹಾರ್ಮೋನು ಸಮಸ್ಯೆ. ನೀವು ಸರಿಯಾದ ಕಾರಣ ಮತ್ತು ಮೂಲವನ್ನು ಕಂಡುಹಿಡಿದ ಬಳಿಕ ಹಾಸಿಗೆಯಲ್ಲಿ ನಿಮ್ಮ ಆತ್ಮವಿಶ್ವಾಸವನ್ನು ಕಾಪಾಡಬಹುದು.

ನಿಮಿರು ದೌರ್ಬಲ್ಯಕ್ಕೆ ನೈಸರ್ಗಿಕ ಚಿಕಿತ್ಸೆ-ಎಳನೀರು

ನಿಮಿರು ದೌರ್ಬಲ್ಯಕ್ಕೆ ನೈಸರ್ಗಿಕ ಚಿಕಿತ್ಸೆ-ಎಳನೀರು

ಅದಾಗ್ಯೂ, ಹೆಚ್ಚಿನ ಪುರುಷರು ಖಾಸಗಿಯಾಗಿರುವ ಇಂತಹ ವಿಚಾರಗಳನ್ನು ಮಾತನಾಡಲು ಹಿಂಜರಿಯುವರು. ಇದರಿಂದಾಗಿ ಅವರು ಮತ್ತಷ್ಟು ಖಿನ್ನತೆಗೆ ಒಳಗಾಗುವರು. ಆದರೆ ಎಲ್ಲದಕ್ಕೂ ಪ್ರಕೃತಿಯು ತನ್ನದೇ ಆಗಿರುವಂತಹ ಕೆಲವೊಂದು ಪರಿಹಾರಗಳನ್ನು ನೀಡುತ್ತದೆ. ನಿಮಿರು ದೌರ್ಬಲ್ಯಕ್ಕೆ ಚಿಕಿತ್ಸೆ ಪರಿಣಾಮಕಾರಿಯಾಗಿ ನಿವಾರಿಸಲು ಕೆಲವೊಂದು ನೈಸರ್ಗಿಕ ಪರಿಹಾರಗಳು ಇವೆ. ನಿಮಿರು ದೌರ್ಬಲ್ಯಕ್ಕೆ ನೈಸರ್ಗಿಕ ಚಿಕಿತ್ಸೆ ನೀಡುವಲ್ಲಿ ಎಳನೀರು ಅಗ್ರಸ್ಥಾನ ಪಡೆದುಕೊಂಡಿದೆ. ಎಳನೀರಿನಿಂದ ನಿಮ್ಮ ಸಂಪೂರ್ಣ ಆರೋಗ್ಯ ಕಾಪಾಡಬಹುದು. ಎಳನೀರಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ನಿಮಿರು ದೌರ್ಬಲ್ಯಕ್ಕೆ ಚಿಕಿತ್ಸೆ ಮಾಡಬೇಕಿದ್ದರೆ ಆಗ ಎಳನೀರನ್ನು ನಿಮ್ಮ ಫೇವರಿಟ್ ಪಾನೀಯವನ್ನಾಗಿ ಯಾಕೆ ಮಾಡಬೇಕೆಂದು ನಾವು ಇಲ್ಲಿ ಕೆಲವೊಂದು ಕಾರಣಗಳನ್ನು ನೀಡಲಿದ್ದೇವೆ.

Most Read:ಎಳನೀರು + ಜೇನುತುಪ್ಪ = 8 ಆರೋಗ್ಯ ಲಾಭಗಳು

ಸೋಡಿಯಂ ಅಧಿಕ

ಸೋಡಿಯಂ ಅಧಿಕ

ಎಳನೀರಿನಲ್ಲಿ ಸೋಡಿಯಂ ಅಂಶವು ಅಧಿಕವಾಗಿದೆ. ಇದು ಸ್ನಾಯುಗಳ ಸಂಕೋಚನಕ್ಕೆ ನೆರವಾಗುವುದು. ಆರೋಗ್ಯಕರ ಸ್ನಾಯುಗಳ ಸಂಕೋಚನವು ಅತೀ ಅಗತ್ಯವಾಗಿರುವುದು. ಸ್ನಾಯುಗಳ ಸಂಕೋಚನ ಉಂಟಾಗಲು ಮತ್ತು ನೀರು ಹಾಗೂ ದ್ರವವು ದೇಹದಲ್ಲಿ ಸಂಚರಿಸಲು ಸೋಡಿಯಂ ಅಗತ್ಯ ವಾಗಿರುವುದು. ಎಳನೀರಿನಲ್ಲಿ ಬೇಕಾಗುವಷ್ಟು ಸೋಡಿಯಂ ಇದೆ. ಇದು ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುವುದು. ಇನ್ನು ಎಳೆನೀರಿನಲ್ಲಿರುವ ವಿಶೇಷ ಏನಪ್ಪ ಅಂದ್ರೆ ನಮ್ಮ ದೇಹದ ಎಲ್ಲಾ ಅಂಗಗಳ ಮೂಲಕ ಸಾಗಬಲ್ಲ ಕ್ಷಮತೆ ಇರುವ ಎಳನೀರು ದೇಹದ ಎಲ್ಲಾ ಅಂಗಗಳನ್ನು ಈ ಮೂಲಕ ಸ್ವಚ್ಛಗೊಳಿಸಿ ಹಳೆಯ ಕಲ್ಮಶಗಳನ್ನು ನಿವಾರಿಸುತ್ತದೆ. ನಿತ್ಯವೂ ಕೊಂಚಕೊಂಚವಾಗಿ ಮೂತ್ರದ ಮೂಲಕ ಈ ಕಲ್ಮಶಗಳನ್ನು ನಿವಾರಿಸುತ್ತಾ ಹಿಂದೆಂದೂ ಇಲ್ಲದಂತೆ ಕಲ್ಮಶಗಳನ್ನು ನಿವಾರಿಸುತ್ತದೆ.

ಪೊಟಾಶಿಯಂನಿಂದಲೂ ಸಮೃದ್ಧವಾಗಿದೆ

ಪೊಟಾಶಿಯಂನಿಂದಲೂ ಸಮೃದ್ಧವಾಗಿದೆ

ಸರಿಯಾದ ರೀತಿಯಲ್ಲಿ ನಿಮಿರುವಿಕೆ ಉಂಟಾಗಲು ಮುಖ್ಯವಾಗಿ ಬೇಕಾಗಿರುವುದು ವಿದ್ಯುದ್ವಿಚ್ಛೇದವಾಗಿರುವ ಪೊಟಾಶಿಯಂ. ಪೊಟಾಶಿಯಂ ಕೊರತೆಯು ಕಾಡುತ್ತಲಿದ್ದರೆ ಆಗ ನಿಮ್ಮ ಲೈಂಗಿಕ ಪ್ರದರ್ಶನದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗುವುದು. ಎಳ ನೀರನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಪೊಟಾಶಿಯಂ ಅಂಶವನ್ನು ಪಡೆಯಿರಿ. ಪೊಟಾಶಿಯಂನಿಂದಾಗಿ ದೇಹದಲ್ಲಿ ವಿದ್ಯುದ್ವಿಚ್ಚೇದಗಳು ಸಮತೋಲನದಲ್ಲಿ ಇರುವುದು. ಇದು ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು. ಇನ್ನು ಮಧುಮೇಹ ಸಮಸ್ಯೆ ಹೊಂದಿರುವವರು ನಿಮಿರು ದೌರ್ಬಲ್ಯ ಸಮಸ್ಯೆಯನ್ನು ಹೊಂದಿದ್ದರೆ ಅವರಿಗೂ ಕೂಡ ಎಳನೀರು ಬಹಳ ಒಳ್ಳಯದು... ಇದುದೇಹ ಜೀವಕೋಶಗಳಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವ ಪ್ರೋಟೀನ್ ಮತ್ತು ಫೈಬರ್ ಎಳನೀರಿನಲ್ಲಿ ಸಮೃದ್ಧವಾಗಿದೆ. ಹೀಗಾಗಿ, ಮಧುಮೇಹ ರೋಗಿಗಳಿಗೆ ನಿಯಮಿತವಾಗಿ ಈ ಪಾನೀಯವನ್ನು ನೀಡಬಹುದು. ಇದು ಮಧುಮೇಹದ ಕೆಲವು ಹಾನಿಕಾರಕ ಅಡ್ಡಪರಿಣಾಮಗಳ ತೀವ್ರತೆಯನ್ನು ಕಡಿಮೆ ಮಾಡುತ್ತದೆ.

ಮೆಗ್ನಿಶಿಯಂ

ಮೆಗ್ನಿಶಿಯಂ

ಮೆಗ್ನಿಶಿಯಂ ಕೊರತೆ ಇದ್ದರೆ ಆಗ ಸರಬರಾಜಿನ ತೊಂದರೆಯು ಕಾಣಿಸಿಕೊಳ್ಳುವುದು. ಇದರಿಂದಾಗಿ ನಿಮಿರು ದೌರ್ಬಲ್ಯವು ಕಾಣಿಸಿಕೊಳ್ಳುವುದು. ನೀವು ಹಾಸಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂದಾಗಿದ್ದರೆ ಆಗ ನೀವು ಎಳನೀರನ್ನು ಕುಡಿಯಬೇಕು. ಬೇರೆ ಯಾವುದೇ ರೀತಿಯ ನೈಸರ್ಗಿಕ ಪಾನೀಯಕ್ಕಿಂತಲೂ ಇದರಲ್ಲಿ ವಿಟಮಿನ್ ಅಂಶವು ಅಧಿಕವಾಗಿರುವುದು. ಇನ್ನು ಇದರಲ್ಲಿ ರೋಗನಿರೋಧಕ ಶಕ್ತಿ ದುಪ್ಪಟ್ಟಿದೆ ವಿಶೇಷವಾಗಿ ಮೂತ್ರಕೋಶ, ಮೂತ್ರವ್ಯವಸ್ಥೆ ಮತ್ತು ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸುವ ಮೂಲಕ ಮೂತ್ರವ್ಯವಸ್ಥೆಯಲ್ಲಿ ಕಂಡುಬರುವ ಸೋಂಕು, ಜ್ವರ ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ ಹಾಗೂ ದೇಹದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ವಿಶೇಷವಾಗಿ ಒಸಡುಗಳಲ್ಲಿ ರಕ್ತ ಬರುವ, ಸಡಿಲವಾಗುವ, ಸೋಂಕು ಉಂಟಾಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.

Most Read:ಸಪಾಟಾದ ಹೊಟ್ಟೆ ಪಡೆಯಲು ಕೇವಲ 14 ದಿನ ಎಳೆನೀರು ಸೇವಿಸಿ ಸಾಕು!

ರಕ್ತ ಪಂಪ್ ಮಾಡಲು ನೆರವಾಗುವುದು

ರಕ್ತ ಪಂಪ್ ಮಾಡಲು ನೆರವಾಗುವುದು

ನಿಮಿರು ದೌರ್ಬಲ್ಯಕ್ಕೆ ನೀವು ಚಿಕಿತ್ಸೆ ಪಡೆಯುವುದಾದರೆ ಅದಕ್ಕೆ ಎಳನೀರು ಅಗ್ರ ನೈಸರ್ಗಿಕ ಔಷಧಿಯಾಗಿರುವುದು. ಎಳನೀರು ನಿಮ್ಮ ದೇಹದಲ್ಲಿನ ವಿದ್ಯುದ್ವಿಚ್ಛೇದಗಳ ಸಮತೋಲನ ಕಾಪಾಡಿಕೊಂಡು ಹೃದಯವು ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯವನ್ನು ಸುಧಾರಿಸುವುದು. ದೇಹದಲ್ಲಿ ರಕ್ತಸಂಚಾರವು ಸರಿಯಾಗಿ ಆದರೆ ಆಗ ನಿಮ್ಮ ಸಮಸ್ಯೆಯು ಅರ್ಧ ನಿವಾರಣೆ ಯಾದಂತೆ. ಇದರಿಂದಾಗಿ ಎಳನೀರು ಕುಡಿಯುವುದು ನಿಮಿರು ದೌರ್ಬಲ್ಯಕ್ಕೆ ಅತ್ಯುತ್ತಮವಾದ ಪರಿಹಾರವಾಗಿದೆ. ಇದರಿಂದ ನೀವು ನಿಯಮಿತವಾಗಿ ಎಳನೀರು ಕುಡಿಯಿರಿ ಮತ್ತು ಇದರಲ್ಲಿನ ಲಾಭಗಳನ್ನು ಪಡೆಯಿರಿ. ಎಳನೀರಿನಿಂದ ಸಿಗುವ ಲಾಭಗಳಿಂದ ನಿಮಿರು ದೌರ್ಬಲ್ಯ ಕೂಡ ಹೋಗಲಾಡಿಸಬಹುದು. ಇದರಲ್ಲಿರುವ ವಿಶೇಷ ಏನೆಂದ್ರೆಎಳನೀರಿನಲ್ಲಿ ಪೊಟ್ಯಾಸಿಯಮ್ ಮತ್ತು ಆರೋಗ್ಯಕರ ಕಿಣ್ವಗಳ ಉಪಸ್ಥಿತಿಯು ಮೂತ್ರದ ಹೆಚ್ಚಿನ ಉತ್ಪಾದನೆಯ ಮೂಲಕ ದೇಹದಿಂದ ಹೊರಬರುವ ಎಲ್ಲಾ ಜೀವಾಣುಗಳನ್ನು ತೆಗೆದುಹಾಕಲು ಪರಿಪೂರ್ಣ ಪಾನೀಯ. ಹೀಗಾಗಿ, ಮೂತ್ರದ ಆಮ್ಲೀಯ ಪ್ರಕೃತಿಯು ತೆಂಗಿನ ನೀರಿನ ಅಧಿಕ ಲವಣಗಳಿಂದ ಉಂಟಾಗುತ್ತದೆ. ಇದು ಮೂತ್ರದ ಸೋಂಕನ್ನು ತಡೆಗಟ್ಟುವಲ್ಲಿ ಸಹಾಯಕವಾಗುತ್ತದೆ. ಅಲ್ಲದೆಎಳನೀರು ಅತ್ಯುತ್ತಮವಾದ ಮೂತ್ರವರ್ಧಕವಾಗಿದೆ. ಅಂದರೆ ಮೂತ್ರವನ್ನು ಹೆಚ್ಚಿಸಿ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಮೂತ್ರ ಪಿಂಡಗಳಲ್ಲಿ ಈಗಾಗಲೇ ಕಲ್ಲುಗಳಾಗಲು ಪ್ರಾರಂಭ ವಾಗಿದ್ದರೆ ಅವನ್ನು ಕರಗಿಸಿ ಕಲ್ಲುಗಳಾಗದಂತೆ ರಕ್ಷಿಸುತ್ತದೆ. ಇವೆರಡೂ ಕಾರಣಗಳಿಂದ ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ.

English summary

Drinking Coconut Water will help Erectile Dysfunction

Aeroflow Healthcare has helped hundreds of men achieve the desired results of natural erectile dysfunction (ED) treatment through the use of a penis pump. But for those men who want to do more to improve their sexual functionality naturally, recent studies show that benefits of coconut water are numerous in improving your overall health, including impotence.
X
Desktop Bottom Promotion