For Quick Alerts
ALLOW NOTIFICATIONS  
For Daily Alerts

ಕೆಮ್ಮು ಹಾಗೂ ಎದೆಯಲ್ಲಿ ಕಫ ಹೆಚ್ಚಾಗಿದ್ದರೆ- ಒಂದು ಗ್ಲಾಸ್ ಅನಾನಸ್ ಜ್ಯೂಸ್ ಕುಡಿಯಿರಿ

|

ಸಾಮಾನ್ಯವಾಗಿ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ನಮ್ಮ ರೋಗ ನಿರೋಧಕ ಶಕ್ತಿ ಕೊಂಚ ಶಿಥಿಲವಾಗುತ್ತದೆ ಹಾಗೂ ಕೆಲವಾರು ವೈರಸ್ ಆಧಾರಿತ ಕಾಯಿಲೆಗಳು ಸುಲಭವಾಗಿ ಆವರಿಸಿಕೊಳ್ಳುತ್ತವೆ. ಅಲ್ಲದೇ ವಾತಾವರಣದಲ್ಲಿ ಥಟ್ಟನೇ ಏರಿಳಿಯುವ ತಾಪಮನವೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ, ಆದರೆ ಹೀಗಾಯಿತು ಎಂದ ತಕ್ಷಣಕ್ಕೇ ಯಾವುದೋ ಮಾತ್ರೆಯನ್ನು ನುಂಗುವುದು ಅಪಾಯಕಾರಿ. ಯಾಕೆಂದರೆ ಕೆಲವರಿಗೆ ಕೆಟ್ಟ ಅಭ್ಯಾಸವಿರುತ್ತದೆ, ಗಂಟಲಿನಲ್ಲಿ ಸ್ವಲ್ಪ ಮಟ್ಟಿನ ಕಿರಿಕಿರಿ ಕಾಣಿಸಿಕೊಂಡರೆ ಸಾಕು, ಮೆಡಿಕಲ್ ಶಾಪ್‌ಗೆ ಹೋಗಿ ಕೆಮ್ಮಿನ ಸಿರಫ್ ನ್ನು ತೆಗೆದುಕೊಳ್ಳುವರು, ಇದು ತಕ್ಷಣಕ್ಕೆ ಪರಿಣಾಮವನ್ನು ಬೀರಬಹುದು, ಆದರೆ ಇದರಿಂದ ದೇಹಕ್ಕೆ ಅಡ್ಡ ಪರಿಣಾಮ ಇದ್ದೇ ಇರುತ್ತದೆ.

ಹಾಗಾಗಿ ಇವೆಲ್ಲಾ ಸಮಸ್ಯೆಗಳಿಂದ ತಪ್ಪಿಸುವುದಕ್ಕಾಗಿ ಕೆಲವೊಂದು ಆಹಾರಗಳನ್ನು ಸರಿಯಾಗಿ ಸೇವನೆ ಮಾಡಿದರೆ ಅದರಿಂದ ಕೆಮ್ಮು ನಿವಾರಣೆ ಮಾಡಿಕೊಳ್ಳಬಹುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಅದಕ್ಕಾಗಿ ನಾವು ಸರಿಯಾದ ಆಹಾರ ಸೇವನೆ ಮಾಡಬೇಕು. ನಮ್ಮ ಆಹಾರ ಕ್ರಮವು ಚೆನ್ನಾಗಿದ್ದರೆ ಅದರಿಂದ ಹಲವಾರು ರೀತಿಯ ಕಾಯಿಲೆಗಳು ಹಾಗೂ ಸೋಂಕುಗಳನ್ನು ನಿವಾರಣೆ ಮಾಡಬಹುದು. ಮನೆಯಲ್ಲೇ ತಯಾರಿಸಿ ರುವಂತಹ ಕೆಲವೊಂದು ರೀತಿಯ ನೈಸರ್ಗಿಕ ಮನೆಮದ್ದುಗಳಿಂದ ಕೂಡ ದೀರ್ಘಕಾಲದ ಕೆಮ್ಮನ್ನು ನಿವಾರಣೆ ಮಾಡಬಹುದಾಗಿದೆ. ಬನ್ನಿ ನಾವು ಇಂದು ಅನಾನಸಿನ ಜ್ಯೂಸ್ ನಿಂದ ಕೆಮ್ಮನ್ನು ನಿವಾರಣೆ ಮಾಡುವುದು ಹೇಗೆ ಎಂದು ತಿಳಿಯುವ. ಇದು ಕೆಮ್ಮನ್ನು ನಿವಾರಣೆ ಮಾಡಲು ತುಂಬಾ ಸಾಂಪ್ರದಾಯಿಕವಾದ ವಿಧಾನವಾಗಿದೆ....

ಕೆಮ್ಮಿನ ಅನಾನಸು ಜ್ಯೂಸ್ ನ ಕೆಲವು ಲಾಭಗಳು

ಕೆಮ್ಮಿನ ಅನಾನಸು ಜ್ಯೂಸ್ ನ ಕೆಲವು ಲಾಭಗಳು

ಸಿಹಿತಿಂಡಿಗಳು ಮತ್ತು ಪಾನೀಯಗಳಲ್ಲಿ ಅನಾನಸನ್ನು ಬಳಸಿ ಕೊಳ್ಳಲಾಗುತ್ತದೆ. ಆದರೆ ಅನಾನಸಿನಿಂದ ನಿಮಗೆ ಎಷ್ಟು ಆರೋಗ್ಯ ಲಾಭಗಳು ಇದೆ ಎಂದು ತಿಳಿದಿಲ್ಲ. ಇದು ಉರಿಯೂತ ಕಡಿಮೆ ಮಾಡುವುದು, ಕೆಮ್ಮು ನಿವಾರಿಸುವುದು, ಹೃದಯವನ್ನು ರಕ್ಷಿಸುವುದು, ಜೀರ್ಣಕ್ರಿಯೆ ಸುಧಾರಿಸುವುದು ಮತ್ತು ಇನ್ನು ಹಲವಾರು ಲಾಭಗಳನ್ನು ನೀಡುವುದು. ಬ್ರೊಮೆಲೈನ್ ಎನ್ನುವ ಕಿಣ್ವದಿಂದ ಸಮೃದ್ಧವಾಗಿರುವಂತಹ ಈ ಹಣ್ಣು ಶ್ವಾಸಕೋಶದ ಉರಿಯೂತವನ್ನು ಶಮನ ಮಾಡಲು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಎಂದು ಹಲವಾರು ಅಧ್ಯಯನಗಳು ಹೇಳಿವೆ.

ಕೆಮ್ಮಿನ ಅನಾನಸು ಜ್ಯೂಸ್ ನ ಕೆಲವು ಲಾಭಗಳು

ಕೆಮ್ಮಿನ ಅನಾನಸು ಜ್ಯೂಸ್ ನ ಕೆಲವು ಲಾಭಗಳು

ಅದೇ ರೀತಿಯಾಗಿ ಕೆಮ್ಮನ್ನು ಕೂಡ ನಿವಾರಿಸುವುದು. ಬ್ರೊಮೆಲೈನ್ ತುಂಬಾ ಬಲಿಷ್ಠವಾಗಿರುವಂತಹ ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ ಮತ್ತು ಇದು ಹಲವಾರು ರೀತಿಯ ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಪದೇ ಪದೇ ಕೆಮ್ಮಬೇಕು ಎನ್ನುವಂತಹ ಸಮಸ್ಯೆಯನ್ನು ಇದು ಕಡಿಮೆ ಮಾಡುವುದು. ಅನಾನಸು ಅಸ್ತಮಾದಿಂದ ಉಂಟಾಗುವಂತಹ ಕೆಮ್ಮನ್ನು ನಿವಾರಿಸುವುದು. ಅದಾಗ್ಯೂ, ನೀವು ಅಸ್ತಮಾದಿಂದ ಬಳಲುತ್ತಿದ್ದರೆ ಆಗ ನೀವು ಚಿಕಿತ್ಸೆಗೆ ಅನಾನಸು ಜ್ಯೂಸ್ ನ್ನು ಬಳಸಿಕೊಳ್ಳಿ. ನೀವು ಇನ್ ಹೇಲರ್ ಅಥವಾ ವೈದ್ಯರು ಸೂಚಿಸಿರುವಂತಹ ಔಷಧಿಯನ್ನು ಕಡೆಗಣಿಸಿ ಕೇವಲ ಅನಾನಸು ಜ್ಯೂಸ್ ನ್ನು ಮಾತ್ರ ಸೇವನೆ ಮಾಡುತ್ತಿರಬೇಡಿ.

Most Read:ಹುಳಿ ಮಿಶ್ರಿತ ಸಿಹಿಯಾದ ಅನಾನಸ್‌ ಜ್ಯೂಸ್‌‌ನ‌ ಮಹತ್ವ ಅರಿಯಿರಿ!

ಜೇನುತುಪ್ಪ, ಮೆಣಸು, ಉಪ್ಪು ಮತ್ತು ಶುಂಠಿಯ ಮಿಶ್ರಣದ ಅನಾನಸು ಜ್ಯೂಸ್

ಜೇನುತುಪ್ಪ, ಮೆಣಸು, ಉಪ್ಪು ಮತ್ತು ಶುಂಠಿಯ ಮಿಶ್ರಣದ ಅನಾನಸು ಜ್ಯೂಸ್

ಈ ಮಿಶ್ರಣವನ್ನು ಹಲವಾರು ಶತಮಾನಗಳಿಂದಲೂ ಕೆಮ್ಮಿನ ನಿವಾರಣೆಗಾಗಿ ಬಳಸಿಕೊಳ್ಳಲಾಗುತ್ತಾ ಇದೆ. ಅನಾನಸು ಜ್ಯೂಸ್ ನ ಜತೆಗೆ ಶುಂಠಿ, ಉಪ್ಪು, ಜೇನುತಪ್ಪ ಮತ್ತು ಮೆಣಸನ್ನು ಹಾಕಿಕೊಂಡು ಅದನ್ನು ಕುಡಿಯಬೇಕು. ಮೆಣಸು ಕೆಮ್ಮು ಮತ್ತು ಶೀತವನ್ನು ನಿವಾರಣೆ ಮಾಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು ಮತ್ತು ಇದು ಕಫವನ್ನು ಹೊರಗೆ ಹಾಕುವುದು. ಜೇನುತುಪ್ಪ ಮತ್ತು ಶುಂಠಿಯು ಗಂಟಲಿಗೆ ಶಮನ ನೀಡುವುದು ಮತ್ತು ಇದರಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಈ ಅನಾನಸು ಜ್ಯೂಸ್ ನ್ನು ಮಾಡಲು ನೀವು ಎಲ್ಲವನ್ನು ಜತೆಯಾಗಿಸಿಕೊಂಡು ಜ್ಯೂಸ್ ಮಾಡಬೇಕು.

Most Read:ಇನ್ನು ಅನಾನಸ್ ಹಣ್ಣಿನ ಒಳತಿರುಳನ್ನು ತಿಪ್ಪೆಗೆ ಎಸೆಯಬೇಡಿ...

ಜೇನುತುಪ್ಪದಲ್ಲಿರುವ ಪ್ರಯೋಜನಗಳು

ಜೇನುತುಪ್ಪದಲ್ಲಿರುವ ಪ್ರಯೋಜನಗಳು

ಪುರಾಣಗಳಲ್ಲಿ ಜೇನಿನ ಆರೋಗ್ಯಕರ ಗುಣಗಳ ಬಗ್ಗೆ ಉಲ್ಲೇಖವಿದೆ. ವಿಶ್ವದಾದ್ಯಂತ ಜೇನನ್ನು ಕೃಷಿ ಮಾಡಲಾಗುತ್ತದೆ. ಜೇನುಸಾಕಣೆಯ ಇತಿಹಾಸ ಸುಮಾರು ಕ್ರಿಸ್ತಪೂರ್ವ ಏಳುನೂರಕ್ಕೂ ಹಿಂದಿನದು ಎಂದು ತಿಳಿದುಬರುತ್ತದೆ. ಜೇನು ಸವಿಯುವುದು ಜೇನುಹುಳಗಳ ಆಹಾರವನ್ನು ಕದ್ದಂತೆ ಎಂಬ ಅಪವಾದವೂ ಇದೆ. ವೈಜ್ಞಾನಿಕವಾಗಿ ಜೇನು ಮಾನವನ ದೇಹಕ್ಕೆ ಉತ್ತಮವಾದ ಆಹಾರದ ಜೊತೆ ಉತ್ತಮವಾದ ಔಷಧಿಯೂ ಆಗಿದೆ. ಇದರ ಸರಿಯಾದ ಬಳಕೆಯಿಂದ ಹಲವು ರೋಗಗಳನ್ನು ಬರದಂತೆ ತಡೆಗಟ್ಟಬಹುದು. ಮುಖ್ಯವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಲು ಮತ್ತು ಜೇನು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅತ್ಯುತ್ತಮ ಪೇಯವಾಗಿದೆ.

ಶುಂಠಿ

ಶುಂಠಿ

ಪ್ರಪಂಚದೆಲ್ಲೆಡೆ ಸಿಗುವ ಅತ್ಯುತ್ತಮ ಔಷಧಿ ಎಂಬ ಕಾರಣಕ್ಕೆ ಇದನ್ನು 'ಮಹೌಷಧಿ', 'ವಿಷ್ವಬೇಷಜ' ಎಂದು ಕರೆಯುತ್ತಾರೆ. ಜಠರದ ತೊಂದರೆ ನಿವಾರಣೆಗೆ, ಅಜೀರ್ಣ, ವಾಯು, ವಾಕರಿಕೆ, ಮಲಬದ್ಧತೆ, ಹೊಟ್ಟೆಯ ಸೋಂಕು ನಿವಾರಣೆಗೆ ಸಹಕಾರಿ. ಕೊಲೆಸ್ಟ್ರಾಲ್ ಕಮ್ಮಿ ಮಾಡುವುದರಿಂದ ಹೃದಯ ಸಂಬಂಧಿ ರೋಗದಿಂದ ಬಳಲುವವರಿಗೆ ಸಹಕಾರಿ.

ಕರಿಮೆಣಸಿನ ಪ್ರಯೋಜನಗಳು

ಕರಿಮೆಣಸಿನ ಪ್ರಯೋಜನಗಳು

ಭಾರತೀಯ ಅಡುಗೆಗಳಲ್ಲಿ ಸಾಂಬಾರ ಪದಾರ್ಥಗಳಿಗೆ ಹೆಚ್ಚಿನ ಮಹತ್ವವಿದೆ. ಚಿಟಿಕೆಯಷ್ಟು ಕರಿಮೆಣಸು ಅಥವಾ ಕಾಳುಮೆಣಸಿನ ಪುಡಿಯನ್ನು ಸೇರಿಸುವ ಮೂಲಕ ಅಡುಗೆಯ ರುಚಿಯನ್ನು ಹೆಚ್ಚಿಸಬಹುದು, ಜೊತೆಗೇ ಹಲವಾರು ಆರೋಗ್ಯಕರ ಪ್ರಯೋಜನಗಳನ್ನೂ ಪಡೆಯಬಹುದು. ಕಾಳುಮೆಣಸಿನಲ್ಲಿ ಅಗತ್ಯ ಖನಿಜಗಳಾದ ಮೆಗ್ನೀಶಿಯಂ, ತಾಮ್ರ, ಮ್ಯಾಂಗನೀಸ್, ಕ್ಯಾಲ್ಸಿಯಂ, ಗಂಧಕ, ಕಬ್ಬಿಣ ಮೊದಲಾದವು ಇವೆ. ಇದರಲ್ಲಿ ಕರಗದ ನಾರು ಹಾಗೂ ನಿಗದಿತ ಪ್ರಮಾಣದ ಪ್ರೋಟೀನ್ ಹಾಗೂ ಕಾರ್ಬೋ ಹೈಡ್ರೇಟುಗಳಿವೆ. ಕಾಳುಮೆಣಸನ್ನು ಆಹಾರದೊಡನೆ ಸೇವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಅತಿಸಾರ ಹಾಗೂ ಮಲಬದ್ಧತೆಯಗದಂತೆಯೂ ನೋಡಿಕೊಳ್ಳಬಹುದು.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*¼ ಚಮಚ ಕರಿಮೆಣಸಿನ ಹುಡಿ

*¼ ಚಮಚ ಉಪ್ಪು

*1 ಕಪ್ ಅನಾನಸು ಜ್ಯೂಸ್

*1 ಚಮಚ ಕತ್ತರಿಸಿದ ಅಥವಾ ತುಂಡರಿಸಿದ ಶುಂಠಿ

*1 ಚಮಚ ಜೇನುತುಪ್ಪ

ಎಲ್ಲವನ್ನು ಜತೆಯಾಗಿ ಸೇರಿಸಿಕೊಂಡು ಜ್ಯೂಸ್ ಮಾಡಿಕೊಳ್ಳಿ. ಈ ಮಿಶ್ರಣದ ಅರ್ಧ ಕಪ್ ನ್ನು ನೀವು ದಿನಕ್ಕೆ ಮೂರು ಸಲ ಕುಡಿಯಬೇಕು. ಒಂದು ವರ್ಷದ ಕೆಳಗಿನ ಮಕ್ಕಳಿಗೆ ನೀವು ಈ ಮಿಶ್ರಣವನ್ನು ನೀಡಬೇಡಿ. ಅವರಿಗೆ ಜೇನುತುಪ್ಪ ಕೂಡ ಕೊಡಬಾರದು.

Most Read:ಅನಾನಸ್ ಹಣ್ಣು ನೆನೆಸಿದ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

ಅಂತಿಮ ನಿರ್ಣಯ

ಅಂತಿಮ ನಿರ್ಣಯ

ಅನಾನಸು ಜ್ಯೂಸ್ ಕೆಮ್ಮು ನಿವಾರಣೆ ಮಾಡುವುದು ಮಾತ್ರವಲ್ಲದೆ, ಇದರಿಂದ ಹಲವಾರು ರೀತಿಯ ಇತರ ಆರೋಗ್ಯ ಲಾಭಗಳು ಕೂಡ ಇದೆ. ಇದರಲ್ಲಿ ಇರುವಂತಹ ಹೆಚ್ಚಿನ ಎಲ್ಲಾ ಸಾಮಗ್ರಿಗಳು ಗಂಟಲಿಗೆ ಶಮನ ನೀಡುವುದು ಮತ್ತು ಕೆಮ್ಮನ್ನು ನಿವಾರಣೆ ಮಾಡಲು ಪರಿಹಾರ ನೀಡುವುದು. ಇಷ್ಟು ಮಾತ್ರವಲ್ಲದೆ ಕಫ ಕಡಿಮೆ ಮಾಡುವುದು. ಅದಾಗ್ಯೂ, ಎರಡು ವಾರಕ್ಕಿಂತ ಹೆಚ್ಚು ಸಮಯ ನಿಮಗೆ ಕೆಮ್ಮು ಕಾಡುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆದುಕೊಳ್ಳಿ.

English summary

Drink Pineapple Juice For Cough Relief

Pineapple juice does help in cough relief. Its anti-inflammatory compound called bromelain can reduce the inflammation in allergic conditions like airways disease or bronchial asthma. Bromelain can also dilute mucus and helps expel it. Cough and congestion related to sinus can also be effectively cured by bromelain.
X
Desktop Bottom Promotion