For Quick Alerts
ALLOW NOTIFICATIONS  
For Daily Alerts

ನಿಮ್ಮ ಥೈರಾಯ್ಡ್ ಗ್ರಂಥಿ ಅತಿಕ್ರಿಯಾಶೀಲವಾಗಿದೆಯೇ ಅಥವಾ ನಿಷ್ಕ್ರಿಯಗೊಳ್ಳುತ್ತಿದೆಯೇ?

|

ಇಂದು ಭಾರತದಲ್ಲಿ ಥೈರಾಯ್ಡ್ ಗ್ರಂಥಿಯ ತೊಂದರೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇಲಾಖೆಗಳೇ ಒದಗಿಸಿದ ಮಾಹಿತಿಯ ಪ್ರಕಾರ ಇಂದು ಭಾರತದಲ್ಲಿ ನಾಲ್ಕು ಕೋಟಿ ಇಪ್ಪತ್ತು ಲಕ್ಷ ಜನರಿಗೆ ಈ ತೊಂದರೆ ಇದೆ. ಥೈರಾಯ್ಡ್ ಎಂದರೆ ಚಿಟ್ಟೆಯಾಕಾರದ ಚಿಕ್ಕ ಗ್ರಂಥಿಯಾಗಿದ್ದು ನಮ್ಮ ಗಂಟಲ ಭಾಗದಲ್ಲಿರುತ್ತದೆ. ಇದೊಂದು ಪ್ರಬಲ ಗ್ರಂಥಿಯಾಗಿದ್ದು ಹಲವಾರು ದೈಹಿಕ ಕಾರ್ಯಗಳನ್ನುನಿರ್ವಹಿಸುತ್ತದೆ. ವಿಶೇಷವಾಗಿ ಹೃದಯದ ಬಡಿತ, ಶಕ್ತಿಯ ನಿಯಂತ್ರಣಕ್ಕೆ ಮೆದುಳಿನ ನಿರ್ವಹಣೆ ಮೊದಲಾದವುಗಳಿಗೆ ಇದರಿಂದ ಒಸರುವ ರಸದೂತಗಳು ಅಗತ್ಯವಾಗಿವೆ.

ಈ ಗ್ರಂಥಿಯ ಕ್ಷಮತೆ ಒಂದು ವೇಳೆ ಅಗತ್ಯಕ್ಕೂ ಕಡಿಮೆಯಾದರೆ ಇದನ್ನು ಹೈಪೋಥೈರಾಯ್ಡಿಸಂ (Hypothyroidism) ಎಂದು ಕರೆಯುತ್ತಾರೆ. ಅಂದರೆ ದೇಹಕ್ಕೆ ಅಗತ್ಯವಿರುವ ಪ್ರಮಾಣಕ್ಕೂ ಕಡಿಮೆ ಪ್ರಮಾಣದ ರಸದೂತಗಳನ್ನು ಈ ಗ್ರಂಥಿ ಸ್ರವಿಸುತ್ತಿದೆ ಎಂದು ಅರ್ಥ. ತದ್ವಿರುದ್ದವಾಗಿ ಅಗತ್ಯಕ್ಕೂ ಹೆಚ್ಚಿನ ರಸದೂತ ಸ್ರಾವಗೊಂಡರೆ ಇದನ್ನು ಹೈಪರ್ ಥೈರಾಯ್ಡಿಸಂ (Hyperthyroidism) ಎಂದು ಕರೆಯುತ್ತಾರೆ. ಪರಿಣಾಮವಾಗಿ ಕೆಲವು ಅನಗತ್ಯ ಬೆಳವಣಿಗೆಗಳು ಕಾಣಿಸಿಕೊಳ್ಳಬಹುದು. ಆದರೆ ಆದಷ್ಟೂ ಬೇಗನೇ ಇದರ ಇರುವಿಕೆಯನ್ನು ಗುರುತಿಸಿ ಚಿಕಿತ್ಸೆ ಪಡೆದರೆ ಸಾಮಾನ್ಯ ಸ್ಥಿತಿಗೆ ಮರಳಬಹುದು. ಈ ತೊಂದರೆ ಇರುವ ಸಾಮಾನ್ಯ ಲಕ್ಷಣಗಳೆಂದರೆ:

ವಿವರಿಸಲು ಸಾಧ್ಯವಾಗದ ತೂಕದಲ್ಲಿ ಹೆಚ್ಚಳ

ವಿವರಿಸಲು ಸಾಧ್ಯವಾಗದ ತೂಕದಲ್ಲಿ ಹೆಚ್ಚಳ

ಎರಡೂ ಸಂದರ್ಭಗಳಲ್ಲಿ ತೂಕ ಸಾಮಾನ್ಯವಾಗಿ ಏರುಗತಿಯಲ್ಲಿ ಸಾಗುತ್ತದೆ. ಉಳಿದ ದಿನಗಳಿಗಿಂತ ಈ ದಿನಗಳಲ್ಲಿ ಆಹಾರವನ್ನು ಕೊಂಚ ಹೆಚ್ಚಾಗಿಯೇ ಸೇವಿಸುವುದು ಗಮನಕ್ಕೆ ಬರಬಹುದು. ಇದಕ್ಕೆ ಪೂರಕವಾಗಿ ನಿಮ್ಮ ಜೀವನಕ್ರಮ ವ್ಯಾಯಾಮರಹಿತವಾಗಿದ್ದರೆ ಈ ಗತಿ ಇನ್ನಷ್ಟು ಶೀಘ್ರವಾಗಬಹುದು. ಒಂದು ವೇಳೆ ಯಾವುದೇ ಸಕಾರಣವಿಲ್ಲದೇ ತೂಕದ ಏರುವಿಕೆ ಸತತವಾಗುತ್ತಾ ಹೋದರೆ ಇದು ಥೈರಾಯ್ಡ್ ತೊಂದರೆ ಇರಬಹುದು.

ಸುಸ್ತು

ಸುಸ್ತು

ಹೈಪೋಥೈರಾಯ್ಡಿಸಂ ನಿಂದ ಬಳಲುತ್ತಿರುವವರಿಗೆ ಕೊಂಚ ದೈಹಿಕ ಚಟುವಟಿಕೆಯಿಂದಲೂ ಭಾರೀ ಸುಸ್ತು ಎನಿಸುತ್ತದೆ. ಸಾಮಾನ್ಯವಾಗಿ ನಿದ್ದೆಯಿಲ್ಲದೇ ಇದ್ದರೆ ಎದುರಾಗುವ ಸುಸ್ತಿನಂತೆಯೇ ಇರುವ ಸುಸ್ತು ಸಾಕಷ್ಟು ನಿದ್ದೆ ಪಡೆದ ಬಳಿಕವೂ ಇರುತ್ತದೆ. ಪರಿಣಾಮವಾಗಿ ಜಾಗರೂಕ ಸ್ಥಿತಿಯಲ್ಲಿರಬೇಕಾದ ಮಾನಸಿಕ ಸ್ಪಂದನೆ, ಏಕಾಗ್ರತೆ ಕಡಿಮೆಯಾಗುತ್ತವೆ. ಕೆಲವೊಮ್ಮೆ ಇದು ದೈಹಿಕ ಚಲನೆಗಳನ್ನೂ ನಿಧಾನಗೊಳಿಸಬಹುದು.

Most Read: ನಿಮಗೆ ಥೈರಾಯ್ಡ್ ಸಮಸ್ಯೆ ಇದ್ದರೆ ಇಲ್ಲಿದೆ ನೋಡಿ ಸುಲಭ ಪರಿಹಾರ

ಒಣ ಮತ್ತು ದೊರಗಾದ ಕೂದಲು

ಒಣ ಮತ್ತು ದೊರಗಾದ ಕೂದಲು

ಥೈರಾಯ್ಡ್ ಗ್ರಂಥಿಯ ಬದಲಾವಣೆಯಿಂದ ಕೂದಲ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಹೈಪೋಥೈರಾಯ್ಡಿಸಂ ರೋಗ ಇರುವವರಲ್ಲಿ ಕೂದಲು ಶಿಥಿಲವಾಗಿದ್ದು ಸುಲಭವಾಗಿ ತುಂಡಾಗುತ್ತವೆ. ಅಲ್ಲದೇ ಆರ್ದ್ರತೆಯನ್ನು ಕಳೆದುಕೊಂಡಿದ್ದು ನೇರವಾಗಿರದೇ ವಕ್ರ ವಕ್ರವಾಗಿದ್ದು ಏಕಸಮಾನವಾದ ದಪ್ಪದಲ್ಲಿರುವುದಿಲ್ಲ.

ಹೊಟ್ಟೆಯುಬ್ಬರಿಕೆ

ಹೊಟ್ಟೆಯುಬ್ಬರಿಕೆ

ಹೈಪೋಥೈರಾಯ್ಡಿಸಂ ಇರುವ ವ್ಯಕ್ತಿಗಳ ದೇಹದಲ್ಲಿ ನೀರು ಅತಿಯಾಗಿ ಉಳಿದುಕೊಂಡು ತೂಕದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಹಾಗೂ ಸಾಮಾನ್ಯವಾಗಿ ಹೊಟ್ಟೆಯುಬ್ಬಿದಂತೆ ಮತ್ತು ಮುಖವೂ ಊದಿಕೊಂಡಂತೆ ತೋರುತ್ತದೆ. ವಿಶೇಷವಾಗಿ ಪ್ರತಿ ಹೊತ್ತಿನ ಊಟದ ಬಳಿಕ ಈಗಾಗಲೇ ಉಬ್ಬಿರುವ ಭಾಗಗಳು ಇನ್ನಷ್ಟು ಉಬ್ಬುವಂತೆ ತೋರುತ್ತದೆ,

ಕಾರಣವಿಲ್ಲದೇ ಎದುರಾಗುವ ನೋವು

ಕಾರಣವಿಲ್ಲದೇ ಎದುರಾಗುವ ನೋವು

ಕೆಲವೊಮ್ಮೆ ದೇಹದ ಕೆಲವು ಭಾಗಗಳಲ್ಲಿ ಥಟ್ಟನೇ, ಯಾವುದೇ ಕಾರಣವಿಲ್ಲದೇ ನೋವು ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಮೂಳೆಸಂದುಗಳಲ್ಲಿ ಅಥವಾ ಸ್ನಾಯುಗಳ ಒತ್ತಡ ಹೇರಬೇಕಾದ ಭಾಗಗಳಲ್ಲಿ ತೀಕ್ಷ್ಣವಾದ ನೋವು ಕಾಣಿಸಿಕೊಳ್ಳುತ್ತದೆ. ನೆನಪಿರಲಿ, ಹೈಪೋಥೈರಾಯ್ಡಿಸಂ ತೊಂದರೆಯಿಂದ ದೇಹದ ಹಲವೆಡೆ ನೋವು ಕಾಣಿಸಿಕೊಳ್ಳುತ್ತದೆ.

ಮಲಬದ್ಧತೆ

ಮಲಬದ್ಧತೆ

ಹೈಪೋಥೈರಾಯ್ಡಿಸಂ ತೊಂದರೆ ಇರುವ ವ್ಯಕ್ತಿಗಳಲ್ಲಿ ಜೀರ್ಣಕ್ರಿಯೆ ಮತ್ತು ಇತರ ಕ್ರಿಯೆಗಳು ತಡವಾಗಿ ನಡೆಯುತ್ತದೆ, ಇದು ಕರುಳುಗಳ ಒಳಗೆ ಆಹಾರದ ಚಲನೆಯನ್ನೂ ನಿಧಾನಗೊಳಿಸಬಹುದು. ಪರಿಣಾಮವಾಗಿ ಮಲಬದ್ದತೆ ಎದುರಾಗಬಹುದು. ಏಕೆಂದರೆ ಇವರ ದೇಹ ಅತಿಯಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ ಮತ್ತು ವಿಶೇಷವಾಗಿ ದೊಡ್ಡ ಕರುಳು ಆಹಾರವನ್ನು ಸಂಕುಚಿಸಿ ಮುಂದೆ ಕಳುಹಿಸುವ ತನ್ನ ಸಾಮರ್ಥ್ಯವನ್ನು ಕಡಿಮೆಯಾಗಿಸಿಕೊಂಡಿರುವ ಕಾರಣ ಮಲವಿಸರ್ಜನೆ ತಡವಾಗುತ್ತದೆ.

Most Read: ಥೈರಾಯ್ಡ್ ಸಮಸ್ಯೆಯ ಮೌನ ಲಕ್ಷಣಗಳು-ನಿಮಗೂ ಶಾಕ್ ಆಗಬಹುದು!!

ಆಗಾಗ ಚಳಿ ಎದುರಾಗುತ್ತದೆ

ಆಗಾಗ ಚಳಿ ಎದುರಾಗುತ್ತದೆ

ಹೈಪೋಥೈರಾಯ್ಡಿಸಂ ಇರುವ ವ್ಯಕ್ತಿಗಳು ಸುತ್ತಮುತ್ತಲಿನವರಿಗಿಂತ ಹೆಚ್ಚೇ ಚಳಿ ಅನುಭವಿಸುತ್ತಾರೆ. ಹಿಂದೆ ಸಾಮಾನ್ಯ ಚಳಿಗೆ ಏನೂ ಅನ್ನಿಸದಿದ್ದುದು ಈಗ ತಡೆಯಲಾಗದಂತೆ ಇದ್ದರೆ ಇದು ಹೈಪೋಥೈರಾಯ್ಡಿಸಂ ಲಕ್ಷಣವಾಗಿದೆ. ಏಕೆಂದರೆ ಹಿಂದಿನಂತೆ ಚಳಿಯನ್ನು ಎದುರಿಸಲು ಇವರ ದೇಹ ಉತ್ಪಾದಿಸಿದಷ್ಟು ಶಾಖವನ್ನು ಈಗ ಉತ್ಪಾದಿಸಲು ಸಾಧ್ಯವಾಗದಿರುವುದೇ ಇದಕ್ಕೆ ಕಾರಣ.

ವಿವರಿಸಲಸಾಧ್ಯವಾದ ತೂಕದಲ್ಲಿ ಇಳಿಕೆ

ವಿವರಿಸಲಸಾಧ್ಯವಾದ ತೂಕದಲ್ಲಿ ಇಳಿಕೆ

ಹೈಪರ್ ಥೈರಾಯ್ಡಿಸಂ ವ್ಯಕ್ತಿಗಳಿಗೆ ತೂಕದಲ್ಲಿ ಇಳಿಕೆಯೂ ಕಾಣಿಸಿಕೊಳ್ಳಬಹುದು. ಇವರಿಗೆ ಸತತ ಹಸಿವಾಗುತ್ತಿರುತ್ತದೆ. ಆದರೆ ಹೆಚ್ಚು ತಿಂದಷ್ಟೂ ಇದರ ಶಕ್ತಿಯನ್ನು ಉಳಿಸಿಕೊಳ್ಳಲು ದೇಹ ವಿಫಲವಾಗಿ ತೂಕ ದಿನೇ ದಿನೇ ಇಳಿಯುತ್ತಾ ಸಾಗುತ್ತದೆ. ಈ ತೊಂದರೆಯ ಕ್ರಿಯಾಶೀಲತೆ ಹೆಚ್ಚಿದ್ದಷ್ಟೂ ತೂಕ ಇಳಿಯುವ ಭರವೂ ಹೆಚ್ಚು.

ಮೈಬೆಚ್ಚಗಾದಂತೆ ಅನ್ನಿಸುತ್ತದೆ

ಮೈಬೆಚ್ಚಗಾದಂತೆ ಅನ್ನಿಸುತ್ತದೆ

ನಮ್ಮ ದೇಹದ ತಾಪಮಾನವನ್ನು ನಿಯಂತ್ರಿಸುವ ಪ್ರಮುಖ ಕಾರ್ಯ ಥೈರಾಯ್ಡ್ ಗ್ರಂಥಿಯದ್ದಾಗಿದೆ. ಒಂದು ವೇಳೆ ಈ ಗ್ರಂಥಿಯ ಕ್ಷಮತೆ ಉಡುಗಿದ್ದರೆ ಶಾಖವನ್ನು ನಿಯಂತ್ರಿಸುವ ಕ್ಷಮತೆಯೂ ಕಡಿಮೆಯಾಗಿ ದೇಹದ ತಾಪಮಾನ ನಿಯಂತ್ರಣವಿಲ್ಲದೇ ಏರುಪೇರಾಗುತ್ತದೆ. ಈ ವ್ಯಕ್ತಿಗಳಿಗೆ ಮೈ ಬೆಚ್ಚಗಾದಂತೆ ಅನ್ನಿಸಿದ್ದು ಶಾಖವನ್ನು ಸಹಿಸಿಕೊಳ್ಳಲೇ ಆಗುವುದಿಲ್ಲ.

Most Read:ಹೈಪೋಥೈರಾಯ್ಡಿಸಂನ್ನು ಗುಣಪಡಿಸಲು 15 ಮಾರ್ಗಗಳು

ಹೆಚ್ಚುವ ಮಲವಿಸರ್ಜನೆ

ಹೆಚ್ಚುವ ಮಲವಿಸರ್ಜನೆ

ಹೈಪೋಥೈರಾಯ್ಡಿಸಂ ವ್ಯಕ್ತಿಗಳಿಗೆ ಮಲಬದ್ದತೆ ಎದುರಾದಂತೆಯೇ ಹೈಪರ್ ಥೈರಾಯ್ಡಿಸಂ ಇರುವ ವ್ಯಕ್ತಿಗಳ ದೇಹದಲ್ಲಿ ಜೀವ ರಾಸಾಯನಿಕ ಕ್ರಿಯೆ ಹೆಚ್ಚು ಕ್ರಿಯಾಶೀಲವಾಗಿರುವ ಕಾರಣ ಈ ವ್ಯಕ್ತಿಗಳು ದಿನದಲ್ಲಿ ಹಲವಾರು ಬಾರಿ ಶೌಚಾಲಯಕ್ಕೆ ಧಾವಿಸಬೇಕಾಗುತ್ತದೆ.

ಮಾಸಿಕ ಚಕ್ರ ಸುಲಭಗೊಳ್ಳುವುದು

ಮಾಸಿಕ ಚಕ್ರ ಸುಲಭಗೊಳ್ಳುವುದು

ಹೈಪರ್ ಥೈರಾಯ್ಡಿಸಂ ಇರುವ ಮಹಿಳೆಯರ ಮಾಸಿಕ ಚಕ್ರ ಇತರ ಮಾಸಗಳಿಗೆ ಹೋಲಿಸಿದರೆ ಈಗ ಸುಲಭವಾಗಿರುವಂತೆ, ಕೆಲವೊಮ್ಮೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿರುತ್ತದೆ. ಒಂದು ವೇಳೆ ಈ ತೊಂದರೆಯನ್ನು ಸರಿಪಡಿಸದೇ ಇದ್ದರೆ ಸಾಮಾನ್ಯ ದಿನದಲ್ಲಿ ಆಗಬೇಕಾಗಿದ್ದ ಸ್ರಾವ ಮುಂದಿನ ಮಾಸ ಬರುವ ಮುನ್ನವೇ ಎಲ್ಲಿಂದಲೋ ಧಿಗ್ಗನೇ ಆವರಿಸಿ ಈ ಸ್ಥಿತಿಯನ್ನು ನಿರೀಕ್ಷಿಸದೇ ಮುಜುಗರಕ್ಕೆ ಕಾರಣವಾಗಬಹುದು.

ಹೆಚ್ಚು ಸಾಮಾನ್ಯವಾಗಿ ಕಾಡುವ ಥೈರಾಯ್ಡ್ ನ ಬಗೆಗಳು

ಹೆಚ್ಚು ಸಾಮಾನ್ಯವಾಗಿ ಕಾಡುವ ಥೈರಾಯ್ಡ್ ನ ಬಗೆಗಳು

ಈ ಎರಡು ಬಗೆಗಳಲ್ಲಿ ಹೈಪೋಥೈರಾಯ್ಡಿಸಂ ಅತಿ ಸಾಮಾನ್ಯವಾಗಿ ಕಾಣಬರುತ್ತದೆ. ಇದು ಜೀವರಾಸಾಯನಿಕ ಕ್ರಿಯೆಯನ್ನು ನಿಯಂತ್ರಿಸುವ ರಸದೂತವನ್ನು ಬಾಧಿಸುವ ಕಾರಣ, ವಿಶೇಷವಾಗಿ ಮಹಿಳೆಯರ ದೇಹದ ರಸದೂತಗಳ ಪ್ರಮಾಣದಲ್ಲಿ ಏರುಪೇರಿಗೆ ಕಾರಣವಾಗುತ್ತದೆ. ಅಲ್ಲದೇ ದೇಹದ ನೇರ ಮತ್ತು ಪರೋಕ್ಷವಾಗಿ ನಡೆಯುವ ಕೆಲವಾರು ಕಾರ್ಯಗಳ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ ಹೈಪೋಥೈರಾಯ್ಡಿಸಂ ಇರುವ ಪುರುಷರಲ್ಲಿ ನಪುಂಸಕತ್ವ, ಮಹಿಳೆಯರಲ್ಲಿ ಬಂಜೆತನ ಎದುರಾಗುತ್ತವೆ. ಪಾಠ್ ಲ್ಯಾಬ್ಸ್ ನ ತಜ್ಞ ವೈದ್ಯರಾದ ಡಾ. ಅವಿನಾಶ್ ಫಾಡ್ಕೆಯವರ ಪ್ರಕಾರ ಈ ತೊಂದರೆ ಇರುವ ವ್ಯಕ್ತಿಗಳಿಗೆ ಎದುರಾಗುವ ಇತರ ತೊಂದರೆಗಳೆಂದರೆ ಮಾಸಿಕ ದಿನಗಳು ಹಿಂದುಮುಂದಾಗುವುದು, ಹೃದಯ ಸಂಬಂಧಿ ತೊಂದರೆಗಳು, ಮಲಬದ್ದತೆ, ಅತಿಯಾದ ತೂಕದಲ್ಲಿ ಹೆಚ್ಚಳ, ಕೂದಲು ತೀರಾ ಸಪೂರವಾಗುವುದು, ಕೊಂಚ ಚಳಿಯನ್ನೂ ಸಹಿಸಲಸಾಧ್ಯವಾಗುವುದು ಹಾಗೂ ಮೆದುಳಿನ ಸೂಚನೆಗಳನ್ನು ವಿವಿಧ ಅಂಗಗಳಿಗೆ ತಲುಪಿಸುವ ನರಗಳು ತಮ್ಮ ಸಾಮರ್ಥ ಕಳೆದುಕೊಳ್ಳುವುದು (peripheral neuropathy) ಮೊದಲಾದವು ಎದುರಾಗುತ್ತವೆ.

English summary

Do you have an overactive or an underactive Thyroid?

India is suffering from a significant burden of Thyroid. According to official data, there are million people who are battling from a thyroid disorder. The butterfly-shaped thyroid gland is quite a powerful organ. Besides many bodily functions, it is also responsible for keeping your heart and brain working to help regulate energy. Two of the most common thyroid disorders are Hypothyroidism or an underactive thyroid. It means that there is lesser quantity of thyroid hormones in the body. On the other hand is the overactive Hyperthyroidism, which means there are excessive thyroid hormones.
X
Desktop Bottom Promotion