For Quick Alerts
ALLOW NOTIFICATIONS  
For Daily Alerts

ಪದೇ ಪದೇ ಶೀತ ಕಾಡುತ್ತಲೇ ಇರುತ್ತದೆಯೇ? ಹಾಗಾದರೆ ಇದೇ ಸಮಸ್ಯೆ ಇರಬಹುದು!

|

ಶೀತ, ಜ್ವರ, ಕೆಮ್ಮು, ಕಫ ಮೊದಲಾದವು ವಾಸ್ತವವಾಗಿ ರೋಗಗಳೇ ಅಲ್ಲ, ಬದಲಿಗೆ ನಮ್ಮ ದೇಹವನ್ನು ಸತತವಾಗಿ ಪ್ರವೇಶಿಸಿ ಧಾಳಿಯಿಡುವ ವೈರಸ್ಸು, ಬ್ಯಾಕ್ಟೀರಿಯಾಗಳ ವಿರುದ್ಧ ನಮ್ಮ ರೋಗ ನಿರೋಧಕ ವ್ಯವಸ್ಥೆ ಕೈಗೊಳ್ಳುವ ಒಂದು ಕ್ರಮವೇ ಆಗಿದೆ. ಸಾಮಾನ್ಯವಾಗಿ ಕಾಡುವ ಶೀತ ಎಂದರೆ ನಮ್ಮ ಮೂಗು, ಬಾಯಿಯ ಮೂಲಕ ಗಾಳಿಯಲ್ಲಿ ಹಾರಾಡುವ ವೈರಸ್ಸುಗಳು ಒಳಗಿನ ತೇವ ಪ್ರದೇಶಗಳಿಗೆ ಆವರಿಸಿ ಇಲ್ಲಿಂದ ಒಳನುಸುಳಲು ಯತ್ನಿಸಿದರೆ ಈಗ ಒಳಗಿನ ತೇವವನ್ನು ಹೆಚ್ಚಿಸಿ ಆ ದ್ರವದ ಮೂಲಕ ವೈರಸ್ಸುಗಳನ್ನು ಹೊರಹಾಕುವುದು ನಮ್ಮ ರಕ್ಷಣಾ ವ್ಯವಸ್ಥೆ ಅನುಸರಿಸುವ ಕ್ರಮವಾಗಿದೆ. ಪ್ರತಿಬಾರಿ ವೈರಸ್ಸು ಎದುರಾದಾಗ ಈ ಕ್ರಮವನ್ನು ಅನುಸರಿಸಿ ರೋಗ ನಿರೋಧಕ ವ್ಯವಸ್ಥೆ ಇದಕ್ಕೆ ಪ್ರತಿಭಂಧಕ ಲಸಿಕೆಯನ್ನು ದೇಹದಲ್ಲಿಯೇ ಉತ್ಪದಿಸಿ ಬಿಡುತ್ತದೆ.

ಹಾಗಾಗಿ ಇದೇ ವೈರಸ್ಸು ಮುಂದಿನ ಬಾರಿ ಆವರಿಸಿದರೆ ನಮಗೆ ಶೀತವಾಗುವುದಿಲ್ಲ. ಸತತವಾಗಿ ಭಿನ್ನವಾದ ವೈರಸ್ಸುಗಳಿಂದ ಶೀತ ಎದುರಾದ ಬಳಿಕ ದೇಹ ಹೆಚ್ಚು ಹೆಚ್ಚು ಸಬಲತೆ ಪಡೆಯುತ್ತಾ ಹೋಗುವ ಕಾರಣ ವೃದ್ದರಿಗೆ ಶೀತವಾಗುವುದು ಕಡಿಮೆ. ಆದರೆ ಇವರು ಬೇರೆ ಸ್ಥಳಕ್ಕೆ ಹೋದಾಗ ಅಥವಾ ಬೇರೆ ಸ್ಥಳದಿಂದ ಹೊಸ ವೈರಸ್ಸನ್ನು ಹೊತ್ತು ತಂದ ವ್ಯಕ್ತಿಯ ಸೀನಿನಿಂದ ಇವರಿಗೂ ಶೀತವಾಗಬಹುದು.

cold all the time

ಆದರೆ ಶೀತ ಯಾವುದೇ ಇರಲಿ, ಇದಕ್ಕೆ ಮದ್ದು ತೆಗೆದುಕೊಂಡರೂ ಇಲ್ಲದಿದ್ದರೂ ಸುಮಾರು ಒಂದು ವಾರ ಆವರಿಸಿ ಬಳಿಕ ತಾನಾಗಿಯೇ ಕಡಿಮೆಯಾಗುತ್ತದೆ. ಆದರೆ ಒಂದು ವೇಳೆ ಒಂದು ವಾರಕ್ಕೂ ಹೆಚ್ಚು ಕಾಲ ಶೀತ ಮುಂದುವರೆಯುತ್ತಾ, ಕಡಿಮೆಯಾಗುವ ಲಕ್ಷಣವನ್ನೇ ತೋರದೇ ಇದ್ದರೆ ಮಾತ್ರ ಇದು ವೈರಸ್ಸಿನ ಧಾಳಿಯ ಹೊರತಾಗಿ ಬೇರೆಯೇ ತೊಂದರೆ ಇರುವುದು ಖಚಿತವಾಗಿದ್ದು ತಕ್ಷಣವೇ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಇದಕ್ಕೆ ಹೆಚ್ಚಾಗಿ ಕೆಳಗೆ ವಿವರಿಸಿದ ಆರು ಕಾರಣಗಳಿದ್ದು ಆದಷ್ಟೂ ಬೇಗನೇ ಈ ಕಾರಣವನ್ನು ಅರಿತು ಚಿಕಿತ್ಸೆ ಪ್ರಾರಂಭಿಸಿದರೆ ಬೇಗನೇ ಚೇತರಿಸಿಕೊಳ್ಳಬಹುದು.

ಕುಂಠಿತವಾದ ಕಬ್ಬಿಣದ ಮಟ್ಟ

ಕುಂಠಿತವಾದ ಕಬ್ಬಿಣದ ಮಟ್ಟ

ನಮ್ಮ ದೇಹದ ಕಾರ್ಯನಿರ್ವಹಣೆಗೆ ಹಲವಾರು ಖನಿಜಗಳೂ ಬೇಕಾಗಿದ್ದು ಇದರಲ್ಲಿ ಕಬ್ಬಿಣದ ಅಂಶ ಪ್ರಮುಖವಾಗಿದೆ. ನಮ್ಮ ರಕ್ತ ಆಮ್ಲಜನಕ ಹಾಗೂ ಅಗತ್ಯ ಪೋಷಕಾಂಶಗಳನ್ನು ದೇಹದ ಪ್ರತಿ ಜೀವಕೋಶಕ್ಕೂ ತಲುಪಿಸುವ ಕೆಲಸ ಮಾಡುತ್ತದೆ. ಈ ಕೆಲಸಕ್ಕೆ ಹೀಮೋಗ್ಲೋಬಿನ್ ಅವಶ್ಯವಾಗಿದೆ. ಹೀಮೋಗ್ಲೋಬಿನ್ ಅಂದರೆ ನಾಲ್ಕು ಕಬ್ಬಿಣದ ಅಣುಗಳನ್ನು ಅಂಟಿಸಿಕೊಂಡಿರುವ ಕಣ. ಒಂದು ವೇಳೆ ಕಬ್ಬಿಣದ ಕೊರತೆಯಾದರೆ ರಕ್ತ ಆಮ್ಲಜನಕ ಕೊಂಡೊಯ್ಯುವ ಕ್ಷಮತೆಯೂ ಕಡಿಮೆಯಾಗುತ್ತದೆ. ಇದೂ ಸತತ ಶೀತ ಮುಂದುವರೆಯಲು ಕಾರಣವಾಗಿದೆ.

Most Read: ದಿನಕ್ಕೊಂದು ಸೇಬು ಆರೋಗ್ಯಕರ ಹೌದು, ಆದರೆ ಈ ಸಮಯದಲ್ಲಿ ಸೇವಿಸಿದಾಗ ಮಾತ್ರ!!

ಅಸಮರ್ಪಕ ರಕ್ತಪರಿಚಲನೆ

ಅಸಮರ್ಪಕ ರಕ್ತಪರಿಚಲನೆ

ಒಂದು ವೇಳೆ ದೇಹದ ತುದಿಭಾಗಗಳಾದ ಹಸ್ತ ಅಥವಾ ಪಾದಗಳು ಮಾತ್ರವೇ ತಣ್ಣಗಾಗಿದ್ದು ಇತರ ಭಾಗಗಳು ಬೆಚ್ಚಗಿದ್ದರೆ ಇದು ರಕ್ತಪರಿಚಲನೆ ಕುಂಠಿಗೊಂಡಿರುವ ಸೂಚನೆಯಾಗಿದೆ. ಕೆಲವೊಮ್ಮೆ ಬಲ ಅಥವಾ ಎಡಭಾಗ ಮಾತ್ರವೇ ತಣ್ಣಗಿರುವಂತೆ ಅನ್ನಿಸಿದರೆ ಇದು ಅಥೆರೋಸ್ಕ್ಲೆರೋಸಿಸ್ ಎಂಬ ಹೃದಯಸಂಬಂಧಿ ತೊಂದರೆಯಾಗಿದ್ದು ಇವರಿಗೂ ಸತತ ಶೀತ ಕಾಡುತ್ತಿರುತ್ತದೆ.

ಋತುಮಾತಕ್ಕೆ ಅನುಗುಣವಾಗಿ ಆವರಿಸುವ ಶೀತ

ಋತುಮಾತಕ್ಕೆ ಅನುಗುಣವಾಗಿ ಆವರಿಸುವ ಶೀತ

SAD ಅಥವಾ SEASONAL AFFECTIVE DISORDER ಎಂಬ ಈ ತೊಂದರೆ ಋತುಮಾತದ ಬದಲಾವಣೆ, ಅಂದರೆ ಬೆಚ್ಚಗಿನ ದಿನಗಳು ಕಳೆದು ಚಳಿ ಪ್ರಾರಂಭವಾದ ದಿನಗಳಲ್ಲಿ ಕಾಣಬರುತ್ತದೆ ಹಾಗೂ ಸತತವಾದ ಶೀತ ಕಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ ಈ ಅವಧಿಯಲ್ಲಿ ದೇಹದಲ್ಲಿ ಡೋಪಮೈನ್ ಎಂಬ ರಸದೂತ ಕಡಿಮೆಯಾಗುವುದರಿಂದ ತಣ್ಣನೆಯ ಗಾಳಿ ಶೀತವಾಗಲು ಪ್ರಚೋದಿಸುತ್ತದೆ.

ಸರಿಯಾಗಿ ನಿದ್ರಿಸದಿರುವುದು

ಸರಿಯಾಗಿ ನಿದ್ರಿಸದಿರುವುದು

ಒಂದು ವೇಳೆ ಸೂಕ್ತ ಸಮಯದಲ್ಲಿ ಸಾಕಷ್ಟು ನಿದ್ದೆ ಪಡೆಯದೇ ಇದ್ದರೆ ಇದು ಸಹಾ ಸತತ ಶೀತಕ್ಕೆ ಕಾರಣವಾಗಬಹುದು. ನಮ್ಮ ದೇಹದ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುವ ಮೆದುಳಿನ ನಿಯಂತ್ರಣಾ ವ್ಯವಸ್ಥೆ ನಿದ್ರಾರಾಹಿತ್ಯದ ಪರಿಣಾಮದಿಂದ ಶಿಥಿಲಗೊಳ್ಳುತ್ತದೆ ಹಾಗೂ ಅಗತ್ಯವಿದ್ದಷ್ಟು ಶಾಖವನ್ನು ಉತ್ಪಾದಿಸದೇ ಹೋಗುತ್ತದೆ. ಅಲ್ಲದೇ ಜೀವರಾಸಾಯನಿಕ ಕ್ರಿಯೆಯೂ ಬಾಧೆಗೊಳಗಾಗಿ ಶೀತದ ಜೊತೆಗೇ ನಿದ್ದೆಮಂಪರು ಸಹಾ ಆವರಿಸುತ್ತದೆ.

Most Read: ಇವೆಲ್ಲಾ ತುಂಬಾನೇ ಸುಸ್ತು ಉಂಟು ಮಾಡುವಂತಹ ಆಹಾರಗಳು

ಮಹಿಳೆಯರಿಗೇ ಕಾಡುವುದು ಹೆಚ್ಚು

ಮಹಿಳೆಯರಿಗೇ ಕಾಡುವುದು ಹೆಚ್ಚು

ವಿಜ್ಞಾನಿಗಳ ಪ್ರಕಾರ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಚಳಿ ಕಾಡುತ್ತದೆ ಎಂಬ ಮಾಹಿತಿ ನಿಮ್ಮನ್ನು ಅಚ್ಚರಿಗೊಳಿಸಬಹುದು. ಇದಕ್ಕಾಗಿ ದೇಹದ ತಾಪಮಾನವನ್ನು ನಿಖರವಾಗಿ ಅಳೆಯುವ ಕ್ಯಾಮೆರಾಗಳನ್ನಿರಿಸಿದ ಕೋಣೆಯಲ್ಲಿ ಹಲವಾರು ವ್ಯಕ್ತಿಗಳನ್ನು ಇರಿಸಿ ಇವರ ಆರೋಗ್ಯ ಮಾಹಿತಿಗಳ ವಿವರಗಳನ್ನು ಕಲೆಹಾಕಲಾಯಿತು. ಈ ಸಮಯದಲ್ಲಿ ಪುರುಷರಿಗಿಂತಲೂ ಮಹಿಳೆಯರ ದೇಹದ ತಾಪಮಾನಾ ಮೂರು ಡಿಗ್ರಿ ಸೆಲ್ಸಿಯಸ್ ವರೆಗೆ ಕಡಿಮೆಯಾಗಿದ್ದುದು ಕಂಡುಬಂದಿದೆ. ಇನ್ನೊಂದು ಅಧ್ಯಯನದ ಕಂಡುಕೊಂಡ ಪ್ರಕಾರ ಮಹಿಳೆಯರು ಬಿಸಿಯಾಗಿರುವ ವಾತಾವರಣಕ್ಕೆ ಪುರುಷರಿಗಿಂತಲೂ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಆದರೆ ತದ್ವಿರುದ್ದವಾಗಿ ಚಳಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಪುರುಷರಷ್ಟು ಇವರಿಗೆ ಸುಲಭವಾಗಿರುವುದಿಲ್ಲ.

ಅಗತ್ಯಕ್ಕೂ ಕಡಿಮೆ ಅಥವಾ ಹೆಚ್ಚಿರುವ ತೂಕ

ಅಗತ್ಯಕ್ಕೂ ಕಡಿಮೆ ಅಥವಾ ಹೆಚ್ಚಿರುವ ತೂಕ

ಒಂದು ವೇಳೆ ನಿಮ್ಮ ತೂಕ ಅಗತ್ಯವಿರುವುದಕ್ಕಿಂತಲೂ ಕಡಿಮೆ ಇದ್ದರೆ ನಿಮ್ಮ ದೇಹವನ್ನು ಹೊರಗಿನ ತಣ್ಣನೆಯ ತಾಪಮಾನದಿಂದ ರಕ್ಷಿಸುವ ಕೊಬ್ಬಿನ ಪದರ ನಿಮ್ಮ ಚರ್ಮದ ಅಡಿಯಲ್ಲಿ ಸಂಗ್ರಹವಾಗಿಲ್ಲ ಎಂದು ಅಂದುಕೊಳ್ಳಬಹುದು. ಸ್ಥೂಲದೇಹಿಗಳ ದೇಹದ ನಡುಭಾಗದಲ್ಲಿ ಸಂಗ್ರಹವಾಗಿರುವ ಕೊಬ್ಬು ಶಾಖವನ್ನು ಹಿಡಿದಿಟ್ಟುಕೊಳ್ಳಲು ನೆರವಾದರೂ ದೇಹದ ತುದಿಭಾಗಗಳಿಂದ ಶಾಖನಷ್ಟವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ವ್ಯಕ್ತಿಗಳ ದೇಹದ ಕೇಂದ್ರಭಾಗದಲ್ಲಿ ಕೊಂಚ ಕಡಿಮೆ ತಾಪಮಾನವಿರುತ್ತದೆ. ಹಾಗಾಗಿ ದೇಹದ ತೂಕವನ್ನು ಎತ್ತರಕ್ಕೆ ಅನುಗುಣವಾಗಿ ಇರಿಸಿಕೊಳ್ಳುವುದು ಅಗತ್ಯವಾಗಿದೆ.

English summary

Do you feel cold all the time? may be this is the reason!

Are you one of those who tend to shiver when no one around them is feeling cold? If this happens to you quite frequently, then you must not ignore it. This is because there could be a lot of issues that can lead to this continual feeling of coldness. Our body relies on various chemical reactions to keep its warmth and when there is a significant deficiency of essential nutrients, it may make you feel cold all the time.
Story first published: Thursday, February 7, 2019, 10:59 [IST]
X
Desktop Bottom Promotion