For Quick Alerts
ALLOW NOTIFICATIONS  
For Daily Alerts

ಸೆಲಿಯಾಕ್ ಕಾಯಿಲೆ : ನೀವು ಕಡ್ಡಾಯವಾಗಿ ತಿಳಿಯಲೇಬೇಕಾದ ಸಂಗತಿಗಳು

|

ಗೋಧಿ, ಬಾರ್ಲಿ ಮೊದಲಾದ ಆಹಾರಗಳಲ್ಲಿರುವ ಅಂಟು ಪದಾರ್ಥವಾದ ಗ್ಲುಟೆನ್ ಕೊಬ್ಬು ಹೆಚ್ಚಿಸುವ ಪೋಷಕಾಂಶವಾಗಿದ್ದು ಇದನ್ನು ಸೇವಿಸದಿರುವ ಮೂಲಕ ತೂಕ ನಿಯಂತ್ರಣಕ್ಕೆ ಹಲವರು ಪ್ರಯತ್ನಿಸುತ್ತಾರೆ. ಕೆಲವರಿಗೆ ಗ್ಲುಟೆನ್ ಸಹಿಸಿಕೊಳ್ಳುವ ಶಕ್ತಿಯೇ ಇರುವುದಿಲ್ಲ ಹಾಗಾಗಿ ಇವರು ಈ ಆಹಾರಗಳನ್ನು ಸೇವಿಸಲೇ ಸಾಧ್ಯವಿಲ್ಲ. ಗ್ಲುಟೆನ್ ಸಹಿಸಲು ಸಾಧ್ಯವಿಲ್ಲದ ಕಾಯಿಲೆಗೆ ಸೆಲಿಯಾಕ್ ಕಾಯಿಲೆ (celiac disease) ಎಂದು ಕರೆಯುತ್ತಾರೆ.

ಒಂದು ವೇಳೆ ಇವರು ಗ್ಲುಟೆನ್ ಯುಕ್ತ ಆಹಾರ ಸೇವಿಸಿದರೆ ಜೀರ್ಣಕ್ರಿಯೆಯ ತೊಂದರೆ ಎದುರಾಗುತ್ತದೆ. ಅತಿಯಾದ ಸಂದರ್ಭಗಳಲ್ಲಿ ಕೆಲವು ಬಗೆಯ ಕ್ಯಾನ್ಸರ್ ಗಳಿಗೂ ಕಾರಣವಾಗಬಹುದು. ಹಾಗಾಗಿ ಈ ಕಾಯಿಲೆಯ ಬಗ್ಗೆ ಪ್ರತಿಯೊಬ್ಬರೂ ಅರಿತಿರುವುದು ಅವಶ್ಯವಾಗಿದೆ. ಏಕೆಂದರೆ, ಮೂಲತಃ ಗೋಧಿ ನಮ್ಮ ದೇಶದ ತಳಿಯಲ್ಲ, ವಿದೇಶದಿಂದ ಬಂದು ನಮ್ಮ ನೆಲದಲ್ಲಿ ಬೆಳೆಯುತ್ತಿರುವ ತಳಿ, ಹಾಗಾಗಿ ನಮ್ಮ ದೇಹದದ ನಿಸರ್ಗಕ್ಕೆ ಪರಕೀಯವಾದ ಗ್ಲುಟೆನ್ ಅನ್ನು ಭಾರತೀಯ ಒಟ್ಟು ಜನಸಂಖ್ಯೆಯ ಸುಮಾರು ಆರರಿಂದ ಎಂಟು ಕೋಟಿ ಜನರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಏನಿದು ಸೆಲಿಯಾಕ್ ಕಾಯಿಲೆ?

ಏನಿದು ಸೆಲಿಯಾಕ್ ಕಾಯಿಲೆ?

ನಮ್ಮ ದೇಹದ ವ್ಯವಸ್ಥೆ ಕೆಲವು ಆಹಾರಗಳನ್ನು ನಿರಾಕರಿಸುತ್ತದೆ ಅಥವಾ ಪೂರ್ಣವಾಗಿ ಒಪ್ಪುವುದಿಲ್ಲ. ಕನ್ನಡದಲ್ಲಿ ನಾವು ಇದಕ್ಕೆ 'ಒಗ್ಗದ ಆಹಾರ' ಎನ್ನುತ್ತೇವೆ. ಒಂದು ವೇಳೆ ದೇಹ ಗ್ಲುಟೆನ್ ಇರುವ ಆಹಾರವನ್ನು ಒಗ್ಗಿಸಿಕೊಳ್ಳದೇ ಹೋದರೆ ಇದು ತೀವ್ರವಾದ ಸ್ವ-ರೋಗನಿರೋಧಕ ಅವ್ಯವಸ್ಥೆ (autoimmune disorder)ಎಂಬ ಸ್ಥಿತಿಗೆ ತಲುಪಿಸಬಹುದು. ಸುಲಭ ಪದಗಳಲ್ಲಿ ಹೇಳಬಹುದೆಂದರೆ ಗ್ಲುಟೆನ್ ಇರುವ ಅಹಾರವನ್ನು ಸೇವಿಸಿದಾಗ ಈ ಕಾಯಿಲೆ ಇರುವ ವ್ಯಕ್ತಿಗಳ ರೋಗ ನಿರೋಧಕ ವ್ಯವಸ್ಥೆ ಈ ಗ್ಲುಟೆನ್ ಅನ್ನು ಪರಕೀಯ ವಸ್ತುವೆಂದು ಪರಿಗಣಿಸಿ ಇವನ್ನು ಸದೆಬಡಿಯಲು ಕ್ರಮ ಕೈಗೊಳ್ಳುತ್ತದೆ. ಯಾವುದೇ ಬಡಿದಾಟವಾದಾಗ ಕಾಲ ಕೆಳಗಿನ ಹುಲ್ಲು ನಲುಗಿ ಹೋಗುವಂತೆ ಈ ಕ್ರಮದ ಪರಿಣಾಮವಾಗಿ ಸಣ್ಣ ಕರುಳಿನ ಒಳಭಾಗದ ಪದರಕ್ಕೇ ಹಾನಿ ಎಸಗುತ್ತದೆ. ಸಣ್ಣ ಕರುಳಿನ ಒಳಭಾಗದಲ್ಲಿ ಲಕ್ಷಾಂತರ ಅತಿ ಚಿಕ್ಕ ಬೆರಳಿನಂತಹ ಅಂಗಗಳಿವೆ. ವಿಲ್ಲೈ ಎಂದು ಕರೆಯುವ ಈ ಅಂಗಗಳು ಜೀರ್ಣಗೊಂಡ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವ ಜವಾಬ್ದಾರಿ ಹೊತ್ತಿರುತ್ತವೆ. ಘಾಸಿಗೊಂಡಿರುವ ವ್ಯಕ್ತಿಗಳಲ್ಲಿ ಈ ಸಾಮರ್ಥ್ಯ ಕುಗ್ಗುತ್ತದೆ ಹಾಗೂ ಪೂರ್ಣಪ್ರಮಾಣದಲ್ಲಿ ಆಹಾರದಿಂದ ಪೋಷಕಾಂಶಗಳನ್ನು ಪಡೆಯುವಲ್ಲಿ ಸೋಲುತ್ತವೆ. ಇದೇ ಸೆಲಿಯಾಕ್ ಕಾಯಿಲೆ

ಈ ಕಾಯಿಲೆಯ ಲಕ್ಷಣಗಳು ಯಾವುವು?

ಈ ಕಾಯಿಲೆಯ ಲಕ್ಷಣಗಳು ಯಾವುವು?

*ಈ ಲಕ್ಷಣಗಳು ಪ್ರತಿ ವ್ಯಕ್ತಿಗೂ ಭಿನ್ನವಾಗಿರುತ್ತವೆ. ಆದರೆ ಅತಿ ಸಾಮಾನ್ಯವಾಗಿ ಕಾಣಬರುವ ಲಕ್ಷಣಗಳೆಂದರೆ:

*ತೂಕದಲ್ಲಿ ಇಳಿತ

*ಸುಸ್ತು

*ಹೊಟ್ಟೆಯ ಭಾಗದಲ್ಲಿ ನೋವು

*ಅತಿಸಾರ

*ವಾಕರಿಕೆ

*ಮಲಬದ್ಧತೆ

*ವಾಂತಿ

*ಹೊಟ್ಟೆಯುಬ್ಬರಿಕೆ ಮತ್ತು ವಾಯುಪ್ರಕೋಪ

ಜೀರ್ಣವ್ಯವಸ್ಥೆಗೆ ಸಂಬಂಧಿಸಿತ ಇತರ ಲಕ್ಷಣಗಳೆಂದರೆ

ಜೀರ್ಣವ್ಯವಸ್ಥೆಗೆ ಸಂಬಂಧಿಸಿತ ಇತರ ಲಕ್ಷಣಗಳೆಂದರೆ

*ರಕ್ತದಲ್ಲಿ ಕಬ್ಬಿಣದ ಕೊರತೆ ಅಥವಾ ರಕ್ತಹೀನತೆ

*ಮೂಳೆಗಳ ಸಂಧುಗಳಲ್ಲಿ ನೋವು

*ಅನಿಯಮಿತ ಋತುಚಕ್ರ

*ಬಾಯಿಯಲ್ಲಿ ಹುಣ್ಣುಗಳು

*ತಲೆನೋವು ಮತ್ತು ಸುಸ್ತು

*ಎದೆಯುರಿ

*Dermatitis herpetiformis ಎಂಬ ಚರ್ಮವ್ಯಾಧಿ

ಈ ರೋಗ ಹೇಗೆ ಬಾಧಿಸುತ್ತದೆ?

ಈ ರೋಗ ಹೇಗೆ ಬಾಧಿಸುತ್ತದೆ?

ಈ ಕಾಯಿಲೆ ಎದುರಾದರೆ ನಿಮ್ಮಲ್ಲಿರುವ ಇತರ ಕಾಯಿಲೆಗಳು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಈ ಕಾಯಿಲೆಗಳಲ್ಲಿ ಪ್ರಮುಖವಾದವು ಎಂದರೆ:

ಕುಟುಂಬದಲ್ಲಿ ಅನುವಂಶಿಕವಾಗಿ ಬಂದಿರುವ ಸೆಲಿಯಾಕ್ ಕಾಯಿಲೆಯ ಇತಿಹಾಸ

*ಥೈರಾಯ್ಡ್

*ರ್‍ಹೂಮಟಾಯ್ಡ್ ಆರ್ಥ್ರೈಟಿಸ್ ಅಥವಾ ಸಂಧಿವಾತ

*ಮಧುಮೇಹ

*ಡೌನ್ ಸಿಂಡ್ರೋಮ್

ಈ ರೋಗದ ಪತ್ತೆ ಹೇಗೆ?

ಈ ರೋಗದ ಪತ್ತೆ ಹೇಗೆ?

ಈ ರೋಗದ ಲಕ್ಷಣಗಳನ್ನು ಅರಿಯುವುದು ಅಷ್ಟು ಸುಲಭವಲ್ಲ, ಹಾಗಾಗಿ ವೈದ್ಯರು ಅಗತ್ಯ ತಪಾಸಣೆಗಳನ್ನೂ ರೋಗಿಯ ಕುಟುಂಬದ ಇತಿಹಾಸವನ್ನೂ ಪರಿಶೀಲಿಸುತ್ತಾರೆ. ಕೆಲವು ಬಗೆಯ ರಕ್ತಪರೀಕ್ಷೆಗಳನ್ನೂ ನಡೆಸಬಹುದು. ರಕ್ತಕಣಗಳ ಸಂಖ್ಯೆ, ಯಕೃತ್ ನ ಕಾರ್ಯಕ್ಷಮತೆ, ಕೊಲೆಸ್ಟ್ರಾಲ್ ಮಟ್ಟ, ಕ್ಷಾರೀಯ-ಫಾಸ್ಪೇಟ್ ಮಟ್ಟದ ಪರೀಕ್ಷೆಗಳನ್ನೂ ನಡೆಸಬಹುದು.

ಚಿಕಿತ್ಸೆ ಹೇಗೆ?

ಚಿಕಿತ್ಸೆ ಹೇಗೆ?

ಈ ರೋಗಕ್ಕೆ ಶಾಶ್ವತ ಚಿಕಿತ್ಸೆ ಎಂದರೆ ಆಹಾರದಲ್ಲಿ ಗ್ಲುಟೆನ್ ಅನ್ನು ಶಾಶ್ವತವಾಗಿ ಇಲ್ಲವಾಗಿಸುವುದು. ಯಾವ ಆಹಾರದಲ್ಲಿ ಗ್ಲುಟೆನ್ ಇದೆ ಮತ್ತು ಇಲ್ಲ ಎಂಬುದನ್ನು ತಿಳಿದುಕೊಳ್ಳಲು ವೈದ್ಯರ ನೆರವು ಮತ್ತು ಸಲಹೆಯನ್ನು ಪಡೆಯಬಹುದು. ಯಾವಾಗ ನಿಮ್ಮ ಆಹಾರದಲ್ಲಿ ಗ್ಲುಟೆನ್ ಇಲ್ಲವಾಗುತ್ತದೆಯೋ ಆ ದಿನದಿಂದ ನಿಮ್ಮ ಆರೋಗ್ಯವೂ ಸುಧಾರಣೆಯಾಗುತ್ತಾ ಹೋಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಬಹುತೇಕ ಆಹಾರಗಳು ಮೈದಾ ಮತ್ತು ಗೋಧಿಹಿಟ್ಟಿನಿಂದ ತಯಾರಿಸಲಾಗಿದ್ದು ಇವುಗಳಿಲ್ಲದ ಆಹಾರ ಕಡಿಮೆ ಆಯ್ಕೆಯಲ್ಲಿ ಮಾತ್ರ ಲಭ್ಯವಿರುವ ಕಾರಣ ನೀವು ಈ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಗ್ಲುಟೆನ್ ಇರುವ ಸಾಮಾನ್ಯ ಆಹಾರಗಳಾದ ಬ್ರೆಡ್, ಓಟ್ಸ್, ಪಾಸ್ತಾ, ಕುಕ್ಕೀಸ್, ಒಣಫಲಗಳು, ಸಾಗರ ಉತ್ಪನ್ನಗಳು ಮೊದಲಾದವುಗಳನ್ನು ಅನಿವಾರ್ಯವಾಗಿ

ತ್ಯಜಿಸಬೇಕಾಗುತ್ತದೆ. ಈ ವ್ಯಕ್ತಿಗಳಿಗೆ ಸೂಕ್ತವಾದ ಗ್ಲುಟೆನ್ ರಹಿತ ಆಹಾರಗಳೆಂದರೆ ಡೈರಿ ಉತ್ಪನ್ನಗಳು, ಬಟಾಣಿ, ಆಲುಗಡ್ಡೆ, ಮೆಕ್ಕೆಜೋಳ, ಕಂದು ಅಕ್ಕಿ, ಬೀನ್ಸ್, ದ್ವಿದಳಧಾನ್ಯಗಳು ಮತ್ತು ತಾಜಾ ಹಣ್ಣುಗಳಾಗಿವೆ.

English summary

Celiac Disease: Things you need to Know

Staying gluten-free for some is just a part of a fad but for some, it is a necessity. People suffering from celiac disease are intolerant to gluten. It leads to some digestive problems, and in severe cases, it may even lead to some cancers. Here is all you need to know about celiac disease. In India, approximately 60 to 80 million people are estimated to be suffering from the disease.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X