For Quick Alerts
ALLOW NOTIFICATIONS  
For Daily Alerts

ಕ್ಯಾರೆಟ್ ಕೇವಲ ಹಲ್ವಕ್ಕೆ ಮಾತ್ರ ಫೇಮಸ್ ಅಲ್ಲ-ಕ್ಯಾನ್ಸರ್ ರೋಗ ನಿಯಂತ್ರಿಸುವ ಶಕ್ತಿ ಇದರಲ್ಲಿದೆ!

|

ನೈಸರ್ಗಿಕವಾಗಿ ಸಿಹಿಯಾಗಿರುವ, ಜಗಿಯುವಾಗ ಕುರುಕು ಶಬ್ದ ಬರುವ ಹಾಗೂ ನೋಡಲೂ ಕೇಸರಿ ಬಣ್ಣ ಹೊಂದಿರುವ ಕ್ಯಾರೆಟ್ಟುಗಳು ಯಾರಿಗೆ ಇಷ್ಟವಿಲ್ಲ? ರಸಭರಿತ ಹಾಗೂ ತಾಜಾ ಕ್ಯಾರೆಟ್ಟುಗಳನ್ನು ಹಸಿಯಾಗಿಯೂ ಬೇಯಿಸಿ ತಯಾರಿಸಿದ ಖಾದ್ಯಗಳನ್ನೂ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಇವುಗಳ ಸಿಹಿ ಹಾಗೂ ಪೌಷ್ಟಿಕಾಂಶಗಳಿಂದಾಗಿ ಇದನ್ನೊಂದು ಅಪ್ಪಟ ಆರೋಗ್ಯಕರ ಆಹಾರವೆಂದು ಕರೆಯಬಹುದು. ಸಾಮಾನ್ಯ ಮರಳುಮಿಶ್ರಿತ ಮಣ್ಣಿನಲ್ಲಿ ಹೆಚ್ಚಿನ ಆರೈಕೆ ಬೇಡದೇ ಬೆಳೆಯುವ ಕ್ಯಾರೆಟ್ಟುಗಳನ್ನು ವಿಶ್ವದಾದ್ಯಂತ ಎಲ್ಲೆಡೆ ಬೆಳೆಯಲಾಗುತ್ತದೆ.

ಚಳಿಗಾಲದಲ್ಲಂತೂ ಇದಕ್ಕೆ ಹೆಚ್ಚಿನ ಬೇಡಿಕೆ. ಗಿರಿಧಾಮ ಊಟಿಗೆ ಆಗಮಿಸಿದ ತಕ್ಷಣ ಅಲ್ಲಿನವರು ಪ್ರವಾಸಿಗರನ್ನು ಸ್ವಾಗತಿಸುವುದೇ ಕ್ಯಾರೆಟ್ಟುಗಳನ್ನು ನೀಡುವ ಮೂಲಕ! ಮನೆ ಮನೆಯಲ್ಲಿಯೂ ತಯಾರಾಗುವ ಕ್ಯಾರೆಟ್ಟಿನ ಹಲ್ವಾಕ್ಕೆ ಮನೆಯ ಎಲ್ಲಾ ಸದಸ್ಯರಿಂದ ಬೇಡಿಕೆ ಬರುತ್ತದೆ! ಕನ್ನಡದಲ್ಲಿ ಗಜ್ಜರಿ ಎಂದು ಕರೆಯಲಾಗುವ ಈ ಸುಂದರ ಕ್ಯಾರೆಟ್ ರುಚಿಕರ ಮಾತ್ರವಲ್ಲ, ಬೀಟಾ ಕ್ಯಾರೋಟೀನ್, ವಿಟಮಿನ್ ಎ, ವಿವಿಧ ಖನಿಜಗಳು ಹಾಗೂ ಆಂಟಿ ಆಕ್ಸಿಡೆಂಟುಗಳು ಇದನ್ನೊಂದು ಆರೋಗ್ಯಕರ ಅಹಾರವನ್ನಾಗಿಸಿವೆ. ಇವುಗಳ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುವುದು ಮಾತ್ರವಲ್ಲ, ಕಣ್ಣುಗಳ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಅಲ್ಲದೇ ಇದರಲ್ಲಿರುವ ಕ್ಯಾರೋಟೀನ್ ಎಂಬ ಆಂಟಿ ಆಕ್ಸಿಡೆಂಟು ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಅಧ್ಯಾಯನದ ಪ್ರಕಾರ ಕಡು ಕಿತ್ತಳೆ ಬಣ್ಣ ಹೊಂದಿರುವಂತಹ ಕ್ಯಾರೆಟ್‌ ಕಣ್ಣಿನ ಕ್ಯಾನ್ಸರ್ ನ್ನು ಬರದಂತೆ ತಡೆಯಬಹುದು ಎಂದು ಹೇಳಲಾಗುತ್ತದೆ. ಇದನ್ನು ಇಲಿಗಳ ಮೇಲೆ ಪ್ರಯೋಗ ಮಾಡಲಾಗಿದೆ. ಆದರೆ ನಿಜ ಜೀವನದ ಅನುಭವ ತುಂಬಾ ಭಿನ್ನವಾಗಿರುವುದು. ಬನ್ನಿ ಇದರ ಇನ್ನಷ್ಟು ಪ್ರಯೋಜನಗಳ ಬಗ್ಗೆ ಮುಂದೆ ಓದಿ...

ಕ್ಯಾರೆಟ್ ಮತ್ತು ಅದರ ಕ್ಯಾನ್ಸರ್ ನಿವಾರಿಸುವ ಸಾಮರ್ಥ್ಯ

ಕ್ಯಾರೆಟ್ ಮತ್ತು ಅದರ ಕ್ಯಾನ್ಸರ್ ನಿವಾರಿಸುವ ಸಾಮರ್ಥ್ಯ

ತರಕಾರಿ ಮತ್ತು ಹಣ್ಣುಗಳ ಮೇಲೆ ನಡೆಸಿರುವಂತಹ ಹಲವಾರು ಅಧ್ಯಯನಗಳು ಕಂಡುಕೊಂಡಿರುವಂತಹ ವಿಚಾರವೆಂದರೆ ಕ್ಯಾರೆಟ್ ನಲ್ಲಿ ಇರುವಂತಹ ಅಗಾಧ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್ ನಿಂದಾಗಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಕ್ಯಾನ್ಸರ್ ನ ಅಪಾಯ ಕಡಿಮೆ ಮಾಡಬಹುದು. ಕ್ಯಾರೆಟ್ ನಲ್ಲಿ ಆ್ಯಂಟಿಆಕ್ಸಿಡೆಂಟ್ ನ ಯಾವುದೇ ಕೊರತೆಯಿಲ್ಲ. ಈ ಆ್ಯಂಟಿಆಕ್ಸಿಡೆಂಟ್ ಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಕ್ಯಾರೆಟ್ ನಿಂದ ಕ್ಯಾನ್ಸರ್ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು ಎಂದು ತಿಳಿಯಿರಿ.

ಶ್ವಾಸಕೋಶ ಕ್ಯಾನ್ಸರ್

ಶ್ವಾಸಕೋಶ ಕ್ಯಾನ್ಸರ್

ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯ ನೋವು ಹಾಗೂ ಯಾತನೆ ಯಾರಿಗೂ ಬೇಡ. ಶತ್ರುವಿಗೂ ಕೂಡ ಇಂತಹ ನೋವು ಬರುವುದು ಬೇಡವೆಂದು ಇದನ್ನು ಅನುಭವಿಸಿದವರು ಹೇಳುವುದುಂಟು. ಕ್ಯಾನ್ಸರ್ ನಲ್ಲಿ ಹಲವಾರು ವಿಧದ ಕ್ಯಾನ್ಸರ್‌ಗಳಿವೆ. ಇದರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ಕೂಡ ಬಲು ಖತರ್ನಾಕ್ ಕಾಯಿಲೆ. ಶೇಕಡಾ 250ರಷ್ಟು ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇರುವುದು ಧೂಮಪಾನದಿಂದಾಗಿ. ನೀವು ಧೂಮಪಾನ ಮಾಡುತ್ತಾ ಇದ್ದರೆ ಶ್ವಾಸಕೋಶದ ಕ್ಯಾನ್ಸರ್‌ನ ಅಪಾಯ ಹೆಚ್ಚು. ಧೂಮಪಾನಿಗಳ ಮೇಲೆ ನಡೆಸಿರುವಂತಹ ಅಧ್ಯಯನಗಳ ಪ್ರಕಾರ ಪ್ರತಿನಿತ್ಯ ತಮ್ಮ ಆಹಾರ ಕ್ರಮದಲ್ಲಿ ಕ್ಯಾರೆಟ್ ನ್ನು ಸೇವನೆ ಮಾಡುವಂತಹ ವ್ಯಕ್ತಿಗಳಲ್ಲಿ ಸೇ. 33ರಷ್ಟು ಶ್ವಾಸಕೋಶದ ಕ್ಯಾನ್ಸರ್ ಬರುವಂತಹ ಸಾಧ್ಯತೆಯು ಕಡಿಮೆ ಇರುವುದು.

Most Read: ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು

ಕರುಳಿನ ಕ್ಯಾನ್ಸರ್

ಕರುಳಿನ ಕ್ಯಾನ್ಸರ್

ಜಪಾನಲ್ಲಿನ ಜನರ ಮೇಲೆ ನಡೆಸಿರುವಂತಹ ಅಧ್ಯಯನಗಳ ಪ್ರಕಾರ ಕ್ಯಾರೆಟ್ ನಲ್ಲಿ ಇರುವಂತಹ ಬೆಟಾ ಕ್ಯಾರೋಟಿನ್ ಅಂಶವು ಜನರಲ್ಲಿ ಕರುಳಿನ ಕ್ಯಾನ್ಸರ್ ನ್ನು ಕಡಿಮೆ ಮಾಡುವುದು. ಇನ್ನೊಂದು ಅಧ್ಯಾಯನದ ಪ್ರಕಾರ ಹೆಚ್ಚು ಹೆಚ್ಚು ಇಡಿಯ ಧಾನ್ಯದ ಆಹಾರಗಳನ್ನು ಸೇವಿಸುವ ಮೂಲಕ ಗರಿಷ್ಟ ರಕ್ಷಣೆಯನ್ನು ಪಡೆಯಬಹುದು. ಈ ಸಂಶೋಧಕರು 25,000 ಜನ ಕರುಳಿನ ಕ್ಯಾನ್ಸರ್ ಪೀಡಿತ ವ್ಯಕ್ತಿಗಳ ಸಹಿತ ಸುಮಾರು ಮೂರು ಕೋಟಿಯಷ್ಟು ಜನರ ಆಹಾರಕ್ರಮಗಳನ್ನು ಅಭ್ಯಸಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಇವರ ಪ್ರಕಾರ ಯಾವುದೇ ವ್ಯಕ್ತಿ ಒಂದು ವಾರದ ಅವಧಿಯಲ್ಲಿ ಐನೂರು ಗ್ರಾಂ ಗಿಂತ ಹೆಚ್ಚಿನ ಪ್ರಮಾಣದ ಸಂಸ್ಕರಿತ ಮಾಂಸಾಹಾರವನ್ನು ಸೇವಿಸಕೂಡದು.

Most Read: ಕರುಳಿನ ಕ್ಯಾನ್ಸರ್ ಬಗ್ಗೆ ತಿಳಿಯಲೇ ಬೇಕಾದ ಹತ್ತು ಸಂಗತಿಗಳು

ಲುಕೇಮಿಯಾ(ರಕ್ತ ಕ್ಯಾನ್ಸರ್)

ಲುಕೇಮಿಯಾ(ರಕ್ತ ಕ್ಯಾನ್ಸರ್)

2011ರಲ್ಲಿ ನಡೆಸಿರುವ ಅಧ್ಯಯನವೊಂದರ ಪ್ರಕಾರ ಲುಕೇಮಿಯಾ ಇರುವಂತಹ ಜನರಲ್ಲಿ ಕ್ಯಾರೆಟ್ ಜ್ಯೂಸ್ ನಿಂದ ಕ್ಯಾನ್ಸರ್ ಕೋಶಗಳನ್ನು ತೆಗೆದುಹಾಕಬಹುದು ಮತ್ತು ಅದು ಸ್ಥಾನಾಂತರ ಆಗುವುದನ್ನು ತಡೆಯಬಹುದು ಎಂದು ಕಂಡುಕೊಳ್ಳಲಾಗಿದೆ.

ಪ್ರೊಸ್ಟೇಟ್ ಕ್ಯಾನ್ಸರ್

ಪ್ರೊಸ್ಟೇಟ್ ಕ್ಯಾನ್ಸರ್

ಒಂದಾನೊಂದು ಕಾಲದಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ "ಮುದುಕರ ಕಾಯಿಲೆ" ಯಾಗಿ ಹೆಸರಾಗಿತ್ತು. ಆದರೆ ಇಂದು ಇದು ಯುವಕರಲ್ಲಿಯು ಸಹ ಕಂಡು ಬರುತ್ತಿದೆ. ಅದರಲ್ಲೂ ಅಮೆರಿಕಾದಲ್ಲಿ ಈ ಕಾಯಿಲೆ ಇಂದು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದ್ದೆ. ಹಾರ್ವಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಡಿಪಾರ್ಟ್ ಮೆಂಟ್ ನಡೆಸಿರುವಂತಹ ಪ್ರೊಸ್ಟೇಟ್ ಕ್ಯಾನ್ಸರ್ ಮೇಲಿನ ಅಧ್ಯಯನದ ಪ್ರಕಾರ ಬೆಟಾ ಕ್ಯಾರೋಟಿನ್ ಇರುವಂತಹ ಆಹಾರವನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವ ವ್ಯಕ್ತಿಗಳಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆಯು ಕಡಿಮೆ ಇರುವುದು.

ಅಧ್ಯಯನಗಳು

ಅಧ್ಯಯನಗಳು

ಮೂಶಿಕದ ಮೇಲೆ ನಡೆಸಿರುವಂತಹ ಕೆಲವೊಂದು ಅಧ್ಯಯನಗಳಿಂದ ಈ ಗಡ್ಡೆ ತರಕಾರಿಯು ಕ್ಯಾನ್ಸರ್ ವಿರೋಧಿ ಅಂಶಗಳನ್ನು ಹೊಂದಿದೆ ಎಂದು ಪತ್ತೆಯಾಗಿದೆ. ಪ್ರಯೋಗಾಲ ಯದಲ್ಲಿ ಇಲಿಗಳಿಗೆ ಕ್ಯಾನ್ಸರ್ ಕೋಶಗಳನ್ನು ಚುಚ್ಚಿದ ಬಳಿಕ ಅವುಗಳಿಗೆ ಕ್ಯಾರೆಟ್ ನ್ನು ತಿನ್ನಲು ನೀಡಲಾಗಿತ್ತು. ಕ್ಯಾರೆಟ್ ನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಫಾಲಕ್ಯಾರಿನೊಲ್ ನ್ನು ಇವುಗಳಿಗೆ ನೀಡಲಾಯಿತು. ಒಂದು ನಿಗದಿತ ಸಮಯದ ಬಳಿಕ ಇಲಿಗಳನ್ನು ಪರೀಕ್ಷೆ ಮಾಡಿದಾಗ 3/2 ಭಾಗದಷ್ಟು ಮಾತ್ರ ಕ್ಯಾನ್ಸರ್ ಕೋಶಗಳು ಅವುಗಳ ದೇಹದಲ್ಲಿ ಇದ್ದವು. ಇಲಿ ಮತ್ತು ಮಾನವನ ಶರೀರವು ಗಮನೀಯವಾಗಿ ಬದಲಾಗುವುದು. ಇದರಿಂದಾಗಿ ಕ್ಯಾನ್ಸರ್ ನಿಂದ ಬಳಲುವಂತಹವರಿಗೆ ಒಂದು ಆಶಾಕಿರಣವು ಉಳಿದುಕೊಂಡಿದೆ. ಸ್ತನ ಕ್ಯಾನ್ಸರ್ ನಿಂದ ಬದುಕುಳಿದವರ ಮೇಲೆ ನಡೆಸಿರುವಂತಹ ಇನ್ನೊಂದು ಅಧ್ಯಯನದ ಪ್ರಕಾರ ನಿಯಮಿತವಾಗಿ ಕ್ಯಾರೆಟ್ ಜ್ಯೂಸ್ ಕುಡಿಯುವ ಕಾರಣದಿಂದಾಗಿ ಅವರ ರಕ್ತದಲ್ಲಿ ಕ್ಯಾರೊಟೆನಾಯ್ಡ್ ಅಂಶವು ಗಣನೀಯ ಪ್ರಮಾಣದಲ್ಲಿ ಸುಧಾರಣೆಯಾಗಿದೆ. ರಕ್ತದಲ್ಲಿ ಕ್ಯಾರೊಟೆನಾಯ್ಡ್ ಅಂಶವು ಹೆಚ್ಚಾಗಿದ್ದರೆ ಆಗ ವ್ಯಕ್ತಿಯನ್ನು ಅದು ಕ್ಯಾನ್ಸರ್ ನ ದಾಳಿಯಿಂದ ತಪ್ಪಿಸುವುದು.

ಬೆಟಾ ಕ್ಯಾರೋಟಿನ್

ಬೆಟಾ ಕ್ಯಾರೋಟಿನ್

ಝೀಕ್ಸಾಂಥಿನ್ ಮತ್ತು ಲುಟೇನ್ ನ ಸಂಶ್ಲೇಷಣೆ ಮಾಡಲು ಅಗತ್ಯವಾಗಿದೆ. ಆ್ಯಂಟಿಆಕ್ಸಿಡೆಂಟ್ ಗಳಿಂದ ಅಧಿಕವಾಗಿರುವ ಆಹಾರ ಸೇವನೆ ಮಾಡುವ ಕಾರಣದಿಂದ ಫ್ರೀ ರ್ಯಾಡಿಕಲ್ ನ್ನು ತಡೆಯುವುದು ಮಾತ್ರವಲ್ಲದೆ, ಕೋಶಗಳಿಗೆ ಹಾನಿಯಾಗುವುದನ್ನು ತಡೆದು ಕ್ಯಾನ್ಸರ್ ಬರುವ ಸಾಧ್ಯತೆಯನ್ನು ತಡೆಯಬಹುದು ಎಂದು ಅಧ್ಯಯನಗಳು ಹೇಳಿವೆ.

Most Read: ನಾಲಿಗೆಯ ಕ್ಯಾನ್ಸರ್-ನೀವು ತಿಳಿಯಲೇ ಬೇಕಾದ ಸಂಗತಿಗಳು

ಕ್ಯಾನ್ಸರ್ ಚಿಕಿತ್ಸೆಗೆ

ಕ್ಯಾನ್ಸರ್ ಚಿಕಿತ್ಸೆಗೆ

ಕ್ಯಾನ್ಸರ್ ಚಿಕಿತ್ಸೆಗೆ(ಸಾವಯವ ಕ್ಯಾರೆಟ್ ನ ತಾಜಾ ಜ್ಯೂಸ್ ಮತ್ತು ಸೇಬಿನ ಜ್ಯೂಸ್ ನ್ನು ಉತ್ತಮ ಪ್ರಮಾಣದಲ್ಲಿ ಬೆರೆಸಿಕೊಳ್ಳಿ) ಮನುಷ್ಯರ ರಕ್ತದೊಂದಿಗೆ ಕ್ಯಾರೆಟ್ ಜ್ಯೂಸ್ ಆಣ್ವಿಕ ಸಾಮಾನ್ಯತೆ ಹೊಂದಿದೆ ಎಂದು ಹೇಳಲಾಗಿದೆ. ಆದರೆ ಇದು ಸಾಬೀತು ಆಗಿಲ್ಲ. ಇದರಿಂದ ವೈದ್ಯಕೀಯ ಲೋಕವು ಪ್ರಯೋಗದಲ್ಲಿ ಈಗಲೂ ತೊಡಗಿಕೊಂಡಿದೆ. ಆದರೆ ನೀವು ಕ್ಯಾರೆಟ್ ತಿಂದು ಆರೋಗ್ಯ ಕಾಪಾಡಿಕೊಳ್ಳಿ.

English summary

Carrots That Could Lower Your Risk of Cancer!

Carrots are high in Vitamin A. Some studies show that vitamin A helps protect against cancer. Carrots also contain antioxidants called carotenoids. This family of antioxidants also plays a role in cancer prevention. The orange pigment in carrots contains the carotenoids.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X