For Quick Alerts
ALLOW NOTIFICATIONS  
For Daily Alerts

ಕಪ್ಪು ದ್ರಾಕ್ಷಿಯಲ್ಲಿರುವ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳು

|

ನೋಡಲು ಚಿಕ್ಕ ಚಿಕ್ಕ ಹಣ್ಣುಗಳಾದರೂ ರುಚಿಯಲ್ಲಿ ಅದ್ಭುತವನ್ನು ಹೊಂದಿರುವ ಹಣ್ಣು ದ್ರಾಕ್ಷಿ. ಮಕ್ಕಳಿಂದ ಹಿಡಿದು ವೃದ್ಧರಿಗೂ ಇಷ್ಟವಾಗುವ ಹಣ್ಣು ಇದು. ಇದರ ಗಾತ್ರ ಚಿಕ್ಕದಾದರೂ ಸಮೃದ್ಧವಾದ ಪೋಷಕಾಂಶ ಹಾಗೂ ವಿಟಮಿನ್‍ಗಳಿವೆ. ಹಾಗಾಗಿ ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರಲ್ಲಿ ವಿಟಮಿನ್ ಎ, ಸಿ ಮತ್ತು ಬಿ6 ಮತ್ತು ಹಲವಾರು ಜೀವಸತ್ವಗಳ ಮೂಲವೂ ಹೌದು.

ಸಾಮಾನ್ಯವಾಗಿ ಹುಳಿಮಿಶ್ರಿತ ಸಿಹಿತಿರುಳನ್ನು ಹೊಂದಿರುವ ಕಪ್ಪು ದ್ರಾಕ್ಷಿಯನ್ನು ಹಸಿಯಾಗಿಯೂ, ಒಣಗಿಸಿ ಒಣದ್ರಾಕ್ಷಿಯ ರೂಪದಲ್ಲಿಯೂ, ಮಿಕ್ಸಿಯಲ್ಲಿ ಗೊಟಾಯಿಸಿ ಜ್ಯೂಸ್ ರೂಪದಲ್ಲಿಯೂ ಸೇವಿಸಬಹುದು. ಹಸಿರು ದ್ರಾಕ್ಷಿ ಮತ್ತು ಕಪ್ಪು ದ್ರಾಕ್ಷಿಗಳು ಬಣ್ಣದಲ್ಲಿ ಭಿನ್ನವೇ ಹೊರತು ಇದರ ಪೋಷಕಾಂಶಗಳು ಹೆಚ್ಚೂ ಕಡಿಮೆ ಒಂದೇ ಆಗಿವೆ. ಆದರೆ ಕಪ್ಪು ದ್ರಾಕ್ಷಿಯ ಬಣ್ಣವೇ ಇದನ್ನು ಹೆಚ್ಚು ಆಕರ್ಷಕವಾಗಿಸಿದೆ. ಬನ್ನಿ ಇಂದಿನ ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು ಕಪ್ಪು ದ್ರಾಕ್ಷಿಯ ಆರೋಗ್ಯ ಲಾಭಗಳು.

ಇದು ನಮ್ಮ ಆರೋಗ್ಯ, ಚರ್ಮ ಮತ್ತು ಕೂದಲಿಗೆ ತುಂಬಾ ಲಾಭಕಾರಿಯಾಗಿರುವುದು. ಇಂದಿನ ದಿನಗಳಲ್ಲಿ ದ್ರಾಕ್ಷಿಯನ್ನು ವಿಶ್ವದೆಲ್ಲೆಡೆಯಲ್ಲಿ ವೈನ್ ತಯಾರಿಕೆಗಾಗಿ ಬಳಸುತ್ತಾರೆ. ಈ ಹುಳಿಹಾಗೂ ಸಿಹಿಯಾಗಿರುವ ಹಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದನ್ನು ನೇರವಾಗಿ ಸೇವನೆ ಮಾಡಬಹದು ಅಥವಾ ಸಲಾಡ್ ರೂಪದಲ್ಲೂ ಸೇವಿಸಬಹುದು. ಕಪ್ಪು ದ್ರಾಕ್ಷಿಯನ್ನು ವಿವಿಧ ರೀತಿಯ ಖಾದ್ಯ ಮತ್ತು ಸಾಸ್ ಗಳಲ್ಲೂ ಬಳಕೆ ಮಾಡಲಾಗುತ್ತದೆ. ಕಪ್ಪು ದ್ರಾಕ್ಷಿಯಿಂದ ಸಿಗುವಂತಹ ಲಾಭಗಳು ಏನು ಎಂದು ತಿಳಿಯಲು ನೀವು ಮುಂದೆ ಓದುತ್ತಾ ಸಾಗಿ....

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು

ಮಧುಮೇಹ ನಿವಾರಣೆಗೆ ಕಪ್ಪು ದ್ರಾಕ್ಷಿಯು ತುಂಬಾ ಒಳ್ಳೆಯದು ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿವೆ. ರೆಸ್ವೆರಾಟ್ರೊಲ್ ಎನ್ನುವ ಅಂಶವು ಕಪ್ಪು ದ್ರಾಕ್ಷಿಯಲ್ಲಿದ್ದು, ಇದು ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುವುದು ಮತ್ತು ಇನ್ಸುಲಿನ್ ಸೂಕ್ಷ್ಮತೆ ಕೂಡ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ಮಟ್ಟವು ಸುಧಾರಣೆ ಮತ್ತು ನಿಯಂತ್ರಣದಲ್ಲಿ ಇರುವುದು. ರಕ್ತದ ಸಕ್ಕರೆ ಮಟ್ಟವು ಕಪ್ಪು ದ್ರಾಕ್ಷಿಯಿಂದ ಪಡೆಯುವಂತಹ ಲಾಭಗಳು ಸಂಪೂರ್ಣವಾಗಿ ಅದರ ಡಿಮೆ ಗ್ಲೈಸೆಮಿಕ್ ಸೂಚ್ಯಂಕ (ಜಿಐ) ಮೌಲ್ಯಕ್ಕೆ ಸಂಬಂಧಿಸಿದ್ದಾಗಿದೆ. ಈ ದ್ರಾಕ್ಷಿಗಳು ರಕ್ತ ಸಂಚಾರವನ್ನು ಸುಗಮಗೊಳಿಸಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ.

Most Read:ಕ್ಯಾರೆಟ್ ಕೇವಲ ಹಲ್ವಕ್ಕೆ ಮಾತ್ರ ಫೇಮಸ್ ಅಲ್ಲ-ಕ್ಯಾನ್ಸರ್ ರೋಗ ನಿಯಂತ್ರಿಸುವ ಶಕ್ತಿ ಇದರಲ್ಲಿದೆ!

ಮೆದುಳಿನ ಕಾರ್ಯ ಸುಧಾರಿಸುವುದು

ಮೆದುಳಿನ ಕಾರ್ಯ ಸುಧಾರಿಸುವುದು

ನಿಯಮಿತವಾಗಿ ಕಪ್ಪು ದ್ರಾಕ್ಷಿ ಸೇವನೆ ಮಾಡಿದರೆ ಅದರಿಂದ ಏಕಾಗ್ರತೆ, ನೆನಪಿನ ಶಕ್ತಿ ಮತ್ತು ಮೌಖಿಕ ಮತ್ತು ಪ್ರಾದೇಶಿಕ ನೆನಪುಗಳು ಇರುವುದು. ಕಪ್ಪು ದ್ರಾಕ್ಷಿಯಲ್ಲಿ ಇರುವಂತಹ ಪಾಲಿಫೆನಾಲ್ ಗಳು ಮೈಗ್ರೇನ್, ಬುದ್ಧಿಮಾಂದ್ಯತೆ ಮತ್ತು ಅಲ್ಝೈಮರ್ ನ್ನು ನಿವಾರಣೆ ಮಾಡುವುದು.

ಹೃದಯದ ಆರೋಗ್ಯ ಸುಧಾರಿಸುವುದು

ಹೃದಯದ ಆರೋಗ್ಯ ಸುಧಾರಿಸುವುದು

ಕಪ್ಪು ದ್ರಾಕ್ಷಿಯಲ್ಲಿ ಇರುವಂತಹ ಫೈಥೋಕೆಮಿಕಲ್ ಗಳು ಹೃದಯದ ಸ್ನಾಯುಗಳಿಗೆ ಆಗುವಂತಹ ಹಾನಿಯನ್ನು ಕಡಿಮೆ ಮಾಡುವುದು ಮತ್ತು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದು ಹಾಗೂ ನಿಯಂತ್ರಣದಲ್ಲಿ ಇಡುವುದು. ಇದರಿಂದಾಗಿ ಹೃದಯಾಘಾತ ತಡೆಯುವುದು ಮತ್ತು ಇತರ ಕೆಲವೊಂದು ಹೃದಯದ ಕಾಯಿಲೆಗಳು ಕೂಡ ದೂರವಾಗುವುದು.

ಕ್ಯಾನ್ಸರ್ ತಡೆಯುವುದು

ಕ್ಯಾನ್ಸರ್ ತಡೆಯುವುದು

ಕಪ್ಪು ದ್ರಾಕ್ಷಿ ಸೇವನೆ ಮಾಡುವುದರಿಂದ ಕೆಲವೊಂದು ಮಾರಕ ಕ್ಯಾನ್ಸರ್ ಗಳಾಗಿರುವಂತಹ ಚರ್ಮದ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್, ಪ್ರೊಸ್ಟೇಟ್ ಕ್ಯಾನ್ಸರ್, ಸ್ತನ, ಶ್ವಾಸಕೋಶ ಮತ್ತು ಪಿತ್ತಕೋಶದ ಕ್ಯಾನ್ಸರ್ ಬರದಂತೆ ತಡೆಯುವುದು.

ತೂಕ ಇಳಿಸಲು ಸಹಕಾರಿ

ತೂಕ ಇಳಿಸಲು ಸಹಕಾರಿ

ಕಪ್ಪು ದ್ರಾಕ್ಷಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ದೇಹದಲ್ಲಿ ಇರುವಂತಹ ಅನಗತ್ಯ ವಿಷಕಾರಿ ಅಂಶಗಳನ್ನು ತೆಗೆದುಹಾಕುವುದು ಮತ್ತು ಇದರಿಂದ ದೇಹದ ತೂಕ ಇಳಿಸಲು ಸಹಕಾರಿಯಾಗುವುದು.

Most Read:ಇದು ಸರಳ ಶೀತ ಎಂದು ನಿರ್ಲಕ್ಷಿಸಬೇಡಿ! ಇದರಿಂದ ಸೈನಸ್ ಸೋಂಕು ಬರಬಹುದು!!

ಸೋಂಕು ಮತ್ತು ಉರಿಯೂತ ವಿರುದ್ಧ ರಕ್ಷಣೆ ನೀಡುವುದು

ಸೋಂಕು ಮತ್ತು ಉರಿಯೂತ ವಿರುದ್ಧ ರಕ್ಷಣೆ ನೀಡುವುದು

ಕಪ್ಪು ದ್ರಾಕ್ಷಿಯಲ್ಲಿ ಇರುವಂತಹ ರೆಸ್ವೆರಾಟ್ರೊಲ್ ಎನ್ನುವ ಅಂಶವು ಅದ್ಭುತವಾದ ಬ್ಯಾಕ್ಟೀರಿಯಾ ಹಾಗೂ ಶಿಲಿಂಧ್ರ ವಿರೋಧಿ ಗುಣವನ್ನು ಹೊಂದಿದೆ. ಇದರಿಂದ ಇದು ರೋಗಕಾರಕ ಸೋಂಕು ಮತ್ತು ಉರಿಯೂತವನ್ನು ತಡೆಯುವುದು. ಇದರಲ್ಲಿ ವೈರಲ್ ವಿರೋಧಿ ಗುಣಗಳು ಕೂಡ ಇರುವ ಕಾರಣದಿಂದಾಗಿ ಕೆಲವೊಂದು ಮಾರಕ ಕಾಯಿಲೆಗಳಾಗಿರುವ ಪೋಲಿಯೋ ಮತ್ತು ಹಾರ್ಪಿಸ್ ನ್ನು ತಡೆಯುವುದು. ಶ್ವಾಸಕೋಶದಲ್ಲಿ ಮೊಶ್ಚಿರೈಸ್ ನ್ನು ಹೆಚ್ಚು ಮಾಡುವ ತನಕ ಇದು ಅಸ್ತಮಾ ನಿವಾರಣೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುವುದು.

ಮಲಬದ್ಧತೆ, ಅಜೀರ್ಣ ಮತ್ತು ಕಿಡ್ನಿ ಸಮಸ್ಯೆಗಳ ನಿವಾರಣೆ

ಮಲಬದ್ಧತೆ, ಅಜೀರ್ಣ ಮತ್ತು ಕಿಡ್ನಿ ಸಮಸ್ಯೆಗಳ ನಿವಾರಣೆ

ದ್ರಾಕ್ಷಿಯಲ್ಲಿ ಹೆಚ್ಚಿನ ಮಟ್ಟದ ಸಕ್ಕರೆ, ಸಾವಯವ ಆಮ್ಲ ಮತ್ತು ಪಾಲಿಯೋಸ್ ಗಳು ಇರುವ ಕಾರಣದಿಂದಾಗಿ ಇದು ಮೃಧು ವಿರೇಚಕವಾಗಿ ಕೆಲಸ ಮಾಡಿ ಮಲಬದ್ಧತೆ ನಿವಾರಣೆ ಮಾಡುವುದು. ಇದು ಅಜೀರ್ಣ ಮತ್ತು ಹೊಟ್ಟೆಯಲ್ಲಿನ ಕಿರಿಕಿರಿ ನಿವಾರಣೆ ಮಾಡುವುದು ಮತ್ತು ಅಗ್ನಿಮಾಂದ್ಯವನ್ನು ತಡೆಯುವುದು. ಯುರಿಕ್ ಆಮ್ಲದಿಂದ ಉಂಟಾಗಿರುವಂತಹ ಅಸಿಡಿಟಿ ನಿವಾರಣೆ ಮಾಡುವ ಪರಿಣಾಮವಾಗಿ ಕಿಡ್ನಿ ಮೇಲೆ ಬೀಳುವಂತಹ ಒತ್ತಡದ ಪ್ರಮಾಣ ತಗ್ಗಿಸುವುದು.

Most Read:ಬಟಾಣಿ ಕಾಳಿನ ಆರೋಗ್ಯ ಹಾಗೂ ಸೌಂದರ್ಯ ಲಾಭಗಳು

ದೃಷ್ಟಿ ಸುಧಾರಣೆ

ದೃಷ್ಟಿ ಸುಧಾರಣೆ

ಕಣ್ಣಿನ ದೃಷ್ಟಿ ಸುಧಾರಣೆ ಮಾಡುವಲ್ಲಿ ಕಪ್ಪು ದ್ರಾಕ್ಷಿಯು ಪ್ರಮುಖ ಪಾತ್ರ ವಹಿಸುವುದು. ಈ ದ್ರಾಕ್ಷಿಯಲ್ಲು ಲುಟೇನ್ ಮತ್ತು ಝೀಕ್ಸಾಂಥಿನ್ ಎನ್ನುವ ಅಂಶವಿದೆ. ಇದು ಕಣ್ಣಿನ ದೃಷ್ಟಿ ಉತ್ತಮಪಡಿಸುವುದು. ಕಪ್ಪು ದ್ರಾಕ್ಷಿಯಿಂದ ಚರ್ಮಕ್ಕೆ ಸಿಗುವ ಲಾಭಗಳು

ಆರೋಗ್ಯಕಾರಿ ಹಾಗೂ ಯೌವನಯುತ ಚರ್ಮಕ್ಕಾಗಿ

ಆರೋಗ್ಯಕಾರಿ ಹಾಗೂ ಯೌವನಯುತ ಚರ್ಮಕ್ಕಾಗಿ

ಕಪ್ಪು ದ್ರಾಕ್ಷಿಯಲ್ಲಿ ಇರುವಂತಹ ಹೆಚ್ಚಿನ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳಿಂದಾಗಿ ವಯಸ್ಸಾಗುವ ಲಕ್ಷಣಗಳಾಗಿರುವಂತಹ ನೆರಿಗೆ ನಿವಾರಣೆ, ಚರ್ಮದಲ್ಲಿ ಸ್ಥಿತಿಸ್ಥಾಪಕತ್ವ ಹೆಚ್ಚಾಗುವುದು, ಸರಿಯಾದ ರಕ್ತ ಸಂಚಾರವನ್ನು ಉಂಟು ಮಾಡಿ ಅದರಿಂದ ಆರೋಗ್ಯಕರ, ಯೌವನಯುತ ಮತ್ತು ಕಾಂತಿಯುತ ಚರ್ಮವನ್ನು ನೀಡುವುದು. ವಿಟಮಿನ್ ಇ ಯು ಚರ್ಮದಲ್ಲಿ ಮೊಶ್ಚಿರೈಸರ್ ನ್ನು ಕಾಪಾಡುವುದು ಮತ್ತು ಇದು ನೈಸರ್ಗಿಕ ಮೊಶ್ಚಿರೈಸರ್ ಆಗಿ ಕೆಲಸ ಮಾಡುವುದು.

ವಿಟಮಿನ್ ಸಿ ಅಂಶ

ವಿಟಮಿನ್ ಸಿ ಅಂಶ

ದ್ರಾಕ್ಷಿಯಲ್ಲಿ ಇರುವಂತಹ ವಿಟಮಿನ್ ಸಿ ಅಂಶವು ಚರ್ಮದಲ್ಲಿನ ಅಂಗಾಂಶಗಳನ್ನು ಪುನರುಜ್ಜೀವನಗೊಳಿಸುವುದು. ಇದರಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ ಗಳಿಂದಾಗಿ ಇದರ ತ್ಯಾಜ್ಯವನ್ನು ಸನ್ ಸ್ಕ್ರೀನ್ ಆಗಿಯೂ ಬಳಕೆ ಮಾಡಿಕೊಳ್ಳಬಹುದು. ಇದರಿಂದಾಗಿ ಹಾನಿಕಾರಕವಾಗಿರುವಂತಹ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸಬಹುದು ಮತ್ತು ಚರ್ಮದ ಅಂಗಾಂಶಗಳಿಗೆ ಆಗುವಂತಹ ಹಾನಿ ತಪ್ಪಿಸಬಹುದು. ಕಪ್ಪು ದ್ರಾಕ್ಷಿಯಿಂದ ಕೂದಲಿಗೆ ಸಿಗುವ ಲಾಭಗಳು

ಉದ್ದ ಹಾಗೂ ಆರೋಗ್ಯಕರ ಕೂದಲನ್ನು ನಿರ್ವಹಣೆ ಮಾಡುವುದು

ಉದ್ದ ಹಾಗೂ ಆರೋಗ್ಯಕರ ಕೂದಲನ್ನು ನಿರ್ವಹಣೆ ಮಾಡುವುದು

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಎದುರಿಸುವಂತಹ ಕೂದಲಿನ ಕೆಲವೊಂದು ಸಮಸ್ಯೆಗಳಾಗಿರುವಂತಹ ತಲೆಹೊಟ್ಟು, ಕೂದಲು ಉದುರುವಿಕೆ, ತುದಿ ಒಡೆಯುವುದ ಮತ್ತು ಅಕಾಲಿಕ ಬಿಳಿಯಾಗುವ ಸಮಸ್ಯೆಗಳನ್ನು ನಿಯಮಿತವಾಗಿ ಕಪ್ಪು ದ್ರಾಕ್ಷಿ ಸೇವನೆ ಮಾಡುವುದರಿಂದ ನಿವಾರಣೆ ಮಾಡಬಹುದು. ಇದರಲ್ಲಿ ಇರುವಂತಹ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಇ ನ್ನು ದ್ರಾಕ್ಷಿ ತಿನ್ನುವ ಮೂಲಕ ಅಥವಾ ಅದರ ಬೀಜದ ಎಣ್ಣೆಯನ್ನು ಬಳಕೆ ಮಾಡಿಕೊಂಡು ತಲೆ ಬುರುಡೆಯ ರಕ್ತ ಸಂಚಾರ ಹೆಚ್ಚಿಸಬಹುದು, ರಕ್ತನಾಳಗಳನ್ನು ಬಲಗೊಳಿಸಿ, ಕೂದಲಿನ ಆರೋಗ್ಯಕಾರಿ ಬೆಳವಣಿಗೆಗೆ ನೆರವಾಗುವುದು. ಇದು ಕೂದಲನ್ನು ಬಲ, ನಯ ಮತ್ತು ಉದ್ದವಾಗಿಸುವುದು, ಇದರಿಂದ ತಲೆಹೊಟ್ಟು, ತಲೆಬುರುಡೆಯಲ್ಲಿ ಕಾಣಿಸುವ ಕಿರಿಕಿರಿ ನಿವಾರಣೆ ಮಾಡುವುದು. ಇದರಿಂದ ನೈಸರ್ಗಿಕವಾಗಿ ಸುಂದರ ಹಾಗೂ ಕಾಂತಿಯುತ ಕೂದಲು ಪಡೆಯಬಹುದು.

English summary

Amazing Black Grapes Benefits-Health To Gorgeous Skin

The black grape benefits are so many that for your convenience we have split them into health, skin and hair benefits. Enjoy! The most popular use of grapes, all over the world, is in making wines. However, the juicy fruit has also added a number of uses to its crowning glory. Apart from being relished as a fruit or in salads, black grapes can also be cooked in a variety of ways to make sauces,
X
Desktop Bottom Promotion