For Quick Alerts
ALLOW NOTIFICATIONS  
For Daily Alerts

ಅತಿಯಾಗಿ ಸಕ್ಕರೆ ಸೇವಿಸುವುದು ಆರೋಗ್ಯಕ್ಕೆ ಬಹಳ ಅಪಾಯಕಾರಿ-ಇಲ್ಲಸಲ್ಲದ ಕಾಯಿಲೆಗಳು ಬರಬಹುದು!!

|

ಇಂದಿನ ಜೀವನಶೈಲಿಯಲ್ಲಿ ನಾವು ಅತಿಯಾಗಿ ಸಕ್ಕರೆಯನ್ನು ತಿನ್ನುತ್ತೇವೆ. ಪ್ರತಿಯೊಂದು ಸಿಹಿ ಪದಾರ್ಥಗಳಿಗೆ ಅತಿಯಾಗಿ ಸಕ್ಕರೆ ಬಳಕೆ ಮಾಡುವ ಕಾರಣದಿಂದಾಗಿ ಇದು ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಜೀವನಶೈಲಿಗೆ ಹೊಂದಿಕೊಂಡು ಹಿತಮಿತವಾಗಿ ಸಿಹಿ ಸೇವನೆ ಮಾಡಿದರೆ ಅದರಿಂದ ಹೆಚ್ಚು ಸಮಸ್ಯೆಯಿಲ್ಲ.

ಆದರೆ ಅತಿಯಾಗಿ ಸಿಹಿ ಸೇವನೆ ಮಾಡಿದರೆ ಅದು ನಮ್ಮ ಆರೋಗ್ಯಕ್ಕೆ ಮಾರಕ ಎಂದು ತಿಳಿಯಬೇಕು. ಯಾಕೆಂದರೆ ನಾವು ಸಕ್ಕರೆ ಸೇವನೆ ಮಾಡುವ ಕಾರಣ ಅಗತ್ಯಕ್ಕಿಂತ ಹೆಚ್ಚು ಕಾರ್ಬ್ಸ್ ಸೇವಿಸುತ್ತೇವೆ. ಸಕ್ಕರೆ ನಮ್ಮ ದೇಹಕ್ಕೆ ಮಾರಕ ಯಾಕೆ? ನಮ್ಮ ದೇಹಕ್ಕೆ ಸಕ್ಕರೆಯು ಮಾರಕ ಯಾಕೆ ಎನ್ನುವುದನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಅದನ್ನು ನೀವು ತಿಳಿಯಿರಿ.

ಸಕ್ಕರೆಯು ರಕ್ತದಲ್ಲಿರುವ ಸಕ್ಕರೆ ಮಟ್ಟ ಏರುವಂತೆ ಮಾಡುವುದು

ಸಕ್ಕರೆಯು ರಕ್ತದಲ್ಲಿರುವ ಸಕ್ಕರೆ ಮಟ್ಟ ಏರುವಂತೆ ಮಾಡುವುದು

ರಕ್ತದಲ್ಲಿರುವಂತಹ ಸಕ್ಕರೆ ಮಟ್ಟವು ಅಸ್ಥಿರವಾಗಿದ್ದರೆ ಆಗ ನಮ್ಮ ಮನಸ್ಥಿತಿ ಬದಲಾವಣೆ, ನಿಶ್ಯಕ್ತಿ ಮತ್ತು ತಲೆನೋವು ಕಾಣಿಸುವುದು. ಇದರಿಂದಾಗಿ ಬಯಕೆಯು ಹೆಚ್ಚಾಗುವುದು, ಇದರಿಂದಾಗಿ ಪದೇ ಪದೇ ಹಸಿವು ಆಗುವುದು. ಸಕ್ಕರೆ ಸೇವನೆ ಕಡಿಮೆ ಮಾಡಿದರೆ ಆಗ ಬಯಕೆಯು ತಗ್ಗುವುದು. ಇದರಿಂದ ಭಾವನಾತ್ಮಕ ಸಮತೋಲನ ಮತ್ತು ಶಕ್ತಿಯು ಹೆಚ್ಚಾಗುವುದು.

ಅತಿಯಾಗಿ ಸಕ್ಕರೆ ಸೇವನೆ ಮಾಡಿದರೆ ಅದರಿಂದ ಬೊಜ್ಜು, ಮಧುಮೇಹ ಮತ್ತು ಹೃದಯದ ಕಾಯಿಲೆಯು ಬರುವುದು!

ಅತಿಯಾಗಿ ಸಕ್ಕರೆ ಸೇವನೆ ಮಾಡಿದರೆ ಅದರಿಂದ ಬೊಜ್ಜು, ಮಧುಮೇಹ ಮತ್ತು ಹೃದಯದ ಕಾಯಿಲೆಯು ಬರುವುದು!

ಯಾವಾಗಲೊಮ್ಮೆಯಾದರೂ ಇದನ್ನು ಸೇವನೆ ಮಾಡಬಹುದು. ಆದರೆ ಸಕ್ಕರೆ ಸೇವನೆಯು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ತಕ್ಷಣ ಪರಿಣಾಮ ಬೀರುವುದು. ಇದರಿಂದ ಬೊಜ್ಜು, ಹೃದಯದ ಕಾಯಿಲೆ ಮತ್ತು ಮಧುಮೇಹ ಬರುವುದು. ಆಧುನಿಕ ಸಂಶೋಧನೆಯ ಪ್ರಕಾರ ಅಧಿಕ ಗ್ಲೈಸೆಮಿಕ್ ಆಹಾರ ಮತ್ತು ವಿವಿಧ ರೀತಿಯ ಕ್ಯಾನ್ಸರ್ ಗೂ ಸಂಬಂಧವಿದೆ. ದೇಹದಲ್ಲಿ ಅತಿಯಾದ ಸಕ್ಕರೆಯಂಶವಿದ್ದರೆ ಆಗ ಅದು ದೇಹದಲ್ಲಿ ಪರಿಣಾಮ ಬೀರುವುದು. ಇದರಿಂದಾಗಿ ಪೋಷಕಾಂಶದ ಮಟ್ಟವನ್ನು ನೋಡಿಕೊಳ್ಳಬೇಕಾಗಿದೆ.

Most Read:ಸಕ್ಕರೆ ಎನ್ನುವುದು ಮತ್ತೊಂದು ತಂಬಾಕೇ? ಆಹಾರ ಮತ್ತು ಪೋಷಕಾಂಶಗಳಲ್ಲಿ ಸಕ್ಕರೆಯ ಪಾತ್ರವೇನು?

ಸಕ್ಕರೆಯಿಂದಾಗಿ ಪ್ರತಿರೋಧಕ ವ್ಯವಸ್ಥೆ ಮೇಲೆ ಪರಿಣಾಮವಾಗಬಹುದು

ಸಕ್ಕರೆಯಿಂದಾಗಿ ಪ್ರತಿರೋಧಕ ವ್ಯವಸ್ಥೆ ಮೇಲೆ ಪರಿಣಾಮವಾಗಬಹುದು

ನೀವು ಅನಾರೋಗ್ಯಕ್ಕೆ ಒಳಗಾಗಿದ್ದರೆ ಆಗ ಅದು ತುಂಬಾ ಕೆಟ್ಟ ವಿಚಾರ. ಅದೇ ರೀತಿಯಾಗಿ ಅಧ್ಯಯನಗಳು ಹೇಳುವ ಪ್ರಕಾರ ದೇಹದ ಪ್ರತಿರೋಧಕ ವ್ಯವಸ್ಥೆ ಮೇಲೆ ಸಕ್ಕರೆಯು ಪರಿಣಾಮ ಬೀರಬಹುದು. ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಸಕ್ಕರೆಯಿಂದಾಗಿ ಬೆಳೆಯುವುದು. ಇದರಿಂದ ದೇಹದಲ್ಲಿ ಅತಿಯಾದ ಗ್ಲೂಕೋಸ್

ಶೇಖರಣೆಯಾಗಿ ಕೆಲವೊಂದು ರೀತಿಯ ಸೋಂಕು ಉಂಟಾಗುವಂತಹ ಸಾಧ್ಯತೆಗಳು ಇವೆ.

 ಅತ್ಯಧಿಕ ಸಕ್ಕರೆ ಸೇವನೆಯಿಂದ ಕ್ರೋಮಿಯಂ ಕೊರತೆ ಕಾಡಬಹುದು

ಅತ್ಯಧಿಕ ಸಕ್ಕರೆ ಸೇವನೆಯಿಂದ ಕ್ರೋಮಿಯಂ ಕೊರತೆ ಕಾಡಬಹುದು

ಕ್ರೋಮಿಯಂ ಎನ್ನುವುದು ಒಂದು ರೀತಿಯ ಖನಿಜವಾಗಿದ್ದು, ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು. ಕ್ರೋಮಿಯಂ ಮಾಂಸ, ಸಮುದ್ರಾಹಾರ, ಮತ್ತು ಕೆಲವೊಂದು ಸಸ್ಯಾಹಾರಗಳಲ್ಲಿ ಲಭ್ಯವಿದೆ. ಪಿಷ್ಠವನ್ನು ಸಂಸ್ಕರಣೆ ಮಾಡುವ ಕಾರಣದಿಂದಾಗಿ ಶೇ.90ರಷ್ಟು ಅಮೆರಿಕಾದವರಿಗೆ ಈಗಲೂ ಸರಿಯಾಗಿ ಕ್ರೋಮಿಯಂ ಸಿಗುವುದಿಲ್ಲ. ಇತರ ಕಾರ್ಬೋಹೈಡ್ರೇಟ್ಸ್ ಗಳು ಕೂಡ ಕ್ರೋಮಿಯಂ ಉಳ್ಳ ಆಹಾರವನ್ನು ಎಳೆಯುವುದು. ಕಾರ್ಬ್ಸ್ ಸೇವನೆ

ಕಡಿಮೆ ಮಾಡುವುದರಿಂದ ದೇಹಕ್ಕೆ ಬೇಕಾಗಿರುವಂತಹ ಖನಿಜಾಂಶದ ಮಟ್ಟವನ್ನು ಹೆಚ್ಚಿಸಬಹುದು.

ಸಕ್ಕರೆ ಸೇವನೆಯಿಂದ ವಯಸ್ಸಾಗುವ ಲಕ್ಷಣಗಳು ಹೆಚ್ಚು

ಸಕ್ಕರೆ ಸೇವನೆಯಿಂದ ವಯಸ್ಸಾಗುವ ಲಕ್ಷಣಗಳು ಹೆಚ್ಚು

ಸಕ್ಕರೆಯನ್ನು ಅತಿಯಾಗಿ ಸೇವನೆ ಮಾಡುವುದರಿಂದ ದೇಹದ ಸಮತೋಲನದ ಮೇಲೆ ಅದು ಪರಿಣಾಮ ಬೀರುವುದು. ಚರ್ಮದಲ್ಲಿ ನೆರಿಗೆ ಮತ್ತು ಚರ್ಮವು ಜೋತು ಬೀಳುವಂತೆ ಮಾಡಿ ಅದು ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು. ಸಕ್ಕರೆಯು ರಕ್ತನಾಳಗಳಿಗೆ ಹೋದ ಬಳಿಕ ಅದು ಪ್ರೋಟೀನ್ ಜತೆಗೆ ಸೇರಿಕೊಳ್ಳುವುದು. ಪ್ರೋಟೀನ್ ಮತ್ತು ಸಕ್ಕರೆ ಸೇರಿಕೊಳ್ಳುವ ಪರಿಣಾಮ ಚರ್ಮದ ಸ್ಥಿತಿಸ್ಥಾಪಕತ್ವವು ಕಳೆದುಕೊಳ್ಳುವುದು ಮತ್ತು ಇದರಿಂದ ವಯಸ್ಸಾಗುವ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳುವುದು.

ಸಕ್ಕರೆಯಿಂದಾಗಿ ಹಲ್ಲುಗಳು ಕೆಡುವುದು

ಸಕ್ಕರೆಯಿಂದಾಗಿ ಹಲ್ಲುಗಳು ಕೆಡುವುದು

ಸಕ್ಕರೆಯಿಂದ ಉಂಟಾಗುವಂತಹ ಕೆಲವೊಂದು ಪ್ರಾಣಹಾನಿಯಾಗುವಂತಹ ಅಪಾಯದ ಹೊರತಾಗಿ ಕೆಲವೊಂದು ಸಾಮಾನ್ಯ ಹಾನಿಯ ಬಗ್ಗೆ ನಾವು ಕಡೆಗಣನೆ ಮಾಡಿಕೊಳ್ಳುತ್ತೇವೆ. ಸಕ್ಕೆಯು ಹಲ್ಲಿನಲ್ಲಿ ಕುಳಿತುಕೊಂಡಾಗ ಅದು ಹಲ್ಲುಗಳಿಗೆ ಹಾನಿ ಉಂಟು ಮಾಡುವುದು. ಇದು ಬೇರೆ ಯಾವುದೇ ಆಹಾರಕ್ಕಿಂತ ಹೆಚ್ಚು ಹಾನಿ ಮಾಡುವುದು. ದಿನದಲ್ಲಿ ಎರಡು ಸಲ ಬ್ರಷ್ ಮಾಡಿದರೆ ಅದರಿಂದ ಸಕ್ಕರೆಯಿಂದ ನಿರ್ಮಾಣವಾಗುವಂತಹ ಪದರ ಮತ್ತು ಬ್ಯಾಕ್ಟೀರಿಯಾವನ್ನು ತೆಗೆದುಹಾಕಬಹುದು.

ಹೃದಯದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ

ಹೃದಯದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ

2013ರಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ದೇಹದಲ್ಲಿ ಸಕ್ಕರೆಯ ಅಂದರೆ ಸಕ್ಕರೆಯ ಮೂಲಕ ಆಗಮನವಾದ ಗ್ಲುಕೋಸ್ ಪ್ರಮಾಣ ಹೆಚ್ಚಿದಷ್ಟೂ ಹೃದಯದ ಕೆಲಸವೂ ಹೆಚ್ಚುತ್ತಾ ಹೋಗುತ್ತದೆ. ಏಕೆಂದರೆ ಆಗಾಧವಾದ ಪ್ರಮಾಣದ ಗ್ಲುಕೋಸ್ ಬಂದರೆ ಅದಕ್ಕೊಂದು ಗತಿಗಾಣಿಸಬೇಕಲ್ಲ, ಈ ಆಗಾಧ ಪ್ರಮಾಣವನ್ನು ಎಲ್ಲೆಡೆ ಸಾಗಿಸಲು ತನ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಒತ್ತಡದಲ್ಲಿ ದೇಹದ ತುದಿತುದಿಗಳಿಗೆ ರಕ್ತದ ಮೂಲಕ ಕಳುಹಿಸಬೇಕಾಗುತ್ತದೆ. ಹೀಗೆ ಅತಿ ಭಾರ ಅಥವಾ ಓವರ್ ಲೋಡ್ ಆದ ಹೃದಯ ಆಯಸ್ಸಿಗೂ ಮುನ್ನವೇ ಶಿಥಿಲಗೊಳ್ಳುತ್ತದೆ.

ಯಕೃತ್ ಹಾನಿಗೊಳಗಾಗುತ್ತದೆ

ಯಕೃತ್ ಹಾನಿಗೊಳಗಾಗುತ್ತದೆ

ಯಕೃತ್ ನ ಅತ್ಯಂತ ದೊಡ್ಡ ವೈರಿ ಎಂದರೆ ಮದ್ಯ. ಒಂದು ವೇಳೆ ಇದರೊಂದಿಗೆ ಸಕ್ಕರೆ ಸೇರಿದರೆ ಮಂಗನಿಗೆ ಮದ್ಯ ಕುಡಿಸಿದಂತಾಗುತ್ತದೆ. ಮದ್ಯ ಯಕೃತ್ ಗೆ ಮಾಡುವ ಹಾನಿಯನ್ನು ಸಕ್ಕರೆ ಸಾವಿರ ಪಟ್ಟು ಹೆಚ್ಚಿಸುತ್ತದೆ. ಪರಿಣಾಮವಾಗಿ ಮದ್ಯದ ಪ್ರಹಾರಗಳಿಂದ ಕೊಂಚ ಜೀವದಲ್ಲಿ ಉಳಿದಿದ್ದ ಯಕೃತ್ ಸಕ್ಕರೆಯ

ಪ್ರಹಾರದಿಂದ ಸಂಪೂರ್ಣವಾಗಿ ಸೋತು ಹೋಗುತ್ತದೆ. ಪರಿಣಾಮ: ಯಕೃತ್ ವೈಫಲ್ಯ, ಇನ್ನೊಬ್ಬರಿಂದ ಕಸಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ.

ಹೆಚ್ಚಿನ ಸಕ್ಕರೆ?

ಹೆಚ್ಚಿನ ಸಕ್ಕರೆ?

ಕೆಲವೊಮ್ಮೆ ಮಕ್ಕಳನ್ನು ಮತ್ತು ಕೆಲವು ವಯಸ್ಕರನ್ನು ತಪಾಸಣೆಗೊಳಿಸಿದ ವೈದ್ಯರು 'sugar high'ಎಂಬ ಪದವನ್ನು ಉಪಯೋಗಿಸುವುದನ್ನು ಗಮನಿಸಿರಬಹುದು. ಏಕೆಂದರೆ ರಕ್ತದಲ್ಲಿ ಅಗತ್ಯಕ್ಕೂ ಹೆಚ್ಚು ಸಕ್ಕರೆ (ಗ್ಲುಕೋಸ್) ಇರುವ ಸಂದರ್ಭದಲ್ಲಿ ಮೆದುಳಿಗೆ ಹಾನಿಯಾಗುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆ ಹೆಚ್ಚುತ್ತದೆ. ಈ ಆತಂಕವನ್ನೇ ವೈದ್ಯರು ಶುಗರ್ ಹೈ ಎಂದು ಕರೆಯುತ್ತಾರೆ. ಈಗ ಕೆಲವು ಔಷಧಿಗಳ ಮೂಲಕ

ಅಪಾರವಾದ ಈ ಗ್ಲೂಕೋಸ್ ಗೆ ಒಂದು ದಾರಿ ಕಾಣಿಸಲು ಪ್ರಯತ್ನಿಸ ಬೇಕಾಗುತ್ತದೆ.

ಆಯಸ್ಸು ಕಡಿಮೆಯಾಗುತ್ತದೆ

ಆಯಸ್ಸು ಕಡಿಮೆಯಾಗುತ್ತದೆ

ಸಕ್ಕರೆಯ ಅಪಾರ ಪ್ರಮಾಣದ ಸೇವನೆಯಿಂದ ದೇಹದ ವಿವಿಧ ಭಾಗಗಳು ಬಾಧೆಗೊಳಗಾಗಿ ತಮ್ಮ ಕ್ಷಮತೆಯನ್ನು ಕುಗ್ಗಿಸಿಕೊಳ್ಳುವ ಪರಿಣಾಮವಾಗಿ ಒಟ್ಟಾರೆ ಆರೋಗ್ಯ ಮತ್ತು ತನ್ಮೂಲಕ ಆಯಸ್ಸು ಕಡಿಮೆಯಾಗುತ್ತದೆ.

Most Read: ಆಯಸ್ಸು ಮುಗಿಯುತ್ತಾ ಬಂದಿದ್ದರೆ, ಹೀಗೆಲ್ಲಾ ನಡೆಯುತ್ತವೆಯಂತೆ!

ಬಿಳಿ ಸಕ್ಕರೆಯಲ್ಲಿ ಪೋಷಕಾಂಶಗಳಿಲ್ಲ, ಬರೆಯ ಕ್ಯಾಲೋರಿಗಳು ಮಾತ್ರ

ಬಿಳಿ ಸಕ್ಕರೆಯಲ್ಲಿ ಪೋಷಕಾಂಶಗಳಿಲ್ಲ, ಬರೆಯ ಕ್ಯಾಲೋರಿಗಳು ಮಾತ್ರ

ಹೆಚ್ಚು ಸಕ್ಕರೆ ಸೇವಿಸಿದಷ್ಟೂ ನಾವು ದೈಹಿಕ ಚಟುವಟಿಕೆಗಳನ್ನೂ ಹೆಚ್ಚಿಸಬೇಕು. ಸ್ಥೂಲವಾಗಿ ಹೇಳಬೇಕೆಂದರೆ ಪ್ರತಿ ಒಂದು ಚಮಚ ಸಕ್ಕರೆಯಿಂದ ಲಭ್ಯವಾಗುವ ಕ್ಯಾಲೋರಿಗಳನ್ನು ಬಳಸಲು ಸುಮಾರು ಮುಕ್ಕಾಲು ಕಿ.ಮೀ ನಡೆಯಬೇಕು. ನಾವು ನಡೆಯುತ್ತೇವೆಯೇ? ಆಗ ಈ ಕ್ಯಾಲೋರಿಗಳು ಬಳಸಲ್ಪಡದೇ ದೇಹದಲ್ಲಿಯೇ ಉಳಿದು ಹಲವು ತೊಂದರೆಗಳಿಗೆ ಕಾರಣವಾಗುತ್ತವೆ.

ಸಕ್ಕರೆ ಅತಿ ವ್ಯಸನಕಾರಿ ವಸ್ತುವಾಗಿದೆ

ಸಕ್ಕರೆ ಅತಿ ವ್ಯಸನಕಾರಿ ವಸ್ತುವಾಗಿದೆ

ನಮಗೆ ಅರಿವೇ ಇಲ್ಲದಂತೆ ನಾವೆಲ್ಲಾ ಸಕ್ಕರೆಗೆ ವ್ಯಸನರಾಗಿ ಬಿಟ್ಟಿದ್ದೇವೆ. ಏಕೆಂದರೆ ಸಕ್ಕರೆಯನ್ನು ಜೀರ್ಣಿಸಿಕೊಂಡ ಬಳಿಕ ರಕ್ತದಲ್ಲಿ ಡೋಪಮೈನ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ಒಂದು ಮೆದುಳಿಗೆ ಮುದ ನೀಡುವ ರಾಸಾಯನಿಕವಾಗಿದ್ದು ಮೆದುಳು ಹೆಚ್ಚು ಹೆಚ್ಚು ಇಷ್ಟಪಡತೊಡಗುತ್ತದೆ. ಚಿಕ್ಕಂದಿನ ಚಾಕಲೇಟಿನಿಂದ ಪ್ರಾರಂಭವಾದ ಸಕ್ಕರೆಯ ವ್ಯಸನ ನಮ್ಮನ್ನು ಜೀವಮಾನವಿಡೀ ಕಾಡುತ್ತದೆ.

ಕ್ಯಾನ್ಸರ್‌ಗೂ ಕಾರಣವಾಗಬಹುದು !

ಕ್ಯಾನ್ಸರ್‌ಗೂ ಕಾರಣವಾಗಬಹುದು !

ಸಕ್ಕರೆಯ ಪ್ರಮಾಣ ಹೆಚ್ಚಾದರೆ ಇದನ್ನು ಬಳಸಲ್ಪಡಲು ದೇಹ ಅತಿ ಹೆಚ್ಚಾದ ಪ್ರಮಾಣದ ಇನ್ಸುಲಿನ್ ಅನ್ನು ಉತ್ಪಾದಿಸಬೇಕಾಗುತ್ತದೆ. ಇದು ಕ್ಯಾನ್ಸರ್ ಗೆ ಕಾರಣವಾಗಬಹುದು. ಇನ್ಸುಲಿನ್ ಸಂಬಂಧಿತ ಕೆಲವು ಅಂಗಾಂಶಗಳ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಈ ಹೆಚ್ಚುವರಿ ಇನ್ಸುಲಿನ್ ಮೂಲವಾಗಿದ್ದು ಇದರಿಂದ ಉರಿಯೂತ ಉಂಟಾಗುತ್ತದೆ. ತಕ್ಷಣವೇ ಚಿಕಿತ್ಸೆ ಪಡೆಯದಿದ್ದರೆ ಕ್ಯಾನ್ಸರ್ ಗೆ ತಿರುಗಬಹುದು.

ಹಲ್ಲು ಹುಳುಕಿಗೆ ಕಾರಣವಾಗಬಹುದು

ಹಲ್ಲು ಹುಳುಕಿಗೆ ಕಾರಣವಾಗಬಹುದು

ಮಕ್ಕಳ ಹಲ್ಲು ಹುಳುಕಿಗೆ ಸಕ್ಕರೆ ಕಾರಣವಾಗಿದೆ. ಇದು ಹಿರಿಯರಿಗೂ ಹೊರತಲ್ಲ. ಮಕ್ಕಳ ಹಲ್ಲುಗಳು ಬೇಗನೇ ಏಕೆ ಕರಗುತ್ತವೆ ಎಂದರೆ ಮಕ್ಕಳು ಸಿಹಿಯನ್ನು ಹೆಚ್ಚು ಹೊತ್ತು ಬಾಯಿಯಲ್ಲಿಯೇ ಇಟ್ಟುಕೊಂಡಿರುತ್ತಾರೆ. ಹಿರಿಯರು ಚಾಕಲೇಟನ್ನು ಬಾಯಿಯಲ್ಲಿ ಇಟ್ಟುಕೊಳ್ಳದೇ ಇದ್ದರೂ ಸಿಹಿ ತಿನಿಸುಗಳನ್ನು ತಿಂದ ಬಳಿಕ ಮುಕ್ಕಳಿಸದೇ ಇರುವ ಕಾರಣ ಹಲ್ಲಿನ ಮೇಲೆ ತೆಳುವಾದ ಸಕ್ಕರೆಯ ಪದರ ಉಳಿದು ಹಲ್ಲುಗಳ ಸವೆತಕ್ಕೆ ಕ್ರಮೇಣ ಹುಳುಕಿಗೆ ಕಾರಣವಾಗಬಹುದು.

English summary

13 Reasons Why Sugar Is Bad for Your Health

The cornerstone of the Atkins lifestyle is limiting carbs—the compounds that make up the sugars in foods. But why is that sugar bad for you? We’re letting you in on some of the secrets behind the effects of sugar on the body.
X
Desktop Bottom Promotion