For Quick Alerts
ALLOW NOTIFICATIONS  
For Daily Alerts

ಸ್ಯಾನಿಟರಿ ಪ್ಯಾಡ್‌ಗಳಿಂದ ದದ್ದುಗಳಾಗಲು ಕಾರಣಗಳೇನು?

|

ಮುಟ್ಟಿನ ಸಂದರ್ಭದಲ್ಲಿ ಸ್ಯಾನಿಟರಿ ನ್ಯಾಪಕಿನ್ ಬಳಸುವುದು ಅಗತ್ಯ ಕ್ರಿಯೆಗಳಲ್ಲೊಂದಾಗಿದೆ. ಆದರೆ ನ್ಯಾಪಕಿನ್ ಅಥವಾ ಪ್ಯಾಡ್‌ಗಳ ಬಳಕೆಯಿಂದ ಕೆಲ ಅಡ್ಡ ಪರಿಣಾಮಗಳು ಸಹ ಕೆಲ ಬಾರಿ ಕಂಡುಬರುತ್ತವೆ. ನ್ಯಾಪಕಿನ್ ಅಥವಾ ಪ್ಯಾಡ್‌ಗಳ ಬಳಕೆಯಿಂದ ದದ್ದುಗಳುಂಟಾಗುವುದು, ನಂತರ ಆ ಜಾಗದಲ್ಲಿ ಕೆರೆತ, ಊದಿಕೊಳ್ಳುವಿಕೆ ಹಾಗೂ ಕೆಂಪಾಗುವಿಕೆ ಮುಂತಾದ ಸಮಸ್ಯೆಗಳು ಕಾಣಿಸುತ್ತವೆ.

Why Do sanitary pad Cause Rashes?

ಸ್ಯಾನಿಟರಿ ಪ್ಯಾಡ್ ಅನ್ನು ತಯಾರಿಸುವಾಗ ಅದರಲ್ಲಿ ಬಳಸಿದ ಯಾವುದೋ ಒಂದು ವಸ್ತುವಿನ ಕಾರಣದಿಂದಲೂ ದದ್ದುಗಳುಂಟಾಗಬಹುದು. ಇನ್ನು ಕೆಲ ಬಾರಿ ತೇವಾಂಶ ಹಾಗೂ ಬಿಸಿಯ ಪರಿಣಾಮಗಳಿಂದ ಬ್ಯಾಕ್ಟೀರಿಯಾಗಳು ಬೆಳೆಯಬಹುದು. ಹೀಗೆ ಪ್ಯಾಡ್ ಧರಿಸುವಿಕೆಯಿಂದ ಉಂಟಾಗುವ ದದ್ದುಗಳ ನಿವಾರಣೆಗೆ ಕೆಲ ಸರಳ ಉಪಾಯಗಳಿವೆ. ಪ್ಯಾಡ್‌ನಲ್ಲಿನ ಯಾವೆಲ್ಲ ವಸ್ತುಗಳಿಂದ ದದ್ದುಗಳುಂಟಾಗಬಹುದು ಹಾಗೂ ಅದನ್ನು ನಿವಾರಿಸುವ ಪರಿಣಾಮಕಾರಿ ವಿಧಾನಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಲಾಗಿದೆ.

ನ್ಯಾಪಕಿನ್ ಅಥವಾ ಪ್ಯಾಡ್‌ಗಳಿಂದ ದದ್ದುಗಳಾಗಲು ಕಾರಣಗಳೇನು?

ನ್ಯಾಪಕಿನ್ ಅಥವಾ ಪ್ಯಾಡ್‌ಗಳಿಂದ ದದ್ದುಗಳಾಗಲು ಕಾರಣಗಳೇನು?

ಪ್ಯಾಡ್‌ಗಳ ಬಳಕೆಯಿಂದ ಉಂಟಾಗುವ ದದ್ದುಗಳಿಗೆ ಚರ್ಮಕ್ಕೆ ಒಗ್ಗಲಾರದ ಯಾವುದೋ ಒಂದು ವಸ್ತು ಕಾರಣವಾಗಿರುತ್ತದೆ. ಅಂದರೆ ಸ್ಯಾನಿಟರಿ ಪ್ಯಾಡ್‌ನಲ್ಲಿರುವ ಯಾವುದೋ ವಸ್ತುವಿನಿಂದ ಚರ್ಮದ ಮೇಲೆ ಉರಿಯೂತ ಉಂಟಾಗಿ ದದ್ದುಗಳಾಗಿವೆ ಎಂದರ್ಥ. ಯೋನಿಯ ಹೊರಭಾಗ (ವುಲ್ವಾ)ದ ಚರ್ಮಕ್ಕೆ ಬರುವ ದದ್ದುಗಳ ಸಮಸ್ಯೆಯನ್ನು ವುಲ್ವಿಟಿಸ್ ಎಂದು ಕರೆಯಲಾಗುತ್ತದೆ. ಹಲವಾರು ವಸ್ತುಗಳನ್ನು ಒಂದರ ಮೇಲೊಂದು ಪದರು ಪದರಾಗಿ ಜೋಡಿಸಿ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಲಾಗಿರುತ್ತದೆ. ಇದರಲ್ಲಿ ಹಲವಾರು ವಸ್ತುಗಳು ಚರ್ಮಕ್ಕೆ ಅಲರ್ಜಿಯನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಸ್ಯಾನಿಟರಿ ಪ್ಯಾಡ್‌ಗಳಲ್ಲಿರುವ ವಸ್ತುಗಳು ಯಾವುವು ಎಂಬುದನ್ನು ಒಂದಿಷ್ಟು ತಿಳಿಯೋಣ.

ಹಿಂಭಾಗದ ಪದರು

ಹಿಂಭಾಗದ ಪದರು

ಸ್ಯಾನಿಟರಿ ಪ್ಯಾಡ್‌ನ ಬ್ಯಾಕ್ ಶೀಟ್ ಅಥವಾ ಹಿಂಭಾಗವನ್ನು ಪಾಲಿಯೊಲಿಫಿನ್ಸ್ ಎಂಬ ಸಂಯುಕ್ತಗಳಿಂದ ತಯಾರಿಸಲಾಗಿರುತ್ತದೆ. ಇದೇ ವಸ್ತುವನ್ನು ಸ್ಟ್ರಾ, ಬಟ್ಟೆ ಹಾಗೂ ಹಗ್ಗಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ.

Most Read: ಮಹಿಳೆಯರಿಗೆ ಮುಟ್ಟಿನ ನಂತರ ತಲೆನೋವು ಬರಲು ಕಾರಣವೇನು?

ದ್ರವ ಇಂಗುವ ಭಾಗ

ದ್ರವ ಇಂಗುವ ಭಾಗ

ಪ್ಯಾಡ್‌ನ ಮೇಲ್ಭಾಗ ಹಾಗೂ ಕೆಳಭಾಗದ ಮಧ್ಯದಲ್ಲಿ ದ್ರವವನ್ನು ಹೀರಿಕೊಳ್ಳುವ ವಸ್ತುವನ್ನು ತುಂಬಿಸಲಾಗಿರುತ್ತದೆ. ದ್ರಾವಣವನ್ನು ಹೀರಿಕೊಳ್ಳುವ ವಸ್ತುಗಳಾದ ಫೋಮ್ ಹಾಗೂ ಕಟ್ಟಿಗೆಯ ಸೆಲ್ಯುಲೋಸ್‌ಗಳಿಂದ ಈ ಭಾಗವನ್ನು ತಯಾರಿಸಲಾಗಿರುತ್ತದೆ. ಕೆಲ ಬಾರಿ ಇಲ್ಲಿ ದ್ರವ ಹೀರಿಕೊಳ್ಳುವ ಗುಣದ ಜೆಲ್‌ಗಳನ್ನು ಸಹ ಬಳಸಲಾಗಿರುತ್ತದೆ.

ಮೇಲ್ಭಾಗದ ಪದರು

ಮೇಲ್ಭಾಗದ ಪದರು

ಯಾವಾಗಲೂ ಇದೇ ಭಾಗ ನಿಮ್ಮ ಚರ್ಮದೊಂದಿಗೆ ಸಂಪರ್ಕಕ್ಕೆ ಬರುವಂಥದ್ದದಾಗಿದೆ. ಪಾಲಿಯೊಲಿಫಿನ್ಸ್ ಹಾಗೂ ಚರ್ಮದ ತೇವಾಂಶ ಕಾಪಾಡಲು ಬಳಸುವ ಝಿಂಕ್ ಆಕ್ಸೈಡ್ ಹಾಗೂ ಪೆಟ್ರೊಲಾಟಮ್ ವಸ್ತುಗಳು ಪ್ಯಾಡ್‌ನ ಮೇಲ್ಭಾಗದ ಪದರಿನಲ್ಲಿರುತ್ತವೆ.

Most Read: ಮುಟ್ಟಿನ ಸಮಯದಲ್ಲಿ ದಿನಕ್ಕೆಷ್ಟು ಬಾರಿ ನ್ಯಾಪ್‌ಕಿನ್ ಬದಲಾಯಿಸಬೇಕು?

ಅಂಟುಪಟ್ಟಿ

ಅಂಟುಪಟ್ಟಿ

ಪ್ಯಾಡ್‌ನ ಹಿಂಭಾಗದಲ್ಲಿ ಅಂಟುಪಟ್ಟಿಯನ್ನು ಅಳವಡಿಸಲಾಗಿದ್ದು ಒಳ ಉಡುಪಿನೊಂದಿಗೆ ಗಟ್ಟಿಯಾಗಿ ಅಂಟಿಕೊಳ್ಳಲು ಇದು ನೆರವಾಗುತ್ತದೆ. ನಾವು ಮನೆಯಲ್ಲಿ ಕ್ರಾಫ್ಟ್ ಮಾಡಲು ಬಳಸುವ ಅಂಟಿನ ರೀತಿಯ ಎಫ್‌ಡಿಎ ಅನುಮೋದಿತ ದರ್ಜೆಯ ಅಂಟನ್ನು ಇದಕ್ಕೆ ಬಳಸಲಾಗಿರುತ್ತದೆ.

ಸುಗಂಧ ವಸ್ತುಗಳು

ಸುಗಂಧ ವಸ್ತುಗಳು

ಕೆಲ ಸ್ಯಾನಿಟರಿ ಪ್ಯಾಡ್ ತಯಾರಕರು ಪ್ಯಾಡ್‌ಗಳಲ್ಲಿ ಸುಗಂಧ ದ್ರವ್ಯಗಳನ್ನು ಹಾಕಿ ಅವು ಸುವಾಸನೆ ಬೀರುವಂತೆ ಮಾಡುತ್ತಾರೆ. ಆದರೆ ಕೆಲ ಹೆಣ್ಣು ಮಕ್ಕಳ ಚರ್ಮಕ್ಕೆ ಇಂಥ ಸುಗಂಧ ದ್ರವ್ಯಗಳ ರಾಸಾಯನಿಕಗಳಿಂದ ಹಾನಿಯುಂಟಾಗ ಬಹುದು. ಆದರೂ ಹೀರಿಕೊಳ್ಳುವ ಪದರಿನ ಕೆಳಗೆ ಸುಗಂಧ ದ್ರವ್ಯದ ಪದರು ಅಳವಡಿಸಿರುವುದರಿಂದ ಈ ಸುಗಂಧ ದ್ರವ್ಯ ಚರ್ಮದ ನೇರ ಸಂಪರ್ಕಕ್ಕೆ ಬರುವುದು ಬಹು ವಿರಳ. ಹೀಗಾಗಿ ಇವುಗಳಿಂದ ಅಲರ್ಜಿ ಹಾಗೂ ದದ್ದುಗಳುಗಾವುದು ಬಹಳ ಕಡಿಮೆ. ಒಂದು ಸಂಶೋಧನೆಯ ಪ್ರಕಾರ ಅಂಟುಪಟ್ಟಿಯ ಕಾರಣದಿಂದ ಕೇವಲ ಶೇ. 0.7 ರಷ್ಟು ಅಲರ್ಜಿ ಪ್ರಕರಣಗಳು ಮಾತ್ರ ಆಗಿವೆ ಎಂಬುದು ತಿಳಿದು ಬಂದಿದೆ. ಇನ್ನೊಂದು ಸಂಶೋಧನೆಯ ಪ್ರಕಾರ ಅತಿಯಾದ ಸ್ಯಾನಿಟರಿ ಪ್ಯಾಡ್ ಅಲರ್ಜಿ ಪ್ರಕರಣಗಳು 20 ಲಕ್ಷ ಪ್ಯಾಡ್ ಬಳಕೆಗಳಲ್ಲಿ ಕೇವಲ ಒಂದು ಬಳಕೆಯಲ್ಲಿ ಮಾತ್ರ ಕಂಡು ಬಂದಿದೆ ಎಂದು ತಿಳಿಸಲಾಗಿದೆ. ಇನ್ನು ಅನೇಕ ಬಾರಿ ಪ್ಯಾಡ್‌ನಲ್ಲಿನ ಯಾವುದೇ ವಸ್ತುವಿನಿಂದ ದದ್ದು ಉಂಟಾಗದೆ, ಪ್ಯಾಡ್ ಚರ್ಮದೊಂದಿಗೆ ತಿಕ್ಕುವುದರಿಂದಲೂ ಅಲರ್ಜಿ ಅಥವಾ ದದ್ದುಗಳು ಅಗಬಹುದು. ದೇಹದ ಖಾಸಗಿ ಅಂಗಗಳು ತೀರಾ ಸೂಕ್ಷ್ಮವಾಗಿರುವುದರಿಂದ ಇಲ್ಲಿ ಸ್ಯಾನಿಟರಿ ಪ್ಯಾಡ್‌ನಿಂದ ಘರ್ಷಣೆಯಾಗಿ ಚರ್ಮಕ್ಕೆ ಅಲರ್ಜಿಯಾಗಬಹುದು.

ಸ್ಯಾನಿಟರಿ ಪ್ಯಾಡ್‌ಗಳಿಂದಾಗುವ ದದ್ದುಗಳ ನಿವಾರಣೆ ಹೇಗೆ?

ಸ್ಯಾನಿಟರಿ ಪ್ಯಾಡ್‌ಗಳಿಂದಾಗುವ ದದ್ದುಗಳ ನಿವಾರಣೆ ಹೇಗೆ?

ಯಾವ ಕಾರಣದಿಂದ ದದ್ದುಗಳಾಗುತ್ತಿವೆ ಎಂಬುದನ್ನು ತಿಳಿದು ಅದಕ್ಕೆ ಸೂಕ್ತ ಉಪಶಮನ ಕೈಗೊಳ್ಳಲು ಕೊಂಚ ಕಾಲಾವಕಾಶ ಬೇಕಾಗುತ್ತದೆ. ದದ್ದುಗಳ ನಿವಾರಣೆಗೆ ಹೀಗೆ ಮಾಡಿ:

* ಸುಗಂಧಿತವಲ್ಲದ ಪ್ಯಾಡ್‌ಗಳನ್ನು ಬಳಸಿ

* ಕೆಲ ಬಾರಿ ಬೇರೆ ಬ್ರ್ಯಾಂಡಿನ ಪ್ಯಾಡ್ ಬಳಸಿ ಪರಿಣಾಮವನ್ನು ತುಲನೆ ಮಾಡಿ ನೋಡಿ.

* ಆದಷ್ಟು ಸಡಿಲಾಗಿರುವ ಅಂಡರವೇರ್ ಧರಿಸಿ ಚರ್ಮದೊಂದಿಗೆ ಪ್ಯಾಡ್ ಘರ್ಷಣೆ ಕಡಿಮೆ ಮಾಡಿ.

* ಯೋನಿಯ ಸುತ್ತಲಿನ ಚರ್ಮಕ್ಕೆ ಅಲರ್ಜಿಯಾಗಿದ್ದಲ್ಲಿ ಔಷಧಿ ಅಂಗಡಿಗಳಲ್ಲಿ ಸಿಗುವ ಹೈಡ್ರೊಕಾರ್ಟಿಸೋನ್ ಕ್ರೀಂ ತಂದು ಲೇಪಿಸಿ. ಆದರೆ ಈ ಹೈಡ್ರೊಕಾರ್ಟಿಸೋನ್ ಕ್ರೀಂ ಯೋನಿಯ ನಾಳಕ್ಕೆ ಹೋಗದಂತೆ ಎಚ್ಚರವಹಿಸಿ.

* ಊರಿಯೂತ ಶಮನಕ್ಕೆ ಕೆಳ ಭಾಗದ ಸ್ನಾನ ಮಾಡಿ. ಸಿಟ್ಜ್ ಬಾತ್ ಎಂದು ಕರೆಯಲಾಗುವ ಈ ಸ್ನಾನದ ವಿಶೇಷ ಟಬ್‌ಗಳು ಮೆಡಿಕಲ್ ಶಾಪ್‌ನಲ್ಲಿ ಸಿಗುತ್ತವೆ. ಇವು ಸಾಮಾನ್ಯವಾಗಿ ಕಮೋಡ್ ಮೇಲೆ ಸರಿಯಾಗಿ ಫಿಟ್ ಆಗುವಂತೆ ಇರುತ್ತವೆ. ಇದರಲ್ಲಿ ಬೆಚ್ಚಗಿನ ನೀರು ಹಾಕಿ 5 ರಿಂದ 10 ನಿಮಿಷಗಳವರೆಗೆ ಯೋನಿ ಹಾಗೂ ಗುದದ್ವಾರ ಮುಳುಗುವಂತೆ ಕುಳಿತು ಸಿಟ್ಜ್ ಬಾತ್ ತೆಗೆದುಕೊಳ್ಳಿ.

* ಆಗಾಗ ಪ್ಯಾಡ್‌ಗಳನ್ನು ಬದಲಾಯಿಸುವುದು ದದ್ದುಗಳಾಗದಂತೆ ತಡೆಯುವ ಉತ್ತಮ ಉಪಾಯವಾಗಿದೆ.

ಬೇಗನೆ ಉಪಚರಿಸಿ

ಬೇಗನೆ ಉಪಚರಿಸಿ

ಪ್ಯಾಡ್‌ಗಳಿಂದಾಗುವ ಅಲರ್ಜಿಗೆ ಬೇಗನೆ ಉಪಚಾರ ಆರಂಭಿಸಿ. ಒಂದು ವೇಳೆ ಇದಕ್ಕೆ ಬೇಗನೆ ಔಷಧೋಪಚಾರ ಮಾಡದಿದ್ದಲ್ಲಿ ಯೀಸ್ಟ್ ಸೋಂಕು ತಗುಲಿ ಗಾಯವಾಗುವ ಸಾಧ್ಯತೆ ಇರುತ್ತದೆ.

ಪ್ಯಾಡ್‌ನಿಂದಾಗುವ ಅಲರ್ಜಿ ಎಷ್ಷು ದಿನ ಇರುತ್ತದೆ?

ಪ್ಯಾಡ್‌ನಿಂದಾಗುವ ಅಲರ್ಜಿ ಎಷ್ಷು ದಿನ ಇರುತ್ತದೆ?

ಪ್ಯಾಡ್ ಹಾಗೂ ಚರ್ಮದ ಸಂಘರ್ಷದಿಂದ ಉಂಟಾದ ದದ್ದುಗಳಿಗೆ ಬೇಗನೆ ಔಷಧೋಪಚಾರ ಮಾಡಿದಲ್ಲಿ ಇವು 2 ರಿಂದ 3 ದಿನಗಳಲ್ಲಿ ಕಡಿಮೆಯಾಗುತ್ತವೆ. ಆದರೆ ಬೇಗನೆ ಉಪಚಾರ ಮಾಡದಿದ್ದರೆ ವಾಸಿಯಾಗಲು ಬಹಳ ಕಾಲಾವಕಾಶ ಹಿಡಿಯಬಹುದು.

ಮತ್ತೆ ದದ್ದುಗಳಾಗದಂತಿರಲು ಏನು ಮಾಡಬೇಕು?

ಮತ್ತೆ ದದ್ದುಗಳಾಗದಂತಿರಲು ಏನು ಮಾಡಬೇಕು?

* ಸಂಪೂರ್ಣ ಕಾಟನ್‌ನಿಂದ ತಯಾರಿಸಲಾದ ಹಾಗೂ ಅಂಟು, ಬಣ್ಣವಿರದ ಪ್ಯಾಡ್ ಬಳಸಿ. ಈ ಮಾದರಿಯ ಪ್ಯಾಡ್‌ಗಳು ತುಸು ದುಬಾರಿಯಾಗಿದ್ದರೂ ನಿಮ್ಮ ಚರ್ಮ ತೀರಾ ಸೂಕ್ಷ್ಮವಾಗಿದ್ದಲ್ಲಿ ಅದರ ಮೇಲೆ ದದ್ದುಗಳಾಗದಂತೆ ತಡೆಯಲು ಇವು ಸಹಕಾರಿಯಾಗಿವೆ.

* ತೊಳೆದು ಮರುಬಳಸಬಹುದಾದ ಬಟ್ಟೆಯ ಪ್ಯಾಡ್ ಬಳಸಬಹುದು ಅಥವಾ ವಿಶೇಷ ಕಪ್ ಮಾದರಿಯ ಬಟ್ಟೆಯನ್ನು ಬಳಸಿ ಅಲರ್ಜಿಯಾಗುವ ಸಂಭವವನ್ನು ಕಡಿಮೆ ಮಾಡಬಹುದು.

* ಆಗಾಗ ಪ್ಯಾಡ್ ಬದಲಾಯಿಸಿ ಹಾಗೂ ಸಡಿಲವಾದ ಒಳ ಉಡುಪು ಧರಿಸಿ.

* ಮುಟ್ಟು ಆರಂಭವಾಗುವ ಮುನ್ನವೇ ಫಂಗಸ್ ನಿರೋಧಕ ಕ್ರೀಂ ಹಚ್ಚುವುದರಿಂದ ಯೀಸ್ಟ್ ಸೋಂಕು ಆಗದಂತೆ ತಡೆಯಬಹುದು.

English summary

Why Do sanitary pad Cause Rashes?

Sometimes the rash can be the result of irritation from something the pad is made from. Other times the combination of moisture and heat can contribute to bacterial buildup.Regardless of the underlying cause, there are several treatments available to treat rashes from pads.
Story first published: Saturday, December 22, 2018, 14:54 [IST]
X
Desktop Bottom Promotion