For Quick Alerts
ALLOW NOTIFICATIONS  
For Daily Alerts

  ಏನಿದು ಮನುಕಾ ಜೇನು? ಪ್ರಯೋಜನಗಳು ಮತ್ತು ಅಡ್ಡ ಪರಿಣಾಮಗಳು

  By Arshad
  |

  ನಿಸರ್ಗ ನೀಡಿರುವ ಅದ್ಭುತ ಆಹಾರ, ಔಷಧೀಯ ಸಾಮಾಗ್ರಿಗಳು ಒಂದು ಪ್ರದೇಶದಲ್ಲಿದ್ದು ಅದರ ಮಹತ್ವವನ್ನು ಸ್ಥಳೀಯರು ಮಾತ್ರವೇ ಕಂಡುಕೊಂಡಿರುತ್ತಾರೆ. ಯಾವಾಗ ಇದು ವಿಶ್ವದ ಎಲ್ಲಾ ಕಡೆ ಪರಿಚಯಿಸಲ್ಪಟ್ಟಿತೋ, ಎಲ್ಲರೂ ಆ ಬಗ್ಗೆಯೇ ಮಾತನಾಡತೊಡಗುತ್ತಾರೆ. ಇದೇ ನಿಟ್ಟಿನಲ್ಲಿ ಇಂದು ಹೆಚ್ಚಿನವರ ಗಮನ ಸೆಳೆಯುತ್ತಿರುವ ಒಂದು ನೈಸರ್ಗಿಕ ಅದ್ಭುತ ಆಹಾರವೆಂದರೆ ಮನುಕಾ ಜೇನು. ಏನುದು ಮನುಕಾ ಜೇನು? ಏಕಾಗಿ ಜನರು ಇದರ ಬಗ್ಗೆ ಇಷ್ಟೊಂದು ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ? ಬನ್ನಿ, ಈ ಪ್ರಶ್ನೆಗಳಿಗೆ ಇಂದಿನ ಲೇಖನದಲ್ಲಿ ಉತ್ತರವನ್ನು ಪಡೆಯೋಣ.

  ಏನುದು ಮನುಕಾ ಜೇನು?

  ಇದು ನ್ಯೂಜಿಲ್ಯಾಂಡ್ ದೇಶದಲ್ಲಿ ಕಂಡುಬರುವ ಜೇನಾಗಿದ್ದು ಇದರಲ್ಲಿ ಅದ್ಭುತ ಔಷಧೀಯ ಗುಣಗಳಿವೆ ಹಾಗೂ ಕೇವಲ ನ್ಯೂಜಿಲ್ಯಾಂಡ್ ನ ಕಾಡುಗಳಲ್ಲಿರುವ ಜೇನ್ನೊಣಗಳು ಇಲ್ಲಿನ ಮನುಕಾ ಎಂಬ ಪೊದೆಯ ಹೂವುಗಳ ಮಕರಂದವನ್ನು ಹೀರಿ ಜೇನುಗೂಡಿನಲ್ಲಿ ಸಂಗ್ರಹಿಸುತ್ತವೆ. ಈ ಪ್ರದೇಶದ ಹೊರಗೆಲ್ಲೂ ಈ ಜೇನು ಕಂಡುಬರದಿರುವುದೇ ಈ ಜೇನಿಗೆ ಲಭಿಸಿರುವ ಮಹತ್ವವಾಗಿದೆ.

  ಆದರೆ ಇದು ಜಗತ್ತಿನ ಈ ಭಾಗದಲ್ಲಿ ಮಾತ್ರವೇ ದೊರಕುತ್ತದೆ ಎಂಬುದಕ್ಕೆ ಇದು ಪ್ರಖ್ಯಾತಿ ಪಡೆದಿಲ್ಲ, ಬದಲಿಗೆ ಈ ಜೇನಿನಲ್ಲಿರುವ ಯು ಎಮ್. ಎಫ್. (Unique Manuka Factor (UMF) ಅಥವಾ ಜೇನಿನ ಗುಣಮಟ್ಟವನ್ನು ಪರಿಗಣಿಸುವ ಎಂಬ ಗುಣಾಂಕದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದಿದ್ದು ವೈದ್ಯಕೀಯ ಗುಣುಗಳಿಗಾಗಿ 5 ರಿಂದ 20 ಅಂಶಗಳನ್ನು ಹೊಂದಿದೆ....

  ವಿಶಿಷ್ಟ ಮನುಕಾ ಅಂಶ (Unique Manuka Factor)

  ವಿಶಿಷ್ಟ ಮನುಕಾ ಅಂಶ (Unique Manuka Factor)

  ಜೇನಿನ ಗುಣಮಟ್ಟವನ್ನು ಅಳೆಯುವಾಗ ಒಂದು ನಿರ್ದಿಷ್ಟ ಸಮಯದಲ್ಲಿ ಸಂಗ್ರಹಿಸಿದ ಜೇನನ್ನು ಪರಿಗಣಿಸಲಾಗುತ್ತದೆ ಹಾಗೂ ಜೇನಿನಲ್ಲಿರುವ ಮೂರು ಪ್ರಮುಖ ಪೋಷಕಾಂಶಗಳ ಸಾಂದ್ರತೆಯ ಮೂಲಕ ಜೇನಿನ ಗುಣಮಟ್ಟವನ್ನು ಅಳೆಯಲಾಗುತ್ತದೆ. ಅವೆಂದರೆ DHA (Dihydroxyacetone), ಲೆಪ್ಟಿಸ್ಪೆರಿನ್ ಹಾಗೂ ಮೀಥೈಲ್ ಗ್ಲೈಯೋಕ್ಸಾಲ್ ಎಂಬ ಮೂರು ಪೋಷಕಾಂಶಗಳು ಜೇನಿನಲ್ಲಿ ಎಷ್ಟು ಪ್ರಮಾಣದಲ್ಲಿದೆ ಎಂಬ ಅಂಶ ಜೇನು ಎಷ್ಟು ಉಪಯುಕ್ತ ಎಂಬುದನ್ನು ಸೂಚಿಸುತ್ತವೆ. ಇವುಗಳಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣವೇ ಇವುಗಳ ಶಕ್ತಿಯಾಗಿದೆ. ಆದ್ದರಿಂದ ಈ ಮೂರೂ ಪೋಷಕಾಂಶಗಳು ಎಷ್ಟು ಹೆಚ್ಚಿರುತ್ತವೆಯೋ ಅಷ್ಟೂ ಜೇನು ಉತ್ತಮ ಎಂದು ಪರಿಗಣಿಸಬಹುದು. ಮನುಕಾ ಜೇನಿನಲ್ಲಿ ಈ ಅಂಶ 12ಕ್ಕೂ ಹೆಚ್ಚು ಇದ್ದು ವಿಶ್ವದ ಜೇನುಗಳಲ್ಲಿಯೇ ಗರಿಷ್ಟವಾಗಿರುವುದು ಈ ಜೇನಿಗೆ ಸಿಕ್ಕಿರುವ ಜನಪ್ರಿಯತೆಗೆ ಕಾರಣವಾಗಿದೆ. ಈ ಜೇನಿನ ಔಷಧೀಯ ಗುಣಗಳಿಂದಾಗಿ ಗಾಯಗಳನ್ನು ಶೀಘ್ರವಾಗಿ ಗುಣಪಡಿಸುವ ಪಟ್ಟಿಗಳಲ್ಲಿ, ಹಾಸಿಗೆಯ ವ್ರಣ, ಸುಟ್ಟ ಗಾಯ ಹಾಗೂ ಸಾಮಾನ್ಯ ಗಾಯಗಳಿಗೆ ನೇರವಾಗಿ ಹಚ್ಚುವ ಮೂಲಕ ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ.

  ಗಾಯಗಳನ್ನು ಮತ್ತು ಸೋಂಕುಗಳನ್ನು ಮಾಗಿಸುವಲ್ಲಿ ಮನುಕಾ ಜೇನು ಏಕಿಷ್ಟು ಒಳ್ಳೆಯದು?

  ಗಾಯ ಹಾಗೂ ಸೋಂಕುಗಳನ್ನು ಮಾಗಿಸಲು ಮನುಕಾ ಜೇನನ್ನು ಮುಲಾಮಿನಂತೆ ನೇರವಾಗಿ ಹಚ್ಚಿಕೊಂಡರೆ ಇವು ಶೀಘ್ರವಾಗಿ ಗುಣವಾಗುತ್ತವೆ. ಗಾಯದ ಮೇಲೆ ಮನುಕಾ ಜೇನನ್ನು ಹಚ್ಚಿಕೊಂಡಾಗ ಮೊದಲು ಇದು ಗಾಯದಿಂದ ಹೆಚ್ಚುವರಿ ನೀರು, ರಕ್ತದಲ್ಲಿರುವ ನೀರಿನ ಅಂಶವಾದ ಪ್ಲಾಸ್ಮಾ ಹಾಗೂ ಇಲ್ಲಿ ಸಂಗ್ರಹವಾಗಿದ್ದ ಧೂಳು ಕೊಳೆಗಳನ್ನು ಹೀರಿಕೊಳ್ಳುತ್ತದೆ. ಈ ಮೂಲಕ ಗಾಯಕ್ಕೆ ಎದುರಾಗುವ ಸೋಂಕಿನಿಂದ ರಕ್ಷಿಸುತ್ತದೆ. ಗಾಯ ಒಳಭಾಗದಿಂದ ಸೋಂಕುರಹಿತವಾದಾಗ ಇಲ್ಲಿ ಹೊಸ ಜೀವಕೋಶಗಳನ್ನು ಸೃಷ್ಟಿಸಲು ಸುಲಭವಾಗುವ ಕಾರಣ ಗಾಯಗಳು ಶೀಘ್ರವಾಗಿ ಮಾಗುತ್ತವೆ. ಅಲ್ಲದೇ, ಈ ಜೇನಿನ ಔಷಧೀಯ ಅಂಶದಲ್ಲಿರುವ ಪ್ರತಿಜೀವಕ ಗುಣಗಳು ಗಾಯದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಂದು ಗಾಯಗಳನ್ನು ಶೀಘ್ರವಾಗಿ ಮಾಗಿಸಲು ನೆರವಾಗುತ್ತದೆ. ಅಲ್ಲದೇ ಗಾಯದಲ್ಲಿರುವ ಆಮ್ಲೀಯ-ಕ್ಷಾರೀಯ (ಪಿ ಎಚ್) ಮಟ್ಟವನ್ನು ಚರ್ಮದ ಮಟ್ಟದಲ್ಲಿರಿಸುತ್ತದೆ ಹಾಗೂ ಗಾಯ ಮಾಗತೊಡಗಿದ ಬಳಿಕ ಸತ್ತ ಜೀವಕೋಶಗಳನ್ನು ನಿವಾರಿಸಿ ಹೊಸ ಚರ್ಮ ಬೆಳೆಯಲು ನೆರವಾಗುತ್ತದೆ.

  ಮನುಕಾ ಜೇನಿನ ಇತರ ಗುಣಗಳು

  ಮನುಕಾ ಜೇನಿನ ಇತರ ಗುಣಗಳು

  ಮಧುಮೇಹ, ಸುಟ್ಟಗಾಯಗಳು ಹಾಗೂ ಪಾದಗಳು ಊದಿಕೊಂಡು ವ್ರಣಗಳಾಗುವ arterial ulcer ಎಂಬ ಕಾಯಿಲೆಗೆ ಮನುಕಾ ಜೇನನ್ನು ಔಷಧದಂತೆ ವೈದ್ಯರು ಬಲುಕಾಲದಿಂದ ಬಳಸುತ್ತಾ ಬಂದಿದ್ದಾರೆ. ಇದರ ಚಿಕಿತ್ಸೆಗಳ ಪ್ರತಿಫಲ ಗುಣಾತ್ಮಕ ಹಾಗೂ ಭರವಸೆ ಮೂಡಿಸುವಂತಹದ್ದಾಗಿದೆ. ಅಷ್ಟೇ ಅಲ್ಲ, ಗಾಯಗಳನ್ನು ಗುಣಪಡಿಸಲು ಜೇನನ್ನು ಹಚ್ಚಿಕೊಂಡಾಗ contracting community-acquired MRSA ಅಥವಾ ಪ್ರತಿಜೀವಕ ಶಕ್ತಿಯನ್ನೇ ಕುಂದಿಸುವ ಸ್ಟ್ಯಾಫೈಲೋಕಾಕ್ಕಸ್ ಯೂರೆಯುಸ್ ಎಂಬ ಬ್ಯಾಕ್ಟೀರಿಯಾದ ಪ್ರಭಾವ ಆಗದಂತೆ ದೇಹವನ್ನು ರಕ್ಷಿಸುತ್ತದೆ.

  ಮನುಕಾ ಜೇನಿನ ಇತರ ಗುಣಗಳು

  ಮನುಕಾ ಜೇನಿನ ಇತರ ಗುಣಗಳು

  ಒಂದು ವೇಳೆ ಜೇನು, ಪರಾಗ, ಜೇನ್ನೊಣಗಳಿಗೆ ಅಲರ್ಜಿ ಇದ್ದರೂ ಈ ಜೇನನ್ನು ಸೇವಿಸಬಹುದೇ ಒಂದು ವೇಳೆ ಜೇನ್ನೊಣಗಳ ಕಡಿತ ಅಥವಾ ಹೂವಿನ ಪರಾಗ ನಿಮಗೆ ಪ್ರಾಣಾಂತಿಕವಾಗುವಷ್ಟು ಅಲರ್ಜಿಕಾರಕವಾಗಿದ್ದರೆ ಈ ಜೇನಿನ ಬಳಕೆ ನಿಮಗೆ ಸಲ್ಲದು. ಯಾವುದೇ ಜೇನಿನಲ್ಲಿ ಹೂವಿನ ಮಕರಂದ ಅತಿ ಹೆಚ್ಚು ಸಾಂದ್ರೀಕೃತವಾಗಿದ್ದು ಇದರೊಂದಿಗೆ ಹೂವಿನ ಪರಾಗ ಹಾಗೂ ಜೇನಿನ ಜೊಲ್ಲು ಸಹಾ ಮಿಳಿತಗೊಂಡಿರುತ್ತದೆ. ಹಾಗಾಗಿ ಈ ವ್ಯಕ್ತಿಗಳಿಗೆ ಯಾವುದೇ ಜೇನು ಸಲ್ಲದು. ಇದರ ಹೊರತಾಗಿ ಸಾಮಾನ್ಯವಾದ ಯಾವುದೇ ಜೇನಿನ ಸೇವನೆಯಿಂದ ಏನೂ ತೊಂದರೆ ಇಲ್ಲವೆಂದಾದಲ್ಲಿ ಮನುಕಾ ಜೇನನ್ನೂ ಸುರಕ್ಷಿತವಾಗಿ ಸೇವಿಸಬಹುದು.

  ಮನುಕಾ ಜೇನು ಎಲ್ಲಿ ಲಭ್ಯವಿದೆ?

  ಮನುಕಾ ಜೇನು ಎಲ್ಲಿ ಲಭ್ಯವಿದೆ?

  ಇದು ನ್ಯೂಜಿಲ್ಯಾಂಡಿನಲ್ಲಿ ಮಾತ್ರವೇ ಸಿಗುವ ಜೇನಾದುದರಿಂದ ಇದನ್ನು ಕೇವಲ ಆನ್ಲೈನ್ ಮೂಲಕ ಖರೀದಿಸಬಹುದು. ಈ ಜೇನನ್ನು ಮಾರುವವರು UMF Honey Association ಎಂಬ ಅಂತಾರಾಷ್ಟ್ಟೀಯ ಸಂಸ್ಥೆಯಿಂದ ಅಧಿಕೃತವಾಗಿ ಪರಿಗಣಿಸಲ್ಪಟ್ಟಿರಬೇಕು. ಈ ಮೂಲಕ UMF ಮಟ್ಟ ಐದಕ್ಕೂ ಕಡಿಮೆ ಇರುವ ಕಳಪೆ ಜೇನನ್ನು ಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು.

  ಈ ಜೇನಿನ ಸೇವನೆ ಹೇಗೆ?

  ಈ ಜೇನಿನ ಸೇವನೆ ಹೇಗೆ?

  ಇತರ ಯಾವುದೇ ಜೇನನ್ನು ಸೇವಿಸುವಂತೆಯೇ ಮನುಕಾ ಜೇನನ್ನೂ ಸೇವಿಸಬಹುದು. ಟೋಸ್ಟ್ ಮೇಲೆ ಸವರಿಕೊಂಡು, ಸಿಹಿ ಹಾಗೂ ಇತರ ಖಾದ್ಯಗಳಲ್ಲಿ ಸಕ್ಕರೆಯ ಬದಲು, ಒಂದು ಚಮಚದಷ್ಟು ಜೇನನ್ನು ನೇರವಾಗಿಯೂ ಸೇವಿಸಬಹುದು.

  ಈ ಜೇನಿನ ಸೇವನೆ ಹೇಗೆ?

  ಈ ಜೇನಿನ ಸೇವನೆ ಹೇಗೆ?

  ನೆನಪಿಡಿ: ಸಾಮಾನ್ಯ ತಾಪಮಾನದಲ್ಲಿ ಈ ಜೇನು ಅತಿ ಹೆಚ್ಚು ಸ್ನಿಗ್ಧ ಹಾಗೂ ತರಿತರಿಯಾಗಿರುತ್ತದೆ. ಹಾಗಾಗಿ ಇದನ್ನು ಸವರಿಕೊಂಡಾಗ ಸಾಮಾನ್ಯ ಜೇನಿನಂತಿರದೇ ಗಾಢವಾದ ಕೆನೆಯಂತಿರುತ್ತದೆ.

  English summary

  What Is Manuka Honey? Benefits And Side Effects

  The latest health fad taking the world by storm is manuka honey. But what exactly is manuka honey? And why are people going so crazy about it? We will explore that in this article today. Manuka honey is a special type of medicinal honey produced only by the bees that draw nectar and pollen from the flowers of the manuka bush in New Zealand. And while this geographical rarity is definitely one of the reasons behind its stardom, the bigger (and more valid) reason is that this special type of honey has antibiotic properties that are graded on the Unique Manuka Factor (UMF) scale from 5 to 20 for medical viability.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more