For Quick Alerts
ALLOW NOTIFICATIONS  
For Daily Alerts

ಡಿಸ್ಪರೆನ್ಯೂನಿಯಾ ಅಂದರೆ ಏನು? ನೋವಿನ ಲೈಂಗಿಕ ಕ್ರಿಯೆಗೆ 12 ಕಾರಣಗಳು

By Sushma Charhra
|

ನೋವಿನ ಲೈಂಗಿಕ ಕ್ರಿಯೆಯನ್ನು ವೈಜ್ಞಾನಿಕವಾಗಿ ಡಿಸ್ಪರೆನ್ಯೂನಿಯಾ ಎಂದು ಕರೆಯುತ್ತಾರೆ. ಅಂದರೆ, ಜನನಾಂಗದಲ್ಲಿ, ಸಂಭೋಗದ ಸಂದರ್ಭದಲ್ಲಿ, ಇಲ್ಲವೇ ನಂತರ ಅಥವಾ ಮುಂಚಿತವಾಗಿ ಕಾಣಿಸುವ ನೋವು ಎಂದರ್ಥ. ಈ ಲೇಖನದಲ್ಲಿ, ನಾವು ಇಂತಹ ಸಂಭೋಗಕ್ಕೆ ಕಾರಣಗಳೇನು ಎಂಬುದನ್ನು ವಿವರಿಸಲಿದ್ದೇವೆ. ಸಂಭೋಗದ ಸಂದರ್ಭದಲ್ಲಿ ನೀವೂ ಕೂಡ ನೋವನ್ನು ಅನುಭವಿಸುತ್ತಿದ್ದೀರಾ? ಇದಕ್ಕೆ ಹಲವಾರು ಕಾರಣಗಳಿರಬಹುದು, ಆದರೆ ಅದಕ್ಕಿಂತ ಮೊದಲು ನೀವು ಅದರ ಲಕ್ಷಣಗಳನ್ನು ತಿಳಿದುಕೊಂಡಿರುವುದಿಲ್ಲ. ಇದು ಪ್ರಮುಖವಾಗಿ ಒಳನುಗ್ಗುವಿಕೆಯ ಸಂದರ್ಬದಲ್ಲಿ ಮಾತ್ರ ಕಾಣಿಸಿಕೊಳ್ಳುವ ನೋವಾಗಿರುತ್ತದೆ.

ಪ್ರತಿ ನುಸುಳುವಿಕೆಯಲ್ಲೂ ನೋವು ಕಾಣಿಸಿಕೊಳ್ಳುತ್ತದೆ, ಸುಟ್ಟಂತ ಅಥವಾ ವಿಚಿತ್ರ ನೋವು ಇರಬಹುದು, ಒತ್ತಡದ ಸಂದರ್ಬದಲ್ಲಿ ತೀವ್ರ ನೋವು ಇರಬಹುದು ಮತ್ತು ಸಂಭೋಗದ ನಂತರ ಕೂಡ ನೋವು ಇರಬಹುದು. ಮಹಿಳೆಯರು ಕೆಲವೊಂದು ಸಂದರ್ಬದಲ್ಲಿ ಇಂತಹ ಅನುಭವಕ್ಕೆ ಒಳಗಾಗುತ್ತಾರೆ, ನಾಲ್ಕರಲ್ಲಿ ಮೂವರು ಮಹಿಳೆಯರಿಗೆ ಈ ರೀತಿಯ ನೋವಿನ ಲೈಂಗಿಕ ಸಂಭೋಗ ನಡೆಯಬಹುದೆಂದು ಹೇಳಲಾಗುತ್ತದೆ. ಹಾಗಾದ್ರೆ ಈ ರೀತಿ ಆಗುವುದಕ್ಕೆ ಏನೆಲ್ಲಾ ಕಾರಣಗಳಿರಬಹುದು ಎಂಬುದನ್ನು ತಿಳಿಯೋಣ ಬನ್ನಿ...

ಅತಿಯಾದ ಒತ್ತಡ

ಅತಿಯಾದ ಒತ್ತಡ

ಅತಿಯಾದ ಒತ್ತಡವೂ ನೋವಿನ ಸಂಭೋಗಕ್ಕೆ ಕಾರಣವಾಗುತ್ತಾ? ಒಂದು ವೇಳೆ ಜೋಡಿಗಳಲ್ಲಿ ಯಾವುದೋ ಕಾರಣಕ್ಕೆ ಜಗಳ ನಡೆದಿದ್ದರೆ ಅಥವಾ ವಾದವಿವಾದ ನಡೆದಿದ್ದರೆ, ಇದು ಅವರ ಮಾಂಸಖಂಡಗಳ ವಿಶ್ರಾಂತಿ ಮತ್ತು ನಯಗೊಳಿಸುವಿಕೆಯನ್ನು ಕುಂಠಿತಗೊಳಿಸಿರುತ್ತದೆ.. ನರಗಳೂ ಕೂಡ ಸ್ನಾಯು ಸೆಳೆತಕ್ಕೆ ಮತ್ತು ಬ್ಯಾಕ್ಟೀರಿಯಾ ಸೋಂಕಿಗೆ ಕಾರಣವಾಗಿ ಇವೆರಡೂ ಕೂಡ ನೋವಿನ ಲೈಂಗಿಕ ಕ್ರಿಯೆಗೆ ಕಾರಣವಾಗುತ್ತದೆ. ಆದರೆ, ಪೆಲ್ವಿಕ್ ಮಹಡಿಯ ಮಾಂಸಖಂಡಗಳು ನಿಮ್ಮ ಜೀವನದ ಒತ್ತಡದ ಪರಿಣಾಮವಾಗಿ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ ಮತ್ತು ಇದು ನೋವಿನ ಲೈಂಗಿಕ ಕ್ರಿಯೆಗೆ ಕಾರಣವಾಗುತ್ತದೆ.

2.ಸರಿಯಾದ ಪ್ರಮಾಣದ ಲೈಂಗಿಕ ಸಂಭೋಗ ನಡೆಸದೇ ಇರುವುದು

2.ಸರಿಯಾದ ಪ್ರಮಾಣದ ಲೈಂಗಿಕ ಸಂಭೋಗ ನಡೆಸದೇ ಇರುವುದು

ವರ್ಷವೋ, ಎರಡು ವರ್ಷವೊ ಲೈಂಗಿಕ ಕ್ರಿಯೆ ನಡೆಸೇ ಇಲ್ಲವೇ? ಹಾಗಾದ್ರೆ ಮತ್ತೆ ಲೈಂಗಿಕ ಕ್ರಿಯೆಯನ್ನು ಪುನರಾರಂಭಿಸುವ ಸಂದರ್ಬದಲ್ಲಿ ಸಹಜವಾಗಿಯೇ ನೋವು ಕಾಣಿಸಿಕೊಳ್ಳುತ್ತದೆ.ಯಾವಾಗಲೂ ನಡೆಯುತ್ತಿರುವ ಕ್ರಿಯೆಯಿಂದಾಗಿ ದೇಹದ ಭಾಗವು ಆರೋಗ್ಯವಾಗಿ ಮತ್ತು ಬಲಾಢ್ಯವಾಗಿ ಇರುತ್ತದೆ.ಅದೇ ರೀತಿ, ಯೋನಿ ಸ್ನಾಯುಗಳು ಸಂಭೋಗದ ಸಮಯದಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತವೆ.ಇದು ಶಕ್ತಿವಂತರನ್ನಾಗಿ ಮತ್ತು ಆರೋಗ್ಯವಂತರನ್ನಾಗಿ ಮಾಡುತ್ತದೆ. ನಿಯಮಿತ ಸಂಭೋಗ ಕ್ರಿಯೆ ನಡೆಸುವುದರಿಂದಾಗಿ ಯೋನಿಯ ಗೋಡೆಗಳು ಹಿಗ್ಗಿಕೊಳ್ಳುತ್ತವೆ ಮತ್ತು ಯೋನಿಯ ಸ್ನಾಯುಗಳು ಸಂಭೋಗಕ್ಕೆ ಹೊಂದಿಕೊಳ್ಳುವಂತಾಗಿರುತ್ತದೆ.

3. ಲೂಬ್ರಿಕೆಂಟ್ ನ್ನು ಬಿಟ್ಟು ಬಿಡುವುದು

3. ಲೂಬ್ರಿಕೆಂಟ್ ನ್ನು ಬಿಟ್ಟು ಬಿಡುವುದು

ಯೋನಿಯ ಶುಷ್ಕತೆಯು ಹಲವಾರು ಕಾರಣಗಳಿಂದ ಆಗಬಹುದು.ಆದರೆ ಇತರೆ ಕಾರಣಗಳಿಂದಲೂ ಕೂಡ ಯೋನಿಯ ಶುಷ್ಕತೆ ಕಾಣಿಸಿಕೊಂಡು ನೋವಿಗೆ ಕಾರಣವಾಗುವ ಸಾಧ್ಯತೆ ಇದೆ.ಅತಿಯಾಗಿ ಮಾತ್ರೆಗಳ ಸೇವನೆ ಮಾಡುವುದು ಅಥವಾ ನೀವು ಪ್ರಚೋದನೆಗೆ ಒಳಗಾಗದೇ ಇದ್ದರೆ, ಸಾಮಾನ್ಯವಾಗಿ ಹೊಂದಿರುವುದಕ್ಕಿಂತಲೂ ಹೆಚ್ಚಿನ ನಯಗೊಳಿಸುವಿಕೆಯನ್ನು ಕಡಿಮೆ ಮಾಡಬಹುದು. ಇದು ಕೂಡ ಲೈಂಗಿಕ ಕ್ರಿಯೆಯ ಸಂದದರ್ಭದಲ್ಲಿ ನೋವಿಗೆ ಕಾರಣವಾಗುತ್ತೆ..ಹಾಗಾಗಿ ನಿಮ್ಮ ಲೈಂಗಿಕ ಕ್ರಿಯೆ ಆರಂಭಕ್ಕೂ ಮುನ್ನ ಲೂಬ್ರಿಕೆಂಟ್ ನ್ನು ಹೆಚ್ಚು ಸಮಯ ಹಿಡಿಸಬೇಕು.

4.ಮೆನೋಪಾಸ್ ನ ಆಕ್ರಮಣ

4.ಮೆನೋಪಾಸ್ ನ ಆಕ್ರಮಣ

ಮುಂಚಿನ ಋತುಬಂಧಕ್ಕೊಳಗಾದ ಸಮಸ್ಯೆಗಳು ಲೈಂಗಿಕ ಡ್ರೈವ್ ಮೇಲೆ ಪ್ರಭಾವ ಬೀರುತ್ತವೆ. ಯೋನಿಯ ಭಾಗದಲ್ಲಿ ಸರಿಯಾದ ಪ್ರಮಾಣದ ಈಸ್ಟ್ರೋಜನ್ ಇರುವುದಿಲ್ಲ. ಹಾಗಾಗಿ ಯೋನಿಯ ಚರ್ಮವು ತುಂಬಾ ಸ್ಟ್ರೆಚ್ಚಿಯಾಗಿ ಇರುವುದಿಲ್ಲ ಮತ್ತು ಕಡಿಮೆ ನಯವಾಗಿ ಇರುತ್ತದೆ. ಇದು ಕೂಡ ನೋವಿಗೆ ಕಾರಣವಾಗುತ್ತದೆ.

5.ಬ್ಯಾಕ್ಟೀರಿಯಾ ಅಥವಾ ಯೀಸ್ಟ್ ಸೋಂಕು

5.ಬ್ಯಾಕ್ಟೀರಿಯಾ ಅಥವಾ ಯೀಸ್ಟ್ ಸೋಂಕು

ಯಾವುದೇ ವಯಸ್ಸಿನ ಮಹಿಳೆಯರಲ್ಲಿ ಬ್ಯಾಕ್ಟೀರಿಯಾ ಅಥವಾ ಯೀಸ್ಟ್ ಸೋಂಕು ಕಾಣಿಸಿಕೊಳ್ಳಬಹುದು.ಆದರೆ, ಮೆನೋಪಾಸ್ ವರ್ಷದ ಸಂದರ್ಬದಲ್ಲಿ, ಬ್ಯಾಕ್ಟೀರಿಯಾ ಅಥವಾ ಯೀಸ್ಟ್ ಸೋಂಕು ಸರ್ವೇ ಸಾಮಾನ್ಯವಾಗಿರುತ್ತದೆ. ವಜಿನಲ್ ಯೀಸ್ಟ್ ಸೋಂಕು ಕ್ಯಾಂಡಿಡಾ ಹೆಸರಿನ ಶಿಲೀಂದ್ರದಿಂದ ಉಂಟಾಗುತ್ತದೆ ಮತ್ತು ನೈಸರ್ಗಿಕವಾಗಿ ವಜಿನಾವು ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಗಳನ್ನು ಸಮತೋಲನದಲ್ಲಿ ಇಟ್ಟಿರುತ್ತದೆ. ಯಾವಾಗ ಯೀಸ್ಟ್ ಸೆಲ್ ಗಳು ವಜಿನಾದಲ್ಲಿ ಅಧಿಕವಾಗುತ್ತೋ ಆಗ ಕಿರಿಕಿರಿ ಆರಂಭಾವಾಗುತ್ತೆ ಮತ್ತು ನೋವು, ತುರಿಕೆಗಳು ಕಾಣಿಸಿಕೊಳ್ಳಬಹುದು.

6.ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಇರುವುದು

6.ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಇರುವುದು

ಯಾವ ಮಹಿಳೆಯರಿಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಕಿರಿಕಿರಿಗಳಿರುತ್ತವೆಯೋ ಅಂತವರಿಗೆ ಈ ಸಮಸ್ಯೆ ಆಗಬಹುದು.. ಕರುಳಿನ ನಂತರವೇ ಹತ್ತಿರದಲ್ಲೇ ಗರ್ಭಾಶಯವಿದೆ. ಹಾಗಾಗಿ ಗರ್ಭಾಶಯ ಸಣ್ಣ ಚಲನೆಯೂ ಕೂಡ ಕರುಳಿನ ಕಿರಿಕಿರಿ ಮತ್ತು ಉರಿಯೂತಕ್ಕೆ ಕಾರಣವಾಗಬಹುದು.. ಇದು ಕೂಡ ಹೊಟ್ಟೆಗೆ ಲೈಂಗಿಕ ಕ್ರಿಯೆಯಲ್ಲಿ ನೋವನ್ನು ತರುವ ಒಂದು ಸಂಗತಿಯಾಗಿದೆ.

7.ಶ್ರೋಣಿಯ ಮಹಡಿಯಲ್ಲಿ ಅಸಾಮಾನ್ಯ ಕ್ರಿಯೆ ಇರಬಹುದು

7.ಶ್ರೋಣಿಯ ಮಹಡಿಯಲ್ಲಿ ಅಸಾಮಾನ್ಯ ಕ್ರಿಯೆ ಇರಬಹುದು

ಪೆಲ್ವಿಕ್-ನೆಲದ ಅಪಸಾಮಾನ್ಯ ಕ್ರಿಯೆ ಹೆಚ್ಚಿನವರಲ್ಲಿ ಸಾಮಾನ್ಯವಾಗಿರುತ್ತದೆ ಆದರೆ ಈ ರೋಗ ನಿರ್ಣಯವನ್ನು ಮಾಡಲು ಬಹಳ ಕಷ್ಟವಾಗುತ್ತದೆ. ಲೈಂಗಿಕ ಸಂಭೋಗದ ಸಂದರ್ಬದಲ್ಲಿ ಪೆಲ್ವಿಕ್ ಮಹಡಿಯ ಮಾಸಂಖಂಡಗಳು ಸೆಳೆತಕ್ಕೆ ಒಳಗಾಗಿ ನೋವಿಗೆ ಕಾರಣವಾಗಬಹುದು..ಮಹಿಳೆಯರ ಶ್ರೋಣಿಯು ಗರ್ಭಾಶಯ,ಮೂತ್ರಕೋಶ, ಕರುಳನ್ನು ಬೆಂಬಲಿಸುತ್ತದೆ.ಮೂತ್ರದ ಟ್ಯೂಬ್, ಯೋನಿ ಎಲ್ಲಾ ಈ ಶ್ರೋಣಿಯ ಮಹಡಿ ಸ್ನಾಯುಗಳ ಮೂಲಕ ಹಾದುಹೋಗುತ್ತವೆ.

8. ನಿಮಗೆ ಎಂಡೋಮೆಟ್ರಿಸಿಸ್ ಇರಬಹುದು

8. ನಿಮಗೆ ಎಂಡೋಮೆಟ್ರಿಸಿಸ್ ಇರಬಹುದು

ಎಂಡೋಮೆಟ್ರಿಸ್ ಕಂಡೀಷನ್ ಎಂದರೆ ಎಂಡೋಮೆಟ್ರಿಯಸ್ ಅಂಗಾಂಶ ಗರ್ಭಕೋಶದ ಹೊರಗೆ ಬೆಳೆಯುವ ಸ್ಥಿತಿಯಾಗಿದೆ. ಹಲವಾರು ಮಹಿಳೆಯರು ಎಂಡೋಮೆಟ್ರಿಸಿಸ್ ನಿಂದ ಬಳಲುತ್ತಾರೆ ಮತ್ತು ಇದು ಅವರಿಗೆ ಸಂಭೋಗದ ಸಂದರ್ಬದಲ್ಲಿ ನೋವಿಗೂ ಕಾರಣವಾಗಿರುತ್ತದೆ. ಅಷ್ಟೇ ಅಲ್ಲ, ಯಾವ ಜಾಗದಲ್ಲಿ ಎಂಡೋಮೆಟ್ರಿಸಿಸ್ ಆಗಿದೆ ಎಂಬುದರ ಆಧಾರದಲ್ಲಿ ಅವರಿಗೆ ನೋವಿನ ಪ್ರಮಾಣವೂ ಕೂಡ ಆಗುತ್ತಿರುತ್ತದೆ. ಒಂದು ಸಾಮಾನ್ಯ ಲಕ್ಷಣ ಎಂದರೆ, ನೋವಿನ ಮುಟ್ಟು, ಅತಿಯಾದ ರಕ್ತ ಹೊರಹೋಗುವಿಕೆ, ಬಂಜೆತನ, ಮೂತ್ರದಲ್ಲಿ ಉರಿ ಕಾಣಿಸಿಕೊಳ್ಳುವುದು ಮತ್ತು ನೋವಿನ ಲೈಂಗಿಕ ಸಂಭೋಗವು ಎಂಡೊಮೆಟ್ರಿಸಿಸ್ ಇರಬಹುದೆಂಬುದರ ಲಕ್ಷಣಗಳಾಗಿರುತ್ತದೆ.

9. ನೀವು STD / STI ಅಥವಾ ಪೆಲ್ವಿಕ್ ರೋಗವನ್ನು ಹೊಂದಿರುತ್ತೀರಿ

9. ನೀವು STD / STI ಅಥವಾ ಪೆಲ್ವಿಕ್ ರೋಗವನ್ನು ಹೊಂದಿರುತ್ತೀರಿ

ಗರ್ಭಾಶಯದ ಮತ್ತು ಪೆಲ್ವಿಕ್ ಉರಿಯೂತದ ಕಾಯಿಲೆಗೆ ಸಂಬಂಧಿಸಿದ ಫೈಬ್ರೋಯಿಡ್ಗಳು ನೋವಿನ ಸಂಭೋಗವನ್ನು ಹೊಂದಿರಲು ಸಾಮಾನ್ಯ ಕಾರಣಗಳಾಗಿವೆ.ಅಂಡಾಶಯದ ಚೀಲಗಳು ಮತ್ತು ಇತರ ಸೋಂಕುಗಳು ಸಹ ಕಾರಣವಾಗಬಹುದು. ಒಂದು ವೇಳೆ ನೀವು ಇಂತಹದ್ದೇ ಭಯಾನಕ ನೋವಿಗೆ ಒಳಗಾಗುತ್ತಿದ್ದರೆ ಕೂಡಲೇ ನಿಮ್ಮ ವೈದ್ಯರನ್ನು ಭೇಟಿ ಮಾಡುವುದು ಬಹಳ ಒಳ್ಳೆಯದು.

10. ನೀವು ಯೋನಿಮಿಸಸ್ ಹೊಂದಿರಬಹುದು

10. ನೀವು ಯೋನಿಮಿಸಸ್ ಹೊಂದಿರಬಹುದು

ಯೋನಿಮಿಸಸ್ ಗೆ ಕಾರಣಗಳೆಂದರೆ ಯೋನಿಯ ಸ್ನಾಯುಗಳು ಪೆನೆಟ್ರೇಷನ್ ನ ಸಂದರ್ಬದಲ್ಲಿ ಆತಂಕಕ್ಕೆ ಒಳಗಾಗುತ್ತವೆ. ಈ ಕಂಡೀಷನ್ ಯಾಕಾಗುತ್ತದೆ ಎಂದರೆ ಅನೈಚ್ಛಿಕವಾಗಿ ವಜಿನಲ್ ಮತ್ತು ಪೆಲ್ವಿಕ್ ಫ್ಲೋರಿನ ಮಾಂಸಖಂಡಗಳು ಸಂಧಿಸುತ್ತವೆ ಮತ್ತು ಹೆಚ್ಚಿನ ಒತ್ತಡವು ಅದನ್ನು ಒಳಹೋಗಲು ಬಿಡುವುದಿಲ್ಲ.. ಇದು ಯಾವ ಹಂತಕ್ಕೆ ಹೋಗಬಹುದೆಂದರೆ ನೀವು ನಿಮ್ಮ ವಜಿನಾದ ಒಳಗೆ ಏನನ್ನೂ ಹಾಕಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯಿಂದ ಬಳಲುವ ಮಹಿಳೆಯರು ಹೆಚ್ಚು ಕಿರಿಕಿರಿ ಅನುಭವಿಸುತ್ತಾರೆ.

11.ನಿಮ್ಮ ಸಂಗಾತಿಯ ನಿಮಿರುವಿಕೆಯು ಅಸಾಮಾನ್ಯ ಆಗಿರಬಹುದು

11.ನಿಮ್ಮ ಸಂಗಾತಿಯ ನಿಮಿರುವಿಕೆಯು ಅಸಾಮಾನ್ಯ ಆಗಿರಬಹುದು

ಒಂದು ವೇಳೆ ನಿಮ್ಮ ಸಂಗಾತಿಗೆ ನಿಮಿರುವಿಕೆಯಲ್ಲಿ ತೊಂದರೆಗಳಿದ್ದಲ್ಲಿ, ಮಹಿಳೆಯರು ಹೆಚ್ಚು ಅಸ್ವಸ್ಥತೆಯನ್ನು ಸಂಭೋಗದ ಸಂದರ್ಬದಲ್ಲಿ ಎದುರಿಸುತ್ತಾರೆ. ED ಚಿಕಿತ್ಸೆಗಳು ಉದಾಹರಣೆಗೆ ವಯಾಗ್ರ ಗಳು ಅವರನ್ನು ಹೆಚ್ಚು ದೀರ್ಘಾವಧಿಯ ಪರಾಕಾಷ್ಟೆಗೆ ತಳ್ಳಿರಬಹುದು. ಅದು ಮಹಿಳೆಯರಿಗೆ ನೋವುಂಟು ಮಾಡುತ್ತಿರಬಹುದು.

12. ವಲ್ವೋಡಿನಿಯಾ ಅಥವಾ ವೆಸ್ಟಿಬುಲರ್ ವಲ್ವಿಟಿಸ್

12. ವಲ್ವೋಡಿನಿಯಾ ಅಥವಾ ವೆಸ್ಟಿಬುಲರ್ ವಲ್ವಿಟಿಸ್

ವಲ್ವೋಡಿನಿಯಾ ಅಥವಾ ವೆಸ್ಟಿಬುಲರ್ ವಲ್ವಿಟಿಸ್ ಎಂಬುದು ಪೆನೆಟ್ರೇಷನ್ ನಲ್ಲಿ ದೀರ್ಘಕಾಲದ ನೋವಿನ ಸ್ಥಿತಿಯಾಗಿರುತ್ತದೆ . ಇದಕ್ಕೆ ಸರಿಯಾದ ಮೆಡಿಕಲ್ ಕಾರಣ ಇನ್ನೂ ತಿಳಿದಿಲ್ಲವಾದರೂ, ಇದು ಉರಿಯೂತದ ಪ್ರತಿಕ್ರಿಯೆಯಿಂದಾಗಿ ನರಗಳು ವಜಿನಾದಲ್ಲಿ ತೆರೆದುಕೊಳ್ಳುವ ಲಕ್ಷಣಗಳಿಂದ ಆಗುವ ನೋವು ಎಂದು ಊಹಿಸಲಾಗಿದೆ. ಆದರೆ ಈ ಸಮಸ್ಯೆಯೂ ಕೂಡ ಉದ್ಭವಿಸಬಹುದಾದ ಸಾಧ್ಯತೆಗಳಿದೆ.

English summary

What Is Dyspareunia? 12 Reasons Of Painful Penetration

Women at some point in their lives experience a painful sex and every three out of four women have pain during sex. Let's have a look at what are the causes of painful intercourse.
X
Desktop Bottom Promotion