For Quick Alerts
ALLOW NOTIFICATIONS  
For Daily Alerts

ಕಾಮಾಸಕ್ತಿ ಮತ್ತು ಸೆಕ್ಸ್ ಸಾಮರ್ಥ್ಯ ಹೆಚ್ಚಿಸುವ ಒಂಬತ್ತು ಆಹಾರಗಳು

|

ಒಂದು ವೇಳೆ ನಿತ್ಯದ ಲೈಂಗಿಕ ಅಗತ್ಯವನ್ನು ಪೂರೈಸುವುದಕ್ಕಿಂತಲೂ ನಿದ್ದೆ ಮಾಡುವುದೇ ಒಳ್ಳೆಯದು ಎಂಬ ಅಭಿಪ್ರಾಯ ರಾತ್ರಿ ಮಲಗುವಾಗ ಮೂಡಿದರೆ ಇದಕ್ಕೆ ಕುಂಠಿತಗೊಂಡ ಲೈಂಗಿಕಾಸಕ್ತಿ ಅಥವಾ ಸಾಮರ್ಥ್ಯ ಕಾರಣವಾಗಿರಬಹುದು. ಈ ಸಾಮರ್ಥ್ಯವನ್ನು ಮತ್ತೆ ಪಡೆಯಲು ಥಟ್ಟನೇ ಹೊರಗೆ ಹೋಗಿ ಅಂಗಡಿಯಿಂದ ಕೊಂಡು ತರಲು ಸಾಧ್ಯವಿಲ್ಲ.

ಆದರೆ ಈ ಸೆಕ್ಸ್ ಸಾಮರ್ಥ್ಯವನ್ನು ಪಡೆಯಲು ನಿಸರ್ಗ ನೀಡಿರುವ ಕೆಲವು ಆಹಾರಗಳನ್ನು ಸೇವಿಸುವ ಮೂಲಕ ಖಂಡಿತಾ ಸಾಧ್ಯ. ನಿಸರ್ಗ ಒದಗಿಸಿರುವ ಕೆಲವು ಅಹಾರಗಳಿಗೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಗುಣವಿದ್ದು ಇವುಗಳನ್ನು ಸೇವಿಸುತ್ತಾ ಬರುವ ಮೂಲಕ ನಿಧಾನವಾಗಿ, ದೇಹ ಕಳೆದುಕೊಂಡಿದ್ದ ತನ್ನ ಲೈಂಗಿಕ ಸಾಮರ್ಥ್ಯವನ್ನು ನೈಸರ್ಗಿಕವಾಗಿ ಮತ್ತೆ ಪಡೆದುಕೊಳ್ಳುತ್ತದೆ.

1. ಬೆಣ್ಣೆಹಣ್ಣು

1. ಬೆಣ್ಣೆಹಣ್ಣು

ಈ ಹಣ್ಣುಗಳು ಪುರುಷನ ವೃಷಣವನ್ನೇ ಹೋಲುವ ಕಾರಣದಿಂದಲೇ ಪುರಾತನ ಜನಾಂಗವಾದ ಅಜ್ಟೆಕ್ ಜನರು ಇವುಗಳನ್ನು ವೃಷಣಗಳೆಂದೇ ಕರೆಯುತ್ತಿದ್ದರು. ಆದರೆ ಇದೊಂದು ಉತ್ತಮ ಕ್ಕಾಮೋತ್ತೇಜಕ ಆಹಾರವೆಂದು ವಿಜ್ಞಾನ ತಿಳಿಸಲು ಇದರಲ್ಲಿರುವ ಸಮೃದ್ದ ಪ್ರಮಾಣದ ಅಪರ್ಯಾಪ್ತ ಕೊಬ್ಬು ಮತ್ತು ಅತಿ ಕಡಿಮೆ ಪ್ರಮಾಣದ ಪರ್ಯಾಪ್ತ ಕೊಬ್ಬುಗಳೇ ಕಾರಣವಾಗಿವೆ. ಈ ಪೋಷಕಾಂಶಗಳು ಹೃದಯ ಮತ್ತು ರಕ್ತನಾಳಗಳಿಗೆ ಉತ್ತಮವಾಗಿದ್ದು ಹೃದಯದ ಬಡಿತವನ್ನು ಉತ್ತಮಗೊಳಿಸಲು ಹಾಗೂ ರಕ್ತಪರಿಚಲನೆ ದೇಹದ ಎಲ್ಲಾ ಅಂಗಗಳಿಗೂ ಉತ್ತಮ ಪ್ರಮಾಣದಲ್ಲಿ ಹರಿಯಲು ನೆರವಾಗುತ್ತದೆ. ವಿಶೇಷವಾಗಿ, ಹೃದಯದ ತೊಂದರೆ ಇರುವ ಪುರುಷರಲ್ಲಿ ಇತರರಿಗಿಂತ ನಿಮಿರುದೌರ್ಬಲ್ಯ ಹೊಂದುವ ಸಾಧ್ಯತೆ ದುಪ್ಪಟ್ಟಾಗಿದೆ.

2. ಬಾದಾಮಿ

2. ಬಾದಾಮಿ

ಗೋಡಂಬಿ, ಶೇಂಗಾಬೀಜ, ಬಾದಾಮಿ, ಪಿಸ್ತಾ ಮೊದಲಾದ ಒಣಫಲಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಉತ್ತಮ ಪ್ರಮಾಣದಲ್ಲಿದ್ದು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಎಂಬ ರಸದೂತವನ್ನು ಹೆಚ್ಚು ಉತ್ಪಾದಿಸಲು ನೆರವಾಗುತ್ತದೆ. ಈ ಟೆಸ್ಟಾಸ್ಟೆರಾನ್ ಪುರುಷರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದೇ ಕಾರಣಕ್ಕೆ ಪುರುಷರ ಫಲವತ್ತತೆ ಮತ್ತು ಕಾಮಾಸಕ್ತಿ ಹೆಚ್ಚಿಸಲು ಬಾದಾಮಿಯನ್ನು ಸೇವಿಸಲು ನೀಡಲಾಗುತ್ತದೆ. ಕಾಮಾಸಕ್ತಿಯನ್ನು ಹೆಚ್ಚಿಸುವ ಇನ್ನೊಂದು ಆಹಾರವಾದ ಶತಾವರಿಯಂತೆಯೇ ಬಾದಾಮಿಗಳಲ್ಲಿಯೂ ಪೋಷಕಾಂಶಗಳು ಹೆಚ್ಚು ಸಾಂದ್ರವಾಗಿದ್ದು ಜೊತೆಗೇ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಫಲವತ್ತತೆಯನ್ನು ಹೆಚ್ಚಿಸುವ ಖನಿಜಗಳೂ ಉತ್ತಮ ಪ್ರಮಾಣದಲ್ಲಿವೆ. ಇವುಗಳಲ್ಲಿ ಪ್ರಮುಖವಾಗಿ ಸತು, ಸೆಲೆನಿಯಂ ಹಾಗೂ ವಿಟಮಿನ್ ಇ ಇದ್ದು ವಿಶೇಷವಾಗಿ ಸತು ಲೈಂಗಿಕಾಸಕ್ತಿಯನ್ನು ಹೆಚ್ಚಿಸಲು ಅಗತ್ಯವಾಗಿದೆ ಎಂದು ಡಾ. ಬ್ರೆಮನ್ ರವರು ತಿಳಿಸುತ್ತಾರೆ. ಲೈಂಗಿಕ ಶಕ್ತಿ ಹೆಚ್ಚಲು ಸತುವಿನ ಪಾತ್ರದ ಬಗ್ಗೆ ನಿಖರವಾಗಿ ನಮಗೆ ತಿಳಿದಿಲ್ಲದಿದ್ದರೂ ಇದು ಸಾಮರ್ಥ್ಯ ಹೆಚ್ಚಿಸುವುದಂತೂ ನಿಜ ಎಂದು ಅವರು ತಿಳಿಸುತ್ತಾರೆ.

3. ಲವಂಗ

3. ಲವಂಗ

ಅಡುಗೆಮನೆಯಲ್ಲಿ ಹಲವಾರು ಅಡುಗೆಗಳಲ್ಲಿ ಬಳಸುವ ಜೊತೆಗೇ ಲವಂಗವನ್ನು ಇನ್ನೂ ಹಲವಾರು ರೂಪದಲ್ಲಿ ಸೇವಿಸಬಹುದು. ಸುಮ್ಮನೇ ಜಗಿದು ನುಂಗಬಹುದು, ಬಿಸಿಬಿಸಿ ಸೇಬಿನ ಶಿರ್ಕಾ ಬೆರೆಸಿದ ಪೇಯದಲ್ಲಿ ಬೆರೆಸಿ ಸೇವಿಸಬಹುದು, ನಿಮ್ಮ ನೆಚ್ಚಿನ ಆಹಾರದೊಡನೆ ಜಗಿಯಬಹುದು ಅಥವಾ ಸರಳವಾಗಿ ಟೀಯೊಂದಿಗೆ ಕುದಿಸಿಯೂ ಸೇವಿಸಬಹುದು. ಭಾರತದಲ್ಲಿ ಲವಂಗವನ್ನು ಶತಮಾನಗಳಿಂದ ಕಾಮೋತ್ತೇಜಕವಾಗಿ ಬಳಸಲಾಗುತ್ತಾ ಬರಲಾಗಿದ್ದು ವಿಶೇಷವಾಗಿ ಪುರುಷರಿಗೆ ಹೆಚ್ಚಿನ ಪ್ರಯೋಜನ ದೊರಕುತ್ತದೆ ಎಂದು ಡಾ. ಗ್ಲಾಸ್ಮನ್ ರವರು ತಿಳಿಸುತ್ತಾರೆ. BMC Complementary and Alternative Medicine ಎಂಬ ವೈದ್ಯಕೀಯ ನಿಯತಕಾಲಿಕೆಯ ಪ್ರಕಾರ ಇಲಿಗಳ ಮೇಲೆ ಲವಂಗದ ಪರಿಣಾಮವನ್ನು .ಪ್ರಯೋಗಿಸಿ ನೋಡಿದಾಗ ಇವುಗಳಲ್ಲಿ ಲೈಂಗಿಕ ಚಟುವಟಿಕೆ ಹೆಚ್ಚಿದುದು ಕಂಡುಬಂದಿದೆ. ಲವಂಗವನ್ನು ಜಗಿಯುವ ಮೂಲಕ ಬಾಯಿಯ ದುರ್ವಾಸನೆಯೂ ಇಲ್ಲವಾಗುವ ಮೂಲಕ ಚುಂಬನದ ಪಟ್ಟುಗಳನ್ನು ಇನ್ನಷ್ಟು ಆಹ್ಲಾದಕರವಾಗಿಸಬಹುದು ಎಂದು ಡಾ. ಗ್ಲಾಸ್ಮನ್ ತಿಳಿಸುತ್ತಾರೆ. ಮೆಕ್ಸಿಕನ್ ಆಹಾರದಲ್ಲಿ ಲವಂಗದ ಪುಡಿಯನ್ನು ಬೆರೆಸಿ ಸೇವಿಸಿ ಜೊತೆಗೇ ಕೊಂಚ ಜೀರಿಗೆ ಮತ್ತು ದಾಲ್ಚಿನ್ನಿ ಪುಡಿಯನ್ನೂ ಬೆರೆಸಿದರೆ ಇದರಿಂದ ರುಚಿಯೊಂದಿಗೆ ಲೈಂಗಿಕ ಸಾಮರ್ಥ್ಯವೂ ಹೆಚ್ಚುತ್ತದೆ ಎಂದು ಅವರು ತಿಳಿಸುತ್ತಾರೆ.

4. ಅಂಜೂರ

4. ಅಂಜೂರ

ಮುಂದಿನ ಬಾರಿ ನಿಮ್ಮ ಮನದನ್ನ ನಿಮ್ಮನ್ನು ಕಂಡಾಕ್ಷಣ ನಿಮ್ಮೊಂದಿಗೆ ಅನುರಕ್ತನಾಗಬೇಕೆಂದು ನಿಮಗನ್ನಿಸುತ್ತದೆಯೇ? ಇದಕ್ಕೆ ಒಂದು ಸುಲಭ ವಿಧಾನವಿದೆ. ಅದೆಂದರೆ ಅಂಜೂರವನ್ನು ಸೇವಿಸುವುದು. ಅಂಜೂರಗಳಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಫಲವತ್ತತೆಯನ್ನು ಪ್ರಚೋದಿಸುವ ಹಾಗೂ ದೇಹದಲ್ಲಿ ಫೆರೋಮೋನುಗಳೆಂಬ ರಸದೂತಗಳನ್ನು ಸ್ರವಿಸಲು ನೆರವಾಗುವ ಮೂಲಕ ನವತಾರುಣ್ಯವನ್ನು ಉಕ್ಕಿಸುತ್ತದೆ. ಎಂದು ಡಾ. ಕ್ಲೆಮೆಂಟ್ ವಿವರಿಸುತ್ತಾರೆ. ಲೈಂಗಿಕ ಕ್ರೀಡೆಗೂ ಮುನ್ನ ಸುಮಾರು ಐದು ಅಂಜೂರಗಳನ್ನು ಸೇವಿಸಿ, ಬಳಿಕ ಇದರ ಪರಿಣಾಮಗಳನ್ನು ಸ್ವತಃ ಕಂಡುಕೊಳ್ಳಿ ಎಂದು ಅವರು ತಿಳಿಸುತ್ತಾರೆ.

ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದ ಪರಿಹಾರಗಳು

5. ಕಲ್ಲಂಗಡಿ ಹಣ್ಣು

5. ಕಲ್ಲಂಗಡಿ ಹಣ್ಣು

ನೂರಾರು ವರ್ಷಗಳಿಂದ ಕಪ್ಪು ಚಾಕಲೇಟನ್ನು ಉತ್ತಮ ಕಾಮೋತ್ತೇಜಕ ಎಂದೇ ನಂಬಲಾಗುತ್ತಾ ಬರಲಾಗಿದೆ. ಆದರೆ ಕೆನಡಾದಲ್ಲಿರುವ ಗ್ವುವೆಲ್ಫ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಇದು ಪೂರ್ಣಸತ್ಯವಲ್ಲ. ಇದರಲ್ಲಿರುವ ಫಿನೈಲ್ ಈಥೈಲಮೈನ್ ಎಂಬ ಪೋಷಕಾಂಶ ಮೆದುಳಿನಲ್ಲಿ ಸೆರೋಟೋನಿನ್ ಮತ್ತು ಎಂಡಾರ್ಫಿನ್ ಪ್ರಮಾಣವನ್ನು ಹೆಚ್ಚಿಸಿದರೂ ಲೈಂಗಿಕ ಶಕ್ತಿ ಹೆಚ್ಚುವುದನ್ನು ಮಾತ್ರ ಖಚಿತವಾಗಿ ತಿಳಿಸಲು ಸಾಧ್ಯವಿಲ್ಲ. ಹಾಗಾಗಿ ಇದರ ಬದಲಿಗೆ ಕಲ್ಲಂಗಡಿ ಹಣ್ಣನ್ನು ಸೇವಿಸುವುದೇ ಉತ್ತಮ.

ಇದರಲ್ಲಿ ಅತಿಹೆಚ್ಚು ಪ್ರಮಾಣದ ನೀರು ಇದ್ದರೂ ಉಳಿದ ಪೋಷಕಾಂಶಗಳಲ್ಲಿ ಸಿಟ್ರುಲೈನ್ ಎಂಬ ಪೋಷಕಾಂಶ ಉತ್ತಮ ಪ್ರಮಾಣದಲ್ಲಿದೆ. ಇದು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ವಿಶೇಷವಾಗಿ ಜನನಾಂಗಕ್ಕೆ ರಕ್ತ ಪೂರೈಸುವ ರಕ್ತನಾಳಗಳನ್ನು ಸಡಿಲಗೊಳಿಸುವ ಮೂಲಕ ಹೆಚ್ಚಿನ ರಕ್ತಪೂರೈಕೆ ಸಾಧ್ಯವಾಗುತ್ತದೆ ಹಾಗೂ ವಯಾಗ್ರಾದಷ್ಟೇ ಪರಿಣಾಮಕಾರಿಯಾಗಿ ಉದ್ರೇಕತೆಯನ್ನು ಹೆಚ್ಚಿಸುತ್ತದೆ. 2008ರಲ್ಲಿ Texas A&M Fruit and Vegetable Improvement Center ಎಂಬ ಸಂಸ್ಥೆಯಲ್ಲಿ ನಡೆಸಿದ ಒಂದು ಸಂಶೋಧನೆಯ ಮೂಲಕ ಕಲ್ಲಂಗಡಿ ಹಣ್ಣಿನ ಸೇವನೆಯಿಂದ ವಯಾಗ್ರಾದಂತಹ ಪರಿಣಾಮ ಕಂಡುಬರುತ್ತದೆ ಎಂದು ತಿಳಿಸಲಾಗಿದೆ. ಕಲ್ಲಂಗಡಿಯಲ್ಲಿರುವ ಸಿಟ್ರುಲೈನ್ ಎಂಬ ಪೋಷಕಾಂಶವನ್ನು ದೇಹ ಆರ್ಜಿನೈನ್ ಎಂಬ ಅಮೈನೋ ಆಮ್ಲವನ್ನಾಗಿ ಪರಿವರ್ತಿಸುತ್ತದೆ, ಇದು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಏರಿಸುವ ಮೂಲಕ ರಕ್ತನಾಳಗಳನ್ನು ಸಡಿಲಗೊಳಿಸಲು ನೆರವಾಗುತ್ತದೆ. ವಯಾಗ್ರಾ ಸಹಾ ಇದೇ ಕೆಲಸವನ್ನು ಮಾಡುವ ಕಾರಣ ವಯಾಗ್ರಾದಿಂದ ಪಡೆಯುವ ಪರಿಣಾಮವನ್ನೇ ಕಲ್ಲಂಗಡಿಯಿಂದಲೂ ಪಡೆಯಬಹುದು.

6. ಮೊಟ್ಟೆಗಳು

6. ಮೊಟ್ಟೆಗಳು

ಬೇಯಿಸಿ, ಆಮ್ಲೆಟ್ ಮಾಡಿ, ಬುರ್ಜಿ ತಯಾರಿಸಿ, ಒಟ್ಟಾರೆ ಮೊಟ್ಟೆಯನ್ನು ಸೇವಿಸಿ, ದಿನಕ್ಕೆರಡು ಮೊಟ್ಟೆ ತಿಂದರೆ ದಿನದ ಚಟುವಟಿಕೆಯಿಂದ ಕಳೆದುಕೊಂಡಿದ್ದ ಶಕ್ತಿಯನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯ. ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನು ಇದ್ದು ವಿಶೇಷವಾಗಿ ಪುರುಷರಲ್ಲಿ ಕಾಮಾಸಕ್ತಿ ಹಾಗೂ ಪೌರುಷವನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರಲ್ಲಿರುವ L-arginine ಎಂಬ ಪೋಷಕಾಂಶ ಪುರುಷರಲ್ಲಿ ಟೆಸ್ಟಾಸ್ಟೆರಾನ್ ರಸದೂತವನ್ನು ಹೆಚ್ಚು ಉತ್ಪಾದಿಸಿ ಕಾಮಾಸಕ್ತಿ ಹೆಚ್ಚಲೂ ನೆರವಾಗುತ್ತದೆ ಎಂದು ಡಾ. ಗ್ಲಾಸ್ಮನ್ ತಿಳಿಸುತ್ತಾರೆ.

7. ಜಿನ್ಸೆಂಗ್

7. ಜಿನ್ಸೆಂಗ್

ಹವಾಯ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಲೈಂಗಿಕಾಸಕ್ತಿಯ ಕೊರತೆ ಇರುವ ಮಹಿಳೆಯರು ಜೆನ್ಸೆಂಗ್ ಯುಕ್ತ ಅಹಾರವನ್ನು ಸತತವಾಗಿ ಒಂದು ತಿಂಗಳು ಸೇವಿಸಿದ ಪರಿಣಾಮವಾಗಿ ಇವರಲ್ಲಿ ಶೇ 68ರಷ್ಟು ಮಹಿಳೆಯರು ತಮ್ಮ ಒಟ್ಟಾರೆ ಲೈಂಗಿಕ ಜೀವನ ಹಿಂದಿನ ತಿಂಗಳಿಗಿಂತಲೂ ಅಚ್ಚರಿಯೋ ಎಂಬಂತೆ ಉತ್ತಮಗೊಂಡಿದೆ ಎಂದು ತಿಳಿಸಿದ್ದಾರೆ. "ಜಿನ್ಸೆಂಗ್ ಒಂದು ಶುಂಠಿಯಂತಹ ಗಡ್ಡೆಯಾಗಿದ್ದು ಇವುಗಳಿಂದ ತಯಾರಿಸಿದ ಆಹಾರ, ಟೀ ಅಥವಾ ಇತರ ಉತ್ಪನ್ನಗಳನ್ನು ನಿತ್ಯದ ಅಹಾರಕ್ರಮದಲ್ಲಿ ಅಳವಡಿಸಿಕೊಳ್ಳುವುದು ಉತ್ತಮವಾಗಿದೆ ಎಂದು ಡಾ. ಗ್ಲಾಸ್ಮನ್ ತಿಳಿಸುತ್ತಾರೆ. ಆದರೆ ಜಿನ್ಸೆಂಗ್ ಉತ್ಪನ್ನಗಳನ್ನು ನೋಡಿದಾಕ್ಷಣ ಸೇವಿಸಲು ಮುಂದಾಗದಿರಿ, ಏಕೆಂದರೆ ಕೆಲವು ಎನರ್ಜಿ ಡ್ರಿಂಕ್ ಗಳಲ್ಲೂ ಜಿನ್ಸೆಂಗ್ ಹೆಸರನ್ನು ಸೇರಿಸಲಾಗಿದ್ದು ಇದರಲ್ಲಿ ಅಪಾರ ಪ್ರಮಾಣದ ಸಕ್ಕರೆ ಮತ್ತು ಅಪಾಯಕಾರಿ ರಾಸಯನಿಕಗಳಿರುತ್ತವೆ ಇವುಗಳಿಂದ ಲೈಂಗಿಕ ಶಕ್ತಿ ಹೆಚ್ಚುವುದೇನೂ ಇಲ್ಲ ಬದಲಿಗೆ ಅಪಾಯವೇ ಹೆಚ್ಚು ಎಂದು ಅವರು ಎಚ್ಚರಿಸುತ್ತಾರೆ.

8.ಕೇಸರಿ

8.ಕೇಸರಿ

ಕೊಂಚ ದುಬಾರಿ ಎಂಬ ಒಂದೇ ಅಂಶವನ್ನು ಕಡೆಗಣಿಸಿದರೆ ಕಾಮಶಕ್ತಿಯನ್ನು ಹೆಚ್ಚಿಸಲು ಕೇಸರಿಗಿಂತ ಉತ್ತಮ ಆಹಾರ ಇನ್ನೊಂದಿಲ್ಲ. ಕೆನಡಾದಲ್ಲಿರುವ ಗ್ವುವೆಲ್ಫ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿರುವ ಪ್ರಕಾರ ಲೈಂಗಿಕ ಶಕ್ತಿಯನ್ನು ಉತ್ತಮಗೊಳಿಸಲು ಕೇಸರಿ ನೆರವಾಗುತ್ತದೆ. ಕೊಂಚ ಬಿಸಿನೀರಿನಲ್ಲಿ ಕೆಲವು ದಳ ಕೇಸರಿಗಳನ್ನು ಚಿಮುಕಿಸಿ ಸುಮಾರು ಹದಿನೈದು ನಿಮಿಷ ಹಾಗೇ ಬಿಟ್ತು ಬಳಿಕ ಇವುಗಳನ್ನು ಬೇಯಿಸಿದ ಅಕ್ಕಿ, ಕ್ವಿನೋವಾ ಅಥಾ ಬಾರ್ಲಿಯೊಂದಿಗೆ ಸೂಪ್ ಅಥವಾ ಸ್ಟೂ ರೂಪದಲ್ಲಿ ಸೇವಿಸಬಹುದು ಎಂದು ಡಾ. ಗ್ಲಾಸ್ಮನ್ ಸಲಹೆ ಮಾಡುತ್ತಾರೆ.

ಕೇಸರಿ ದುಬಾರಿಯಾದರೂ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು ಕಣ್ರೀ...

9. ಹಸಿಶುಂಠಿ

9. ಹಸಿಶುಂಠಿ

ಇಂಗ್ಲಿಂಡಿನ ಅಂದಿನ ಮಹಾರಾಜ ಏಳನೆಯ ಹೆನ್ರಿ ಹಾಗೂ ಹಲವಾರು ಪುರಾತನ ಏಶಿಯನ್ ರಾಜರು ಹಸಿಶುಂಠಿಯನ್ನು ಔಷಧೀಯ ಬಳಕೆಯಾಗಿ ಬಳಸುತ್ತಿದ್ದರು ಎಂದು ಡಾ. ಕ್ಲೆಮೆಂಟ್ ತಿಳಿಸುತ್ತಾರೆ. ಇಂದಿನ ಇಪ್ಪತ್ತೊಂದನೆಯ ಶತಮಾನದಲ್ಲಿ, ಹಸಿಶುಂಠಿಯ ಸಸ್ಯಜನ್ಯ ಔಷಧಿಗಳು ದೇಹದ ರಕ್ತಪರಿಚಲನೆ ಉತ್ತಮಗೊಳಿಸಲು, ತಾಪಮಾನವನ್ನು ಸರಿಪಡಿಸಲು, ಶ್ವಾಸನಾಳಗಳ ಒಳಗಣ ತೇವಭಾಗವನ್ನು ನಿವಾರಿಸಲು ಹಾಗೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ ಎಂದು ಅವರು ತಿಳಿಸುತ್ತಾರೆ. ಹಸಿಶುಂಠಿಯನ್ನು ಹಸಿಯಾಗಿ, ಸಿದ್ದರೂಪದ ಔಷಧಿಯ ರೂಪದಲ್ಲಿ ಅಥವಾ ನಿಮ್ಮ ನೆಚ್ಚಿನ ಪೇಯಗಳೊಂದಿಗೆ ಬೆರೆಸಿ ಸಹಾ ಕುಡಿಯಬಹುದು. ಹಸಿಶುಂಠಿಯ ಸೇವನೆಯಿಂದ ಕೇವಲ ಲೈಂಗಿಕ ಶಕ್ತಿ ಹೆಚ್ಚುವುದು ಮಾತ್ರವಲ್ಲ, ರೋಗ ನಿರೋಧಕ ಶಕ್ತಿಯೂ ಉತ್ತಮಗೊಂಡು ಶೀತ, ಕೆಮ್ಮು ಫ್ಲೂ ಸಹಿತ ಹಲವಾರು ಕಾಯಿಲೆಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ.

English summary

Top 9 Foods That Boost Your Libido

If you find you're more eager to sleep than have sex on an everyday basis, your sex drive may need a booster shot. But that doesn't mean you have to go out and buy out the nearest Victoria's Secret. All it takes is adding a few key foods into your diet to boost libido and get back in the mood. Here, foods to rev up your sex life, plus three that will stop it in its tracks.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more