For Quick Alerts
ALLOW NOTIFICATIONS  
For Daily Alerts

ನಿಮ್ಮ ಮೂಗು ಕೂಡ, ಆರೋಗ್ಯದ ಎಲ್ಲಾ ರಹಸ್ಯಗಳನ್ನು ಬಿಚ್ಚಿಡುತ್ತದೆಯಂತೆ!

|

ದೇಹದ ಒಂದೊಂದು ಅಂಗಕ್ಕೂ ಅದರದೇ ಆದ ವಿಶಿಷ್ಟತೆ ಇದೆ. ಎಲ್ಲವಕ್ಕೂ ಒಂದೊಂದು ರೀತಿಯ ಗ್ರಹಿಕೆಯ ಶಕ್ತಿ ಇರುತ್ತದೆ. ಹಾಗೆಯೇ ವಾಸನೆಯನ್ನು ಗ್ರಹಿಸುವ, ಉಸಿರಾಡಲು ನೆರವಾಗುವ ಹಾಗೂ ದೇಹದ ಸೌಂದರ್ಯವನ್ನು ರೂಪಿಸುವ ಪ್ರಮುಖ ಅಂಗವಾದ ಮೂಗಿನ ಬಗ್ಗೆ ಒಂದಿಷ್ಟು ತಿಳಿಯೋಣ. ನಿಮ್ಮ ಮೂಗು ನಿಮ್ಮ ಆರೋಗ್ಯದ ಬಗ್ಗೆ ಹಲವಾರು ವಿಷಯಗಳನ್ನು ಬಹಿರಂಗಪಡಿಸುತ್ತದೆ ಎಂಬುದು ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ.

ವಾಸನೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದ ಮೂಗಿನ ಆರೋಗ್ಯದಿಂದ ವ್ಯಕ್ತಿಯ ಆರೋಗ್ಯದ ಬಗ್ಗೆಯೂ ಹಲವಾರು ವಿಷಯಗಳನ್ನು ತಿಳಿಯಬಹುದು. ನಿಮ್ಮ ಮೂಗು ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದನ್ನು ಆಧರಿಸಿ ಆರೋಗ್ಯದ ಬಗ್ಗೆ ಮೂರು ಪ್ರಮುಖ ಅಂಶಗಳನ್ನು ತಿಳಿಯಲು ಸಾಧ್ಯವಿದೆ. ಆ ಅಂಶಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿ.. ನಿಮ್ಮ ಆರೋಗ್ಯದ ಬಗ್ಗೆ ನಿಮ್ಮ ಮೂಗು ತಿಳಿಸುವ ಮೂರು ಆಶ್ಚರ್ಯಕರ ಸಂಗತಿಗಳು ಹೀಗಿವೆ...

ವಾಸನೆಯ ಶಕ್ತಿ ಕಡಿಮೆಯಾಗಿದ್ದರೆ ನಿಮಗೆ ಹೀಗಾಗಬಹುದು

ವಾಸನೆಯ ಶಕ್ತಿ ಕಡಿಮೆಯಾಗಿದ್ದರೆ ನಿಮಗೆ ಹೀಗಾಗಬಹುದು

ನೆಗಡಿ ಬಂದಾಗ ಮೂಗಿನ ಆಘ್ರಾಣಿಸುವ ಶಕ್ತಿ ಕಡಿಮೆಯಾಗುವುದು ಸಹಜ. ಆದರೆ ಆರೋಗ್ಯ ಸಾಮಾನ್ಯವಾಗಿರುವಾಗಲೂ ನಿಮ್ಮ ಮೂಗಿನ ವಾಸನೆ ಕಂಡು ಹಿಡಿಯುವ ಶಕ್ತಿ ಕಡಿಮೆಯಾಗಿದ್ದಲ್ಲಿ ಅದು ನಿಮ್ಮ ಆರೋಗ್ಯದಲ್ಲಾಗುತ್ತಿರುವ ಹಲವಾರು ಏರುಪೇರುಗಳ ಬಗೆಗಿನ ಸಂಕೇತವಾಗಿದೆ.

ವಾಸನೆಯ ಶಕ್ತಿ ಕಡಿಮೆಯಾಗಿದ್ದರೆ ನಿಮಗೆ ಹೀಗಾಗಬಹುದು

ವಾಸನೆಯ ಶಕ್ತಿ ಕಡಿಮೆಯಾಗಿದ್ದರೆ ನಿಮಗೆ ಹೀಗಾಗಬಹುದು

ಚಿಕಾಗೊ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗವು ನಡೆಸಿದ ಸಂಶೋಧನೆಯ ಪ್ರಕಾರ, ವೃದ್ಧಾಪ್ಯದ ಸಮಯದಲ್ಲಿ ವಾಸನೆಯ ಶಕ್ತಿ ತೀರಾ ಕಡಿಮೆಯಾದಲ್ಲಿ, ಅಂಥವರು ಮುಂದಿನ 5 ವರ್ಷಗಳಲ್ಲಿ ಸಾವನ್ನಪ್ಪುವ ಸೂಚನೆಯಾಗಿರಬಹುದು ಎಂದು ಹೇಳಲಾಗಿದೆ. ಅದರಲ್ಲೂ ಕೆಲ ನಿರ್ದಿಷ್ಟ ಪರಿಮಳಗಳನ್ನು ಗ್ರಹಿಸಲು ಸಾಧ್ಯವಾಗದಿದ್ದರೆ ಅಂಥವರು ಮುಂದಿನ 5 ವರ್ಷಗಳೊಳಗೆಯೇ ಮೃತರಾಗಬಹುದು ಎನ್ನುತ್ತದೆ ಈ ಸಂಶೋಧನೆ. ಸಂಶೋಧನೆಗೆ ಒಳಪಡಿಸಲಾದ ವೃದ್ಧರಲ್ಲಿ ಗುಲಾಬಿ, ಪೆಪ್ಪರಮಿಂಟ್ ಮತ್ತು ಆರೆಂಜ್ ಪರಿಮಳಗಳನ್ನು ಗ್ರಹಿಸಲಾಗದ ಶೇ.39 ರಷ್ಟು ಜನ ಇತರ ಸಾಧಾರಣ ವಾಸನೆಯ ಗ್ರಹಣ ಶಕ್ತಿ ಹೊಂದಿದ ಶೇ.19 ರಷ್ಟು ಹಾಗೂ ಉತ್ತಮ ವಾಸನೆಯ ಗ್ರಹಣ ಶಕ್ತಿ ಹೊಂದಿದ ಶೇ.10 ವೃದ್ಧರಿಗಿಂತ ಬೇಗ ಮೃತಪಟ್ಟಿದ್ದು ಸಾಬೀತಾಗಿದೆ.

Most Read:ಮೂಗಿನಲ್ಲಿ ರಕ್ತಸ್ರಾವ: ಇದೇಕೆ ಎದುರಾಗುತ್ತದೆ? ಹೀಗಾದರೆ ಏನು ಮಾಡಬೇಕು?

ಯಾವುದೋ ವಾಸನೆಯ ಭ್ರಮೆಯಾಗುತ್ತಿದ್ದರೆ ಅದು ಅಪಾಯದ ಮುನ್ಸೂಚನೆ ಇರಬಹುದು

ಯಾವುದೋ ವಾಸನೆಯ ಭ್ರಮೆಯಾಗುತ್ತಿದ್ದರೆ ಅದು ಅಪಾಯದ ಮುನ್ಸೂಚನೆ ಇರಬಹುದು

ಸುತ್ತಮುತ್ತಲಿನ ವಾತಾವರಣದಲ್ಲಿ ಇರಲಾರದ ಯಾವುದೋ ವಸ್ತುವಿನ ವಾಸನೆ ಬಂದಂತೆ ನಿಮಗೆ ಭ್ರಮೆಯಾಗುತ್ತಿದ್ದಲ್ಲಿ ಅದು ಅಪಾಯದ ಮುನ್ಸೂಚನೆಯಾಗಿರಬಹುದು. ತಲೆನೋವಿನ ಬಗ್ಗೆ ಅಂತಾರಾಷ್ಟ್ರೀಯ ವೈದ್ಯಕೀಯ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ, ವಾಸನೆಯ ಭ್ರಮೆ ಉಂಟಾಗುವುದು ಮುಂದಿನ ದಿನಗಳಲ್ಲಿ ತಲೆನೋವು ಬರುವ ಅಪಾಯದ

ಸೂಚನೆಯಾಗಿದೆ ಎಂದು ಹೇಳಲಾಗಿದೆ.

ಆಘ್ರಾಣಿಸುವ ಸಾಮರ್ಥ್ಯ ಕುಂದುವಿಕೆಯು ಸಹ ಅಪಾಯಕಾರಿ

ಆಘ್ರಾಣಿಸುವ ಸಾಮರ್ಥ್ಯ ಕುಂದುವಿಕೆಯು ಸಹ ಅಪಾಯಕಾರಿ

ಮೂಗಿನ ಆಘ್ರಾಣಿಸುವ ಶಕ್ತಿ ಕುಂದುವಿಕೆಯು ಅಲ್ಜೈಮರ್ ಕಾಯಿಲೆ ಬರುವ ಮುನ್ಸೂಚನೆ ಆಗಿರಬಹುದು ಎಂದು ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಸಂಶೋಧನೆಯಲ್ಲಿ ಹೇಳಲಾಗಿದೆ. ಸಂಶೋಧನೆಗೆ ಒಳಪಡಿಸಲಾದ 'ಅಮಿಲಾಯ್ಡ್ ಪ್ಲಾಕ್' ಹೆಚ್ಚು ಪ್ರಮಾಣದಲ್ಲಿ ಹೊಂದಿದ ರೋಗಿಗಳು ವಾಸನೆಯನ್ನು ಗ್ರಹಿಸುವ ಸಾಮರ್ಥ್ಯ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಇವರ ಮೆದುಳಿನಲ್ಲಿನ ಜೀವಕೋಶಗಳ ಸಾವಿನ ವೇಗವೂ ಹೆಚ್ಚಾಗಿರುವುದು ಕಂಡುಬಂದಿತು.

ಆಘ್ರಾಣಿಸುವ ಸಾಮರ್ಥ್ಯ ಕುಂದುವಿಕೆಯು ಸಹ ಅಪಾಯಕಾರಿ

ಆಘ್ರಾಣಿಸುವ ಸಾಮರ್ಥ್ಯ ಕುಂದುವಿಕೆಯು ಸಹ ಅಪಾಯಕಾರಿ

'ಅಮಿಲಾಯ್ಡ್ ಪ್ಲಾಕ್' ಇದು ಅಲ್ಜೈಮರ್ ರೋಗಿಗಳ ಮೆದುಳಿನ ಜೀವಕೋಶಗಳಲ್ಲಿ ಕಂಡುಬರುವ ಒಂದು ನಿರ್ದಿಷ್ಟ ಮಾದರಿಯ ಪ್ರೋಟೀನ್ ಆಗಿದೆ. ಅಲ್ಜೈಮರ್ ಕಾಯಿಲೆ ಆರಂಭವಾದಾಗ ಮೆದುಳಿನಲ್ಲಿನ ಜೀವಕೋಶಗಳು ಸಾಯಲಾರಂಭಿಸುತ್ತವೆ. ಈ ಸಂದರ್ಭದಲ್ಲಿ ವಾಸನೆ ಗ್ರಹಿಸಲು ಬೇಕಾದ ಜೀವಕೋಶಗಳು ಸಹ ಸಾವನ್ನಪ್ಪುತ್ತವೆ. ಹೀಗಾಗಿ ವಾಸನೆ ಗ್ರಹಿಸುವ ಶಕ್ತಿ ಕುಂದ ಲಾರಂಭಿಸುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

Most Read:Most Read: ಹೌದು ಸ್ವಾಮಿ! ಮೂಗು ನೋಡಿ, ವ್ಯಕ್ತಿತ್ವ ತಿಳಿಯಬಹುದಂತೆ!

ಅಮಿಲಾಯ್ಡ್ ಪ್ಲಾಕ್

ಅಮಿಲಾಯ್ಡ್ ಪ್ಲಾಕ್

ಅಮಿಲಾಯ್ಡ್ ಪ್ಲಾಕ್' ಇದು ಅಲ್ಜೈಮರ್ ರೋಗಿಗಳ ಮೆದುಳಿನ ಜೀವಕೋಶಗಳಲ್ಲಿ ಕಂಡುಬರುವ ಒಂದು ನಿರ್ದಿಷ್ಟ ಮಾದರಿಯ ಪ್ರೋಟೀನ್ ಆಗಿದೆ. ಅಲ್ಜೈಮರ್ ಕಾಯಿಲೆ ಆರಂಭವಾದಾಗ ಮೆದುಳಿನಲ್ಲಿನ ಜೀವಕೋಶಗಳು ಸಾಯಲಾರಂಭಿಸುತ್ತವೆ. ಈ ಸಂದರ್ಭದಲ್ಲಿ ವಾಸನೆ ಗ್ರಹಿಸಲು ಬೇಕಾದ ಜೀವಕೋಶಗಳು ಸಹ ಸಾವನ್ನಪ್ಪುತ್ತವೆ. ಹೀಗಾಗಿ ವಾಸನೆ ಗ್ರಹಿಸುವ ಶಕ್ತಿ ಕುಂದ ಲಾರಂಭಿಸುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ಮೂಗಿನ ಆರೋಗ್ಯದ ಬಗ್ಗೆ ಗಮನವಿರಲಿ

ಮೂಗಿನ ಆರೋಗ್ಯದ ಬಗ್ಗೆ ಗಮನವಿರಲಿ

ನೆಗಡಿ ಅಥವಾ ಮೂಗು ಕಟ್ಟಿದಾಗ ಹೊರತುಪಡಿಸಿದ ಸಂದರ್ಭಗಳಲ್ಲಿ ನಿಮ್ಮ ಮೂಗಿನ ಆಘ್ರಾಣಿಸುವ ಶಕ್ತಿ ಕುಂದುತ್ತಿದ್ದಲ್ಲಿ ಅದನ್ನು ನಿರ್ಲಕ್ಷಿಸಬೇಡಿ. ಇತರ ಆರೋಗ್ಯ ಸಮಸ್ಯೆಗಳು ಉಂಟಾಗದಂತೆ ಜಾಗ್ರತೆ ವಹಿಸಿ.

English summary

Things Your Nose Can Tell You About your health!

While it is not usual for the nose to be able to tell a lot about your health, we can tell you things that your sense of smell, or not, just might be able to tell you. Let’s have a look at 3 such surprising things that your nose can signal about your overall health and impending diseases
X
Desktop Bottom Promotion