For Quick Alerts
ALLOW NOTIFICATIONS  
For Daily Alerts

ಪುರುಷರ ಆರೋಗ್ಯ: ಶಿಶ್ನವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸರಳ ಟಿಪ್ಸ್

|

ಪುರುಷರ ಅತ್ಯಂತ ನಾಜೂಕು ಹಾಗೂ ಕಾಳಜಿವಹಿಬೇಕಾದ ಅಂಗವಾದ ಶಿಶ್ನದ ಸ್ವಚ್ಛತೆಗೆ ಗಮನ ನೀಡದೇ ಇದ್ದರೆ ಇದರಿಂದ ಸಾಮಾನ್ಯ ಮತ್ತು ಲೈಂಗಿಕ ಆರೋಗ್ಯಕ್ಕೆ ಕೆಲವಾರು ತೊಂದರೆಗಳು ಎದುರಾಗಬಹುದು. ಉರಿ, ಸೋಂಕು ಮತ್ತು ದುರ್ವಾಸನೆ ಇವು ಈ ತೊಂದರೆಗಳಲ್ಲಿ ಕೆಲವು ಮಾತ್ರ. ಹಾಗಾಗಿ ನಿತ್ಯದ ಸ್ನಾನದ ಸಮಯದ ಸ್ವಚ್ಚತೆಯ ಹೊರತಾಗಿ ಪ್ರತಿಬಾರಿಯ ಲೈಂಗಿಕ ಮಿಲನದ ಬಳಿಕವೂ ಸೂಕ್ತ ವಿಧಾನದಲ್ಲಿ ಸ್ವಚ್ಛಗೊಳಿಸುವ ಮೂಲಕ ಲೈಂಗಿಕವಾಗಿ ಹರಡಬಹುದಾದ ರೋಗಗಳಿಂದ ಹೆಚ್ಚಿನ ರಕ್ಷಣೆ ಪಡೆಯಬಹುದು. ಪುರುಷರ ಶಿಶ್ನದ ತುದಿಯ ಹೊರತೊಗಲನ್ನು ನಿವಾರಿಸಿದ ಅಥವಾ ಸುನ್ನತಿ ಮಾಡಿರುವ ಅಥವಾ ಸುನ್ನತಿ ಆಗದೇ ಇರುವ ಪುರುಷರಲ್ಲಿ ಈ ಸ್ವಚ್ಛತೆಯ ಅಗತ್ಯತೆ ಕೊಂಚ ಭಿನ್ನವಾಗಿದೆ. ಈ ವಿಧಾನವನ್ನು ಕಲಿತುಕೊಂಡು ನಿಯಮಿತವಾಗಿ ಅನುಸರಿಸುವ ಮೂಲಕ ಶಿಶ್ನದ ಸ್ವಚ್ಛತೆ ಮತ್ತು ಆರೋಗ್ಯವನ್ನು ಕಾಪಾಡಿಕೊಂಡು ಬರಬಹುದು.

ಸುನ್ನತಿಯಾಗದೇ ಇರುವ ಪುರುಷರ ಶಿಶ್ನದ ಸ್ವಚ್ಛತಾ ವಿಧಾನ

ಸುನ್ನತಿಯಾಗದೇ ಇರುವ ಪುರುಷರ ಶಿಶ್ನದ ಸ್ವಚ್ಛತಾ ವಿಧಾನ

ಇದಕ್ಕಾಗಿ ಅತಿ ಸೌಮ್ಯ ಸೋಪನ್ನು ಉಪಯೋಗಿಸಬೇಕು. ಸಾಮಾನ್ಯವಾಗಿ ಸೋಪುಗಳನ್ನು ಆಕರ್ಷಕವಾಗಿಸಲು ಸುವಾಸನೆ ನೀಡುವ ಕೆಲವು ಸುಗಂಧಗಳನ್ನು ಸೇರಿಸಿರುತ್ತಾರೆ. ಆದರೆ ಕೆಲವು ಸುಗಂಧಿತ ರಾಸಾಯನಿಕಗಳು ಈ ಸೂಕ್ಷ್ಮ ಅಂಗಕ್ಕೆ ಹೆಚ್ಚಿನ ಘಾಸಿಯುಂಟುಮಾಡಬಹುದು. ಅತ್ಯುತ್ತಮ ಪರಿಣಾಮ ಪಡೆಯಲು ಸುಗಂಧರಹಿತ ಹಾಗೂ ಮೈಗೆ ಹಚ್ಚಬಹುದಾದ ಸೋಪನ್ನೇ ಬಳಸಿ. (ಇನ್ನೊಂದರ್ಥದಲ್ಲಿ, ಕೈ ತೊಳೆಯಲು ಬಳಸುವ ದ್ರಾವಣ ಬೇಡ). ಒಂದು ವೇಳೆ ನಿಮ್ಮ ತ್ವಚೆ ಸೂಕ್ಷ್ಮಸಂವೇದಿಯಾಗಿದ್ದರೆ ಚರ್ಮವೈದ್ಯರ ಸಲಹೆ ಪಡೆದು ನಿಮಗೆ ಸೂಕ್ತವಾದ ಸೋಪು ಯಾವುದು ಎಂಬ ಮಾಹಿತಿ ಪಡೆದು ಅವನ್ನೇ ಉಪಯೋಗಿಸಿ.

ತಲೆ ಅಥವಾ ಮೈಸ್ನಾನ ಮಾಡಿ

ತಲೆ ಅಥವಾ ಮೈಸ್ನಾನ ಮಾಡಿ

ಸ್ನಾನಕ್ಕೆ ಉಗುರುಬೆಚ್ಚನೆಯ ನೀರು ಅತ್ಯುತ್ತಮ. ಬಿಸಿ ನೀರು ಆ ಕ್ಷಣಕ್ಕೆ ಆರಾಮ ನೀಡುತ್ತದಾದರೂ ನೀರಿನ ಬಿಸಿ ಸೂಕ್ಷ್ಮ ಅಂಗಗಳಿಗೆ ಉರಿಯುಂಟು ಮಾಡಬಹುದು. ಅಲ್ಲದೇ ದೇಹದ ಎಲ್ಲಾ ಭಾಗದಲ್ಲಿ ತ್ವಚೆಯ ಆಳದಲ್ಲಿರುವ ಎಣ್ಣೆಯಂಶವನ್ನು ಆವಿಯಾಗಿಸಿ ಚರ್ಮವನ್ನು ಒಣಗಿಸಬಹುದು. ನಿತ್ಯದ ಸ್ನಾನದಂತೆಯೇ ಉಗುರುಬೆಚ್ಚನೆಯ ನೀರಿನಲ್ಲಿ ಈ ಸೌಮ್ಯ ಸೋಪನ್ನು ಮೈತುಂಬಾ ಹಚ್ಚಿ ನೊರೆಬರಿಸಿ. ಇದೇ ರೀತಿಯಾಗಿ ಶಿಶ್ನವನ್ನೂ ಸೌಮ್ಯ ಸೋಪು ಬಳಸಿಯೇ ಹಚ್ಚಿಕೊಂಡು ಉಗುರುಬೆಚ್ಚನೆಯ ನೀರಿನಿಂದ ಈ ಸೋಪು ಪೂರ್ಣವಾಗಿ ನಿವಾರಣೆಯಾಗುವವರೆಗೆ ನೀರು ಹೊಯ್ದುಕೊಳ್ಳಬೇಕು.

Most Read: ಶಿಶ್ನದಲ್ಲಿ ನೋವು ಬರಲು ಕಾರಣವೇನು? ಇದಕ್ಕೆ ಚಿಕಿತ್ಸೆ ಏನು?

ಶಿಶ್ನ ತೊಳೆದುಕೊಳ್ಳುವ ಬಗೆ

ಶಿಶ್ನ ತೊಳೆದುಕೊಳ್ಳುವ ಬಗೆ

ಎಂದಿಗೂ ಸೋಪನ್ನು ನೇರವಾಗಿ ಶಿಶ್ನಕ್ಕೆ ಉಜ್ಜಬಾರದು. ಬದಲಿಗೆ ಎರಡೂ ಹಸ್ತಗಳ ನಡುವೆ ಸೋಪು ಇರಿಸಿ ಉಜ್ಜಿಕೊಂಡು ಕೊಂಚ ಸೋಪು ಕೈಮೇಲೆ ಬಂದ ಬಳಿಕ ಕೊಂಚ ನೀರಿನೊಂದಿಗೆ ಎರಡೂ ಕೈಗಳನ್ನು ಉಜ್ಜಿಕೊಂಡು ನೊರೆ ಬರಿಸಬೇಕು. ಬಳಿಕ ಈ ನೊರೆಯನ್ನು ವೃಷಣಗಳಿಂದ ಪ್ರಾರಂಭಿಸಿ ಶಿಶ್ನದ ಬುಡಭಾಗದಿಂದ ತುದಿಯವರೆಗೆ ಬರುವಂತೆ ಹಚ್ಚಿಕೊಳ್ಳಬೇಕು. ಕಡೆಗೆ ಮುಂದೊಗಲನ್ನು ಹಿಂದೆ ಸರಿಸಿ ಒಳಭಾಗವನ್ನು ಸ್ವಚ್ಛಗೊಳಿಸುವುದು ಅತಿ ಅಗತ್ಯ. ಮೊಂದೊಗಲು ಹಿಂದೆ ಸರಿಯುವಷ್ಟು ಮಾತ್ರವೇ ಹಿಂದೆ ಸರಿಸಬೇಕೇ ವಿನಃ ಇದಕ್ಕೂ ಹಿಂದೆ ಸರಿಸಬಾರದು. ಹೀಗೆ ಮಾಡಿದರೆ ಇದು ಶಿಶ್ನಕ್ಕೆ ಗಾಯವುಂಟು ಮಾಡಬಹುದು ಹಾಗೂ ಈ ಗಾಯದಲ್ಲಿ ದಪ್ಪನಾದ ಕಲೆ ಉಳಿದುಕೊಳ್ಳಭುದು. ಸುನ್ನತಿ ಇಲ್ಲದವರು ಸಾಮಾನ್ಯವಾಗಿ ಮರೆಯುವ ಈ ಅಗತ್ಯ ವಿಧಾನದಿಂದಲೇ ಮುಂದೊಗಲಿನ ಒಳಭಾಗದಲ್ಲಿ ಸೋಂಕು ಮತ್ತು ಉರಿ ಪ್ರಾರಂಭವಾಗುತ್ತದೆ. ಈಗ ನೀರು ಹಾಕಿ ಸೋಪು ಪೂರ್ಣವಾಗಿ ನಿವಾರಣೆಯಾದ ಬಳಿಕ ಮುಂದೊಗಲನ್ನು ಮುಂದೆ ಸರಿಸಿ ಮೊದಲಿನ ಸ್ಥಾನಕ್ಕೆ ಸರಿಸಬೇಕು. ವಿಶೇಷವಾಗಿ ಶಿಶ್ನದ ದುಂಡುಭಾಗದ ಅಂಚುಗಳ ಒಳಭಾಗದಲ್ಲಿ ಯಾವುದೇ ಕೊಳೆ ಇರದಂತೆ ನೋಡಿಕೊಳ್ಳಬೇಕು. ಬಳಿಕ ಸಾಕಷ್ಟು ನೀರು ಹೊಯ್ದು ಇಡಿಯ ಜನನಾಂಗವನ್ನು ಇಡಿಯ ದೇಹದೊಂದಿಗೆ ಸ್ವಚ್ಛಗೊಳಿಸಬೇಕು.

ಸ್ವಚ್ಛತೆಯನ್ನು ಕಾಪಾಡಿ

ಸ್ವಚ್ಛತೆಯನ್ನು ಕಾಪಾಡಿ

ಪುರುಷರೂ ತಮ್ಮ ಜನನಾಂಗಗಳ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯವಾಗಿದೆ. ಆದರೆ ಈ ಭಾಗವನ್ನು ಅತಿ ಹೆಚ್ಚಾಗಿ ತೊಳೆದುಕೊಳ್ಳುವುದನ್ನು ವೈದ್ಯರು ವಿರೋಧಿಸುತ್ತಾರೆ. ವಿಶೇಷವಾಗಿ ಸೋಪು ಅಥವಾ ಶರವ್ ಜೆಲ್ ಬಳಸಿ ಪದೇ ಪದೇ ತೊಳೆದುಕೊಳ್ಳುವುದರಿಂದ ಸೂಕ್ಷ್ಮ ಚರ್ಮಕ್ಕೆ ಹೆಚ್ಚಿನ ಘಾಸಿಯುಂಟಾಗಿ ಉರಿಯುಂಟಾಗುತ್ತದೆ. ಅಲ್ಲದೇ ಸ್ನಾನದ ಬಳಿಕ ಜನನಾಂಗವನ್ನೂ ಪೂರ್ಣವಾಗಿ ಒಣಗಿಸಿಕೊಳ್ಳುವುದು ಅಗತ್ಯ. ಒಂದು ವೇಳೆ ನೀವು ಟಾಲ್ಕಂ ಪೌಡರ್ ದೇಹಕ್ಕೆ ಪೂಸಿಕೊಳ್ಳುವವರಾಗಿದ್ದರೆ ಈ ಪುಡಿ ವೃಷಣಗಳಿಗೆ ತಾಕಿಸಿದರೂ ಸರಿ, ಶಿಶ್ನದ ಭಾಗಕ್ಕೆ ಮಾತ್ರ ತಾಕಿಸಬಾರದು. ಅದರಲ್ಲೂ ಮುಂದೊಗಲಿನ ಭಾಗದಲ್ಲಿ ಈ ಪುಡಿ ಅಂಡಿಕೊಂಡರೆ ಇದು ನಿಧಾನವಾಗಿ ಒಳಸರಿದು ಉರಿಯುಂಟುಮಾಡುವ ಸಾಧ್ಯತೆ ಇದೆ. ಒಂದು ವೇಳೆ ಪೌಡರ್ ಇಲ್ಲದೇ ಸಾಧ್ಯವೇ ಇಲ್ಲ ಎನ್ನುವಂತಹ ಮನಃಸ್ಥಿತಿಯಿದ್ದರೆ ಟಾಲ್ಕಂ ಪೌಡರ್ ಬದಲಿಗೆ ಮೆಕ್ಕೆಜೋಳದ ಹಿಟ್ಟು ಆಧಾರಿತ ಪೌಡರ್ (cornstarch-based powder) ಬಳಸಿ. ಮಹಿಯರಲ್ಲಿ ಎದುರಾಗುವ ಗರ್ಭಕೋಶದ ಕ್ಯಾನ್ಸರ್ ಗೂ ಟಾಲ್ಕಂ ಪೌಡರ್ ಗೂ ನಿಕಟ ಸಂಬಂಧವಿರುವುದನ್ನು ಗಮನಿಸಲಾಗಿದೆ. ಹಾಗಾಗಿ, ನೀವು ಟಾಲ್ಕಂ ಪೌಡರ್ ಹಚ್ಚಿಕೊಂಡು ಮಿಲನಕ್ರಿಯೆಯಲ್ಲಿ ತೊಡಗಿಕೊಂಡರೆ ನಿಮ್ಮಿಂದ ನಿಮ್ಮ ಸಂಗಾತಿಗೆ ದಾಟಿಕೊಳ್ಳುವ ಈ ಟಾಲ್ಕಂ ಪೌಡರ್ ಆಕೆಯ ಆರೋಗ್ಯವನ್ನು ಅಪಾಯಕ್ಕೆ ತಳ್ಳುವ ಸಂಭವವಿದೆ.

Most Read: ಪುರುಷರನ್ನು ಕಾಡುವ 'ಚಳಿಗಾಲದ ಶಿಶ್ನ'ದ ಸಮಸ್ಯೆ!

ಮುಂದೊಗಲಿನ ಕಾಳಜಿ

ಮುಂದೊಗಲಿನ ಕಾಳಜಿ

ಸೂಕ ಆರೈಕೆ ಮತ್ತು ಕಾಳಜಿ ವಹಿಸಿದರೆ ಮುಂದೊಗಲಿನಿಂದ ಯಾವುದೇ ತೊಂದರೆಯಿಲ್ಲ. ಆದರೆ ಈ ಭಾಗದ ಸ್ವಚ್ಛತೆಯಲ್ಲಿ ಅಸಡ್ಡೆ ತೋರಿದರೆ ಮಾತ್ರ ನಿಧಾನವಾಗಿ ಒಳಭಾಗದ ಅಂಚಿನಲ್ಲಿ ಎಣ್ಣೆ ಮತ್ತು ಇತರ ಕೊಳೆಗಳು ಸಂಗ್ರಹಗೊಂಡು ನಿಧಾನವಾಗಿ ಕೊಳೆಯಲು ಆರಂಭಿಸುತ್ತವೆ. ಈ ಕೊಳೆಗೆ "smegma" ಎಂದು ಕರೆಯುತ್ತಾರೆ. ಈ ಕೊಳೆ ಸಂಗ್ರಹವಾದರೆ ಅಂಚಿನ ಭಾಗದಲ್ಲಿ ಉರಿ ಎದುರಾಗುತ್ತದೆ. ಗಡಸು ಸೋಪು ಅಥವಾ ಸುಗಂಧಿತ ಸೋಪನ್ನು ಬಳಸಿದಾಗ ಹಾಗೂ ಹಿಂದೆಸರಿದಿದ್ದ ಮುಂದೊಗಲನ್ನು ರಭಸವಾಗಿ ಮುಂದೆ ತಳ್ಳುವ ಅಭ್ಯಾಸವುಳ್ಳ ಪುರುಷರಲ್ಲಿ ಇವು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅಸಡ್ಡೆ ಹೆಚ್ಚಿದಷ್ಟೂ ಈ ಭಾಗದ ಸೋಂಕು ಹೆಚುತ್ತಾ posthitis ಹಾಗೂ balanitis ಎಂಬ ಸೋಂಕುಗಳಿಗೆ ತುತ್ತಾಗುತ್ತದೆ. ಇವು ಭಾರೀ ಉರಿ ಹಾಗೂ ಸಹಿಸಲಸಾಧ್ಯವಾದ ದುರ್ವಾಸನೆ ಹೊಂದಿರುವ ಸೋಂಕುಗಳಾಗಿವೆ. ಸುನ್ನತಿಯಾಗಿರುವ ಶಿಶ್ನದ ಸ್ವಚ್ಛತೆಯ ವಿಧಾನ:

ಸೌಮ್ಯ ಸೋಪನ್ನು ಬಳಸಿ

ಸೌಮ್ಯ ಸೋಪನ್ನು ಬಳಸಿ

ಮುಂದೊಗಲು ಇಲ್ಲದೇ ಇದ್ದರೂ ಸರಿ, ಶಿಶ್ನದ ತುದಿಯಭಾಗ ಅತಿ ಸಂವೇದಿಯಾಗಿದ್ದು ಗಡಸು ಸೋಪು ಇಲ್ಲಿ ಉರಿ ತರಿಸಬಹುದು. ಸುಗಂಧರಹಿತ ಹಾಗೂ ಅತಿ ಸೌಮ್ಯ ಸೋಪು ಬಳಸುವುದು ಸೂಕ್ತ. ಒಂದು ವೇಳೆ ನಿಮಗೆ ಸೂಕ್ತ ಸೋಪು ಯಾವುದೆಂದು ತಿಳಿಯದೇ ಹೋದಲ್ಲಿ ಚರ್ಮವೈದ್ಯರ ಅಥವಾ ನಿಮ್ಮ ಕುಟುಂಬ ವೈದ್ಯರ ಸಲಹೆ ಪಡೆಯಿರಿ. ಈ ಸೋಪಿನ ಬಳಕೆಯಿಂದ ನಿಮ್ಮ ಚರ್ಮಕ್ಕೆ ಉರಿಯುಂಟಾಗುವುದಿಲ್ಲ.

ಉಗುರುಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿ

ಉಗುರುಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿ

ಈ ಪುರುಷರಿಗೂ ಉಗುರುಬೆಚ್ಚನೆಯ ನೀರೇ ಉತ್ತಮವಾಗಿದೆ ಹಾಗೂ ಬಿಸಿನೀರು ದೇಹದ ಇತರ ಯಾವುದೇ ಭಾಗಕ್ಕಿಂತಲೂ ಹೆಚ್ಚಾಗಿ ಶಿಶ್ನದ ತುದಿಭಾಗಕ್ಕೆ ಹೆಚ್ಚು ಅಪಾಯಕಾರಿಯಾಗಿದೆ. ದೇಹದ ಇತರ ಭಾಗಗಳ ಜೊತೆಗೇ ಸೌಮ್ಯ ಸೋಪಿನ ನೊರೆಯನ್ನು ಹಚ್ಚಿಕೊಂಡು ಸಾಮಾನ್ಯವಾಗಿ ಸ್ನಾನ ಮಾಡಿ

ಶಿಶ್ನದ ಸ್ವಚ್ಛತೆಯ ವಿಧಾನ

ಶಿಶ್ನದ ಸ್ವಚ್ಛತೆಯ ವಿಧಾನ

ಎರಡೂ ಹಸ್ತಗಳ ನಡುವೆ ಸೋಪಿನ ಕೊಂಚ ಲೇಪನವನ್ನು ಸವರಿ ಚೆನ್ನಾಗಿ ಉಜ್ಜಿಕೊಂಡು ನೊರೆ ಬರಿಸಿ, ಈ ನೊರೆಯನ್ನು ವೃಷಣದಿಂದ ಪ್ರಾರಂಭಿಸಿ ಶಿಶ್ನದ ಬುಡದಿಂದ ತುದಿಯವರೆಗೆ ಹಚ್ಚಿಕೊಳ್ಳಿ. ಮುಂದೊಗಲು ಇಲ್ಲದೇ ಹೋದರೂ ಶಿಶ್ನದ ದುಂಡುಭಾಗದ ಕೆಳ ಅಂಚುಗಳಲ್ಲಿ ಯಾವುದೇ ಕೊಳೆ ಉಳಿಯದಂತೆ ಸ್ವಚ್ಛಗೊಳಿಸಿ. ಬೆವರು, ಬ್ಯಾಕ್ಟೀರಿಯಾ ಹಾಗೂ ಇತರ ಕೊಳೆಗಳು ಈ ಭಾಗದಲ್ಲಿ ಮುಂದೊಗಲು ಇಲ್ಲದೇ ಇದ್ದರೂ ಸರಿ, ಅಂಚಿನ ಆಳದಲ್ಲಿ ಕುಳಿತುಕೊಂಡಿರುತ್ತವೆ.

Most Read: ಪುರುಷನ ಶಿಶ್ನದ ಬಗ್ಗೆ ನೀವು ತಿಳಿದಿರದ ಮತ್ತು ಆಸಕ್ತಿಕರವಾದ 10 ಮಾಹಿತಿಗಳು

ಸೋಪಿನ ನೊರೆಯನ್ನು ಸವರಿ ನೀರಿನ ಧಾರೆ ನೇರವಾಗಿ ಬೀಳುವಂತೆ ಮಾಡಿ

ಸೋಪಿನ ನೊರೆಯನ್ನು ಸವರಿ ನೀರಿನ ಧಾರೆ ನೇರವಾಗಿ ಬೀಳುವಂತೆ ಮಾಡಿ

ಮುಂಗಲು ಇಲ್ಲದೇ ಇರುವ ಕಾರಣ ಈ ಭಾಗಕ್ಕೆ ಸೋಪಿನ ನೊರೆಯನ್ನು ಸವರಿ ನೀರಿನ ಧಾರೆ ನೇರವಾಗಿ ಬೀಳುವಂತೆ ಮಾಡಿ ಸ್ವಚ್ಛಗೊಳಿಸಬೇಕು. ಸ್ನಾನದ ಬಳಿಕ ಶಿಶ್ನವು ಪೂರ್ಣವಾಗಿ ಒಣಗಿರುವಂತೆ ನೋಡಿಕೊಳ್ಳಬೇಕು. ಸಾಮಾನ್ಯವಾಗಿ ಮುಂದೊಗಲು ಇಲ್ಲದೇ ಇರುವ ಕಾರಣ ಟಾಲ್ಕಂ ಪೌಡರ್ ಅಥವಾ ಇತರ ಪೌಡರ್ ಗಳನ್ನು ಹಚ್ಚಿಕೊಳ್ಳಬಹುದು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಶಿಶ್ನ ಒಣಗಿಯೇ ಇದ್ದಷ್ಟೂ ಒಳ್ಳೆಯದು, ಟಾಲ್ಕ ಪೌಡರ್ ಅಥವಾ ಇತರ ಪ್ರಸಾನಗಳನ್ನು ದೇಹದ ಇತರ ಭಾಗಕ್ಕೆ ಹಚ್ಚಿ ಶಿಶ್ನಕ್ಕೆ ಏನನ್ನೂ ಹಚ್ಚದೇ ಹಾಗೇ ಒಣಗಿರುವಂತೆ ನೋಡಿಕೊಳ್ಳುವುದು ಉತ್ತಮ ಇದರಿಂದ ಶಿಶ್ನದ ಚರ್ಮಕ್ಕೆ ಎದುರಾಗುವ ಉರಿಯಿಂದ ರಕ್ಷಿಸಿಕೊಳ್ಳಬಹುದು.

English summary

Simple Tips To Keep Your Penis Clean

Irritation, infections, and unpleasant odors are just a few of the health conditions that can occur if you fail to maintain good hygiene habits for your penis and sexual health.Cleaning your penis after sex can also help reduce your chances of contracting a sexually transmitted infection (STI).Hygiene practices will be slightly different between circumcised and uncircumcised men, but both are quite similar. Learning how to properly clean your penis can help you maintain optimal health and cleanliness.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more