For Quick Alerts
ALLOW NOTIFICATIONS  
For Daily Alerts

ಇದೇ ಕಾರಣಕ್ಕೆ ಮಹಿಳೆಯರಲ್ಲಿ ಸೆಕ್ಸ್ ವೇಳೆ ನೋವು ಕಾಣಿಸಿಕೊಳ್ಳುವುದು

|

ಲೈಂಗಿಕ ಕ್ರಿಯೆ ಎನ್ನುವುದು ಎರಡು ಜೀವಗಳು ತುಂಬಾ ಅನ್ಯೋನ್ಯವಾಗಿ ಒಂದನ್ನೊಂದು ಸೇರಿಕೊಳ್ಳುವುದು. ಈ ವೇಳೆ ಕೆಲವೊಂದು ಸಂದರ್ಭದಲ್ಲಿ ಮಹಿಳೆಯರಲ್ಲಿ ನೋವು ಕಾಣಿಸಿಕೊಳ್ಳುವುದು. ನೋವು ಲೈಂಗಿಕ ಕ್ರಿಯೆಯ ಸುಖದ ಮೇಲೆ ಪರಿಣಾಮ ಬೀರಬಹುದು. ಲ್ಯೂಬ್ರಿಕೆಂಟ್ ಇಲ್ಲದೆ ಇರುವ ಕಾರಣದಿಂದಾಗಿ ಲೈಂಗಿಕ ಕ್ರಿಯೆ ವೇಳೆ ನೋವು ಕಾಣಿಸಬಹುದು.

ಎಂಡೋಮೆಟ್ರೋಸಿಸ್ ನಂತಹ ಕೆಲವೊಂದು ಲೈಂಗಿಕ ಕಾಯಿಲೆಗಳಿಂದಲೂ ಇಂತ ನೋವು ಕಾಣಿಸಬಹುದು. ಇದು ಸಂಗಾತಿಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುವ ಕಾರಣದಿಂದ ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಬೋಲ್ಡ್ ಸ್ಕೈ ನಿಮಗಾಗಿ ಈ ಲೇಖನದಲ್ಲಿ ನೀಡುತ್ತಿದೆ. ಇದನ್ನು ಓದುತ್ತಾ ತಿಳಿಯಿರಿ.....

ಮಹಿಳೆಯರಲ್ಲಿ ಸೆಕ್ಸ್ ವೇಳೆ ನೋವಿಗೆ ಕಾರಣವೇನು?

ಮಹಿಳೆಯರಲ್ಲಿ ಸೆಕ್ಸ್ ವೇಳೆ ನೋವಿಗೆ ಕಾರಣವೇನು?

ಯೋನಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಲ್ಯೂಬ್ರಿಕೆಂಟ್ ಇಲ್ಲದೆ ಇದ್ದರೆ ಆಗ ಮಹಿಳೆಯರಲ್ಲಿ ಸೆಕ್ಸ್ ವೇಳೆ ನೋವು ಕಾಣಿಸಿಕೊಳ್ಳುವುದು. ಮಹಿಳೆಯು ತುಂಬಾ ಆರಾಮವಾಗಿ, ಲೈಂಗಿಕ ಕ್ರಿಯೆಗೆ ಮೊದಲಿನ ಆಟ ಹೆಚ್ಚಿಸಿದರೆ ಅಥವಾ ಲ್ಯೂಬ್ರಿಕೆಂಟ್ ಬಳಸಿದರೆ ಆಗ ನೋವು ಕಡಿಮೆ ಮಾಡಿಕೊಳ್ಳಬಹುದು. ಈ ಕೆಳಗಿನ ಸಮಸ್ಯೆಯಿದ್ದರೆ ಆಗ ಮಹಿಳೆಯರಲ್ಲಿ ಸೆಕ್ಸ್ ವೇಳೆ ನೋವು ಕಾಣಿಸುವುದು.

ಯೋನಿ ಸಂಕೋಚನ

ಯೋನಿ ಸಂಕೋಚನ

ಇದು ಸಾಮಾನ್ಯ ಪರಿಸ್ಥಿತಿಯಾಗಿದೆ. ಈ ವೇಳೆ ಯೋನಿಯ ಸ್ನಾಯುಗಳಲ್ಲಿ ಸೆಳೆತ ಕಾಣಿಸುವುದು. ನೋವು ಅಥವಾ

ಹಿಂದಿನ ಯಾವುದಾದರೂ ಘಟನೆಯಿಂದ ಹೀಗೆ ಆಗಬಹುದು.

Most Read: ಹೆರಿಗೆ ವೇಳೆ ಕಾಡುವ ಯೋನಿ ಹರಿಯುವಿಕೆ ಸಮಸ್ಯೆ.. ಇದಕ್ಕೆ ಆರೈಕೆ ಹೀಗಿರಲಿ

ಯೋನಿ ಸೋಂಕು

ಯೋನಿ ಸೋಂಕು

ಇದು ಸಾಮಾನ್ಯ ಪರಿಸ್ಥಿತಿ ಮತ್ತು ಇದರಲ್ಲಿ ಯೀಸ್ಟ್ ಸೋಂಕು ಕೂಡ ಒಳಗೊಂಡಿದೆ. ಇಂತಹ ಸಂದರ್ಭದಲ್ಲಿ ಮೊಸರನ್ನು ಸೇವಿಸಿ. ಯಾಕೆಂದರೆ ಮೊಸರಿನಲ್ಲಿ ಜೀವಂತ ಬ್ಯಾಕ್ಟೀರಿಯಾ ಲ್ಯಾಕ್ಟೋಬಾಸಿಲ್ಲಸ್ ಅಸಿಡೋಫಿಲಸ್ ಇದೆ. ಇದನ್ನು ಪ್ರೊಬಯೋಟಿಕ್ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ಬ್ಯಾಕ್ಟೀರಿಯಾಗಳು ಯೋನಿಯ ಪ್ರದೇಶದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಅತೀ ಅಗತ್ಯವಾಗಿ ಬೇಕಾಗಿದೆ. ಅಸಮ ತೋಲದಿಂದಾಗಿ ಉಂಟಾಗಿರುವ ಅತಿಯಾದ ಬೆಳವಣಿಗೆಯನ್ನು ಇದು ಸರಿಪಡಿಸುವುದು. ಯೋನಿಯ ಶಿಲೀಂಧ್ರ ಸೋಂಕಿಗೆ ಮೊಸರು ಅತ್ಯುತ್ತಮ ಮನೆಮದ್ದು. ಇದಕ್ಕೆ ಯಾವುದೇ ರೀತಿಯ ಸಕ್ಕರೆ ಬಳಕೆ ಮಾಡದೆ ಉಪಯೋಗಿಸಿ, ಯಾಕೆಂದರೆ ಸಕ್ಕರೆ ಬಳಸಿದರೆ ಕ್ಯಾಂಡಿಡ ಶಿಲೀಂಧ್ರ ಬೆಳೆಯುವುದು.

ಗರ್ಭಕಂಠದಲ್ಲಿ ಸಮಸ್ಯೆ(ಗರ್ಭಕೋಶ ತೆರೆಯುವುದು)

ಗರ್ಭಕಂಠದಲ್ಲಿ ಸಮಸ್ಯೆ(ಗರ್ಭಕೋಶ ತೆರೆಯುವುದು)

ಗರಿಷ್ಠ ನುಗ್ಗುವಿಕೆ ವೇಳೆ ಶಿಶ್ನವು ಗರ್ಭಕಂಠದ ತನಕ ಹೋಗಬಹುದು. ಈ ವೇಳೆ ಗರ್ಭಕಂಠದಲ್ಲಿ ಏನಾದರೂ ಸೋಂಕು ಇದ್ದರೆ ಆಗ ನೋವು ಬರಬಹುದು. ಅಲ್ಲದೆ ಕೆಲವೊಂದು ಸಲ ಗರ್ಭಕೋಶದಲ್ಲಿ ಸಮಸ್ಯೆ ಫೈಬರಾಯ್ಡ್ ಗಳಿಂದಾಗಿಯೂ ಸೆಕ್ಸ್ ವೇಳೆ ನಿಮಗೆ ನೋವು ಕಾಣಿಸಬಹುದು.

ಎಂಡೊಮೆಟ್ರಿಯೊಸಿಸ್

ಎಂಡೊಮೆಟ್ರಿಯೊಸಿಸ್

ಗರ್ಭಕೋಶದ ಅಂಗಾಂಶದ ಪದರವು ಹೊರಭಾಗದಲ್ಲಿ ಬೆಳೆಯುವುದನ್ನು ಎಂಡೊಮೆಟ್ರಿಯೊಸಿಸ್ ಎಂದು ಕರೆಯಲಾಗುವುದು.

ಪೆಲ್ವಿಕ್ ಉರಿಯೂತದ ಕಾಯಿಲೆ

ಪೆಲ್ವಿಕ್ ಉರಿಯೂತದ ಕಾಯಿಲೆ

ಒಳಗೆ ಇರುವಂತಹ ಅಂಗಾಂಶವು ತುಂಬಾ ಕೆಟ್ಟದಾಗಿ ಉರಿಯೂತಕ್ಕೆ ಒಳಗಾಗಿರುವುದು ಮತ್ತು ಲೈಂಗಿಕ ಕ್ರಿಯೆ ವೇಳೆ ಇದು ನೋವು ಉಂಟು ಮಾಡುವುದು. ಅಲ್ಲದೆ ಗರ್ಭಕೋಶದ ಹೊರಗಡೆ ಭ್ರೂಣವು ಬೆಳೆದರೂ ಕೂಡ ಅವರಿಗೆ ನೋವಿನ ಸಮಸ್ಯೆ ಕಾಡಬಹುದು.

Most Read:ಮಹಿಳೆಯರಿಗೆ ಕಾಡುವ ಯೋನಿ ನೋವಿಗೆ ಐದು ಅಚ್ಚರಿಯ ಕಾರಣಗಳು

ಋತುಬಂಧ

ಋತುಬಂಧ

ಯೋನಿಯ ಪದರವು ತನ್ನ ಸಾಮಾನ್ಯ ಮೊಶ್ಚಿರೈಸರ್ ಮತ್ತು ದಪ್ಪವನ್ನು ಕಳೆದುಕೊಳ್ಳಬಹುದು. ಇದರಿಂದ ಯೋನಿಯು ಒಣ ಹಾಗೂ ತೆಳುವಾಗಬಹುದು. ಅಲ್ಲದೆ ಶಸ್ತ್ರಚಿಕಿತ್ಸೆ ಬಳಿಕ ಅಥವಾ ಹೆರಿಗೆಯಾದ ತಕ್ಷಣ ಲೈಂಗಿಕ ಕ್ರಿಯೆ. ಲೈಂಗಿಕ ರೋಗಗಳಾದ ಜನನಾಂಗದ ವಾರ್ಟ್ಸ್, ಹರ್ಪಿಸ್ ಅಥವಾ ಇತರ ಲೈಂಗಿಕ ರೋಗಗಳೂ ಕೂಡ ಇದಕ್ಕೆ ಕಾರಣವಾಗಬಹುದು.

ಯೋನಿಗೆ ಗಾಯ

ಯೋನಿಗೆ ಗಾಯ

ಹೆರಿಗೆ ವೇಳೆ ಹರಿದುಹೋಗುವುದು ಅಥವಾ ಮೂಲಾಧಾರದಲ್ಲಿ ಎಪಿಸಿಯೊಟೊಮಿಯಿಂದಾಗಿ ಗಾಯ. ಇದು ಕೂಡ ಹೆರಿಗೆ ವೇಳೆ ನಡೆಯುವುದು.ಅಲ್ಲದೆ ಚರ್ಮದ ಕಾಯಿಲೆಗಳು ಜನನೇಂದ್ರೀಯದ ಮೇಲೆ ಪ್ರಭಾವ ಬೀರುವುದು.

ಮಲಬದ್ಧತೆ

ಮಲಬದ್ಧತೆ

ಮಲಬದ್ಧತೆ ಲೈಂಗಿಕ ಜೀವನದಲ್ಲಿ ಪರಿಣಾಮ ಬೀರುವ ಮತ್ತೊಂದು ಸಮಸ್ಯೆಯೆಂದರೆ ಮಲಬದ್ಧತೆ. ಹೊಟ್ಟೆಯ ಕ್ರಿಯೆಯು ಸರಿಯಾಗಿರದೆ ಇದ್ದರೆ ಆಗ ನೋವು ಮತ್ತು ದೇಹದ ಕೆಳಭಾಗದಲ್ಲಿ ಅಸ್ವಸ್ಥತೆ ಕಾಣಿಸುವುದು. ಒಂದು ವೇಳೆ ನಿಮಗೂ ಕೂಡ ಇಂತಹ ಸಮಸ್ಯೆ ಕಾಡುತ್ತಿದ್ದರೆ... ಹೀಗೆ ಮಾಡಿ *ಎರಡು ಚಮಚ ಕೊತ್ತಂಬರಿ ಬೀಜ *ಒಂದು ಲೋಟ ನೀರು. ಇದಕ್ಕೆ ಕರಿಮೆಣಸು ಹಾಕಬಹುದು(ಆಯ್ಕೆ ನಿಮ್ಮದು) ಹೇಳಿದ ಸಾಮಗ್ರಿಗಳನ್ನು ಒಂದು ಸಣ್ಣ ಬಾಣಲೆಗೆ ಹಾಕಿಕೊಂಡು ಅದನ್ನು ಕೆಲವು ನಿಮಿಷ ಕುದಿಯಲು ಬಿಡಿ. *ಕುದಿದ ಬಳಿಕ ತಣ್ಣಗಾಗಲು ಬಿಡಿ ಮತ್ತು ನೀರನ್ನು ಸೋಸಿಕೊಳ್ಳಿ. *ದಿನದಲ್ಲಿ 1-2 ಸಲ ಈ ನೀರನ್ನು ಕುಡಿಯಿರಿ.

ಸೋಂಕು

ಸೋಂಕು

ಮಹಿಳೆಯರಿಗೆ ಹೆಚ್ಚಾಗಿ ಯೋನಿಯ ಸೋಂಕು ಕಾಣಿಸಿಕೊಳ್ಳುವುದು ಮತ್ತು ಇದು ಕಿರಿಕಿರಿ ಉಂಟು ಮಾಡಿ ನೋವು ಕಾಣಿಸುವುದು. ಹಾಗಾಗಿ ಲೈಂಗಿಕ ಕ್ರಿಯೆಯಾದ ತಕ್ಷಣ ಮಹಿಳೆಯರು ಮೂತ್ರವಿಸರ್ಜನೆ ಮಾಡಿಕೊಳ್ಳುವುದು ಅತೀ ಅಗತ್ಯ. ಯಾಕೆಂದರೆ ಜನನೇಂದ್ರಿಯಗಳಲ್ಲಿ ಇರುವಂತಹ ಸೋಂಕು ಮೂತ್ರವಿಸರ್ಜನೆ ಮೂಲಕ ಹೊರಹೋಗುತ್ತದೆ. ಪುರುಷರ ವೀರ್ಯ ಮತ್ತು ಮೂತ್ರವು ಒಂದೇ ನಾಳದ ಮೂಲಕ ಬರುವ ಕಾರಣದಿಂದ ಮೂತ್ರನಾಳದಲ್ಲಿರುವ ಸೋಂಕು ಮಹಿಳೆಯರಿಗೆ ತಗುಲಬಹುದು. ಇನ್ನು ಲೈಂಗಿಕ ಕ್ರಿಯೆ ಬಳಿಕ ತೆಗೆದುಕೊಳ್ಳಬೇಕಾದ ಮುಖ್ಯ ಕ್ರಮವೆಂದರೆ ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು.ಕೇವಲ ಮೂತ್ರನಾಳದ ಸೋಂಕು ಮಾತ್ರವಲ್ಲ, ಬೇರೆ ರೀತಿಯ ಸೋಂಕು ನಿಮ್ಮ ದೇಹದೊಳಗೆ ಪ್ರವೇಶ ಮಾಡಬಹುದು. ಕಾಂಡೋಮ್ ಬಳಸಿದರೆ ಅದು ಇಬ್ಬರು ಸಂಗಾತಿಗಳನ್ನು ಕೂಡ ಲೈಂಗಿಕ ಸೋಂಕಿನಿಂದ ರಕ್ಷಿಸುವುದು. ಕಾಂಡೋಮ್ ಬಳಸದೆ ಇದ್ದರೆ ಆಗ ಸರಿಯಾದ ಸ್ವಚ್ಛತೆಯನ್ನು ಪಾಲಿಸಿ. ಸಾಮಾನ್ಯವಾಗಿ ಮಹಿಳೆಯರಿಗೆ ಮೂತ್ರವಿಸರ್ಜನೆ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯು ಬೇರೆ ಬೇರೆಯಾಗಿರುವ ಕಾರಣದಿಂದ ಪುರುಷರಿಗೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಇರುವುದು. ಯಾವುದೇ ರೀತಿಯ ಸೋಂಕು ಬರದಂತೆ ತಡೆಯಲು ಮಹಿಳೆಯರು ಹಾಗೂ ಪುರುಷರು ಲೈಂಗಿಕ ಕ್ರಿಯೆ ಮೊದಲು ಗುಪ್ತಾಂಗವನ್ನು ಸರಿಯಾಗಿ ತೊಳೆಯಬೇಕು. ಮಹಿಳೆಯರು ಲೈಂಗಿಕ ಕ್ರಿಯೆ ಬಳಿಕ ಮೂತ್ರವಿಸರ್ಜನೆ ಮಾಡಿದರೆ ಸೋಂಕು ಹೊರಹೋಗುವುದು.

ಮಹಿಳೆಯರಲ್ಲಿ ಸೆಕ್ಸ್ ವೇಳೆ ನೋವನ್ನು ನಿವಾರಣೆ ಮಾಡುವುದು ಹೇಗೆ?

ಮಹಿಳೆಯರಲ್ಲಿ ಸೆಕ್ಸ್ ವೇಳೆ ನೋವನ್ನು ನಿವಾರಣೆ ಮಾಡುವುದು ಹೇಗೆ?

ಮಹಿಳೆಯರಲ್ಲಿ ಸೆಕ್ಸ್ ವೇಳೆ ಕಂಡುಬರುವಂತಹ ಕೆಲವು ನೋವಿಗೆ ಹೆಚ್ಚು ಚಿಕಿತ್ಸೆ ಬೇಕಿಲ್ಲ. ಉದಾಹರಣೆಗೆ ಹೆರಿಗೆ ಬಳಿಕ ಆರು ತಿಂಗಳ ಕಾಲ ಕಾದು ಸೆಕ್ಸ್ ನಡೆಸಿದರೂ ನೋವಿದ್ದರೆ ಆಗ ನೀವು ವೈದ್ಯರನ್ನು ಸಂಪರ್ಕಿಸಿ. ತಾಳ್ಮೆಯಿಂದ ಇದ್ದು ಸೆಕ್ಸ್ ನಡೆಸಿ. ಯೋನಿಯು ಒಣಗಿದ್ದರೆ ಅಥವಾ ಲ್ಯೂಬ್ರಿಕೆಂಟ್ ಕಡಿಮೆಯಿದ್ದರೆ ಆಗ ನೀವು ನೀರಿನ ಮೂಲದ ಲ್ಯೂಬ್ರಿಕೆಂಟ್ ಬಳಸಿ. ಕೆಲವು ಚಿಕಿತ್ಸೆಗಳು ವೈದ್ಯರು ಮಹಿಳೆಯರಿಗೆ ಸೂಚಿಸಬಹುದು. ಋತುಬಂಧದಿಂದಾಗಿ ಯೋನಿಯು ಒಣಗಿದ್ದರೆ ಆಗ ನೀವು ವೈದ್ಯರಲ್ಲಿ ಈಸ್ಟ್ರೋಜನ್ ಕ್ರೀಮ್ ಅಥವಾ ಬೇರೆ ಔಷಧಿ ಪಡೆಯಬಹುದು. ನೋವಿಗೆ ಬೇರೆ ಸಮಸ್ಯೆಯಿದ್ದರೆ ಆಗ ವೈದ್ಯರು ಔಷಧಿಗಳನ್ನು ಸೂಚಿಸುವರು. ಕೆಲವು ಸಂದರ್ಭಗಳಲ್ಲಿ, ಮಹಿಳೆಯರಿಗೆ ಎದುರಾಗುವ ನೋವಿಗೆ ಚಿಕಿತ್ಸೆಯ ಅಗತ್ಯವೇ ಇಲ್ಲ. ಉದಾಹರಣೆಗೆ ಹೆರಿಗೆಯ ಬಳಿಕ ಎದುರಾಗುವ ನೋವು. ಇದಕ್ಕೆ ಹೆರಿಗೆಯ ಬಳಿಕ ಕನಿಷ್ಟ ಆರು ವಾರಗಳವರೆಗೆ ಮಿಲನದಿಂದ ದೂರವಿರುವುದೇ ಚಿಕಿತ್ಸೆ! ಆ ಬಳಿಕವೂ ಸಾಕಷ್ಟು ಕಾಳಜಿ, ನಾಜೂಕು ಹಾಗೂ ತಾಳ್ಮೆ ವಹಿಸಿಯೇ ಮುಂದುವರೆಯಬೇಕೇ ವಿನಃ ಹೆಚ್ಚಿನ ಒತ್ತಡ ಅಥವಾ ಘರ್ಷಣೆ ಕೂಡದು. ಜನನಾಂಗದಲ್ಲಿ ಜಾರುಕದ್ರವ ಕೊರತೆ, ಒಣತನ ಕಾರಣವಾಗಿದ್ದರೆ ನೀರು ಆಧಾರಿತ ಜಾರುಕದ್ರವ (water based lubricant) ಅಥವಾ ವೈದ್ಯರು ಸೂಚಿಸುವ ಉತ್ಪನ್ನಗಳನ್ನು ಬಳಸಬೇಕು. ಕೆಲವು ಸಂದರ್ಭಗಳನ್ನು ವೈದ್ಯರು ಸೂಕ್ತ ಪರೀಕ್ಷೆಗಳ ಮೂಲಕವೇ ಖಚಿತಪಡಿಸಿ ಅಗತ್ಯ ಔಷಧಿಗಳನ್ನು ನೀಡಿದರೆ ಆ ಪ್ರಕಾರವೇ ಔಷಧಿಗಳನ್ನು ಸೇವಿಸಿ ವೈದ್ಯರ ಸಲಹೆ ಪಾಲಿಸಬೇಕು.

Most Read: ಕೆಲವು ಮಹಿಳೆಯರು ಯೋನಿ ಬಿಗಿಗೊಳಿಸಲು ಕಣಜದ ಗೂಡು ಬಳಸುತ್ತಾರಂತೆ!

ಎಂಡೊಮೆಟ್ರೋಸಿಸ್ ಸಮಸ್ಯೆ ಕಾರಣ

ಎಂಡೊಮೆಟ್ರೋಸಿಸ್ ಸಮಸ್ಯೆ ಕಾರಣ

ಲೈಂಗಿಕ ಕ್ರಿಯೆ ವೇಳೆ ಉಂಟಾಗುವಂತಹ ನೋವನ್ನು ಕಡೆಗಣಿಸಬಾರದು. ದೀರ್ಘಕಾಲದ ತನಕ ಈ ಸಮಸ್ಯೆ ಕಾಡುತ್ತಲಿದ್ದರೆ ಇದಕ್ಕೆ ಎಂಡೊಮೆಟ್ರೋಸಿಸ್ ಕಾರಣವಾಗಿದೆ. ಗರ್ಭಕೋಶದ ಸಂಧಿಯ ಕೆಲವೊಂದು ಕೋಶಗಳು ಬೇರೆ ಭಾಗದಲ್ಲಿ ಬೆಳೆಯುವುದು ಈ ನೋವಿಗೆ ಕಾರಣವಾಗಿದೆ.

ಆಲ್ಕೋಹಾಲ್

ಆಲ್ಕೋಹಾಲ್

ಆಲ್ಕೋಹಾಲ್ ಸೇವನೆ ಮಾಡುವುದರಿಂದ ನಿಮಗೆ ಲೈಂಗಿಕ ಕ್ರಿಯೆಯನ್ನು ಆನಂದಿಸಲು ನೆರವಾಗಬಹುದು. ಆದರೆ ಅತಿಯಾಗಿ ಆಲ್ಕೋಹಾಲ್ ಸೇವನೆ ಮಾಡಿ, ಖಾರವಾಗಿರುವ ಆಹಾರ ಸೇವನೆ ಮಾಡಿದರೆ ಇದರಿಂದ ಮೂತ್ರ ಬಂದಂತೆ ಆಗಬಹುದು. ಇದರಿಂದ ಮೂತ್ರನಾಳದಲ್ಲಿ ನೋವು ಕಾಣಿಸಬಹುದು ಮತ್ತು ಒತ್ತಡವು ಲೈಂಗಿಕ ಕ್ರಿಯೆ ವೇಳೆ ನೋವುಂಟು ಮಾಡಬಹುದು.

ಅಂಡಾಶಯದ ಚೀಲಗಳು

ಅಂಡಾಶಯದ ಚೀಲಗಳು

ಲೈಂಗಿಕ ಕ್ರಿಯೆ ವೇಳೆ ನಿಮಗೆ ತುಂಬಾ ನೋವಾಗುತ್ತಾ ಇದ್ದರೆ ಮತ್ತು ಆ ಜಾಗವು ತುಂಬಾ ಸೂಕ್ಷ ಮತ್ತು ಸ್ಪರ್ಶವಿಲ್ಲದಂತೆ ಆಗಿದ್ದರೆ ಇದಕ್ಕೆ ಗರ್ಭಕೋಶದ ಚೀಲಗಳು ಕಾರಣವಾಗಿವೆ. ಇದನ್ನು ನೀವು ದೃಢಪಡಿಸಲು ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

ಲೈಂಗಿಕ ತಜ್ಞರ ಸಲಹೆ ಪಡೆಯಿರಿ

ಲೈಂಗಿಕ ತಜ್ಞರ ಸಲಹೆ ಪಡೆಯಿರಿ

ಒಂದು ವೇಳೆ ವೈದ್ಯಕೀಯ ಕಾರಣಗಳಿಗೂ ಹೊರತಾಗಿ ನೋವು ಕಾಣಿಸಿಕೊಂಡಿದ್ದರೆ ಇದಕ್ಕೆ ಲೈಂಗಿಕ ತಜ್ಞರಿಂದ ಸಲಹೆ ಪಡೆಯಬಹುದು. (sexual therapy).ಕೆಲವು ವ್ಯಕ್ತಿಗಳ ಮನದಾಳದಲ್ಲಿ ಹುದುಗಿದ್ದ ಅವ್ಯಕ್ತ ಭಾವನೆಗಳು, ಉದಾಹರಣೆಗೆ ತಪ್ಪಿತಸ್ಥ ಭಾವನೆ, ಲೈಂಗಿಕತೆಯ ಕುರಿತಾದ ದ್ವಂದ್ವಗಳು, ಧಾರ್ಮಿಕ ಕಟ್ಟುಪಾಡು, ಹಿಂದೆಂದೋ ಆದ ಲೈಂಗಿಕ ದೌರ್ಜನ್ಯ ಮೊದಲಾದವು ಅಡ್ಡಿಯಾಗಬಹುದು. ಒಂದು ವೇಳೆ ಸಂಭೋಗದ ಸಮಯದಲ್ಲಿ ರಕ್ತಸ್ರಾವ, ಗಾಯಗಳು, ಅನಿಯಮಿತ ಮಾಸಿಕ ದಿನಗಳು, ಬಿಳಿಸೆರಗು ಅಥವಾ ಅನೈಚ್ಛಿಕವಾದ ಯೋನಿಗಳ ಸ್ನಾಯುಗಳ ಸೆಡೆತ ಮೊದಲಾದವು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಕಂಡು ಸಮಸ್ಯೆಗಳನ್ನು ವಿವರಿಸಬೇಕು. ಒಂದು ವೇಳೆ ಮಾನಸಿಕ ಕಾರಣಗಳಿದ್ದರೆ ಪ್ರಮಾಣೀಕೃತ ಲೈಂಗಿಕ ಸಲಹೆಗಾರರಿಂದ ಸೂಕ್ತ ಸಲಹೆ ಪಡೆಯಬೇಕು.

English summary

Sexual Health: Reasons Female Pain During Sex

In many cases, a woman can experience pain during sex if there is not sufficient vaginal lubrication. In these cases, the pain can be resolved if the female becomes more relaxed, if the amount of foreplay is increased, or if the couple uses a sexual lubricant. In some cases, a woman can experience painful intercourse if one of the following conditions is present
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more