For Quick Alerts
ALLOW NOTIFICATIONS  
For Daily Alerts

ವಯಾಗ್ರದಂತೆ ಕೆಲಸ ಮಾಡುವ ಪವರ್‌ಫುಲ್ 10 ಆಹಾರಗಳು

|

ವಯಾಗ್ರಾ ಎಂದಾಕ್ಷಣ ಇದು ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಔಷಧಿ ಎಂದೇ ನಾವೆಲ್ಲಾ ಗುರುತಿಸುತ್ತೇವೆ. ಇದು ಪುರುಷರಲ್ಲಿ ನಿಮಿರು ದೌರ್ಬಲ್ಯವಿದ್ದರೆ ಹಾಗೂ ಲೈಂಗಿಕ ನಿಃಶಕ್ತಿ ಇದ್ದರೆ ವೈದ್ಯರು ಸೂಕ್ತ ಪರೀಕ್ಷೆಗಳ ಬಳಿಕವೇ ಸೂಚಿಸಬಹುದಾದ ಔಷಧಿಯಾಗಿದ್ದು ವೈದ್ಯರ ಸಲಹೆಯ ಮೇರೆಗೆ ಸೇವಿಸಿದರೆ ಅಪಾಯಕಾರಿಯಾಗಬಹುದು. ಸಾಮಾನ್ಯವಾಗಿ ನಡುವಯಸ್ಸು ದಾಟಿದ ಪುರುಷರಲ್ಲಿ ಕಾಣಬರುವ ಈ ತೊಂದರೆಯನ್ನು ಸರಿಪಡಿಸಲೆಂದೇ ಈ ಔಷಧಿಯನ್ನು ವೈದ್ಯರು ಸೂಚಿಸುತ್ತಾರೆ. ಈ ಔಷಧಿ ಲೈಂಗಿಕ ಕ್ರಿಯೆಗೆ ಅಗತ್ಯವಿರುವ ಹಾರ್ಮೋನುಗಳನ್ನು ಪ್ರಚೋದಿಸಿ ನಿಮಿರು ದೌರ್ಬಲ್ಯವನ್ನು ಕಡಿಮೆಗೊಳಿಸುತ್ತದೆ.

ವಯಾಗ್ರಾಕ್ಕೂ ಹೊರತಾಗಿ ಕೆಲವು ಆಹಾರವಸ್ತುಗಳು ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಹೊಂದಿದೆ. ಇವು ಆರೋಗ್ಯಕರವಾಗಿದ್ದು ಸುರಕ್ಷಿತವಾಗಿ ಸೇವಿಸಬಹುದಾಗಿದೆ ಹಾಗೂ ನೈಸರ್ಗಿಕವಾಗಿ ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸಬಹುದಾದರೆ ಏಕಾಗಬಾರದು?

ಈ ಗುಣವನ್ನು ಹೊಂದಿರುವ ಆಹಾರಗಳನ್ನು ಇಂದು ಪಟ್ಟಿ ಮಾಡಲಾಗಿದ್ದು ಇವು ಜನನೇಂದ್ರಿಯಗಳ ಭಾಗದಲ್ಲಿ ರಕ್ತಸಂಚಾರವನ್ನು ಹೆಚ್ಚಿಸಿ ನಿಮಿರು ದೌರ್ಬಲ್ಯವನ್ನು ತಡೆಯುತ್ತದೆ. ಅಲ್ಲದೇ ಹೃದಯದ ಒತ್ತಡವನ್ನೂ ಕೊಂಚ ಹೆಚ್ಚಿಸಿ ಉತ್ತಮ ನಿಮಿರುತನವನ್ನು ಪಡೆಯಲು ನೆರವಾಗುತ್ತದೆ. ಆದ್ದರಿಂದ ಈ ಆಹಾರಗಳಿಗೆ ವಯಾಗ್ರಾದಂತಹ ಶಕ್ತಿ ಇರುವ ಆಹಾರಗಳು ಎನ್ನುವುದಕ್ಕಿಂತ ನಿಮಿರುದೌರ್ಬಲ್ಯ ನಿವಾರಿಸುವ ಕ್ಷಮತೆ ಹೊಂದಿದ ಆಹಾರಗಳು ಎಂದರೇ ಹೆಚ್ಚು ಸೂಕ್ತವಾಗುತ್ತದೆ. ಬನ್ನಿ, ವಯಾಗ್ರಾದಂತಹ ಶಕ್ತಿ ಇರುವ ಹತ್ತು ಪ್ರಮುಖ ಆಹಾರಗಳನ್ನು ನೋಡೋಣ....

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಇತ್ತೀಚಿನ ಅಧ್ಯಯನಗಳಲ್ಲಿ ಕಂಡುಕೊಂಡಂತೆ ವಯಾಗ್ರಾದಂತಹ ಗುಣವನ್ನು ಕಲ್ಲಂಗಡಿ ಹಣ್ಣು ಹೊಂದಿದೆ. ಇದರ ಒಳಗಣ ಕೆಂಪುಭಾದ ಹಾಗೂ ಹೊರಸಿಪ್ಪೆಯ ಒಳಭಾಗದಲ್ಲಿರುವ ತಿಳಿಹಸಿರು ಬಣ್ಣದ ತಿರುಳಿನಲ್ಲಿ ಸಿಟ್ರುಲಿನ್ ಎಂಬ ಪೋಷಕಾಂಶವಿದೆ. ಇದರ ಸೇವನೆಯಿಂದ ದೇಹದಲ್ಲಿ ಆರ್ಜಿನೈನ್ ಹಾಗೂ ನೈಟ್ರಿಕ್ ಆಮ್ಲಗಳು ಉತ್ಪತ್ತಿಯಾಗುತ್ತವೆ. ನೈಟ್ರಿಕ್ ಆಮ್ಲ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ನಿಮಿರು ದೌರ್ಬಲ್ಯವನ್ನು ಕಡಿಮೆಗೊಳಿಸುತ್ತದೆ.

ಅಕ್ರೋಟು

ಅಕ್ರೋಟು

ಉತ್ತಮ ನಿಮಿರುತನಕ್ಕೆ ಒಣಫಲಗಳು ಉತ್ತಮ ಎಂದು ಬಹಳ ಹಿಂದಿನ ವರ್ಷಗಳಲ್ಲಿಯೇ ಕಂಡುಕೊಳ್ಳಲಾಗಿತ್ತು. ಇವುಗಳಲ್ಲಿರುವ ಒಮೆಗಾ 3 ಕೊಬ್ಬಿನ ಆಮ್ಲಗಳು ಹಾಗೂ ವಿಟಮಿನ್ ಬಿ3 ವೀರ್ಯಾಣುಗಳ ಗುಣಮಟ್ಟ ಹೆಚ್ಚಿಸುತ್ತವೆ ಹಾಗೂ ಪುರುಷರ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸುವ ಮೂಲಕ ಲೈಂಗಿಕ ದೌರ್ಬಲ್ಯವನ್ನು ದೂರಾಗಿಸುತ್ತವೆ.

ಮೊಟ್ಟೆ

ಮೊಟ್ಟೆ

ಉತ್ತಮ ನಿಮಿರುವಿಕೆಗೆ ಮೊಟ್ಟೆಗಳೂ ಇನ್ನೊಂದು ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ವಿಟಮಿನ್ ಡಿ, B5 ಹಾಗೂ B6 ರಕ್ತನಾಳಗಳನ್ನು ಸಡಿಲಿಸಿ ಹೆಚ್ಚಿನ ರಕ್ತಪರಿಚಲನೆಗೆ ನೆರವಾಗುತ್ತವೆ ಹಾಗೂ ಈ ಮೂಲಕ ಸಂಗಾತಿಯೊಂದಿಗಿನ ಆತ್ಮೀಯ ಸಮಯವನ್ನು ಇನ್ನಷ್ಟು ಆತ್ಮೀಯವಾಗಿಸಲು ನೆರವಾಗುತ್ತದೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಇದೊಂದು ಅತ್ಯಂತ ಆರೋಗ್ಯಕರ ಆಹಾರವಾಗಿದೆ ಹಾಗೂ ಇದರಲ್ಲಿರುವ ಹೆಚ್ಚಿನ ವಿಟಮಿನ್ನುಗಳ ಕಾರಣದಿಂದ ವಿಶ್ವದಲ್ಲಿಯೇ ಅತಿ ಹೆಚ್ಚು ಸ್ಥಳಗಳಲ್ಲಿ ಸೇವಿಸಲ್ಪಡುವ ಆಹಾರವೂ ಆಗಿದೆ. ಅಲ್ಲದೇ ಇದರಲ್ಲಿ ವಯಾಗ್ರಾದಂತಹ ಗುಣವಿರುವ ಕೆಲವಾರು ಪೋಷಕಾಂಶಗಳು ನಿಮಿರು ದೌರ್ಬಲ್ಯವನ್ನು ಕಡಿಮೆಗೊಳಿಸುತ್ತದೆ. ಪಾಲಕ್ ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಕಬ್ಬಿಣ, ಮೆಗ್ನೇಶಿಯಂ ಹಾಗೂ ಅಗತ್ಯವಾದ ವಿಟಮಿನ್ ಇ ಇವೆ. ಇವೆಲ್ಲವೂ ವಯಾಗ್ರಾಕ್ಕೆ ಕಡಿಮೆ ಇಲ್ಲದ ಪೋಷಣ ನೀಡುತ್ತವೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಕಪ್ಪು ಚಾಕಲೇಟಿನ ಸೇವನೆಯಿಂದ ಮನೋಭಾವ ಉಲ್ಲಸಿತಗೊಳ್ಳುತ್ತದೆ ಹಾಗೂ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇದು ಮಾನಸಿಕ ಬೇಗುದಿಯನ್ನು ಕಡಿಮೆಗೊಳಿಸುತ್ತದೆ ಹಾಗೂ ಸಂವೇದನೆಯನ್ನೂ ಹೆಚ್ಚಿಸುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಬ್ರೋಮಿಲೈನ್ ಎಂಬ ಕಿಣ್ವವಿದೆ. ಇದು ನೈಸರ್ಗಿಕ ಲೈಂಗಿಕಾಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕಂಡುಕೊಳ್ಳಲಾಗಿದೆ. ಅಲ್ಲದೇ ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ, ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳು ಆರೋಗ್ಯವನ್ನು ವೃದ್ದಿಸುವ ಜೊತೆಗೇ ಲೈಂಗಿಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಬೆಣ್ಣೆಹಣ್ಣು

ಬೆಣ್ಣೆಹಣ್ಣು

ಬೆಣ್ಣೆಹಣ್ಣಿನಲ್ಲಿರುವ ಪೋಷಕಾಂಶಗಳು ಈ ಹಣ್ಣನ್ನು ಅತ್ಯುತ್ತಮ ಹಣ್ಣುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಿಸಿವೆ. ಇದರಲ್ಲಿ ಆರೋಗ್ಯಕರ ಕೊಬ್ಬು ಹಾಗೂ ವಿಟಮಿನ್ B6 ಸಹಿತ ಹಲವಾರು ಪೋಷಕಾಂಶಗಳಿದ್ದು ದೇಹದ ಚೈತನ್ಯವನ್ನು ಹೆಚ್ಚಿಸುತ್ತವೆ. ವಿಶೇಷವಾಗಿ ಪುರುಷರಲ್ಲಿ ಬೆಣ್ಣೆಹಣ್ಣಿನ ಪೋಷಕಾಂಶಗಳು ವೀರ್ಯಾಣುಗಳ ಸಂಖ್ಯೆಯಲ್ಲಿ ವೃದ್ದಿ ಹಾಗೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ.

ಏಲಕ್ಕಿ

ಏಲಕ್ಕಿ

ವಯಾಗ್ರಾದಂತೆ ಕಾರ್ಯನಿರ್ವಹಿಸುವ ಆಹಾರಗಳ ಪಟ್ಟಿಯಲ್ಲಿ ಏಲಕ್ಕಿಯೂ ಮೇಲಿನ ಸ್ಥಾನವನ್ನು ಪಡೆದಿದೆ. ಇದರಲ್ಲಿ ಸಿನೆಯೋಲ್ ಎಂಬ ಪೋಷಕಾಂಶವಿದ್ದು ಇದು ವಿಶೇಷವಾಗಿ ಪುರುಷರ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಉತ್ತಮ ನಿಮಿರುವಿಕೆಗೂ ಏಲಕ್ಕಿ ಅದ್ಭುತವಾದ ಆಹಾರವಾಗಿದೆ.

ದಾಳಿಂಬೆ

ದಾಳಿಂಬೆ

ದಾಳಿಂಬೆಯಲ್ಲಿಯೂ ಹಲವಾರು ಪೋಷಕಾಂಶಗಳಿದ್ದು ಇವು ನೈಸರ್ಗಿಕ ವಯಾಗ್ರಾದಂತೆ ಕೆಲಸ ನಿರ್ವಹಿಸುತ್ತವೆ. ದಾಳಿಂಬೆಯ ಸೇವನೆಯಿಂದ ಪುರುಷರ ಜನನಾಂಗಗಳಲ್ಲಿ ಹೆಚ್ಚಿನ ರಕ್ತಪರಿಚಲನೆ ಒದಗುತ್ತದೆ. ಈ ಮೂಲಕ ಸಂಗಾತಿಯೊಂದಿಗೆ ಆತ್ಮೀಯ ಘಳಿಗೆಗಳನ್ನು ಹೆಚ್ಚಿನ ಕಾಲ ಕಳೆಯುವುದು ಸಾಧ್ಯವಾಗುತ್ತದೆ.

ಶತಾವರಿ

ಶತಾವರಿ

ಶತಾವರಿಯಲ್ಲಿ ಹೆಚ್ಚಿನ ಪ್ರಮಾಣದ ಫೋಲೇಟ್ ಹಾಗೂ ವಿಟಮಿನ್ ಇ ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ ಹಾಗೂ ಪುರುಷರಲ್ಲಿ ನೈಸರ್ಗಿಕ ವಯಾಗ್ರಾದಂತೆ ಕಾರ್ಯನಿರ್ವಹಿಸುತ್ತದೆ. ಶತಾವರಿಯಲ್ಲಿರುವ ಇತರ ಪೋಷಕಾಂಶಗಳು ಲೈಂಗಿಕ ಆರೋಗ್ಯದ ಸಹಿತ ಇತರ ಆರೋಗ್ಯಕರ ಪ್ರಯೋಜನಗಳನ್ನೂ ಹೊಂದಿದೆ.

English summary

Natural Viagra Foods to Enhance Sex Energy

Viagra is widely talked about when it comes to boosting sexual drive and overall sexual health. The drug sees its application in treating erectile dysfunction and impotency in men. A common disorder that widely affects adult men, the drug helps to boost erection by stimulating sex hormones. Besides Viagra, there are some powerful foods that also help boost one's sex drive. What better way to boost your sex drive than doing it healthily? These foods listed in the article help to enhance blood flow to the genitals. They help to increase blood pressure and consequently promote stronger erections.
X
Desktop Bottom Promotion