ಶಿವರಾತ್ರಿ ವ್ರತ: ಉಪವಾಸ ಮಾಡಿ, ಆದರೆ ಆರೋಗ್ಯದ ಕಡೆ ಗಮನ ನೀಡಿ...

By Hemanth
Subscribe to Boldsky

ಹಿಂದೂ ಧರ್ಮದಲ್ಲಿ ತುಂಬಾ ಶ್ರದ್ಧಾಭಕ್ತಿಯಿಂದ ಆಚರಿಸುವಂತಹ ಹಬ್ಬಗಳಲ್ಲಿ ಶಿವರಾತ್ರಿಯು ಒಂದಾಗಿದೆ. ಶಿವನ ಭಕ್ತರು ಈ ದಿನ ಪೂರ್ತಿ ದಿನ ಉಪವಾಸ ಮಾಡಿ ಪ್ರಾರ್ಥಿಸುವರು. ಆದರೆ ನವರಾತ್ರಿ ಮತ್ತು ಕರ್ವಾ ಚೌತಿ ಹೋಲಿಸಿದರೆ ಶಿವರಾತ್ರಿಯ ಉಪವಾಸವು ಅಷ್ಟು ಕಠಿಣವೇನಲ್ಲ. ಶಿವರಾತ್ರಿಯ ಉಪವಾಸದ ವೇಳೆ ಭಕ್ತರು ಆಲೂಗಡ್ಡೆ, ಹಣ್ಣುಗಳು, ಹಸಿ ತರಕಾರಿಗಳಾದ ಕ್ಯಾರೆಟ್, ಸೌತೆಕಾಯಿ ಇತ್ಯಾದಿ ಸೇವಿಸಬಹುದು ಮತ್ತು ಜ್ಯೂಸ್ ಕುಡಿಯಬಹುದು. ಕೆಲವರು ಸಬ್ಬಕ್ಕಿ ಸೇವಿಸುವರು. ಹಿಂದೂ ಧರ್ಮಿಯರು ಉಪವಾಸ ಮಾಡುವ ಸಮಯದಲ್ಲಿ ಫಲಾಹಾರ ಸೇವನೆ ಮಾಡುವುದು ರೂಢಿ. ಫಲಾಹಾರದಲ್ಲಿ ಹೆಚ್ಚಿನವರು ಸಬ್ಬಕ್ಕಿಯಿಂದ ಮಾಡಿದಂತಹ ತಿಂಡಿ ಸೇವಿಸುವರು. ಕೆಲವರು ಕುಟ್ಟುವಿನ ಹಿಟ್ಟಿನಿಂದ ಮಾಡಿದಂತಹ ರೊಟ್ಟಿ ಸೇವನೆ ಮಾಡುವರು.

ಇದಕ್ಕೆ ಆಲೂಗಡ್ಡೆ ಪಲ್ಯ ಮಾಡಿಕೊಳ್ಳುವರು. ಪ್ರತಿಯೊಂದು ಪದಾರ್ಥಕ್ಕೆ ಕಲ್ಲುಪ್ಪು ಹಾಕುವರು. ಆದರೆ ಕೆಲವರು ಕಠಿಣ ವ್ರತಾಚರಣೆ ಮಾಡಿ ದಿನವಿಡಿ ನಿರಾಹಾರವಾಗಿರುವರು. ಇವರು ಹಣ್ಣುಗಳು ಮತ್ತು ಫಲಾಹಾರ ಸೇವನೆ ಕೂಡ ಮಾಡಲ್ಲ. ಕೇವಲ ನೀರಿನ ಮೇಲೆ ಅವಲಂಬಿತವಾಗಿರುವರು. ದಿನವಿಡಿ ಉಪವಾಸವಿರುವಾಗ ದೇಹದ ಶಕ್ತಿಯ ಮಟ್ಟ ಕಡಿಮೆಯಾಗುವುದು ಮತ್ತು ತುಂಬಾ ನಿಶ್ಯಕ್ತಿ ಆವರಿಸುವುದು ಹಾಗೂ ಹಸಿವು ಕಾಣಿಸಿಕೊಳ್ಳುವುದು. ಈ ವೇಳೆ ನೀವು ಆರೋಗ್ಯಕರವಾಗಿ ಉಪವಾಸ ಮಾಡಿದರೆ ತುಂಬಾ ಒಳ್ಳೆಯದು. ನೀವು ಶಿವರಾತ್ರಿಗೆ ಉಪವಾಸ ಮಾಡಲು ಬಯಸುತ್ತಿದ್ದರೆ ಕೆಳಗೆ ಕೊಟ್ಟಿರುವಂತಹ ಆರೋಗ್ಯಕರ ಸಲಹೆಗಳನ್ನು ಪಾಲಿಸಿಕೊಂಡು ಹೋಗಿ.

ಮೊದಲ ದಿನ ರಾತ್ರಿ ಆರೋಗ್ಯಕರ ಆಹಾರ ಸೇವಿಸಿ

ಮೊದಲ ದಿನ ರಾತ್ರಿ ಆರೋಗ್ಯಕರ ಆಹಾರ ಸೇವಿಸಿ

ನಿಮಗೆ ಹಸಿವಾಗಬಾರದು ಎನ್ನುವ ಕಾರಣಕ್ಕಾಗಿ ನೀವು ಉಪವಾಸದ ಹಿಂದಿನ ರಾತ್ರಿ ಸರಿಯಾಗಿ ತಿಂದು ತೇಗಬೇಡಿ. ಉಪವಾಸಕ್ಕೆ ಮೊದಲಿನ ರಾತ್ರಿ ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಇದರಿಂದ ಉಪವಾಸದ ದಿನ ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಯು ತುಂಬಾ ಆರೋಗ್ಯವಾಗಿರುವುದು.

ಖಾರ ಪದಾರ್ಥ ಕಡೆಗಣಿಸಿ

ಖಾರ ಪದಾರ್ಥ ಕಡೆಗಣಿಸಿ

ಉಪವಾಸಕ್ಕೆ ಮೊದಲ ದಿನ ರಾತ್ರಿ ಊಟಕ್ಕೆ ನೀವು ತುಂಬಾ ಖಾರವಾದ ಆಹಾರ ಸೇವನೆ ಮಾಡಿದರೆ ಅದರಿಂದ ಅಸಿಡಿಟಿ, ಅಜೀರ್ಣ ಮತ್ತು ಮರುದಿನ ಭೇದಿ ಉಂಟಾಗಬಹುದು. ಇದರಿಂದ ಆರೋಗ್ಯಕರ ಹಾಗೂ ಕಡಿಮೆ ಖಾರದ ಆಹಾರ ಸೇವಿಸಿ.

ಸಾಕಷ್ಟು ನೀರು ಸೇವಿಸಿ

ಸಾಕಷ್ಟು ನೀರು ಸೇವಿಸಿ

ಆರೋಗ್ಯಕರ ರೀತಿಯಲ್ಲಿ ಉಪವಾಸವ್ರತವನ್ನು ಕೈಗೊಳ್ಳುವ೦ತಾಗಲು ನೆರವಾಗುವ ಸಲಹೆಗಳ ಪೈಕಿ ಇದೂ ಸಹ ಒ೦ದಾಗಿರುತ್ತದೆ. ಶಿವರಾತ್ರಿಯ ವ್ರತಾಚರಣೆಯ ವೇಳೆಯಲ್ಲಿ ಏನನ್ನೂ ಸೇವಿಸದ ಭಕ್ತರು ನೀರನ್ನು ಧಾರಾಳವಾಗಿ ಕುಡಿಯಬೇಕು. ನೀರಿನ ಸೇವನೆಯು ನಿಮ್ಮ ಶರೀರವನ್ನು ಜಲಪೂರಣವಾಗಿರಿಸುತ್ತದೆಯಲ್ಲದೇ ನಿಮ್ಮ ಹೊಟ್ಟೆಯೂ ತು೦ಬಿರುವ೦ತಹ ಅನುಭವವನ್ನು ನಿಮಗೆ ನೀಡುತ್ತದೆ ಹಾಗೂ ನಿಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನೂ ಸಹ ಅತ್ಯುನ್ನತ ಮಟ್ಟದಲ್ಲಿರಿಸುತ್ತದೆ.

ಶಿವರಾತ್ರಿಯಂದು ಜಾಗರಣೆ-ಉಪವಾಸ ಕೈಗೊಂಡರೆ ಇಷ್ಟಾರ್ಥಗಳು ನೆರವೇರುವುದು

ತಾಜಾ ಹಣ್ಣುಗಳನ್ನು ಸೇವಿಸಿ

ತಾಜಾ ಹಣ್ಣುಗಳನ್ನು ಸೇವಿಸಿ

ಉಪವಾಸದ ವೇಳೆ ನೀವು ಹಣ್ಣುಗಳನ್ನು ಸೇವನೆ ಮಾಡಬೇಕೆಂದು ಬಯಸಿದ್ದರೆ ಆಗ ಈ ಸಲಹೆ ಪಾಲಿಸಿ. ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಬೇಕಾಗುವಂತಹ ವಿಟಮಿನ್ ಗಳು ಹಾಗೂ ಪೋಷಕಾಂಶಗಳು ಸಿಗುವುದು. ಬಾಳೆಹಣ್ಣು ತಿಂದು ಒಂದು ಲೋಟ ಹಾಲು ಕುಡಿಯಿರಿ.

ಅತಿಯಾಗಿ ತಿನ್ನಬೇಡಿ

ಅತಿಯಾಗಿ ತಿನ್ನಬೇಡಿ

ಫಲಾಹಾರ ಸೇವನೆ ಮಾಡುವವರು ಕೇವಲ ಒಂದು ಹೊತ್ತಿನ ಊಟ ಮಾಡುವರು. ಈ ಊಟದಲ್ಲಿ ನೀವು ಅತಿಯಾಗಿ ತಿಂದರೆ ಅದರಿಂದ ಅಜೀರ್ಣ ಮತ್ತು ತೂಕ ಹೆಚ್ಚಳವಾಗುವಂತಹ ಆರೋಗ್ಯದ ಸಮಸ್ಯೆ ಬರಬಹುದು.

ಕರಿದ ತಿಂಡಿ ತ್ಯಜಿಸಿ

ಕರಿದ ತಿಂಡಿ ತ್ಯಜಿಸಿ

ಉಪವಾಸದ ವೇಳೆ ನೀವು ಕರಿದ ತಿಂಡಿಗಳನ್ನು ತಿನ್ನಬೇಡಿ. ಉಪವಾಸದ ವೇಳೆ ಆರೋಗ್ಯಕರ ಅಡುಗೆ ಕ್ರಮ ಪಾಲಿಸಿದರೆ ಹೆಚ್ಚುವರಿ ತೂಕ ಬೆಳೆಯುವುದು ತಪ್ಪುತ್ತದೆ.

ಸಕ್ಕರೆ ಮಟ್ಟ ಸಮತೋಲದಲ್ಲಿಡಿ

ಸಕ್ಕರೆ ಮಟ್ಟ ಸಮತೋಲದಲ್ಲಿಡಿ

ಉಪವಾಸದ ವೇಳೆ ಸಕ್ಕರೆ ಮಟ್ಟವು ಕೆಳಗಿಳಿಯುವುದು. ಸಕ್ಕರೆ ಮಟ್ಟವು ಕುಗ್ಗಿದರೆ ಅದರಿಂದ ದೇಹದ ಶಕ್ತಿ ಕಡಿಮೆಯಾಗುವುದು. ನಿಶ್ಯಕ್ತಿ ಮತ್ತು ಜಡತ್ವ ತೊಲಗಿಸಲು ನೀವು ಸ್ವಲ್ಪ ಸಿಹಿ ಮತ್ತು ಹಾಲನ್ನು ಸೇವಿಸಿ. ಇದರಿಂದ ಸಕ್ಕರೆ ಮಟ್ಟ ಸಮತೋಲನಕ್ಕೆ ಬರುವುದು.

ಏನು ತಿನ್ನುತ್ತೀರಿ ಎನ್ನುವುದು ಗಮನದಲ್ಲಿರಲಿ

ಏನು ತಿನ್ನುತ್ತೀರಿ ಎನ್ನುವುದು ಗಮನದಲ್ಲಿರಲಿ

ಶಿವರಾತ್ರಿಗೆ ವ್ರತ ಮಾಡುವಂತಹ ಭಕ್ತರು ಕರಿದ ತಿಂಡಿಗಳಾದ ಚಿಪ್ಸ್ ಮತ್ತು ಪಕೋಡಾ ಸೇವನೆ ಮಾಡುವರು. ಕರಿದ ತಿಂಡಿಗಳಿಂದ ಗ್ಯಾಸ್ ಉಂಟಾಗಬಹುದು ಮತ್ತು ಜಡತ್ವ ಕಾಡಬಹುದು. ಇದರಿಂದ ನಿಮ್ಮ ಆಹಾರದ ಕಡೆ ಗಮನವಿರಲಿ.

ಹಣ್ಣುಗಳ ಜ್ಯೂಸ್

ಹಣ್ಣುಗಳ ಜ್ಯೂಸ್

ತಾಜಾ ಹಣ್ಣುಗಳಿಂದ ತಯಾರಿಸಿರುವ ಜ್ಯೂಸ್ ಸೇವನೆ ಮಾಡಿ. ಮಿಲ್ಕ್ ಶೇಕ್ ಕುಡಿಯಿರಿ. ಇದರಿಂದ ಹೊಟ್ಟೆ ತುಂಬಿರುವುದು ಮತ್ತು ದೇಹಕ್ಕೆ ಶಕ್ತಿ ಸಿಗುವುದು.

For Quick Alerts
ALLOW NOTIFICATIONS
For Daily Alerts

    English summary

    Maha Shivaratri 2018: The Significance of Fasting on this Day

    Maha Shivratri is one of the most popular Hindu festivals which is celebrated with great vigour and devotion. Devotees of Lord Shiva observe whole day fast. However, Shivratri fasts are not very strict when compared to the other ones like Navratri and Karwa Chauth. During Shivratri fasting, devotees can eat potatoes, fruits, raw vegetables like carrots, cucumber etc and fruit juices. However, some people also eat sabudana and kuttu ka atta. Phalahar is one of the methods followed by people observing vrats in Hinduism. Sabudana is one of the widely used in phalahar (fasting meal which consists of kuttu ki roti, aloo ki sabji, halwa etc).
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more