For Quick Alerts
ALLOW NOTIFICATIONS  
For Daily Alerts

ಕಿಸ್ ಹಾಗೂ ಲೈಂಗಿಕ ಸಂಪರ್ಕದಿಂದ ಕೂಡ 'ಟಿಬಿ' ರೋಗ ಹರಡಬಹುದು!!

|

ಟಿಬಿ ಅಥವಾ ಟ್ಯೂಬರ್ ಕ್ಯುಲೋಸಿಸ್ ಎಂಬುದು ಕ್ಷಯರೋಗದ ಹೃಸ್ವರೂಪವಾಗಿದ್ದು ಇದೊಂದು ಸಾಂಕ್ರಾಮಿಕ ರೋಗವಾಗಿದೆ. ಇದಕ್ಕೆ ಕಾರಣವಾಗುವ ಕ್ರಿಮಿಗಳು ರೋಗಿಯ ದೇಹವನ್ನು ಪ್ರವೇಶಿದ ಕೆಲವು ದಿನಗಳವರೆಗೆ ನಿಧಾನವಾಗಿ ವೃದ್ಧಿ ಪಡೆದು ಉಲ್ಬಣಗೊಳ್ಳುವವರೆಗೂ ರೋಗಿಗೆ ಈ ರೋಗ ಇರುವುದೇ ತಿಳಿದಿರುವುದಿಲ್ಲ. ಈ ಕ್ರಿಮಿಗಳು ರೋಗಿಯ ಉಸಿರಿನ ಮೂಲಕವೂ ಗಾಳಿಯಲ್ಲಿ ಪಸರಿಸಿ ಈ ಗಾಳಿಯನ್ನು ಉಸಿರಾಡುವ ವ್ಯಕ್ತಿಗೂ ಹರಡಿಸಬಲ್ಲಷ್ಟು ಪ್ರಬಲವಾಗಿವೆ.

ವಿಶೇಷವಾಗಿ ಶ್ವಾಸಕೋಶದ ಕ್ಷಯ (Pulmonary Tuberculosis ಅಥವಾ lung TB) ಗಾಳಿಯಲ್ಲಿ ವೇಗವಾಗಿ ಹರಡುತ್ತದೆ. ಆದರೆ ಈ ಕ್ರಿಮಿಗೆ ನೆಲೆಗೊಳ್ಳಲು ತೇವವಿರುವ ಸ್ಥಳವೇ ಬೇಕಾದುದರಿಂದ ರೋಗ ಪೀಡಿಯ ವ್ಯಕ್ತಿಯ ಹಸ್ತಲಾಘವ, ಊಟವನ್ನು ಅಥವಾ ತಟ್ಟೆಗಳನ್ನು ಹಂಚಿಕೊಳ್ಳುವುದರಿಂದ ಯಾವುದೇ ಅಪಾಯವಿಲ್ಲ. ಆದರೆ ತೇವವಿರುವ ಭಾಗಗಳ ಸ್ಪರ್ಶ, ಅಂದರೆ ಕಿಸ್ ಹಾಗೂ ಲೈಂಗಿಕ ಸಂಪರ್ಕ? ಈ ಪ್ರಶ್ನೆಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆ ನೋಡೋಣ....

ಕ್ಷಯರೋಗದ ಬಗೆಗಳು

ಕ್ಷಯರೋಗದ ಬಗೆಗಳು

ಹೆಚ್ಚಿನ ಮಾಹಿತಿಗೂ ಮುನ್ನ ಕ್ಷಯರೋಗದ ಬಗೆಗಳನ್ನು ತಿಳಿದುಕೊಳ್ಳುವುದು ಅವಶ್ಯ. ಏಕೆಂದರೆ ಎಲ್ಲಾ ಕ್ಷಯರೋಗಗಳು ಏಕಸಮಾನವಾಗಿ ಅಪಾಯಕಾರಿಯಲ್ಲ! ಕ್ಷಯರೋಗವನ್ನು ಸ್ಥೂಲವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು. ಲೇಟೆಂಟ್ ಅಥವಾ ಸುಪ್ತ ಟೀಬಿ ಹಾಗೂ ಆಕ್ಟಿವ್ ಅಥವಾ ಸಕ್ರಿಯ ಟೀಬಿ. ಸುಪ್ತಾವಸ್ಥೆಯ ಕ್ಷಯ ರೋಗಿಯ ದೇಹದಲ್ಲಿ ಈಗಾಗಲೇ ವ್ಯಾಪಿಸಿದ್ದರೂ ರೋಗಿಯ ರೋಗ ನಿರೋಧಕ ವ್ಯವಸ್ಥೆ ಬಲವಾಗಿದ್ದು ಇದರ ಪ್ರಾಬಲ್ಯ ಹೆಚ್ಚದಂತೆ ತಡೆ ಹಿಡಿದಿರುತ್ತದೆ ಹಾಗೂ ಕ್ರಿಮಿಗಳನ್ನು ವೃದ್ದಿಸದಂತೆ ತಡೆದಿರುತ್ತದೆ. ಈ ರೋಗ ಇರುವ ರೋಗಿಯಿಂದ ರೋಗ ಹರಡುವ ಭೀತಿಯಿಲ್ಲ. ಆದರೆ ರೋಗ ನಿರೋಧಕ ಶಕ್ತಿ ಕೊಂಚವೇ ದುರ್ಬಲವಾದರೂ, ಈ ಕ್ರಿಮಿಗಳು ಪ್ರಾಬಲ್ಯ ಮೆರೆದು ರೋಗಿಯನ್ನು ತಕ್ಷಣವೇ ರೋಗಕ್ಕೊಳಪಡಿಸಬಹುದು ಹಾಗೂ ಈಗ ಈ ಕ್ಷಯ ಸಕ್ರಿಯ ಟೀಬಿಗೆ ಪರಿವರ್ತಿತಗೊಳ್ಳಬಹುದು.

ಕ್ಷಯರೋಗದ ಬಗೆಗಳು

ಕ್ಷಯರೋಗದ ಬಗೆಗಳು

ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಕುಸಿದು ಯಾವುದೋ ಚಿಕ್ಕ ಕಾಯಿಲೆ ಬಂದು ತಪಾಸಣೆಗೊಳ್ಳುವವರೆಗೂ ಈ ರೋಗ ಇದ್ದಿದ್ದೇ ರೋಗಿಗೆ ಗೊತ್ತಾಗದಿರುವ ಕಾರಣ ಈ ಕ್ಷಯ ಸಕ್ರಿಯ ಕ್ಷಯವಾಗಿ ಬದಲಾವಣೆಯಾಗುವ ಸಂದರ್ಭವೇ ಹೆಚ್ಚು. ಆದರೆ ಈ ಬದಲಾವಣೆಯ ಸಮಯದಲ್ಲಿ ರಾತ್ರಿಯ ಹೊತ್ತು ಬೆವರುವಿಕೆ, ಸತತ ಕೆಮ್ಮು, ಸುಸ್ತು, ಧಿಡೀರನೇ ತೂಕ ಇಳಿಯುವುದು, ಫ್ಲೂ ನಂತಹ ಸೂಚನೆಗಳು ಹಾಗೂ ಜ್ವರ ಆವರಿಸುತ್ತದೆ. ಇವುಗಳಲ್ಲಿ ಯಾವುದೇ ಲಕ್ಷಣ ಕಂಡುಬಂದರೂ ತಕ್ಷಣ ವೈದ್ಯರಲ್ಲಿ ತಪಾಸಣೆಗೊಳಗಾಗಬೇಕು. ನೆನಪಿರಲಿ, ಎಲ್ಲ ಬಗೆಯ ಕ್ಷಯಗಳಲ್ಲಿ ಶ್ವಾಸಕೋಶದ ಕ್ಷಯ ಅತ್ಯಂತ ಅಪಾಯಕಾರಿಯಾಗಿದ್ದು ಅತ್ಯಂತ ಸುಲಭವಾಗಿ ಒಬ್ಬರಿಂದೊಬ್ಬರಿಗೆ ಹರಡುತ್ತದೆ.

ಈ ರೋಗ ಚುಂಬನದಿಂದ ಹರಡಬಲ್ಲುದೇ?

ಈ ರೋಗ ಚುಂಬನದಿಂದ ಹರಡಬಲ್ಲುದೇ?

ತಜ್ಞರ ಪ್ರಕಾರ, ಚುಂಬನದಿಂದಲೂ ರೋಗ ಹರಡಬಹುದು. ಅದರೆ ಈ ರೋಗಿಗೆ ಶ್ವಾಸಕೋಶದ ಕ್ಷಯ ಹಾಗೂ ಸಕ್ರಿಯ ಕ್ಷಯ ಇದ್ದರೆ ಹರಡುವಿಕೆಯ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ. ಚುಂಬನದ ಮೂಲಕ ರೋಗಿಯ ಲಾಲಾರಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮೈಕೋ ಬ್ಯಾಕ್ಟೀರಿಯಾಗಳು ಸೋಂಕು ಹರಡಿಸುವ ಕ್ಷಮತೆ ಹೊಂದಿರುತ್ತವೆ. ಆದ್ದರಿಂದ ಟಿಬಿ ಪೀಡಿಯ ವ್ಯಕ್ತಿಯೊಂದಿಗೆ ಚುಂಬ ಅಥವಾ ಲೈಂಗಿಕ ಸಂಪರ್ಕ ಹೊಂದುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಕ್ಷಯರೋಗ ಲೈಂಗಿಕ ಸಂಪರ್ಕದಿಂದ ಹರಡಬಹುದೇ?

ಕ್ಷಯರೋಗ ಲೈಂಗಿಕ ಸಂಪರ್ಕದಿಂದ ಹರಡಬಹುದೇ?

"ಲೈಂಗಿಕ ಸಂಪರ್ಕದಿಂದಲೂ ಕ್ಷಯ ಹರಡಬಹುದಾದರೂ, ಇದರ ಸಂಭಾವ್ಯತೆ ಅಪರೂಪ" ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಓರ್ವ ವ್ಯಕ್ತಿಯ ಗುಪ್ತಾಂಗಗಳಲ್ಲಿ ಕ್ಷಯರೋಗದ ಸೋಂಕು ಹರಡಿದ್ದರೆ, ಈ ವ್ಯಕ್ತಿಯೊಂದಿಗಿನ ಲೈಂಗಿಕ ಸಂಪರ್ಕ ಕ್ಷಯರೋಗದ ಹರಡುವಿಕೆಗೆ ಕಾರಣವಾಗುತ್ತದೆ.

ಕ್ಷಯರೋಗ ಲೈಂಗಿಕ ಸಂಪರ್ಕದಿಂದ ಹರಡಬಹುದೇ?

ಕ್ಷಯರೋಗ ಲೈಂಗಿಕ ಸಂಪರ್ಕದಿಂದ ಹರಡಬಹುದೇ?

ಇದಕ್ಕೆ ಪ್ರಮುಖ ಮಾಧ್ಯಮವೆಂದರೆ ರಕ್ತ ಮತ್ತು ದುಗ್ಧರಸಗಳು. ಹಾಗಾಗಿ ಗುಪ್ತಾಂಗದ ಕ್ಷಯರೋಗ ಇರುವ ವ್ಯಕ್ತಿಯೊಂದಿಗಿನ ಲೈಂಗಿಕ ಸಂಪರ್ಕದಿಂದ ಇತರರಿಗೂ ರೋಗ ಹರಡುತ್ತದೆ ಹಾಗೂ ಗುಪ್ತಾಂಗದಿಂದ ಇತರ ಅಂಗಗಳಿಗೂ ವ್ಯಾಪಿಸಿ ಉಲ್ಬಣಗೊಳ್ಳಬಹುದು. ಅದರಲ್ಲೂ ರೋಗ ನಿರೋಧಕ ಶಕ್ತಿ ಕುಂಠಿತವಾಗಿರುವ ವ್ಯಕ್ತಿಗಳು ಈ ಸೋಂಕಿಗೆ ಸುಲಭವಾಗಿ ತುತ್ತಾಗುತ್ತಾರೆ. ಅಲ್ಲದೇ ಈಗಾಗಲೇ ಕ್ಯಾನ್ಸರ್, ಮಧುಮೇಹ ಅಥವಾ ಹೆಚ್ ಐ ವಿ ರೋಗಗಳಿರುವ ವ್ಯಕ್ತಿಗಳು ಗುಪ್ತಾಂಗದ ಕ್ಷಯರೋಗಕ್ಕೆ ಒಳಗಾಗುವ ಗರಿಷ್ಟ ಸಾಧ್ಯತೆಯನ್ನು ಹೊಂದಿರುತ್ತಾರೆ.

ಒಂದು ಅಧ್ಯಯನ ಹೀಗೆ ಹೇಳುತ್ತದೆ

ಒಂದು ಅಧ್ಯಯನ ಹೀಗೆ ಹೇಳುತ್ತದೆ

ದಂಪತಿಗಳಲ್ಲೊಬ್ಬರಿಗೆ ಗುಪ್ತಾಂಗದ ಕ್ಷಯರೋಗವಿದ್ದರೆ, ಅಂತಹ ದಂಪತಿಗಳ ಬಗ್ಗೆ ನಡೆಸಿದ ಅಧ್ಯಯನವೊಂದರಲ್ಲಿ ಇವರ ಸಂಗಾತಿಗಳೂ ಗುಪ್ತಾಂಗದ ಕ್ಷಯರೋಗಕ್ಕೆ ತುತ್ತಾಗಿರುವುದನ್ನು ಕಂಡುಕೊಳ್ಳಲಾಗಿದೆ. ಈ ಸಿದ್ದಾಂತವನ್ನು ಪರೀಕ್ಷಿಸಲು ಅಂಶೋಧಕರು ದಂಪತಿಗಳಿಬ್ಬರ ಗುಪ್ತಾಂಗಗಳಲ್ಲಿ ಕಂಡುಬರುವ ಬ್ಯಾಕ್ಟೀರಿಯಗಳನ್ನು ಅತಿಸೂಕ್ಷ್ಮ ವಿಶ್ಲೇಷಣೆಗೆ ಒಳಪಡಿಸಿದರು. ಈ ವಿಶ್ಲೇಷಣೆಯಲ್ಲಿ ಇಬ್ಬರ ದೇಹದಲ್ಲಿ ಕಂಡುಬಂದ ಬ್ಯಾಕ್ಟೀರಿಯಾಗಳೂ ಒಂದೇ ಮೂಲದಿಂದ ಹೊರಟಿದ್ದುದ್ದು ಪತ್ತೆಯಾಯಿತು. ಆದ್ದರಿಂದ ಗುಪ್ತಾಂಗದ ಕ್ಷಯರೋಗವಿರುವ ವ್ಯಕ್ತಿಯೊಂದಿಗಿನ ಲೈಂಗಿಕ ಸಂಪರ್ಕದಿಂದ ಇನ್ನೊಬ್ಬರಿಗೂ ಈ ರೋಗ ಹರಡುವ ಸಾಧ್ಯತೆ ನಿಚ್ಚಳವಾಗಿದೆ.

ಗುಪ್ತಾಂಗದ ಕ್ಷಯರೋಗದ ಪ್ರಾರಂಭಿಕ ಸೂಚನೆಗಳು:

ಗುಪ್ತಾಂಗದ ಕ್ಷಯರೋಗದ ಪ್ರಾರಂಭಿಕ ಸೂಚನೆಗಳು:

ಪ್ರಾರಂಭಿಕ ಸೂಚನೆಗಳಲ್ಲಿ ಗುಪ್ತಾಂಗದ ಭಾಗದಲ್ಲಿ ಚಿಕ್ಕ ಗೀರುಗಳು ಬೀಳುವುದು, ಕೆಂಪಗಾಗುವುದು ಹಾಗೂ ತುರಿಕೆಯುಂಟಾಗುತ್ತದೆ. ಮಹಿಳೆಯರಲ್ಲಿ ಅಸಮಾನ್ಯವಾದ ಸ್ರಾವವೂ ಕಂಡುಬರುತ್ತದೆ. ಇವುಗಳಲ್ಲಿ ಯಾವುದೇ ಸೂಚನೆ ಕಂಡುಬಂದರೂ ತಕ್ಷಣವೇ ವೈದ್ಯರ ಸಲಹೆ ಪಡೆದುಕೊಳ್ಳಬೇಕು.

ಕ್ಷಯರೋಗದ ಬಗ್ಗೆ ಇರುವ ಸಾಮಾನ್ಯ ತಪ್ಪು ತಿಳಿವಳಿಕೆಗಳು

ಕ್ಷಯರೋಗದ ಬಗ್ಗೆ ಇರುವ ಸಾಮಾನ್ಯ ತಪ್ಪು ತಿಳಿವಳಿಕೆಗಳು

ಕ್ಷಯರೋಗದ ಬಗ್ಗೆ ಜನಸಾಮಾನ್ಯರಲ್ಲಿ ಕೆಲವಾರು ತಪ್ಪು ತಿಳಿವಳಿಕೆಗಳಿವೆ, ಇವುಗಳ ಬಗ್ಗೆ ಡಾ. ಪ್ರಶಾಂತ್ ಹೀಗೆ ವಿವರಿಸುತ್ತಾರೆ:

* ಟಿಬಿ ಜೀವಮಾನದಲ್ಲೊಮ್ಮೆ ಮಾತ್ರವೇ ಬರುತ್ತದೆ

* ಟಿಬಿ ಯನ್ನು ಗುಣಪಡಿಸಲು ಸಾಧ್ಯವಿಲ್ಲ

* ಟಿಬಿ ಇರುವ ವ್ಯಕ್ತಿಯನ್ನು ಕನಿಷ್ಠ ಆರು ತಿಂಗಳವರೆಗಾದರೂ ಇತರರಿಂದ ಬೇರ್ಪಡಿಸಬೇಕು.

ತಜ್ಞರ ಪ್ರಕಾರ ಟಿಬಿ ಇರುವ ವ್ಯಕ್ತಿ ಪ್ರಾರಂಭಿಕ ಹಂತದಲ್ಲಿ ತನ್ನಿಂದ ಇತರರಿಗೆ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ ಚಿಕಿತ್ಸೆ ಪ್ರಾರಂಭವಾದ ಬಳಿಕ ಇವರಿಂದ ಇತರರಿಗೆ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ. ಆದರೂ ರೋಗ ಪೂರ್ಣವಾಗಿ ಗುಣವಾಗುವವರೆಗೂ ಇವರು ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲೇಬೇಕಾಗುತ್ತದೆ.

English summary

is-it-possible-get-tb-through-sexual-contact

TB or tuberculosis is an infectious disease. Though it takes time to catch the disease (as germs grow slowly), this contagious disease can spread through air, especially Pulmonary Tuberculosis or lung TB . As its germs don’t thrive on surfaces, you are not likely to get the disease by merely shaking hands, sharing utensils or food. But can it spread through kissing or sexual contact? hava a look
X
Desktop Bottom Promotion