ದಿನಾ ಬೆಳಗ್ಗೆ ಉಗುರುಬೆಚ್ಚನೆಯ ನೀರಿಗೆ, ಲಿಂಬೆ-ಜೇನು ಬೆರೆಸಿ ಕುಡಿಯಿರಿ

Posted By: Deepu
Subscribe to Boldsky

ನೈಸರ್ಗಿಕವಾಗಿ ದೊರೆಯುವ ತರಕಾರಿ ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ ಅಂಶಗಳಿಂದ ಸಮ್ಮಿಳಿತವಾಗಿದೆ. ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ. ಹುಳಿ, ಒಗರು, ಕಹಿ ಇರುವ ತರಕಾರಿ ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಇಂತಹ ತರಕಾರಿ ಹಣ್ಣುಗಳ ದಿನನಿತ್ಯದ ಸೇವನೆಯಿಂದ ನಮಗೆ ಲಾಭವೇ ಹೆಚ್ಚು ಹೊರತು ನಷ್ಟವಲ್ಲ. ಇಂದು ನಾವು ಹೇಳಹೊರಟಿರುವ ಅಂತಹ ತರಕಾರಿ ಹಣ್ಣು ಲಿಂಬೆ ಹಣ್ಣಾಗಿದೆ. ಇದು ಸಿಹಿ ಅಂಶದಿಂದ ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ ಆರೋಗ್ಯ ಸುಧಾರಕ ಅಂಶಗಳಿಂದ ಶ್ರೀಮಂತವಾಗಿದೆ. ಅದರಲ್ಲೂ ಬೆಳಿಗೆದ್ದ ಕೂಡಲೇ ಒಂದು ಲೋಟ ಬೆಚ್ಚನಿಯ ನೀರಿನಲ್ಲಿ ಲಿಂಬೆ ಮತ್ತು ಜೇನುತುಪ್ಪ ಕದಡಿ ಕುಡಿದರೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು 

ತಯಾರಿಸುವ ವಿಧಾನ

* ಸುಮಾರು ಮೂರು ದೊಡ್ಡಚಮಚ ಲಿಂಬೆರಸ ಮತ್ತು ಒಂದು ದೊಡ್ಡಚಮಚ ಜೇನನ್ನು ಒಂದು ಬೋಗುಣಿಯಲ್ಲಿ ಸಂಗ್ರಹಿಸಿ

* ಇದಕ್ಕೆ ಒಂದು ದೊಡ್ಡ ಲೋಟ ಉಗುರುಬೆಚ್ಚನೆಯ ನೀರನ್ನು ಸೇರಿಸಿ ಕಲಕಿ.

* ಈ ಪೇಯವನ್ನು ಪ್ರತಿದಿನ ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ 

ಮಲಬದ್ಧತೆಯಿಂದ ಮುಕ್ತಿ ದೊರಕುತ್ತದೆ

ಮಲಬದ್ಧತೆಯಿಂದ ಮುಕ್ತಿ ದೊರಕುತ್ತದೆ

ಸಾಧಾರಣವಾಗಿ ನಾರು ಇಲ್ಲದ ಆಹಾರವನ್ನು ಸೇವಿಸುವ ಮೂಲಕ ಮಲಬದ್ಧತೆ ಉಂಟಾಗುತ್ತದೆ. ಮೈದಾ ಮೂಲದ ಆಹಾರ ಇದಕ್ಕೆ ಪ್ರಮುಖ ಕಾರಣ. ನಾರು ಇಲ್ಲದಿರುವ ಕಾರಣ ತ್ಯಾಜ್ಯದ ನೀರನ್ನು ದೊಡ್ಡಕರುಳು ಸಂಪೂರ್ಣವಾಗಿ ಹೀರಿ ಗಟ್ಟಿಯಾಗಿಸುತ್ತದೆ. ಈಗ ವಿಸರ್ಜನೆಗೆ ಹೆಚ್ಚಿನ ಬಲಪ್ರಯೋಗದ ಅಗತ್ಯವಿದೆ. ಈ ಬಲದ ಕಾರಣ ದೊಡ್ಡಕರುಳಿನ ಒಳಗೋಡೆಗಳನ್ನು ಉಜ್ಜಿದಂತಾಗಿ ಕರುಳಿನ ಒಳಭಾಗದ ವಿಲ್ಲೈ ಎಂಬ ಸೂಕ್ಷ್ಮ ಅಂಗಗಳು ಘಾಸಿಗೊಳ್ಳುತ್ತವೆ. ಬೆಳಿಗ್ಗೆದ್ದ ಕೂಡಲೇ ಲಿಂಬೆ ಮತ್ತು ಜೇನಿನ ಪೇಯವನ್ನು ಕುಡಿಯುವುದರಿಂದ ಕರುಳಿನ ಒಳಭಾಗಗಳಿಗೆ ಪ್ರಚೋದನೆ ದೊರೆತು ಶೀಘ್ರ ವಿಸರ್ಜನೆಗೆ ನೆರವಾಗುತ್ತದೆ. ಕರುಳಿನಲ್ಲಿರುವ ತ್ಯಾಜ್ಯಕ್ಕೆ ಕೊಂಚ ತೈಲದ ಲೇಪನ ದೊರೆತಂತಾಗಿ ಒಳಗೋಡೆಗಳಿಗೆ ಉಜ್ಜುವ ಭರ ಕಡಿಮೆಯಾಗುತ್ತದೆ ಹಾಗೂ ವಿಸರ್ಜನಾ ಕಾರ್ಯ ಸುಲಭವಾಗುತ್ತದೆ.

ಶೀಘ್ರವಾಗಿ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ನೀಡುತ್ತದೆ

ಶೀಘ್ರವಾಗಿ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ನೀಡುತ್ತದೆ

ಬೆಳಿಗ್ಗೆದ್ದ ಕೂಡಲೇ ಈ ಪೇಯ ಕುಡಿದು ದಿನದ ವ್ಯಾಯಾಮ ಹಾಗೂ ಇತರ ಚಟುವಟಿಕೆಗಳನ್ನು ನಡೆಸುವಾಗ ಮುಂಚಿನಷ್ಟು ಸುಸ್ತಾಗುವುದಿಲ್ಲ. ಏಕೆಂದರೆ ಈ ಪೇಯದಲ್ಲಿರುವ ಪೋಷಕಾಂಶಗಳು ತಕ್ಷಣವೇ ರಕ್ತಕ್ಕೆ ಪೂರೈಕೆಯಾಗಿ ಪ್ರತಿ ಜೀವಕೋಶ ಪೂರ್ಣವಾಗಿ ಕೆಲಸ ಮಾಡುವ ಸಾಮರ್ಥ್ಯ ಪಡೆಯುತ್ತದೆ. ಬೆಳಗ್ಗಿನ ಈ ಚಟುವಟಿಕೆಯ ಕಾರಣ ಮನಸ್ಸು ಇಡಿಯ ದಿನ ಪ್ರಫುಲ್ಲವಾಗಿರುತ್ತದೆ. ಇದಕ್ಕೆ ಕಾರಣ ಲಿಂಬೆಯಲ್ಲಿರುವ ಸೆಲೆನಿಯಂ ಎಂಬ ಪೋಷಕಾಂಶವಾಗಿದೆ. ಇದು ಹೊಟ್ಟೆಯಲ್ಲಿ ಉಳಿದಿರುವ ಆಹಾರದಲ್ಲಿ ಋಣಾತ್ಮಕವಾಗಿ ಕಾಂತತ್ವ ಪಡೆದ ಅಣುಗಳೊಂದಿಗೆ ಸಂಯೋಜನೆಗೊಂಡು ತಟಸ್ಥವಾಗಿ ಯಾವುದೇ ಅಪಾಯವಿಲ್ಲದೇ ಕರುಳುಗಳಿಗೆ ರವಾನಿಸುತ್ತದೆ. ಅದೂ ಅಲ್ಲದೇ ಲಿಂಬೆಯ ಪರಿಮಳವೂ ದಿನವಿಡೀ ಉತ್ತಮ ಮನಃಸ್ಥಿತಿಯನ್ನು ಹೊಂದಿರಲು ಸಹಕರಿಸುತ್ತದೆ.

ಮೂತ್ರದಲ್ಲಿ ದ್ರವದ ಅಂಶವನ್ನು ಹೆಚ್ಚಿಸುತ್ತದೆ

ಮೂತ್ರದಲ್ಲಿ ದ್ರವದ ಅಂಶವನ್ನು ಹೆಚ್ಚಿಸುತ್ತದೆ

ನಮ್ಮ ಮೂತ್ರಪಿಂಡಗಳು ಸತತವಾಗಿ ದೇಹದ ವಿಷಕಾರಕ ವಸ್ತುಗಳನ್ನು ಮೂತ್ರದ ರೂಪದಲ್ಲಿ ಮೂತ್ರಕೋಶದಲ್ಲಿ ಸಂಗ್ರಹಿಸುತ್ತಾ ಇರುತ್ತದೆ ಹಾಗೂ ಆಗಾಗ ಮೂತ್ರವಿಸರ್ಜನೆಯ ಮೂಲಕ ದೇಹದಿಂದ ವಿಸರ್ಜಿಸಲ್ಪಡುತ್ತವೆ. ಒಂದು ವೇಳೆ ಸೇವಿಸಿದ ನೀರಿನ ಪ್ರಮಾಣ ಕಡಿಮೆಯಾದರೆ ಮೂತ್ರಕೋಶದ ಈ ದ್ರವ ಹೆಚ್ಚು ವಿಷಕಾರಿಯಾಗಿದ್ದು ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆಗ ಮೂತ್ರದಲ್ಲಿ ಉರಿ, ಮೂತ್ರಕೋಶಗಳ ಕಾರ್ಯದಲ್ಲಿ ತೊಡಕು ಉಂಟಾಗುತ್ತದೆ. ಬೆಳಗ್ಗಿನ ಲಿಂಬೆ ಮತ್ತು ಜೇನಿನ ಪೇಯ ಜೀವಿರೋಧಿ (antibacterial agent) ಯಂತೆ ಕಾರ್ಯನಿರ್ವಹಿಸುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕಕ್ಕೆ ಪ್ರಮುಖ ಕಾರಣ ನಾವು ಅಗತ್ಯಕ್ಕಿಂತಲೂ ಹೆಚ್ಚು ಆಹಾರವನ್ನು ಸೇವಿಸುವುದು. ಆಹಾರದ ಚಿತ್ರವನ್ನು ನೋಡಿದರೇ ಬಾಯಿಯಲ್ಲಿ ನೀರೋರುವ ನಮ್ಮ ದೇಹ ನಿಜ ಆಹಾರವನ್ನು ನೋಡಿದಾಗ ಚಪ್ಪರಿಸದೆ ಬಿಟ್ಟೀತೇ? ಇದಕ್ಕೆ ಕಡಿವಾಣ ಹಾಕಲು ಪೆಕ್ಟಿನ್ (pectin) ಎಂಬ ಪೋಷಕಾಂಶದ ಅಗತ್ಯವಿದೆ. ಇದು ಆಹಾರವನ್ನು ನೋಡಿದಾಗ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣವನ್ನು ಸೇವಿಸುವುದಕ್ಕೆ ಮೆದುಳಿಗೆ ಸೂಚನೆಗಳನ್ನು ನೀಡದಿರಲು ಸಹಕರಿಸುತ್ತದೆ. ಲಿಂಬೆಯಲ್ಲಿರುವ ಈ ಪೋಷಕಾಂಶ ಹೆಚ್ಚಿನ ಪ್ರಮಾಣದ ಆಹಾರ ಸೇವನೆಗೆ ತಡೆಯೊಡ್ಡಿ ಸ್ವಾಭಾವಿಕವಾಗಿ ಹಾಗೂ ಶೀಘ್ರವಾಗಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ.

ಚರ್ಮದ ಕಾಂತಿ ಹೆಚ್ಚುತ್ತದೆ

ಚರ್ಮದ ಕಾಂತಿ ಹೆಚ್ಚುತ್ತದೆ

ಲಿಂಬೆ ಹಾಗೂ ಜೇನಿನಲ್ಲಿ ರಕ್ತಶುದ್ಧಿಗೊಳಿಸಲು ಪ್ರತ್ಯೇಕವಾಗಿ ಹಲವು ಪೋಷಕಾಂಶಗಳಿವೆ. ಇವೆರಡರ ಸಮ್ಮಿಲನದಿಂದ ರಕ್ತ ಶುದ್ದೀಕರಣ ಭರದಿಂದ ಸಾಗುತ್ತದೆ ಹಾಗೂ ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತದೆ. ಈ ಹೊಸರಕ್ತ ದೇಹದಲ್ಲಿರುವ ಸತ್ತ ಜೀವಕೋಶಗಳನ್ನು ರವಾನಿಸಿ ಹೊಸ ಜೀವಕೋಶಗಳು ಬೆಳೆಯುವಂತೆ ಮಾಡುತ್ತದೆ. ಅಂಗಾಂಶಗಳು ಪರಸ್ಪರ ಒಂದಕ್ಕೊಂದು ಅಂಟಿಕೊಂಡಿರಲು ಅಗತ್ಯವಾದ ಕೊಲಾಜೆನ್ (collagen) ಎಂಬ ವಸ್ತುವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ದೇಹದ ಪ್ರತಿ ಜೀವಕೋಶ ಹೊಸಕಳೆಯನ್ನು ಸೂಸುತ್ತದೆ. ಕಣ್ಣಿಗೆ ಕಾಣುವ ಚರ್ಮ ಹೆಚ್ಚಿನ ಕಾಂತಿಯನ್ನು ಪಡೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಕೊಲೆಸ್ಟ್ರಾಲ್ ಅನ್ನು ದೂರವಿರುಸುತ್ತದೆ

ಕೊಲೆಸ್ಟ್ರಾಲ್ ಅನ್ನು ದೂರವಿರುಸುತ್ತದೆ

ಕೊಲೆಸ್ಟ್ರಾಲ್ ಅನ್ನು ದೇಹದಿಂದ ಹೊರಹಾಕುವಲ್ಲಿ ಸಹಕಾರಿ. ದೇಹದಿಂದ ಹಾನಿಕಾರಿ ವೈರಸ್‌ಗಳನ್ನು ಹೊರದಬ್ಬಿ ರಕ್ತವನ್ನು ಕರುಳನ್ನು ಸ್ವಚ್ಛಮಾಡುವಲ್ಲಿ ಸಹಕಾರಿಯಾಗಿದೆ.

ಧೂಮಪಾನದಿಂದ ತುಟಿ ಕಪ್ಪಾಗಿದ್ದರೆ

ಧೂಮಪಾನದಿಂದ ತುಟಿ ಕಪ್ಪಾಗಿದ್ದರೆ

ತುಟಿಯ ಕಪ್ಪು ಕಲೆಯನ್ನು ಹೋಗಲಾಡಿಸುವಲ್ಲಿ ನಿಂಬೆರಸ ತುಂಬಾ ಪ್ರಯೋಜನಕಾರಿ. ನಿಂಬೆ ಹಣ್ಣನ್ನು ಕತ್ತರಿಸಿ ಅದರ ತುಂಡನ್ನು ತುಟಿಗೆ 3-4 ನಿಮಿಷ ಉಜ್ಜಬೇಕು. ನಂತರ ತಣ್ಣೀರಿನಿಂದ ತುಟಿಯನ್ನು ತೊಳೆದು ಲಿಪ್ ಬಾಮ್ ಹಚ್ಚ ಬೇಕು.

ಬೆಳಗಿನ ಅಸ್ವಸ್ಥತೆಯನ್ನು ಉಪಚರಿಸುತ್ತದೆ

ಬೆಳಗಿನ ಅಸ್ವಸ್ಥತೆಯನ್ನು ಉಪಚರಿಸುತ್ತದೆ

ಗರ್ಭಿಣಿ ಸ್ತ್ರೀಯರು ಬೆಳ್ಳಂಬೆಳಗ್ಗೆ ಲಿಂಬೆ ನೀರನ್ನು ಸೇವಿಸುವುದು ವಾಕರಿಕೆ ಮತ್ತು ಬೆಳಗಿನ ಅಸ್ವಸ್ಥತೆಯನ್ನು ನಿವಾರಿಸುತ್ತದೆ.

ಜಠರವು ಸ್ವಚ್ಛವಾಗುತ್ತವೆ ಮತ್ತು ಕರುಳುಗಳ ಕೆಲಸವೂ ಸುಗಮವಾಗುತ್ತದೆ

ಜಠರವು ಸ್ವಚ್ಛವಾಗುತ್ತವೆ ಮತ್ತು ಕರುಳುಗಳ ಕೆಲಸವೂ ಸುಗಮವಾಗುತ್ತದೆ

ಆಯುರ್ವೇದದಲ್ಲಿ ಈ ಪದಾರ್ಥಕ್ಕೆ 'ಆಮ' ಎಂದು ಕರೆಯಲಾಗುತ್ತದೆ. ಒಂದು ವೇಳೆ ಈ ದ್ರವ ಹಾಗೇ ಉಳಿದರೆ ಹಲವು ತೊಂದರೆಗಳು ಎದುರಾಗುತ್ತವೆ. ಜೇನು ಮತ್ತು ಲಿಂಬೆಯ ರಸದ ಪೇಯ ಕುಡಿಯುವುದರಿಂದ ಈ ಆಮ ಕರಗಿ ಕರುಳುಗಳಿಗೆ ರವಾನೆಯಾಗುತ್ತದೆ. ಇದೇ ದ್ರವ ಮುಂದೆ ಕರುಳುಗಳ ಮೂಲಕ ಸಾಗಿದಾಗ, ಅಲ್ಲೂ ಉಳಿದಿರಬಹುದಾಗ ಉಳಿದ ಕಲ್ಮಶಗಳು ದೊಡ್ಡಕರುಳಿಗೆ ರವಾನೆಯಾಗಿ ದೇಹದಿಂದ ವಿಸರ್ಜಿಸಲ್ಪಡುತ್ತದೆ.

English summary

Health Benefits of Drinking Lemon Water And Honey in the Morning

We all have heard that drinking a glass of warm water with honey and lemon early in the morning is good for health. If you are one of those people who are skeptical of most things, here are reasons why drinking warm water with lemon and honey is great for your health.