For Quick Alerts
ALLOW NOTIFICATIONS  
For Daily Alerts

ಕೇರಳದಲ್ಲಿ ಕಾಣಿಸಿಕೊಂಡ ಭಯಾನಕ ನಿಪಾ ವೈರಸ್ – ಗುಣಲಕ್ಷಣಗಳು, ತಡೆಗಟ್ಟುವಿಕೆ, ಚಿಕಿತ್ಸೆ

By Sushma Charhra
|

ನೀವು ಪ್ರತಿನಿತ್ಯ ಸುದ್ದಿಗಳನ್ನು ಓದುವವರಾಗಿದ್ದರೆ ಕಳೆದ ಕೆಲವು ದಿನಗಳಿಂದ ನಿಪಾ ವೈರಸ್ ಕೇರಳದಲ್ಲಿ ದಾಳಿ ಮಾಡಿರುವ ವಿಚಾರವನ್ನೇ ಕೇಳಿರುತ್ತೀರಿ. ನಿಜವಲ್ಲವೇ?

ಹಾಗಾದ್ರೆ ಯಾರು ಅದರ ಬಗ್ಗೆ ಇನ್ನೂ ತಿಳಿದಿಲ್ಲವೋ ಅಂತವರಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಕೇರಳ ಸರ್ಕಾರವು ಹೈ ಅಲರ್ಟ್ ಘೋಷಿಸಿದ್ದು, ಕಳೆದ ಕೆಲವೇ ದಿನಗಳಲ್ಲಿ ನಿಪಾ ವೈರಸ್ ದಾಳಿಯಿಂದಾಗಿ ಸುಮಾರು 5 ಮಂದಿ ಸಾವಿಗೀಡಾಗಿದ್ದಾರೆ.

ಕೇರಳ ಸರ್ಕಾರವು ಈ ಭಯಾನಕ ಕಾಯಿಲೆಯನ್ನು ಕಂಡುಹಿಡಿದಿದ್ದು, ಅತ್ಯಂತ ವೇಗವಾಗಿ ಹರಡುವ ಮತ್ತು ಸಾವಿನ ಸಂಖ್ಯೆ ಅತಿಯಾಗಿರುವ ಕಾಯಿಲೆಯಾಗಿದೆ. ಹಾಗಾಗಿ ತುರ್ತು ಪರಿಸ್ಥಿತಿಯಲ್ಲಿ ಕೆಲಸ ಮಾಡುವ ತಂಡವಾಗಿರುವ NCDC( NATIONAL CENTRE FOR DISEASE CONTROL ) ಯನ್ನು ಕರೆತರಲಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.

ನಮಗೆ ಈಗಾಗಲೇ ತಿಳಿದಿರುವ ಕೆಲವು ವೈರಲ್ ಕಾಯಿಲೆಗಳಾಗಿರುವ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ,ಹೆಚ್ 1 ಎನ್ 1 ವೈರಸ್ ಇತ್ಯಾದಿಗಳು ಕೀಟಗಳ ಕಚ್ಚುವಿಕೆ,ಆಹಾರ, ಗಾಳಿ, ಮತ್ತು ನೀರಿನ ಮುಖಾಂತರ ಒಬ್ಬರಿಂದ ಒಬ್ಬರಿಗೆ ಹರಡುತ್ತೆ.

ಯಾವಾಗ ಈ ವೈರಸ್ ಗಳು ದೇಹದೊಳಗೆ ಸೇರುತ್ತೋ ಆಗ ದೇಹದಲ್ಲಿ ಇವುಗಳ ಸಂಖ್ಯೆ ಹೆಚ್ಚಿಸಿಕೊಂಡು ಭಯಾನಕ ಕಾಯಿಲೆಗಳಿಗೆ ಕಾರಣವಾಗುತ್ತೆ ಮತ್ತು ಸಾವಿಗೂ ಕಾರಣವಾಗಬಹುದು.

ನಿಪಾ ವೈರಸ್ ಹೊಸದಾಗಿ ಕಾಣಿಸಿಕೊಂಡಿರುವ ವೈರಸ್ ಭಾರತದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಹಲವರನ್ನು ಬಲಿಪಡೆದುಕೊಂಡಿದೆ. ಹಾಗಾಗಿ ಈ ಭಯಾನಕ ವೈರಸ್ ಬಗ್ಗೆ ಕೆಲವು ಸಂಗತಿಗಳ ವಿವರ ಇಲ್ಲಿದೆ ನೋಡಿ..

ಸಂಗತಿ 1..

ಸಂಗತಿ 1..

"Zoonosis" ಕೆಟಗರಿಗೆ ಸೇರಿರುವ ವೈರಸ್ ಇದಾಗಿದ್ದು, ವೈರಲ್ ಇನ್ಫೆಕ್ಷನ್ ಹರಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. Zoonosis ಎಂದರೆ ಇದು ಕೇವಲ ಮನುಷ್ಯರಿಗೆ ಮಾತ್ರ ಸಮಸ್ಯೆ ತಂದೊಡ್ಡುವುದಿಲ್ಲ ಬದಲಾಗಿ ಇತರೆ ಪ್ರಾಣಿಗಳಿಗೂ ಕೂಡ ಕಾಯಿಲೆ ತರಿಸುವ ಭಯಾನಕ ವೈರಸ್ ಆಗಿದೆ. ಈ ನಿಪಾ ವೈರಸ್ , ಪ್ರಾಣಿಗಳ ಮುಖಾಂತರ ಮನುಷ್ಯರಿಗೆ ತಲುಪಬಹುದು. ಅಂದರೆ ನಿಪಾ ವೈರಸ್ ನ ದಾಳಿ ತುತ್ತಾಗಿರುವ ಪ್ರಾಣಿಯು ಮನುಷ್ಯನಿಗೆ ಈ ವೈರಸನ್ನು ಹಸ್ತಾಂತರಿಸಬಹುದು. ನಂತರ ಒಬ್ಬ ಮನುಷ್ಯನಿಂದ ಮತ್ತೊಬ್ಬ ಮನುಷ್ಯನಿಗೂ ಕೂಡಲೇ ಅಂಟುವ ಸಾಧ್ಯತೆ ಇದೆ. ಅಂದರೆ ನಿಪಾ ವೈರಸ್ ನಿಂದ ಬರುವ ಕಾಯಿಲೆಯು ಅಂಟುರೋಗವಾಗಿದೆ.

ಸಂಗತಿ 2.

ಸಂಗತಿ 2.

ಪ್ರತಿ ವೈರಸ್ ಕೂಡ ಯಾವುದಾದರೂ ವಸ್ತು ಇಲ್ಲವೇ ಜೀವಿಗಳಿಂದ ಹರಡುತ್ತೆ. ಉದಾಹರಣೆಗೆ ಮಲೇರಿಯಾವು ಸೊಳ್ಳೆಯಿಂದ ಹರಡುತ್ತೆ. ಹಾಗೆಯೇ ಈ ನಿಪಾ ವೈರಸ್ ಹರಡುವುದು ಬಾವಲಿಗಳಿಂದ. Pteropodidae family ಗೆ ಸೇರಿದ ಜೀವಿಗಳಿಂದ ಈ ರೋಗವು ಹರಡುತ್ತಿದೆ ಎಂಬ ಸಂಗತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಪಡಿಸಿದೆ.

ಸಂಗತಿ 3.

ಸಂಗತಿ 3.

ಮುಖ್ಯವಾಗಿ ಯಾರು ಬಾವಲಿಗಳ ಜೊತೆ ನೇರ ಸಂಪರ್ಕದಲ್ಲಿರುತ್ತಾರೋ ಅಥವಾ ಬಾವಲಿಗಳಿಂದ ಸೋಂಕಿಗೆ ಒಳಗಾಗಿರುವ ಹಂದಿಗಳನ್ನು ಬಳಸುವುದರಿಂದ ಅಥವಾ ಪ್ರಾಣಿ ಸಂಗ್ರಹಾಲಯಗಳು ಬೇಗನೆ ನಿಪಾ ವೈರಸ್ ಗಳಿಗೆ ತುತ್ತಾಗುವ ಸಾಧ್ಯತೆಗಳಿರುತ್ತೆ. ನಿಪಾ ವೈರಸ್ ಗೆ ತುತ್ತಾಗಿರುವ ವ್ಯಕ್ತಿಯ ಜೊತೆ ನೇರ ಸಂಪರ್ಕದಲ್ಲಿದ್ದರೂ ಕೂಡ ನಿಮಗೆ ಆ ರೋಗ ತಟ್ಟಬಹುದು. ಅಪ್ಪಿಕೊಳ್ಳುವುದು, ಕೈ ಕುಲುಕುವುದು, ಆಹಾರವನ್ನು ಹಂಚಿಕೊಳ್ಳುವುದು ಇತ್ಯಾದಿಗಳೇ ಸಾಕಾಗುತ್ತೇ ರೋಗವು ನಿಮ್ಮನ್ನ ತಲುಪಲು ಎಂಬುದು ನೆನಪಿರಲಿ,

ಸಂಗತಿ 4.

ಸಂಗತಿ 4.

ನಿಪಾ ವೈರಸ್ ಕಾಣಿಸಿಕೊಂಡಿರುವುದನ್ನು ಪತ್ತೆ ಹಚ್ಚುವುದು ಹೇಗೆ ಎಂಬ ಬಗ್ಗೆ ಕೆಲವು ಸೂಚನೆಗಳನ್ನು The Centre For Disease Control And Prevention ಸಂಸ್ಥೆಯು ನೀಡಿದೆ. ತೀವ್ರ ಜ್ವರ ಮತ್ತು ತಲೆನೋವು, ನಿಮಗೆ ವೈರಸ್ ತಗುಲಿದ ಮೂರು ಅಥವಾ 14 ದಿನಗಳ ಒಳಗೆ ಸಿಂಪ್ಟಮ್ ಗಳು ಕಾಣಿಸಲು ಆರಂಭವಾಗುತ್ತೆ.ಮೆದುಳಿನಲ್ಲಿ ಉರಿದಂತ ಅನುಭವವಾಗುವುದು ಮತ್ತು ಮೆದುಳಿನಲ್ಲಿ ಇತರೆ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಳ್ಳುವುದು, ವಾಂತಿ ಬರುವುದು, ಪ್ರಜ್ಞೆ ಕಳೆದುಕೊಳ್ಳುವುದು, ತಲೆ ಸುತ್ತುವುದು,ಕಕ್ಕಾಬಿಕ್ಕಿಯಾಗುವುದು, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವುದು ಇತ್ಯಾದಿ ಸೂಚನೆಗಳು ಕಾಣಿಸಿಕೊಳ್ಳಬಹುದು. ಇವೆಲ್ಲವೂ ಕೂಡ ಭಯಾನಕ ಸಮಸ್ಯೆಯ ಸೂಚನೆಯಾಗಿರಬಹುದು ಎಂಬುದು ನೆನಪಿರಲಿ.

ಸಂಗತಿ 5.

ಸಂಗತಿ 5.

ನಿಪಾ ವೈರಸ್ ಮೊದಲು ಮಲೇಷಿಯಾದಲ್ಲಿ 1998 ರಲ್ಲಿ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಹಂದಿಗಳೇ ಈ ಕಾಯಿಲೆಯನ್ನು ಪ್ರಮುಖವಾಗಿ ಹರಡುತ್ತಿದ್ದವು. ಹಾಗಾಗಿ ಸುಮಾರು 1.1 ಮಿಲಿಯನ್ ನಷ್ಟು ಹಂದಿಗಳನ್ನು ಸಾಯಿಸಿ ಈ ಕಾಯಿಲೆ ಹರಡುವುದನ್ನು ನಿಯಂತ್ರಣಕ್ಕೆ ತರಲಾಗಿತ್ತು. 2001 ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಿಪಾ ವೈರಸ್ ಮೊದಲ ಬಾರಿಗೆ ಭಾರತದಲ್ಲಿ ಕಾಣಿಸಿಕೊಂಡಿತ್ತು. ಮಲೇಷಿಯಾ, ಭಾರತ,ಸಿಂಗಾಪುರ,ಮತ್ತು ಬಾಂಗ್ಲಾದೇಶದಲ್ಲಿ ಸುಮಾರು 300 ಜನರನ್ನು 1998 ರಿಂದ 2008 ರ ವರೆಗೆ ಈ ಭಯಾನಕ ವೈರಸ್ ಬಲಿಪಡೆದಿದೆ ಎಂಬ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ

ಸಂಗತಿ 6.

ಸಂಗತಿ 6.

ವೈದ್ಯರು ಮತ್ತು ಆರೋಗ್ಯ ಅಧಿಕಾರಿಗಳು ವಿಶ್ವದಾದ್ಯಂತ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದು, ಸ್ವಚ್ವವಿಲ್ಲದ ಪ್ರದೇಶದಲ್ಲಿ ಆಹಾರ ಸೇವಿಸುವುದು ಮತ್ತು ಹಣ್ಣು ತರಕಾರಿಗಳನ್ನು ಖರೀದಿಸಬೇಡಿ ಎಂಬುದಾಗಿ ತಿಳಿಸಿದ್ದಾರೆ. ಯಾಕೆಂದರೆ ಇವುಗಳು ಬಾವಲಿಗಳಿಂದ ಸೋಂಕಿಗೆ ಒಳಗಾದ ಪ್ರಾಣಿಗಳಿಂದ ಅಥವಾ ಕೀಟಗಳಿಂದ ನಿಮಗೆ ನಿಪಾ ವೈರಸ್ ಹರಡುವ ಸಾಧ್ಯತೆಗಳಿರುತ್ತೆ. ಹಂದಿಗಳ ಜೊತೆಗಿನ ನೇರ ಸಂಪರ್ಕ, ಹಂದಿ ಸಾಕಾಣಿಕಾ ಕೇಂದ್ರದ ಬಗ್ಗೆ ಎಚ್ಚರಿಕೆಯಿಂದಿರಿ., ಯಾರಿಗೆ ಸೋಂಕು ತಗುಲಿದ್ಯೋ ಅವರಿಂದ ದೂರವಿರಿ.ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಿಂದ ಕೂಡ ಈ ಕಾಯಿಲೆಯಿಂದ ದೂರವಿರಬಹುದು.

ಸಂಗತಿ 7.

ಸಂಗತಿ 7.

ಸದ್ಯಕ್ಕೆ ಯಾವುದೇ ನಿರ್ಧಿಷ್ಟ ಔಷಧವಾಗಲೀ ಅಥವಾ ಲಸಿಕೆಯಾಗಲಿ ಈ ನಿಪಾ ವೈರಸ್ ತಡೆಯಲು ಇಲ್ಲ. ಆದರೆ ಕಾಯಿಲೆಯ ಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗುತ್ತೆ. ಜ್ವರ, ತಲೆನೋವು, ವಾಂತಿ ಬರುವಿಕೆ, ತಲೆ ಸುತ್ತುವಿಕೆ, ಮೆದುಳಿನ ಸಮಸ್ಯೆ ಇತ್ಯಾದಿಗಳಿಗೆ ಚಿಕಿತ್ಸೆ ನೀಡಲಾಗುತ್ತೆ. ಸಾಕಷ್ಟು ನೀರು ಸೇವನೆ ಮತ್ತು ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು. ತಜ್ಞರು ಈ ನಿಪಾ ವೈರಸ್ ನಿಂದ ಬರುವ ಕಾಯಿಲೆಗೆ ನಿರ್ಧಿಷ್ಟ ಔಷಧವನ್ನು ತಯಾರಿಸುವಲ್ಲಿ ---ನಿರತರಾಗಿದ್ದಾರೆ.

Read more about: ವೈರಸ್
English summary

facts-on-nipah-virus-outbreak

facts-on-nipah-virus-outbreak
X
Desktop Bottom Promotion