For Quick Alerts
ALLOW NOTIFICATIONS  
For Daily Alerts

ಇವೆಲ್ಲಾ ಆರೋಗ್ಯಕ್ಕೆ ಒಳ್ಳೆಯದು ಅಂತಾರೆ... ಆದ್ರೆ ಇವುಗಳ ಸೈಡ್ ಎಫೆಕ್ಟ್ ಕೇಳಿದ್ರೆ ಶಾಕ್ ಆಗ್ತೀರಾ !

ಪ್ರತಿನಿತ್ಯ ನಾವು ಅನುಸರಿಸುವ ಕೆಲ ಸ್ವಚ್ಛತೆಯ ವಿಧಾನಗಳು ನಿಜವಾಗಿಯೂ ಆರೋಗ್ಯಕ್ಕೆ ಹಾನಿಕರ ಎಂಬುದನ್ನು ತಿಳಿದರೆ ಬೆಚ್ಚಿ ಬೀಳುತ್ತೀರಿ. ನಾವಂದುಕೊಂಡಂತೆ ನಿತ್ಯ ಅನುಸರಿಸುವ ಸ್ವಚ್ಛತೆಯ ಎಲ್ಲ ವಿಧಾನಗಳು ಆರೋಗ್ಯಕರವಲ್ಲ. ನಿಜ ಹೇಳಬೇಕೆಂದರೆ ಅವ

|

ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಜೀವನ ಶೈಲಿಗೆ ಎಲ್ಲರೂ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಆರೋಗ್ಯ ಭಾಗ್ಯಕ್ಕಿಂತ ಜೀವನದಲ್ಲಿ ಬೇರಾವ ಭಾಗ್ಯವೂ ಇಲ್ಲ. ಆರೋಗ್ಯ ಕಾಪಾಡಲು ನಾವು ಹಲವಾರು ಸ್ವಚ್ಛತೆಯ ಕ್ರಮಗಳನ್ನು ದಿನ ನಿತ್ಯದ ಜೀವನದಲ್ಲಿ ಅನುಸರಿಸುತ್ತೇವೆ.

'ಸ್ವಚ್ಛತೆಯೇ ದೇವರು' ಎಂಬ ಹಳೆಯ ಕಾಲದ ನಾಣ್ಣುಡಿ ನಮಗೆಲ್ಲ ಗೊತ್ತೇ ಇದೆ. ಉತ್ತಮ ಆರೋಗ್ಯಕ್ಕಾಗಿ ಸ್ವಚ್ಛತೆಯ ಪಾತ್ರ ಅತ್ಯಂತ ಪ್ರಮುಖವಾಗಿದೆ. ವೈಯಕ್ತಿಕವಾಗಿ ಸ್ವಚ್ಛವಾಗಿರುವುದು ಸೇರಿದಂತೆ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಧೂಳು ಹಾಗೂ ಕಸ ತುಂಬಿದ ವಾತಾವರಣದಲ್ಲಿ ವಾಸಿಸುವುದು, ಕೆಲಸ ಮಾಡುವುದು ಎಷ್ಟು ತ್ರಾಸದಾಯಕ ಎಂಬುದು ನಮಗೆಲ್ಲ ಗೊತ್ತೇ ಇದೆ. ನಮ್ಮ ಸುತ್ತಲಿನ ವಾತಾವರಣ ಕಲುಷಿತವಾಗಿದ್ದರೆ ಅದರಿಂದ ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮವಾಗುವುದು ಖಚಿತ.

hygiene tips

ಅದೇ ರೀತಿ ನಮ್ಮ ದೇಹದ ಸ್ವಚ್ಛತೆಗೆ ಗಮನ ನೀಡುವುದೂ ಅಗತ್ಯ. ಪ್ರತಿದಿನ ನಿಯಮಿತವಾಗಿ ಸ್ನಾನ ಮಾಡದಿರುವುದು, ಕೈ ತೊಳೆಯದಿರುವುದು ಮುಂತಾದ ಕೆಟ್ಟ ಅಭ್ಯಾಸಗಳಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು. ಚರ್ಮ ಸಂಬಂಧಿ ಕಾಯಿಲೆಗಳು, ಫಂಗಸ್ ಸೋಂಕು ಸೇರಿದಂತೆ ಇನ್ನೂ ಹಲವಾರು ರೀತಿಯ ರೋಗಗಳು ಬಾಧಿಸಬಹುದು. ಕೆಲ ಸಂದರ್ಭಗಳಲ್ಲಿ ವೈಯಕ್ತಿಕ ಸ್ವಚ್ಛತೆಯ ಕೊರತೆಯಿಂದ ಕೆಲ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಮೊದಲು ಕಾಳಜಿ ವಹಿಸುವುದು ತೀರಾ ಅಗತ್ಯ.

ಆದರೆ ಪ್ರತಿನಿತ್ಯ ನಾವು ಅನುಸರಿಸುವ ಕೆಲ ಸ್ವಚ್ಛತೆಯ ವಿಧಾನಗಳು ನಿಜವಾಗಿಯೂ ಆರೋಗ್ಯಕ್ಕೆ ಹಾನಿಕರ ಎಂಬುದನ್ನು ತಿಳಿದರೆ ಬೆಚ್ಚಿ ಬೀಳುತ್ತೀರಿ. ನಾವಂದುಕೊಂಡಂತೆ ನಿತ್ಯ ಅನುಸರಿಸುವ ಸ್ವಚ್ಛತೆಯ ಎಲ್ಲ ವಿಧಾನಗಳು ಆರೋಗ್ಯಕರವಲ್ಲ. ನಿಜ ಹೇಳಬೇಕೆಂದರೆ ಅವು ಮತ್ತಷ್ಟು ಅನಾರೋಗ್ಯಕ್ಕೆ ದಾರಿ ಮಾಡಿಕೊಡಬಲ್ಲವು!

ಬನ್ನಿ ನೋಡೋಣ ಯಾವೆಲ್ಲ ಸ್ವಚ್ಛತೆಯ ವಿಧಾನಗಳು ವಾಸ್ತವಿಕವಾಗಿ ಅನಾರೋಗ್ಯಕರ ಹಾಗೂ ಅಪಾಯಕಾರಿಯಾಗಿವೆ ಎಂಬುದನ್ನು....

೧. ಕಿವಿ ಸ್ವಚ್ಛಗೊಳಿಸಲು ಇಯರ್ ಬಡ್ ಉಪಯೋಗಿಸುವುದು

೧. ಕಿವಿ ಸ್ವಚ್ಛಗೊಳಿಸಲು ಇಯರ್ ಬಡ್ ಉಪಯೋಗಿಸುವುದು

ನಮ್ಮ ದೇಹದ ಶ್ರವಣ ಅಂಗವಾದ ಕಿವಿಯಲ್ಲಿ ನಿರಂತರವಾಗಿ ಮೇಣ ಉತ್ಪತ್ತಿಯಾಗುತ್ತಿರುತ್ತದೆ. ಹೊರಗಿನ ಧೂಳು, ಕ್ರಿಮಿ ಕೀಟಗಳು ಕಿವಿಯ ಒಳಭಾಗ ಸೇರದಂತೆ ಈ ಮೇಣ ತಡೆಗೋಡೆಯಾಗಿ ಕೆಲಸ ಮಾಡುವುದು ನಮಗೆಲ್ಲ ತಿಳಿದ ವಿಷಯ. ಈ ಮೇಣ ಹೆಚ್ಚಾದಾಗ ಸಾಮಾನ್ಯವಾಗಿ ನಾವು ಇಯರ್ ಬಡ್ ಉಪಯೋಗಿಸಿ ಮೇಣ ಹೊರ ತೆಗೆಯಲು ಪ್ರಯತ್ನಿಸುತ್ತೇವೆ.

ಆದರೆ ಇಯರ್ ಬಡ್ನಿಂದ ಕಿವಿ ಸ್ವಚ್ಛಗೊಳಿಸುವುದು ಕೆಲವೊಮ್ಮೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಇಯರ್ ಬಡ್ ಕಿವಿಯ ಒಳಭಾಗ ಅಥವಾ ತಮಟೆಗೆ ಚುಚ್ಚಿ ಗಾಯವಾಗಬಹುದು. ಇದು ಶಾಶ್ವತ ಕಿವುಡನ್ನೂ ಉಂಟು ಮಾಡಬಹುದು. ಹೀಗಾಗಿ ಸ್ವಚ್ಛ ನೀರಿನಿಂದ ಆಗಾಗ ಕಿವಿಗಳನ್ನು ತೊಳೆದುಕೊಳ್ಳುವುದರಿಂದ ಕಿವಿ ಸ್ವಚ್ಛಗೊಳಿಸಬಹುದು. ಇದು ಇಯರ್ ಬಡ್ ಉಪಯೋಗಿಸುವುದಕ್ಕಿಂತ ಸುರಕ್ಷಿತ ವಿಧಾನವಾಗಿದೆ.

೨. ನೊರೆ ಸ್ನಾನ ಅಥವಾ ಬಬಲ್ ಬಾತ್

೨. ನೊರೆ ಸ್ನಾನ ಅಥವಾ ಬಬಲ್ ಬಾತ್

ನೊರೆ ಬರಿಸುವ ದ್ರಾವಣ ಮಿಶ್ರಿತ ನೊರೆಯಾದ ನೀರಿನಿಂದ ತುಂಬಿದ ಬಾತ್ ಟಬ್ ನಲ್ಲಿ ಸ್ನಾನ ಮಾಡುವುದು ಹಿತಾನುಭವ ನೀಡುತ್ತದೆ. ಬಳಲಿದ ದೇಹಕ್ಕೆ ಇದರಿಂದ ಆರಾಮ ಎನಿಸುವುದು ಸಹಜ. ಆದರೆ ಈ ರೀತಿ ಮೇಲಿಂದ ಮೇಲೆ ಸ್ನಾನ ಮಾಡುವುದು ದೇಹದ ಚರ್ಮದ ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ. ನೊರೆ ಬರಿಸಲು ಉಪಯೋಗಿಸುವ ದ್ರಾವಣದಲ್ಲಿನ ವಿಷಕಾರಿ ರಾಸಾಯನಿಕ ಅಂಶಗಳಿಂದ ಡ್ರೈ ಸ್ಕಿನ್ ಸಮಸ್ಯೆ ಉಂಟಾಗಬಹುದು. ಅಲ್ಲದೆ ಇನ್ನೂ ಅನೇಕ ರೀತಿಯ ಚರ್ಮ ಸಂಬಂಧಿ ರೋಗಗಳು ಬರುವ ಸಾಧ್ಯತೆ ಹೆಚ್ಚು. ಇದರ ಬದಲು ಶುದ್ಧ ನೀರಿನ ಸ್ನಾನವೇ ಮೇಲು.

೩. ಸ್ಪ್ರೇ ಅಥವಾ ದ್ರಾವಣಗಳಿಂದ ಮೂತ್ರ ಜನಕಾಂಗ ಸ್ವಚ್ಛತೆ

೩. ಸ್ಪ್ರೇ ಅಥವಾ ದ್ರಾವಣಗಳಿಂದ ಮೂತ್ರ ಜನಕಾಂಗ ಸ್ವಚ್ಛತೆ

ಇಂಗ್ಲಿಷ್‌ನಲ್ಲಿ Douching ಎಂದು ಕರೆಯಲಾಗುವ ರಾಸಾಯನಿಕ ದ್ರಾವಣ ಅಥವಾ ಸ್ಪ್ರೇ ಉಪಯೋಗಿಸಿ ಮೂತ್ರಜನಕಾಂಗ ಸ್ವಚ್ಛಗೊಳಿಸುವ ವಿಧಾನ ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ. ಈ ವಿಧಾನ ಆರೋಗ್ಯಕ್ಕೆ ಅಪಾಯಕಾರಿ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಮೂತ್ರಜನಕಾಂಗದ ಚರ್ಮಕೋಶಗಳು ಅತಿ ಮೃದುವಾಗಿರುವುದರಿಂದ ರಾಸಾಯನಿಕ ದ್ರಾವಣ, ಸ್ಪ್ರೇಗಳ ಬಳಕೆಯಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಇವುಗಳ ನಿರಂತರ ಉಪಯೋಗದಿಂದ ಮೂತ್ರಜನಕಾಂಗ ಭಾಗದ ಪಿಎಚ್ ಪ್ರಮಾಣ ಕಡಿಮೆಯಾಗಿ ಉರಿತ, ನವೆ ಹಾಗೂ ಒಣಗಿದ ಚರ್ಮ ಮುಂತಾದ ಸಮಸ್ಯೆಗಳುಂಟಾಗಬಹುದೆಂದು ಪ್ರಸೂತಿ ತಜ್ಞರು ಎಚ್ಚರಿಕೆ ನೀಡುತ್ತಾರೆ. ಶುದ್ಧ ನೀರು ಬಳಸಿ ಮೂತ್ರಜನಕಾಂಗ ಸ್ವಚ್ಛಗೊಳಿಸುವುದು ಒಳ್ಳೆಯ ಕ್ರಮವಾಗಿದೆ.

೪. ಲಿಕ್ವಿಡ್ ನಿಂದ ಕೈ ತೊಳೆಯುವುದು

೪. ಲಿಕ್ವಿಡ್ ನಿಂದ ಕೈ ತೊಳೆಯುವುದು

ಇತ್ತೀಚಿನ ದಿನಗಳಲ್ಲಿ ಕೈ ತೊಳೆಯಲು ಮಾರುಕಟ್ಟೆಯಲ್ಲಿ ದೊರೆಯುವ ಲಿಕ್ವಿಡ್ ಬಳಸುವುದು ಹೆಚ್ಚಾಗಿದೆ. ಕೈಗಳಲ್ಲಿನ ಕಶ್ಮಲ ತೊಳೆದು ಸ್ವಚ್ಛಗೊಳಿಸಲು ಈ ವಿಧಾನ ಉಪಯುಕ್ತವಾಗಿದೆ. ಆದರೂ ಇದೇ ಅಭ್ಯಾಸ ಮುಂದುವರಿಸಿದ್ದೇ ಆದಲ್ಲಿ ಮುಂದೊಂದು ದಿನ ಬ್ಯಾಕ್ಟೀರಿಯಾಗಳು ಈ ಲಿಕ್ವಿಡ್ ಗಳ ವಿರುದ್ಧ ಪ್ರಬಲಗೊಂಡು ಲಿಕ್ವಿಡ್ ಯಾವುದೇ ಪರಿಣಾಮ ಬೀರಲು ವಿಫಲವಾಗುತ್ತದೆ. ಅಲ್ಲದೆ ಪದೇ ಪದೇ ಇಂಥ ಲಿಕ್ವಿಡ್ ನಿಂದ ಕೈ ತೊಳೆದಾಗ ಅದರಲ್ಲಿನ ರಾಸಾಯನಿಕ ನಮ್ಮ ಹೊಟ್ಟೆ ಸೇರುವುದರಿಂದ ದೇಹದ ಹಾರ್ಮೋನ್‌ಗಳ ಸಂತುಲನ ಏರುಪೇರಾಗುತ್ತದೆ. ಇದು ಗಂಭೀರ ಆರೋಗ್ಯ ಸಮಸ್ಯೆಯನ್ನು ಸಹ ತರಬಹುದು. ಮನೆಯಲ್ಲಿ, ಆಫೀಸಲ್ಲಿ ಮೇಲಿಂದ ಮೇಲೆ ಲಿಕ್ವಿಡ್ ನಿಂದ ಕೈ ತೊಳೆಯುವ ಮುನ್ನ ಒಮ್ಮೆ ಯೋಚಿಸಿ.

೫. ಕೈ ಒಣಗಿಸಲು ಡ್ರೈಯರ್ ಬಳಕೆ

೫. ಕೈ ಒಣಗಿಸಲು ಡ್ರೈಯರ್ ಬಳಕೆ

ಕೈ ತೊಳೆದ ನಂತರ ಟಿಶ್ಯು ಪೇಪರ ಉಳಿಸಲು ಅಥವಾ ಬೇಗ ಕೈ ಒಣಗಿಸಲು ಡ್ರೈಯರ್ ಉಪಯೋಗಿಸುವುದು ಎಲ್ಲೆಡೆ ಕಾಣುತ್ತೇವೆ. ಆಫೀಸ್‌ಗಳಲ್ಲಿ, ಹೋಟೆಲ್‌ಗಳಲ್ಲಿ ಇಂಥ ಡ್ರೈಯರ್ ಗಳ ಬಳಕೆ ಹೆಚ್ಚು. ಕೆಲ ಸಂಶೋಧನೆಗಳ ಪ್ರಕಾರ ಕೈ ಒಣಗಿಸುವ ಈ ಡ್ರೈಯರ್ ಪದ್ಧತಿ ಅವೈಜ್ಞಾನಿಕ ಎಂದು ತಿಳಿದು ಬಂದಿದೆ.

ಹ್ಯಾಂಡ್ ಡ್ರೈಯರ್ ಗಳು ನಮ್ಮ ಅಂಗೈಯಲ್ಲಿನ ಬ್ಯಾಕ್ಟೀರಿಯಾಗಳನ್ನು ಸಂಪೂರ್ಣ ತೊಡೆದು ಹಾಕಲಾರವು. ಕೈಯಲ್ಲಿನ ಬ್ಯಾಕ್ಟೀರಿಯಾಗಳು ಹಾರಿ ಗಾಳಿಯಲ್ಲಿ ಸೇರಿಕೊಂಡು ಸುತ್ತಮುತ್ತಲಿನ ವಾತಾವರಣವನ್ನೇ ಕಲುಷಿತಗೊಳಿಸುತ್ತವೆ.

೬. ಬಿಸಿ ನೀರಿನ ಶವರ್

೬. ಬಿಸಿ ನೀರಿನ ಶವರ್

ಮೇಲಿಂದ ಕಾರಂಜಿಯಂತೆ ಬೀಳುವ ಬಿಸಿ ನೀರಿನ ಶವರ್ ಸ್ನಾನ ಎಲ್ಲರಿಗೂ ಅಚ್ಚುಮೆಚ್ಚು. ದೇಹ ಹಾಗೂ ಮನಸ್ಸಿಗೆ ಆಹ್ಲಾದ ಮೂಡಿಸಿ, ದೇಹ ಸ್ವಚ್ಛಗೊಳಿಸುವ ಶವರ್ ಸ್ನಾನ ಹಿತವೆನಿಸುತ್ತದೆ. ಆದರೆ ಬಹಳ ಹೊತ್ತು ಬಿಸಿಯಾದ ಶವರ್ ತೆಗೆದುಕೊಳ್ಳುವುದು ಯಾವತ್ತೂ ಸರಿಯಲ್ಲ. ನಿರಂತರವಾಗಿ ಮೈಮೇಲೆ ಹರಿಯುವ ಬಿಸಿ ನೀರಿನಿಂದ ಚರ್ಮದ ಮೇಲಿನ ನೈಸರ್ಗಿಕ ಎಣ್ಣೆಯ ಅಂಶ ಹಾಳಾಗಿ ಹೋಗುತ್ತದೆ. ಇದರಿಂದ ಒಣಗಿದ ತ್ವಚೆ, ಗುಳ್ಳೆಗಳು, ಚರ್ಮ ಕೆಂಪಾಗುವುದು ಮುಂತಾದ ಸಮಸ್ಯೆಗಳು ತಲೆದೋರಬಹುದು. ಆದ್ದರಿಂದ ಉಗುರು ಬೆಚ್ಚನೆಯ ನೀರಿನಿಂದ ಕಡಿಮೆ ಅವಧಿಯ ಶವರ್ ತೆಗೆದುಕೊಳ್ಳುವುದು ಬೆಟರ್.

೭. ಕೈಯಲ್ಲಿ ಸೀನುವುದು

೭. ಕೈಯಲ್ಲಿ ಸೀನುವುದು

ಸಾರ್ವಜನಿಕ ಸ್ಥಳದಲ್ಲಿದ್ದಾಗ ಸೀನು ಬಂದರೆ ನಾವೆಲ್ಲ ಏನು ಮಾಡುತ್ತೇವೆ ಎಂಬುದು ಗೊತ್ತೇ ಇದೆ. ಸೀನು ಬಂದ ತಕ್ಷಣ ಎರಡೂ ಕೈಗಳಿಂದ ಬಾಯಿ, ಮೂಗು ಮುಚ್ಚಿಕೊಂಡು ಸೀನುತ್ತೇವೆ. ಆದರೆ ಈ ಪದ್ಧತಿ ಇನ್ನೊಬ್ಬರ ಅನಾರೋಗ್ಯಕ್ಕೆ ದಾರಿ ಮಾಡಿಕೊಡಬಹುದು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯ.

ಕೈ ಮುಚ್ಚಿ ಸೀನಿದಾಗ ಮೂಗು, ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳು ಕೈಗಳಲ್ಲಿ ಸೇರಿಕೊಳ್ಳುತ್ತವೆ. ಕೈ ತೊಳೆಯದೆ ತಕ್ಷಣ ನಾವು ಮುಟ್ಟುವ ಕರೆನ್ಸಿ ನೋಟುಗಳು, ಆಹಾರ ಮುಂತಾದ ಪದಾರ್ಥಗಳಲ್ಲಿ ಈ ಬ್ಯಾಕ್ಟೀರಿಯಾ ಸೇರಿಕೊಳ್ಳುತ್ತವೆ. ಈ ನೋಟು ಮುಟ್ಟಿದವರಿಗೆ, ಆಹಾರ ಸೇವಿಸಿದವರಿಗೆ ಬ್ಯಾಕ್ಟೀರಿಯಗಳು ವರ್ಗಾವಣೆಯಾಗುತ್ತವೆ.

ಅಲ್ಲದೆ ಕೈ ಮುಚ್ಚಿ ಸೀನಿದ ನಂತರ ಯಾರಿಗೋ ಹಸ್ತ ಲಾಘವ ಮಾಡಿದಾಗ ನಮ್ಮ ಬ್ಯಾಕ್ಟೀರಿಯಾಗಳನ್ನು ನಮಗೆ ಗೊತ್ತಿಲ್ಲದಂತೆಯೇ ಅವರಿಗೆ ವರ್ಗಾಯಿಸುತ್ತೇವೆ. ಇದನ್ನು ತಪ್ಪಿಸಬೇಕಾದರೆ ಸೀನುವಾಗ ಟಿಶ್ಯು ಪೇಪರ್ ಅಥವಾ ಕರ್ಚೀಫ್ ನಿಂದ ಮೂಗು, ಬಾಯಿ ಮುಚ್ಚಿಕೊಳ್ಳುವುದು ಸುರಕ್ಷಿತ ಹಾಗೂ ಆರೋಗ್ಯಕರ ವಿಧಾನವಾಗಿದೆ.

೮. ದಿನಂಪ್ರತಿ ತಲೆಸ್ನಾನ ಮಾಡುವುದು

೮. ದಿನಂಪ್ರತಿ ತಲೆಸ್ನಾನ ಮಾಡುವುದು

ಸ್ವಚ್ಛತೆಯ ದೃಷ್ಟಿಯಿಂದ ಹಾಗೂ ಕೂದಲಿನ ಆರೋಗ್ಯಕ್ಕೆ ಪ್ರತಿದಿನ ತಲೆಸ್ನಾನ ಮಾಡುವುದು ಒಳ್ಳೆಯದು ಎಂಬುದು ಬಹಳಷ್ಟು ಜನರ ನಂಬಿಕೆಯಾಗಿದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಹಾಗೂ ಜಿಮ್ ಮಾಡಿದ ನಂತರ ಬೆವರು ತೊಳೆಯಲು ತಲೆಸ್ನಾನ ಮಾಡುವುದು ರೂಢಿ. ಇದೂ ಸಹ ಒಂದು ಅನಾರೋಗ್ಯಕರ ಪದ್ಧತಿ ಎಂಬುದನ್ನು ತಿಳಿಯುವುದು ಅಗತ್ಯ.

ದಿನಾಲೂ ತಲೆಸ್ನಾನ ಮಾಡುವುದು, ಶಾಂಪೂ ಉಪಯೋಗಿಸುವುದರಿಂದ ತಲೆ ಬುರುಡೆಯ ಚರ್ಮದ ನೈಸರ್ಗಿಕ ಎಣ್ಣೆಯ ಅಂಶ ತೊಳೆದು ಹೋಗುತ್ತದೆ. ಹೊಳೆಯುವ ಆರೋಗ್ಯಕರ ಕೂದಲಿನ ಬದಲು, ಕೂದಲು ಒಣಗಿ ಜೀವವಿಲ್ಲದಂತಾಗುತ್ತವೆ. ಅಷ್ಟೇ ಏಕೆ ಕೂದಲುದುರುವಿಕೆ ಸಹ ಉಂಟಾಗುತ್ತದೆ. ಆದ್ದರಿಂದ ದಿನಂಪ್ರತಿ ತಲೆಸ್ನಾನದ ಬದಲು ವಾರಕ್ಕೆ ಮೂರ್‍ನಾಲ್ಕು ಬಾರಿ ಮಾಡಿದರೆ ಕ್ಷೇಮಕರ.

ಹೀಗೆ ನಾವು ಅನುಸರಿಸುವ ಎಷ್ಟೋ ಸ್ವಚ್ಛತೆಯ ಪದ್ಧತಿಗಳು ನಿಜವಾಗಿಯೂ ಆರೋಗ್ಯಕ್ಕೆ ಪೂರಕವಾಗಿರದೆ ಮಾರಕವಾಗಿರುತ್ತವೆ. ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದಾಗಲೇ ಆರೋಗ್ಯಕರ ಪದ್ಧತಿಗಳ ಬಗ್ಗೆ ಸ್ಪಷ್ಟವಾದ ಅರಿವು ಮೂಡಲು ಸಾಧ್ಯ. ಇನ್ನು ಮುಂದಾದರೂ ಕೈಗಳನ್ನು ಬಾಯಿ, ಮೂಗಿಗೆ ಅಡ್ಡ ಹಿಡಿದು ಸೀನುವುದು, ಪದೇ ಪದೇ ತಲೆಸ್ನಾನ ಮಾಡುವುದು, ಕೈ ತೊಳೆಯಲು ರಾಸಾಯನಿಕ ಲಿಕ್ವಿಡ್ ಬಳಸುವುದು ಮುಂತಾದುವುಗಳಿಂದ ದೂರವಿದ್ದು ನೀವು ಆರೋಗ್ಯವಂತರಾಗಿ, ಬೇರೆಯವರ ಆರೋಗ್ಯವನ್ನೂ ಕಾಪಾಡಿ.

Read more about: habits
English summary

Common Hygiene Habits Which Can Be Dangerous To Your Health

"Cleanliness is next to Godliness" and this age-old quote makes a lot of sense, as good hygiene is extremely important if a person wants to maintain good health!If you do not take a bath and wash your body on a regular basis, it could lead to a number of infections, skin problems and fungal growth on the skin. Not maintaining personal hygiene can also lead to major health issues in some instances!
X
Desktop Bottom Promotion