For Quick Alerts
ALLOW NOTIFICATIONS  
For Daily Alerts

  ಮುಜುಗರಕ್ಕೆ ಒಳಗಾಗುವಂತೆ ಮಾಡುವ 5 ಆರೋಗ್ಯ ಸಮಸ್ಯೆಗಳು

  By Divya Pandit
  |

  ಸಾಮಾಜಿಕ ಕ್ಷೇತ್ರದಲ್ಲಿ ನಮ್ಮನ್ನು ನಾವು ವ್ಯಕ್ತ ಪಡಿಸುವಾಗ ಹೆಚ್ಚು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಹಾಗೊಮ್ಮೆ ನಾವು ನಮ್ಮ ವರ್ತನೆಯ ಮೇಲೆ ಹತೋಟಿಯನ್ನು ಹೊಂದಿಲ್ಲ ಎಂದಾದರೆ ಆಗ ಸಮಾಜದ ದೃಷ್ಟಿಯಲ್ಲಿ ಅವರದ್ದೇ ಆದ ಅಭಿಪ್ರಾಯಗಳಿಗೆ ಒಳಗಾಗಬೇಕಾಗುವುದು. ಕೆಲವು ಬಾರಿ ನಾವು ಅದೆಷ್ಟೇ ಎಚ್ಚರಿಕೆಯನ್ನು ವಹಿಸಿದರೂ ಸಹ ಸಾಮಾಜಿಕ ಕ್ಷೇತ್ರದಲ್ಲಿ ನಗೆಪಾಟಕ್ಕೆ ಒಳಗಾಗುತ್ತೇವೆ ಅಥವಾ ಕೆಲವು ಬಗೆಯ ಮುಜುಗರಕ್ಕೆ ಒಳಗಾಗಿಬಿಡುತ್ತೇವೆ ಎನ್ನಬಹುದು. ಏಕೆಂದರೆ ನಾವು ಸರಿಯಾಗಿದ್ದೇವೆ ಎಂದರೂ ನಮ್ಮ ಆರೋಗ್ಯವು ಕೆಲವು ಸಮಸ್ಯೆಗಳನ್ನು ಸೃಷ್ಟಿಸಿ ಬಿಡುತ್ತದೆ.

  ಹೌದು, ನಾವು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡಾಗ, ಕುಟುಂಬದ ಕೆಲವು ಕಾರ್ಯಕ್ರಮಗಳಲ್ಲಿ ಇರುವಾಗ, ಕೆಲಸ ಮಾಡುವ ಸ್ಥಳಗಳಲ್ಲಿ ಸೇರಿದಂತೆ ಇನ್ನಿತರ ಸಾಮಾಜಿಕ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು ಸಹಜ. ಅಂತಹ ಸಂದರ್ಭದಲ್ಲಿ ನಮ್ಮ ದೌರ್ಬಲ್ಯ ಅಥವಾ ಸಮಸ್ಯೆ ಎನಿಸಿಕೊಳ್ಳುವ ಕೆಲವು ಆರೋಗ್ಯ ಸಮಸ್ಯೆಯು ಕಿರಿಕಿರಿಯನ್ನು ಉಂಟುಮಾಡುತ್ತವೆ. ಹಾಗಾದರೆ ಆ ಆರೋಗ್ಯ ಸಮಸ್ಯೆಗಳು ಯಾವವು? ಅವು ಹೇಗೆ ನಮ್ಮನ್ನು ಮುಜುಗರಕ್ಕೆ ಒಳಪಡಿಸುತ್ತವೆ? ಅವುಗಳಿಂದ ನಾವು ಹೇಗೆ ಹೊರಬರಬಹುದು? ಎನ್ನುವುದರ ಸಂಕ್ಷಿಪ್ತ ವಿವರಣೆಯನ್ನು ಈ ಮುಂದೆ ನೀಡಲಾಗಿದೆ.

  embarrassing symptoms not to ignore

  1. ಕೆಟ್ಟ ಉಸಿರಾಟ:

  ಹಾಲಿಟೋಸಿನ್ ಎಂದು ಕರೆಯಲ್ಪಡುವ ಕೆಟ್ಟ ಉಸಿರು ಕಿರಿಕಿರಿಯನ್ನು ಉಂಟುಮಾಡುತ್ತದೆ. ಈ ಕಾರಣದಿಂದ ಅನೇಕ ಸಂದರ್ಭದಲ್ಲಿ ಸಾಮಾಜಿಕವಾಗಿ ಮುಜುಗರಕ್ಕೆ ಒಳಗಾಗಬೇಕಾಗುವುದು. ಈ ಸಮಸ್ಯೆಯು ನಮ್ಮ ಎದುರಿಗಿರುವ ವ್ಯಕ್ತಿಗೆ ನಮ್ಮ ಬಗ್ಗೆ ಅಸಹ್ಯದ ಭಾವನೆಯನ್ನೂ ಸಹ ಮೂಡುವಂತೆ ಮಾಡಬಹುದು. ಬಾಯಿಯ ಆರೋಗ್ಯದ ಬಗ್ಗೆ ಸೂಕ್ತವಾದ ತಿಳುವಳಿಕೆ ಇಲ್ಲದಿರುವುದು ಅಥವಾ ಬಾಯಿಯ ಸ್ವಚ್ಛತೆಯ ಬಗ್ಗೆ ಇರುವ ಅಜ್ಞಾನದ ಪರಿಣಾಮವಾಗಿ ಈ ಸಮಸ್ಯೆ ತಲೆದೂರುವುದು. ಸೂಕ್ತ ರೀತಿಯಲ್ಲಿ ಹಲ್ಲುಜ್ಜದೆ ಇರುವುದು ಮತ್ತು ಆಹಾರ ಸೇವಿಸಿದ ನಂತರ ಬಾಯಿಯನ್ನು ಸ್ವಚ್ಛಗೊಳಿಸದೆ ಇರುವುದರಿಂದ ಸಮಸ್ಯೆ ಉದ್ಭವ ಆಗುವುದು. ಬಾಯಲ್ಲಿ ತಿಂದ ಆಹಾರ ಕಣಗಳು ಹಾಗೇ ಉಳಿದುಕೊಂಡಿರುತ್ತವೆ. ಆಗ ಆ ಕಣಗಳು ಬ್ಯಾಕ್ಟೀರಿಯಾಗಳಿಗೆ ಸಂಭಾವ್ಯ ಮೂಲಗಳಾಗಿ ವರ್ತಿಸುತ್ತವೆ. ಇದು ಬಾಯಿಯನ್ನು ವಾಸನೆಗೊಳಿಸುತ್ತವೆ. ಇದರಿಂದಾಗಿ ಉಸಿರು ಸಹ ದುರ್ವಾಸನೆಗೆ ಕಾರಣವಾಗುವುದು.

  ಒಳ್ಳೆಯ ಮೌಕಿಕ ನೈರ್ಮಲ್ಯ ಕಾಪಾಡಿಕೊಳ್ಳುವುದು ಮತ್ತು ನಿಯಮಿತವಾಗಿ ದಂತ ವೈದ್ಯರಲ್ಲಿ ಚಿಕಿತ್ಸೆ ಅಥವಾ ಸಲಹೆಯನ್ನು ಪಡೆದುಕೊಳ್ಳುವ ಮೂಲಕ ಕೆಟ್ಟ ಉಸಿರಾಟದ ಸಮಸ್ಯೆಯನ್ನು ನಿಯಂತ್ರಿಸಬಹುದು.

  2. ದೇಹ ವಾಸನೆ:

  ಯಾವ ವ್ಯಕ್ತಿ ತನ್ನ ದೇಹ ವಾಸನೆಯಿಂದ ಕೂಡಿದೆ ಎಂದು ತಿಳಿದಿರುತ್ತಾನೋ ಅವನು ಸಾಮಾಜಿಕ ಕ್ಷೇತ್ರದಲ್ಲಿ ತನ್ನ ದೇಹದ ವಾಸನೆಯನ್ನು ಮುಚ್ಚಿಡುವ ಅಥವಾ ತಗ್ಗಿಸುವ ಪ್ರಯತ್ನಕ್ಕೆ ಒಲವು ತೋರುತ್ತಾನೆ. ದೇಹ ವಾಸನೆಯಿಂದ ಕೂಡಿರುತ್ತದೆ ಎಂದರೆ ಅದಕ್ಕೆ ಸಾಮಾನ್ಯ ಕಾರಣ ಬೆವರಾಗಿರುತ್ತದೆ. ಬೆವರು ವಾಸನೆಯಿಂದ ಕೂಡಿಲ್ಲ, ಆದರೂ ದೇಹ ವಾಸನೆಯಿಂದ ಕೂಡಿರುತ್ತದೆ ಎಂದರೆ ವಾಸನೆಯನ್ನು ಬಿಡುಗಡೆಮಾಡುವ ಬ್ಯಾಕ್ಟೀರಿಯಾದ ಚಟುವಟಿಕೆ ಎಂದು ಅರಿಯಬಹುದು. ಹಾಗಾಗಿ ದೇಹದ ಕೆಲವು ಸೂಕ್ಷ್ಮ ಸ್ಥಳಗಳು ಅಥವಾ ಅತಿಯಾಗಿ ಬೆವರುವಂತಹ ಸ್ಥಳಗಳ ಬಗ್ಗೆ ಹೆಚ್ಚು ಕಾಳಜಿ ತೋರಬೇಕು. ಹೆಚ್ಚು ಬೆವರಿನಿಂದ ಕೂಡಿರುವ ಪ್ರದೇಶದಿಂದಲೂ ವಾಸನೆ ದ್ವಿಗುಣವಾಗುವುದು.

  ದೇಹದ ವಾಸನೆಯನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಪ್ರಮುಖ ಕ್ರಮಗಳೆಂದರೆ, ಉತ್ತಮ ರೀತಿಯಲ್ಲಿ ವೈಯಕ್ತಿಕ ನೈರ್ಮಲ್ಯ ಪಾಲನೆ ಮಾಡುವುದು. ನಿಯಮಿತವಾಗಿ ಸ್ನಾನ ಮಾಡುವುದು. ಚರ್ಮವನ್ನು ಸ್ವಚ್ಛವಾಗಿಟ್ಟುಕೊಂಡು ಬ್ಯಾಕ್ಟೀರಿಯಾಗಳಿಂದ ಮುಕ್ತಿ ಹೊಂದುವುದು. ಹೀಗೆ ಮಾಡುವುದರಿಂದ ದೇಹವು ವಾಸನೆಯಿಂದ ಮುಕ್ತವಾಗಿರುವುದು.

  3. ಸಂವೇದನೆಯಿಂದ ಕೂಡಿದ ಹಲ್ಲು:

  ವಿವಾಹ ಸಂದರ್ಭದಲ್ಲಿ ಕುಟುಂಬದವರೊಂದಿಗೆ ಐಸ್ ಕ್ರೀಂ ಸವಿಯುವುದು ಅಥವಾ ವಾರಾಂತ್ಯದಲ್ಲಿ ಸ್ನೇಹಿತರೊಂದಿಗೆ ಬಿಸಿ ಬಿಸಿಯಾದ ಕಾಫಿಯನ್ನು ಕುಡಿಯುವುದು ಎಂದರೆ ಬಹಳ ಸಂತೋಷವನ್ನು ನೀಡುತ್ತದೆ. ಆದರೆ ಇವುಗಳಿಂದ ಹಲ್ಲು ಹಾಳಾಗುತ್ತದೆ ಎನ್ನುವುದರ ಬಗ್ಗೆ ಚಿಂತಿಸುವುದೇ ಇಲ್ಲ. ಸೂಕ್ಷ್ಮ ಸಂವೇದನೆಯ ಹಲ್ಲನ್ನು ಹೊಂದಿರುವ ವ್ಯಕ್ತಿಗಳು ಬಿಸಿ ಮತ್ತು ತಣ್ಣಗಿನ ಆಹಾರ ಮತ್ತು ಪಾನೀಯವನ್ನು ಸೇವಿಸುವಾಗ ಬಹಳ ನೋವನ್ನು ಅನುಭವಿಸುತ್ತಾರೆ. ಇದನ್ನು ಅವರು ಮುಜುಗರದ ಸಂಗತಿ ಎಂದೂ ಸಹ ಭಾವಿಸುತ್ತಾರೆ. ಇಂತಹ ಸ್ಪಷ್ಟವಾದ ಅಸ್ವಸ್ಥತೆ ತೀವ್ರವಾಗಿ ಅವರ ವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಇದರೊಟ್ಟಿಗೆ ಸಾಮಾಜಿಕ ಸಂದರ್ಭದಲ್ಲಿ ತೊಡಗಿಕೊಳ್ಳುವುದು ಅವರಿಗೆ ಕಷ್ಟವಾಗುವುದು.

  ಸಂವೇದನೆಯಿಂದ ಕೂಡಿದ ಹಲ್ಲು ಸಾಮಾನ್ಯವಾಗಿ ದಂತ ಕವಚದ ಸಮಸ್ಯೆ ಮತ್ತು ಹಲ್ಲುಗಳ ಬೇರುಗಳಿಗೆ ತಗುಲಿದಂತಹ ಹುಳುಕಿನಿಂದ ಉಂಟಾಗುವುದು. ಇದು ಅಷ್ಟು ಸುಲಭವಾಗಿ ನಿವಾರಣೆಯಾಗುವುದಿಲ್ಲ. ಜೊತೆಗೆ ನಿಷ್ಕಾಳಜಿ ತೋರಿದಷ್ಟು ಸಮಸ್ಯೆ ಹೆಚ್ಚುತ್ತಾ ಹೋಗುವುದು. ನಮ್ಮ ಅದೃಷ್ಟಕ್ಕೆ ಹಲ್ಲಿನ ಚಿಕಿತ್ಸೆಗೆ ಅಥವಾ ಸಮಸ್ಯೆಗಳನ್ನು ನಿವಾರಿಸಲು ಅನೇಕ ಸುಲಭ ಪರಿಹಾರಗಳಿವೆ. ನೀವು ಸೂಕ್ಷ್ಮ ಸಂವೇದನೆಯನ್ನು ಹೊಂದಿರುವ ಹಲ್ಲುಗಳನ್ನು ಹೊಂದಿದ್ದರೆ ಮೊದಲು ದಂತ ವೈದ್ಯರ ಸಲಹೆ ಪಡೆಯಿರಿ. ಅವರು ನಿಮಗೆ ಸಂವೇದನೆ ಉಂಟುಮಾಡದಂತೆ ಮಾಡುವ ಟೂತ್ ಪೇಸ್ಟ್ ಬಳಸಲು ಸೂಚಿಸಬಹುದು. ಇದರಿಂದ ಸಂವೇದನೆಯನ್ನು ಉಂಟುಮಾಡುವ ಸಮಸ್ಯೆಯು ಮುಚ್ಚುವುದು.

  4. ಹಳದಿ ಹಲ್ಲು:

  ಆಕರ್ಷಣೆಯಿಂದ ಕೂಡಿರುವ ಒಂದು ಬಿಳಿ ಹಲ್ಲಿನ ನಗುವು ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುವುದು. ಅಲ್ಲದೆ ಅದು ನಿಮ್ಮನ್ನು ಇನ್ನಷ್ಟು ತಾರುಣ್ಯ ಭರಿತರನ್ನಾಗಿ ಮಾಡುವುದು. ಅದೇ ಹಳದಿ ಹಲ್ಲಿನಿಂದ ಕೂಡಿರುವ ವ್ಯಕ್ತಿಗೆ ಸಾಮಾಜಿಕ ಕ್ಷೇತ್ರದಲ್ಲಿ ತನ್ನ ಹಲ್ಲನ್ನು ತೋರಿಸಲು ಅಥವಾ ನಗುವುದರಿಂದ ಸಾಮಾಜಿಕ ಕ್ಷೇತ್ರದಲ್ಲಿ ಮುಜುಗರವನ್ನು ಅನುಭವಿಸುವರು. ತಮ್ಮ ಹಳದಿ ಬಣ್ಣದ ಹಲ್ಲಿಗೆ ಕಾರಣವೇನು ಎನ್ನುವುದನ್ನು ಅನೇಕರು ತಿಳಿದಿಲ್ಲ. ಹಳದಿ ಹಲ್ಲಿಗೆ ಕಾರಣವಾಗುವ ಪ್ರಮುಖ ಕಾರಣಗಳು ಎಂದರೆ ಚಹಾ, ಕಾಫಿ, ಕೆಲವು ಕೃತಕ ಪಾನೀಯಗಳು, ತಂಬಾಕು ಬಳಕೆ ಮತ್ತು ಕಳಪೆ ದಂತ ನೈರ್ಮಲ್ಯ ಎನ್ನಬಹುದು. ಕೆಲವು ಸರಳ ಜೀವನ ಶೈಳಿಯನ್ನು ಅನುಕರಣೆ ಮಾಡುವುದರ ಮೂಲಕ ಹಳದಿ ಹಲ್ಲಿನ ಬಣ್ಣ ಬದಲಾಯಿಸಬಹುದು. ಉದಾಹರಣೆಗೆ: ನೀವು ಚಹಾ, ಕಾಫಿ ಅಥವಾ ಇನ್ಯಾವುದೋ ಅಹಿತಕರವಾದ ಪಾನೀಯವನ್ನು ಸೇವಿಸುತ್ತಿದ್ದವರಾಗಿದ್ದರೆ ಅದನ್ನು ಮೊದಲು ನಿಮ್ಮ ಹವ್ಯಾಸದಿಂದ ದೂರವಿಡಿ. ಹಲ್ಲನ್ನು ಬಿಳಿಮಾಡುವ ಟೂತ್ ಪೇಸ್ಟ್ ಬಳಸಿ. ಆಗ ಹಲ್ಲಿನ ಮೇಲಿರುವ ಹಳದಿ ಬಣ್ಣ ನಿವಾರಣೆಯಾಗುವುದು. ನೀವು ಆತ್ಮವಿಶ್ವಾಸದಿಂದ ಕೂಡಿದ ನಗೆಯನ್ನು ಬೀರಬಹುದು.

  5. ಮೊಡವೆ:

  ಮುಖದ ಮೇಲೆ ಕಾಣಿಸಿಕೊಳ್ಳುವ ಮೊಡವೆ ಸಾಮಾನ್ಯವಾಗಿ ಸಾಮಾಜಿಕ ಕ್ಷೇತ್ರದಲ್ಲಿ ಆತಂಕ ಹಾಗೂ ಕಿರಿಕಿರಿಯ ಭಾವನೆಯನ್ನು ಸೃಷ್ಟಿಮಾಡುತ್ತದೆ. ಹಾಗಾಗಿ ಮೊಡವೆಯನ್ನು ಹೊಂದಿರುವ ವ್ಯಕ್ತಿ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳೂ ಇರುತ್ತವೆ. ಸ್ನೇಹಿತರ ಬಳಗದಿಂದ ದೂರ ಸರಿಯುವುದು ಮತ್ತು ಕಾಲೇಜಿನಲ್ಲಿ ಕಳಪೆ ಪ್ರದರ್ಶನ ನೀಡುವ ಸಾಧ್ಯತೆಗಳೂ ಇರುತ್ತವೆ. ನೀವು 16 ಅಥವಾ 65 ವರ್ಷದವರೇ ಆಗಿರಬಹುದು. ನೀವು ನಿಮ್ಮ ಸಮಸ್ಯೆಯನ್ನು ನಿಯಂತ್ರಿಸಲು ಮೊಡವೆಯನ್ನು ಕಿವುಚುವುದು ಅಥವಾ ಚಿವುಟುವುದು ಮಾಡಬಾರದು. ಮೊಡವೆ ನಿವಾರಣೆಗೆಗಾಗಿ ಮತ್ತು ಸೂಕ್ತ ಚಿಕಿತ್ಸೆಗಾಗಿ ಚರ್ಮ ವೈದ್ಯರಲ್ಲಿ ಸಲಹೆ ಅಥವಾ ಚಿಕಿತ್ಸೆಯನ್ನು ಪಡೆಯುವುದು ಸೂಕ್ತ.

  English summary

  5 Socially Embarrassing Health Issues You Should Not Ignore

  Do you find yourself avoiding close contact with the others while at social parties, workplace or family functions? Well, you’re not alone! Some health issues can get in the way of your social life and can make you feel self-conscious.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more