For Quick Alerts
ALLOW NOTIFICATIONS  
For Daily Alerts

ಕಾಮಾಸಕ್ತಿಯನ್ನು ಹೆಚ್ಚಿಸುವ ಪವರ್ ಫುಲ್ ನೈಸರ್ಗಿಕವಾಗಿ ಆಹಾರಗಳು

|

ನಮ್ಮ ದೇಹದ ಯಾವುದೇ ಚಟುವಟಿಕೆಗೆ ಅಗತ್ಯವಿರುವ ಇಂಧನ ಅಹಾರದ ಮೂಲಕ ಲಭಿಸುತ್ತದೆ. ಆಹಾರವಿಲ್ಲದೇ ಹೋದರೆ ಶರೀರ ಸೊರಗುತ್ತದೆ ಹಾಗೂ ಅನಾರೋಗ್ಯ ಎದುರಾಗುತ್ತದೆ. ಇದು ಪ್ರತಿಯೊಬ್ಬರೂ ತಿಳಿದುಕೊಂಡಿರುವ ವಿಚಾರ. ಆದರೆ ಆಹಾರವೇ ನಮ್ಮ ಕಾಮಾಸಕ್ತಿಯನ್ನೂ ಹೆಚ್ಚಿಸುವ ಅಥವಾ ಕಡಿಮೆಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಹೆಚ್ಚಿನವರು ಅರಿತಿಲ್ಲ. ಕಾಮ ಎಂದಾಕ್ಷಣ ಹೆಚ್ಚಿನವರ ಹುಬ್ಬು ಮೇಲೇರಬಹುದು, ಆದರೆ ಕಾಮವೂ ಆಹಾರದ ಹಸಿವಿನಷ್ಟೇ ಪ್ರತಿ ಜೀವಿಯ ಅಗತ್ಯವಾಗಿದ್ದು ನಿಸರ್ಗ ನಿಯಮವೂ ಆಗಿದೆ. ಕಾಮಾಸಕ್ತಿ ಹೆಚ್ಚಲು ಕೇವಲ ಆಹಾರ ಮಾತ್ರವೇ ಸಾಲದು, ಬದಲಿಗೆ, ಹೂವಿನ ಪರಿಮಳ, ಪರಿಮಳಯುಕ್ತ ಮೇಣದ ಬತ್ತಿ, ನಿಧಾನಗತಿಯ ಸಂಗೀತ ಮೊದಲಾದವೂ ನೆರವಾಗುತ್ತವೆ.

ಆದರೆ ಕಾಮಾಸಕ್ತಿಯಲ್ಲಿ ಹೆಚ್ಚು ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಆಹಾರದ ಪಾತ್ರ ಮಹತ್ತರವಾಗಿದೆ ಹಾಗೂ ಅಗತ್ಯವಿರುವ ಉದ್ರೇಕ ಪಡೆಯಲು ಕೆಲವು ಆಹಾರಗಳು ಹೆಚ್ಚು ಅಗತ್ಯವಿವೆ. ಈ ಆಹಾರಗಳು ದುಬಾರಿಯೇನೋ ಅಲ್ಲ, ಹಾಗೂ ನಮ್ಮ ನಿತ್ಯದ ಸೇವನೆಯ ಆಹಾರದಲ್ಲಿ ಇವೂ ಸೇರಿರುತ್ತವೆ. ಈ ಅಹಾರಗಳನ್ನು ಗುರುತಿಸಿ ಸಾಧ್ಯವಾದಷ್ಟೂ ನಿತ್ಯದ ಆಹಾರಗಳಲ್ಲಿ ಇವುಗಳನ್ನು ಅಳವಡಿಸಿಕೊಳ್ಳುವ ಮೂಲಕ ನೈಸರ್ಗಿಕ ಕಾಮೋತ್ತೇಜಕತೆಯನ್ನು ಪಡೆಯಬಹುದು. ಬನ್ನಿ ಈ ನಿಟ್ಟಿನಲ್ಲಿ ಪ್ರಮುಖವಾದ ಹತ್ತು ಆಹಾರಗಳು ಯಾವುವು ಎಂಬುದನ್ನು ನೋಡೋಣ...

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ದಪ್ಪನೆಯ ಎಲೆಗಳ ಪಾಲಕ್ ಸೊಪ್ಪು ಹೆಚ್ಚಿನ ನೀರು ಮತ್ತು ಕಬ್ಬಿಣದ ಅಂಶವನ್ನು ಹೊಂದಿರುತ್ತದೆ. ಈ ಸೊಪ್ಪಿನ ಸೇವನೆಯಿಂದ ಜನನಾಂಗಗಳಿಗೆ ಹೆಚ್ಚಿನ ರಕ್ತಸಂಚಾರ ಲಭಿಸಿ ಅಗತ್ಯವಿರುವ ಉದ್ರೇಕತೆ ಲಭಿಸುತ್ತದೆ. ಈ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಮೆಗ್ನೇಶಿಯಂ ಇದ್ದು ರಕ್ತನಾಳಗಳಿಗೆ ಪ್ರಚೋದನೆ ನೀಡಿ ರಕ್ತಸಂಚಾರ ಹೆಚ್ಚಲು ನೆರವಾಗುತ್ತದೆ. ಜನನಾಂಗಗಳಿಗೆ ಹೆಚ್ಚಿನ ರಕ್ತಸಂಚಾರ ದೊರಕುವ ಮೂಲಕ ಇದೊಂದು ವಯಾಗ್ರಾ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ದಂಪತಿಗಳ ನಡುವಣ ಆತ್ಮೀಯ ಘಳಿಗೆಯನ್ನು ತೇಜೋಮಯವಾಗಿಸುತ್ತದೆ. ನೈಸರ್ಗಿಕ ಉದ್ರೇಕತೆಯನ್ನು ಪೂರ್ಣವಾಗಿ ಪಡೆಯುವಲ್ಲಿ ವಿಫಲರಾಗುವ ಪುರುಷರಿಗೆ ಈ ಸೊಪ್ಪು ಅತ್ಯುತ್ತಮವಾಗಿದೆ ಹಾಗೂ ಮಹಿಳೆಯರು ಸುಲಭವಾಗಿ ಕಾಮಪರಾಕಾಷ್ಠೆಯನ್ನು ತಲುಪುತ್ತಾರೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಮಿಲನಕ್ಕೂ ಕೊಂಚ ಸಮಯದ ಮುಂಚಿನ ಕಪ್ಪು ಚಾಲಕೇಟು ಸೇವನೆ ಈ ಘಳಿಗೆಯನ್ನು ಇನ್ನಷ್ಟು ರಸಮಯವಾಗಿಸುವಲ್ಲಿ ನೆರವಾಗುತ್ತದೆ. ಸಂಶೋಧನೆಗಳಲ್ಲಿ ಕಂಡುಕೊಂಡಿರುವ ಪ್ರಕಾರ ಕಪ್ಪು ಚಾಕಲೇಟಿನ ಸೇವನೆಯ ಬಳಿಕ ಮೆದುಳಿನಲ್ಲಿ ಡೋಪಮೈನ್ ಹಾಗೂ ಸೆರೋಟೋನಿನ್ ಎಂಬ ರಸದೂತಗಳು ಹೆಚ್ಚು ಸ್ರವಿಸುತ್ತವೆ ಹಾಗೂ ಇದು ಒತ್ತಡವನ್ನು ನಿವಾರಿಸಿ ಆಹ್ಲಾದಕರ ಭಾವನೆಯನ್ನು ಹೆಚ್ಚಿಸುತ್ತದೆ. ಅಲ್ಲದೇ, ಚಾಕಲೇಟಿನಲ್ಲಿರುವ ಕೋಕೋ ರಕ್ತನಾಳಗಳನ್ನು ಸಡಿಲಿಸಿ ರಕ್ತಸಂಚಾರ ಸುಗಮಗೊಳಿಸಲು ನೆರವಾಗುತ್ತದೆ.

ದೊಣ್ಣೆ ಮೆಣಸು

ದೊಣ್ಣೆ ಮೆಣಸು

ಈ ಮೆಣಸು ಅಷ್ಟೊಂದು ಖಾರವಾಗಿಲ್ಲದಿದ್ದರೂ ರುಚಿಯನ್ನಂತೂ ಹೆಚ್ಚಿಸುತ್ತದೆ ಹಾಗೂ ಜೀವರಾಸಾಯನಿಕ ಕ್ರಿಯೆಯನ್ನೂ ಚುರುಕುಗೊಳಿಸುತ್ತದೆ. ತನ್ಮೂಲಕ ಎಂಡಾರ್ಫಿನ್ ಗಳು ಬಿಡುಗಡೆಯಾಗಲು ಪ್ರಚೋದನೆ ನೀಡುತ್ತದೆ. ಇದು ಹೃದಯ ಬಡಿತವನ್ನು ತೀವ್ರಗೊಳಿಸಿ ತುಟಿಗಳು ಹಾಗೂ ಜನನಾಂಗಗಳಿಗೆ ಹೆಚ್ಚಿನ ರಕ್ತಸಂಚಾರ ಒದಗಿಸಲು ನೆರವಾಗುವ ಮೂಲಕ ಆತ್ಮೀಯ ಘಳಿಗೆ ಇನ್ನಷ್ಟು ರಸಮಯವಾಗಲು ಸಾಧ್ಯವಾಗುತ್ತದೆ.

ಹಸಿರು ಟೀ

ಹಸಿರು ಟೀ

ಹಸಿರು ಟೀ ಸೇವನೆಯಿಂದ ತೂಕ ಇಳಿಯಲು ಮಾತ್ರವಲ್ಲ, ರಾತ್ರಿ ಮಲಗುವ ಮುನ್ನ ಸೇವಿಸುವ ಒಂದು ಲೋಟ ಹಸಿರು ಟೀ ರಾತ್ರಿಯ ಘಳಿಗೆಗಳನ್ನೂ ರೋಚಕವಾಗಿಸಬಲ್ಲುದು. ಹಸಿರು ಟೀಯಲ್ಲಿರುವ ಕ್ಯಾಟೆಚಿನ್ ಎಂಬ ಪೋಷಕಾಂಶ ಸೊಂಟದ ಕೊಬ್ಬು ಸಂಗ್ರಹವಾಗಲು ತಡೆಯೊಡ್ಡುವ ಜೊತೆಗೇ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಿ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸಲು ನೆರವಾಗುತ್ತದೆ. ಅಲ್ಲದೇ ದೇಹದ ಕೆಳಗಣ ಭಾಗಗಳಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸುವ ಮೂಲಕ ರಕ್ತನಾಳಗಳ ಒಳಗೆ ನೈಟ್ರಿಕ್ ಆಕ್ಸೈಡ್ ಅನಿಲವನ್ನು ಹೆಚ್ಚು ಬಿಡುಗಡೆಗೊಳಿಸಲುತ್ತದೆ ಹಾಗೂ ತನ್ಮೂಲಕ ರಕ್ತಪರಿಚಲನೆ ಹೆಚ್ಚು ಚುರುಕಾಗಲು ನೆರವಾಗುತ್ತದೆ.

ಸಿಂಪಿ

ಸಿಂಪಿ

ಒಂದು ವೇಳೆ ನಿಮಗೆ ಹೆಚ್ಚಿನ ಟೆಸ್ಟೋಸ್ಟೆರಾನ್ ಮಟ್ಟದ ಅವಶ್ಯಕತೆ ಇದ್ದಲ್ಲಿ ಸಿಂಪಿ (ಕಪ್ಪೆಚಿಪ್ಪು) ಉತ್ತಮ ಆಹಾರವಾಗಿದ್ದು ಇದನ್ನು ಖಂಡಿತವಾಗಿಯೂ ಸೇವಿಸಬೇಕು. ಇದರಲ್ಲಿ ಹೆಚ್ಚಿನ ಪ್ರಮಾಣದ ಸತು ಇರುತ್ತದೆ ಹಾಗೂ ಇದು ಜೀವಕೋಶಗಳ ಬೆಳವಣಿಗೆಗೆ ಅಗತ್ಯವಿರುವ ರಸದೂತಗಳ ಪ್ರಚೋದನೆಗೆ ನೆರವಾಗುತ್ತದೆ. ಪರಿಣಾಮವಾಗಿ ದೈಹಿಕ ಕ್ಷಮತೆ ಹಾಗೂ ಸ್ನಾಯುಗಳ ಬೆಳವಣಿಗೆ ಹೆಚ್ಚುತ್ತದೆ. ಸಾಮಾನ್ಯವಾಗಿ ದೇಹದಲ್ಲಿ ಸತುವಿನ ಕೊರತೆ ಟೆಸ್ಟಾಸ್ಟೆರಾನ್ ಸಹಾ ಕಡಿಮೆಯಾಗುತ್ತದೆ ಹಾಗೂ ಇದರ ಕೊರತೆ ಇದ್ದರೆ ನಪುಂಸಕತ್ವವೂ ಎದುರಾಗುತ್ತದೆ

ಪೆಸ್ಟೋ

ಪೆಸ್ಟೋ

ಇಟಲಿಯಲ್ಲಿ ಕಂಡುಬರುವ ಒಂದು ಬಗೆಯ ಎಲೆಗಳಿಂದ ತಯಾರಾದ ಈ ಖಾದ್ಯದ ಸೇವನೆಯಿಂದಲೂ ಲೈಂಗಿಕ ಶಕ್ತಿ ಹೆಚ್ಚುತ್ತದೆ. ಇದರೊಂದಿಗೆ ಕೆಲವು ದೇವದಾರು ಬೀಜಗಳು (pine nut) ಜೊತೆಗೂಡಿದರೆ ಹೆಚ್ಚಿನ ಸತು ಲಭಿಸುತ್ತದೆ ಹಾಗೂ ಇನ್ನೂ ಹೆಚ್ಚಿನ ಪ್ರಯೋಜನ ಲಭಿಸುತ್ತದೆ.

ಹಸಿಶುಂಠಿ

ಹಸಿಶುಂಠಿ

ಭಾರತದ ಪ್ರತಿ ಮನೆಯ ಅಡುಗೆಮನೆಯಲ್ಲಿರುವ ಈ ಸಾಮಾನ್ಯ ಸಾಂಬಾರ ಪದಾರ್ಥದಲ್ಲಿ ಅಪ್ರತಿಮ ಔಷಧೀಯ ಗುಣಗಳಿವೆ. ಇವು ರಕ್ತಸಂಚಾರವನ್ನು ಉತ್ತಮಗೊಳಿಸುವ ಜೊತೆಗೇ ರಕ್ತನಾಳಗಳ ಆರೋಗ್ಯವನ್ನೂ ವೃದ್ದಿಸುತ್ತವೆ. ಹೆಚ್ಚಿನ ರಕ್ತಸಂಚಾರ ಹೆಚ್ಚಿನ ಕಾಮಾಸಕ್ತಿಯನ್ನೂ ನೀಡುತ್ತದೆ. ಒಂದು ವಾರದಲ್ಲಿ ಒಂದು ಚಿಕ್ಕ ಚಮಚದಷ್ಟು ಶುಂಠಿಯನ್ನು ಸೇವಿಸಿದರೆ ಹೃದಯವನ್ನು ಉತ್ತಮ ಆರೋಗ್ಯದಲ್ಲಿರಿಸಲು ಸಾಧ್ಯವಾಗುತ್ತದೆ.

ಕುಂಬಳದ ಬೀಜಗಳು

ಕುಂಬಳದ ಬೀಜಗಳು

ವ್ಯಾಯಾಮದ ಬಳಿಕ ಖಾರವಾಗಿರುವ ಕುಂಬಳದ ಸಾರಿನ ಊಟ ಎಷ್ಟು ಅಪ್ಯಾಯಮಾನವಗಿರುತ್ತದೆಯೋ, ಅಂತೆಯೇ ರಾತ್ರಿಯ ಹೊತ್ತು ಕುಂಬಳದ ಬೀಜದ ಸೇವನೆಯೂ ಲೈಂಗಿಕ ಜೀವನದಲ್ಲಿ ಹೆಚ್ಚಿನ ಪ್ರಯೋಜನ ಒದಗಿಸುತ್ತದೆ. ಈ ಬೀಜಗಳಲ್ಲಿರುವ ಟ್ರಿಪ್ಟೋಫ್ಯಾನ್ ಎಂಬ ಅಮೈನೋ ಆಮ್ಲ ಮನೋಭಾವವನ್ನು ಹೆಚ್ಚಿಸುವ ಗುಣಹೊಂದಿದ್ದು ಮೆದುಳಿನಲ್ಲಿ ಮುದನೀಡುವ ಸೆರೋಟೋನಿನ್ ಎಂಬ ರಸದೂತದ ಉತ್ಪಾದನೆಗೆ ನೆರವಾಗುತ್ತದೆ. ಅಲ್ಲದೇ ಸೆರೋಟೋನಿನ್ ಒಂದು ಒತ್ತಡ ನಿವಾರಕವೂ ಆಗಿದ್ದು ಕುಂಬಳ ಬೀಜದ ಸೇವನೆಯಿಂದ ಹೆಚ್ಚಿನ ಸೆರೋಟೋನಿನ್ ಉತ್ಪಾದನೆಗೂ ನೆರವಾಗುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣು ಹೆಚ್ಚಿನ ಜನರ ಉಪಾಹಾರ ಹಾಗೂ ಅಗ್ಗದ, ಸುಲಭ ಆಹಾರವಾಗಿದೆ ಹಾಗೂ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ ಹಾಗೂ ಲೈಂಗಿಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಉತ್ತಮ ಪ್ರಮಾಣದಲ್ಲಿದ್ದು ಉಪ್ಪಿನ ಮೂಲಕ ದೇಹಕ್ಕೆ ಆಗಮಿಸುವ ಸೋಡಿಯಂ ಲವಣವದ ಪ್ರಭಾವ ಕಡಿಮೆಗೊಳಿಸುತ್ತದೆ. ಆಹಾರದಲ್ಲಿ ಉಪ್ಪು ಹೆಚ್ಚಿದ್ದಷ್ಟೂ ಜನನಾಂಗಗಳಿಗೆ ರಕ್ತ ದೊರಕುವ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಭಾವಪರಾಕಾಷ್ಠೆಯನ್ನು ತಲುಪುವುದು ಕಷ್ಟವಾಗುತ್ತದೆ. ಆದರೆ ಹೆಚ್ಚಿನ ಪೊಟ್ಯಾಶಿಯಂ ಹೊಟ್ಟೆಯುಬ್ಬರಿಕೆಗೂ ಕಾರಣವಾಗುವುದರಿಂದ ಅತಿ ಹೆಚ್ಚು ಬಾಳೆಹಣ್ಣು ಸೇವಿಸಬಾರದು.

ಆಲೂಗಡ್ಡೆ

ಆಲೂಗಡ್ಡೆ

ಒಂದು ವೇಳೆ ನೀವು ಆಲೂಗಡ್ಡೆ ಪ್ರಿಯರಾಗಿದ್ದರೆ ನಿಮ್ಮಲ್ಲಿ ಇತರರಿಗಿಂತಲೂ ಹೆಚ್ಚಿನ ಕಾಮೋತ್ಸಾಹವಿರುತ್ತದೆ. ಸಿಹಿಗೆಣಸು ಮತ್ತು ಆಲೂಗಡ್ಡೆಯಲ್ಲಿಯೂ ಹೆಚ್ಚಿನ ಪೊಟ್ಯಾಶಿಯಂ ಇರುತ್ತದೆ ಹಾಗೂ ರಕ್ತಸಂಚಾರ ಹೆಚ್ಚಲು ಮತ್ತು ಹೊಟ್ಟೆಯುಬ್ಬರಿಕೆ ಕಡಿಮೆ ಮಾಡಲು ನೆರವಾಗುತ್ತದೆ. ಹಾಗಾಗಿ ರಾತ್ರಿಯ ಸಮಯದಲ್ಲಿ ವಿಜೃಂಭಿಸಬೇಕೆಂದಿದ್ದರೆ ರಾತ್ರಿಯ ಊಟದಲ್ಲಿ ಸಾಕಷ್ಟು ಆಲೂಗಡ್ಡೆಗಳನ್ನು ಸೇವಿಸಲು ಮರೆಯದಿರಿ.

ಪೀಚ್ ಹಣ್ಣುಗಳು

ಪೀಚ್ ಹಣ್ಣುಗಳು

ಪೀಚ್ ಹಣ್ಣುಗಳಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದ್ದು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ನಪುಂಸಕತ್ವವನ್ನೂ ಕಡಿಮೆ ಮಾಡುತ್ತದೆ. ಇದರ ಪರಿಮಳ, ಬಣ್ಣ ಹಾಗೂ ರುಚಿ ಎಲ್ಲವೂ ಮುದನೀಡುವಂತಹದ್ದಾಗಿದ್ದು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತದೆ. ಉತ್ತಮ ಲೈಂಗಿಕ ಜೀವನಕ್ಕಾಗಿ ರಾತ್ರಿ ಮಲಗುವ ಮುನ್ನ ಶೀತಲೀಕರಿಸಿದ ಪೀಚ್ ಹಣ್ಣುಗಳನ್ನು ಸೇವಿಸಿ, ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ನುಗಳಿರುತ್ತವೆ.

ಶತಾವರಿ

ಶತಾವರಿ

ಈ ತರಕಾರಿಯ ಸೇವನೆಯಿಂದ ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಹಿಸ್ಟಮೈನ್ ಎಂಬ ಪೋಷಕಾಂಶದ ಉತ್ಪಾದನೆ ಹೆಚ್ಚುತ್ತದೆ ಹಾಗೂ ಕಾಮಪರಾಕಾಷ್ಠೆಯನ್ನು ತಲುಪಲು ಸಾಧ್ಯವಾಗುತ್ತದೆ. ಶತಾವರಿಯಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ, ಕರಗದ ನಾರು, ವಿಟಮಿನ್ ಬಿ6, ವಿಟಮಿನ್ ಎ, ಸಿ, ಥಿಯಾಮಿನ್ ಹಾಗೂ ಫೋಲಿಕ್ ಆಮ್ಲಗಳಿವೆ. ಇವೆಲ್ಲವೂ ಕಾಮೋತ್ತೇಜಕವಾಗಿದ್ದು ಲೈಂಗಿಕ ಜೀವನವನ್ನು ಉತ್ತಮಗೊಳಿಸಲು ನೆರವಾಗುತ್ತವೆ.

ಬೆಣ್ಣೆಹಣ್ಣು

ಬೆಣ್ಣೆಹಣ್ಣು

ಇದೊಂದು ಅದ್ಭುತ ಆಹಾರವಾಗಿದ್ದು ಹಲವಾರು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ವಿಶೇಷವಾಗಿ ಇದರಲ್ಲಿ ಫೋಲಿಕ್ ಆಮ್ಲ, ವಿಟಮಿನ್ ಬಿ೬, ಒಮೆಗಾ 3 ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿದ್ದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ. ಅಲ್ಲದೇ ಇದರಲ್ಲಿ ನೈಸರ್ಗಿಕ ಕೊಬ್ಬುಗಳೂ ಹೆಚ್ಚಾಗಿದ್ದು ವಿಶೇಷವಾಗಿ ಪುರುಷರಲ್ಲಿ ಟೆಸ್ಟಾಸ್ಟೆರೋನ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಲೈಂಗಿಕಾಸಕ್ತಿಯನ್ನೂ ಹೆಚ್ಚಿಸುತ್ತದೆ.

ಅಂಜೂರ

ಅಂಜೂರ

ಕ್ಲಿಯೋಪಾತ್ರಾ ರಾಣಿಯ ನೆಚ್ಚಿನ ಹಣ್ಣಾಗಿದ್ದ ಅಂಜೂರ ಸಿಹಿಯೂ ನೋಡಲು ಸುಂದರವೂ ಆಗಿದೆ. ಹಲವು ಸಂಸ್ಕೃತಿಗಳಲ್ಲಿ ಈ ಹಣ್ಣನ್ನು ಫಲವಂತಿಕೆಯ ಪ್ರತೀಕವಾಗಿ ಬಿಂಬಿಸಲಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಅಮೈನೋ ಆಮ್ಲಗಳಿವೆ ಹಾಗೂ ಇವು ಲೈಂಗಿಕಾಸಕ್ತಿಯನ್ನು ಹೆಚ್ಚಿಸುವುದೆಂದು ನಂಬಲಾಗಿದೆ. ಅಲ್ಲದೇ ಇವು ದೇಹ ದಾರ್ಢ್ಯತೆಯನ್ನೂ ಹೆಚ್ಚಿಸುತ್ತವೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಇದರಲ್ಲಿ ಅತಿಹೆಚ್ಚು ಪ್ರಮಾಣದ ನೀರು ಇದ್ದರೂ ಉಳಿದ ಪೋಷಕಾಂಶಗಳಲ್ಲಿ ಸಿಟ್ರುಲೈನ್ ಎಂಬ ಪೋಷಕಾಂಶ ಉತ್ತಮ ಪ್ರಮಾಣದಲ್ಲಿದೆ. ಇದು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ವಿಶೇಷವಾಗಿ ಜನನಾಂಗಕ್ಕೆ ರಕ್ತ ಪೂರೈಸುವ ರಕ್ತನಾಳಗಳನ್ನು ಸಡಿಲಗೊಳಿಸುವ ಮೂಲಕ ಹೆಚ್ಚಿನ ರಕ್ತಪೂರೈಕೆ ಸಾಧ್ಯವಾಗುತ್ತದೆ ಹಾಗೂ ವಯಾಗ್ರಾದಷ್ಟೇ ಪರಿಣಾಮಕಾರಿಯಾಗಿ ಉದ್ರೇಕತೆಯನ್ನು ಹೆಚ್ಚಿಸುತ್ತದೆ.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆ ಎಂದರೆ ಫಲವಂತಿಕೆಯ ಪ್ರತೀಕವಾಗಿದೆ. ಇದರಲ್ಲಿ ವಿಟಮಿನ್ ಬಿ5 ಮತ್ತು ಬಿ6 ಹೇರಳವಾಗಿದ್ದು ರಸದೂತಗಳ ಸಮತೋಲನ ಮತ್ತು ಒತ್ತಡ ನಿವಾರಣೆಗೆ ನೆರವಾಗುತ್ತವೆ. ಕಾಮಾಸಕ್ತಿಯನ್ನು ಹೆಚ್ಚಿಸಲು ಕಾಮಕೂಟಕ್ಕೂ ಮುನ್ನ ಹಸಿಮೊಟ್ಟೆಯನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ.

ಹಸಿಮೆಣಸು

ಹಸಿಮೆಣಸು

ಹಸಿಮೆಣಸಿನಲ್ಲಿರುವ ಕ್ಯಾಪ್ಸೈಸಿನ್ ಎಂಬ ಪೋಷಕಾಂಶ ನಾಲಿಗೆಗೆ ಖಾರವಾಗಿದ್ದರೂ ದೇಹಕ್ಕೆ ತುಂಬಾ ಒಳ್ಳೆಯ ಪೋಷಕಾಂಶವಾಗಿದೆ. ಇದು ಕಾಮೋತ್ತೇಜನಕ್ಕೆ ಅಗತ್ಯವಿರುವ ಎಂಡಾರ್ಫಿನ್ ಎಂಬ ರಸದೂತಗಳನ್ನು ಬಿಡುಗಡೆ ಮಾಡುವ ಮೂಲಕ ಕಾಮಾಸಕ್ತಿಯನ್ನು ಉತ್ತೇಜಿಸುತ್ತದೆ.

ಬಾದಾಮಿಗಳು

ಬಾದಾಮಿಗಳು

ಬಾದಾಮಿಗಳಲ್ಲಿರುವ ವಿಫುಲ ಪ್ರಮಾಣದ ವಿಟಮಿನ್ ಇ ಕೇವಲ ಕೂದಲು ಮತ್ತು ತ್ವಚೆಗೆ ಮಾತ್ರವೇ ಪ್ರಯೋಜನಕಾರಿಯಲ್ಲ, ಇದು ಕಾಮೋತ್ತೇಜಕವೂ ಹೌದು. ಈ ಒಣಫಲವನ್ನು ನಿತ್ಯವೂ ಕೊಂಚವಾಗಿ ಸೇವಿಸುತ್ತಾ ಬಂದರೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಹಾಗೂ ರಕ್ತಸಂಚಾರವೂ ಉತ್ತಮಗೊಳ್ಳುತ್ತದೆ.

English summary

18 Libido-boosting Foods That Improve Sex Drive Naturally

Food is the fuel for the proper functioning of our body. Without this, our body feels weak, and we fall sick. Well, this is a frequent topic which is known to one and all. But what we need to know is that it also helps improve your libido. The term sex can raise many eyebrows, but we all know that it is a basic human necessity and just by setting up a romantic ambiance with flowers, scented candles, and slow music, sex cannot be attained in a desired manner.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more