ಸುಲಭವಾದ ಈ ಮನೆ ಮದ್ದುಗಳಿಂದ ಮಕ್ಕಳ ಕೆಮ್ಮನ್ನು ಕಡಿಮೆ ಮಾಡಿ

Posted By: Divya pandit Pandit
Subscribe to Boldsky

ಸಾಮಾನ್ಯವಾಗಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಅವರ ಬೆಳವಣಿಗೆಯಾದಂತೆ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತಾ ಹೋಗುವುದು. ಹಾಗಾಗಿಯೇ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳು ಸಹ ಬಹು ಬೇಗ ಗಂಭೀರ ಸ್ಥಿತಿಗೆ ತಲುಪುವುದು. ಇಲ್ಲವೇ ದೀರ್ಘ ಸಮಯದ ವರೆಗೆ ಆರೋಗ್ಯದ ತೊಂದರೆಗಳು ಕಾಡುತ್ತಲೇ ಇರುತ್ತವೆ.

ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆ ಎಂದರೆ ನೆಗಡಿ ಹಾಗೂ ಕೆಮ್ಮು. ಒಬ್ಬರಿಂದ ಒಬ್ಬರಿಗೆ ಹರಡಬಹುದಾದ ಈ ಕಾಯಿಲೆ ಮಕ್ಕಳಿಗೆ ಒಮ್ಮೆ ಬಂತೆಂದರೆ ಒಂದು ತಿಂಗಳುಗಳ ಕಾಲ ಗುಣಮುಖವಾಗದೆ ಹಾಗೇ ಉಳಿದುಕೊಳ್ಳುವುದು. ಮಕ್ಕಳಿಗೆ ದೀರ್ಘ ಸಮಯದ ವರೆಗೆ ಔಷಧ ನೀಡುವುದರಿಂದಲೂ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಕೆಲವು ಮನೆ ಔಷಧಿ ಮಾಡುವ ಮೂಲಕ ಮಕ್ಕಳಲ್ಲಿ ಕಾಣುವ ನೆಗಡಿ ಹಾಗೂ ಕೆಮ್ಮುಗಳನ್ನು ಕಡಿಮೆಮಾಡಬಹುದು.ನಿಮ್ಮ ಮನೆಯಲ್ಲೂ ಸಹ ಮಕ್ಕಳಿಗೆ ಒಮ್ಮೆ ಕೆಮ್ಮು ಶುರುವಾದರೆ ಕಡಿಮೆ ಮಾಡುವುದು ಕಷ್ಟ ಎಂದಾದರೆ ತಪ್ಪದೆ ಈ ಮುಂದೆ ವಿವರಿಸಿರುವ ಔಷಧಗಳ ಮೊರೆ ಹೋಗಿ ಬಹು ಬೇಗ ಗುಣಮುಖವಾಗುವುದು.

Kids sleeping

ವಿಶ್ರಾಂತಿ

ಮಗುವಿನ ದೇಹವು ಬಹಳ ಸೂಕ್ಷ್ಮತೆಯಿಂದ ಕೂಡಿರುತ್ತದೆ. ಮಕ್ಕಳ ಆರೋಗ್ಯದ ಕುರಿತು ಸೂಕ್ತವಾದ ವಿಶ್ರಾಂತಿ ಮತ್ತು ಕಾಳಜಿಯನ್ನು ವಹಿಸಬೇಕಾಗುವುದು. ಮಕ್ಕಳಲ್ಲಿ ಶಾಲೆ ಕೆಲಸದ ಹೆಚ್ಚುವ ಒತ್ತಡ, ಅತಿಯಾದ ಓಡಾಟ, ದೇಹಾಯಾಸ, ಪ್ರಯಾಣ, ಅಲರ್ಜಿ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಕೆಮ್ಮು ನೆಗಡಿ ಬರುವುದು ಸಹಜ. ಹಾಗಾಗಿ ಸ್ವಲ್ಪ ವಿಶ್ರಾಂತಿಗೆ ಮಕ್ಕಳನ್ನು ಒಳಪಡಿಸುವುದು ಸೂಕ್ತ.

ಹಬೆ ತೆಗೆದುಕೊಳ್ಳುವುದು

ಬೆಚ್ಚಗಿನ ನೀರಿನಲ್ಲಿ ಶವರ್ ಸ್ನಾನ ಮಾಡಿಸಿ. ಇದರಿಂದ ಸ್ನಾನದ ಕೋಣೆಯು ಬಿಸಿ ಹಬೆಯಿಂದ ತುಂಬಿಕೊಳ್ಳುತ್ತದೆ. ಆಗ ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿರುವ ಮಕ್ಕಳಿಗೆ ಸ್ವಲ್ಪ ಆರಾಮದಾಯಕ ಅನುಭವ ಆಗುವುದು. ಆದಷ್ಟು ಚಿಕ್ಕದಾದ ಸ್ನಾನದ ಕೋಣೆಯ ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಬಹುಬೇಗ ಹಬೆಯು ಕೋಣೆಯಲ್ಲಿ ತುಂಬಿಕೊಳ್ಳುತ್ತದೆ. ಉತ್ತಮ ಚಿಕಿತ್ಸೆ ನೀಡಿದಂತಾಗುವುದು.

Boiled water

ಬಾಯಿ ಮುಕ್ಕಳಿಸುವುದು

ಬೆಚ್ಚಗಿನ ನೀರಿಗೆ ಚಿಟಕಿ ಉಪ್ಪನ್ನು ಸೇರಿಸಿ ಗಂಟಲಲ್ಲಿ ನೀರನ್ನು ಇಟ್ಟುಕೊಂಡು ಬಾಯಿ ಮುಕ್ಕಳಿಸುವಂತೆ ಮಾಡಲು ಹೇಳಿ. ಇದರಿಂದ ದೀರ್ಘಕಾಲದ ಪರಿಹಾರವನ್ನು ಹೊಂದಬಹುದು. ಇದರಿಂದಾಗಿ ಕೆಮ್ಮು ತಗ್ಗುವುದು. ಗಂಟಲಲ್ಲಿ ಕಾಡುವ ಕಿರಿಕಿರಿಯು ಕಡಿಮೆಯಾಗುವುದು.

ಬಿಸಿ ನೀರು

ಚಿಕ್ಕ ಮಕ್ಕಳಲ್ಲಿ ಅತಿಯಾದ ಕೆಮ್ಮು ಇದೆ ಎಂದರೆ ಅವರ ದೇಹದಲ್ಲಿ ಜೀವಾಣುಗಳ ವಿಷವು ಅತಿಯಾಗಿದೆ ಎಂದು ಹೇಳಲಾಗುವುದು. ಅಂತಹ ಸಂದರ್ಭದಲ್ಲಿ ಆದಷ್ಟು ಹೆಚ್ಚು ಬಾರಿ ಅಥವಾ ಆಗಾಗ ಬೆಚ್ಚಗಿನ ನೀರನ್ನು ಕುಡಿಸುತ್ತಲಿರಬೇಕು. ಆಗ ಕೆಮ್ಮು ಕಡಿಮೆಯಾಗುವುದು.

ವೆಪೂರ್ ರಬ್

ಮಕ್ಕಳಲ್ಲಿ ನೆಗಡಿ ಮತ್ತು ಕೆಮ್ಮು ಕಾಣಿಸಿಕೊಂಡಾಗ ವೆಪೂರ್ ಅನ್ನು ತೆಗೆದುಕೊಂಡು ಮಗುವಿನ ಎದೆಯ ಮೇಲೆ, ಗಂಟಲಿನ ಬೇಲೆ, ಬೆನ್ನಿಗೆ ಹಾಗೂ ಅಂಗಾಲಿಗೆ ಅನ್ವಯಿಸಿ. ಬಳಿಕ ಮೃದುವಾಗಿ ಮಸಾಜ್ ಮಾಡಿ. ಇದರಿಂದ ಮಕ್ಕಳಿಗೆ ಕೆಮ್ಮಿನಿಂದ ಬಹುಬೇಗ ಮುಕ್ತಿ ದೊರೆಯುವುದು.

cough

ಕ್ಯಾಂಡಿ ಸೇವಿಸಲು ಹೇಳಿ

ನಿಮ್ಮ ಮಕ್ಕಳು ನಾಲ್ಕು ವರ್ಷಕ್ಕಿಂತ ಮೇಲ್ಪಟ್ಟವಾರಗಿದ್ದರೆ, ಗಂಟಲಲ್ಲಿ ಕಿರಿಕಿರಿಯನ್ನು ಅನುಭವಿಸುತ್ತಿದ್ದರೆ ಕ್ಯಾಂಡಿ ಅಥವಾ ಪುಡಿಮಾಡಿದ ಐಸ್ ಚೂರನ್ನು ಹೀರಲು ಹೇಳಬೇಕು. ಇದರಿಂದ ಕೆಮ್ಮನ್ನು ತಡೆಗಟ್ಟಬಹುದು. ಮಕ್ಕಳಲ್ಲಿ ಕಾಡುವ ಕೆಮ್ಮನ್ನು ತಡೆಗಟ್ಟಲು ಇದೊಂದು ಸುಲಭ ಮನೆ ಪರಿಹಾರ ಎನ್ನಬಹುದು.

ಓಮ್‍ಕಾಳು

ಓಮ್ ಕಾಳಿನಲ್ಲಿ ಆಂಟಿಮೈಕ್ರೊಬಿಯಲ್ ಗುಣವನ್ನು ಹೊಂದಿದೆ. ಇದನ್ನು ಕೆಮ್ಮುವ ಮಕ್ಕಳಿಗೆ ನೀಡಿದರೆ ಕೆಮ್ಮನ್ನು ಕಡಿಮೆ ಮಾಡಬಹುದು. ಈ ಬೀಜ ಮತ್ತು ಬೆಲ್ಲವನ್ನು ಸೇರಿಸಿ ಕಷಾಯ ಮಾಡಿ, ಮಕ್ಕಳಿಗೆ ಸವಿಯಲು ನೀಡಬಹುದು. ಇಲ್ಲವೇ ಕಾಳು ಮೆಣಸಿನ ಪುಡಿ, ಒಣ ಶುಂಠಿ, ಲವಂಗ, ತುಳಸಿ ಎಲೆ, ಅರಿಶಿನ ಹಾಗೂ ಒಂದು ಬಟ್ಟಲು ನೀರನ್ನು ಸೇರಿಸಿ ಕಷಾಯ ಮಾಡಿಯೂ ನೀಡಬಹುದು. ಇದನ್ನು ನಿತ್ಯವೂ 2-3 ಬಾರಿ ಒಂದು ಟೀ ಚಮಚವನ್ನು ಸೇವಿಸುತ್ತಾ ಬಂದರೆ ಬಹುಬೇಗ ಉಪಶಮನ ಕಾಣುವುದು.

ಮಲಗುವ ಭಂಗಿ

ಮಗು ಮಲಗಿರುವಾಗ ಅದರ ತಲೆಯು ನೇರವಾದ ಸ್ಥಿತಿಯಲ್ಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದರಿಂದಾಗಿ ಗಂಟಲು ಭಾಗದಲ್ಲಿ ಲೋಳೆಯ ಚಲನೆಯ ಪ್ರಮಾಣ ತಗ್ಗುವುದು. ಲೋಳೆಯ ಸಂಗ್ರಹ ಕಡಿಮೆಯಾದಂತೆ ಕೆಮ್ಮು ಸಹ ತಗ್ಗುವುದು. ರಾತ್ರಿ ಮಲಗುವಾಗ ಸೂಕ್ತ ರೀತಿಯ ಭಂಗಿಯಲ್ಲಿ ಮಲಗಿಸುವುದರಿಂದ ವಿಶ್ರಾಂತಿಯ ಮೂಲಕ ಕೆಮ್ಮನ್ನು ಗುಣಪಡಿಸಬಹುದು.

ಮೂಗು ಊದಿಕೊಳ್ಳುವುದು

ನೆಗಡಿ ಹಾಗೂ ಕೆಮ್ಮನ್ನು ಹೊಂದಿರುವಾಗ ವಯಸ್ಕರಲ್ಲಿ ಮೂಗು ಊದಿಕೊಳ್ಳುವುದು ಸಾಮಾನ್ಯವಾದದ್ದು. ಆದರೆ ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮಕ್ಕಳಿಗೆ ನೆಗಡಿ ಮತ್ತು ಕೆಮ್ಮು ಕಾಣಿಸಿಕೊಂಡಾಗ ಮಕ್ಕಳಿಗೆ ವಾಸನೆಯನ್ನು ಹಿಮ್ಮುಖವಾಗಿ ತೆಗೆದುಕೊಳ್ಳುವಂತೆ ನಿರ್ದೇಶಿಸಬೇಕು. ಪಾಲಕರು ಮಕ್ಕಳಿಗೆ ಕಡಿಮೆ ಎಂದರೂ ದಿನದಲ್ಲಿ ಕನಿಷ್ಠ ಮೂರು ಅಥವಾ ನಾಲ್ಕು ಬಾರಿ ಹೀಗೆ ಮಾಡಿಸಬೇಕು. ಇದರಿಂದ ಮಕ್ಕಳಿಗೆ ಆರಾಮದಾಯಕ ಅನುಭವ ಆಗುವುದು.

ನಿಂಬೆ

ನಿಂಬೆಯು ಅತ್ಯುತ್ತಮ ಮನೆ ಔಷಧ ಎನ್ನಬಹುದು. ಇದರ ರಸದಿಂದ ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಿಸಬಹುದು. ನಿಂಬೆ ರಸಕ್ಕೆ ಜೇನುತುಪ್ಪ ಬೆರೆಸಿ ಕೋಡುವುದು ಅಥವಾ ನಿಂಬೆ ಸ್ಲೈಸ್ ಗಳ ಮೇಲೆ ಜೇನುತುಪ್ಪವನ್ನು ಸವರಿ ಸೇವಿಸುವಂತೆ ಹೇಳಬೇಕು. ಇದು ಬಹುಬೇಗ ಕೆಮ್ಮನ್ನು ಕಡಿಮೆ ಮಾಡುವ ಮನೆ ಔಷಧ ಎನ್ನಲಾಗುವುದು. ಇದರ ಸೇವನೆಯಿಂದ ಮಕ್ಕಳ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗದು. ಬದಲಿಗೆ ಸಿರಪ್‍ಗಳಿಗಿಂತ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಮಸಾಜ್

ಮಗುವಿಗೆ ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆಯ ಮಿಶ್ರಣದಿಂದ ಬೆಚ್ಚಗಿನ ಮಸಾಜ್ ಮಾಡಿ. ಇದು ಚಿಕ್ಕ ಮಗುವಿಗೆ ಉತ್ತಮ ನಿದ್ರೆ ನೀಡುವುದು. ನೆಗಡಿ ಮತ್ತು ಕೆಮ್ಮನ್ನು ಗುಣಪಡಿಸಲು ಪ್ರಚೋದನೆ ನೀಡುವುದು.

ಚಿಕನ್ ಸೂಪ್

ಮಾಂಸಹಾರಿಗಳಾಗಿದ್ದರೆ ನಿಮ್ಮ ಮಗುವಿಗೆ ಕೆಮ್ಮು ಇರುವಾಗ ಚಿಕನ್ ಸೂಪ್ ನೀಡಬಹುದು. ಬೆಚ್ಚಗಿರುವ ಚಿಕನ್ ಸೂಪ್ ಉರಿಯೂತ, ಕೆಮ್ಮು, ನೋವು, ಗಂಟಲು ಕಿರಿಕಿರಿಯನ್ನು ಸುಲಭವಾಗಿ ನಿವಾರಿಸುವುದು. ಕೆಮ್ಮು ಇರುವಾಗ ಬೆಚ್ಚಗಿನ ಚಿಕನ್ ಸೂಪ್ ಕುಡಿಸಿದರೆ ಮಕ್ಕಳಿಗೆ ಕೆಮ್ಮು ಬೇಗ ಶಮನವಾಗುವುದು.

cold

ಹಾಲು ಮತ್ತು ಅರಿಶಿನ

ಹಾಲು ಮತ್ತು ಅರಿಶಿನ ಅತ್ಯುತ್ತಮ ಔಷಧೀಯ ಗುಣಗಳನ್ನು ಒಳಗೊಂಡಿವೆ. ಒಂದು ಗ್ಲಾಸ್ ಬೆಚ್ಚಗಿನ ಹಾಲಿಗೆ ಸ್ವಲ್ಪ ಅರಿಶಿನ ಸೇರಿಸಿ ಕುಡಿಸುವುದರಿಂದ ಗಂಟಲಿಗೆ ತ್ವಚರಿತವಾದ ವಿಶ್ರಾಂತಿ ದೊರೆಯುವುದು. ವೈರಲ್ ಸೋಂಕುಗಳಿಗೆ ಸೂಕ್ತ ಔಷಧವಾಗಿರುವ ಹಾಲು ಮತ್ತು ಅರಿಶಿನ ಮಿಶ್ರಣ ಮಕ್ಕಳಿಗೆ ಹಾಗೂ ದೊಡ್ಡವರಿಗೆ ಅತ್ಯುತ್ತಮ ಆರೈಕೆ ನೀಡುವುದು.

ಶುಚಿತ್ವ

ಕೆಮ್ಮು ಮತ್ತು ನೆಗಡಿ ಸೂಕ್ಷ್ಮಜೀವಿಗಳ ಹರಡುವಿಕೆಯಿಂದ ಉಂಟಾಗುತ್ತವೆ. ಹಾಗಾಗಿ ಮಕ್ಕಳನ್ನು ಆದಷ್ಟು ಸ್ವಚ್ಛವಾಗಿರಿಸಲು ಪ್ರಯತ್ನಿಸಬೇಕು. ಅನಾರೋಗ್ಯ ಉಂಟಾದಾಗ ಮಲಗುವ ಬಟ್ಟೆ, ಹಾಸಿಗೆ ವಸ್ತ್ರಗಳನ್ನು ಬದಲಾಯಿಸುತ್ತಾ ಇರಬೇಕು. ಇಲ್ಲವಾದರೆ ಸಮಸ್ಯೆ ಉಲ್ಭಣವಾಗುತ್ತವೆ. ಮೂಲಭೂತ ಶುಚಿತ್ವ ಕಾಪಾಡಿಕೊಳ್ಳುವುದನ್ನು ಹೇಳಿಕೊಡಬೇಕು. ಜೊತೆಗೆ ಪಾಲಕರೂ ಅದನ್ನು ಅನ್ವಯಿಸಿಕೊಳ್ಳಬೇಕು.

ಮೂಲಿಕೆಗಳು (ಅನೈಸೀಡ್)

ಜೀರಿಗೆ, ಜೇಷ್ಟಮಧು, ಬಜೆ, ಇಪ್ಪಲಿ, ದಾಲ್ಚಿನ್ನಿ ಚೆಕ್ಕೆ ಗಳಂತಹ ಗಿಡ ಮೂಲಿಕೆಗಳು ಕೆಮ್ಮು ಹಾಗೂ ನೆಗಡಿಯನ್ನು ಗುಣಪಡಿಸಲು ಅತ್ಯುತ್ತಮ ಮನೆ ಔಷಧ. ಇವು ಸೂಕ್ಷ್ಮ ಸೋಂಕುಗಳ ವಿರುದ್ಧ ಹೋರಾಡುತ್ತವೆ. ಜೇನುತುಪ್ಪದೊಂದಿಗೆ ಇವುಗಳನ್ನು ಸೇರಿಸಿ ಕಷಾಯ ಮಾಡಿ ಕುಡಿಸುವುದರಿಂದ ಮಕ್ಕಳಲ್ಲಿ ಬಹುಬೇಗ ಕೆಮ್ಮು ನಿವಾರಣೆಯಾಗುವುದು.

English summary

15 Home Remedies For Cough In Children

It is a well-accepted fact that a child's immune system is weaker than that of an adult. That is why it is often seen that things like weather change tend to affect them more and they often give in to cough and cold. In today's scientific world, the first thing that parents do in a situation like this is to head to the doctor and give their child a host of medicines and antibiotics. While these antibiotics bring down the cough for the moment, they have very bad long-term consequences on the child's health.
Story first published: Wednesday, March 21, 2018, 23:32 [IST]