ಶ್ವಾಸಕೋಶದ ಆರೋಗ್ಯ-ಎಲ್ಲವೂ ನಮ್ಮ ಕೈಯಲ್ಲಿಯೇ ಇದೆ!

By: Deepu
Subscribe to Boldsky

ಶ್ವಾಸಕೋಶಗಳು ಇಲ್ಲದೆ ನಾವು ಉಸಿರಾಡಲು ಆಗುವುದಿಲ್ಲ, ಉಸಿರಾಡಲು ಆಗದೆ ನಾವು ಬದುಕುವುದಿಲ್ಲ. ಹಾಗಾದರೆ ಏನು ಮಾಡಬೇಕು? ನಮ್ಮ ಶ್ವಾಸಕೋಶಗಳ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಅಲ್ಲವೇ?

ಅದರಲ್ಲೂ ಆಮ್ಲಜನಕವೊಂದು ನಮಗೆ ಉತ್ತಮ ರೀತಿಯಲ್ಲಿ ಸರಬರಾಜು ಆದಲ್ಲಿ, ನಮ್ಮ ಇಡೀ ದೇಹ ಲವಲವಿಕೆಯಿಂದ ಇರುತ್ತದೆ.

ಜೊತೆಗೆ ದೇಹದಲ್ಲಿರುವ ಇಂಗಾಲದ ಡೈ ಆಕ್ಸೈಡ್ ಅನ್ನು ಸಹ ನಾವು ಹೊರ ಹಾಕಬೇಕಾಗುತ್ತದೆ. ಈ ಕೆಲಸವನ್ನು ಶ್ವಾಸಕೋಶಗಳು ನಮಗೆ ಗೊತ್ತೆ ಇಲ್ಲದಂತೆ ಮಾಡುತ್ತವೆ. ಹೃದಯದ ರೀತಿ ಶ್ವಾಸಕೋಶಗಳು ಸಹ ವಿಶ್ರಾಂತಿಯನ್ನು ಪಡೆಯುವುದಿಲ್ಲ. ಆ ಮಟ್ಟಿಗೆ ಅವು ನಮ್ಮ ದೇಹದ ಉತ್ತಮ ಕಾರ್ಮಿಕರು ಎಂದು ಹೇಳಬಹುದು. ಆರೋಗ್ಯಕರ ಶ್ವಾಸಕೋಶ ಕಾಪಾಡಿಕೊಳ್ಳಲು 9 ಸಲಹೆಗಳು

ಬಹುತೇಕ ಸಮಯ ಗಾಳಿಯ ಮೂಲಕ ಸೂಕ್ಷ್ಮ ಜೀವಿಗಳು ಮೂಗಿನ ಅಥವಾ ಬಾಯಿಯ ಮೂಲಕ ದೇಹವನ್ನು ಪ್ರವೇಶಿಸುತ್ತವೆ. ನೀವು ತುಂಬಾ ಅಪರೂಪವಾಗಿ ನಿಮ್ಮ ಶ್ವಾಸಕೋಶಗಳ ಕುರಿತು ಕಾಳಜಿವಹಿಸಿದಲ್ಲಿ ಅವುಗಳು ಬೇಗ ಹಾಳಾಗುತ್ತವೆ. ಹಾಗಾಗಿ ಶ್ವಾಸಕೋಶಗಳನ್ನು ಸಹ ನಮ್ಮ ಮುಖದಂತೆ ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ಇದೆಯೆಂಬುದನ್ನು ಮರೆಯಬೇಡಿ. ಶ್ವಾಸಕೋಶದ ಕ್ಯಾನ್ಸರ್-ನೀವು ತಿಳಿಯಲೇ ಬೇಕಾದ ಸತ್ಯಾಸತ್ಯತೆ

ಅಸ್ತಮಾ, ನ್ಯೂಮೋನಿಯಾ, ಬ್ರೊಂಕಿಟಿಸ್, ಕ್ಷಯ, ಸಿಓಪಿಡಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ಮುಂತಾದ ಕಾಯಿಲೆಗಳು ಶ್ವಾಸಕೋಶಕ್ಕೆ ಅಪಾಯವನ್ನು ಉಂಟು ಮಾಡಲು ಕಾಯುತ್ತಲೆ ಇರುತ್ತವೆ. ನಿಮ್ಮ ಶ್ವಾಸಕೋಶಗಳು ಸರಿಯಾಗಿ ಕೆಲಸ ಮಾಡಲು ಈ ಕೆಳಕಂಡ ಸಣ್ಣ ಸಣ್ಣ ಕ್ರಮಗಳನ್ನು ತೆಗೆದುಕೊಳ್ಳಿ:

ಧೂಮಪಾನ ಮಾಡುವವರ ಪಕ್ಕ ಇರಬೇಡಿ

ಧೂಮಪಾನ ಮಾಡುವವರ ಪಕ್ಕ ಇರಬೇಡಿ

ಹೌದು ಧೂಮಪಾನಿಗಳ ಜೊತೆಗೆ ಇದ್ದರೆ ನೀವು ಸಹ ತಟಸ್ಥ ಧೂಮಪಾನಿಗಳಾಗುತ್ತೀರಿ. ಅವರು ಸೇದಿ ಬಿಟ್ಟ ಹೊಗೆಯನ್ನು ಸೇವಿಸುವುದು ಇನ್ನೂ ಅಪಾಯಕಾರಿ. ಹಾಗಾಗಿ ಧೂಮಪಾನ ಮಾಡುವವರಿಂದ ದೂರವಿರಿ.

ಧೂಮಪಾನ ಮಾಡಲು ಪ್ರಯತ್ನಿಸಲು ಸಹ ಹೋಗಬೇಡಿ

ಧೂಮಪಾನ ಮಾಡಲು ಪ್ರಯತ್ನಿಸಲು ಸಹ ಹೋಗಬೇಡಿ

ಇದು ಚಟವಾಗಿ ಮಾರ್ಪಾಡುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ ನಿಮಗೆ ಕ್ಯಾನ್ಸರ್ ಇತ್ಯಾದಿ ಸಮಸ್ಯೆಗಳನ್ನು ಸಹ ಇದು ಕೊಡುಗೆಯಾಗಿ ನೀಡುತ್ತದೆ. ಎಚ್ಚರ ಧೂಮಪಾನ ಒಂದು ಮಹಾಮಾರಿ.

ವಾಹನಗಳ ಮಾಲಿನ್ಯ

ವಾಹನಗಳ ಮಾಲಿನ್ಯ

ಮಹಾನಗರಗಳಲ್ಲಿ ವಾಸ ಮಾಡುವವರು ದಿನದ ಬಹುಪಾಲು ಮಾಲಿನ್ಯದಲ್ಲಿಯೇ ಬದುಕುತ್ತಾರೆ. ಅದರಲ್ಲೂ ವಾಹನ ಸವಾರರು ಮಾಲಿನ್ಯವನ್ನೆ ಉಸಿರಾಡುತ್ತಾರೆ. ಅದಕ್ಕಾಗಿ ಮಾಸ್ಕ್ ಧರಿಸಿ ಹೊರಗೆ ಹೋಗಿ, ವಾಹನ ಚಲಾಯಿಸುವಾಗ ಮಾಸ್ಕ್ ಧರಿಸಿ.

ಕೈಗಾರಿಕೆಗಳ ಮಾಲಿನ್ಯ

ಕೈಗಾರಿಕೆಗಳ ಮಾಲಿನ್ಯ

ನಿಮ್ಮ ಮನೆ ಕಾರ್ಖಾನೆಗಳ ಪಕ್ಕ ಇದ್ದಲ್ಲಿ, ನೀವು ಯಾವಾಗಲು ಕಾರ್ಖಾನೆಗಳು ಹೊರ ಬಿಡುವ ಹೊಗೆಯನ್ನು ಸೇವಿಸಬಹುದು. ಗಿಡ ಮತ್ತು ಮರಗಳು ಹೆಚ್ಚಾಗಿರುವ ಕಡೆ ಮನೆಯನ್ನು ಮಾಡಿಕೊಳ್ಳಿ.

ಉಸಿರಾಟವನ್ನು ಪ್ರಯತ್ನಿಸಿ

ಉಸಿರಾಟವನ್ನು ಪ್ರಯತ್ನಿಸಿ

ವ್ಯಾಯಾಮಗಳು ಸಹ ನಿಮ್ಮ ಶ್ವಾಸಕೋಶವನ್ನು ಆರೋಗ್ಯಕರವಾಗಿ ಇರಿಸುತ್ತವೆ. ಧ್ಯಾನ ಮತ್ತು ಪ್ರಾಣಾಯಮಗಳನ್ನು ಮಾಡುವುದನ್ನು ಕಲಿತು ಅಭ್ಯಾಸ ಮಾಡಿ.

ಚಟುವಟಿಕೆಯಿಂದ ಇರಿ

ಚಟುವಟಿಕೆಯಿಂದ ಇರಿ

ಬೆಳಗ್ಗೆ ಜಾಗಿಂಗ್ ಮಾಡುವುದರಿಂದ ಶ್ವಾಸಕೋಶಗಳ ಆರೋಗ್ಯ ಸುಧಾರಿಸುತ್ತದೆ. ಆಗಾಗಿ ವ್ಯಾಯಾಮ ಮಾಡಿ, ದಿನವಿಡೀ ಚಟುವಟಿಕೆಯಿಂದ ಇರಿ.

ಒಳಾಂಗಣ ಗಿಡಗಳು

ಒಳಾಂಗಣ ಗಿಡಗಳು

ಮನೆಯಲ್ಲಿ ಮತ್ತು ಕಚೇರಿಯಲ್ಲಿ ಗಿಡಗಳನ್ನು ಇರಿಸಿಕೊಳ್ಳಿ. ಇವುಗಳಿಂದ ಮನೆ ಸುಂದರವಾಗಿ ಇರುವುದರ ಜೊತೆಗೆ ನಿಮಗೆ ಸೇವಿಸಲು ಉತ್ತಮ ಗಾಳಿ ಸಹ ದೊರೆಯುತ್ತದೆ.

English summary

World Health Day: Simple Steps To Keep Your Lungs Healthy

Without lungs, we can't breathe and without breathing, we can't survive. What do the lungs do? Well, they get the oxygen into your system from your surroundings. They also release carbon dioxide. All the cells in your body need oxygen in order to function. And yes, your lungs never take an off just like your heart. They are constantly working to keep you alive.
Story first published: Thursday, April 6, 2017, 23:30 [IST]
Subscribe Newsletter