ರೆಡ್‌ ವೈನ್‌ನಲ್ಲಿರುವ ಗುಣಗಳು ತಿಳಿದರೆ-ಕಣ್ಣು ಮುಚ್ಚಿ ಕುಡಿಯುವಿರಿ!

By: Jaya subramanya
Subscribe to Boldsky

ವೈನ್ ಎಂದರೆ ಮಾದಕ ಪಾನೀಯವೆಂದೇ ಹೆಚ್ಚಿನವರು ಪರಿಗಣಿಸಿದ್ದಾರೆ. ಆದರೆ ಇದನ್ನು ಹೆಚ್ಚು ಕೊಳೆಸದೇ ಆಲ್ಕೋಹಾಲ್ ಪ್ರಮಾಣ ಕಡಿಮೆಯಾಗಿಸುವ ಕಲೆಯೇ ವೈನ್. ಇದೊಂದು ಪವಾಡಕರ ಪಾನೀಯ ಎಂದೂ ಪರಿಗಣಿಸಲ್ಪಡುತ್ತದೆ. ಇದು ಎಷ್ಟು ಆರೋಗ್ಯಕರ ಎಂಬ ಬಗ್ಗೆ ಸಂಶೋಧನೆ ನಡೆದಿದೆ ಹಾಗೂ ನಡೆಯುತ್ತಲೂ ಇದೆ. ನೀವು ನಂಬಲೇಬೇಕು, ಕೆಂಪು ವೈನ್‌ನಿಂದ ಸೌಂದರ್ಯ ವೃದ್ಧಿ! 

ಇದುವರೆಗೆ ಬಂದ ಫಲಿತಾಂಶಗಳ ಪ್ರಕಾರ ಆರೋಗ್ಯಕರ ವಿಧಾನದಲ್ಲಿ ಸಂಸ್ಕರಿಸಿದ ಕೆಂಪುದ್ರಾಕ್ಷಿಯ ವೈನ್ ಅಥವಾ ರೆಡ್ ವೈನ್ ಆರೋಗ್ಯವನ್ನು ಹಲವು ರೀತಿಯಲ್ಲಿ ವೃದ್ಧಿಸುತ್ತದೆ. ಅಷ್ಟೇ ಅಲ್ಲ, ಕೆಲವು ಮಾರಣಾಂತಿಕ ಕಾಯಿಲೆಗಳಿಗೆ ಔಷಧಿಯ ರೂಪದಲ್ಲಿಯೂ ಬಳಕೆಯಾಗುತ್ತದೆ ... ಇದೇನಿದು, ಹೃದಯದ ಆರೋಗ್ಯಕ್ಕೆ ವೈನ್ ಒಳ್ಳೆಯದಂತೆ!

ಹೌದು, ರೆಡ್ ವೈನ್ ಅಥವಾ ಕೆಂಪು ವೈನ್ ತನ್ನಲ್ಲಿ ಹಲವಾರು ಆರೋಗ್ಯ ಗುಣಗಳನ್ನು ಪಡೆದುಕೊಂಡಿದೆ ಎಂದರೆ ನೀವು ನಂಬಲೇಬೇಕು. ನಮ್ಮನ್ನು ಅನಾರೋಗ್ಯಗಳು ಬಿಡದೇ ಕಾಡುವುದರಿಂದ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವೊಮ್ಮೆ ವೈದ್ಯಲೋಕದ ಅಚ್ಚರಿ ಅಂಶಗಳನ್ನು ಪ್ರಯೋಗಿಸಿ ನೋಡಲೇಬೇಕು. ಉಫ್!! ಈ ವೈನ್ ಸ್ಟೋರಿ ಕೇಳಿದರೆ ಮಾತ್ರ ಕಕ್ಕಾಬಿಕ್ಕಿ ಆಗುವಿರಿ! 

ಹಾಗಿದ್ದರೆ ಕೆಂಪು ವೈನ್ ಅನ್ನು ವಾರದಲ್ಲಿ ಎರಡು ಬಾರಿ ನಿಯಮಿತವಾಗಿ ಕುಡಿದಲ್ಲಿ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಅರಿತುಕೊಳ್ಳುವ ಕುತೂಹಲ ನಿಮ್ಮದಾಗಿದೆ ಎಂದಾದಲ್ಲಿ ಇಲ್ಲಿದೆ ಆ ಸಂಗತಿಗಳು ಮುಂದೆ ಓದಿ...  

ರೋಗ ನಿರೋಧಕ ಸಾಮರ್ಥ್ಯ ಹೆಚ್ಚಳ

ರೋಗ ನಿರೋಧಕ ಸಾಮರ್ಥ್ಯ ಹೆಚ್ಚಳ

ರೆಡ್ ವೈನ್ ಇಲ್ಲವೇ ಕೆಂಪು ವೈನ್‌ನಲ್ಲಿರುವ ರೋಗನಿರೋಧಕ ಶಕ್ತಿಗಳು ನಿಮ್ಮಲ್ಲಿರುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ನಿಮ್ಮ ದೇಹದ ಕೋಶಗಳನ್ನು ದೃಢಗೊಳಿಸಿ ನಿಮ್ಮನ್ನು ರೋಗಗಳಿಂದ ಮುಕ್ತಗೊಳಿಸಲಿದೆ.

ಉತ್ತಮ ನಿದ್ದೆಗಾಗಿ

ಉತ್ತಮ ನಿದ್ದೆಗಾಗಿ

ನಿಮ್ಮ ನರಗಳನ್ನು ಶಾಂತಗೊಳಿಸಿ ರಾತ್ರಿಸಮಯದಲ್ಲಿ ನಿಮ್ಮ ಒತ್ತಡವನ್ನು ನಿವಾರಿಸಿ ಉತ್ತಮ ನಿದ್ದೆಯನ್ನು ರೆಡ್ ವೈನ್ ದಯಪಾಲಿಸಲಿದೆ.

ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡುತ್ತದೆ

ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡುತ್ತದೆ

ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ಒಂದು ಗ್ಲಾಸ್ ಕೆಂಪು ವೈನ್ ಸಾಕು. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಜೀವಕೋಶಗಳಿಗೆ ಹೆಚ್ಚಿನ ಶಕ್ತಿ ನೀಡುವ ಮೂಲಕ ಫ್ರೀ ರ್‍ಯಾಡಿಕಲ್ ಕಣಗಳ ವಿರುದ್ಧ ಹೋರಾಡಲು ನೆರವು ನೀಡುತ್ತದೆ. ಪರಿಣಾಮವಾಗಿ ರೋಗ ನಿರೋಧಕ ಶಕ್ತಿ ಇನ್ನಷ್ಟು ಹೆಚ್ಚುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ

ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ

ರಾತ್ರಿ ವೇಳೆಯಲ್ಲಿ ಒಂದು ಲೋಟದಷ್ಟು ರೆಡ್ ವೈನ್ ಅನ್ನು ಸೇವಿಸುವುದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ ಎಂದೆನಿಸಲಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ನಿಮಗೆ ಈ ದಿಸೆಯಲ್ಲಿ ಸಹಾಯ ಮಾಡಲಿವೆ.

ಸಣ್ಣ ಪ್ರಾಯದಲ್ಲೇ ವಯಸ್ಸಾಗುವುದನ್ನು ತಡೆಯುತ್ತದೆ

ಸಣ್ಣ ಪ್ರಾಯದಲ್ಲೇ ವಯಸ್ಸಾಗುವುದನ್ನು ತಡೆಯುತ್ತದೆ

ಇದರಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ನಿಮ್ಮನ್ನು ಬೇಗನೇ ವಯಸ್ಸಾಗದಂತೆ ತಡೆಯುತ್ತದೆ.

ತೂಕ ಇಳಿಕೆಗೆ

ತೂಕ ಇಳಿಕೆಗೆ

ನಿಮ್ಮಲ್ಲಿರುವ ಚಯಾಪಚಯ ಶಕ್ತಿಯನ್ನು ರೆಡ್ ವೈನ್ ಉತ್ತಮಗೊಳಿಸಲಿದ್ದು ಇದರಿಂದ ಆಹಾರ ಜೀರ್ಣಕ್ರಿಯೆ ಬೇಗನೇ ನಡೆಯಲಿದೆ.

ಮೂಳೆಗಳನ್ನು ಸುದೃಢಗೊಳಿಸುತ್ತದೆ

ಮೂಳೆಗಳನ್ನು ಸುದೃಢಗೊಳಿಸುತ್ತದೆ

ನಿಮ್ಮ ಮೂಳೆಗಳ ಸಾಮರ್ಥ್ಯವನ್ನು ಕೆಂಪು ವೈನ್ ಬಲಪಡಿಸಲಿದ್ದು ಇದು ಕ್ಯಾಲ್ಶಿಯಂ ಅನ್ನು ಹೀರಿಕೊಳ್ಳುತ್ತದೆ ಇದರಿಂದ ನಿಮ್ಮ ಮೂಳೆಗಳು ಬಲಗೊಳ್ಳುತ್ತದೆ.

ಮೆದುಳಿನ ಜೀವಕೋಶದ ಹಾನಿ ತಡೆಯುತ್ತದೆ

ಮೆದುಳಿನ ಜೀವಕೋಶದ ಹಾನಿ ತಡೆಯುತ್ತದೆ

ರೆಡ್ ವೈನ್‌ನ ಆರೋಗ್ಯಕಾರಿ ಗುಣಗಳು ನಿಮ್ಮನ್ನು ವಿಸ್ಮಯಗೊಳಿಸಬಹುದು. ರೆಡ್ ವೈನ್ ಕುಡಿಯುವ ವ್ಯಕ್ತಿಯ ಮೆದುಳು ಯಾವಾಗಲೂ ಕ್ರಿಯಾಶೀಲವಾಗಿರುತ್ತದೆ. ಇದು ಯಾಕೆಂದರೆ ರೆಡ್ ವೈನ್ ನಲ್ಲಿ ಉತ್ಕರ್ಷಣ ನಿರೋಧಕಗಳಿರುತ್ತದೆ. ಈ ಉತ್ಕರ್ಷಣ ನಿರೋಧಕಗಳು ಫ್ರೀ ರ್‍ಯಾಡಿಕಲ್ ನ ದಾಳಿಯನ್ನು ತಡೆಯುತ್ತದೆ. ಫ್ರೀ ರ್‍ಯಾಡಿಕಲ್‌ನಿಂದ ಮುಕ್ತವಾಗಿರುವ ಮೆದುಳು ಯಾವಾಗಲೂ ಹದಿಹರೆಯದಂತ ಇರುತ್ತದೆ. ಇದು ಅನುವಂಶಕಿ ದೂರ ಮತ್ತು ಸಾವನ್ನು ದೂರ ಮಾಡುತ್ತದೆ.

English summary

What Happens When You Drink A Glass Of Red Wine Every Night?

If you are someone who likes to enjoy a glass of wine often, here is some good news for you! Yes, drinking a glass of red wine, every night can help your health immensely! We may have heard about the many benefits of red wine already, however, we may not be fully aware of the right time at which it should be taken and the quantity in which it should be consumed.
Subscribe Newsletter