ಉಫ್!! ಈ ವೈನ್ ಸ್ಟೋರಿ ಕೇಳಿದರೆ ಮಾತ್ರ ಕಕ್ಕಾಬಿಕ್ಕಿ ಆಗುವಿರಿ!

By: Hemu
Subscribe to Boldsky

ವೈನ್ ಕುಡಿಯುವವರೇ ಎಚ್ಚರ. ಯಾಕೆಂದರೆ ವೈನ್ ತಯಾರಿಸುವ ವಿಧಾನದ ಬಗ್ಗೆ ನೀವು ಕೇಳಿದರೆ ಬೆಚ್ಚಿ ಬೀಳಬಹುದು ಮತ್ತು ಇನ್ನು ಮುಂದಕ್ಕೆ ವೈನ್ ಸೇವಿಸುವುದನ್ನೇ ಬಿಟ್ಟು ಬಿಡಬಹುದು! ವೈನ್ ತಯಾರಿಸಲು ಹಲವಾರು ಹಂತಗಳು ಬೇಕಾಗುತ್ತದೆ ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. 

ಪಾದರಸದಂತೆ ಸ್ವಚ್ಛವಾಗಿರುವ ಮತ್ತು ಕುಡಿದಾಗ ಆನಂದವನ್ನು ಉಂಟು ಮಾಡುವಂತಹ ವೈನ್ ಸೇವಿಸಲು ಪ್ರತಿಯೊಬ್ಬರು ಬಯಸುತ್ತಾರೆ. ಆದರೆ ಕ್ಯೂಬಾದಲ್ಲಿ ವೈನ್ ರುಚಿಯನ್ನು ಹೆಚ್ಚಿಸುವ ಸಲುವಾಗಿ ಕಾಂಡೋಮ್ ಬಳಸಲಾಗುತ್ತಿದೆಯಂತೆ. ವೈನ್ ಅನ್ನು ಒಂದು ಜಾಡಿಯಲ್ಲಿ ಹಾಕಿಟ್ಟು ಅದನ್ನು ಕಾಂಡೋಮ್‌ನಿಂದ ಮುಚ್ಚಲಾಗುತ್ತದೆಯಂತೆ. ಹಲವಾರು ವರ್ಷಗಳಿಂದಲೂ ತಮ್ಮದೇ ಆಗಿರುವ ವೈನ್ ತಯಾರಿ ಮಾಡಲು ಈ ಕ್ರಮವನ್ನು ಅನುಸರಿಸಿಕೊಂಡು ಹೋಗುತ್ತಿದ್ದಾರಂತೆ...  

ಓರೆಸ್ಟಿಸ್ ಎಸ್ಟೆವೆಝ್ ಮತ್ತು ಕುಟುಂಬದವರ ಸಂಶೋಧನೆ

ಓರೆಸ್ಟಿಸ್ ಎಸ್ಟೆವೆಝ್ ಮತ್ತು ಕುಟುಂಬದವರ ಸಂಶೋಧನೆ

ಓರೆಸ್ಟಿಸ್ ಎಸ್ಟೆವೆಝ್ ಮತ್ತು ಕುಟುಂಬದವರು ಗಾಜಿನ ಜಾಡಿಗೆ ದ್ರಾಕ್ಷಿ, ಶುಂಠಿ ಮತ್ತು ದಾಸವಾಳವನ್ನು ಹಾಕಿಡುತ್ತಾರೆ. ಜಾಡಿಯನ್ನು ಮುಚ್ಚುವ ಬದಲು ಇದಕ್ಕೆ ಕಾಂಡೋಮ್ ಹಾಕಿ ಮುಚ್ಚುತ್ತಾರೆ. ಇದು ವೈನ್ ತಯಾರಿಸುವಂತಹ ಅಸಾಮಾನ್ಯ ಪ್ರಕ್ರಿಯೆಯಾಗಿದೆ.

ಭಾರೀ ವ್ಯಾಪಾರ!

ಭಾರೀ ವ್ಯಾಪಾರ!

ಈ ರೀತಿಯ ವೈನ್ ನಿಂದಾಗಿ ಈಗ ಭಾರೀ ವ್ಯಾಪಾರವನ್ನು ಓರೆಸ್ಟಿಸ್ ಎಸ್ಟೆವೆಝ್ ಮತ್ತು ಕುಟುಂಬದವರು ಪಡೆದಿದ್ದಾರೆ. ಸಾವಿರಾರು ಗ್ಯಾಲನ್ ಗಳಷ್ಟು ವೈನ್ ನ್ನು ಇವರು ತಯಾರಿಸುತ್ತಾರೆ. ಸೀಬೆಕಾಯಿ, ಕೆಲವೊಂದು ಸಸ್ಯ ಮತ್ತು ಗೆಣಸಿನ ವೈನ್ ಕೂಡ ತಯಾರಿಸುತ್ತಾರೆ.

ಕಾಂಡೋಮ್ ನಿಧಾನವಾಗಿ ಉಬ್ಬುತ್ತಾ ಹೋಗುವುದು

ಕಾಂಡೋಮ್ ನಿಧಾನವಾಗಿ ಉಬ್ಬುತ್ತಾ ಹೋಗುವುದು

ವೈನ್ ತಯಾರಿಸಲು ಹಾಕಿರುವಂತಹ ಹಣ್ಣುಗಳು ಕೆಟ್ಟುಹೋಗಿ ಗ್ಯಾಸ್ ಉತ್ಪತ್ತಿ ಮಾಡಿದಾಗ ಕಾಂಡೋಮ್ ಉಬ್ಬಿಕೊಳ್ಳುತ್ತದೆ. ವೈನ್ ತಯಾರಾಗಿದೆಯಾ ಎಂದು ತಿಳಿಯಲು ಇದು ಸರಿಯಾದ ವಿಧಾನವಾಗಿದೆ.

ಒಳ್ಳೆಯ ವೈನ್ ಪತ್ತೆ ಮಾಡುವುದು ಹೇಗೆ?

ಒಳ್ಳೆಯ ವೈನ್ ಪತ್ತೆ ಮಾಡುವುದು ಹೇಗೆ?

ತಜ್ಞರ ಪ್ರಕಾರ ಕಾಂಡೋಮ್ ಉಬ್ಬಿಕೊಳ್ಳುವುದನ್ನು ನಿಲ್ಲಿಸಿ ಬಿಟ್ಟಾಗ ಜಾಡಿಯಲ್ಲಿ ಯಾವುದೇ ಗ್ಯಾಸ್ ಇಲ್ಲವೆಂದು ತಿಳಿಯಬಹುದಂತೆ, ಹಾಗೂ ಈ ವೇಳೆ ವೈನ್ ಅನ್ನು ಬಾಟಲಿಗೆ ತುಂಬಬಹುದಂತೆ....

ವೈನ್ ತಯಾರಿ ದೀರ್ಘ ಪ್ರಕ್ರಿಯೆ

ವೈನ್ ತಯಾರಿ ದೀರ್ಘ ಪ್ರಕ್ರಿಯೆ

ಒಂದು ಜಾಡಿ ವೈನ್ ತಯಾರಿ ಮಾಡಲು ಸುಮಾರು ಒಂದು ತಿಂಗಳು ಅಥವಾ 45 ದಿನಗಳು ಬೇಕಾಗುತ್ತದೆ. ಇದರ ಬಳಿಕ ವೈನ್ ಅನ್ನು ಬಾಟಲಿಗಳಿಗೆ ತುಂಬಲಾಗುತ್ತದೆ. ಅಲ್ಲಿಂದ ಮನೆಗಳು ಹಾಗೂ ರೆಸ್ಟೋರೆಂಟ್ ಗಳಿಗೆ ಇದನ್ನು ಸರಬರಾಜು ಮಾಡಲಾಗುತ್ತದೆ. ಕಾಂಡೋಮ್ ವೈನ್ ಬಗ್ಗೆ ನಿಮ್ಮ ಅನಿಸಿಕೆಗಳಿದ್ದರೆ ಕಮೆಂಟ್ ಬಾಕ್ಸ್‌ಗೆ ಹಾಕಿಬಿಡಿ...

Image Courtesy

English summary

Cuban Uses Condoms, Tropical Fruit To Make Own Brand Of Wine

Have you heard about filling up jars with ingredients and later covering it with condoms to make the best quality wine? Well, this is not a joke, but an actual practice that is making this man pretty famous with his style of fermenting the ingredients in a jar while the lid is covered with condoms!
Subscribe Newsletter