ಕಲ್ಲಂಗಡಿ ಬೀಜಗಳನ್ನು ಹಾಕಿ ಬೇಯಿಸಿದ ನೀರು-ಆಯಸ್ಸು ನೂರು!

By: Hemanth
Subscribe to Boldsky

ತಡೆಯಲು ಸಾಧ್ಯವಾಗದಂತಹ ಬೇಸಿಗೆ ಕಾಲ ಯಾವಾಗ ಕೊನೆಗೊಳ್ಳುತ್ತದೆಯಾ ಎನ್ನುವ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಾ ಇದೆ. ಬಿಸಿಲಿನ ಬೇಗೆಯಲ್ಲಿ ದೇಹವು ಬೇಯುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಸಮಯದಲ್ಲಿ ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿದೆ. ದೇಹದಲ್ಲಿ ನೀರಿನಾಂಶ ಕಡಿಮೆ ಇದ್ದಷ್ಟು ನಿರ್ಜಲೀಕರಣದಿಂದ ಬಳಲುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ. ಬೇಸಿಗೆ ಕಾಲದಲ್ಲೇ ಸಿಗುವಂತಹ ಕೆಲವೊಂದು ಹಣ್ಣುಗಳು ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.    ಕಲ್ಲಂಗಡಿ ಹಣ್ಣಿನ ಬೀಜದ ಪ್ರಯೋಜನಗಳನ್ನು ಕೇಳಿದರೆ ಅಚ್ಚರಿ ಪಡುವಿರಿ!

ಇದರಲ್ಲಿ ಒಂದು ಪ್ರಮುಖ ಹಣ್ಣೆಂದರೆ ಕಲ್ಲಂಗಡಿ ಹಣ್ಣು. ಕಲ್ಲಂಗಡಿ ಹಣ್ಣಿನಲ್ಲಿರುಷ್ಟು ನೀರಿನಾಂಶವು ಬೇರೆ ಯಾವುದೇ ಹಣ್ಣಿನಲ್ಲಿಲ್ಲ. ಇದನ್ನು ಸೇವಿಸಿದರೆ ದೇಹದಲ್ಲಿನ ತೇವಾಂಶ ಕಾಪಾಡಿಕೊಳ್ಳಬಹುದು. ಆದರೆ ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿ ಇನ್ನಷ್ಟು ಪೋಷಕಾಂಶಗಳು ಲಭ್ಯವಿದೆ. ಇದನ್ನು ಬೇಯಿಸಿ ಸೇವಿಸಿದಾಗ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳು ಆಗಲಿದೆ.  ಕಲ್ಲಂಗಡಿ ಹಣ್ಣಿನ ಬೀಜಗಳ ಸ್ಪೆಷಾಲಿಟಿ ಒಂದೇ ಎರಡೇ

ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಬೇಯಿಸಿದ ನೀರನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಿದಾಗ, ಖನಿಜಾಂಶಗಳು, ವಿಟಮಿನ್‌ಗಳು ಮತ್ತು ಹಲವಾರು ಔಷಧೀಯ ಗುಣಗಳು ದೇಹಕ್ಕೆ ಲಭ್ಯವಾಗಲಿದೆ. ಅಲ್ಲದೆ ಕಲ್ಲಂಗಡಿ ಬೀಜವು ಹಲವಾರು ರೋಗಗಳನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಬೇಯಿಸಿ ಸೇವಿಸಿದಾಗ ಯಾವೆಲ್ಲಾ ಲಾಭಗಳು ಸಿಗಲಿದೆ ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ....   

ಮಧುಮೇಹ ನಿಯಂತ್ರಣ

ಮಧುಮೇಹ ನಿಯಂತ್ರಣ

ಕಲ್ಲಂಗಡಿ ಹಣ್ಣಿನ ಚಹಾವನ್ನು ಕುಡಿದರೆ ಅದು ಮಧುಮೇಹವನ್ನು ನಿಯಂತ್ರಣ ಮಾಡಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಒಂದು ಹಿಡಿಯಷ್ಟು ಜಜ್ಜಿದ ಕಲ್ಲಂಗಡಿ ಬೀಜಗಳನ್ನು ಒಂದು ಲೀಟರ್ ನೀರಿನಲ್ಲಿ ಸರಿಯಾಗಿ 15 ನಿಮಿಷ ಕಾಲ ಕುದಿಸಿ. ಮೂರು ದಿನಗಳ ಕಾಲ ಇದನ್ನು ಸೇವನೆ ಮಾಡಿ ಮತ್ತು ಒಂದು ದಿನ ವಿಶ್ರಾಂತಿ ಕೊಡಿ. ಮತ್ತೆ ಹೀಗೆ ಪುನರಾವರ್ತಿಸಿ. ನಾವು ಹೇಳುವ ಈ ಟಿಪ್ಸ್ ಅನುಸರಿಸಿದರೆ-ಮಧುಮೇಹ ನಿಯಂತ್ರಿಸಬಹುದು

ಆರೋಗ್ಯಕಾರಿ ಹೃದಯಕ್ಕೆ

ಆರೋಗ್ಯಕಾರಿ ಹೃದಯಕ್ಕೆ

ನಿಮಗೆ ಹೃದಯವು ಆರೋಗ್ಯಕಾರಿಯಾಗಿರಬೇಕೆಂದಾದರೆ ಕಲ್ಲಂಗಡಿ ಬೀಜಗಳನ್ನು ಬೇಯಿಸಿಕೊಳ್ಳಿ ಮತ್ತು ಅದರ ನೀರನ್ನು ನಿಯಮಿತವಾಗಿ ಸೇವಿಸಿ. ಈ ಮನೆಮದ್ದನ್ನು ಪರೀಕ್ಷಿಸಲಾಗಿದೆ ಮತ್ತು ಇದು ಹೃದಯದ ಅರೋಗ್ಯಕ್ಕೆ ಒಳ್ಳೆಯದು ಎಂದು ಸಾಬೀತಾಗಿದೆ. ಕಲ್ಲಂಗಡಿ ಬೀಜದಲ್ಲಿ ಇರುವಂತಹ ಮೆಗ್ನಿಶಿಯಂ ಹೃದಯವನ್ನು ಕಾಪಾಡುತ್ತದೆ. ಹೃದಯದ ಆರೋಗ್ಯಕ್ಕೆ ನೈಸರ್ಗಿಕ ಮದ್ದು, ತಪ್ಪದೇ ಅನುಸರಿಸಿ

ಸುಂದರ ಕೂದಲು

ಸುಂದರ ಕೂದಲು

ಕಲ್ಲಂಗಡಿ ಬೀಜಗಳಿಂದ ನಿಮಗೆ ಬೇಕಾದಂತಹ ಸುಂದರ ಹಾಗೂ ಬಲಿಷ್ಠ ಕೂದಲನ್ನು ಪಡೆಯಬಹುದು. ಕಲ್ಲಂಗಡಿ ಬೀಜಗಳನ್ನು ಬೇಯಿಸಿದ ನೀರನ್ನು ಕುಡಿದರೆ ಕೂದಲಿಗೆ ಹಾನಿಯಾಗುವುದು ಮತ್ತು ತುರಿಕೆಯನ್ನು ಉಂಟು ಮಾಡುವ ತಲೆಬುರುಡೆಯನ್ನು ತಡೆಯಬಹುದು.

ಕಾಂತಿಯುತ ತ್ವಚೆಗಾಗಿ

ಕಾಂತಿಯುತ ತ್ವಚೆಗಾಗಿ

ಕಲ್ಲಂಗಡಿ ಬೀಜಗಳಲ್ಲಿ ಇರುವಂತಹ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್‌ಗಳು ನೆರಿಗೆ ರಹಿತ ತ್ವಚೆಯನ್ನು ನೀಡಲಿದೆ. ಕಲ್ಲಂಗಡಿ ಬೀಜಗಳಿಂದ ಮಾಡಿದಂತಹ ಚಹಾ ಅಥವಾ ಅದನ್ನು ಬೇಯಿಸಿದ ನೀರನ್ನು ಕುಡಿಯುವುದರಿಂದ ಕಾಂತಿಯುತ ತ್ವಚೆ ಪಡೆಯಬಹುದು.

ರಕ್ತದೊತ್ತಡ ನಿಯಂತ್ರಿಸುವುದು

ರಕ್ತದೊತ್ತಡ ನಿಯಂತ್ರಿಸುವುದು

ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಕಲ್ಲಂಗಡಿ ಬೀಜಗಳು ಅದ್ಭುತವನ್ನು ಮಾಡಲಿದೆ. ರಕ್ತದೊತ್ತಡವನ್ನು ನಿಯಂತ್ರಿಸುವ ಹಾಗೂ ಸಮತೋಲನದಲ್ಲಿ ಇಡುವಂತಹ ಅರ್ಜಿನೈನ್ ಎನ್ನುವ ಅಂಶವು ಕಲ್ಲಂಗಡಿ ಬೀಜಗಳಲ್ಲಿ ಇದೆ. ರಕ್ತನಾಳಗಳು ಕುಗ್ಗುವುದನ್ನು ಇದು ತಡೆಯುತ್ತದೆ. ನಂಬಲೇಬೇಕು, ಮಾತ್ರೆಯ ಹಂಗಿಲ್ಲದೇ 'ಬಿಪಿ' ನಿಯಂತ್ರಣ!

ಬಲಿಷ್ಠ ಮೂಳೆ ಹಾಗೂ ಅಂಗಾಂಶಗಳು

ಬಲಿಷ್ಠ ಮೂಳೆ ಹಾಗೂ ಅಂಗಾಂಶಗಳು

ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಮಿನೋ ಆಮ್ಲಗಳಾದ ಅರ್ಜಿನೈನ್ ಮತ್ತು ಲೈಸಿನ್ ಅಂಶವು ಅಗತ್ಯವಾಗಿ ಬೇಕು. ಕಲ್ಲಂಗಡಿ ಬೀಜಗಳಲ್ಲಿ ಪ್ರಮುಖವಾಗಿರುವ ಅಮಿನೋ ಆಮ್ಲಗಳಿವೆ ಮತ್ತು ಇದು ಚಯಾಪಚಾಯ ಕ್ರಿಯೆಯನ್ನು ಹೆಚ್ಚಿಸುವುದು ಮತ್ತು ಮೂಳೆಗಳು ಹಾಗೂ ಅಂಗಾಂಶಗಳನ್ನು ಬಲಗೊಳಿಸುವುದು.

ಸರಿಯಾದ ನರ ವ್ಯವಸ್ಥೆ

ಸರಿಯಾದ ನರ ವ್ಯವಸ್ಥೆ

ಕಲ್ಲಂಗಡಿ ಬೀಜದಲ್ಲಿ ವಿಟಮಿನ್ ಬಿ, ನಿಯಾಸಿನ್, ಫೋಲೆಟ್, ಥೈಮೆನ್, ಪ್ಯಾಂಥೋಥೆನಿಕ್ ಆಮ್ಲ ಮತ್ತು ವಿಟಮಿನ್ ಬಿ6 ಇದೆ. ನರವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಲು ನಿಯಾಸಿನ್ ಅದ್ಭುತವಾಗಿ ಕೆಲಸ ಮಾಡಲಿದೆ.

ಪ್ರತಿರೋಧಕ ಶಕ್ತಿ ಉತ್ತಮಪಡಿಸುವುದು

ಪ್ರತಿರೋಧಕ ಶಕ್ತಿ ಉತ್ತಮಪಡಿಸುವುದು

ಕಲ್ಲಂಗಡಿ ಬೀಜದಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ಲಭ್ಯವಿದೆ. ಇದು ದೇಹದಲ್ಲಿನ ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಇದು ದೇಹದ ಪ್ರತಿರೋಧಕ ಶಕ್ತಿಯನ್ನು ಸರಿಯಾಗಿಟ್ಟುಕೊಂಡು ವಿವಿಧ ಕಾಯಿಲೆಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಕಲ್ಲಂಗಡಿ ಬೀಜಗಳನ್ನು ಬೇಯಿಸಿದ ನೀರನ್ನು ಕುಡಿದರೆ ಆರೋಗ್ಯಕಾರಿ ಲಾಭ ಪಡೆಯಬಹುದು.

English summary

Watermelon Seeds & Drink The Water; The Result Will Shock You!

we will talk about some of the health benefits of boiling watermelon seeds and drinking the water. Usually, the black seeds of watermelon compliment the red colour of the fruit. Watermelon seeds are extremely effective in preventing and curing many diseases like high blood pressure, heart issues, poor brain functions and kidney stones. Now let's look into some of the health benefits of watermelon seeds:
Subscribe Newsletter