For Quick Alerts
ALLOW NOTIFICATIONS  
For Daily Alerts

ಇಂತಹ ಲಕ್ಷಣಗಳು ಕಂಡುಬಂದರೆ 'ಕಿಡ್ನಿ' ಯ ಸಮಸ್ಯೆಯಿದೆ ಎಂದರ್ಥ!

ಸಾಕಷ್ಟು ಜನರಿಗೆ ಕಿಡ್ನಿ ತೊಂದರೆ ನಿಧಾನವಾಗಿ ಹಾನಿ ಮಾಡುತ್ತದೆ ಎಂಬುದು ತಿಳಿದಿಲ್ಲ.ಕಿಡ್ನಿ ತೊಂದರೆ ಉಲ್ಬಣಗೊಳ್ಳುವವರೆಗೆ ಯಾವುದೇ ಲಕ್ಷಣಗಳನ್ನು ನೀಡುವುದಿಲ್ಲ. ಕಿಡ್ನಿ ತೊಂದರೆ ಕಂಡು ಬಂದರೆ ಆದಷ್ಟು ಬೇಗ ಗುರುತಿಸುವುದು ಸೂಕ್ತ.

By Hemanth
|

ಒತ್ತಡದ ಜೀವನ ಶೈಲಿಯ ಪರಿಣಾಮವೋ ಏನೋ ಗೊತ್ತಿಲ್ಲ, ದೇಹದಲ್ಲಿ ಸಣ್ಣ ಬದಲಾವಣೆಗಳು ಕಂಡುಬಂದರೂ ನಾವು ಅದನ್ನು ಸಂಪೂರ್ಣವಾಗಿ ಕಡೆಗಣಿಸುತ್ತೇವೆ. ಆದರೆ ಇಂತಹ ನಿರ್ಲಕ್ಷ್ಯದಿಂದ ಮುಂದೆ ದೊಡ್ಡ ಸಮಸ್ಯೆ ಎದುರಾಗಬಹುದು. ಇದರಿಂದ ದೇಹದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡರೂ ತಕ್ಷಣ ವೈದ್ಯರಲ್ಲಿಗೆ ತೆರಳಿ ಅದನ್ನು ಪರೀಕ್ಷಿಸಿಕೊಳ್ಳಬೇಕು. 'ಕಿಡ್ನಿ'ಗೆ ತಗಲುವ ಸೋಂಕನ್ನು ಗುಣಪಡಿಸುವ ಮನೆಮದ್ದುಗಳು

ಹೆಚ್ಚು ತಡ ಮಾಡಿದರೆ ದೇಹದ ಒಳಗಿನ ಕೆಲವೊಂದು ಅಂಗಗಳು ವೈಫಲ್ಯವಾಗುವ ಸಾಧ್ಯತೆಗಳು ಇವೆ. ದೇಹದ ಒಳಗಿನ ಕೆಲವೊಂದು ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದರ ಲಕ್ಷಣಗಳು ಇದಾಗಿರಬಹುದು. ಬೋಲ್ಡ್ ಸ್ಕೈ ಈ ಲೇಖನದಲ್ಲಿ ದೇಹದ ಪ್ರಮುಖ ಅಂಗವಾಗಿರುವ ಕಿಡ್ನಿ ವೈಫಲ್ಯದ ಬಗ್ಗೆ ನಿಮಗೆ ತಿಳಿಸಿಕೊಡಲಿದೆ. ಕಿಡ್ನಿ ವೈಫಲ್ಯದ ಲಕ್ಷಣಗಳು ಯಾವುದು ಎಂದು ಈ ಲೇಖನವು ಸವಿಸ್ತಾರವಾಗಿ ತಿಳಿಸಲಿದೆ...

ಕಾಡುವ ನಿಶ್ಯಕ್ತಿ

ಕಾಡುವ ನಿಶ್ಯಕ್ತಿ

ನಿಮಗೆ ಯಾವಾಗಲೂ ನಿಶ್ಯಕ್ತಿ ಕಾಡುತ್ತಾ ದೇಹದಲ್ಲಿ ಶಕ್ತಿ ಕಡಿಮೆಯಾದರೆ ನಿಮ್ಮನ್ನೊಮ್ಮೆ ಪರೀಕ್ಷಿಸಿಕೊಳ್ಳಿ. ರಕ್ತದಲ್ಲಿ ವಿಷ ಹಾಗೂ ಕಲ್ಮಶಗಳು ತುಂಬಿಕೊಳ್ಳುವುದು ಕಿಡ್ನಿ ವೈಫಲ್ಯ. ಇದರಿಂದ ನಿಶ್ಯಕ್ತಿ ಮತ್ತು ಬಲಹೀನತೆ ಉಂಟಾಗುತ್ತದೆ.ಕಿಡ್ನಿ ಕಲ್ಲಿನ ಸಮಸ್ಯೆಗೆ ಗಿಡಮೂಲಿಕೆಗಳ ನಲ್ಮೆಯ ಆರೈಕೆ

ಚರ್ಮದಲ್ಲಿ ತುರಿಕೆ ಮತ್ತು ಗುಳ್ಳೆಗಳು

ಚರ್ಮದಲ್ಲಿ ತುರಿಕೆ ಮತ್ತು ಗುಳ್ಳೆಗಳು

ರಕ್ತದಲ್ಲಿ ವಿಷಕಾರಿ ಅಂಶಗಳು ಹೆಚ್ಚಾದಾಗ ಇದು ಚರ್ಮದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದರಿಂದ ಚರ್ಮ ಕೆಂಪಾಗುವುದು ಹಾಗೂ ತುರಿಕೆ ಉಂಟಾಗುತ್ತದೆ.

ವಾಕರಿಕೆ ಮತ್ತು ವಾಂತಿ

ವಾಕರಿಕೆ ಮತ್ತು ವಾಂತಿ

ರಕ್ತದಲ್ಲಿ ಅತಿಯಾಗಿ ವಿಷವು ತುಂಬಿದಾಗ ನಿಮಗೆ ಯಾವಾಗಲೂ ವಾಕರಿಕೆ ಬಂದಂತೆ ಆಗುತ್ತದೆ ಮತ್ತು ವಾಂತಿ ಕೂಡ ಆಗಬಹುದು.

ಆಗಾಗ ಮೂತ್ರಶಂಕೆ

ಆಗಾಗ ಮೂತ್ರಶಂಕೆ

ರಾತ್ರಿ ವೇಳೆ ಆಗಾಗ ಮೂತ್ರಶಂಕೆಯಾಗುವುದು ಕಿಡ್ನಿ ವೈಫಲ್ಯದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ.ಕಿಡ್ನಿ ಕಲ್ಲು ಕರಗಿಸುವ, ಹಿತ್ತಲ ಗಿಡದ ಮದ್ದು

ಕಣ್ಣು ಕೆಂಪಗೆ ಆಗುವುದು

ಕಣ್ಣು ಕೆಂಪಗೆ ಆಗುವುದು

ಕಿಡ್ನಿ ವೈಫಲ್ಯದಿಂದ ಮೂತ್ರದಲ್ಲಿ ಪ್ರೋಟೀನ್ ಹೊರಹೋಗುವುದು ಹೆಚ್ಚಾಗುತ್ತದೆ. ದೇಹದಿಂದ ಹೆಚ್ಚಿನ ಪ್ರೋಟೀನ್ ಹೊರಹೋದಂತೆ ಕಣ್ಣುಗಳು ಊದಿಕೊಂಡು ಕೆಂಪಗೆ ಆಗುವುದು ಸಾಮಾನ್ಯವಾಗುತ್ತದೆ.

ಕೈ ಹಾಗೂ ಪಾದ ಊದಿಕೊಳ್ಳುವುದು

ಕೈ ಹಾಗೂ ಪಾದ ಊದಿಕೊಳ್ಳುವುದು

ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾದಾಗ ದೇಹದಲ್ಲಿ ಹೆಚ್ಚಿನ ಸೋಡಿಯಂ ಉಳಿದುಕೊಳ್ಳುತ್ತದೆ. ಇದರಿಂದ ಪಾದ ಹಾಗೂ ಕೈಗಳು ಉದಿಕೊಳ್ಳಲು ಆರಂಭವಾಗುತ್ತದೆ. ಇದು ಕಿಡ್ನಿ ವೈಫಲ್ಯದ ಲಕ್ಷಣಗಳಲ್ಲಿ ಒಂದಾಗಿದೆ.

ಮೂತ್ರದ ಸಮಸ್ಯೆ

ಮೂತ್ರದ ಸಮಸ್ಯೆ

ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾಗ ಮೂತ್ರದ ಬಣ್ಣವನ್ನು ನೀವು ಪರಿಶೀಲನೆ ನಡೆಸಬೇಕಾಗುತ್ತದೆ. ನಿಮ್ಮ ಮೂತ್ರವು ಗಾಢ ವರ್ಣಕ್ಕೆ ತಿರುಗಿದೆ ಎಂದಾದಲ್ಲಿ ಕಿಡ್ನಿ ಸಮಸ್ಯೆ ಇದೆ ಎಂದಾಗಿದೆ.

ಹಸಿವು ಇಲ್ಲದಿರುವುದು

ಹಸಿವು ಇಲ್ಲದಿರುವುದು

ದೇಹದಲ್ಲಿರುವ ತ್ಯಾಜ್ಯಗಳನ್ನು ಕಿಡ್ನಿಯು ಫಿಲ್ಟರ್ ಮಾಡುವಲ್ಲಿ ವಿಫಲಗೊಂಡಾಗ ನಿಮಗೆ ಹಸಿವು ಕಾಣಿಸುವುದಿಲ್ಲ. ಅಂತೆಯೇ ಬಾಯಿಯಲ್ಲಿ ಕೆಟ್ಟ ವಾಸನೆ ಬರುತ್ತದೆ.

English summary

Symptoms Of Kidney Failure That You Need To Be Aware Of

There are many factors that can affect the kidney health and function like exposure to environmental pollutants, certain acute and chronic diseases, severe dehydration and kidney trauma.So, continue reading this article to know more about the top symptoms of kidney failure
X
Desktop Bottom Promotion