ನೆಗಡಿಯೇ ಪ್ಲೀಸ್ ದೂರ ಇರು, ಈ ತಪ್ಪು ನಾನು ಮಾಡೋಲ್ಲ!

By: Anuradha Yogesh
Subscribe to Boldsky

'ಬುಗಡಿಯಂಥ ವಸ್ತ(ಒಡವೆ) ಇಲ್ಲ, ನೆಗಡಿಯಂತ ಜಡ್ಡಿಲ್ಲ'. ಉತ್ತರ ಕರ್ನಾಟಕದ ಈ ಗಾದೆನುಡಿ ಕೇಳಿದ್ದೀರಾ? ಅಂದರೆ ಬುಗಡಿಯಂಥ ಸುಂದರ ಒಡವೆಯಿಲ್ಲ, ನೆಗಡಿಯಂಥ ರೋಗವಿಲ್ಲ ಎಂದರ್ಥ. ವಾರಪೂರ್ತಿ ಕಛೇರಿ ಕೆಲಸ ಮಾಡಿ, ಅಬ್ಬ ಈ ವೀಕೆಂಡಾದ್ರೂ ಸ್ವಲ್ಪ ಎಲ್ಲಾದರೂ ಸುತ್ತಿ ಸುಧಾರಿಸಿಕೊಳ್ಳೋಣ ಎಂದುಕೊಂಡಿರುತ್ತೀರಿ, ಆದರೆ ಧುತ್ತನೆ ಶುಕ್ರವಾರ ರಾತ್ರಿ ಗಂಟಲು ಕೆರೆತ ಶುರುವಾದರೆ ಎಷ್ಟು ಕೋಪ ಬರಲಿಕ್ಕಿಲ್ಲ ಹೇಳಿ? 

ಏನು ಬರೀ ನೆಗಡಿಯಲ್ವ ಹೋಗುತ್ತೆ ಬಿಡು ಅನ್ನಬೇಡಿ, ಉಲ್ಬಣಗೊಂಡು ಜ್ವರ ಕೂಡ ಕಾಣಿಸಿಕೊಳ್ಳಬಹುದು. ನಿಮ್ಮ ಕಾರ್ಯಕ್ರಮವೆಲ್ಲ ಕ್ಯಾನ್ಸಲ್ ಆಗಿ, ಮನೆಯವರೆಲ್ಲರ ಮೂಡ್ ಆಫ್ ಅಲ್ವಾ?

ನೆಗಡಿಯಿಂದ ಅನುಭವಿಸದ ತೊಂದೆರೆಗಳಿವೆಯೆ? ಕೋಲ್ಡ್ರಿಂಕ್ಸ್ ಕುಡಿಯಲಾಗಲ್ಲ, ಕರಿದ ತಿಂಡಿ ದೂರವಿಡಬೇಕು, ಅಷ್ಟೇ ಅಲ್ಲ ಏರ್ ಕಂಡಿಶನ್ ತಡೆಯಲು ಸಾಧ್ಯವೇ ಇಲ್ಲ. ಸುಸ್ತು, ತಲೆನೋವು, ಸೀನು, ಜ್ವರ, ಮೈ-ಕೈ ನೋವುಗಳು ವ್ಯಕ್ತಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತದೆ. 

Cold

ನೆಗಡಿ ಹರಡುವ ರೋಗಾಣುಗಳು ಒಂದಲ್ಲ ಎರಡಲ್ಲ ಸಾವಿರಾರು ತರಹದ್ದಿವೆ. ಇವು ನೀರಿನಿಂದ ಇಲ್ಲವೆ ಗಾಳಿಯಿಂದ ನಮ್ಮ ದೇಹ ಸೇರಿಕೊಳ್ಳಬಹುದು. ನೆಗಡಿಗೆ ಹಲವಾರು ಕಾರಣಗಳಿವೆ, ಪ್ರಮುಖವಾದ್ದವೆಂದರೆ ಅತಿಯಾದ ಶೀತ ಪದಾರ್ಥಗಳ ಸೇವನೆ, ಸ್ವಚ್ಛತೆ ಇರದ ಸ್ಥಳಗಳಲ್ಲಿ ಊಟ ಮಾಡುವದು, ಈಗಾಗಲೆ ನೆಗಡಿ ಪೀಡಿತ ವ್ಯಕ್ತಿಯ ಜೊತೆಗಿನ ಸಂಪರ್ಕ ಇತ್ಯಾದಿ.

ಕೆಲವರಿಗೆ ನೆಗಡಿ ತನ್ನಷ್ಟಕ್ಕೆ ತಾನೇ ಗುಣಮುಖವಾದರೆ, ಇನ್ನು ಕೆಲವರಿಗೆ ಆಂಟಿಬೈಯೊಟಿಕ್ಸ್ ತೆಗೆದುಕೊಳ್ಳಲೇ ಬೇಕಾಗುತ್ತದೆ. ಅದು ಅವರವರ ರೋಗನಿರೋಧಕತೆಯ ಸಾಮರ್ಥ್ಯದ ಮೇಲೆ ಅವಲಂಬಿಸಿದೆ. ನಮಗೇ ಅರಿವಿಲ್ಲದೆ ನಾವು ಮಾಡುವ ಕೆಲವೊಂದು ತಪ್ಪು ಅಭ್ಯಾಸಗಳಿಂದಲೂ ನೆಗಡಿ ಬರುತ್ತದೆಯೆಂದರೆ ನಂಬುವಿರಾ? ಇದು ಸತ್ಯ, ಬೇಕೆಂದರೆ ಓದಿ ನೋಡಿ ನಿಮಗೇ ಗೊತ್ತಾಗುತ್ತದೆ.

hand wash

ಮೇಲಿಂದ ಮೇಲೆ ಕೈ ತೊಳೆಯದೆ ಇರುವುದು

ನಮಗೇ ಗೊತ್ತಾಗದಂತೆ ಅನೇಕ ರೋಗಾಣುಗಳು ನಮ್ಮ ಕೈಗೆ ಅಂಟಿಕೊಂಡಿರುತ್ತವೆ. ಅದೇ ಕೈಗಳಿಂದ ಮೂಗು, ಬಾಯಿ ಒರೆಸಿಕೊಂಡಾಗ ಕೈಯಲ್ಲಿನ ರೋಗಾಣುಗಳು ದೇಹವನ್ನು ಸೇರಿ ನೆಗಡಿಗೆ ಆಹ್ವಾನ ನೀಡುತ್ತವೆ.

cycling

ಕಛೇರಿ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಲಿಫ್ಟ್ ಉಪಯೋಗಿಸುವದು

ಲಿಫ್ಟ್ ಒಂದು ಚಿಕ್ಕ ಡಬ್ಬಿಯಂತಿರುತ್ತದೆ. ಇದರಲ್ಲಿ ಜನರು ಒಬ್ಬಿರಿಗೊಬ್ಬರು ಅತ್ಯಂತ ಸನಿಹದಲ್ಲಿ ನಿಲ್ಲಬೇಕಾಗುತ್ತದೆ. ಯಾರಾದರು ಶೀತ ಬಂದಿರುವ ವ್ಯಕ್ತಿಯ ಬಳಿ ನಿಂತುಕೊಂಡರೆ ಸಾಕು, ಲಿಫ್ಟ್‌ನಿಂದ ಹೊರಬರುವಾಗ ನೀವು ಸೀನುತ್ತಿರುತ್ತೀರ.

ಸಾಕಷ್ಟು ವ್ಯಾಯಾಮ ಮಾಡದಿರುವದು

ವ್ಯಾಯಾಮದಿಂದ ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈಗಿನ ಅವಸರದ ಜೀವನದಲ್ಲಿ ಯಾರಿಗೂ ವ್ಯಾಯಾಮಕ್ಕೆ ಪುರುಸೊತ್ತೇ ಇಲ್ಲ. ಹೀಗಿರುವಾಗ ರೋಗ ನಿರೋಧಕತೆ ಕಡಿಮೆಯಾಗಿ, ಬೇಗ ನೆಗಡಿಯ ಸೋಂಕಿಗೆ ಒಳಗಾಗಬೇಕಾಗುತ್ತದೆ.

wear socks

ಪಾದಗಳು ತಣ್ಣಗಾಗುವದು

ಚಳಿಗಾಲ ಮತ್ತು ಮಳೆಗಾಲದಲ್ಲಿ ಪಾದಗಳ ಜೋಪಾನ ಅತಿ ಮುಖ್ಯ. ಪಾದಗಳಿಗೆ ತಂಪೇರಿದರೆ, ಇಡೀ ದೇಹಕ್ಕೆ ತಂಪು ಏರುತ್ತದೆ. ಇದರಿಂದ ಬೇಗನೆ ನೆಗಡಿಯ ಸೋಂಕಾಗುವದು. ಆದ್ದರಿಂದ ಸಾಕ್ಸ್ ಅಥವ ಸ್ಟಾಕಿಂಗ್ಸ್ ಹಾಕಿಕೊಂಡು ಪಾದಗಳ ಜೋಪಾನ ಮಾಡಬೇಕು.

Alcohol

ಮದ್ಯಪಾನ ಸೇವನೆ

ಮದ್ಯಪಾನದ ಅಭ್ಯಾಸವೇ ಕೆಟ್ಟದ್ದು. ಅದರಲ್ಲೂ ನೀವು ದಿನನಿತ್ಯ ಸ್ವಲ್ಪ ಮದ್ಯಪಾನ ಮಾಡಿದರೂ ಸಾಕು, ರೋಗ ನಿರೋಧಕತೆ ಕಡಿಮೆಗೊಂಡು ಬೇಗನೆ ನೆಗಡಿಯ ಸೋಂಕಿಗೆ ಒಳಗಾಗುತ್ತೀರ. ಈ ಮೇಲೆ ಹೇಳಿದ ಐದು ವಿಚಾರಗಳ ಕಾಳಜಿ ತೆಗೊದುಕೊಂಡರೆ ಸಾಕು, ನೆಗಡಿ ನಿಮ್ಮ ತಂಟೆಗೆ ಬಂದರೆ ಕೇಳಿ. ಈ ಸಣ್ಣ ಪುಟ್ಟ ಒಳ್ಳೆಯ ಹವ್ಯಾಸಗಳನ್ನು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ರೂಢಿ ಮಾಡಿಸಿಬಿಟ್ಟರೆ ವೈದ್ಯರ ಭೇಟಿ ಮಾಡುವದು ಕಡಿಮೆಯಾಗುತ್ತದೆಯಲ್ಲವೆ??

English summary

surprising daily habits that increase the risk of common cold

There are a few antibiotics and herbal remedies which can be used to kill the bacteria and reduce the symptoms quickly. Now, there could be a number of daily habits that many of us follow, which could be increase our risk of developing common cold; here are a few of them!
Story first published: Monday, October 16, 2017, 23:40 [IST]
Subscribe Newsletter