Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಕಲ್ಲಂಗಡಿ ಜ್ಯೂಸ್: ಬೇಸಿಗೆಗೆ ದೇವರು ಕೊಟ್ಟಿರುವ ವರ!!
ಉರಿ ಬೇಸಿಗೆ ಸಮಯಕ್ಕಿಂತ ಮೊದಲೇ ಶುರುವಾಗಿದೆ. ಈಗಾಗಲೇ ದೆಹಲಿ ಹಾಗೂ ಕೆಲವೊಂದು ಕಡೆಗಳಲ್ಲಿ ಉರಿಬಿಸಿಲಿನಿಂದ ಪ್ರಾಣ ಕಳೆದುಕೊಂಡ ಬಗ್ಗೆ ಕೂಡ ಸುದ್ದಿಯಾಗಿದೆ. ಉಷ್ಣಾಂಶ 40 ಡಿಗ್ರಿಗಿಂತಲೂ ಹೆಚ್ಚಾದಾಗ ಹೊರಗಡೆ ಹೋಗುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಅದರಲ್ಲೂ ಪ್ರಮುಖವಾಗಿ ದೇಹದಲ್ಲಿ ಹೆಚ್ಚಿನ ನೀರಿನಾಂಶ ಇರುವಂತೆ ನೋಡಿಕೊಳ್ಳಬೇಕು. ನೀರಿನ ಅಂಶ ಕಡಿಮೆಯಾದಾಗ ದೇಹವು ಬೇಗನೆ ಬಿಸಿಲಿನ ತಾಪಕ್ಕೆ ಬಲಿಯಾಗುತ್ತದೆ. ಬಿರು ಬೇಸಿಗೆಗೆ ತಂಪಾದ ಮಸಾಲಾ ಕಲ್ಲಂಗಡಿ ಜ್ಯೂಸ್!
ನೀರಿನೊಂದಿಗೆ ಹಣ್ಣಿನ ಜ್ಯೂಸ್ ಇತ್ಯಾದಿಗಳನ್ನು ಕುಡಿಯುತ್ತಾ ಇರಬೇಕು. ಅದರಲ್ಲೂ ಕಲ್ಲಂಗಡಿ ಜ್ಯೂಸ್ ಬೇಸಿಗೆಗೆ ದೇವರು ಕೊಟ್ಟಿರುವ ವರ ಎಂದರೆ ತಪ್ಪಾಗಲಾರದು. ಯಾಕೆಂದರೆ ಕಲ್ಲಂಗಡಿಯಲ್ಲಿ ಇತರ ಹಣ್ಣುಗಳಿಗಿಂತ ಹೆಚ್ಚಿನ ನೀರಿನಾಂಶವಿದೆ. ಇಷ್ಟು ಮಾತ್ರವಲ್ಲದೆ ಬೆಟಾ ಕ್ಯಾರೋಟಿನ್, ವಿಟಮಿನ್ ಎ, ಬಿ1, ಬಿ6, ಸಿ, ಪೊಟಾಶಿಯಂ, ಮೆಗ್ನಿಶಿಯಂ, ಬಿಯೊಟಿನ್ ಇತ್ಯಾದಿಗಳಿವೆ. ಬಿಸಿಲಿನ ಝಳಕ್ಕೆ, ತಂಪುಣಿಸುವ ಕಲ್ಲಂಗಡಿ ಹಣ್ಣು
ಕಲ್ಲಂಗಡಿಯಲ್ಲಿ ಸುಮಾರು 92 ಶೇ. ನೀರಿನಾಂಶವಿರುವ ಕಾರಣದಿಂದಾಗಿ ಇದು ಬೇಸಿಗೆ ಹೇಳಿ ಮಾಡಿಸಿದ ಹಣ್ಣಾಗಿದೆ. ಉರಿ ಬಿಸಿಲಿನಿಂದ ದೂರ ಉಳಿಯಲು ಕಲ್ಲಂಗಡಿ ಹಣ್ಣನ್ನು ಹಾಗೆ ತಿನ್ನಬಹುದು ಅಥವಾ ಜ್ಯೂಸ್, ಸಲಾಡ್ ಮಾಡಿಕೊಂಡು ತಿನ್ನಬಹುದು. ಇದರಿಂದ ದೇಹವು ನಿರ್ಜಲೀಕರಣದಿಂದ ಬಳಲುವುದು ತಪ್ಪುತ್ತದೆ....

ತೇವಾಂಶದಿಂದ ಇಡುವುದು
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಿದರೆ ಅದರಲ್ಲಿ ಇರುವಂತಹ ಹೆಚ್ಚಿನ ನೀರಿನಾಂಶವು ದೇಹವನ್ನು ತೇವಾಂಶದಿಂದ ಇಡುವುದು. ಬೇಸಿಗೆಯಲ್ಲಿ ದೇಹದಲ್ಲಿನ ನೀರಿನಾಂಶವು ವೇಗವಾಗಿ ಕಡಿಮೆಯಾಗುತ್ತದೆ. ಕಲ್ಲಂಗಡಿ ಹಣ್ಣನ್ನು ಆಹಾರ ಕ್ರಮದಲ್ಲಿ ಸೇರಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ದೇಹದ ಕಲ್ಮಶ ಹೊರಹಾಕುವುದು
ಬೇಸಿಗೆ ಕಾಲದಲ್ಲಿ ಹೆಚ್ಚಿನ ಬೆವರು ಹೊರಹೋಗಿ ನೀರಿನಾಂಶವು ಕಡಿಮೆಯಾಗುವುದು. ಆದರೆ ಈ ವೇಳೆ ವಿಷವು ಸರಿಯಾಗಿ ಹೊರಹೋಗುವುದಿಲ್ಲ. ಹಲವಾರು ಪೋಷಕಾಂಶಗಳಿಂದ ಕೂಡಿರುವಂತಹ ಕಲ್ಲಂಗಡಿ ಹಣ್ಣು ನೈಸರ್ಗಿಕವಾಗಿ ದೇಹದ ಕಲ್ಮಶ ಹೊರಹಾಕಿ ಎಲ್ಲಾ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು. ದೇಹದಿಂದ ಕಲ್ಮಶ ಹೊರಹಾಕಲು ಸೇವಿಸಿ ಕಲ್ಲಂಗಡಿ ಸ್ಮೂತಿ

ಕಾಂತಿಯುತ ಚರ್ಮಕ್ಕಾಗಿ
ವಿಟಮಿನ್ ಎ ಹಾಗೂ ಸಿಯ ಕೊರತೆಯಿಂದ ನಿಮ್ಮ ಚರ್ಮವು ತುಂಬಾ ಒಣ ಹಾಗೂ ಚರ್ಮ ಎದ್ದುಬಂದಂತೆ ಕಾಣಬಹುದು. ಇದನ್ನು ನೈಸರ್ಗಿಕವಾಗಿ ನಿವಾರಣೆ ಮಾಡಬೇಕಾದರೆ ನಿಮ್ಮ ಆಹಾರ ಕ್ರಮದಲ್ಲಿ ಕಲ್ಲಂಗಡಿ ಹಣ್ಣನ್ನು ಸೇರಿಸಿಕೊಳ್ಳಿ. ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ. ಬೆಟಾ ಕ್ಯಾರೋಟಿನ್ ಮತ್ತು ಲೈಕೊಪೆನ್ ಸೂರ್ಯನಿಂದ ಅಗುವಂತಹ ಸುಟ್ಟ ಕಲೆಗಳನ್ನು ನಿವಾರಣೆ ಮಾಡುವುದು.

ಜೀರ್ಣಕ್ರಿಯೆ ಸುಧಾರಣೆ
ಬೇಸಿಗೆಯಲ್ಲಿ ಅತಿಯಾದ ಸೆಕೆಯಿಂದ ಹಸಿವು ಕೂಡ ಸರಿಯಾಗಿ ಆಗುವುದಿಲ್ಲ. ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ನೀರು ಮತ್ತು ನಾರಿನಾಂಶವು ಇರುವ ಕಾರಣದಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು. ಇದು ಕಲ್ಲಂಗಡಿಯ ಮತ್ತೊಂದು ಆರೋಗ್ಯ ಲಾಭವಾಗಿದೆ.

ಸುಂದರ ಕೂದಲಿಗಾಗಿ
ಉರಿ ಬಿಸಿಲಿನಲ್ಲಿ ಕೂದಲಿನ ಆರೈಕೆ ಬಗ್ಗೆ ತಲೆ ಚಿಂತೆಯಾಗಿದ್ದರೆ ಇದನ್ನು ಬಿಟ್ಟು ಕೇವಲ ಕಲ್ಲಂಗಡಿ ಹಣ್ಣನ್ನು ಸೇವಿಸುವತ್ತ ಗಮನಹರಿಸಿ. ಕಲ್ಲಂಗಡಿ ಹಣ್ಣಿನಲ್ಲಿರುವ ವಿಟಮಿನ್ ಸಿ ದೇಹವು ಕೆರ್ಟೈನ್ ಉತ್ಪತ್ತಿಸುವಂತೆ ಮಾಡುತ್ತದೆ. ಇದರಿಂದ ಕೂದಲು ತುಂಬಾ ಸುಂದರ ಹಾಗೂ ಬಲಗೊಳ್ಳುತ್ತದೆ.

ರಕ್ತದೊತ್ತಡ ನಿಯಂತ್ರಿಸುವುದು
ಕಲ್ಲಂಗಡಿಯು ರಕ್ತದೊತ್ತಡವನ್ನು ನಿವಾರಿಸುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತನಾಳಗಳನ್ನು ಸರಿಯಾಗಿಟ್ಟುಕೊಂಡು ರಕ್ತಚಲನೆಯು ಸರಿಯಾಗಿ ಆಗುವಂತೆ ಮಾಡುವುದು. ಇದರಿಂದ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಿ. ಕಲ್ಲಂಗಡಿ ಹಣ್ಣಿನ ಬೀಜದ ಪ್ರಯೋಜನಗಳನ್ನು ಕೇಳಿದರೆ ಅಚ್ಚರಿ ಪಡುವಿರಿ!



Click it and Unblock the Notifications
