For Quick Alerts
ALLOW NOTIFICATIONS  
For Daily Alerts

ಬಹುಪಯೋಗಿ 'ಹಸಿ ಬಟಾಣಿ', ಆರೋಗ್ಯದ ಕೀಲಿಕೈ....

ಹೆಚ್ಚಿನವರು ಬಟಾಣಿಗಳನ್ನು ಹಸಿಯಾಗಿ ತಿನ್ನಲು ಇಷ್ಟಪಡುವುದಿಲ್ಲ. ಒಂದು ವೇಳೆ ನೀವೂ ಇದೇ ರೀತಿಯ ಅಭಿಪ್ರಾಯವನ್ನು ಹೊಂದಿದ್ದರೆ ಈ ಲೇಖನ ಓದಿದ ಬಳಿಕ ನಿಮ್ಮ ಅಭಿಪ್ರಾಯ ಬದಲಾಗುವುದು ಮಾತ್ರ ಖಂಡಿತ...

By Manu
|

ಸಾಮಾನ್ಯವಾಗಿ ಒಂದೊಂದು ಋತುಮಾನದಲ್ಲಿ ಕೆಲವು ಫಲಗಳು ಒಮ್ಮೆಲೇ ಫಲಿತು ಮಾರುಕಟ್ಟೆಗೆ ಭಾರೀ ಸಂಖ್ಯೆಯಲ್ಲಿ ಮತ್ತು ಅಗ್ಗವಾಗಿ ಲಭ್ಯವಾಗುತ್ತವೆ. ಉದಾಹರಣೆಗೆ ಶೇಂಗಾ, ಮಾವು, ಹಲಸಿನ ಹಣ್ಣು ಇತ್ಯಾದಿ. ಅಂತೆಯೇ ಚಳಿಗಾಲ ಕಳೆಯುತ್ತಾ ಬಂದಂತೆ ಹಸಿರು ಬಟಾಣಿಯೂ ಯಥೇಚ್ಛವಾಗಿ ಸಿಗಲು ಪ್ರಾರಂಭವಾಗುತ್ತದೆ. ಹಸಿ ಬಟಾಣಿಯ ಆರೋಗ್ಯಕಾರಿ ಪ್ರಯೋಜನಗಳು

ಸಾಮಾನ್ಯವಾಗಿ ಬೆಳೆಗಾರರು ಮಾರುಕಟ್ಟೆಯ ಅಗತ್ಯದಷ್ಟು ಮಾತ್ರ ಬಿಡುಗಡೆ ಮಾಡಿ ಉಳಿದವನ್ನು ಒಣಗಿಸಿ ಇಡಿಯ ವರ್ಷ ಲಭ್ಯವಾಗುವಂತೆ ಸಂಗ್ರಹಿಸಿಡುತ್ತಾರೆ. ಆದರೆ ಒಣಗಿಸಿ ಬಳಿಕ ನೆನೆಸಿ ಬೇಯಿಸಿದ ಬಟಾಣಿ ಕಾಳುಗಳಲ್ಲಿ ಕೆಲವಾರು ಪೋಷಕಾಂಶಗಳು ನಷ್ಟವಾಗಿರುತ್ತವೆ. ಆದ್ದರಿಂದ ಸಾಧ್ಯವಾದಷ್ಟು ಹಸಿ ಬಟಾಣಿಗಳನ್ನು ಸೇವಿಸುವುದೇ ಹೆಚ್ಚು ಪ್ರಯೋಜನಕಾರಿಯಾಗಿದೆ. ಹೂಕೋಸು ಮತ್ತು ಹಸಿ ಬಟಾಣಿ ಬಾತ್

ಇಂದು ಈ ಹಸಿ ಬಟಾಣಿಗಳನ್ನು (ಹಸಿರು ಬಟಾಣಿ) ಸೇವಿಸುವುದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ. ಹೆಚ್ಚಿನವರು ಬಟಾಣಿಗಳನ್ನು ಹಸಿಯಾಗಿ ತಿನ್ನಲು ಇಷ್ಟಪಡುವುದಿಲ್ಲ. ಒಂದು ವೇಳೆ ನೀವೂ ಇದೇ ರೀತಿಯ ಅಭಿಪ್ರಾಯವನ್ನು ಹೊಂದಿದ್ದರೆ ಈ ಲೇಖನ ಓದಿದ ಬಳಿಕ ನಿಮ್ಮ ಅಭಿಪ್ರಾಯ ಬದಲಾಗುವುದು ಮಾತ್ರ ಖಂಡಿತ...

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಹಸಿ ಬಟಾಣಿಯಲ್ಲಿ ಫ್ಲೇವನಾಯ್ಡುಗಳು, ಆಲ್ಫಾ ಕೆರೋಟಿನ್, ಬೀಟಾ ಕೆರೋಟಿನ್‪ಗಳು ಹೇರಳವಾಗಿವೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಅಲ್ಲದೇ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ. ಒಟ್ಟಾರೆಯಾಗಿ ಈ ಎಲ್ಲವೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನು ಉತ್ತಮಗೊಳಿಸುತ್ತವೆ.

ಹೊಟ್ಟೆಯ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ

ಹೊಟ್ಟೆಯ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ

ಹಸಿ ಬಟಾಣಿಯಲ್ಲಿರುವ ಕೌಮೆಸ್ಟ್ರಾಲ್ (coumestrol) ಎಂಬ ಫೈಟೋ ನ್ಯೂಟ್ರಿಯೆಂಟ್ (ರೋಗ ಬರದಂತೆ ತಡೆಗಟ್ಟುವ ರಕ್ಷಕ) ಒಣಗಿಸಿದ ಬಳಿಕ ಗಾಳಿಯಲ್ಲಿ ಆವಿಯಾಗಿ ಬಿಡುತ್ತದೆ.

ಹೊಟ್ಟೆಯ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ

ಹೊಟ್ಟೆಯ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ

ಈ ರಕ್ಷಕ ಹಲವು ಬಗೆಯ ರೋಗಗಳನ್ನು ತಡೆಗಟ್ಟುವಲ್ಲಿ ಸಮರ್ಥನಾಗಿದ್ದು ವಿಶೇಷವಾಗಿ ಹೊಟ್ಟೆಯ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ. ಆದ್ದರಿಂದ ಹಸಿ ಬಟಾಣಿಗಳನ್ನು ಸಾಧ್ಯವಾದಷ್ಟು ಹಸಿಯಾಗಿಯೇ ಸೇವಿಸುವುದು ಉತ್ತಮ.

ಮಲಬದ್ಧತೆಯನ್ನು ತಡೆಯುತ್ತದೆ

ಮಲಬದ್ಧತೆಯನ್ನು ತಡೆಯುತ್ತದೆ

ಹಸಿ ಬಟಾಣಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದೆ. ಇವು ಜೀರ್ಣಕ್ರಿಯೆಯನ್ನು ಸರಳಗೊಳಿಸಿ ತ್ಯಾಜ್ಯಗಳು ಸುಲಭವಾಗಿ ಹೊರಹೋಗಲು ನೆರವಾಗುತ್ತವೆ. ಇದರಿಂದ ಮಲಬದ್ಧತೆಯ ತೊಂದರೆ ಇಲ್ಲವಾಗುತ್ತದೆ.

ಸಂಧಿವಾತದ ಪ್ರಕೋಪ ಕಡಿಮೆಯಾಗಿಸಲು ನೆರವಾಗುತ್ತದೆ

ಸಂಧಿವಾತದ ಪ್ರಕೋಪ ಕಡಿಮೆಯಾಗಿಸಲು ನೆರವಾಗುತ್ತದೆ

ಸಂಧಿವಾತದ ಪರಿಣಾಮವಾಗಿ ಮೂಳೆಸಂದುಗಳಲ್ಲಿ ನೋವು ಅನುಭವಿಸುತ್ತಿರುವ ರೋಗಿಗಳಿಗೆ ಹಸಿ ಬಟಾಣಿ ಔಷಧಿಯಂತೆ ಕೆಲಸ ಮಾಡುತ್ತದೆ. ಇದರ ಉರಿಯೂತ ನಿವಾರಕ ಗುಣ ಮತ್ತು ವಿವಿಧ ಆಂಟಿ ಆಕ್ಸಿಡೆಂಟುಗಳು ಸಂಧಿವಾತದ ಪ್ರಕೋಪವನ್ನು ಕಡಿಮೆಗೊಳಿಸಿ ರೋಗಿಯ ನೋವನ್ನು ಕಡಿಮೆ ಮಾಡುತ್ತದೆ.

ಹೃದಯವನ್ನು ಕಾಯಿಲೆಗಳಿಂದ ರಕ್ಷಿಸುತ್ತದೆ

ಹೃದಯವನ್ನು ಕಾಯಿಲೆಗಳಿಂದ ರಕ್ಷಿಸುತ್ತದೆ

ಹಸಿ ಬಟಾಣಿಯಲ್ಲಿರುವ ಉರಿಯೂತ ನಿವಾರಕ ಗುಣ ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಹಾಗೂ ವಿಶೇಷವಾಗಿ ರಕ್ತನಾಳಗಳನ್ನು ಬಲಗೊಳಿಸಿ ಇದರಿಂದ ಹೃದಯದ ಮೇಲೆ ಬೀಳುವ ಭಾರವನ್ನು ಕಡಿಮೆಗೊಳಿಸಿ ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತವೆ.

ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ

ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ

ಹಸಿ ಬಟಾಣಿಯಲ್ಲಿರುವ ನೈಸರ್ಗಿಕ ಫ್ಲೇವನಾಯ್ಡುಗಳು ಮತ್ತು ಬೀಟಾ ಕ್ಯಾರೋಟಿನ್ ಅಂಶಗಳು ಜೀವಕೋಶಗಳಿಗೆ ಹೆಚ್ಚಿನ ಬಲ ನೀಡುತ್ತವೆ.

ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ

ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ

ಅಲ್ಲದೇ ಇದರ ಆಂಟಿ ಆಕ್ಸಿಡೆಂಟುಗಳು ಹಲವು ರೀತಿಯಲ್ಲಿ ನೆರವಾಗುತ್ತವೆ. ಒಟ್ಟಾರೆಯಾಗಿ ಇಡಿಯ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತವೆ.

English summary

Reasons To Eat Green Peas When They Are In Season

The green peas season is here and you should not miss the chance to grab them and make it a point to eat them when they are still fresh. The innumerable health benefits you get from these is something which you would not have thought about.
X
Desktop Bottom Promotion