For Quick Alerts
ALLOW NOTIFICATIONS  
For Daily Alerts

ಹಸಿ ಬಟಾಣಿಯ ಆರೋಗ್ಯಕಾರಿ ಪ್ರಯೋಜನಗಳು

By Deepak M
|

ಪೋಷಕಾಂಶದ ವಿಚಾರಕ್ಕೆ ಬಂದರೆ ಹಸಿ ಬಟಾಣಿಗಳು ಸಮೃದ್ಧವಾದ ಪೋಷಕಾಂಶಭರಿತ ತರಕಾರಿಯಾಗಿದೆ. ಇದೊಂದು ಪ್ರಾಚೀನ ತರಕಾರಿಯಾಗಿದ್ದು, ದೇಶದ ವಾಣಿಜ್ಯ ಬೆಳೆಗಳಲ್ಲಿ ಹೆಚ್ಚಿನ ಆದಾಯ ತರುವ ಬೆಳೆಗಳಲ್ಲಿ ಒಂದಾಗಿದೆ. ಆದರೆ ತುಂಬಾ ಜನಕ್ಕೆ ಹಸಿರು ಬಟಾಣಿಯು ಒಂದು ಅತ್ಯುತ್ತಮ ಪೋಷಕಾಂಶಭರಿತ ತರಕಾರಿಯೆಂಬುದು ತಿಳಿದಿಲ್ಲ. ಆದರೆ ಈಗ ಹಸಿರು ಬಟಾಣಿಯನ್ನು ನಾವು ಸ್ವಲ್ಪ ಗಂಭೀರವಾಗಿ ತೆಗೆದುಕೊಳ್ಳುವ ಕಾಲ ಬಂದಿದೆ. ಬಟಾಣಿಗಳಲ್ಲಿ ಪೈಟೋ ನ್ಯೂಟ್ರಿಯೆಂಟ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ ಎಂದು ತಿಳಿದುಬಂದಿದೆ. ಇವುಗಳು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕರಿಸುತ್ತವೆ. ಅದರಲ್ಲು ಇದು ಜಠರದ ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ತಿಳಿದುಬಂದಿದೆ.

ಈ ಸಸ್ಯವು ವೇಗವಾಗಿ ಬೆಳೆಯುತ್ತದೆ ಮತ್ತು ಇದನ್ನು ಬೆಳೆಯುವುದು ಸುಲಭ. ಯೋಗ್ಯ ಮಣ್ಣು ಮತ್ತು ತಂಪಾದ ವಾತಾವರಣ ಇದಕ್ಕೆ ಅಗತ್ಯ. ಮಳೆಗಾಲ/ ಚಳಿಗಾಲವು ಫಸಲು ಬರುವ ಕಾಲವಾಗಿರುತ್ತವೆ. ಈ ಗಿಡವನ್ನು ಪೋಷಿಸಿದಂತೆ ಇದರ ಫಸಲು ಬರುತ್ತದೆ. ಕಾಯಿಗಳು 2-3 ಇಂಚು ಉದ್ದವಿರುತ್ತವೆ. ಈ ಕಾಯಿಯ ಒಳಗಿನ ಬೀಜಗಳು ತಿನ್ನಲು ಯೋಗ್ಯವಾಗಿರುತ್ತವೆ. ಈ ಬೀಜಗಳನ್ನು ಅಥವಾ ಕಾಳುಗಳನ್ನು ಸೇವಿಸುವುದರಿಂದ ನಾವು ಹಲವಾರು ರೋಗ- ರುಜಿನಗಳಿಂದ ಪಾರಾಗಬಹುದು. ಹೇಗೆ ಈ ಕಾಳುಗಳು ನಮಗೆ ಉಪಕಾರಿ ಎಂಬುದನ್ನು ವಿವರಿಸಿದ್ದೇವೆ ಓದಿ ತಿಳಿಯಿರಿ.

ತೂಕ ಇಳಿಸಿಕೊಳ್ಳಲು ಉತ್ತಮ ಆಹಾರ

ತೂಕ ಇಳಿಸಿಕೊಳ್ಳಲು ಉತ್ತಮ ಆಹಾರ

ಸ್ಥೂಲ ಕಾಯದಿಂದ ಸಮಸ್ಯೆ ಎದುರಿಸುತ್ತಿದ್ದೀರಾ? ತೂಕ ಇಳಿಸಿಕೊಳ್ಳಲು ಎಲ್ಲಿಗೆ ಹೋಗಬೇಕು ಎಂದು ಆಲೋಚಿಸುತ್ತಿದ್ದೀರಾ? ಏಕೆ ತೊಂದರೆ ತೆಗೆದುಕೊಳ್ಳುತ್ತೀರಿ, ಬಟಾಣಿಯನ್ನು ನಿಯಮಿತವಾಗಿ ಸೇವಿಸಿ, ತೂಕ ಕಡಿಮೆಯಾಗುತ್ತದೆ. ಏಕೆಂದರೆ ಬಟಾಣಿಯಲ್ಲಿ ಕೊಬ್ಬಿನ ಪ್ರಮಾಣ ಕಡಿಮೆಯಿರುತ್ತದೆ.

ಉರಿಯನ್ನು ತಡೆಗಟ್ಟುತ್ತದೆ

ಉರಿಯನ್ನು ತಡೆಗಟ್ಟುತ್ತದೆ

ಉರಿಯಿಂದಾಗಿ ಆರ್ತೈಟಿಸ್, ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತವೆ. ಇದನ್ನು ಹಸಿ ಬಟಾಣಿ ಸೇವನೆಯಿಂದ ತಡೆಗಟ್ಟಬಹುದು.

ಮಲಬದ್ಧತೆಯನ್ನು ತಡೆಯುತ್ತದೆ.

ಮಲಬದ್ಧತೆಯನ್ನು ತಡೆಯುತ್ತದೆ.

ನಾರಿನಂಶ ಕಡಿಮೆಯಿರುವ ಆಹಾರಗಳನ್ನು ಸೇವಿಸುವುದರಿಂದಾಗಿ ಮಲಬದ್ಧತೆಯು ಕಾಡುತ್ತದೆ. ಬಟಾಣಿಗಳಲ್ಲಿ ನಾರಿನಂಶ ಅಧಿಕವಾಗಿರುತ್ತದೆ. ಹೀಗಾಗಿ ನಿಮ್ಮ ಮಲಬದ್ಧತೆಯ ಸಮಸ್ಯೆಯು ನಿವಾರಣೆಯಾಗುತ್ತಿದೆ.

ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

ಹಸಿ ಬಟಾಣಿಯಲ್ಲಿರುವ ಅಧಿಕ ನಾರಿನಂಶ ಮತ್ತು ಅಧಿಕ ಪ್ರೊಟಿನ್ ಅಂಶವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿ ಆರೋಗ್ಯವನ್ನು ಹೆಚ್ಚಿಸುತ್ತವೆ.

ಹೊಟ್ಟೆಯ ಕ್ಯಾನ್ಸರ್ ತಡೆಯುತ್ತದೆ-

ಹೊಟ್ಟೆಯ ಕ್ಯಾನ್ಸರ್ ತಡೆಯುತ್ತದೆ-

ಬಟಾಣಿಯಲ್ಲಿ ಕೊಯುಮಿಸ್ಟೋಲ್ ಇದ್ದು ಇದು ಹೊಟ್ಟೆಯ ಕ್ಯಾನ್ಸರ್ ತಡೆಯುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಆ್ಯಂಟಿ ಆ್ಯಕ್ಸಿಡೆಂಟ್ ಗಳಾದ ಫ್ಲೆವಿನ್ಯೊಡ್ಸ್, ಕ್ಯಾರೊಟಿನ್ಯೊಡ್, ಪೊಲಿಫೆನೋಲ್ಸ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಬಟಾಣಿಯ ಅತ್ಯುತ್ತಮ ಪ್ರಯೋಜನವೆಂದರೆ ಹೃದ್ರೋಗಕ್ಕೆ ಪರಿಹಾರ ನೀಡುವ ಗುಣ. ಬಟಾಣಿಯಲ್ಲಿರುವ ಆ್ಯಂಟಿ ಇನ್‍ಫ್ಲೆಮ್ಮಟರಿ ( ಬಾವು ನಿವಾರಕ) ಗುಣವು ಮತ್ತು ಆ್ಯಂಟಿ ಆಕ್ಸಿಡೆಂಟ್‍ಗಳು , ವಿಟಮಿನ್ ಬಿ ಕಾಂಪ್ಲೆಕ್ಸ್್ ಹೃದ್ರೋಗವನ್ನು ದೂರವಿಡುತ್ತವೆ.

 ಮೂಳೆಗಳ ಆರೋಗ್ಯಕ್ಕೆ ಸಹಕಾರಿ

ಮೂಳೆಗಳ ಆರೋಗ್ಯಕ್ಕೆ ಸಹಕಾರಿ

ಹಸಿ ಬಟಾಣಿಗಳಲ್ಲಿ ವಿಟಮಿನ್ ಕೆಯು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಆರೋಗ್ಯಕಾರಿ ಮೂಳೆಗಳ ಬೆಳವಣಿಗೆಗೆ ಸಹಕಾರಿ. ಅದರಲ್ಲು ಇವು ಅಸ್ಟಿಯೊಪೊರೊಸಿಸ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಒಟ್ಟಾರೆಯಾಗಿ ಹಸಿ ಬಟಾಣಿಗಳು ಆರೋಗ್ಯಕಾರಿ ಜೀವನಕ್ಕೆ ಒಳ್ಳೆಯದು ಎಂದು ಹೇಳಬಹುದು.

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಬಟಾಣಿಗಳನ್ನು ಸೇವಿಸಿ ಕೊಲೆಸ್ಟ್ರಾಲ್ ಅನ್ನು ದೂರವಿಡಿ. ಇವುಗಳು ರಕ್ತದಲ್ಲಿನ ಟ್ರೈಗ್ಲಿಸೆರೈಡ್ಸ್ ಪ್ರಮಾಣವನ್ನು ಕಡಿಮೆ ಮಾಡಿ, ಆರೋಗ್ಯಕಾರಿ ಕೊಲೆಸ್ಟ್ರಾಲನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನೀವು ಹಲವು ರೋಗಗಳಿಂದ ಪಾರಾಗುತ್ತೀರಿ.

ಯೌವನವನ್ನು ಕಾಪಾಡಿಕೊಳ್ಳಲು

ಯೌವನವನ್ನು ಕಾಪಾಡಿಕೊಳ್ಳಲು

ಹಸಿ ಬಟಾಣಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್‍ಗಳು ಮತ್ತು ವಿಟಮಿನ್ ಸಿ ನಿಮ್ಮನ್ನು ಧೀರ್ಘಕಾಲ ಯೌವನವಂತರನ್ನಾಗಿ ಕಾಪಾಡುತ್ತದೆ. ಹಸಿ ಬಟಾಣಿಗಳಲ್ಲಿ ಫ್ಲವನೊಯ್ಡ್ಸ್, ಫೈಟೊನ್ಯೂಟ್ರಿಯೆಂಟ್‍ಗಳು, ಕ್ಯಾರೊಟಿನೊಯ್ಡ್ಸ್ ಮತ್ತು ಫೆನೊಲಿಕ್ ಆಮ್ಲಗಳು ಇದ್ದು, ನಿಮ್ಮನ್ನು ಸದಾ ಲವಲವಿಕೆ ಮತ್ತು ಯೌವನದಿಂದ ಕೂಡಿರುವಂತೆ ಕಾಪಾಡುತ್ತವೆ.

English summary

Health Benefits Of Green Peas

Many people take the small round green peas very lightly. They just use it as a side dish or one of the ingredients to prepare a sumptuous dish. However, you need to know that the green winter vegetable is loaded with numerous health benefits.
Story first published: Monday, November 25, 2013, 17:26 [IST]
X
Desktop Bottom Promotion