For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ರೋಗ ನಿಯಂತ್ರಿಸುವ ಅದ್ಬುತ ಆಹಾರಗಳು...

By Deepu
|

ಕ್ಯಾನ್ಸರ್ - ಈ ಹೆಸರನ್ನು ಕೇಳುತ್ತಲೇ ಬಹುತೇಕ ಜನರ ಜಂಘಾಬಲವೇ ಉಡುಗಿಹೋಗುತ್ತದೆ. ವ್ಯಕ್ತಿಯೋರ್ವನ ತಪಾಸಣೆಯ ಸಮಯದಲ್ಲಿ, ಒಂದು ವೇಳೆ ಆತನಿಗೆ ಅಥವಾ ಆಕೆಗೆ ಕ್ಯಾನ್ಸರ್ ಇದೆ ಎಂದು ದೃಢಪಟ್ಟರೆ, ಅವರು ತಮ್ಮ ಭವಿಷ್ಯ ಜೀವನದ ಕುರಿತು ವೈರಾಗ್ಯ ಭಾವವನ್ನು ಹೊಂದುವಂತಾಗುತ್ತದೆ. ಅಂತಹ ಭೀಷಣ ರೋಗ ಈ ಕ್ಯಾನ್ಸರ್. ಆದಾಗ್ಯೂ, ಆಧುನಿಕ ವೈದ್ಯಕೀಯ ಕ್ಷೇತ್ರವು ಎಷ್ಟೊoದು ಮುಂದುವರೆದಿದೆ ಎಂದರೆ, ಒಂದು ವೇಳೆ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ.

ಎಷ್ಟೇ ಆದರೂ ಸಹ, Prevention is better than cure ಎಂಬ ಗಾದೆಯಂತೆ ಸಾಧ್ಯವಾದಷ್ಟರ ಮಟ್ಟಿಗೆ ಕ್ಯಾನ್ಸರ್ ಬಾರದಂತೆ ತಡೆಗಟ್ಟುವುದರಲ್ಲಿಯೇ ನಮ್ಮ ಜಾಣತನವು ಅಡಗಿದೆ. ಧೂಮಪಾನ, ಮದ್ಯಪಾನಗಳಂತಹ ದುಶ್ಚಟಗಳೊoದಿಗೆ, ನಮ್ಮ ಆಹಾರಕ್ರಮವೂ ಕೂಡ ಅನೇಕ ಬಾರಿ ಕ್ಯಾನ್ಸರ್‌ಗೆ ಕಾರಣವಾಗಬಹುದು. ಆದ್ದರಿಂದ ಕ್ಯಾನ್ಸರ್ ಅನ್ನು ದೂರವಿರಿಸಲು ನೆರವಾಗುವ ಆಹಾರಕ್ರಮವು ಯಾವುದೆಂದು ತಿಳಿಯಬಯಸುವಿರಾ? ಹಾಗಿದ್ದರೆ ಇದನ್ನು ಓದಿರಿ...

ಕ್ಯಾನ್ಸರ್ ನಿಯಂತ್ರಿಸುವ ಅದ್ಬುತ ಆಹಾರಗಳು

1. ಈರುಳ್ಳಿ ಮತ್ತು ಬೆಳ್ಳುಳ್ಳಿ

1. ಈರುಳ್ಳಿ ಮತ್ತು ಬೆಳ್ಳುಳ್ಳಿ

ಭಾರತೀಯ ಅಡುಗೆಗಳಲ್ಲಿ ಪ್ರಮುಖ ಪಾತ್ರವನ್ನು ಪಡೆದಿರುವಂತಹ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಔಷಧೀಯ ಗುಣಗಳು ಇದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಹಲವಾರು ಶತಮಾನಗಳಿಂದಲೂ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಮನೆಮದ್ದಾಗಿ ಬಳಸಿಕೊಳ್ಳುತ್ತಾ ಇದ್ದಾರೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಕೆಲವರಿಗೆ ಇಷ್ಟವಾಗಲ್ಲ. ಯಾಕೆಂದರೆ ಇದರ ಘಾಟು ವಾಸನೆ. ಅಲ್ಲಿಯುಮ್ಸ್ ಪ್ರಭೇದಕ್ಕೆ ಸೇರಿರುವಂತಹ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಕ್ಯಾನ್ಸರ್ ಅನ್ನು ತಡೆಯುವ ಗುಣಗಳು ಇವೆಯಂತೆ. ಇದರಲ್ಲಿ ಇರುವಂತಹ ಕೆಲವೊಂದು ನೈಸರ್ಗಿಕ ರಾಸಾಯನಿಕಗಳು ಕೆಲವು ಬಗೆಯ ಕ್ಯಾನ್ಸರ್‌ನ್ನು ತಡೆಯುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್‌ಗಳು ಡಿಎನ್ ಎ ಕೋಶಗಳಿಗೆ ಹಾನಿಯುಂಟು ಮಾಡುವ ಫ್ರೀ ರ್ಯಾಡಿಕಲ್ ಅನ್ನು ತಡೆಯುತ್ತದೆ. ಇದರಲ್ಲಿ ಕ್ಯಾನ್ಸರ್ ಅನ್ನು ತಡೆಯುವಂತಹ ಹಲವಾರು ಗುಣಗಳು ಇವೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿರುವ ಅಂಶಗಳು ಕರುಳಿನ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್, ಕಿಡ್ನಿಯ ಕ್ಯಾನ್ಸರ್, ಜನನಾಂಗ ಗ್ರಂಥಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಯಕೃತ್ ಕ್ಯಾನ್ಸರ್ ಅನ್ನು ತಡೆಯುತ್ತದೆ.

2. ಎಲೆಕೋಸು

2. ಎಲೆಕೋಸು

ಪ್ರತಿದಿನ ಎಲೆಕೋಸನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದರಿಂದ ನಮ್ಮ ದೇಹವು ಹೆಚ್ಚಿನ ಪೋಷಕಾಂಶಗಳನ್ನು ಪಡೆದುಕೊಂಡು ಕ್ಯಾನ್ಸರ್ ಕಾಯಿಲೆಯಿಂದ ನಮ್ಮನ್ನು ಕಾಪಾಡುತ್ತದೆ. ಇದಕ್ಕೆಲ್ಲಾ ಕಾರಣ ಎಲೆಕೋಸಿನಲ್ಲಿ ಸಲ್ಫೋರಫನೆ ಎನ್ನುವ ಅಂಶವಿದ್ದು, ಇದು ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ಎಲೆಕೋಸಿನಲ್ಲಿ ಇರುವಂತಹ ಅತ್ಯಂತ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್ ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗುವಂತಹ ಫ್ರೀ ರ್ಯಾಡಿಕಲ್ ಗಳನ್ನು ನಿವಾರಣೆ ಮಾಡುತ್ತದೆ. ಅಷ್ಟೇ ಅಲ್ಲದೇ ಎಲೆಕೋಸಿನಲ್ಲಿ ನಾರಿನಾಂಶವಿರುವ ಕಾರಣದಿಂದ ಹಲವಾರು ರೀತಿಯ ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ಎಲೆಕೋಸಿನ ಸೇವನೆ ಮಾಡುವುದರಿಂದ ಕರುಳಿನ ಕ್ಯಾನ್ಸರ್ ಮತ್ತು ಹೊಟ್ಟೆಯ ಕ್ಯಾನ್ಸರ್ ಬೆಳೆಯದಂತೆ ತಡೆಯಬಹುದು

3. ಹಸಿರು ಬಟಾಣಿ

3. ಹಸಿರು ಬಟಾಣಿ

ಹಸಿರು ಬಟಾಣಿಗಳು ಕ್ಯಾನ್ಸರನ್ನು ನಿಯಂತ್ರಿಸಲು ಇರುವ ಅತ್ಯಂತ ಶಕ್ತಿಶಾಲಿ ತರಕಾರಿಗಳಾಗಿವೆ. ಅದರಲ್ಲೂ ಮುಖ್ಯವಾಗಿ ಜಠರದ ಕ್ಯಾನ್ಸರ್ ನಿವಾರಿಸಲು ಇವು ಸಹಾಯ ಮಾಡುತ್ತವೆ. ಇದರಲ್ಲಿ ಪೊಟಾಶಿಯಂ, ಕಬ್ಬಿಣಾಂಶ ಮತ್ತು ವಿಟಮಿನ್‍ಗಳು ಯಥೇಚ್ಛವಾಗಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸಲು ಇವು ನೆರವು ನೀಡುತ್ತವೆ.

4. ಬೀನ್ಸ್

4. ಬೀನ್ಸ್

ಬೀನ್ಸ್‌ಗಳಲ್ಲಿ ವಿಟಮಿನ್ ಬಿಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಕ್ಯಾನ್ಸರ್ ನಿಯಂತ್ರಿಸಲು ಗಣನೀಯವಾದ ಕೊಡುಗೆಯನ್ನು ನೀಡುತ್ತದೆ. ಇವುಗಳು ಕಾರ್ಸಿನೊಜೆನ್‍ಗಳನ್ನು ನಿವಾರಿಸುವ ಲುಲುಟೇನ್ ಮತ್ತು ವೈಯೊಲಕ್ಸಂಥಿನ್ ಮತ್ತು ಬೀಟಾ-ಕೆರೊಟಿನ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ.

5. ಪಾಲಕ್ ಸೊಪ್ಪು

5. ಪಾಲಕ್ ಸೊಪ್ಪು

ಪಾಲಕ್ ಸೊಪ್ಪು ಸಹ ಪ್ರಪಂಚದಲ್ಲಿರುವ ಅತ್ಯಂತ ಆರೋಗ್ಯಕಾರಿ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಅದರಲ್ಲೂ ಇದು ಕ್ಯಾನ್ಸರನ್ನು ನಿಯಂತ್ರಿಸುವ ಆಹಾರ ಪದಾರ್ಥವಾಗಿರುವುದು ಸಹ ಇದರ ಹೆಚ್ಚುಗಾರಿಕೆ. ಸ್ಪೈನಚ್‍ನಲ್ಲಿ ಪೊಟಾಶಿಯಂ, ಸತು, ವಿಟಮಿನ್ ಕೆ, ಇ, ಮತ್ತು ಎ ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಕ್ಯಾನ್ಸರನ್ನು ನಿಯಂತ್ರಿಸಲು ಸ್ವಾಭಾವಿಕವಾಗಿ ನೆರವಾಗುತ್ತವೆ.

6. ಬೀಟ್‍ರೂಟ್‍ಗಳು

6. ಬೀಟ್‍ರೂಟ್‍ಗಳು

ಬೀಟ್‍ರೂಟ್‍ಗಳು ರಕ್ತ ಪರಿಚಲನೆಯನ್ನು ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತವೆ. ಇವುಗಳು ರಕ್ತದೊತ್ತಡವನ್ನು ನಿವಾರಿಸುವ ಅಂಶಗಳನ್ನು ಸಹ ಹೊಂದಿರುತ್ತವೆ. ವಿಶೇಷವಾಗಿ ಸಕ್ಕರೆಯ ಪ್ರಮಾಣವನ್ನು ಹದ್ದು ಬಸ್ತಿನಲ್ಲಿಡಲು ಇದು ಖ್ಯಾತಿಯನ್ನು ಪಡೆದಿದೆ. ಜೊತೆಗೆ ಕ್ಯಾನ್ಸರನ್ನು ಸಹ ನಿಯಂತ್ರಿಸುತ್ತದೆ.

7. ಬ್ರೊಕ್ಕೊಲಿ

7. ಬ್ರೊಕ್ಕೊಲಿ

ಬ್ರೊಕ್ಕೊಲಿಯು ಪ್ರಪಂಚದಲ್ಲಿರುವ ಅತ್ಯಂತ ಆರೋಗ್ಯಕಾರಿ ಹಣ್ಣುಗಳಲ್ಲಿ ಒಂದಾಗಿದೆ. ಇದರ ಆಂಟಿ-ಕ್ಯಾನ್ಸರ್ ಅಂಶಗಳು ಸಹ ಇದಕ್ಕೆ ಒಳ್ಳೆಯ ಹೆಸರನ್ನು ನೀಡಿದೆ. ಇದರಲ್ಲಿ ಮೂಲತಃ ಆಂಟಿ-ಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ದೇಹದಲ್ಲಿ ಕ್ಯಾನ್ಸರ್ ರೂಪುಗೊಳ್ಳುವುದನ್ನು ತಡೆಯುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ.

8. ಅಡುಗೆ ಮಾಡುವಾಗ ಸ್ವಚ್ಛತೆಯನ್ನು ಕಾಪಾಡಿರಿ

8. ಅಡುಗೆ ಮಾಡುವಾಗ ಸ್ವಚ್ಛತೆಯನ್ನು ಕಾಪಾಡಿರಿ

ಆರೋಗ್ಯಯುತ ಅಡುಗೆವಿಧಾನಗಳು ಮತ್ತು ಅಡುಗೆಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ನಿಮ್ಮ ಶರೀರವನ್ನು ಯಾವುದೇ ರೋಗದಿಂದ ದೂರವಿರಿಸಲು ಅತಿ ಮುಖ್ಯವಾಗಿದೆ. ಉಪಯೋಗಿಸುವ ಮೊದಲು ತರಕಾರಿಗಳು ಮತ್ತು ಹಣ್ಣುಗಳನ್ನು ಚೆನ್ನಾಗಿ ತೊಳೆಯುವುದು, ತರಕಾರಿಗಳನ್ನು ಅತಿಯಾಗಿ ಪ್ಯಾಕ್ ಮಾಡಿ ಇಡದಿರುವುದು, ಮತ್ತು ಸಾಧ್ಯವಾದಷ್ಟು ತಾಜಾ ಆಹಾರವನ್ನೇ ಸೇವಿಸುವುದು ಇವೇ ಮೊದಲಾದವು, ನೀವು ಅನುಸರಿಸಲೇಬೇಕಾಗಿರುವ ಮೂಲಭೂತ ಸೂತ್ರಗಳು.

9. ನಾರುಯುಕ್ತ ಆಹಾರಪದ್ಧತಿ

9. ನಾರುಯುಕ್ತ ಆಹಾರಪದ್ಧತಿ

ರೋಗಗಳ ವಿರುದ್ಧ ನಿಮ್ಮ ಶರೀರವನ್ನು ಗುರಾಣಿಯoತೆ ಹುರಿಯಾಗಿಸಲು, ನಿಮ್ಮ ಅಹಾರಪದ್ಧತಿಯಲ್ಲಿ ನಾರುಯುಕ್ತ ಆಹಾರಪದಾರ್ಥಗಳನ್ನು ಸೇರಿಸಿರಿ. ಈ ಕ್ರಮವನ್ನು ಕೈಗೊಳ್ಳಲು ಇರುವ ಸರಳ ಮಾರ್ಗವೆಂದರೆ, ನಿಮ್ಮ ಬೆಳಗಿನ ಉಪಹಾರದಲ್ಲಿ ಬಿಳಿಯ ಬ್ರೆಡ್ಡಿಗೆ ಬದಲಾಗಿ ಕಂದು ಬಣ್ಣದ ಬ್ರೆಡ್ಡನ್ನು ಬಳಸುವುದು, ಕಂದು ಬಣ್ಣದ ಅಕ್ಕಿ(ಕುಚ್ಚಲಕ್ಕಿ), ಕಾಳುಗಳನ್ನು ಬಳಸುವುದು ಇತ್ಯಾದಿ.

10. ತರಕಾರಿ ಮತ್ತು ಹಣ್ಣನ್ನು ಹೆಚ್ಚು ಹೆಚ್ಚು ಸೇವಿಸಿರಿ

10. ತರಕಾರಿ ಮತ್ತು ಹಣ್ಣನ್ನು ಹೆಚ್ಚು ಹೆಚ್ಚು ಸೇವಿಸಿರಿ

ತಾಜಾ ತರಕಾರಿ ಮತ್ತು ಹಣ್ಣುಗಳನ್ನು ನಿಮ್ಮ ದಿನನಿತ್ಯದ ಆಹಾರದ ಕ್ರಮದಲ್ಲಿ ಸೇರಿಸಿಕೊಳ್ಳುವುದರ ಮೂಲಕ ನಿಮ್ಮ ಶರೀರಕ್ಕೆ ಅವಶ್ಯಕವಾಗಿರುವ ಪೋಷಕಾಂಶಗಳು ಮತ್ತು ವಿಟಮಿನ್ ಗಳನ್ನು ಒದಗಿಸಬಹುದು. ಈ ಪೋಷಕಾಂಶಗಳು ಮತ್ತು ವಿಟಮಿನ್‌ಗಳು , ನಿಮ್ಮ ರೋಗನಿರೋಧಕ ಮಟ್ಟವನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಸೋಂಕುಗಳು ಮತ್ತು ಕ್ಯಾನ್ಸರ್ ನ ವಿರುದ್ಧ ಕಾದಾಡಲೂ ಕೂಡ ಸಹಕಾರಿಯಾಗಿವೆ. ಅಲ್ಲದೇ, ಇವು ಜಂಕ್ ಮತ್ತು ಕೊಬ್ಬುಯುಕ್ತ ಆಹಾರಗಳ ಬಗೆಗಿನ ನಿಮಗಿರುವ ಹಸಿವನ್ನು ತನ್ನಿಂತಾನಾಗಿಯೇ ಕಡಿಮೆ ಮಾಡುತ್ತವೆ. ಕ್ಯಾಬೇಜು, brococoli, ಹೂಕೋಸು (cauiflower), ಪಾಲಾಕ್ ಸೊಪ್ಪು, ಸೇಬುಗಳು, ದ್ರಾಕ್ಷಿ ಇತ್ಯಾದಿ ಗಳನ್ನು ದಿನನಿತ್ಯ ಸೇವಿಸುವುದರಿಂದ ಇದು ಸಾಬೀತಾಗುತ್ತದೆ.

English summary

miracle foods that kills cancer cells

Each day you hear about numerous cases of cancer. An immediate question we all need an answer for is how to prevent this fatal disease. Making a few dietary changes can help us reduce the risk of being struck b
X
Desktop Bottom Promotion