For Quick Alerts
ALLOW NOTIFICATIONS  
For Daily Alerts

'ಆಯುರ್ವೇದ ಸಿರಪ್‌'-ಒಂದೆರಡು ದಿನಗಳಲ್ಲಿಯೇ ಕೆಮ್ಮು ನಿಯಂತ್ರಣಕ್ಕೆ!

ಮನೆಯಲ್ಲಿಯೇ ತಯಾರಿಸಿಟ್ಟುಕೊಳ್ಳಬಹುದಾದ ಕೆಮ್ಮಿನ ಸಿರಪ್‌ಗಳು (ಕೆಮ್ಮಿನ ಕಷಾಯ) ಅನೇಕವಿದ್ದು ಅವುಗಳ ಬಳಕೆಯು ಸುರಕ್ಷಿತವಾಗಿರುತ್ತವೆ.....

By Manu
|

ಪದೇ ಪದೇ ಬರುತ್ತಿರುವಂತಹ ಕೆಮ್ಮಿನಿಂದ ನೆಮ್ಮದಿ ಹಾಳಾಗುವುದು ಖಚಿತ. ಯಾಕೆಂದರೆ ಯಾರೊಂದಿಗಾದರೂ ಮಾತನಾಡಲು ಆರಂಭಿಸಿದರೆ ಕೆಮ್ಮು ಕಾಣಿಸಿಕೊಳ್ಳುತ್ತದೆ. ಯಾವುದೇ ಕೆಲಸ ಮಾಡುವಾಗ ಕೆಮ್ಮು ಬರುತ್ತದೆ. ಮಲಗಿದರೆ ಸರಿಯಾಗಿ ನಿದ್ರೆ ಕೂಡ ಹಾಳಾದ ಕೆಮ್ಮಿನಿಂದ ಬರುವುದಿಲ್ಲ ಎನ್ನುವ ದೂರುಗಳು ಬರುತ್ತಾ ಇರುತ್ತದೆ. ಕೆಮ್ಮಿಗೆ ಹಲವಾರು ಮದ್ದುಗಳು ಇವೆ. ಆದರೆ ಇದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಇರುತ್ತದೆ. ಮಧ್ಯರಾತ್ರಿ ಕಾಡುವ ಕೆಮ್ಮು, ಏನು ಮಾಡಬೇಕು?

ಕೆಲವೊಂದು ಸಿರಪ್‌ಗಳನ್ನು ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ಜಡತ್ವ ಮತ್ತು ನಿದ್ರೆಯ ಸಮಸ್ಯೆ ಬರಬಹುದು. ಇದರಿಂದ ಹೆಚ್ಚಿನವರು ಸಿರಪ್‌ ಸೇವನೆಯಿಂದ ದೂರ ಉಳಿಯುತ್ತಾರೆ. ಆದರೆ ಕೆಮ್ಮಿಗೆ ಕೆಲವೊಂದು ಮನೆಮದ್ದುಗಳು ಇವೆ. ಪ್ರತಿಯೊಂದು ಕಡೆಯು ನಿಮಗೆ ಕಿರಿಕಿರಿ ಉಂಟು ಮಾಡುವಂತಹ ಕೆಮ್ಮಿಗೆ ಒಳ್ಳೆಯ ಮನೆಮದ್ದನ್ನು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದು ಯಾವುದೆಂದು ಮುಂದೆ ಓದುತ್ತಾ ತಿಳಿಯಿರಿ....

ಉಪ್ಪು-ಬೆಳ್ಳುಳ್ಳಿ ಬೇಯಿಸಿದ ನೀರು ಕುಡಿಯಿರಿ

ಉಪ್ಪು-ಬೆಳ್ಳುಳ್ಳಿ ಬೇಯಿಸಿದ ನೀರು ಕುಡಿಯಿರಿ

ಒಂದು ಲೋಟ ನೀರಿಗೆ ಕೆಲವು ಹರಳು ಉಪ್ಪು ಹಾಗೂ ಕೆಲವು ಎಸಳು ಬೆಳ್ಳುಳ್ಳಿಗಳನ್ನು ಜಜ್ಜಿ ಕುದಿಸಬೇಕು. ಸುಮಾರು ಐದು ನಿಮಿಷ ಕುದಿಸಿದ ಬಳಿಕ ಒಂದು ಚಮಚ ಅರಿಶಿನದ ಪುಡಿ ಸೇರಿಸಿ ಸೋಸಿದ ನೀರನ್ನು ಸಾಧ್ಯವಾದಷ್ಟು ಬಿಸಿಯಿರುವಾಗಲೇ ಸೇವಿಸುವ ಮೂಲಕ ಕೆಮ್ಮು ಕಡಿಮೆಯಾಗುತ್ತದೆ.

ಜೇನುತುಪ್ಪ ಮತ್ತು ದಾಲ್ಚಿನ್ನಿಯ ಕಷಾಯ

ಜೇನುತುಪ್ಪ ಮತ್ತು ದಾಲ್ಚಿನ್ನಿಯ ಕಷಾಯ

ಸ್ವಲ್ಪ ಜೇನುತುಪ್ಪ ಮತ್ತು ದಾಲ್ಚಿನ್ನಿಯನ್ನು ಕೆಲವು ನಿಮಿಷಗಳ ಕಾಲ ಬೇಯಿಸಿದ ಬಳಿಕ ಒಲೆಯಿಂದ ಇಳಿಸಿ ಒಂದು ಲೋಟಕ್ಕೆ ಅರ್ಧ ಲಿಂಬೆಹಣ್ಣಿನ ರಸ ಸೇರಿಸಿ ಸಾಧ್ಯವಾದಷ್ಟು ಬಿಸಿಯಾಗಿರುವಾಗಲೇ ಕುಡಿಯುವ ಮೂಲಕ ಕೆಮ್ಮಿಗೆ ಮತ್ತು ಶೀತಕ್ಕೆ ಶೀಘ್ರ ಉಪಶಮನ ದೊರಕುತ್ತದೆ.

ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ

ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ

ಬಟ್ಟಲೊ೦ದರಲ್ಲಿ ಸ್ವಲ್ಪ ಈರುಳ್ಳಿಯ ರಸವನ್ನು ತೆಗೆದುಕೊ೦ಡು ಬಿಸಿಮಾಡಿರಿ. ಉರಿಯನ್ನು ನ೦ದಿಸಿದ ಬಳಿಕ, ಬೆಳ್ಳುಳ್ಳಿಯ ಒ೦ದು ದಳವನ್ನು ಇದಕ್ಕೆ ಸೇರಿಸಿರಿ. ಈರುಳ್ಳಿಯ ರಸವು ಇನ್ನೂ ಬಿಸಿಯಾಗಿಯೇ ಇರುವ ವೇಳೆ, ಬೆಳ್ಳುಳ್ಳಿಯ ದಳವನ್ನು ಸ್ವಲ್ಪ ಹುರಿಯಿರಿ. ಈ ಮಿಶ್ರಣವನ್ನು ಒ೦ದು ಲೋಟದಷ್ಟು ಬಿಸಿನೀರಿಗೆ ಸೇರಿಸಿರಿ ಹಾಗೂ ಇದಕ್ಕೆ ಒ೦ದು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿರಿ. ಈಗ ಈ ನೈಸರ್ಗಿಕವಾದ ಕೆಮ್ಮಿನ ಸಿರಪ್ ಅನ್ನು ಹನಿಹನಿಯಾಗಿ ಸೇವಿಸಿರಿ.

ಶು೦ಠಿ, ಬೆಳ್ಳುಳ್ಳಿ, ಹಾಗೂ ಕರಿಮೆಣಸು

ಶು೦ಠಿ, ಬೆಳ್ಳುಳ್ಳಿ, ಹಾಗೂ ಕರಿಮೆಣಸು

ಮನೆಯಲ್ಲಿ ತಯಾರಿಸಬಹುದಾದ ಕೆಮ್ಮಿನ ಸಿರಪ್ ಗಳ ಪೈಕಿ ಅತ್ಯ೦ತ ಪರಿಣಾಮಕಾರಿಯಾದುದು ಇದಾಗಿದೆ. ಜಜ್ಜಿದ ಶು೦ಠಿ, ಬೆಳ್ಳುಳ್ಳಿಯ ದಳಗಳು, ಹಾಗೂ ಸ್ವಲ್ಪ ಕಾಳುಮೆಣಸು - ಇವೆಲ್ಲವನ್ನೂ ಒ೦ದು ಲೋಟದಷ್ಟು ಕುದಿಯುತ್ತಿರುವ ನೀರಿನಲ್ಲಿ ಸೇರಿಸಿ ಚೆನ್ನಾಗಿ ಕುದಿಸಿ, ಸುಮಾರು 15 ನಿಮಿಷ ಬಿಟ್ಟು ಕುಡಿಯಿರಿ0 . ಕೆಮ್ಮನ್ನು ನಿವಾರಿಸಿಕೊಳ್ಳುವ೦ತಾಗಲು ಈ ಸಿರಪ್ ಅನ್ನು ದಿನಕ್ಕೆರಡು ಬಾರಿ ಸೇವಿಸಿರಿ. ಕೆಮ್ಮು , ಶೀತಕ್ಕೆ ಅರಿಶಿನ-ಕರಿಮೆಣಸಿನ ಬಿಸಿ ಬಿಸಿ ಹಾಲು!

ಹಿತ್ತಲ ಗಿಡದ ತುಳಸಿ ಎಲೆಗಳು

ಹಿತ್ತಲ ಗಿಡದ ತುಳಸಿ ಎಲೆಗಳು

ಮನೆಹಿತ್ತಲಲ್ಲಿನ ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಜಜ್ಜಿ ರಸಹಿಂಡಿ ಅದಕ್ಕೆ ತೊಟ್ಟು ಜೇನುತುಪ್ಪು ಬೆರೆಸಿ ಸೇವಿಸಿದರೂ ಕೆಮ್ಮು ದೂರವಾಗುತ್ತದೆ.

ಆ್ಯಪಲ್ ಸೀಡರ್ ವಿನೇಗರ್ ಮತ್ತು ಜೇನು

ಆ್ಯಪಲ್ ಸೀಡರ್ ವಿನೇಗರ್ ಮತ್ತು ಜೇನು

ಆ್ಯಪಲ್ ಸೀಡರ್ ವಿನೇಗರ್ ಮತ್ತು ಜೇನನ್ನು ಮಿಶ್ರಣ ಮಾಡಿಕೊಂಡು ಅದನ್ನು ಪ್ರತಿನಿತ್ಯ ಸೇವಿಸಬೇಕು. ಆ್ಯಪಲ್ ಸೀಡರ್ ವಿನೇಗರ್ ಪಿಎಚ್ ಮಟ್ಟವನ್ನು ಕಾಪಾಡುತ್ತದೆ ಮತ್ತು ಜೇನು ಲೋಳೆಯ ಪೊರೆಯಿಂದ ರಕ್ಷಿಸುತ್ತದೆ.

ನೀವೇ ತಯಾರಿಸಬಹುದಾದ ಸಿರಪ್

ನೀವೇ ತಯಾರಿಸಬಹುದಾದ ಸಿರಪ್

ಒಂದ ತವಾಗೆ ಸ್ವಲ್ಪ ನೀರು ಹಾಕಿಕೊಂಡು ಅದಕ್ಕೆ ಅರಿಶಿನ ಹುಡಿ, ದಾಲ್ಚಿನಿ ಮತ್ತು ಕರಿಮೆಣಸನ್ನು ಹಾಕಿಕೊಳ್ಳಿ ಮತ್ತು ಇದನ್ನು ಕುದಿಯಲು ಬಿಡಿ. ಸರಿಯಾಗಿ ಕುದಿಸಿದ ಬಳಿಕ ಇದನ್ನು ಸೋಸಿಕೊಳ್ಳಿ. ಇದನ್ನು ಸೇವಿಸುವ ಮೊದಲು ಜೇನುತುಪ್ಪ ಸೇರಿಸಿ. ಇದು ಕೆಮ್ಮು ನಿವಾರಣೆಗೆ ಅತ್ಯುತ್ತಮ ಔಷಧಿ.

ಗಿಡಮೂಲಿಕೆ ಚಹಾ

ಗಿಡಮೂಲಿಕೆ ಚಹಾ

ಗಿಡಮೂಲಿಕೆ ಚಹಾಗಳಾದ ಥೈಮೆ ಚಹಾ ಮತ್ತು ಲೈಕೋರೈಸ್ ಚಹಾ ಅತ್ಯುತ್ತಮ ಆಂಟಿಸ್ಪಾಸ್ಪೋಡಿಕ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಶ್ವಾಸನಾಳ ಮತ್ತು ಶ್ವಾಸನಾಳಿಕೆಗೆ ಶಮನವನ್ನು ನೀಡುವುದು.

ನೀರನ್ನು ಕುಡಿಯಿರಿ

ನೀರನ್ನು ಕುಡಿಯಿರಿ

ದೇಹವನ್ನು ತೇವಾಂಶದಿಂದ ಇಡಲು ನೀರು ಕುಡಿಯುವುದು ಅಗತ್ಯ. ಬಿಸಿಯಾದ ಪಾನೀಯಗಳು ಲೋಳೆಯ ಸ್ರವಿಸುವಿಕೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಬಹುದು.

ಈ ಪಾನೀಯಗಳನ್ನು ಕಡೆಗಣಿಸಿ

ಈ ಪಾನೀಯಗಳನ್ನು ಕಡೆಗಣಿಸಿ

ಸಿಟ್ರಸ್ ಜ್ಯೂಸ್ ಮತ್ತು ಕಾರ್ಬೋನೇಟ್ ಪಾನೀಯದಿಂದ ದೂರ ಉಳಿಯಿರಿ. ಯಾಕೆಂದರೆ ಆಮ್ಲ ಮತ್ತು ಸೋಡಾ ಸ್ರವಿಸುವಿಕೆಯನ್ನು ಹೆಚ್ಚಿಸುವುದು. ಇದರಿಂದ ಕಿರಿಕಿರಿ ಹೆಚ್ಚಾಗುವುದು.

ತಂಪಾದ ಆಹಾರ ತ್ಯಜಿಸಿ

ತಂಪಾದ ಆಹಾರ ತ್ಯಜಿಸಿ

ಕೆಮ್ಮು ಇರುವಂತಹ ಸಮಯದಲ್ಲಿ ನೀವು ತಂಪಾದ ಆಹಾರವನ್ನು ತ್ಯಜಿಸಬೇಕು. ಇದು ಶ್ವಾಸಕೋಶದ ದಾರಿಯನ್ನು ಒಣಗಿಸುವುದು ಮತ್ತು ಇನ್ನಷ್ಟು ಸೋಂಕನ್ನು ಉಂಟು ಮಾಡುವುದು. ಇದು ಕೆಮ್ಮಿನ ಔಷಧ- ಒಂದೇ ದಿನದಲ್ಲಿ ಕೆಮ್ಮು ಮಂಗಮಾಯ!

English summary

Methods To Stop Coughing Without Any Medicine

Coughing is that common condition that plagues many a people out there. Cough is just a reflex action that clears harmful irritants and mucus from the respiratory tract. People resort to taking cough syrups to treat this condition. These drops are usually loaded with colours, additives and preservatives.
X
Desktop Bottom Promotion