ಅಧ್ಯಯನ ವರದಿ: ಋತುಚಕ್ರ ಪ್ರಕೃತಿದತ್ತವಾಗಿದೆ, ಇದರಿಂದ ಯಾವುದೇ ತೊಂದರೆಯಿಲ್ಲ

By: Suhani
Subscribe to Boldsky

ವಯಸ್ಸಿಗೆ ಬಂದ ಸ್ತ್ರೀಯರು ತಮ್ಮ ವಯಸ್ಸಿಗನುಗುಣವಾಗಿ ಋತಿಮತಿಯಾಗುವುದು ಪ್ರಕೃತಿ ಸಹಜ ಗುಣ. ಹಿಂದಿನ ಕಾಲದಲ್ಲಿ ಸ್ತ್ರೀಯರನ್ನು ಋತುಮತಿಯಾದಾಗ ದೂರವಿಡುವ ಸಂಪ್ರದಾಯ ಚಾಲ್ತಿಯಲ್ಲಿತ್ತು. ಆ ಸಂದರ್ಭದಲ್ಲಿ ಸ್ತ್ರೀಗೆ ಭಯ, ಆತಂಕ, ನಾಚಿಕೆ, ಗೊಂದಲ ಇರುವುದು ಸಹಜವೇ.

ಆ ಸಂದರ್ಭದಲ್ಲಿ ಅವಳ ಶರೀರದಲ್ಲಿ ಉಂಟಾಗುವ ಹಾರ್ಮೋನ್ ವ್ಯತ್ಯಾಸಗಳಿಂದ ಅವಳಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಮನಸ್ಸು ಅರಿವು ಕಲ್ಪನೆಗಳಲ್ಲಿ ಯಾವುದೇ ಹಾರ್ಮೋನ್‌ಗಳ ದುಷ್ಪರಿಣಾಮಗಳಾಗುವುದಿಲ್ಲವೆಂದು ಸ್ವಿಟ್ಜರ್ಲ್ಯಾಂಡ್‌ನ ಜ್ಯೂರಿಕ್ ಯುನಿವರ್ಸಿಟಿ ಆಸ್ಪತ್ರೆಯ ಸಂಶೋಧಕರಾದ ಬ್ರಿಗ್ಗಿಟ್ಟೆ ಲೀನರ್ಸ್ ನವರು ಸ್ಪಷ್ಟ ಪಡಿಸಿದ್ದಾರೆ.

brain

ಇವರ ಪ್ರಕಾರ ಸ್ತ್ರೀಯ ಎರಡು ತಿಂಗಳ ಋತುದರ್ಶನವನ್ನು ಪರೀಕ್ಷೆಗೆ ಒಳಪಡಿಸಿದಾಗ ಈಸ್ಟ್ರೋಜನ್, ಪ್ರೊಜೆಸ್ಟ್ರೋನ್, ಟೆಸ್ಟೋಸ್ಟಿರೋನ್, ಯಾವುದೇ ಏರುಪೇರುಗಳನ್ನು ಕಾಣಿಸದೆ ಮಾನಸಿಕವಾಗಿ ದೈಹಿಕವಾಗಿ ಸದೃಢವಾಗಿದ್ದು ಒಮ್ಮೆಲೇ ಎರಡು ಕೆಲಸಕ್ಕೂ ಗಮನ ಹರಿಸುತ್ತಿದ್ದಳು ಎಂದು ತಮ್ಮ ಸಂಶೋಧನೆಯಿಂದ ತಿಳಿದು ಬಂದಿದೆ. ಮಾನಸಿಕ ತಜ್ಞರಾದ ಲೀನರ್ಸ್ ರವರ ಅಭಿಪ್ರಾಯದ ಪ್ರಕಾರ ತುಂಬಾ ಮಹಿಳೆಯರ ಮೇಲೆ ನಡೆಸಿದ ಸಂಶೋಧನೆಯಿಂದ ದಿನ ನಿತ್ಯದ ಕೆಲಸಗಳಲ್ಲಿ ಮಹಿಳೆಯರೂ ಸದೃಢ ವಾಗಿದ್ದಾಳೆಂದು ವೈಜ್ಞಾನಿಕವಾಗಿ ಕಂಡು ಹಿಡಿದಿದ್ದಾರೆ.

Menstrual Cycle

ಇವರು 68 ಜನರ ಸ್ತ್ರೀಯರನ್ನು ನಿರಂತರವಾಗಿ ಪ್ರತಿ ತಿಂಗಳ ಋತುದರ್ಶನದ ಸಮಯದಲ್ಲಿ ಮೂರು ಹಂತದ ಪರೀಕ್ಷೆಗೆ ಗುರಿಪಡಿಸಿದಾಗ ಮೊದಲನೆಯದಾಗಿ ಸ್ವಲ್ಪ ಅಂಶ ಮಾನಸಿಕವಾಗಿ ಕಂಡು ಬಂದರೂ ಎರಡನೇ ಹಂತದ ಪರೀಕ್ಷೆಯಲ್ಲಿ ಈ ರೀತಿ ಯಾವುದೇ ಅಂಶಗಳನ್ನು ಕಂಡುಕೊಳ‍್ಳಲಿಲ್ಲ.

English summary

Menstrual Cycle Doesn't Change How A Woman's Brain Works

"The hormonal changes related to the menstrual cycle do not show any association with cognitive performance. Although there might be individual exceptions, women's cognitive performance is in general not disturbed by hormonal changes occurring with the menstrual cycle," said lead researcher Brigitte Leeners from University Hospital Zurich in Switzerland.
Subscribe Newsletter