For Quick Alerts
ALLOW NOTIFICATIONS  
For Daily Alerts

ಮನೆಮದ್ದು: ಕಿವಿನೋವಿಗೆ ಹಳ್ಳಿ ಮದ್ದು, ತ್ವರಿತ ಸಾಂತ್ವನ

By Hemanth
|

ಕಣ್ಣು, ಕಿವಿ ಮತ್ತು ಮೂಗು ಈ ಮೂರು ಅಂಗಗಳು ಸರಿಯಾಗಿ ಕೆಲಸ ಮಾಡದೆ ಇದ್ದರೆ ಅದರಿಂದ ನಮ್ಮ ದೈನಂದಿನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಚಿತ. ಈ ಮೂರು ಅಂಗಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಇದು ನಮ್ಮ ದೇಹದ ಹೊರಭಾಗದಲ್ಲಿರುವುದರಿಂದ ವಾತಾವರಣದಲ್ಲಿ ಆಗುವಂತಹ ಪ್ರತಿಯೊಂದು ಏರುಪೇರನ್ನು ಇದು ಎದುರಿಸಬೇಕಾಗುತ್ತದೆ.

ಈ ಲೇಖನದಲ್ಲಿ ಕಿವಿ ನೋವಿನ ಬಗ್ಗೆ ತಿಳಿದುಕೊಳ್ಳುವ. ಕಿವಿ ನೋವು ಆರಂಭವಾದರೆ ಅದರ ನೋವನ್ನು ಸಹಿಸುವುದು ಅಸಾಧ್ಯವಾಗಿರುತ್ತದೆ. ಕಿವಿ ನೋವಿನಿಂದ ತಲೆನೋವು, ಮುಖನೋವು, ನಿಶ್ಯಕ್ತಿ ಇತ್ಯಾದಿ ಕಾಣಿಸಿಕೊಳ್ಳುತ್ತದೆ. ಧೂಳು, ಬ್ಯಾಕ್ಟೀರಿಯಾ ಸೋಂಕು, ಸಾಮಾನ್ಯ ಶೀತ, ಅತಿಯಾದ ಮೇಣ ಶೇಖರಣೆ, ಉರಿಯೂತ, ಗಂಟಲು ನೋವು ಇತ್ಯಾದಿ ಕಿವಿ ನೋವನ್ನುಂಟು ಮಾಡುವುದು.

Ear pain

ಸಾಮಾನ್ಯವಾಗಿ ಬರುವಂತಹ ಕಿವಿ ನೋವನ್ನು ನಿವಾರಿಸಲು ನೈಸರ್ಗಿಕವಾಗಿ ಮಾಡುವಂತಹ ಮನೆಮದ್ದನ್ನು ಬಳಸಬಹುದು. ಆದರೆ ಕಿವಿ ನೋವು ಅತಿಯಾಗಿದ್ದರೆ ವೈದ್ಯರನ್ನು ಭೇಟಿಯಾಗಿ ಅವರಿಂದ ಚಿಕಿತ್ಸೆ ಪಡೆಯುವುದು ಸೂಕ್ತ. ಈ ಮನೆಮದ್ದನ್ನು ಪ್ರಯೋಗಿಸುವ ಮೊದಲು ವೈದ್ಯರ ಸಲಹೆ ಪಡೆದರೆ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು
ತುಳಸಿ ಎಲೆಯ ರಸ- 1 ಚಮಚ
ಈರುಳ್ಳಿ ರಸ- 1 ಚಮಚ ಈರುಳ್ಳಿ: ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯಕ್ಕೆ ಪನ್ನೀರು!

ಈ ಮನೆಮದ್ದನ್ನು ಸರಿಯಾದ ಪ್ರಮಾಣದಲ್ಲಿ ನಿಯಮಿತವಾಗಿ ಬಳಸಿದರೆ ಕಿವಿ ನೋವನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು. ಈ ಮನೆಮದ್ದನ್ನು ಬಳಸುವುದರೊಂದಿಗೆ ವೈದ್ಯರಿಂದ ಔಷಧಿಯನ್ನು ಪಡೆಯುವುದು ಸೂಕ್ತ.

ತುಳಸಿಯಲ್ಲಿರುವ ಕೆಲವೊಂದು ಕಿಣ್ವಗಳು ಪ್ರಬಲವಾಗಿರುವ ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ. ಇದು ಕಿವಿಯ ಒಳಗಡೆ ಊತವನ್ನು ಕಡಿಮೆ ಮಾಡಿ ನೋವು ನಿವಾರಿಸುವುದು. ಈರುಳ್ಳಿಯಲ್ಲಿ ಅಲ್ಲಿಯುಮ್ ಎನ್ನುವ ಅಂಶವಿದ್ದು, ಇದು ಸೋಂಕು ಮತ್ತು ಕಿವಿಯ ನೋವನ್ನು ತಡೆಯುತ್ತದೆ.

ಮನೆಮದ್ದು ತಯಾರಿಸುವ ಮತ್ತು ಬಳಸುವ ವಿಧಾನ
*ಹೇಳಿದಷ್ಟು ಪ್ರಮಾಣದ ಸಾಮಗ್ರಿಯನ್ನು ಒಂದು ಕಪ್ ಗೆ ಹಾಕಿಕೊಳ್ಳಿ.
*ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಇದರ ಎರಡು ಹನಿಯಷ್ಟನ್ನು ಒಂದು ಡ್ರಾಪರ್ ಗೆ ಹಾಕಿಕೊಂಡು ಅದನ್ನು ನಿಧಾನವಾಗಿ ಕಿವಿಗೆ ಬಿಡಿ.
*ಕಿವಿ ನೋವು ಇರುವಾಗ ಮಾತ್ರ ಇದನ್ನು ಬಳಸಿ. ದಿನದಲ್ಲಿ ಒಂದು ಸಲ ಮಾತ್ರ ಇದನ್ನು ಬಳಸಿ.
*ಬಳಸುವ ಮೊದಲು ವೈದ್ಯರ ಸಲಹೆ ಪಡೆಯಿರಿ.

English summary

Kitchen Ingredients To Help Reduce Ear Pain!

Whatever the reason maybe for your ear pain, when it persists, it can put a person under a lot of discomfort. If your ear pain is a symptom of other ailments, it is important to take treatment for those ailments. You can also try this home remedy to reduce your ear pain naturally; have a look.
Story first published: Monday, January 23, 2017, 19:48 [IST]
X
Desktop Bottom Promotion