For Quick Alerts
ALLOW NOTIFICATIONS  
For Daily Alerts

ನೆನಪಿಡಿ ಅಪ್ಪಿತಪ್ಪಿಯೂ ರಾತ್ರಿ ಹೊತ್ತು ಮೊಸರು ಸೇವಿಸಬೇಡಿ...

|

ನಮ್ಮ ದೇಹ ಅತಿ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರವೆಂದರೆ ನೀರು. ಅದು ಬಿಟ್ಟರೆ ಮೊಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಹಾಲನ್ನು ಮೊಸರನ್ನಾಗಿಸುವ ಕ್ರಿಯೆಯಲ್ಲಿ ನಮ್ಮ ಜೀರ್ಣಾಂಗಗಳು ಮಾಡುವ ಮುಕ್ಕಾಲುಪಾಲು ಕೆಲಸವನ್ನು ಮೊಸರಿನಲ್ಲಿರುವ ಬ್ಯಾಕ್ಟೀರಿಯಾಗಳೇ ಮುಗಿಸಿರುತ್ತವೆ. ಹಾಗಾಗಿ ಮೊಸರು ನಮಗೆ ಅತ್ಯುತ್ತಮವಾದ ಆಹಾರವಾಗಿದೆ. ವೈದ್ಯರೂ ಜೀರ್ಣ ಸಮಸ್ಯೆ ಇರುವ ರೋಗಿಗಳಿಗೆ ಮೊಸರನ್ನೇ ಆಹಾರವನ್ನಾಗಿ ಸ್ವೀಕರಿಸಲು ಸಲಹೆ ಮಾಡುತ್ತಾರೆ.

ಅದರಲ್ಲೂ ದಕ್ಷಿಣ ಭಾರತದಲ್ಲಿ ಊಟದ ಕೊನೆಯಲ್ಲಿ ಮೊಸರು ಇಲ್ಲವಾದಲ್ಲಿ ಊಟ ಎಂಬುದು ಯಾವತ್ತಿಗೂ ಪರಿಪೂರ್ಣವಾಗುವುದಿಲ್ಲ. ಒಂದು ಒಳ್ಳೆಯ ಊಟಕ್ಕೆ ಉಪಸಂಹಾರ ಆಡುವುದೇ ಮೊಸರು. ಊಟದ ಕೊನೆಯಲ್ಲಿ ನೀವು ಸೇವಿಸುವ ಮೊಸರನ್ನವು ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಅಧ್ಯಯನದ ಪ್ರಕಾರ ಮೊಸರು ಎಂಬುದು ಒಂದು ಅಳತೆಯಿಲ್ಲದ ಪದಾರ್ಥವಾಗಿದ್ದು, ಇದು ನಿಮ್ಮ ಆಯುಸ್ಸನ್ನು ಹೆಚ್ಚಿಸಲು ಸಹಕರಿಸುತ್ತದೆ ಎಂದು ತಿಳಿದು ಬಂದಿದೆ.

ಆಯುರ್ವೇದದ ಪ್ರಕಾರ

ಆಯುರ್ವೇದದ ಪ್ರಕಾರ

ಆಯುರ್ವೇದದ ಪ್ರಕಾರ ಮೊಸರಿನ ಸೇವನೆ ದೇಹದಲ್ಲಿ ಕಫ ದೋಷ ಉಂಟಾಗಲು ಕಾರಣವಾಗುತ್ತದೆ. ಅದರಲ್ಲೂ ರಾತ್ರಿ ಊಟದಲ್ಲಿ ಮೊಸರಿನ ಸೇವನೆ ಮಾಡಲೇಬಾರದು. ಮೊಸರನ್ನು ರಾತ್ರಿ ಹೊತ್ತು ಸೇವಿಸುತ್ತಾ ಇದ್ದರೆ ಅದು ನಿಧಾನವಾದ ವಿಷ ಎಂದೇ ಆಯುರ್ವೇದದಲ್ಲಿ ವ್ಯಾಖ್ಯಾನಿಸಲಾಗಿದೆ. ಏಕೆಂದರೆ ರಾತ್ರಿ ಸಮಯದಲ್ಲಿ ಮೊಸರಿನ ಜಿಡ್ಡಿನ ಅಂಶಗಳು ದೇಹಕ್ಕೆ ಸೇರಿ ಅದರಿಂದ ಕಫ ಸಮಸ್ಯೆ ಜಾಸ್ತಿಯಾಗುತ್ತದೆಯಂತೆ!

ಆಯುರ್ವೇದದ ಪ್ರಕಾರ

ಆಯುರ್ವೇದದ ಪ್ರಕಾರ

ಇದರಿಂದ ಅನೇಕ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತದೆ. ಹಾಗೆಯೇ ಮಧ್ಯಾಹ್ನದ ಹೊತ್ತು ಸೂರ್ಯ ಶಾಖಕ್ಕೆ ಮೈಯನ್ನು ಒಡ್ಡಬಾರದು. ಏಕೆಂದರೆ ಮಧ್ಯಾಹ್ನದ ಹೊತ್ತು ಪಿತ್ತವು ಬೇಗ ಬರಲು ಕಾರಣವಾಗಿ ಬಿಸಿಲಿನ ಶಾಖಕ್ಕೆ ಅದು ಹೆಚ್ಚಾಗುವ ಅಪಾಯವಿರುತ್ತದೆ. ಹಾಗೆಯೇ ರಾತ್ರಿ ಹೊತ್ತು ಮೊಸರಿನ ಬಳಕೆ ನಿಷಿದ್ಧ. ಮೊಸರು ರುಚಿಯಲ್ಲಿ ಹುಳಿಯಾಗಿದ್ದು, ಅದರ ಸಾಮರ್ಥ್ಯ ಮಾತ್ರ ಅಧಿಕ.

ರಾತ್ರಿ ಹೊತ್ತು ಮಾತ್ರ ಮೊಸರು ಸೇವಿಸಬಾರದಂತೆ!

ರಾತ್ರಿ ಹೊತ್ತು ಮಾತ್ರ ಮೊಸರು ಸೇವಿಸಬಾರದಂತೆ!

ಇದರ ಜೀರ್ಣಕ್ರಿಯೆಯು ಹೆಚ್ಚು ಹೊತ್ತು ತೆಗೆದುಕೊಳ್ಳಲಿದ್ದು, ಜೀರ್ಣ ಕ್ರಿಯೆಯು ಇತರೆ ಆಹಾರಗಳ ಜೀರ್ಣ ಕ್ರಿಯೆಗಿಂತ ಸ್ವಲ್ಪ ಕಷ್ಟವೇ ಸರಿ. ಇದರಿಂದ ಬೊಜ್ಜು, ಕಫ, ಪಿತ್ತ ಹೆಚ್ಚಾಗಿ ಜೀರ್ಣದ ಸಾಮರ್ಥ್ಯವನ್ನೂ ಸಹ ಹೆಚ್ಚಿಸುತ್ತದೆ. ನಿಮಗೆ ಹೊಟ್ಟೆಯ ಊತ ಅಥವಾ ಉರಿಯು ಬಂದ ಸಂದರ್ಭಗಳಲ್ಲಿ ಮೊಸರನ್ನು ಸೇವಿಸಿದರೆ ಸಮಸ್ಯೆ ಇನ್ನೂ ಬಿಗಡಾಯಿಸಲಿದೆ. ಈ ಗುಣಲಕ್ಷಣವು ಹುಳಿಯಾದ ಮೊಸರಿನಲ್ಲಿ ಅಧಿಕವಿರುತ್ತದೆ.

ರಾತ್ರಿ ಹೊತ್ತು ಮಾತ್ರ ಮೊಸರು ಸೇವಿಸಬಾರದಂತೆ!

ರಾತ್ರಿ ಹೊತ್ತು ಮಾತ್ರ ಮೊಸರು ಸೇವಿಸಬಾರದಂತೆ!

ಹುಳಿ ಮೊಸರನ್ನು ಯಾವುದೇ ಕಾರಣಕ್ಕೂ ಬಿಸಿ ಮಾಡಿ ಸೇವಿಸಬಾರದು. ಇದನ್ನು ರಾತ್ರಿ ಸಮಯದಲ್ಲಿ, ವಸಂತ ಋತುವಿನಲ್ಲಿ ಮತ್ತು ಬೇಸಿಗೆಯಲ್ಲಿ ಸೇವಿಸುವುದು ನಿಷಿದ್ಧ. ಆದರೆ ಹುಳಿ ಮೊಸರಿಗೆ ಹೆಸರಿನ ಕಾಳಿನ ಸೂಪ್, ಜೇನು, ತುಪ್ಪ, ಸಕ್ಕರೆ ಮತ್ತು ಆಮ್ಲ ಬೆರೆಸಿಕೊಂಡು ಸೇವಿಸಿದರೆ ಉರಿಮೂತ್ರ ನಿವಾರಣೆ ಮತ್ತು ಅಜೀರ್ಣದ ನಿವಾರಣೆಯಾಗುತ್ತದೆ.

ಪ್ರತಿದಿನವು ಒಂದು ಟೇಬಲ್ ಚಮಚದಷ್ಟು ಮೊಸರು ಸೇವಿಸಿ...

ಪ್ರತಿದಿನವು ಒಂದು ಟೇಬಲ್ ಚಮಚದಷ್ಟು ಮೊಸರು ಸೇವಿಸಿ...

ಮೊಸರಿನಲ್ಲಿ ದೇಹಕ್ಕೆ ಮಾರಕವಾದ ಯಾವುದೇ ಅಂಶವಿಲ್ಲ. ಇದರಲ್ಲಿರುವ ಸಕಲ ಅಂಶಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿವೆ. ವಿಶೇಷವಾಗಿ ರಕ್ತದಲ್ಲಿರುವ ಬಿಳಿರಕ್ತಕಣಗಳನ್ನು ಹೆಚ್ಚಿಸಲು ಮತ್ತು ಪ್ರತಿಕಣದ ಸಾಮರ್ಥ್ಯ ಹೆಚ್ಚಿಸಲು ಮೊಸರು ನೆರವಾಗುತ್ತದೆ. ಈ ಕಣಗಳು ರೋಗಕಾರಕ ಕಣಗಳನ್ನು ಸದೆಬಡಿದು ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಅಧ್ಯಾನದ ಪ್ರಕಾರ ಪ್ರತಿದಿನವು ಒಂದು ಟೇಬಲ್ ಚಮಚದಷ್ಟು ಮೊಸರನ್ನು ಸೇವಿಸುತ್ತಿದ್ದಲ್ಲಿ, ಅದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ. ಮೊಸರಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ದೇಹದಲ್ಲಿರುವ ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳ ಮೇಲೆ ಹೋರಾಡುತ್ತ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ರಂಜಕ ಅಧಿಕ ಪ್ರಮಾಣದಲ್ಲಿದೆ

ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ರಂಜಕ ಅಧಿಕ ಪ್ರಮಾಣದಲ್ಲಿದೆ

ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ರಂಜಕ ಅಧಿಕ ಪ್ರಮಾಣದಲ್ಲಿರುವ ಕಾರಣದಿಂದ ಇದು ಹಲ್ಲುಗಳಿಗೆ ಅತ್ಯುತ್ತಮ ಆಹಾರವಾಗಿರುತ್ತದೆ. ಇದು ಮೂಳೆಗಳಿಗೆ ಉತ್ತಮ ಪೋಷಕಾಂಶಗಳನ್ನು ಒದಗಿಸುವುದರ, ಜೊತೆಗೆ ಆಸ್ಟಿಯೊಪೊರೊಸಿಸ್ ಮತ್ತು ಅರ್ಥರಿಟಿಸ್‌ನಂತಹ ಮೂಳೆಗೆ ಸಂಬಂಧಿಸಿದ ರೋಗಗಳು ಬರದಂತೆ ತಡೆಯುತ್ತದೆ.

ಬಾಯಿಯ ಹುಣ್ಣು ಸನಸ್ಯೆಯಿಂದ ಬಳಲುತ್ತಿದ್ದರೆ

ಬಾಯಿಯ ಹುಣ್ಣು ಸನಸ್ಯೆಯಿಂದ ಬಳಲುತ್ತಿದ್ದರೆ

ಬಾಯಿಯ ಹುಣ್ಣು ಸನಸ್ಯೆಯಿಂದ ಬಳಲುತ್ತಿದ್ದರೆ ಒಂದು ವೇಳೆ ಸತತವಾಗಿ ಬಾಯಿಯ ಹುಣ್ಣು ಅಥವಾ ಮೌಥ್ ಅಲ್ಸರ್ ನಿಂದ ಬಳಲುತ್ತಿದ್ದರೆ ರಾತ್ರಿ ಮಲಗುವ ಮುನ್ನ ಮತ್ತು ಬೆಳಿಗ್ಗೆದ್ದ ತಕ್ಷಣ ಗಟ್ಟಿ ಮೊಸರನ್ನು ಬಾಯಿಯ ಒಳಭಾಗದಲ್ಲಿ ಸವರಿಕೊಂಡರೆ ಶೀಘ್ರವೇ ಗುಣವಾಗುತ್ತದೆ.

ಮೂಲವ್ಯಾಧಿಯ ಸಮಸ್ಯೆಗೆ

ಮೂಲವ್ಯಾಧಿಯ ಸಮಸ್ಯೆಗೆ

ಮೂಲವ್ಯಾಧಿಯ ಕಾರಣ ಆಸನಭಾಗದಲ್ಲಿ ಗಂಟುಗಳಾಗಿರುವ (hemorrhoids) ವ್ಯಕ್ತಿಗಳಿಗೆ ಮೊಸರನ್ನು ನೀರಾಗಿಸಿ ಇದರಲ್ಲಿ ಕೆಲವು ನೆನೆಸಿಟ್ಟ ಪಿಸ್ತಾಗಳನ್ನು ಅರೆದು ಕುಡಿಯುವ ಮೂಲಕ ನೋವಿನಿಂದ ಮುಕ್ತಿ ದೊರಕುತ್ತದೆ.

ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡಕ್ಕೆಲ್ಲಾ ರಾಮಬಾಣ

ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡಕ್ಕೆಲ್ಲಾ ರಾಮಬಾಣ

ಮೊಸರಿನ ಸೇವನೆಯಿಂದ ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡಗಳಿಂದ ರಕ್ಷಣೆ ದೊರಕುತ್ತದೆ. ಅಲ್ಲದೇ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಈ ಮೂಲಕ ಹೃದಯದ ಬಡಿತದ ವೇಗ ಹಾಗೂ ಒತ್ತಡವನ್ನೂ ನಿಯಂತ್ರಿಸುತ್ತದೆ.

ಮೂಳೆಗಳ ಆರೋಗ್ಯಕ್ಕೆ

ಮೂಳೆಗಳ ಆರೋಗ್ಯಕ್ಕೆ

ಮೂಳೆಗಳನ್ನು ದೃಢಗೊಳಿಸಲು ಹಾಲಿಗಿಂತಲೂ ಮೊಸರು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ನೇರವಾಗಿ ಪಡೆದುಕೊಳ್ಳಲು ನಮ್ಮ ದೇಹಕ್ಕೆ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಜೇನನ್ನು ಸೇರಿಸಬೇಕಾಗುತ್ತದೆ. ಆದರೆ ಮೊಸರಿನಲ್ಲಿರುವ ಕ್ಯಾಲ್ಸಿಯಂ ಅನ್ನು ಜೇನಿನ ಅಗತ್ಯವಿಲ್ಲದೇ ದೇಹ ಹೀರಿಕೊಳ್ಳಲು ಸಾಧ್ಯ.

ಕರುಳು ಹಾಗೂ ಜಠರದ ತೊಂದರೆಗಳಿಗೆ ರಾಮಬಾಣ

ಕರುಳು ಹಾಗೂ ಜಠರದ ತೊಂದರೆಗಳಿಗೆ ರಾಮಬಾಣ

ನಿತ್ಯವೂ ಮೊಸರನ್ನು ಆಹಾರದ ಒಂದು ಭಾಗವಾಗಿ ಸೇವಿಸುವ ವ್ಯಕ್ತಿಗಳಲ್ಲಿ ಕರುಳು ಹಾಗೂ ಜಠರದ ತೊಂದರೆಗಳು ಆವರಿಸುವ ಸಾಧ್ಯತೆ ಇತರ ವ್ಯಕ್ತಿಗಳಿಗಿಂತ ಕಡಿಮೆ ಇರುತ್ತದೆ. ಒಂದು ವೇಳೆ ಹೊಟ್ಟೆಯೊಳಗೆ ಬಿಸಿಯಾಗಿರುವಂತೆ ಅನ್ನಿಸಿದರೆ ಬಿಳಿ ಅನ್ನಕ್ಕೆ ಮೊಸರು ಕಲಸಿಕೊಂಡು ಸೇವಿಸಬೇಕು.

English summary

Is it ok to eat yogurt at night?

Ayurveda explains curd as having sour mixed sweet property and it increase Kapha Dosha in the body. The mucus generation is also attributed to the effect of Kapha. During night period, there is natural predominance of Kapha in the body. So, eating curd at night will further increase kapha leading to many complications. This is quite similar to exposing yourself to hot Sun in the afternoon hours
X
Desktop Bottom Promotion