ಹಲ್ಲನ್ನು ಲಕಲಕ ಹೊಳೆಯುವಂತೆ ಮಾಡಲು ಆಯುರ್ವೇದ ಟಿಪ್ಸ್

By: Hemanth
Subscribe to Boldsky

ಸ್ವಲ್ಪ ನಕ್ಕುಬಿಡಿ ಎಂದರೆ ಮುತ್ತಿನಂತಹ ಹಲ್ಲುಗಳು ಕಾಣಸಿಗಬೇಕು. ಹಲ್ಲುಗಳ ಆರೈಕೆ ಮಾಡದವರು ನಗಲು ಹೆದರುತ್ತಾರೆ. ಕೆಲವರ ಹಲ್ಲುಗಳು ವಿವಿಧ ಕಾರಣಗಳಿಂದಾಗಿ ಹಳದಿಯಾಗಿರುತ್ತದೆ,ಮತ್ತೆ ಕೆಲವರದ್ದು ಕೆಟ್ಟು ಹೋಗಿರುತ್ತದೆ. ಅದರಲ್ಲೂ ಹಲ್ಲನ್ನು ಸ್ವಚ್ಛ ಮಾಡುವುದೇ ಇಂದಿನ ದಿನಗಳಲ್ಲಿ ದೊಡ್ಡ ವ್ಯಾಪಾರವನ್ನಾಗಿ ಮಾಡಲಾಗಿದೆ. ಆದರೆ ಹೀಗೆ ಹಲ್ಲನ್ನು ಬಿಳಿ ಮಾಡಲು ರಾಸಾಯನಿಕಗಳನ್ನು ಬಳಸುತ್ತಾರೆ. ಇದರಿಂದ ಅಡ್ಡಪರಿಣಾಮಗಳು ಇದ್ದೇ ಇದೆ. ಮನೆಮದ್ದು ಬಳಸಿ ಹಳದಿ ಹಲ್ಲುಗಳಿಗೆ ವಿದಾಯ ಹೇಳಿ

ಹಾಗಾಗಿ ದೀರ್ಘಕಾಲ ನಿಮ್ಮ ಹಲ್ಲುಗಳು ಬಿಳಿಯಾಗಿ ಮುತ್ತಿನಂತೆ ಹೊಳೆಯುತ್ತಾ ಇರಲು ಆಯುರ್ವೇದ ಔಷಧಿಯನ್ನು ಬಳಸಿದರೆ ತುಂಬಾ ಒಳ್ಳೆಯದು. ಇದು ಹಲ್ಲುಗಳನ್ನು ಬಿಳಿಯಾಗಿಸುವುದು ಮಾತ್ರವಲ್ಲದೆ ಅದರ ಆರೋಗ್ಯವನ್ನು ಕಾಪಾಡುವುದು. ಈ ಲೇಖನದಲ್ಲಿ ಹಲ್ಲುಗಳನ್ನು ಬಿಳಿಯಾಗಿಸುವ ಆಯುರ್ವೇದ ವಿಧಾನವನ್ನು ನಿಮಗೆ ಹೇಳಿಕೊಡಲಿದ್ದೇವೆ... 

ಅಡುಗೆ ಸೋಡಾ

ಅಡುಗೆ ಸೋಡಾ

ಸ್ವಲ್ಪ ಅಡುಗೆ ಸೋಡಾ ತೆಗೆದುಕೊಂಡು ಅದರಿಂದ ಹಲ್ಲುಗಳನ್ನು ನಿಧಾನವಾಗಿ ಉಜ್ಜಿಕೊಳ್ಳಿ. ಇದನ್ನು ಹಲ್ಲುಗಳನ್ನು ಬಿಳಿಯಾಗಿಸುವುದು ಮಾತ್ರವಲ್ಲದೆ ಕಲೆಗಳನ್ನು ನಿವಾರಿಸುವುದು. ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ಇದು ನಿಯಂತ್ರಣದಲ್ಲಿ ಇಡುವುದು. ಒಂದೇ ದಿನದಲ್ಲಿ ಹಲ್ಲುಗಳು ಬಿಳಿಯಾಗುತ್ತದೆ ಎಂದು ನಿರೀಕ್ಷಿಸಬೇಡಿ. ಫಲಿತಾಂಶ ಬರಲು ಸ್ವಲ್ಪ ಸಮಯ ಬೇಕಾಗುವುದು.ಅಡುಗೆ ಸೋಡಾದಿಂದ ಬರೋಬ್ಬರಿ ಏಳು ಪ್ರಯೋಜನಗಳಿವೆ!

ಒಂದು ಚಮಚ ತೆಂಗಿನ ಎಣ್ಣೆ

ಒಂದು ಚಮಚ ತೆಂಗಿನ ಎಣ್ಣೆ

ಬಾಯಿಗೆ ತೈಲವನ್ನು ಹಾಕಿಕೊಂಡು ಬಾಯಿ ಮುಕ್ಕಳಿಸಿಕೊಳ್ಳುವುದು ನೈಸರ್ಗಿಕ ವಿಧಾನವಾಗಿದೆ. ಒಂದು ಚಮಚ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು 15 ನಿಮಿಷ ಕಾಲ ಬಾಯಿ ಮುಕ್ಕಳಿಸಿಕೊಂಡರೆ ವಿಷಕಾರಿ ಅಂಶಗಳು ಹೊರಹೋಗುವುದು. ಇದು ಬ್ಯಾಕ್ಟೀರಿಯಾವನ್ನು ಕೊಂದು ಉರಿಯೂತವನ್ನು ಕಡಿಮೆ ಮಾಡುವುದು. ಅಲ್ಲದೆ ಹಲ್ಲಿನ ಮೇಲೆ ಉಂಟಾಗುವ ಹಳದಿ ಪದರವನ್ನು ಕಡಿಮೆ ಮಾಡುವುದು. ಇದು ಕೊಬ್ಬರಿ ಎಣ್ಣೆಯಿಂದ ತಯಾರಿಸಿದ 'ಹಲ್ಲುಜ್ಜುವ ಪೇಸ್ಟ್'!

ಉಪ್ಪು ಮತ್ತು ಲಿಂಬೆಯ ಮಿಶ್ರಣ

ಉಪ್ಪು ಮತ್ತು ಲಿಂಬೆಯ ಮಿಶ್ರಣ

ಉಪ್ಪು ಮತ್ತು ಲಿಂಬೆಯ ಮಿಶ್ರಣವನ್ನು ಮಾಡಿಕೊಂಡು ಹಲ್ಲುಜ್ಜಿ. ಒಂದು ಚಿಟಿಕೆ ಉಪ್ಪು ಮತ್ತು ಎರಡು ಮೂರು ಹನಿ ಲಿಂಬೆ ಸಾಕು. ವಾರದಲ್ಲಿ ಒಂದು ಅಥವಾ ಎರಡು ಸಲ ಹೀಗೆ ಮಾಡಿದರೆ ಹಲ್ಲುಗಳು ಬಿಳಿಯಾಗುವುದು.

ಹಸಿ ಕ್ಯಾರೆಟ್

ಹಸಿ ಕ್ಯಾರೆಟ್

ಪ್ರತೀ ದಿನ ಹಸಿ ಕ್ಯಾರೆಟ್ ತಿನ್ನಿ. ಇದು ಹಲ್ಲುಗಳನ್ನು ಬಿಳಿಯಾಗಿಸುವುದು. ಕ್ಯಾರೆಟ್

ತಿನ್ನುವಾಗ ಪದರಗಳು ದೂರವಾಗುವುದು. ಪ್ರತಿನಿತ್ಯ ಕ್ಯಾರೆಟ್ ಜ್ಯೂಸ್ ಕುಡಿಯಿರಿ-ಆರೋಗ್ಯ ಪಡೆಯಿರಿ

ಸ್ಟ್ರಾಬೆರಿ

ಸ್ಟ್ರಾಬೆರಿ

ಯಾವಾಗಲೊಮ್ಮೆ ಸ್ಟ್ರಾಬೆರಿ ಸೇವಿಸಿ. ಇದರಲ್ಲಿರುವ ಮಲಿಕ್ ಆಮ್ಲವು ಹಲ್ಲುಗಳನ್ನು ಹೊಳೆಯುವಂತೆ ಮಾಡುವುದು. ಹಲ್ಲುಗಳನ್ನು ಬಿಳಿಯಾಗಿಸುವ ಕೆಲವೊಂದು ಆಯುರ್ವೇದ ವಿಧಾನವಿದು. ಇದನ್ನು ಪ್ರಯತ್ನಿಸಿ ಫಲತಾಂಶದ ಬಗ್ಗೆ ಕಮೆಂಟ್ ಮಾಡಿ.

ಕಹಿ ಬೇವು

ಕಹಿ ಬೇವು

ಕಹಿ ಬೇವು ಒ೦ದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿರಿ, ಇದಕ್ಕೆ ಒ೦ದು ಅಥವಾ ಎರಡು ಹನಿಗಳಷ್ಟು ಲಿ೦ಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ೦ದ ನಿಮ್ಮ ಹಳದಿ ದ೦ತಪ೦ಕ್ತಿಗಳನ್ನು ಮಾಲೀಸು ಮಾಡಿಕೊಳ್ಳುವುದರ ಮೂಲಕ ಅದನ್ನು ಬಿಳುಪಾಗಿಸಿರಿ. ಫಲಿತಾ೦ಶವು ಗಮನಾರ್ಹವಾಗಿ ಕ೦ಡುಬರುವ೦ತಾಗಲು ಈ ಪ್ರಕ್ರಿಯೆಯನ್ನು ದಿನಕ್ಕೊ೦ದು ಬಾರಿ ಕೈಗೊಳ್ಳಿರಿ.

ತಾಜಾ ತುಳಸಿ ಎಲೆಗಳು

ತಾಜಾ ತುಳಸಿ ಎಲೆಗಳು

*ತಾಜಾ ತುಳಸಿ ಎಲೆಗಳನ್ನು ತೆಗೆದುಕೊಂಡು ನೆರಳಲ್ಲಿ ಇಟ್ಟು ಒಣಗಿಸಿ

*ಒಮ್ಮೆ ತುಳಸಿ ಎಲೆಗಳು ಸಂಪೂರ್ಣವಾಗಿ ಒಣಗಿದ ಮೇಲೆ, ಅದನ್ನು ಗ್ರೈಂಡ್ ಮಾಡಿ ಪುಡಿಮಾಡಿ

*ಈ ಪುಡಿಯನ್ನು ನಿಮ್ಮ ಹಲ್ಲುಗಳನ್ನು ಬ್ರಶ್ ಮಾಡಲು ಬಳಸಿ.

*ನಿಮ್ಮ ಬೆರಳಿನಿಂದ ಕೂಡ ತುಳಸಿ ಪುಡಿಯಿಂದ ಹಲ್ಲುಗಳನ್ನು ಉಜ್ಜಬಹುದು ಅಥವಾ ತುಳಸಿ ಪುಡಿಯನ್ನು ನಿಮ್ಮ ಎಂದಿನ ಟೂತ್ ಪೇಸ್ಟ್ ಜೊತೆ ಮಿಶ್ರಣಮಾಡಿ ಬಳಸಲೂ ಬಹುದು.

 
English summary

How To Whiten Teeth At Home

Teeth whitening is a big business. You may need to shell out a lot to own a bright smile. But if you take good care of your teeth regularly, you don't need to spend that much. Actually, using chemicals on your teeth isn't a wiser approach. Using natural methods to clean your teeth yields better results in the long run.Of course, you can't instantly make your teeth glow with natural remedies, but you will surely see better results with time. Here are some tips...
Story first published: Friday, February 3, 2017, 23:26 [IST]
Please Wait while comments are loading...
Subscribe Newsletter