ಲಿಂಬೆ ಸಿಪ್ಪೆ: ಸಂಧಿವಾತ ಸಮಸ್ಯೆಗೆ ಶಕ್ತಿಶಾಲಿ ಮನೆಮದ್ದು

By: manu
Subscribe to Boldsky

ಲಿಂಬೆಹಣ್ಣಿನ ರಸವನ್ನು ಹಿಂಡಿದ ಬಳಿಕ ಇದರ ಸಿಪ್ಪೆಯನ್ನೇನು ಮಾಡುತ್ತೇವೆ? ನೇರವಾಗಿ ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಈ ಸಿಪ್ಪೆಯಲ್ಲಿಯೂ ಲಿಂಬೆಯ ಹಲವಾರು ಉತ್ತಮ ಗುಣಗಳು ಉಳಿದಿದ್ದು ಕೆಲವಾರು ಆರೋಗ್ಯದ ತೊಂದರೆಗಳಿಗೆ ಔಷಧಿಯಾಗಿ ಬಳಸಬಹುದೆಂದು ನಿಮಗೆ ಗೊತ್ತಿತ್ತೇ? ಮನೆಮದ್ದು: ಲಿಂಬೆ ಹಣ್ಣಿನ ಸಿಪ್ಪೆ-ಎಷ್ಟು ಹೊಗಳಿದರೂ ಸಾಲದು!

ಲಿಂಬೆರಸದಲ್ಲಿ ವಿಟಮಿನ್ B6, B1, A ಮತ್ತು C, ಫೋಲಿಕ್ ಆಮ್ಲ, ಮೆಗ್ನೀಶಿಯಂ, ಪೆಕ್ಟಿನ್, ಕ್ಯಾಲ್ಸಿಯಂ, ಪೊಟ್ಯಾಷಿಯಂ ಹಾಗೂ ಗಂಧಕದ ಅಂಶವಿದೆ. ಇವುಗಳೆಲ್ಲವೂ ಇರುವ ಕಾರಣ ಇದು ಪೌಷ್ಟಿಕವೂ ಆಗಿದೆ. ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ! 

ಅಂತೆಯೇ ಲಿಂಬೆಯ ಸಿಪ್ಪೆಯಲ್ಲಿಯೂ ಕ್ಯಾಲ್ಸಿಯಂ, ಪೊಟ್ಯಾಶಿಯಂ, ವಿಟಮಿನ್ ಸಿ ಆಗವೇ ಇದರಲ್ಲಿ ಅಡಗಿದೆ. ಬನ್ನಿ, ಈ ಸಿಪ್ಪೆಗಳನ್ನು ಯಾವ ರೀತಿಯಾಗಿ ಔಷಧಿಯ ರೂಪದಲ್ಲಿ ಬಳಸಬಹುದು, ವಿಶೇಷವಾಗಿ ಸಂಧಿವಾತಕ್ಕೆ ಹೇಗೆ ಬಳಸಬಹುದು ಎಂಬುದನ್ನು ನೋಡೋಣ...

ಔಷಧೀಯ ಗುಣಗಳ ಆಗರ

ಔಷಧೀಯ ಗುಣಗಳ ಆಗರ

ಲಿಂಬೆಸಿಪ್ಪೆ ಒಂದು ಉತ್ತಮ ಪ್ರತಿಜೀವಕವಾಗಿದ್ದು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಅವಶ್ಯಕ ತೈಲವೂ ಔಷಧೀಯ ಗುಣ ಹೊಂದಿದ್ದು ಇದರ ಸೇವನೆಯಿಂದಲೂ, ಚರ್ಮಕ್ಕೆ ಹಚ್ಚಿಕೊಳ್ಳುವ ಮೂಲಕವೂ ಕೆಲವಾರು ಪ್ರಯೋಜನಗಳನ್ನು ಪಡೆಯಬಹುದು.

ಉರಿಯೂತವನ್ನು ಕಡಿಮೆ ಮಾಡುತ್ತವೆ

ಉರಿಯೂತವನ್ನು ಕಡಿಮೆ ಮಾಡುತ್ತವೆ

ಲಿಂಬೆಸಿಪ್ಪೆಯಲ್ಲಿರುವ ಪೋಷಕಾಂಶಗಳು ನರಗಳನ್ನು ಶಾಂತಗೊಳಿಸಿ ಉರಿಯೂತವನ್ನು ಕಡಿಮೆ ಮಾಡುತ್ತವೆ.

ಸಲಹೆ #1

ಸಲಹೆ #1

ಸಂಧಿವಾತ ಅಥವಾ ಮೂಳೆಸಂದುಗಳಲ್ಲಿ ನೋವಿದ್ದರೆ ಈ ವಿಧಾನವನ್ನು ಪ್ರಯತ್ನಿಸಿ: ಒಂದು ಲಿಂಬೆಯಹಣ್ಣಿನ ರಸ ಹಿಂಡಿದ ಬಳಿಕ ಸಿಪ್ಪೆಯನ್ನು ಮಾತ್ರ ಸುಲಿದುಕೊಳ್ಳಿ. ಒಳಗಿನ ತೊಳೆಗಳನ್ನೆಲ್ಲಾ ನಿವಾರಿಸಿ ಕೇವಲ ಹೊರಪದರವನ್ನು ಮಾತ್ರ ಸಂಗ್ರಹಿಸಿ. ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಹಣ್ಣಾದ ಲಿಂಬೆಯ ಸಿಪ್ಪೆಯ ಹಳದಿ ಭಾಗವನ್ನು ಮಾತ್ರ ಸಂಗ್ರಹಿಸಿ ಒಳಗಣ ಬಿಳಿ ಭಾಗವನ್ನು ನಿವಾರಿಸಬೇಕು. ಈ ಸಿಪ್ಪೆಯನ್ನು ಚಿಕ್ಕದಾಗಿ ಕೊಚ್ಚಿ ಒಂದು ದಪ್ಪ ಬ್ಯಾಂಡೇಜ್ ಬಟ್ಟೆಯಲ್ಲಿ ಸುತ್ತಿಕೊಂಡು ನೋವಿರುವ ಭಾಗಕ್ಕೆ ತಗಲುವಂತೆ ಕಟ್ಟಿಕೊಳ್ಳಿ. ನಡೆದಾಡುವಾಗ ಈ ಗಂಟು ಜಾರಿ ಹೋಗದಂತಿರಬೇಕು. ಸುಮಾರು ಎರಡರಿಂದ ಮೂರು ಗಂಟೆ ಹಾಗೇ ಬಿಟ್ಟು ಬಳಿಕ ನಿವಾರಿಸಿ. ಸಂಧಿವಾತಕ್ಕೆ ಮನೆಮದ್ದು ಇರುವಾಗ, ವೈದ್ಯರ ಹಂಗೇಕೆ?

ಸಲಹೆ #2

ಸಲಹೆ #2

ಸಂಧಿವಾತಕ್ಕೆ ಇನ್ನೊಂದು ಉಪಶಮನ ಹೀಗಿದೆ: ಎರಡು ಲಿಂಬೆಗಳ ಸಿಪ್ಪೆಯನ್ನು ಸುಲಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ ಒಂದು ಗಾಜಿನ ಜಾಡಿಯಲ್ಲಿ ಹಾಕಿ. ಇದಕ್ಕೆ ಸುಮಾರು 3-4 ಚಮಚ ಆಲಿವ್ ಎಣ್ಣೆ ಬೆರೆಸಿ. ಬಳಿಕ ಗಟ್ಟಿಯಾಗಿ ಇದರ ಮುಚ್ಚಳವನ್ನು ಮುಚ್ಚಿ. ಹದಿನೈದು ದಿನಗಳ ಬಳಿಕ ಈ ಎಣ್ಣೆಯನ್ನು ನೋವಿರುವ ಭಾಗದಲ್ಲಿ ಮಸಾಜ್ ಮಾಡಲು ಬಳಸಿ. ಬಳಿಕ ಕೆಲವು ಘಂಟೆಗಳ ಕಾಲ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಸಂಧಿವಾತ ಉತ್ತಮ ಮನೆಮದ್ದು

ಸಂಧಿವಾತ ಉತ್ತಮ ಮನೆಮದ್ದು

ಲಿಂಬೆಸಿಪ್ಪೆಯಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಇದೆ. ಇದು ಮೂಳೆಗಳಿಗೆ ಉಪಯುಕ್ತವಾಗಿದೆ. ಭಾರತದಲ್ಲಿ ಲಿಂಬೆಸಿಪ್ಪೆಯನ್ನು ಉಪ್ಪಿನಕಾಯಿಯ ರೂಪದಲ್ಲಿ ಸೇವಿಸಲಾಗುತ್ತದೆ. ಈ ಸಿಪ್ಪೆಯ ಸೇವನೆಯಿಂದ ಸಂಧಿವಾತ ಮತ್ತು ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಟೊಳ್ಳಾಗುವ osteoporosis ತೊಂದರೆ ಬರದಂತೆ ತಡೆಗಟ್ಟುತ್ತದೆ.

ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ನಿವಾರಿಸಲು

ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ನಿವಾರಿಸಲು

ಇದರಲ್ಲಿರುವ ಲಿಂಬೆ ಬಯೋ-ಫ್ಲೇವನಾಯ್ಡುಗಳು ಆಮ್ಲಜನಕದ ಕೊರತೆಯಿಂದ ಎದುರಾಗುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಪಾಲಿಫೆನಾಲ್ ಫ್ಲೇವನಾಯ್ಡುಗಳು ಸಹಾ ಇದ್ದು ಇದರ ಸೇವನೆಯಿಂದ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಅಲ್ಲದೇ ಇದರ ಸೇವನೆಯಿಂದ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ನಿವಾರಿಸಲೂ ಸಾಧ್ಯವಾಗುತ್ತದೆ.

 
English summary

How Lemon Peel Kills Pain

We squeeze lemons for juice and throw away those peels. But do you know that even the peels are useful in many ways? Lemons contain vitamins B6, B1, A and C, folic acid, magnesium, pectin, calcium, potassium and phosphorous. So, they are nutritious. In fact, lemon juice can boost immunity.
Please Wait while comments are loading...
Subscribe Newsletter