ಪುರುಷರಿಗೆ ಕಾಡುವ ಮೂತ್ರದ ಸಮಸ್ಯೆ! ಇಲ್ಲಿದೆ ನೋಡಿ ಪರಿಹಾರ...

Posted By: manu
Subscribe to Boldsky

ಉಪ್ಪು ಕುಡಿದವನು ನೀರು ಕುಡಿಯಲೇಬೇಕು ಎನ್ನುವ ಗಾದೆಯಿದೆ. ಅದೇ ನೀರು ಕುಡಿದವನು ಮೂತ್ರ ಮಾಡಲೇಬೇಕು ಎನ್ನಬಹುದು. ನೀರು ಕುಡಿದ ಪ್ರತಿಯೊಬ್ಬರು ಮೂತ್ರ ವಿಸರ್ಜಿಸಬೇಕು. ಮೂತ್ರ ವಿಸರ್ಜಿಸದೆ ಹಾಗೆ ಕುಳಿತುಕೊಂಡರೆ ಅದರಿಂದ ಕಿಡ್ನಿಯಲ್ಲಿ ಕಲ್ಲಿನಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದರೆ ದಿನದಲ್ಲಿ ಇಷ್ಟೇ ಸಲ ಮೂತ್ರ ವಿಸರ್ಜನೆ ಮಾಡಬೇಕು. ಪುರುಷನ್ನು ಮುಜುಗರಕ್ಕೀಡು ಮಾಡುವ 4 ಕಾಯಿಲೆಗಳು

ದಿನದಲ್ಲಿ ಎಂಟು ಸಲಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆ ಮಾಡಿದರೆ ಅದು ಯಾವುದಾದರೂ ಕಾಯಿಲೆಯ ಲಕ್ಷಣವಾಗಿರಬಹುದು. ಮೂತ್ರನಾಳವು ಅತಿಯಾಗಿ ಕೆಲಸ ಮಾಡುವುದರಿಂದ ಪದೇ ಪದೇ ಮೂತ್ರವಿಸರ್ಜನೆಯಾಗುವುದು. ಪುರುಷರಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಂಡರೆ ಅದಕ್ಕೆ ಮನೆಮದ್ದು ಇದೆ. ಈ ಲೇಖನದ ಮೂಲಕ ಇದು ಯಾವುದೆಂದು ತಿಳಿಯಿರಿ.... 

ಜೇನುತುಪ್ಪ ಹಾಗೂ ತುಳಸಿ

ಜೇನುತುಪ್ಪ ಹಾಗೂ ತುಳಸಿ

ಬೆಳಗ್ಗೆ ಖಾಲಿ ಹೊಟ್ಟೆಗೆ ಮೂರರಿ೦ದ ನಾಲ್ಕು ತುಳಸಿ ಎಲೆಗಳೊ೦ದಿಗೆ ಒ೦ದು ಚಮಚದಷ್ಟು ಜೇನುತುಪ್ಪವನ್ನು ಸೇವಿಸಿರಿ. ಪ್ರತಿದಿನವೂ ಈ ಪರಿಹಾರೋಪಾಯವನ್ನು ಅನುಸರಿಸಿದಲ್ಲಿ, ಖ೦ಡಿತವಾಗಿಯೂ ಇದು ನಿಮ್ಮ ಸಮಸ್ಯೆಯನ್ನು ಕೊನೆಗಾಣಿಸುತ್ತದೆ.

ಮೊಸರು

ಮೊಸರು

ಮೊಸರು ಇತರ ಮನೆಮದ್ದುಗಳಿಗೆ ಹೋಲಿಸಿದಲ್ಲಿ, ಪದೇ ಪದೇ ಮೂತ್ರವಿಸರ್ಜನೆಯ ಸಮಸ್ಯೆಗೆ ಇದು ಅತ್ಯ೦ತ ಸುಲಭದ ಪರಿಹಾರೋಪಾಯವಾಗಿದೆ. ಊಟದೊ೦ದಿಗೆ ಪ್ರತಿದಿನವೂ ಮೊಸರನ್ನು ಸೇವಿಸಿರಿ. ನಿಮ್ಮ ಮೂತ್ರಕೋಶಕ್ಕೆ ದಾಳಿಯನ್ನು೦ಟು ಮಾಡಿ, ಅಲ್ಲಿ ಆಶ್ರಯವನ್ನು ಪಡೆದು ಬೆಳೆಯುವ ಅಪಾಯಕಾರಿ ಸೂಕ್ಷ್ಮಾಣುಜೀವಿಗಳನ್ನು ಮೊಸರಿನಲ್ಲಿ ಅಡಕವಾಗಿರುವ ಪ್ರೋಬಯಾಟಿಕ್ ಗಳು ತಡೆಯುತ್ತವೆ.

ದಾಳಿಂಬೆ ಸಿಪ್ಪೆಯ ಪೇಸ್ಟ್

ದಾಳಿಂಬೆ ಸಿಪ್ಪೆಯ ಪೇಸ್ಟ್

ದಾಳಿಂಬೆಯ ಸಿಪ್ಪೆ ಮತ್ತು ಕಾಳುಗಳು ಕುಳಿತಿರುವ ತಿರುಳು ಕಹಿಯಾಗಿರುವುದರಿಂದ ನಾವು ಅದನ್ನು ಬಳಸದೇ ತ್ಯಾಜ್ಯದಲ್ಲಿ ಎಸೆಯುತ್ತೇವೆ. ಆದರೆ ಹಣ್ಣಿನಂತೆಯೇ ಈ ಸಿಪ್ಪೆ ಮತ್ತು ತಿರುಳಿನಲ್ಲಿಯೂ ಹಲವು ಔಷಧೀಯ ಗುಣಗಳಿವೆ. ಹೌದು ದಾಳಿಂಬೆಯ ಸಿಪ್ಪೆಯು ಪದೇ ಪದೇ ಮೂತ್ರ ವಿಸರ್ಜನೆಯಾಗುವವರಿಗೆ ಅದ್ಭುತವಾಗಿ ಕೆಲಸ ಮಾಡಲಿದೆ. ಮೊದಲು ದಾಳಿಂಬೆಯ ಸಿಪ್ಪೆಯ ಪೇಸ್ಟ್ ಮಾಡಿಕೊಳ್ಳಿ. ಒಂದು ಚಿಟಿಕೆ ಪೇಸ್ಟ್ ಅನ್ನು ತೆಗೆದುಕೊಂಡು ಇದಕ್ಕೆ ಸ್ವಲ್ಪ ನೀರು ಹಾಕಿಕೊಳ್ಳಿ. ಇದನ್ನು ಐದು ದಿನಗಳ ಕಾಲ ಸೇವನೆ ಮಾಡಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು.

ಮೆಂತೆ ಕಾಳುಗಳು

ಮೆಂತೆ ಕಾಳುಗಳು

ಮೆಂತೆ ಎಂದರೆ ಸೊಪ್ಪಿನ ರೂಪದಲ್ಲಿಯೂ ಬೀಜದ ರೂಪದಲ್ಲಿಯೂ ಸಿಗುವ ಸಾಮಾಗ್ರಿಯಾಗಿದ್ದು ಬಹುತೇಕ ಎಲ್ಲಾ ಅಡುಗೆಗಳಲ್ಲಿ ಬಳಸಲಾಗುತ್ತದೆ. ಸಾಂಬಾರ್, ದಾಲ್, ಪರೋಟ ಅಥವಾ ಸಾರಿನಲ್ಲಿ ಕೊಂಚವಾದರೂ ಮೆಂತೆ ಇರಲೇಬೇಕು. ಆದರೆ ಇದು ಕೇವಲ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಇದರ ಔಷಧೀಯ ಗುಣಗಳು ಆರೋಗ್ಯವನ್ನೂ ವೃದ್ಧಿಸುತ್ತದೆ. ಒಂದು ಸಣ್ಣ ಚಮಚ ಮೆಂತೆ ಕಾಳುಗಳನ್ನು ಹುಡಿ ಮಾಡಿಕೊಂಡು, ಇದಕ್ಕೆ ಸ್ವಲ್ಪ ಜಜ್ಜಿದ ಶುಂಠಿಯನ್ನು ಹಾಕಿಕೊಳ್ಳಿ. ತದನಂತರ ಇದಕ್ಕೆ ಒಂದು ಸಣ್ಣ ಚಮಚ ಜೇನುತುಪ್ಪ ಮತ್ತು ಒಂದು ಕಪ್ ನೀರು ಹಾಕಿಕೊಂಡು ಚೆನ್ನಾಗಿ ಕಲಿಸಿ. ನಿಯಮಿತವಾಗಿ ಸೇವನೆ ಮಾಡಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.ಮೆಂತೆ ಕಾಳು ನೆನೆಸಿದ ನೀರು- ಆಯಸ್ಸು ನೂರು!

ಅಡುಗೆ ಸೋಡಾ

ಅಡುಗೆ ಸೋಡಾ

ಒಂದು ದೊಡ್ಡ ಲೋಟ ನೀರಿನಲ್ಲಿ ಚಿಟಿಕೆಯಷ್ಟು ಅಡುಗೆ ಸೋಡಾ ಬೆರೆಸಿ ಪ್ರತೀದಿನ ಕುಡಿದರೆ, ಮೂತ್ರ ವಿಸರ್ಜನೆಗೆ ಆಗುವ ಅವಸರವನ್ನು ಇದು ತಡೆಯುತ್ತದೆ.

ಹುರಿದ ಹುರುಳಿ ಬೀಜಗಳು

ಹುರಿದ ಹುರುಳಿ ಬೀಜಗಳು

ಪ್ರತಿದಿನ ಬೆಳಗ್ಗೆ ಸ್ವಲ್ಪ ಹುರುಳಿ ಕಾಳುಗಳನ್ನು ಬೆಲ್ಲದೊ೦ದಿಗೆ ಸೇವಿಸಿದಲ್ಲಿ, ಪದೇ ಪದೇ ಮೂತ್ರವಿಸರ್ಜನೆಯ ಸಮಸ್ಯೆಗೆ ಇದೊ೦ದು ಔಷಧದ೦ತೆ ಕಾರ್ಯನಿರ್ವಹಿಸುತ್ತದೆ.

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜ

ಸಾಮಾನ್ಯವಾಗಿ ಕುಂಬಳಕಾಯಿಯನ್ನು ದೈನಂದಿನ ಆಹಾರಪದಾರ್ಥಕ್ಕೆ ಅದರ ಬೀಜವನ್ನು ಹೊರಹಾಕಿ ಕೇವಲ ಅದರ ತಿರುಳನ್ನೇ ಆಹಾರಕ್ಕೆ ಹೆಚ್ಚಿನವರು ಬಳಸುತ್ತಾರೆ. ಆದರೆ ಅದರ ಬೀಜವೂ ಸಹ ದೇಹದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಸಾಕಷ್ಟು ಜನರಿಗೆ ತಿಳಿದಿಲ್ಲ. ಅದರಲ್ಲೂ ಪದೇ ಪದೇ ಮೂತ್ರ ವಿಸರ್ಜನೆಯ ಸಮಸ್ಯೆಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲದೆ ಇದು ಕೊಬ್ಬಿನಾಮ್ಲದಿಂದ ಸಮೃದ್ಧವಾಗಿದ್ದು, ಇದು ಮೂತ್ರನಾಳ ಹಾಗೂ ಮೂತ್ರಕೋಶವನ್ನು ಆರೋಗ್ಯವಾಗಿಡುತ್ತದೆ.

ಸೋಂಪು ಕಾಳುಗಳು

ಸೋಂಪು ಕಾಳುಗಳು

ಬಿಸಿ ಹಾಲಿಗೆ ಒಂದು ಚಮಚ ಸೋಂಪು ಕಾಳುಗಳನ್ನು ಹಾಕಿ. ಒಂದು ಲೋಟ ನೀರು ತೆಗೆದುಕೊಂಡು ಅದಕ್ಕೆ 2-3 ಚಮಚ ಸಕ್ಕರೆ ಹಾಕಿ ಅದನ್ನು ಬಿಸಿ ಕುದಿಸಿ. ಸಕ್ಕರೆಯ ಪಾಕವನ್ನು ಬಿಸಿ ಹಾಲಿಗೆ ಹಾಕಿ. ದಿನದಲ್ಲಿ ಒಂದು ಸಲ ಇದನ್ನು ಸೇವಿಸಿ ಮತ್ತು ಇದರಿಂದ ಮೂತ್ರ ಅಸಂಯಮವು ಕಡಿಮೆಯಾಗುತ್ತದೆ.

 

For Quick Alerts
ALLOW NOTIFICATIONS
For Daily Alerts

    English summary

    Home Remedies For Frequent Urination In Men

    Frequent urination occurs because of the over-active bladder. Several reasons are explained by the experts for frequent urination, including urinary tract problems, stress in the bladder, prostrate diseases and diabetes. Apart from these issues, drinking more water or any other beverage also causes an urge to urinate frequently. Here, in this article, we will take a look into some of the effective home remedies for frequent urination in men.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more