For Quick Alerts
ALLOW NOTIFICATIONS  
For Daily Alerts

ಪುರುಷನ್ನು ಮುಜುಗರಕ್ಕೀಡು ಮಾಡುವ 4 ಕಾಯಿಲೆಗಳು

By ವಿವೇಕ್
|
Embarrassing Health Problem Of Men
ಕೆಲವೊಂದು ಕಾಯಿಲೆ ಬಂದರೆ ಅದರ ನೋವನ್ನು ಸಹಿಸುವುದು ಕಷ್ಟ, ಆದರ ಸಮಸ್ಯೆಯನ್ನು ಇನ್ನೊಬ್ಬರ ಹತ್ತಿರ ಹೇಳಿಕೊಳ್ಳಲು ಮುಜುಗರವಾಗುತ್ತದೆ. ಡಾಕ್ಟರ್ ಬಳಿ ಹೇಳಿ ಕೊಳ್ಳಲು ತುಂಬಾ ಮುಜುಗರವಾಗುತ್ತದೆ. ಈ ರೀತಿಯ ಮುಜುಗರ ತರುವಂತ ಕಾಯಿಗಳು ಸ್ತ್ರೀಯರಲ್ಲಿ ಹಾಗ ಪುರುಷರಲ್ಲಿ ಕಂಡು ಬರುತ್ತದೆ.

ಪುರುಷರಿಗೆ ಈ ಕೆಳಗಿನ ಮುಜುಗರ ತರಿಸುವಂತಹ ಕಾಯಿಲೆಗಳು ಕಂಡು ಬರುತ್ತದೆ. ಅದರಲ್ಲೂ ಈ ಸಮಸ್ಯೆಯೂ 5 ಜನ ಪುರುಷರಲ್ಲಿ ಇಬ್ಬರಲ್ಲಿ ಕಂಡು ಬರುತ್ತದೆ. ಆ ರೀತಿಯ ಗುಪ್ತ ಸಮಸ್ಯೆಗಳೇನು ಅದು ಬಂದರೆ ಏನು ಮಾಡಬೇಕು ಎಂದು ನೋಡೋಣ ಬನ್ನಿ:

1. ಶೀಘ್ರ ಸ್ಖಲನ: ಮಲಬದ್ಧತೆ, ಹೊಟ್ಟೆ ಕೆಡುವುದು ರೀತಿಯ ಸಮಸ್ಯೆಯಂತೆ ಇದು ಕೂಡ ಕೆಲವು ಪುರುಷರಿಗೆ ಉಂಟಾಗುವ ಸಮಸ್ಯೆಯಾಗಿದೆ. ಯಾವುದಾದರೂ ಕಾಯಿಲೆ ಇದ್ದರೆ ಈ ರೀತಿ ಉಂಟಾಗುತ್ತದೆ. ಈ ಕಾಯಿಲೆಯಲ್ಲಿ ಲೈಂಗಿಕ ಕ್ರಿಯೆ ಪೂರ್ಣಗೊಳ್ಳುವ ಮುನ್ನ, ನಿದ್ರೆಯಲ್ಲಿ ವೀರ್ಯಾಣುಗಳು ಹೊರಬರುತ್ತವೆ. ಈ ರೀತಿಯ ಸಮಸ್ಯೆ ಕಂಡು ಬಂದರೆ ಪುರುಷ ವೈದ್ಯರನ್ನು ಸಂಪರ್ಕಿಸಿ. ಈ ರೀತಿಯ ಸಮಸ್ಯೆ ಇದ್ದರೆ ನಾಚಿಕೆ ಪಟ್ಟುಕೊಂಡು ಕೂರುವ ಬದಲು ವೈದ್ಯರನ್ನು ಕಂಡು ಪರಿಹಾರ ಕಂಡುಕೊಳ್ಳಿ.

2. ವಿಪರೀತ ಮೂತ್ರ ವಿಸರ್ಜನೆ: ಆಗಾಗ ಮೂತ್ರ ವಿಸರ್ಜನೆಗೆ ಹೋಗುತ್ತಿದ್ದರೆ ಡಯಾಬಿಟಿಸ್ ಅಥವಾ ಇತರ ಸಮಸ್ಯೆ ಇರಬಹುದು. ಆದ್ದರಿಂದ ಸುಮ್ಮನೆ ಕೂರುವ ಬದಲು ವೈದ್ಯರನ್ನು ಕಂಡು ಪರೀಕ್ಷಿಸುವದು ಒಳ್ಳೆಯದು.

3. ಗುಪ್ತಾಂಗದಲ್ಲಿ ದುರ್ನಾತ: ಗುಪ್ತಾಂಗದಲ್ಲಿ ದುರ್ನಾತ ಕಂಡು ಬರುತ್ತಿದ್ದರೆ ಆ ಬಾಗದ ಶುಚಿತ್ವಕ್ಕೆ ತುಂಬಾ ಪ್ರಾಮುಖ್ಯತೆ ಕೊಡಬೇಕು. ಆ ಭಾಗವನ್ನು ಶೇವ್ ಮಾಡಿ, ಚೆನ್ನಾಗಿ ತೊಳೆದು ಒರೆಸಬೇಕು. ಅದನ್ನು ಶುಚಿ ಮಾಡಿದಿದ್ದರೆ ಬ್ಯಾಕ್ಟೀರಿಯಾಗಳಿಂದ ಸೋಂಕು ತಗುಲಿ ತುರಿಕೆ ಕಂಡು ಬರಬಹುದು.

4. ಲೈಂಗಿಕ ತೊಂದರೆ: ಕೆಲವರಿಗೆ ಲೈಂಗಿಕ ಕ್ರಿಯೆಯ ನಂತರ ಆ ಭಾಗ ಊದಿಕೊಳ್ಳುವುದು, ನೋವು ಕಂಡು ಬರುತ್ತದೆ. ಈ ರೀತಿಯ ತೊಂದರೆ ಕಾಣಿಸಿಕೊಂಡರೆ ನಾಚಿಕೆ ಪಟ್ಟು ಕೂರುವ ಬದಲು ವೈದ್ಯರನ್ನು ಕಂಡು ಸಲಹೆಯನ್ನು ಪಡೆಯಿರಿ.

English summary

Embarrassing Health Problem Of Men | Tips For Men Health | ಪುರುಷನ್ನು ಮುಜುಗರಕ್ಕೀಡು ಮಾಡುವ 4 ಕಾಯಿಲೆಗಳು | ಪುರುಷರ ಆರೋಗ್ಯಕ್ಕೆ ಕೆಲ ಸಲಹೆಗಳು

Two among 5 men suffer from health problems that are very embarrassing. You prefer suffering from it and do not find out solutions or treatment to these embarrassing health problems.
X
Desktop Bottom Promotion