For Quick Alerts
ALLOW NOTIFICATIONS  
For Daily Alerts

ದೀಪಾವಳಿಯ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸುಲಭವಾದ ಹತ್ತು ಸಲಹೆಗಳು

By Arshad
|

ದೀಪಗಳ ಹಬ್ಬ ಎಂದೇ ಜನಜನಿತವಾಗಿರುವ ದೀಪಾವಳಿ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಹಲವು ದೇಶಗಳಲ್ಲಿಯೂ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಮೇರಿಕಾ ಸಹಿತ ಹಲವು ದೇಶಗಳಲ್ಲಿ ಈ ದಿನವನ್ನು ಸರ್ಕಾರಿ ರಜಾದಿನವನ್ನಾಗಿ ಘೋಷಿಸಲಾಗಿದೆ. ಈ ವರ್ಷದ ದೀಪಾವಳಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲು ವಿಶ್ವದಾದ್ಯಂತ ಭಾರತೀಯರು ಸಜ್ಜಾಗಿದ್ದಾರೆ.

ಮಲೇಶಿಯಾ, ಮಾಯನ್ಮಾರ್, ಶ್ರೀಲಂಕಾ ಮೊದಲಾದ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದೂ ಧರ್ಮೀಯರು ಈ ರಜಾದಿನದಲ್ಲಿ ಭಾರತದಲ್ಲಿದ್ದಷ್ಟೇ ಸಡಗರ, ಉಲ್ಲಾಸದಿಂದ ಹಬ್ಬ ಆಚರಿಸಿ ಭಾರತದ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ವಿಜೃಂಭಿಸುತ್ತಾರೆ. ದೀಪಾವಳಿ ಹಬ್ಬದ ಮುಖ್ಯ ಸಾರವೆಂದರೆ ಇದು ಜ್ಞಾನದ ದೀವಟಿಗೆಯ ಮೂಲಕ ಅಜ್ಞಾನದ ಕತ್ತಲನ್ನು ತೊಡೆದು ಹಾಕುವುದಾಗಿದೆ. ರಾತ್ರಿಹೊತ್ತು ಎಲ್ಲೆಡೆ ಬೆಳಗುವ ದೀವಟಿಗೆಗಳು ನೋಟವನ್ನು ಅತ್ಯಂತ ಸುಂದರವಾಗಿಸುವುದು ಮಾತ್ರವಲ್ಲ, ಋಣಾತ್ಮಕ ಶಕ್ತಿಯನ್ನು ಓಡಿಸಿ ಮನೆಯ ಪರಿಸರವನ್ನು ಪವಿತ್ರವಾಗಿಸುವುದೂ ಆಗಿದೆ.

ದೀಪಾವಳಿಯ ಸಮಯದಲ್ಲಿ 'ಅಸ್ತಮಾದ' ಅಪಾಯ ಜಾಸ್ತಿ! ಇರಲಿ ಎಚ್ಚರ...

ಒಟ್ಟು ಐದು ದಿನಗಳ ಕಾಲ ನಡೆಯುವ ಈ ಹಬ್ಬದ ಪ್ರತಿ ದಿನವೂ ಹಲವು ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಹಬ್ಬಕ್ಕಾಗಿ ಹೊಸಬಟ್ಟೆ, ಆಭರಣ ಕೊಳ್ಳುವುದು, ಮನೆಯನ್ನು ಚೊಕ್ಕಟವಾಗಿಸಿ ಹೊಸ ವಸ್ತುಗಳನ್ನು ಸ್ಥಾಪಿಸುವುದು, ಸಿಹಿ ತಿಂಡಿಗಳನ್ನು ತಯಾರಿಸುವುದು, ಬಂಧು ಮಿತ್ರರ ಮನೆಗೆ ಭೇಟಿ ನೀಡುವುದು, ಮನೆಗೆ ಅತಿಥಿಗಳನ್ನು ಆಹ್ವಾನಿಸುವುದು, ಎಲ್ಲರೂ ಜೊತೆಗೂಡಿ ಸಿಹಿಯನ್ನು ಹಂಚಿಕೊಂಡು ಔತಣಕೂಟದಲ್ಲಿ ಭಾಗವಹಿಸುವುದು ಹಬ್ಬದ ಚಟುವಟಿಕೆಗಳಾಗಿವೆ. ಹೊಸಬಟ್ಟೆ ತೊಟ್ಟು ಅತ್ಯುತ್ತಮವಾಗಿ ಕಾಣಿಸಿಕೊಳ್ಳುವ ತವಕ ಹಾಗೂ ಹೆಚ್ಚಿನ ಜನರೊಂದಿಗೆ ಬೆರೆಯುವ ಅವಕಾಶ. ಆದರೆ ಈ ಸಮಯದಲ್ಲಿ ಆರೋಗ್ಯ ಮಾತ್ರ ಕೈಗೊಡಬಾರದು. ಅಲ್ಲದೇ ಹಬ್ಬದ ಸಂಭ್ರಮದ ಭರದಲ್ಲಿ ಸಿಹಿ ತಿಂದಿದ್ದು ಎಷ್ಟು ಎಂದು ಗೊತ್ತೇ ಆಗದೇ ಹಬ್ಬ ಮುಗಿಯುವಾಗ ದೇಹದ ತೂಕ ನಾಲ್ಕಾರು ಕೇಜಿ ಏರಿದ್ದರೂ ಆಶ್ಚರ್ಯವಿಲ್ಲ.

ಈ ಬಾರಿಯ ದೀಪಾವಳಿ ಹಬ್ಬಕ್ಕೆ ಸ್ವಲ್ಪ ಸ್ವೀಟ್ಸ್ ಕಡಿಮೆ ತಿನ್ನಿ!!

ಒಂದು ವೇಳೆ ನೀವು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದು ನಿತ್ಯವೂ ಕೆಲವು ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರೆ ಹಬ್ಬದ ದಿನಗಳಲ್ಲಿ ಈ ಕಟ್ಟುಪಾಡುಗಳನ್ನು ಅನುಸರಿಸಲು ಕೊಂಚ ಕಷ್ಟವಾಗಬಹುದು. ಕೆಲವರು ತಮ್ಮ ವಿವಾಹಕ್ಕೂ ಮುನ್ನ ತಮ್ಮ ಶರೀರವನ್ನು ಕಟ್ಟುಮಸ್ತಾಗಿರಿಸಲು ಯತ್ನಿಸುತ್ತಿದ್ದಿರಬಹುದು. ಈ ಸಂದರ್ಭದಲ್ಲಿಯೇ ಹಬ್ಬದ ದಿನಗಳೂ ಆಗಮಿಸಿದರೆ ಹಬ್ಬದ ಸಂಭ್ರಮವೂ ಕಡಿಮೆಯಾಗದಂತೆ ಹಾಗೂ ತೂಕ ಇಳಿಸುವ ಪ್ರಯತ್ನಗಳಿಗೂ ಧಕ್ಕೆಯಾಗದಂತೆ ಹೇಗೆ ಸಂಭಾಳಿಸುವುದು? ಬನ್ನಿ, ಈ ಪ್ರಶ್ನೆಗೆ ಕೆಳಗೆ ವಿವರಿಸಿರುವ ಮಾಹಿತಿಗಳು ಸೂಕ್ತ ಉತ್ತರ ನೀಡಲಿವೆ:

ಹಸಿರು ಎಲೆಗಳನ್ನು ಸೇವಿಸಿ

ಹಸಿರು ಎಲೆಗಳನ್ನು ಸೇವಿಸಿ

ಹಬ್ಬದ ಸಂದರ್ಭದಲ್ಲಿ ಸಾಕಷ್ಟು ಹಸಿಯಾಗಿ ಸೇವಿಸಬಹುದಾದ ಎಲೆಗಳನ್ನು ಸೇವಿಸಿ. ಪಾಲಕ್, ಪುದಿನಾ ಕೇಲ್ ಎಲೆಗಳು ಮೊದಲಾದವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಹಬ್ಬಕ್ಕೂ ಮೊದಲೇ ಖರಿದಿಸಿಟ್ಟುಕೊಂಡು ಹಬ್ಬದ ಎಲ್ಲಾ ದಿನಗಳಲ್ಲಿ ಸಾಧ್ಯವಾದಷ್ಟು ತಿನ್ನುತ್ತಿರಿ. ಈ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು, ವಿಟಮಿನ್ನುಗಳು ಹಾಗೂ ಖನಿಜಗಳಿವೆ. ಇವು ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಲು ನೆರವಾಗುತ್ತವೆ. ಎಲ್ಲಕ್ಕೂ ಹೆಚ್ಚಾಗಿ ಇದರಲ್ಲಿ ಕರಗದ ನಾರು ಭಾರಿ ಪ್ರಮಾಣದಲ್ಲಿದೆ. ಪರಿಣಾಮವಾಗಿ ತೂಕ ಇಳಿಸುವ ನಿಮ್ಮ ಪ್ರಯತ್ನಕ್ಕೆ ಹೆಚ್ಚಿನ ಬೆಂಬಲ ದೊರಕುತ್ತದೆ ಹಾಗೂ ತ್ವಚೆಯೂ ಆರೋಗ್ಯದಿಂದ ಕಂಗೊಳಿಸುತ್ತದೆ.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಪ್ರತಿದಿನ ಕನಿಷ್ಠ ಎರಡು ಲೀಟರುಗಳಷ್ಟು ನೀರನ್ನು ಕುಡಿಯಿರಿ. ನೀರು ಕುಡಿಯುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಹಾಗೂ ತ್ವರಿತವಾಗಿ ಪಡೆಯಬಹುದಾದ ಅನುಕೂಲಗಳಿವೆ. ಅಲ್ಲದೇ ನೀರು ತೂಕ ಇಳಿಸುವ ಗತಿಯನ್ನು ಹೆಚ್ಚಿಸುತ್ತದೆ. ತ್ವಚೆಗೆ ಅಗತ್ಯವಾಗಿರುವ ಆರ್ದ್ರತೆ ಹಾಗೂ ಸಾಮಾನ್ಯವಾಗಿ ಕಾಡುವ ಜೀರ್ಣ ಸಂಬಂಧಿ ತೊಂದರೆಗಳಿಗೆ ಬರೆಯ ನೀರು ಸಾಕು.

ವ್ಯಾಯಾಮವನ್ನು ಬಿಡದಿರಿ

ವ್ಯಾಯಾಮವನ್ನು ಬಿಡದಿರಿ

ಒಂದು ವೇಳೆ ನೀವು ನಿತ್ಯವೂ ವ್ಯಾಯಾಮ ಮಾಡುತ್ತಿದ್ದರೆ ಹಬ್ಬದ ದಿನಗಳೆಂದು ಈ ದಿನಗಳಲ್ಲಿ ವ್ಯಾಯಾಮಕ್ಕೂ ರಜೆ ನೀಡಬೇಡಿ. ನಿತ್ಯದ ಸಮಯದಲ್ಲಿ ಈ ದಿನಗಳಂದೂ ಎಂದಿನಂತೆಯೇ ವ್ಯಾಯಾಮ ಮುಂದುವರೆಸಿ. ಓಟ, ಜಾಗಿಂಗ್, ಜುಂಬಾ, ಈಜು ಮೊದಲಾದವು ದೇಹದಲ್ಲಿನ ನೀರಿನ ಪ್ರಮಾಣವನ್ನು ಬಳಸಿಕೊಂಡು ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಅಲ್ಲದೇ ವ್ಯಾಯಾಮದಿಂದ ದೇಹ ಹಗುರಾಗಿರುತ್ತದೆ ಹಾಗೂ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಸಾಧ್ಯವಾದಷ್ಟು ಹಣ್ಣು ತರಕಾರಿಗಳನ್ನುಸೇವಿಸಿ

ಸಾಧ್ಯವಾದಷ್ಟು ಹಣ್ಣು ತರಕಾರಿಗಳನ್ನುಸೇವಿಸಿ

ಹಸಿಯಾಗಿ ಸೇವಿಸಬಹುದಾದ ಹಾಗೂ ಸಿಪ್ಪೆ ಸಹಿತ ಸೇವಿಸಬಹುದಾದ ಹಣ್ಣುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸೇವಿಸಿ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಹಾಗೂ ಇತರ ಪ್ರಮುಖ ಖನಿಜಗಳಿದ್ದು ಆರೋಗ್ಯವನ್ನು ವೃದ್ದಿಸುವುದು ಮಾತ್ರವಲ್ಲ, ತೂಕವನ್ನೂ ಕ್ಷಿಪ್ರವಾಗಿ ಇಳಿಸಲು ನೆರವಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನೂ ಪ್ರಬಲವಾಗಿಸುತ್ತದೆ.

ಆದರೆ ಆಲುಗಡ್ಡೆ ಮತ್ತು ಬಾಳೆಹಣ್ಣು ಬೇಡ

ಆದರೆ ಆಲುಗಡ್ಡೆ ಮತ್ತು ಬಾಳೆಹಣ್ಣು ಬೇಡ

ಪಿಷ್ಟದ ಪ್ರಮಾಣ ಹೆಚ್ಚಿರುವ ಆಲುಗಡ್ಡೆ ಮೊದಲಾದ ತರಕಾರಿಗಳನ್ನೂ ಪೊಟ್ಯಾಶಿಯಂ ಹೆಚ್ಚಿರುವ ಬಾಳೆಹಣ್ಣು ಮೊದಲಾದ ಫಲಗಳನ್ನೂ ಸೇವಿಸದಿರಿ. ಇವುಗಳಲ್ಲಿ ಇತರ ಖನಿಜಗಳಿದ್ದು ಆರೋಗ್ಯಕ್ಕೆ ಪ್ರಯೋಜನಕಾರಿಯಾದರೂ ಜೊತೆಜೊತೆಗೇ ತೂಕವನ್ನು ಹೆಚ್ಚಿಸುವ ಕೊಬ್ಬನ್ನು ಉತ್ಪಾದಿಸಲು ನೆರವಾಗುವ ಕಾರಣ ಇವುಗಳ ಸೇವನೆಯನ್ನು ಆದಷ್ಟೂ ಕಡಿಮೆ ಮಾಡಿ.

ಆರೋಗ್ಯಕರ ಉಪಾಹಾರ ಸೇವಿಸಿ

ಆರೋಗ್ಯಕರ ಉಪಾಹಾರ ಸೇವಿಸಿ

ನಮ್ಮ ದಿನದ ಮೂರೂ ಹೊತ್ತಿನ ಊಟಗಳಲ್ಲಿ ಅತ್ಯಂತ ಪ್ರಮುಖವಾದುದೆಂದರೆ ಮುಂಜಾನೆಯ ಪ್ರಥಮ ಆಹಾರ. ಇದು ಕಡಿಮೆ ಪ್ರಮಾಣದಲ್ಲಿದ್ದು ಪೌಷ್ಟಿಕವಾಗಿದ್ದಷ್ಟೂ ಉತ್ತಮ. ಒಂದು ದೊಡ್ಡ ಲೋಟ ಕೆನೆರಹಿತ ಹಾಲು ಹಾಗೂ ಒಂದು ಇಡಿಯ ಸೇಬುಹಣ್ಣು ತಿಂದರೆ ಬೇಕಾದಷ್ಟಾಯಿತು. ಇದರಿಂದ ಮುಂದಿನ ಅವಧಿಯಲ್ಲಿ ನಡುವೆ ಹಸಿವಾಗುವುದಿಲ್ಲ ಹಾಗೂ ತೂಕ ಇಳಿಸಿಕೊಳ್ಳಲೂ ನೆರವಾಗುತ್ತದೆ. ಈ ಆಹಾರಗಳಲ್ಲಿ ಕೊಬ್ಬು ಇಲ್ಲದಿರುವುದು ಹಾಗೂ ಕ್ಯಾಲೋರಿಗಳೂ ಕಡಿಮೆ ಇರುವುದು ತೂಕ ಇಳಿಕೆಗೆ ಪೂರಕವಾಗಿದೆ.

ಕೆಂಪು ಮಾಂಸದ ಸೇವನೆ ಬೇಡ

ಕೆಂಪು ಮಾಂಸದ ಸೇವನೆ ಬೇಡ

ಒಂದು ವೇಳೆ ನೀವು ಮಾಂಸಾಹಾರಿಗಳಾಗಿದ್ದರೆ ಕೆಂಪು ಮಾಂಸದ ಆಹಾರಗಳ ಬದಲಿಗೆ ಬಿಳಿ ಮಾಂಸಗಳನ್ನು ಆಯ್ಕೆ ಮಾಡಿಕೊಳ್ಳಿ. ಸಾಗರ ಉತ್ಪನ್ನಗಳು ಅತ್ಯುತ್ತಮ ಆಯ್ಕೆಯಾಗಿದೆ. ಇವುಗಳ ಸೇವನೆಯಿಂದ ನಿಮ್ಮ ತೂಕ ಇಳಿಕೆಯ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಹಾಗೂ ರೋಗ ನಿರೋಧಕ ಶಕ್ತಿಯೂ ಉತ್ತಮವಾಗುತ್ತದೆ.

ಹೆಚ್ಚಿನ ಪ್ರೋಟೀನ್ ಸೇವಿಸಿ

ಹೆಚ್ಚಿನ ಪ್ರೋಟೀನ್ ಸೇವಿಸಿ

ನಿಮ್ಮ ಊಟದಲ್ಲಿ ಹೆಚ್ಚಿನ ಪ್ರೋಟೀನ್ ಇರುವ ಆಹಾರಗಳಿರಲಿ. ಕಡಿಮೆ ಕೊಬ್ಬಿನ ಕೋಳಿ ಮಾಂಸ, ಕಡ್ಲೆ ಕಾಳು, ರಾಜ್ಮಾ, ಸೋಯಾ, ಟೋಫು ಇತ್ಯಾದಿಗಳು ಪ್ರೋಟೀನ್ ಭರಿತವಾಗಿದ್ದು ಇವನ್ನು ಜೀರ್ಣಿಸಿಕೊಳ್ಳಲು ದೇಹ ಹೆಚ್ಚಿನ ಕೊಬ್ಬನ್ನು ದಹಿಸಬೇಕಾಗಿ ಬರುವ ಕಾರಣ ತೂಕ ಇಳಿಕೆಗೆ ಸುಲಭವಾಗುತ್ತದೆ. ಪ್ರೋಟೀನ್ ಯುಕ್ತ ಆಹಾರಗಳು ಸ್ನಾಯುಗಳ ವರ್ಧನೆಗೂ ಪೂರಕವಾಗಿದ್ದು ನಿಮ್ಮ ವ್ಯಾಯಾಮದ ಪ್ರಯತ್ನಗಳಿಗೆ ಉತ್ತಮ ಫಲ ನೀಡಿ ಹುರಿಗಟ್ಟಿದ ಸ್ನಾಯುಗಳ ಉಡುಗೊರೆ ನೀಡುತ್ತವೆ.

ವಿಷವಸ್ತುಗಳನ್ನು ವಿಸರ್ಜಿಸಿ

ವಿಷವಸ್ತುಗಳನ್ನು ವಿಸರ್ಜಿಸಿ

ದೀಪಾವಳಿಗೆ ಒಂದು ವಾರವಿದ್ದಂತೆಯೇ ಒಂದು ದಿನವನ್ನು ದೇಹದ ಸ್ವಚ್ಛತೆಗಾಗಿ ಮೀಸಲಿಡಿ. ಈ ದಿನವಿಡೀ ಕೇವಲ ಆರೋಗ್ಯಕರವಾದ ಹಣ್ಣುಗಳ ಹಾಗೂ ತರಕಾರಿಗಳ ರಸವನ್ನು ಮಾತ್ರವೇ ಸೇವಿಸುತ್ತಾ ಬನ್ನಿ ಹಾಗೂ ಕೇವಲ ಸಾಲಾಡ್ ಸೇವಿಸಿ. ಇದರಿಂದ ದೇಹದಲ್ಲಿರುವ ಕಲ್ಮಶಗಳು ಪೂರ್ಣವಾಗಿ ಹೊರಹೋಗಲು ನೆರವಾಗುತ್ತದೆ ಹಾಗೂ ಜೀವರಾಸಾಯನಿಕ ಕ್ರಿಯೆಯ ಗತಿ ಹೆಚ್ಚುತ್ತದೆ.

ಕೆಲವು ಆಹಾರಗಳಿಗೆ ಬದಲಿ ಆಹಾರಗಳನ್ನು ಸೇವಿಸಿ

ಕೆಲವು ಆಹಾರಗಳಿಗೆ ಬದಲಿ ಆಹಾರಗಳನ್ನು ಸೇವಿಸಿ

ಬಿಳಿ ಅಕ್ಕಿಯ ಬದಲು ಕಂದು ಅಕ್ಕಿ, ಬಿಳಿ ಬ್ರೆಡ್ ಬದಲು ಇಡಿಯ ಧಾನ್ಯಗಳ ಬ್ರೆಡ್, ಬುರುಗು ಬರುವ ಪಾನೀಯಗಳ ಬದಲಿಗೆ ಸಕ್ಕರೆ ರಹಿತ ಹಣ್ಣಿನ ರಸಗಳು ಮೊದಲಾಗಿ ಬದಲಿಸಿಕೊಳ್ಳುವ ಮೂಲಕ ಅನಗತ್ಯವಾಗಿ ಏರಬಹುದಾಗಿದ್ದ ತೂಕವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ಆರೋಗ್ಯವೂ ಉತ್ತಮಗೊಳ್ಳುತ್ತದೆ.

English summary

Here Are 10 Simple Diet Tips To Remain Healthy During Diwali

Popularly known as the "Festival Of Lights", Diwali is an Indian festival which is famous throughout the globe for its uniqueness and grandeur.With the Diwali festival soon approaching, Indians across the world would be getting ready to involve themselves in the festivities and enjoy this time of the year as much as possible! So, here are a few tips that you can follow to remain healthy during Diwali; have a look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more